ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಪ್ರಕಾರ ಡೆಪ್ರಿಸಿಯೇಶನ್‌ ದರಗಳ ಕುರಿತು ಕಾಂಪ್ರೆಹೆನ್ಸಿವ್ ಗೈಡ್

ಡೆಪ್ರಿಸಿಯೇಶನ್‌ ಎನ್ನುವುದು ಸಮಯ ಕಳೆದಂತೆ ಇಂಟ್ಯಾಂಜಿಬಲ್ ಅಥವಾ ಟ್ಯಾಂಜಿಬಲ್ ಅಸೆಟ್ ನ ಮೌಲ್ಯದಲ್ಲಿನ ಇಳಿಕೆಯನ್ನು ಸೂಚಿಸುತ್ತದೆ. ಬಿಸಿನೆಸ್ ಎಂಟಿಟಿಯ ಫೈನಾನ್ಷಿಯಲ್ ಸ್ಟೇಟ್‌ಮೆಂಟ್‌ಗಳನ್ನು ನಿರ್ಧರಿಸುವಾಗ, ಬಿಸಿನೆಸ್‌ನಲ್ಲಿ ಬಳಸಲಾದ ಅಸೆಟ್ ನ ಡೆಪ್ರಿಸಿಯೇಶನ್‌ ಅನ್ನು ಕ್ಯಾಲ್ಕುಲೇಶನ್ ಮಾಡುವುದು ಅತ್ಯಗತ್ಯ. ಏಕೆಂದರೆ ಐಟಿಎ ಅದನ್ನು ಲಾಭ ಮತ್ತು ನಷ್ಟದ ಸ್ಟೇಟ್‌ಮೆಂಟ್‌ನಿಂದ ಡಿಡಕ್ಷನ್‌ಗೊಳಿಸುವುದನ್ನು ಕಡ್ಡಾಯಗೊಳಿಸುತ್ತದೆ.

ಈ ಆರ್ಟಿಕಲ್ ಪ್ರತಿಯೊಂದು ವಿಧದ ಅಸೆಟ್ ಮತ್ತು ಇತರ ಪ್ರಮುಖ ಅಂಶಗಳ ಡೆಪ್ರಿಸಿಯೇಶನ್‌ ದರಗಳನ್ನು ವಿವರಿಸುತ್ತದೆ. ಇದರಿಂದ ಟ್ಯಾಕ್ಸ್ ಪೇಯರ್‌ಗಳು ಅನಾನುಕೂಲತೆಯನ್ನು ಎದುರಿಸದೆ ಡೆಪ್ರಿಸಿಯೇಶನ್‌ ಅನ್ನು ಕ್ಯಾಲ್ಕುಲೇಶನ್ ಮಾಡಬಹುದು.

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಪ್ರಕಾರ ಡೆಪ್ರಿಸಿಯೇಶನ್‌ ದರಗಳು ಯಾವುವು?

ಕೆಳಗೆ ತಿಳಿಸಿದಂತೆ ಡೆಪ್ರಿಸಿಯೇಶನ್‌ ದರದ ಚಾರ್ಟ್ ಅನ್ನು ನಾವೀಗ ನೋಡೋಣ:

