ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಡೈರೆಕ್ಟ್ ಮತ್ತು ಇಂಡೈರೆಕ್ಟ್ ಟ್ಯಾಕ್ಸ್ ಗಳ ನಡುವಿನ ವ್ಯತ್ಯಾಸ

ಭಾರತದಲ್ಲಿ, ಸಂಪಾದಿಸುವ ಪ್ರತಿಯೊಬ್ಬ ವ್ಯಕ್ತಿಯು ವಿವಿಧ ಸ್ಲ್ಯಾಬ್ ದರಗಳ ಪ್ರಕಾರ ಇನ್ಕಮ್ ಟ್ಯಾಕ್ಸ್ ಅನ್ನು ಪಾವತಿಸಬೇಕಾಗುತ್ತದೆ. ಅಂತೆಯೇ, ವ್ಯಕ್ತಿಗಳು ಕೆಲವು ಸರಕುಗಳನ್ನು ಖರೀದಿಸಿದಾಗ ಅಥವಾ ಸೇವೆಗಳನ್ನು ಪಡೆದಾಗ, ಅವರು ಆ ಉತ್ಪನ್ನ ಅಥವಾ ಸೇವೆಯ ಮೇಲೆ ಟ್ಯಾಕ್ಸ್ ಅನ್ನು ಪಾವತಿಸಬೇಕಾಗುತ್ತದೆ. ಇಲ್ಲಿ, ವಿವಿಧ ರೀತಿಯ ಟ್ಯಾಕ್ಸ್ ಗಳನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ ಮತ್ತು ಅವುಗಳ ವ್ಯತ್ಯಾಸವು ಉದ್ಭವಿಸುತ್ತದೆ.

ಪ್ರತಿ ಪಾಯಿಂಟರ್ ಅನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡಲು ಕೋಷ್ಟಕ ರೂಪದಲ್ಲಿ ಡೈರೆಕ್ಟ್ ಮತ್ತು ಇಂಡೈರೆಕ್ಟ್ ಟ್ಯಾಕ್ಸ್ ಗಳ ನಡುವಿನ ವ್ಯತ್ಯಾಸವನ್ನು ಈ ತುಣುಕು ಚರ್ಚಿಸುತ್ತದೆ.

ಓದುವುದನ್ನು ಮುಂದುವರೆಸಿ!

ಡೈರೆಕ್ಟ್ ಟ್ಯಾಕ್ಸ್ vs ಇಂಡೈರೆಕ್ಟ್ ಟ್ಯಾಕ್ಸ್

ಡೈರೆಕ್ಟ್ ಟ್ಯಾಕ್ಸ್ ಮತ್ತು ಇಂಡೈರೆಕ್ಟ್ ಟ್ಯಾಕ್ಸ್ ನಡುವೆ ವ್ಯತ್ಯಾಸವನ್ನು ಗುರುತಿಸಲು ಕೆಳಗಿನ ಕೋಷ್ಟಕವನ್ನು ನೋಡಿ.

