ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 10 ರ ಬಗ್ಗೆ ಸಂಪೂರ್ಣ ಗೈಡ್

ನೀವು ಭಾರತದ ಟ್ಯಾಕ್ಸ್ ಪಾವತಿಸುವ ನಾಗರಿಕರಾಗಿದ್ದರೆ, ನೀವು ಕೆಲವೊಮ್ಮೆ ಕಾನೂನಿನ ಹಿಡಿತವನ್ನು ಅನುಭವಿಸಿರುತ್ತೀರಿ. ಆಗ ನೀವು ಕೆಲವು ವಿನಾಯಿತಿಗಳಿಗಾಗಿ ಪ್ರಾರ್ಥಿಸುತ್ತೀರಿ. ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 10 ರೊಂದಿಗೆ ಭಾರತ ಸರ್ಕಾರವು ಸುಲಭವಾಗಿರಿಸಲು ಪ್ರಯತ್ನಿಸುತ್ತದೆ. ಟ್ಯಾಕ್ಸ್ ಹೊರೆಗಳನ್ನು ಕಡಿಮೆ ಮಾಡಲು ಸ್ಯಾಲರೀಡ್ ಎಂಪ್ಲಾಯೀಗಳು ಕೆಲವು ಇನ್ಕಮ್ ಟ್ಯಾಕ್ಸ್ ವಿನಾಯಿತಿಗಳನ್ನು ಆನಂದಿಸಬಹುದು ಎಂಬುದನ್ನು ಇದು ತಿಳಿಸುತ್ತದೆ.

ನಿಮ್ಮ ಇನ್ಕಮ್ ಟ್ಯಾಕ್ಸ್‌ನಿಂದ ನೀವು ಯಾವ ರೀತಿಯ ವಿನಾಯಿತಿಗಳನ್ನು ಪಡೆಯಬಹುದು ಎಂಬುದರ ಕುರಿತು ನೀವು ಅಚ್ಚರಿ ಪಡುತ್ತೀರಾ? ಈ ವಿನಾಯಿತಿಗಳು ಮತ್ತು ಇವುಗಳನ್ನು ಕ್ಲೈಮ್ ಮಾಡುವ ಡಾಕ್ಯುಮೆಂಟುಗಳ ಕುರಿತು ತಿಳಿಯಲು ಈ ಆರ್ಟಿಕಲ್ ನಿಮಗೆ ಸಹಾಯ ಮಾಡುತ್ತದೆ.

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 10 ಎಂದರೇನು?

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 10, ಇನ್ಕಮ್ ಟ್ಯಾಕ್ಸ್ ಅನ್ನು ಪಾವತಿಸುವಾಗ ಪ್ರೊಫೆಷನಲ್‌ಗಳು ಪಡೆಯಬಹುದಾದ ಎಲ್ಲಾ ವಿನಾಯಿತಿಗಳನ್ನು ಮುಂದಿಡುವ ಗುರಿಯನ್ನು ಹೊಂದಿದೆ. ಈ ಸೆಕ್ಷನ್ "ವಿನಾಯಿತಿ" ಎಂಬ ಪದವನ್ನು ತುಂಬಾ ಕಡಿಮೆ ಪ್ರಮಾಣದಲ್ಲಿ ಒಳಗೊಂಡಿದೆಯಾದರೂ, ಇದು ಒಟ್ಟು ಇನ್ಕಮ್‌ನ ಭಾಗವಾಗಿರದ ಇನ್ಕಮ್ ಮೂಲಗಳ ಮೇಲೆ ಕೇಂದ್ರೀಕರಿಸುತ್ತದೆ. ಆದ್ದರಿಂದ, ಪ್ರೊಫೆಷನಲ್‌ಗಳ ಒಟ್ಟು ಟ್ಯಾಕ್ಸ್ ಲಯಬಿಲಿಟಿಯನ್ನು ವಿಶ್ಲೇಷಿಸುವಾಗ ಈ ಒಟ್ಟು ಇನ್ಕಮ್ ಅನ್ನು ಮುಖ್ಯವಾಗಿ ಕ್ಯಾಲ್ಕುಲೇಟ್ ಮಾಡಲಾಗುತ್ತದೆ.

ಹೀಗಾಗಿ, ಇನ್ಕಮ್ ಟ್ಯಾಕ್ಸ್‌ನಲ್ಲಿನ ಸೆಕ್ಷನ್ 10 ಏನು ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಇನ್ಕಮ್ ಟ್ಯಾಕ್ಸ್‌ ಅನ್ನು ಪಾವತಿಸುವಾಗ ವ್ಯಕ್ತಿಯೊಬ್ಬರು ಪಡೆಯಬಹುದಾದ ವಿವಿಧ ರೀತಿಯ ಟ್ಯಾಕ್ಸ್ ವಿನಾಯಿತಿಗಳನ್ನು ಚರ್ಚಿಸಲು, ಈ ಸೆಕ್ಷನ್ ಹಲವಾರು ಸಬ್‌ಸೆಕ್ಷನ್‌ಗಳಾಗಿ ವಿಭಜಿಸಲ್ಪಡುತ್ತದೆ.

[ಮೂಲ]

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 10 ರ ಅಡಿಯಲ್ಲಿ ಯಾವ ವಿನಾಯಿತಿಗಳನ್ನು ಅನುಮತಿಸಲಾಗಿದೆ?

ಕೇಂದ್ರ ಬಜೆಟ್ 2022 ರ ಪ್ರಕಾರ ಇನ್ಕಮ್ ಟ್ಯಾಕ್ಸ್ ಆ್ಯಕ್ಟ್, ಸೆಕ್ಷನ್ 10 ರ ಅಡಿಯಲ್ಲಿ ವಿವಿಧ ರೀತಿಯ ಟ್ಯಾಕ್ಸ್ ವಿನಾಯಿತಿಗಳನ್ನು ಅನುಮತಿಸಲಾಗಿದೆ. ಟ್ಯಾಕ್ಸ್ ವಿನಾಯಿತಿಗಳನ್ನು ನಿರ್ದಿಷ್ಟಪಡಿಸುವ ಎಲ್ಲಾ ಸಬ್‌ಸೆಕ್ಷನ್‌ಗಳನ್ನು ಈ ಕೆಳಗಿನವುಗಳಲ್ಲಿ ಚರ್ಚಿಸಲಾಗಿದೆ.