ಭಾಗ A: ಟ್ಯಾಂಜಿಬಲ್ ಅಸೆಟ್ ಗಳು

ಅಸೆಟ್ ಗಳ ವರ್ಗ ಅಸೆಟ್ ಗಳ ವಿಧಗಳು ಡೆಪ್ರಿಸಿಯೇಶನ್‌ ದರಗಳು (ಡಬ್ಲ್ಯೂ.ಡಿ.ವಿ ಅಥವಾ ರಿಟನ್ ಡೌನ್ ವ್ಯಾಲ್ಯೂ ನ ಶೇಕಡಾವಾರು ಎಂದು ವ್ಯಕ್ತಪಡಿಸಲಾಗಿದೆ)
ಬಿಲ್ಡಿಂಗ್‌ಗಳು - -
1 ರೆಸಿಡೆನ್ಸಿಯಲ್ ಬಿಲ್ಡಿಂಗ್‌ಗಳು ಆದರೆ ಬೋರ್ಡಿಂಗ್ ಮನೆಗಳು ಮತ್ತು ಹೋಟೆಲ್‌ಗಳನ್ನು ಹೊರತುಪಡಿಸಿ 5%
2 ರೆಸಿಡೆನ್ಸಿಯಲ್ ಉದ್ದೇಶಗಳನ್ನು ಹೊರತುಪಡಿಸಿ ಬಿಲ್ಡಿಂಗ್‌ಗಳನ್ನು ಬಳಸಿದ್ದು, ಅದನ್ನು ಮತ್ತು (1) ಮತ್ತು (3) ರಲ್ಲಿ ತಿಳಿಸಲಾಗಿಲ್ಲ 10%
3 ಸೆಕ್ಷನ್ 80-IA(4)(i) ಅಡಿಯಲ್ಲಿ ನಿರ್ದಿಷ್ಟಪಡಿಸಿದ ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸಲು ಮತ್ತು ನೀರಿನ ಪೂರೈಕೆಗಾಗಿ ಪ್ಲಾಂಟ್ ಮತ್ತು ಮಷೀನರಿಗಳನ್ನು ಸ್ಥಾಪಿಸಲು 1ನೇ ಸೆಪ್ಟೆಂಬರ್ 2002 ರಂದು ಅಥವಾ ನಂತರದಲ್ಲಿ ಪಡೆದುಕೊಂಡ ಬಿಲ್ಡಿಂಗ್‌ಗಳು 40%
4 ಕಟ್ಟಿಗೆಯ ನಿರ್ಮಾಣಗಳಂತಹ ತಾತ್ಕಾಲಿಕ ಬಿಲ್ಡಿಂಗ್‌ಗಳು 40%
ಫಿಟ್ಟಿಂಗ್‌ಗಳು ಮತ್ತು ಫರ್ನೀಚರ್‌ಗಳು - -
1 ಎಲೆಕ್ಟ್ರಿಕಲ್ ಫಿಟ್ಟಿಂಗ್‌ಗಳು ಮತ್ತು ಇತರ ಫಿಟ್ಟಿಂಗ್‌ಗಳು ಮತ್ತು ಫರ್ನೀಚರ್‌ಗಳು 10%
ಪ್ಲಾಂಟ್ ಮತ್ತು ಮಷೀನರಿಗಳು - -
1 (8), (3), ಮತ್ತು (2) ರಲ್ಲಿ ತಿಳಿಸಲಾದ ಪ್ಲಾಂಟ್ ಮತ್ತು ಮಷೀನರಿಗಳು 15%
2(i) ಬಾಡಿಗೆ ಡ್ರೈವಿಂಗ್‌ಗಾಗಿ ಬಳಸಲಾಗುವ ಮೋಟಾರ್ ಕಾರ್‌ಗಳ ಹೊರತಾಗಿ; ಕೆಳಗಿನ ಸೆಕ್ಷನ್ (ii) ನಲ್ಲಿ ತಿಳಿಸಿರುವುದನ್ನು ಹೊರತುಪಡಿಸಿ, 1ನೇ ಏಪ್ರಿಲ್ 1990 ರಂದು ಅಥವಾ ನಂತರದಲ್ಲಿ ಸ್ವಾಧೀನಪಡಿಸಿಕೊಂಡ ಅಥವಾ ಬಳಕೆಗೆ ತರಲಾದ ಮೋಟಾರ್ ಕಾರ್‌ಗಳು 15%
2(ii) ಬಾಡಿಗೆ ಡ್ರೈವಿಂಗ್‌ಗಾಗಿ ಬಳಸಲಾಗುವ ಮೋಟಾರ್ ಕಾರ್‌ಗಳ ಹೊರತಾಗಿ; 23ನೇ ಆಗಸ್ಟ್ 2019 ರಂದು ಅಥವಾ ಅದರ ನಂತರದಲ್ಲಿ ಮತ್ತು 1ನೇ ಏಪ್ರಿಲ್ 2020 ಕ್ಕಿಂತ ಮೊದಲು ಸ್ವೀಕರಿಸಲಾದ ಮತ್ತು 1ನೇ ಏಪ್ರಿಲ್ 2020 ಕ್ಕಿಂತ ಮೊದಲು ಬಳಕೆಗೆ ತರಲಾದ ಮೋಟಾರ್ ಕಾರ್‌ಗಳು 30%
3(i) ಏರೋಪ್ಲೇನ್‌ಗಳು, ಏರೋ ಇಂಜಿನ್‌ಗಳು 40%
3(ii)(b) 23ನೇ ಆಗಸ್ಟ್ 2019 ರಂದು ಅಥವಾ ಅದರ ನಂತರದಲ್ಲಿ ಮತ್ತು 1ನೇ ಏಪ್ರಿಲ್ 2020 ಕ್ಕಿಂತ ಮೊದಲು ಸ್ವೀಕರಿಸಿದ ಮತ್ತು 1ನೇ ಏಪ್ರಿಲ್ 2020 ಕ್ಕಿಂತ ಮೊದಲು ಬಳಕೆಗೆ ತಂದ ಬಾಡಿಗೆ ಡ್ರೈವಿಂಗ್‌ಗಾಗಿ ಬಳಸಲಾದ ಮೋಟಾರ್ ಲಾರಿಗಳು, ಬಸ್‌ಗಳು ಮತ್ತು ಟ್ಯಾಕ್ಸಿಗಳು 45%