ವ್ಯತ್ಯಾಸಗಳ ಅಂಶಗಳು ಡೈರೆಕ್ಟ್ ಟ್ಯಾಕ್ಸ್ ಇಂಡೈರೆಕ್ಟ್ ಟ್ಯಾಕ್ಸ್
ವ್ಯಾಖ್ಯಾನ ವ್ಯಕ್ತಿಗಳು ಈ ಮೊತ್ತವನ್ನು ನೇರವಾಗಿ ಸರ್ಕಾರಕ್ಕೆ ಪಾವತಿಸುತ್ತಾರೆ ಮತ್ತು ಇತರರು ಅದನ್ನು ಟ್ರಾನ್ಸ್‌ಫರ್ ಮಾಡಲು ಸಾಧ್ಯವಿಲ್ಲ. ಈ ಮೊತ್ತವನ್ನು ಮೇಲ್ವಿಚಾರಣೆ ಮಾಡುವ ವಿವಿಧ ಆಕ್ಟ್ ಗಳಿವೆ. ಉತ್ಪನ್ನಗಳು, ಸರಕು ಮತ್ತು ಸೇವೆಗಳ ಅಂತಿಮ ಬಳಕೆಯ ಗ್ರಾಹಕರು ಇಂಡೈರೆಕ್ಟ್ ಟ್ಯಾಕ್ಸ್ ಅನ್ನು ಪಾವತಿಸಲು ಲಯಬಲ್ ಆಗಿರುತ್ತಾರೆ. ಈ ವೇರಿಯಂಟ್ ಸರಕುಗಳ ಮಾರಾಟ, ಆಮದು ಮತ್ತು ಖರೀದಿಗೆ ತಯಾರಕರು ಮತ್ತು ಪೂರೈಕೆದಾರರಿಗೆ ಅನ್ವಯಿಸುತ್ತದೆ. ಆದಾಗ್ಯೂ, ಈ ರೀತಿಯ ಟ್ಯಾಕ್ಸ್ ಅನ್ನು ಪಾವತಿಸುವ ಹೊಣೆಗಾರಿಕೆಯನ್ನು ಗ್ರಾಹಕರಿಗೆ ಟ್ರಾನ್ಸ್‌ಫರ್ ಮಾಡಲಾಗುತ್ತದೆ.
ಪ್ರಯೋಜನಗಳು ಡೈರೆಕ್ಟ್ ಟ್ಯಾಕ್ಸ್ ಸಂಗ್ರಹವು ವಾರ್ಷಿಕವಾಗಿ ಸಂಭವಿಸುತ್ತದೆ ಮತ್ತು ಹೆಚ್ಚಾಗಿ ಮೂಲದಲ್ಲಿ ಡಿಡಕ್ಟ್ ಮಾಡಲಾಗುತ್ತದೆ, ಇದು ಹೆಚ್ಚು ವೆಚ್ಚ-ಪರಿಣಾಮಕಾರಿ ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ಕಡಿಮೆ ಮಾಡುತ್ತದೆ. ಟ್ಯಾಕ್ಸ್ ಮೊತ್ತವು ಖಚಿತವಾಗಿದೆ, ಇದು ಇನ್ಕಮ್ ಅನ್ನು ನಿಖರವಾಗಿ ಅಂದಾಜು ಮಾಡಲು ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆ. ಅಂತಹ ಟ್ಯಾಕ್ಸ್ ಗಳ ಸಂಗ್ರಹವು ಹಣದುಬ್ಬರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ಅಸಮಾನತೆಗಳನ್ನು ಕಡಿಮೆ ಮಾಡುತ್ತದೆ. ಗ್ರಾಹಕರು ಖರೀದಿಯ ಸಮಯದಲ್ಲಿ ಮಾತ್ರ ಇಂಡೈರೆಕ್ಟ್ ಟ್ಯಾಕ್ಸ್ ಅನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ, ಟ್ಯಾಕ್ಸ್ ಸಂಗ್ರಹವು ಸುಲಭ ಮತ್ತು ಅನುಕೂಲಕರವಾಗಿದೆ. ಟ್ಯಾಕ್ಸ್ ಪೇಯರ್ಸ್ ಬೇಸಿಕ್ ವಸ್ತುಗಳ ಮೇಲೆ ಕಡಿಮೆ ಟ್ಯಾಕ್ಸ್ ದರಗಳನ್ನು ಮತ್ತು ಲಕ್ಸುರಿ ಸರಕುಗಳ ಮೇಲೆ ಹೆಚ್ಚಿನ ದರಗಳನ್ನು ಹೊಂದಿರುವುದರಿಂದ ಇಂಡೈರೆಕ್ಟ್ ಟ್ಯಾಕ್ಸ್ ಪಾವತಿಗಳು ಸಮಾನ ಕೊಡುಗೆಯನ್ನು ಖಚಿತಪಡಿಸುತ್ತವೆ.
ಟ್ಯಾಕ್ಸ್ ವಿಧಿಸುವುದು ಹೆಸರೇ ಸೂಚಿಸುವಂತೆ, ಈ ಮೊತ್ತವನ್ನು ನೇರವಾಗಿ ಟ್ಯಾಕ್ಸ್ ಪೇಯರ್ ನ ಇನ್ಕಮ್ ಮೇಲೆ ಹೇರಲಾಗುತ್ತದೆ. ಖರೀದಿಸಿದ ಅಥವಾ ಪಡೆದ ಸರಕು ಮತ್ತು ಸೇವೆಗಳಿಗೆ ಟ್ಯಾಕ್ಸ್ ಪೇಯರ್ ಮೇಲೆ ಸರ್ಕಾರ ಇದನ್ನು ವಿಧಿಸುತ್ತದೆ.
ಪಾವತಿಯ ವಿಧಾನ ಇಂಡಿವಿಜುವಲ್ ಅಥವಾ ವ್ಯಕ್ತಿಗಳು ಇದನ್ನು ನೇರವಾಗಿ ಸರ್ಕಾರಕ್ಕೆ ಪಾವತಿಸಬಹುದು. ಇಂಡಿವಿಜುವಲ್ ಅಥವಾ ವ್ಯಕ್ತಿಗಳು ಇದನ್ನು ಮಧ್ಯವರ್ತಿ ಮೂಲಕ ಸರ್ಕಾರಕ್ಕೆ ಪಾವತಿಸಬಹುದು.
ಪಾವತಿಸುವ ಘಟಕ ಅಥವಾ ಸಂಸ್ಥೆ ಬಿಸಿನೆಸ್ ಗಳು ಮತ್ತು ವ್ಯಕ್ತಿಗಳು ಅಂತಹ ಟ್ಯಾಕ್ಸ್ ಅನ್ನು ಪಾವತಿಸುತ್ತಾರೆ. ಅಂತಿಮ ಬಳಕೆಯ ಗ್ರಾಹಕರು ಅಂತಹ ಟ್ಯಾಕ್ಸ್ ಅನ್ನು ಪಾವತಿಸುತ್ತಾರೆ.
ಪಾವತಿಯ ದರ ಇನ್ಕಮ್ ಮತ್ತು ಲಾಭದ ಆಧಾರದ ಮೇಲೆ ಸರ್ಕಾರ ದರವನ್ನು ನಿರ್ಧರಿಸುತ್ತದೆ. ಉತ್ಪನ್ನಗಳು ಮತ್ತು ಅಂತಿಮ ಬಳಕೆಯ ಆಧಾರದ ಮೇಲೆ ಸರ್ಕಾರವು ದರವನ್ನು ನಿರ್ಧರಿಸುತ್ತದೆ.
ಪಾವತಿಯ ವರ್ಗಾವಣೆ ಟ್ರಾನ್ಸ್‌ಫರ್ ಮಾಡಲಾಗುವುದಿಲ್ಲ ಟ್ರಾನ್ಸ್‌ಫರ್ ಮಾಡಬಹುದು
ಟ್ಯಾಕ್ಸ್ ನ ಸ್ವರೂಪ ಈ ಪ್ರಕಾರವು ಪ್ರಗತಿಪರವಾಗಿದೆ, ಅಂದರೆ ವ್ಯಕ್ತಿಯ ಇನ್ಕಮ್ ಮತ್ತು ಲಾಭದೊಂದಿಗೆ ದರವು ಹೆಚ್ಚಾಗುತ್ತದೆ. ಈ ಪ್ರಕಾರವು ಹಿಂಜರಿತವಾಗಿದೆ, ಅಂದರೆ ವ್ಯಕ್ತಿಯ ಇನ್ಕಮ್ ಅನ್ನು ಲೆಕ್ಕಿಸದೆ ದರವು ಒಂದೇ ಆಗಿರುತ್ತದೆ.