ಸೆಕ್ಷನ್ ಮತ್ತು ಸಬ್‌ಸೆಕ್ಷನ್‌ಗಳು ಟ್ಯಾಕ್ಸ್ ವಿನಾಯಿತಿಯ ರೂಪಗಳು
ಸೆಕ್ಷನ್ 10 (1) ಭಾರತದಲ್ಲಿ ಕೃಷಿ ವಿಧಾನಗಳ ಮೂಲಕ ಗಳಿಕೆ
ಸೆಕ್ಷನ್ 10 (2) ಇನ್ಕಮ್ ಅಥವಾ ಕುಟುಂಬದ ಆದಾಯವನ್ನು ಒಳಗೊಂಡಿರುವ ಹೆಚ್.ಯೂ.ಎಫ್ (ಹಿಂದೂ ಅನ್‌ಡಿವೈಡೆಡ್ ಫ್ಯಾಮಿಲಿ) ದಿಂದ ಹಿಸ್ಸೆದಾರನ (ಕೋಪಾರ್ಸೆನರ್) ಮೂಲಕ ಗಳಿಸಿದ ಯಾವುದೇ ಮೊತ್ತ
ಸೆಕ್ಷನ್ 10 (3) ಕ್ಯಾಶುಯಲ್ ಫಾರ್ಮ್‌ಗಳ ಮೂಲಕ ₹ 5000 ವರೆಗೆ ಮತ್ತು ಕುದುರೆ ರೇಸಿಂಗ್‌ನಂತಹ ಸಂದರ್ಭಗಳಲ್ಲಿ ₹ 2500 ವರೆಗಿನ ಇನ್ಕಮ್
ಸೆಕ್ಷನ್ 10 (2A) ಪಾರ್ಟ್ನರ್‌ಶಿಪ್ ಫರ್ಮ್‌ನ ಪಾರ್ಟ್ನರ್‌ಗಳಿಂದ ಪಡೆದ ಲಾಭದ ಪಾಲು. ಅಂತಹ ಲಾಭವನ್ನು ಪಾರ್ಟ್ನರ್‌ಗಳ ಒಟ್ಟು ಇನ್ಕಮ್‌ನಲ್ಲಿ ಸೇರಿಸಲಾಗುವುದಿಲ್ಲ.
ಸೆಕ್ಷನ್ 10 (4) (i) ಮತ್ತು (ii) ಅನಿವಾಸಿ ಭಾರತೀಯರಿಗೆ ವೈಯಕ್ತಿಕವಾಗಿ ಪಾವತಿಸಿದ ಅಥವಾ ಬ್ಯಾಂಕ್ ಅಕೌಂಟ್ ಮೂಲಕ ಟ್ರಾನ್ಸ್‌ಫರ್ ಮಾಡಿದ ಯಾವುದೇ ಇಂಟರೆಸ್ಟ್ ಮೊತ್ತ
ಸೆಕ್ಷನ್ 10 (4B) ಯಾವುದೇ ಇಂಟರೆಸ್ಟ್ ಮೊತ್ತವನ್ನು ಅನಿವಾಸಿ ಭಾರತೀಯರು ಆದರೆ ಮೂಲತಃ ಭಾರತೀಯರಾದವರಿಗೆ ಪಾವತಿಸಲಾಗುತ್ತದೆ
ಸೆಕ್ಷನ್ 10 (5) ಎಂಪ್ಲಾಯೀಗೆ ಭಾರತದಲ್ಲಿ ಟ್ರಾವೆಲ್ ಮಾಡಲು ಯಾವುದೇ ರಿಯಾಯಿತಿಯನ್ನು ನೀಡಲಾಗುತ್ತದೆ
ಸೆಕ್ಷನ್ 10 (6) ಭಾರತದಲ್ಲಿ ಮಾಡಿದ ಅಥವಾ ಸ್ವೀಕರಿಸಿದ ನಾನ್-ಇಂಡಿಯನ್ ಪ್ರಜೆಗಳ ಯಾವುದೇ ಇನ್ಕಮ್
ಸೆಕ್ಷನ್ 10 (6A), (6B), (6BB), (6C) ವಿದೇಶಿ ಕಂಪನಿಯ ಗಳಿಕೆಯ ಮೇಲೆ ವಿಧಿಸಲಾದ ಗವರ್ನಮೆಂಟ್ ಟ್ಯಾಕ್ಸ್
ಸೆಕ್ಷನ್ 10 (7) ಗವರ್ನಮೆಂಟ್ ಎಂಪ್ಲಾಯೀಗಳು ವಿದೇಶದಲ್ಲಿ ನೆಲೆಸಿರುವಾಗ ಪಡೆಯುವ ಅಲೋವೆನ್ಸ್‌ಗಳು
ಸೆಕ್ಷನ್ 10 (8) ಭಾರತದಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ಎಂಪ್ಲಾಯೀಗಳು ಕೋಆಪರೇಟಿವ್ ಟೆಕ್ನಿಕಲ್ ಅಸಿಸ್ಟೆನ್ಸ್ ಪ್ರೋಗ್ರಾಂನ ಅಡಿಯಲ್ಲಿ ಗಳಿಸಿದ ಇನ್ಕಮ್
ಸೆಕ್ಷನ್ 10 (8A) ಮತ್ತು (8B) ಕನ್ಸಲ್ಟೆಂಟ್‌ನ ಅಥವಾ ಕನ್ಸಲ್ಟೆಂಟ್‌ಗಳ ಸಿಬ್ಬಂದಿಯ ಗಳಿಕೆಗಳು