3(iii) 1 ಅಕ್ಟೋಬರ್ 1998 ರಂದು ಅಥವಾ ಅದರ ನಂತರದಲ್ಲಿ ಮತ್ತು 1 ಏಪ್ರಿಲ್ 1999 ಕ್ಕಿಂತ ಮೊದಲು ಸ್ವೀಕರಿಸಲ್ಪಟ್ಟ ಮತ್ತು ಸೆಕ್ಷನ್ 32(1)(ii) ರ ಮೂರನೇ ಪ್ರಾವಿಷನ್ ಪ್ರಕಾರ ಬಿಸಿನೆಸ್ ಅಥವಾ ಉದ್ಯೋಗಕ್ಕಾಗಿ, 1ನೇ ಏಪ್ರಿಲ್ 1999 ಕ್ಕಿಂತ ಮೊದಲು ಬಳಸಲಾದ ಕಮರ್ಷಿಯಲ್ ವೆಹಿಕಲ್‌ಗಳು 40%
3(iv) 1ನೇ ಅಕ್ಟೋಬರ್ 1998 ರಂದು ಅಥವಾ ಅದರ ನಂತರದಲ್ಲಿ ಮತ್ತು 1 ನೇ ಏಪ್ರಿಲ್ 1999 ರ ಮೊದಲು ಸ್ವೀಕರಿಸಿದ ಹೊಸ ಕಮರ್ಷಿಯಲ್ ವೆಹಿಕಲ್‌ಗಳು, 15 ವರ್ಷಗಳಿಗಿಂತ ಹೆಚ್ಚು ಅವಧಿಯವರೆಗೆ ಬಳಕೆಯಾದ ವೆಹಿಕಲ್‌ನ ರಿಪ್ಲೇಸ್‌ಮೆಂಟ್ ಗಾಗಿ ಮತ್ತು ಮೂರನೇ ಪ್ರಾವಿಷನ್ ಸೆಕ್ಷನ್ 32(1)(ii) ಪ್ರಕಾರ ಬಿಸಿನೆಸ್ ಅಥವಾ ಉದ್ಯೋಗಕ್ಕಾಗಿ 1 ನೇ ಏಪ್ರಿಲ್ 1999 ಕ್ಕಿಂತ ಮೊದಲು ಬಳಸಲಾದ ಹೊಸ ಕಮರ್ಷಿಯಲ್ ವೆಹಿಕಲ್‌ಗಳು 40%
3(v) 1ನೇ ಏಪ್ರಿಲ್ 1999 ರಂದು ಅಥವಾ ಅದರ ನಂತರದಲ್ಲಿ ಮತ್ತು 1ನೇ ಏಪ್ರಿಲ್ 2000 ಕ್ಕಿಂತ ಮೊದಲು ಸ್ವೀಕರಿಸಿದ, 15 ವರ್ಷಗಳಿಗಿಂತ ಹೆಚ್ಚು ಅವಧಿಯವರೆಗೆ ಬಳಕೆಯಾದ ವೆಹಿಕಲ್‌ನ ರಿಪ್ಲೇಸ್‌ಮೆಂಟ್ ಗಾಗಿ ಮತ್ತು ಮೂರನೇ ಪ್ರಾವಿಷನ್ ಸೆಕ್ಷನ್ 32(1)(ii) ಪ್ರಕಾರ ಬಿಸಿನೆಸ್ ಅಥವಾ ಉದ್ಯೋಗಕ್ಕಾಗಿ 1ನೇ ಏಪ್ರಿಲ್ 2000 ಕ್ಕಿಂತ ಮೊದಲು ಬಳಸಲಾದ ಹೊಸ ಕಮರ್ಷಿಯಲ್ ವೆಹಿಕಲ್‌ಗಳು. 40%
3(vi) 1ನೇ ಏಪ್ರಿಲ್ 2002 ರಂದು ಅಥವಾ ಅದರ ನಂತರದಲ್ಲಿ ಮತ್ತು 1ನೇ ಏಪ್ರಿಲ್ 2002 ಕ್ಕಿಂತ ಮೊದಲು ಸ್ವೀಕರಿಸಲಾದ ಹಾಗೂ ಬಿಸಿನೆಸ್ ಅಥವಾ ಇತರ ಉದ್ಯೋಗಕ್ಕಾಗಿ ಏಪ್ರಿಲ್ 2002 ರ 1 ನೇ ದಿನದ ಮೊದಲು ಬಳಕೆಗೆ ತರಲಾದ ಹೊಸ ಕಮರ್ಷಿಯಲ್ ವೆಹಿಕಲ್‌ಗಳು 40%
3(vi)(a) 1ನೇ ಜನವರಿ 2009 ರಂದು ಅಥವಾ ಅದರ ನಂತರದಲ್ಲಿ ಮತ್ತು 1st ಅಕ್ಟೋಬರ್ 2009 ಕ್ಕಿಂತ ಮೊದಲು ಸ್ವೀಕರಿಸಲಾದ ಹಾಗೂ ಬಿಸಿನೆಸ್ ಅಥವಾ ಇತರ ಉದ್ಯೋಗಕ್ಕಾಗಿ 1st ಅಕ್ಟೋಬರ್ 2009 ಕ್ಕಿಂತ ಮೊದಲು ಬಳಕೆಗೆ ತರಲಾದ ಹೊಸ ಕಮರ್ಷಿಯಲ್ ವೆಹಿಕಲ್‌ಗಳು 40%
3(vii) ಪ್ಲಾಸ್ಟಿಕ್ ಮತ್ತು ರಬ್ಬರ್ ಗೂಡ್ಸ್ ಫ್ಯಾಕ್ಟರಿಯಲ್ಲಿ ಬಳಸುವ ಮೌಲ್ಡ್‌ಗಳು 30%