ಮೇಲೆ ತಿಳಿಸಿದ ಕೋಷ್ಟಕವು ಡೈರೆಕ್ಟ್ ಮತ್ತು ಇಂಡೈರೆಕ್ಟ್ ಟ್ಯಾಕ್ಸ್ ಗಳ ನಡುವಿನ ಪ್ರಮುಖ ವ್ಯತ್ಯಾಸದ ಅಂಶಗಳನ್ನು ಒಳಗೊಂಡಿದೆ. ಡೈರೆಕ್ಟ್ ಮತ್ತು ಇಂಡೈರೆಕ್ಟ್ ಟ್ಯಾಕ್ಸ್ ಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ಪಾಯಿಂಟರ್‌ಗಳನ್ನು ಎಚ್ಚರಿಕೆಯಿಂದ ಓದಿ.

[ಮೂಲ 1]

[ಮೂಲ 2]

ಪದೇ ಪದೇ ಕೇಳಲಾದ ಪ್ರಶ್ನೆಗಳು

ಭಾರತದಲ್ಲಿ ಡೈರೆಕ್ಟ್ ಟ್ಯಾಕ್ಸ್ ಅನ್ನು ಯಾರು ನಿರ್ವಹಿಸುತ್ತಾರೆ ಮತ್ತು ನಿಯಂತ್ರಿಸುತ್ತಾರೆ?

ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸಸ್(ಸಿಬಿಡಿಟಿ) ಭಾರತದಲ್ಲಿಡೈರೆಕ್ಟ್ ಟ್ಯಾಕ್ಸ್ ಅನ್ನು ನಿರ್ವಹಿಸುತ್ತದೆ ಮತ್ತು ಕಂದಾಯ ಇಲಾಖೆಯು ಅದನ್ನು ನಿಯಂತ್ರಿಸುತ್ತದೆ.

[ಮೂಲ]

ಇಂಡೈರೆಕ್ಟ್ ಟ್ಯಾಕ್ಸ್ ಅನ್ನು ಯಾರು ನಿರ್ವಹಿಸುತ್ತಾರೆ ಮತ್ತು ನಿಯಂತ್ರಿಸುತ್ತಾರೆ?

ಸೆಂಟ್ರಲ್ ಬೋರ್ಡ್ ಆಫ್ ಇಂಡೈರೆಕ್ಟ್ ಟ್ಯಾಕ್ಸಸ್ ಅಂಡ್ ಕಸ್ಟಮ್ಸ್ (ಸಿಬಿಐಸಿ) ಭಾರತದಲ್ಲಿ ಇಂಡೈರೆಕ್ಟ್ ಟ್ಯಾಕ್ಸ್ ಅನ್ನು ನಿರ್ವಹಿಸುತ್ತದೆ ಮತ್ತು ಕಂದಾಯ ಇಲಾಖೆಯು ಅದನ್ನು ನಿಯಂತ್ರಿಸುತ್ತದೆ.

[ಮೂಲ]

ಡೈರೆಕ್ಟ್ ಟ್ಯಾಕ್ಸಿನ ವಿಧಗಳು ಯಾವುವು?

ಡೈರೆಕ್ಟ್ ಟ್ಯಾಕ್ಸಿನ ವಿಧಗಳು ಆದಾಯ, ಸಂಪತ್ತು, ಕಾರ್ಪೊರೇಟ್ ಮತ್ತು ಕ್ಯಾಪಿಟಲ್ ಲಾಭದ ಟ್ಯಾಕ್ಸ್ ಅನ್ನು ಒಳಗೊಂಡಿವೆ.

ಇಂಡೈರೆಕ್ಟ್ ಟ್ಯಾಕ್ಸಿನ ವಿಧಗಳು ಯಾವುವು?

ಇಂಡೈರೆಕ್ಟ್ ಟ್ಯಾಕ್ಸಿನ ವಿಧಗಳಲ್ಲಿ ಗೂಡ್ಸ್ ಮತ್ತು ಸರ್ವೀಸ್ ಟ್ಯಾಕ್ಸ್ , ವಾಲ್ಯೂ ಆಡೆಡ್ ಟ್ಯಾಕ್ಸ್ , ಸೇಲ್ಸ್ ಮತ್ತು ಸರ್ವೀಸ್ ಟ್ಯಾಕ್ಸ್ ಗಳು ಸೇರಿವೆ.