ಸೆಕ್ಷನ್ 10 (9) ಕೋಆಪರೇಟಿವ್ ಟೆಕ್ನಿಕಲ್ ಅಸಿಸ್ಟೆನ್ಸ್ ಪ್ರೋಗ್ರಾಂನ ಅಡಿಯಲ್ಲಿ ವಿದೇಶಿ ಎಂಪ್ಲಾಯೀಗಳ ಕುಟುಂಬದ ಸದಸ್ಯರ ಇನ್ಕಮ್
ಸೆಕ್ಷನ್ 10 (10) ಕೇಂದ್ರ ಸರ್ಕಾರದ ರಿವೈಸ್ಡ್ ಪೆನ್ಷನ್ ನಿಯಮಗಳ ಅಡಿಯಲ್ಲಿ ಪಡೆದ ಯಾವುದೇ ಡೆತ್-ಕಮ್-ರಿಟೈರ್‌ಮೆಂಟ್ ಗ್ರಾಚ್ಯುಟಿ
ಸೆಕ್ಷನ್ 10 (10A) ಮತ್ತು (10AA) ರಿಟೈರ್‌ಮೆಂಟ್ ಸಮಯದಲ್ಲಿ ಗಳಿಸಿದ ಯಾವುದೇ ಕಮ್ಯುಟೆಡ್ ಮೊತ್ತ ಮತ್ತು ರಿಟೈರ್‌ಮೆಂಟ್ ಸಮಯದಲ್ಲಿ ಲೀವ್ ಎನ್ಕ್ಯಾಶ್ಮೆಂಟ್ ಮೂಲಕ ಮಾಡಿದ ಮೊತ್ತ
ಸೆಕ್ಷನ್ 10 (10B) ಉದ್ಯೋಗದಲ್ಲಿ ರಿಲೊಕೇಶನ್‌ಗಾಗಿ ಕಾರ್ಮಿಕರು ಪಡೆಯುವ ಕಾಂಪನ್ಸೇಶನ್
ಸೆಕ್ಷನ್ 10 (10BB) ಮತ್ತು (10BC) ಭೋಪಾಲ್ ಗ್ಯಾಸ್ ಲೀಕ್ ಡಿಸಾಸ್ಟರ್ ಆ್ಯಕ್ಟ್ 1985 ರ ಪ್ರಕಾರ ಅಥವಾ ಯಾವುದೇ ದುರಂತದ ಸಂದರ್ಭದಲ್ಲಿ ಪಡೆದ ಯಾವುದೇ ರವಾನೆ (ರೆಮಿಟೆನ್ಸ್)
ಸೆಕ್ಷನ್ 10 (10CC) ಮತ್ತು (10D) ಟ್ಯಾಕ್ಸೇಶನ್ ಅನುಮತಿ ಮತ್ತು ಲೈಫ್ ಇನ್ಶೂರೆನ್ಸ್ ಪಾಲಿಸಿಯ ಮೂಲಕ ಪಡೆದ ಯಾವುದೇ ಮೊತ್ತ
ಸೆಕ್ಷನ್ 10 (11), (12) ಮತ್ತು (13) ಸ್ಟ್ಯಾಟುಟರಿ ಪ್ರಾವಿಡೆಂಟ್ ಫಂಡ್, ಅಥರೈಸ್ಡ್ ಅಥವಾ ಮಾನ್ಯತೆ ಪಡೆದ ಫಂಡ್ ಅಥವಾ ಸೂಪರ್‌ಅನ್ಯುಯೇಶನ್ ಫಂಡ್ ಮೂಲಕ ಸ್ವೀಕರಿಸಿದ ಯಾವುದೇ ಮೊತ್ತ
ಸೆಕ್ಷನ್ 10 (14) ಬಿಸಿನೆಸ್ ವೆಚ್ಚಗಳನ್ನು ಪೂರೈಸಲು ಬಳಸಿಕೊಳ್ಳಲಾದ ಅಲೋವೆನ್ಸ್‌ಗಳು
ಸೆಕ್ಷನ್ 10 (15) (i) ಮತ್ತು (ii) ನೋಟಿಫೈ ಮಾಡಲಾದ ಬಾಂಡ್‌ಗಳು, ಸೆಕ್ಯೂರಿಟಿಗಳು ಇತ್ಯಾದಿಗಳಿಂದ ಪಡೆದ ರಿಡಂಪ್ಷನ್‌ಗಳು, ಇಂಟರೆಸ್ಟ್ ಗಳು, ಪ್ರೀಮಿಯಂಗಳು.
ಸೆಕ್ಷನ್ 10 (15) (iv) ರಿಟೈರ್‌ಮೆಂಟ್‌ಗಾಗಿ ಸರ್ಕಾರವು ಪಾವತಿಸುವ ಸ್ಟೇಟ್ ಗವರ್ನಮೆಂಟ್, ಸೆಂಟ್ರಲ್ ಗವರ್ನಮೆಂಟ್ ಅಥವಾ ಪಬ್ಲಿಕ್ ಸೆಕ್ಟರ್ ಎಂಪ್ಲಾಯೀಗಳ ಡೆಪಾಸಿಟ್‌ಗಳ ಮೇಲಿನ ಇಂಟರೆಸ್ಟ್ .
ಸೆಕ್ಷನ್ 10 (15) (vi) ನೋಟಿಫೈ ಮಾಡಲಾದ ಗೋಲ್ಡ್ ಬಾಂಡ್ ಡೆಪಾಸಿಟ್‌ಗಳ ಮೇಲೆ ಪಡೆದ ಇಂಟರೆಸ್ಟ್ .
ಸೆಕ್ಷನ್ 10 (15) (vii) ನೋಟಿಫೈ ಮಾಡಲಾದ ಅಥಾರಿಟಿಯ ಬಾಂಡ್‌ಗಳ ಮೇಲೆ ಪಡೆದ ಇಂಟರೆಸ್ಟ್ .