3(viii) ಎಲೆಕ್ಟ್ರೋಸ್ಟ್ಯಾಟಿಕ್ ಪ್ರಿಸಿಪಿಟೇಶನ್ ಸಿಸ್ಟಮ್‌ಗಳು, ಫೆಲ್ಟ-ಫಿಲ್ಟರ್ ಸಿಸ್ಟಮ್‌ಗಳು, ಸ್ಕ್ರಬ್ಬರ್-ಕೌಂಟರ್ ಕರೆಂಟ್/ಪ್ಯಾಕ್ಡ್ ಬೆಡ್/ವೆಂಚುರಿ/ಸೈಕ್ಲೋನಿಕ್ ಸ್ಕ್ರಬ್ಬರ್‌ಗಳು, ಬೂದಿ ನಿರ್ವಹಣೆ ಸಿಸ್ಟಮ್ ಮತ್ತು ಸ್ಥಳಾಂತರಿಸುವ ಸಿಸ್ಟಮ್‌ಗಳಂತಹ ವಾಯು ಮಾಲಿನ್ಯ ನಿಯಂತ್ರಣ ಮಷೀನ್‌ಗಳು 40%
3(ix) ಜಲ ಮಾಲಿನ್ಯ ನಿಯಂತ್ರಣ ಮಷೀನ್‌ಗಳಾದ ಮೆಕ್ಯಾನಿಕಲ್ ಸ್ಕ್ರೀನ್ ಸಿಸ್ಟಮ್‌ಗಳು, ಮೆಕ್ಯಾನಿಕಲ್ ಸ್ಕಿಮ್ಡ್ ಆಯಿಲ್ ಮತ್ತು ಗ್ರೀಸ್ ರಿಮೂವಲ್ ಸಿಸ್ಟಮ್‌ಗಳು, ಗಾಳಿ ತುಂಬಿದ ಡಿಟ್ರಿಟಸ್ ಚೇಂಬರ್‌ಗಳು (ಏರ್ ಕಂಪ್ರೆಸರ್ ಸೇರಿದಂತೆ), ರಾಸಾಯನಿಕ ಫೀಡ್ ಸಿಸ್ಟಮ್‌ಗಳು, ಫ್ಲ್ಯಾಷ್ ಮಿಕ್ಸಿಂಗ್ ಉಪಕರಣಗಳು ಇತ್ಯಾದಿ. 40%
3(x) ಘನತ್ಯಾಜ್ಯ ನಿಯಂತ್ರಣ ಮಷೀನ್‌ಗಳಾದ ಕ್ರೋಮ್/ಮಿನರಲ್/ಕಾಸ್ಟಿಕ್/ಲೈಮ್/ಕ್ರಯೋಲೈಟ್ ರಿಕವರಿ ಸಿಸ್ಟಮ್ಸ್ ಮತ್ತು ಘನತ್ಯಾಜ್ಯ ಸಂಪನ್ಮೂಲ ಮತ್ತು ರಿಸೈಕ್ಲಿಂಗ್ ರಿಕವರಿ ಸಿಸ್ಟಮ್‌ಗಳು 40%
3(xi) ಹೈಬ್ರಿಡ್ ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳನ್ನು ಹೊರತುಪಡಿಸಿ ಎಲ್ಲಾ ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳನ್ನು ಒಳಗೊಂಡಂತೆ ಸೆಮಿಕಂಡಕ್ಟರ್ ಇಂಡಸ್ಟ್ರಿಗೆ ಬಳಸಲಾಗುವ ಪ್ಲಾಂಟ್ ಮತ್ತು ಮಷೀನರಿಗಳು. ಇದು ಈ ಸಬ್‌ಸೆಕ್ಷನ್‌ನ (x), (ix), (viii) ಮತ್ತು ಸೆಕ್ಷನ್ 8 ರಲ್ಲಿ ತಿಳಿಸಿರುವುದನ್ನೂ ಹೊರತುಪಡಿಸಿ, ದೊಡ್ಡ ಪ್ರಮಾಣದ ಇಂಟಿಗ್ರೇಷನ್/ಅತಿ ದೊಡ್ಡ ಪ್ರಮಾಣದ ಇಂಟಿಗ್ರೇಷನ್‌ನಿಂದ ಸಣ್ಣ ಪ್ರಮಾಣದ ಇಂಟಿಗ್ರೇಷನ್ ಮತ್ತು ಡಿಸ್ಕ್ರೀಟ್ ಸೆಮಿಕಂಡಕ್ಟರ್ ಉಪಕರಣಗಳನ್ನು ಕವರ್ ಮಾಡುತ್ತದೆ. 30%
3(ix)(a) ಹೃದಯ ಮತ್ತು ಶ್ವಾಸಕೋಶದ ಯಂತ್ರಗಳು, ಹಿಮೋಡಯಾಲಿಸಿಸ್, ಕಲರ್ ಡಾಪ್ಲರ್, ಕೋಬಾಲ್ಟ್ ಥೆರಪಿ ಯುನಿಟ್ ಮುಂತಾದ ಜೀವ ಉಳಿಸುವ ವೈದ್ಯಕೀಯ ಮಷೀನ್‌ಗಳು. 40%
4 ರೀಫಿಲ್‌ಗಳಾಗಿ ಬಳಸಲಾಗುವ ಗಾಜು ಮತ್ತು ಪ್ಲಾಸ್ಟಿಕ್ ಕಂಟೈನರ್‌ಗಳು; ಕಂಪ್ಯೂಟರ್‌ಗಳು ಮತ್ತು ಕಂಪ್ಯೂಟರ್ ಸಾಫ್ಟ್‌ವೇರ್ ಅನ್ನು ಸಹ ಕವರ್ ಮಾಡುತ್ತದೆ. 40%
5 ಟಿಯುಎಫ್ ಗಳ ಅಡಿಯಲ್ಲಿ 1 ಏಪ್ರಿಲ್ 2001 ರಂದು ಅಥವಾ ನಂತರ ಮತ್ತು 1 ಏಪ್ರಿಲ್ 2004 ಕ್ಕಿಂತ ಮೊದಲು ಖರೀದಿಸಲಾದ ಮತ್ತು 1 ನೇ ಏಪ್ರಿಲ್ 2004 ಕ್ಕಿಂತ ಮೊದಲು ಬಳಸಲಾದ, ಟೆಕ್ಸ್ಟಟೈಲ್ ಇಂಡಸ್ಟ್ರಿಯ ಪ್ರೊಸೆಸಿಂಗ್, ನೇಯ್ಗೆ, ಗಾರ್ಮೆಂಟ್ ವಲಯದಲ್ಲಿ ಬಳಸುವ ಪ್ಲಾಂಟ್ ಮತ್ತು ಮಷೀನರಿಗಳು 40%