[ಮೂಲ]

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 10 ರ ಅಡಿಯಲ್ಲಿ ವಿನಾಯಿತಿ ಪಡೆಯಲು ಯಾರು ಅರ್ಹರು?

ಸಾಮಾನ್ಯವಾಗಿ, 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ₹ 2.50 ಲಕ್ಷಗಳ ಬೇಸಿಕ್ ಟ್ಯಾಕ್ಸ್ ವಿನಾಯಿತಿ ಮಿತಿಯನ್ನು ಪಡೆಯಲು ಅರ್ಹರಾಗಿರುತ್ತಾರೆ. ಹಿರಿಯ ನಾಗರಿಕರಿಗೆ, ಈ ವಿನಾಯಿತಿ ಮಿತಿಯು ₹ 3 ಲಕ್ಷದವರೆಗೆ ಇರುತ್ತದೆ. ಆದಾಗ್ಯೂ, ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 10 ರ ಅಡಿಯಲ್ಲಿ ವಿವಿಧ ಷರತ್ತುಗಳು ಮತ್ತು ಸಬ್‌ಸೆಕ್ಷನ್‌ಗಳು ಸ್ಯಾಲರೀಡ್ ಯಾವುದೇ ಭಾರತೀಯ ಪ್ರೊಫೆಷನಲ್‌ಗಳಿಗೆ ಅನ್ವಯಿಸುತ್ತವೆ.

[ಮೂಲ]

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 10 ರ ಅಡಿಯಲ್ಲಿ ವಿನಾಯಿತಿಯನ್ನು ಕ್ಲೈಮ್ ಮಾಡಲು ಅಗತ್ಯವಿರುವ ಡಾಕ್ಯುಮೆಂಟುಗಳು

ನೀವು ಸೆಕ್ಷನ್ 10 ರ ಅಡಿಯಲ್ಲಿ ಇನ್ಕಮ್ ಟ್ಯಾಕ್ಸ್ ವಿನಾಯಿತಿಗೆ ಅರ್ಹರಾಗಿದ್ದರೆ, ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಫೈಲ್ ಮಾಡುವ ಮೂಲಕ ನೀವು ಸರ್ಕಾರಕ್ಕೆ ತಿಳಿಸಬೇಕು. ಇದನ್ನು ಮಾಡಲು, ನೀವು ಈ ಕೆಳಗಿನ ಡಾಕ್ಯುಮೆಂಟುಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.