6 ಸೆಕ್ಷನ್ 80-IA(4)(i) ಅಡಿಯಲ್ಲಿ ನಿರ್ದಿಷ್ಟಪಡಿಸಿದಂತೆ ಮೂಲಸೌಕರ್ಯ ಸೌಲಭ್ಯವನ್ನು ಒದಗಿಸಲು ಬಳಸುವ ನೀರು ಸರಬರಾಜು ಯೋಜನೆಯಲ್ಲಿ ಸೆಪ್ಟೆಂಬರ್ 1, 2002 ರಂದು ಅಥವಾ ಅದರ ನಂತರದಲ್ಲಿ ಸ್ವೀಕರಿಸಿದ ಮತ್ತು ಇನ್ಸ್ಟಾಲ್ ಮಾಡಿದ ಪ್ಲಾಂಟ್ ಮತ್ತು ಮಷೀನರಿಗಳು 40%
7 ಕೃತಕ ರೇಷ್ಮೆ ಉತ್ಪಾದನಾ ಮಷೀನ್‌ಗಳು, ಸಿನಿಮಾಟೋಗ್ರಾಫ್ ಫಿಲ್ಮ್‌ಗಳು, ಬೆಂಕಿಕಡ್ಡಿ ಕಾರ್ಖಾನೆಗಳು, ಕ್ವಾರಿಗಳು ಮತ್ತು ಗಣಿಗಳು, ಹಿಟ್ಟಿನ ಗಿರಣಿಗಳು, ಉಪ್ಪು ಮತ್ತು ಸಕ್ಕರೆ ಕೆಲಸಗಳು, ಕಬ್ಬಿಣ ಮತ್ತು ಸ್ಟೀಲ್ ಇಂಡಸ್ಟ್ರಿಯಲ್ಲಿ ಬಳಸಲಾಗುವ ಕಟ್ಟಿಗೆಯ ಭಾಗಗಳು 40%
8 ವಿಶೇಷ ಬಾಯ್ಲರ್‌ಗಳು ಮತ್ತು ಕುಲುಮೆಗಳು, ವೇಸ್ಟ್ ಹೀಟ್ ರಿಕವರಿ ಮಷೀನ್‌ಗಳು, ಇನ್ಸ್ಟ್ರುಮೆಂಟ್ಸ್ ಮತ್ತು ಮಾನಿಟರಿಂಗ್ ಸಿಸ್ಟಮ್, ಕೋಜೆನರೇಶನ್ ಸಿಸ್ಟಮ್, ಎಲೆಕ್ಟ್ರಿಕಲ್ ಡಿವೈಸ್, ಬರ್ನರ್‌ಗಳು, ತೆಳುವಾದ-ಫಿಲ್ಮ್ ಎವಾಪೋರೇಟರ್‌ಗಳಂತಹ ಇತರ ಡಿವೈಸ್‌ಗಳು, ಮೆಕ್ಯಾನಿಕಲ್ ವೇಪರ್ ರಿ-ಕಂಪ್ರೆಸ್ಸರ್‌ಗಳು, ರಿನಿವಲ್ ಎನರ್ಜಿ ಉಪಕರಣಗಳಂತಹ ಎನರ್ಜಿ ಉಳಿಸುವ ಡಿವೈಸ್‌ಗಳು. ಖನಿಜ ತೈಲದ ಕಾಳಜಿ ವಿಷಯದಲ್ಲಿ, ಇದು ಫೀಲ್ಡ್‌ನಲ್ಲಿನ (ನೆಲದ ಹಂಚುವಿಕೆಯ ಮೇಲೆ) ಕಾರ್ಯಾಚರಣೆಗಳಿಗೆ ಬಳಸಲಾಗುವ ಪ್ಲಾಂಟ್‌ಗಳನ್ನು ಕವರ್ ಮಾಡುತ್ತದೆ. ಫಿಟ್ಟಿಂಗ್‌ಗಳು ಮತ್ತು ಭೂಗತ ಟ್ಯಾಂಕ್‌ಗಳನ್ನು ಕವರ್ ಮಾಡುವ ಫೀಲ್ಡ್‌ನಲ್ಲಿ (ನೆಲದ ಕೆಳಗೆ), ಕಾರ್ಯಾಚರಣೆಗಾಗಿ ಪ್ಲಾಂಟ್‌ಗಳನ್ನು ಬಳಸಲಾಗುತ್ತದೆ ಮತ್ತು ಕೆರ್ಬ್‌ಸೈಡ್ ಪಂಪ್‌ಗಳನ್ನಲ್ಲ 40%
8 (xii(c)) ಮಿನರಲ್ ಆಯಿಲ್ ಕನ್ಸರ್ನ್ಸ್ ಸೆಕ್ಷನ್‌ನ ಅಡಿಯಲ್ಲಿ ತೈಲ ಬಾವಿಗಳನ್ನು ಮೇಲೆ ತಿಳಿಸಲಾಗಿಲ್ಲ (ಮೌಲ್ಯಮಾಪನ ವರ್ಷ 2016-17 ರಿಂದ ಜಾರಿಗೆ ಬಂದಿದೆ) 15%
9 (i) and (ii) ವಾರ್ಷಿಕ ಪ್ರಕಟಣೆಗಳು ಮತ್ತು ಇತರವುಗಳನ್ನು ಒಳಗೊಂಡಂತೆ ಪುಸ್ತಕಗಳು ಮತ್ತು ಪುಸ್ತಕಗಳನ್ನು ಸಾಲ ನೀಡುವ ಗ್ರಂಥಾಲಯಗಳನ್ನು ನಿರ್ವಹಿಸುವ ಪುಸ್ತಕಗಳು 40%
ಹಡಗುಗಳು - -
1, 2 ಮತ್ತು 3 ಮರದ ಭಾಗಗಳು, ಒಳನಾಡಿನ ನೀರಿನಲ್ಲಿ ಕಾರ್ಯನಿರ್ವಹಿಸುವ ಹಡಗುಗಳ ಜೊತೆಗೆ ಹೂಳೆತ್ತುವ ಮತ್ತು ಮೀನುಗಾರಿಕೆ ಹಡಗುಗಳಿಗೆ ಬಳಸಲ್ಪಡುವಂತಹ ಸಾಗರಕ್ಕೆ ಹೋಗುವ ಹಡಗುಗಳು ಮತ್ತು ಸೆಕ್ಷನ್ 3, ಅಡಿಯಲ್ಲಿನ ಐಟಂಗಳಲ್ಲಿ ತಿಳಿಸದ ಸ್ಪೀಡ್ ಬೋಟ್‌ಗಳು 20%

ಭಾಗ B: ಇಂಟ್ಯಾಂಜಿಬಲ್ ಅಸೆಟ್ ಗಳು

1 ಪೇಟೆಂಟ್‌ಗಳು, ಹಕ್ಕುಸ್ವಾಮ್ಯಗಳು, ಟ್ರೇಡ್‌ಮಾರ್ಕ್‌ಗಳು, ಫ್ರಾಂಚೈಸಿಗಳು, ಲೈಸೆನ್ಸ್‌ಗಳು, ಜ್ಞಾನ ಅಥವಾ ಇತರ ಕಮರ್ಷಿಯಲ್ ಹಕ್ಕುಗಳು 25%

ಗಮನಿಸಿ: ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಪ್ರಕಾರ ಈ ಡೆಪ್ರಿಸಿಯೇಶನ್ ದರಗಳು 2021-2022 ರ ಮೌಲ್ಯಮಾಪನ ವರ್ಷದಿಂದ ಅನ್ವಯಿಸುತ್ತವೆ. 

[ಮೂಲ]

ರಿಟನ್-ಡೌನ್ ವ್ಯಾಲ್ಯೂ ಎಂದರೇನು?

ಡೆಪ್ರಿಸಿಯೇಶನ್ ಅನ್ನು ಕ್ಯಾಲ್ಕುಲೇಶನ್ ಮಾಡಿದ ನಂತರ ಬಿಸಿನೆಸ್ ಎಂಟಿಟಿಯು ಹೊಂದಿರುವ, ಅಸೆಟ್ ನ ಪ್ರಸ್ತುತ ಮೌಲ್ಯವನ್ನು ರಿಟನ್-ಡೌನ್ ವ್ಯಾಲ್ಯೂ ತೋರಿಸುತ್ತದೆ. ಇದನ್ನು ಕಾರ್ಪೊರೇಷನ್‌ನ ಬ್ಯಾಲೆನ್ಸ್ ಶೀಟ್‌ಗೆ ಸೇರಿಸಲಾಗುತ್ತದೆ.