  • ಪ್ಯಾನ್ ಕಾರ್ಡ್
  • ಆಧಾರ್ ಕಾರ್ಡ್
  • ಬ್ಯಾಂಕ್ ಸ್ಟೇಟ್‌ಮೆಂಟ್/ಬ್ಯಾಂಕ್ ಪಾಸ್‌ಬುಕ್
  • ಇನ್ಕಮ್ ಟ್ಯಾಕ್ಸ್ ಲಾಗಿನ್ ರುಜುವಾತುಗಳು (ಕ್ರೆಡೆನ್ಷಿಯಲ್‌ಗಳು)

ಹೀಗಾಗಿ, ನೀವು ನೋಡುವಂತೆ, ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 10, ಮುಖ್ಯವಾಗಿ ಸ್ಯಾಲರೀಡ್ ಭಾರತೀಯ ಪ್ರಜೆಗಳಿಗೆ ವಿವಿಧ ರೀತಿಯ ಇನ್ಕಮ್ ಟ್ಯಾಕ್ಸ್ ವಿನಾಯಿತಿಗಳ ಮೇಲೆ ಕೇಂದ್ರೀಕರಿಸುತ್ತದೆ. ಆ್ಯಕ್ಟ್‌ನ ಈ ಸೆಕ್ಷನ್‌ನಲ್ಲಿನ ವಿವಿಧ ಸಬ್‌ಸೆಕ್ಷನ್‌ಗಳು ನಿರ್ದಿಷ್ಟ ಇನ್ಕಮ್ಸ್ ಮತ್ತು ಅಲೋವೆನ್ಸ್‌ಗಳ ಅಡಿಯಲ್ಲಿ ಟ್ಯಾಕ್ಸ್‌ಗಳನ್ನು ಪಾವತಿಸುವುದರಿಂದ ತಪ್ಪಿಸಲು ಕಾನೂನುಬದ್ಧವಾಗಿ ನಿಮಗೆ ಅನುವು ಮಾಡಿಕೊಡುತ್ತದೆ. ಆದಾಗ್ಯೂ, ನಿಮ್ಮ ವಾರ್ಷಿಕ ಇನ್ಕಮ್‌ನಿಂದ ಈ ವಿನಾಯಿತಿಗಳನ್ನು ಕಾಪಾಡಿಕೊಳ್ಳಲು ನೀವು ಇನ್ಕಮ್ ಟ್ಯಾಕ್ಸ್ ರಿಟರ್ನ್ ಅನ್ನು ಫೈಲ್ ಮಾಡಬೇಕಾಗುತ್ತದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಹೆಚ್.ಆರ್.ಎ (HRA) ಸಂಪೂರ್ಣವಾಗಿ ವಿನಾಯಿತಿಗೆ ಒಳಪಡುತ್ತದೆಯೇ?

ಹೆಚ್.ಆರ್.ಎ ( (ಹೌಸ್ ರೆಂಟ್ ಅಲೋವೆನ್ಸ್) ನಿಮ್ಮ ಸಂಬಳದ ಭಾಗವಾಗಿದ್ದರೂ ಸಹ ಸಂಪೂರ್ಣವಾಗಿ ಟ್ಯಾಕ್ಸ್‌ಗೆ ಒಳಪಡುವುದಿಲ್ಲ. ಏಕೆಂದರೆ ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 10(13A) ಹೆಚ್.ಆರ್.ಎ ನ ಭಾಗವನ್ನು ವಿನಾಯಿತಿಗೆ ಒಳಪಡಿಸುತ್ತದೆ.

ನಿಮ್ಮ ಲೈಫ್ ಇನ್ಶೂರೆನ್ಸ್ ಪಾಲಿಸಿಯ ಮೆಚ್ಯೂರಿಟಿ ಪ್ರಕ್ರಿಯೆಯು ಟ್ಯಾಕ್ಸ್‌ಗೆ ಒಳಪಡುತ್ತದೆಯೇ?

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 10 (10D) ಪ್ರಕಾರ, ನೀವು ಪಾವತಿಸಿದ ಪ್ರೀಮಿಯಂ ಯಾವುದೇ ವರ್ಷಕ್ಕೆ ಇನ್ಶೂರೆನ್ಸ್ ಮೊತ್ತದ 10% ಅನ್ನು ಮೀರದಿದ್ದರೆ, ನಿಮ್ಮ ಲೈಫ್ ಇನ್ಶೂರೆನ್ಸ್ ಪಾಲಿಸಿಯ ಮೆಚ್ಯೂರಿಟಿ ಇನ್ಕಮ್ ಮೇಲೆ ನೀವು ಟ್ಯಾಕ್ಸ್ ವಿನಾಯಿತಿಗಳನ್ನು ಆನಂದಿಸುತ್ತೀರಿ.