ಸೆಕ್ಷನ್ 32(1) ಪ್ರಕಾರ, ವ್ಯಕ್ತಿಗಳು ಅಸೆಟ್ ನ ಡಬ್ಲ್ಯೂಡಿವಿ ಶೇಕಡಾವಾರು ಡೆಪ್ರಿಸಿಯೇಶನ್ ಅನ್ನು ಕ್ಯಾಲ್ಕುಲೇಶನ್ ಮಾಡಬೇಕು. ಅಸೆಟ್ ನ ನಿಜವಾದ ವೆಚ್ಚದ ರೆಫರೆನ್ಸ್ ತೆಗೆದುಕೊಂಡು ಇದನ್ನು ಮತ್ತಷ್ಟು ಮೌಲ್ಯಮಾಪನ ಮಾಡಲಾಗುತ್ತದೆ.

ಒಬ್ಬ ವ್ಯಕ್ತಿಯು ಹಿಂದಿನ ವರ್ಷದಲ್ಲಿ ಅಸೆಟ್ ನನ್ನು ಖರೀದಿಸಿದಾಗ, ಅಸೆಟ್ ನ ನಿಜವಾದ ವೆಚ್ಚವು ಡಬ್ಲ್ಯೂಡಿವಿಗೆ ಸಮನಾಗಿರುತ್ತದೆ.

ಅದೇ ಸಮಯದಲ್ಲಿ, ಹಿಂದಿನ ವರ್ಷಗಳಲ್ಲಿ ಅಸೆಟ್ ನನ್ನು ಖರೀದಿಸಿದಾಗ, ಐಟಿಎ ಅಡಿಯಲ್ಲಿ ಅನುಮತಿಸಲಾದ ಅಸೆಟ್ ನಿಂದ ಡೆಪ್ರಿಸಿಯೇಶನ್ ಅನ್ನು ಕಳೆದ ನಿಜವಾದ ವೆಚ್ಚಕ್ಕೆ ಡಬ್ಲ್ಯೂಡಿವಿ ಸಮನಾಗಿರುತ್ತದೆ.

ಡೆಪ್ರಿಸಿಯೇಶನ್ ಅನ್ನು ಕ್ಯಾಲ್ಕುಲೇಶನ್ ಮಾಡುವ ವಿಧಾನಗಳು ಯಾವುವು?

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಪ್ರಕಾರ ಡೆಪ್ರಿಸಿಯೇಶನ್ ಅನ್ನು ಕ್ಯಾಲ್ಕುಲೇಶನ್ ಮಾಡುವ ವಿಧಾನಗಳನ್ನು ಕೆಳಗೆ ನೀಡಲಾಗಿದೆ:

ಕಂಪನಿಗಳ ಆ್ಯಕ್ಟ್‌ 1956 ರ ಪ್ರಕಾರ

  • ರಿಟನ್ ಡೌನ್ ವ್ಯಾಲ್ಯೂ ವಿಧಾನ

  • ಸ್ಟ್ರೈಟ್-ಲೈನ್ ವಿಧಾನ

ಕಂಪನಿಗಳ ಆ್ಯಕ್ಟ್‌ 2013 ರ ಪ್ರಕಾರ

  • ಉತ್ಪಾದನಾ ವಿಧಾನದ ಘಟಕ

  • ರಿಟನ್ ಡೌನ್ ವ್ಯಾಲ್ಯೂ ವಿಧಾನ

  • ಸ್ಟ್ರೈಟ್-ಲೈನ್ ವಿಧಾನ

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ 1961 ರ ಪ್ರಕಾರ

  • ರಿಟನ್ ಡೌನ್ ವ್ಯಾಲ್ಯೂ ವಿಧಾನ (ಅಸೆಟ್ ಗಳ ಬ್ಲಾಕ್ ಅನ್ನು ಆಧರಿಸಿ)

  • ವಿದ್ಯುತ್ ಉತ್ಪಾದಿಸುವ ಘಟಕಗಳಿಗೆ ಸ್ಟ್ರೈಟ್-ಲೈನ್ ವಿಧಾನ

ಅಸೆಟ್ ನ ಮೇಲೆ ಡೆಪ್ರಿಸಿಯೇಶನ್ ಅನ್ನು ಕ್ಲೈಮ್ ಮಾಡಲು ಇರುವ ಕಂಡೀಶನ್‌ಗಳು ಯಾವುವು?

ಅಸೆಟ್ ನ ಮೇಲೆ ಡೆಪ್ರಿಸಿಯೇಶನ್ ಅನ್ನು ಕ್ಲೈಮ್ ಮಾಡಲು ವ್ಯಕ್ತಿಗಳು ಪೂರೈಸಬೇಕಾದ ಕೆಳಗಿನ ಕ್ರೈಟೀರಿಯಗಳನ್ನು ನೋಡೋಣ:

  • ಮೌಲ್ಯಮಾಪಕರು ಸಂಪೂರ್ಣವಾಗಿ ಅಥವಾ ಭಾಗಶಃ ಅಸೆಟ್ ನನ್ನು ಹೊಂದಿರಬೇಕು.

  • ಮೌಲ್ಯಮಾಪಕರು ಈ ಅಸೆಟ್ ನನ್ನು ಅವನ ಅಥವಾ ಅವಳ ಬಿಸಿನೆಸ್ ಅಥವಾ ಉದ್ಯೋಗಕ್ಕಾಗಿ ಬಳಸಬೇಕು. ಆ ಅಸೆಟ್ ನನ್ನು ಬಿಸಿನೆಸ್ ಮತ್ತು ಇತರ ಉದ್ದೇಶಗಳಿಗಾಗಿ ಬಳಸಿದರೆ, ವ್ಯಕ್ತಿಯು ಕ್ಲೈಮ್ ಮಾಡುವ ಡೆಪ್ರಿಸಿಯೇಶನ್‌ನ ಪ್ರಮಾಣವು, ಬಿಸಿನೆಸ್‌ನಲ್ಲಿ ಅದರ ಬಳಕೆಯ ಅನುಪಾತವನ್ನು ಆಧರಿಸಿರುತ್ತದೆ. ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 38, ಕ್ಲೈಮ್ ಮಾಡಬೇಕಾದ ಡೆಪ್ರಿಸಿಯೇಶನ್‌ನ ಪ್ರಮಾಣವನ್ನು ನಿರ್ಣಯಿಸಲು ಇನ್ಕಮ್ ಟ್ಯಾಕ್ಸ್ ಆಫೀಸರ್‌ಗೆ ಅವಕಾಶ ನೀಡುತ್ತದೆ.

  • ವ್ಯಕ್ತಿಗಳು ಭೂಮಿಯ ವೆಚ್ಚದಲ್ಲಿ ಡೆಪ್ರಿಸಿಯೇಶನ್‌ ಅನ್ನು ಪಡೆಯಲು ಸಾಧ್ಯವಿಲ್ಲ.

  • ಅಸೆಟ್ ನ ಸಹ-ಮಾಲೀಕರು ಅದರ ಮೌಲ್ಯದ ಆಧಾರದ ಮೇಲೆ ಡೆಪ್ರಿಸಿಯೇಶನ್‌ ಅನ್ನು ಪಡೆಯಬಹುದು.

  • ಟ್ಯಾಕ್ಸ್ ಪೇಯರ್‌ನು ಡ್ಯಾಮೇಜಿಗೊಳಗಾದ ಅಸೆಟ್ ಅಥವಾ ವಸ್ತುವಿನ ಮೇಲೆ ಡೆಪ್ರಿಸಿಯೇಶನ್ ಅನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ, ಏಕೆಂದರೆ, ಅದನ್ನು ಅವನು/ಅವಳು ಖರೀದಿಸಿದ ವರ್ಷದಲ್ಲಿ ಮಾರಾಟ ಮಾಡಿರುತ್ತಾರೆ.

ಹೀಗಾಗಿ, ಡೆಪ್ರಿಸಿಯೇಶನ್ ದರಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ನಿರ್ದಿಷ್ಟ ವಿಧಾನಗಳೊಂದಿಗೆ ಡೆಪ್ರಿಸಿಯೇಶನ್ ಅನ್ನು ಕ್ಯಾಲ್ಕುಲೇಶನ್ ಮಾಡುವುದು, ಯಾವುದೇ ತೊಂದರೆಯಿಲ್ಲದೆ ವ್ಯಕ್ತಿಗಳಿಗೆ ಕ್ಲೈಮ್ ಮಾಡಲು ಸಹಾಯ ಮಾಡುತ್ತದೆ. 

[ಮೂಲ]

ಪದೇ ಪದೇ ಕೇಳಲಾದ ಪ್ರಶ್ನೆಗಳು

ಸೋಲಾರ್ ಪವರ್ ಜನರೇಟಿಂಗ್ ಸಿಸ್ಟಮ್‌ನ ಡೆಪ್ರಿಸಿಯೇಶನ್ ದರ ಎಷ್ಟು?

ಸೋಲಾರ್ ಜನರೇಟಿಂಗ್ ಸಿಸ್ಟಮ್‌ನ ಡೆಪ್ರಿಸಿಯೇಶನ್ ದರ 40% ಆಗಿದೆ.

ಇಂಟ್ಯಾಂಜಿಬಲ್ ಅಸೆಟ್ ಗಳಿಗೆ ಡೆಪ್ರಿಸಿಯೇಶನ್ ಅನ್ವಯಿಸುತ್ತದೆಯೇ?

ಹೌದು, ಪೇಟೆಂಟ್‌ಗಳು ಮತ್ತು ಹಕ್ಕುಸ್ವಾಮ್ಯಗಳಂತಹ ಇಂಟ್ಯಾಂಜಿಬಲ್ ಅಸೆಟ್ ಗಳಿಗೆ ಡೆಪ್ರಿಸಿಯೇಶನ್ ಅನ್ವಯಿಸುತ್ತದೆ.

[ಮೂಲ]