ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 80DD

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌, 1961 ರ ಕೆಲವು ಸೆಕ್ಷನ್‌ಗಳಿವೆ, ಇದು ಟ್ಯಾಕ್ಸ್ ವಿಧಿಸುವ ಮೊದಲು ಟೋಟಲ್ ಗ್ರಾಸ್ ಇನ್ಕಮ್‌ನಿಂದ ಡಿಡಕ್ಷನ್‌ಗಳನ್ನು ಅನುಮತಿಸುತ್ತದೆ. ವಿಕಲಚೇತನ ವ್ಯಕ್ತಿಯ ವೈದ್ಯಕೀಯ ಚಿಕಿತ್ಸೆಯನ್ನು ಕವರ್ ಮಾಡಲು ಬಳಸಿದ ವೆಚ್ಚಗಳನ್ನು ನೀಡಿದರೆ ಡಿಡಕ್ಷನ್‌ಗಳು ಲಭ್ಯವಿವೆ. ಅಂತಹ ಒಂದು ಸೆಕ್ಷನ್, ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ 80DD ಆಗಿದೆ. ಅದರ ಬಗ್ಗೆ ಇನ್ನಷ್ಟು ತಿಳಿಯಲು ಬಯಸುವಿರಾ? ಓದನ್ನು ಮುಂದುವರಿಸಿ!

ಸೆಕ್ಷನ್ 80DD ಎಂದರೇನು?

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌, 1961 ರ ಸೆಕ್ಷನ್ 80DD ಅಂಗವೈಕಲ್ಯ ಹೊಂದಿರುವ ಅಥವಾ ಅಂಗವಿಕಲ ವ್ಯಕ್ತಿಯ ವೈದ್ಯಕೀಯ ವೆಚ್ಚಕ್ಕಾಗಿ ಡಿಡಕ್ಷನ್‌ನ ಮೇಲೆ ಕೇಂದ್ರೀಕರಿಸುತ್ತದೆ. ಈ ಸೆಕ್ಷನ್ ವಿಕಲಾಂಗ ವ್ಯಕ್ತಿಗಾಗಿ ಖರೀದಿಸಿದ ಇನ್ಶೂರೆನ್ಸ್ ಯೋಜನೆಯ ಪ್ರೀಮಿಯಂ ಪಾವತಿಯನ್ನು ಒಳಗೊಂಡಿರುತ್ತದೆ.

ಸೆಕ್ಷನ್ 80DD ಅಡಿಯಲ್ಲಿ, ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಲು ಯಾರು ಅರ್ಹರು?

ಸೆಕ್ಷನ್ 80DD ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಲು ಅರ್ಹರಾಗಿರುವ ವ್ಯಕ್ತಿಗಳು ಅಥವಾ ಗುಂಪುಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ-

  • ಅಂಗವಿಕಲ ಅವಲಂಬಿತರ ವೈದ್ಯಕೀಯ ವೆಚ್ಚವನ್ನು ನಿರ್ವಹಿಸುವ ಭಾರತದ ನಿವಾಸಿ.

  • ವೈದ್ಯಕೀಯ ವೆಚ್ಚಗಳು, ತರಬೇತಿ ಅಥವಾ ಅಂಗವಿಕಲ ಅವಲಂಬಿತರ ಪುನರ್ವಸತಿ ವೆಚ್ಚಗಳನ್ನು ನಿರ್ವಹಿಸುವ ಯಾವುದೇ ಹಿಂದೂ ಅವಿಭಜಿತ ಕುಟುಂಬ (ಹೆಚ್.ಯು.ಎಫ್) 

[ಮೂಲ]

ಸೆಕ್ಷನ್ 80ಡಿಡಿ ಅಡಿಯಲ್ಲಿ ಯಾವ ಡಿಡಕ್ಷನ್‌ಗಳು ಲಭ್ಯವಿವೆ?

ಸೆಕ್ಷನ್ 80DD ಅಡಿಯಲ್ಲಿ ಲಭ್ಯವಿರುವ ಡಿಡಕ್ಷನ್‌ಗಳು ಅಂಗವೈಕಲ್ಯದ ಸ್ವರೂಪವನ್ನು ಅವಲಂಬಿಸಿರುತ್ತದೆ. ಇವು ಈ ಕೆಳಗಿನವುಗಳನ್ನು ಒಳಗೊಂಡಿವೆ,

  • ಅಂಗವೈಕಲ್ಯ ಹೊಂದಿರುವ (40% ಕ್ಕಿಂತ ಹೆಚ್ಚು ಆದರೆ 80% ಕ್ಕಿಂತ ಕಡಿಮೆ) ಅವಲಂಬಿತ ವ್ಯಕ್ತಿಗೆ ₹75,000 ವರೆಗೆ ಟ್ಯಾಕ್ಸ್ ವಿನಾಯಿತಿ ಲಭ್ಯವಿದೆ. 

  • ತೀವ್ರ ಅಂಗವೈಕಲ್ಯ ಹೊಂದಿರುವ (80% ಅಥವಾ ಅದಕ್ಕಿಂತ ಹೆಚ್ಚು) ಅವಲಂಬಿತ ವ್ಯಕ್ತಿಗೆ ₹1,25,000 ವರೆಗಿನ ಟ್ಯಾಕ್ಸ್ ಡಿಡಕ್ಷನ್ ಲಭ್ಯವಿದೆ. ಇದು ವ್ಯಕ್ತಿಯೊಬ್ಬರು ಕ್ಲೈಮ್ ಮಾಡಬಹುದಾದ ಗರಿಷ್ಠ 80DD ಲಿಮಿಟ್ ಆಗಿದೆ.

ಈ ಡಿಡಕ್ಷನ್‌ಗಳು ಈ ಕೆಳಗಿನ ವೆಚ್ಚಗಳಿಗೆ ಅನ್ವಯಿಸುತ್ತವೆ:

  • ನರ್ಸಿಂಗ್, ಅಂಗವಿಕಲ ಅವಲಂಬಿತ ವ್ಯಕ್ತಿಯ ಪುನರ್ವಸತಿ ಮುಂತಾದ ವೈದ್ಯಕೀಯ ಚಿಕಿತ್ಸೆಯನ್ನು ಕವರ್ ಮಾಡುವ ವೆಚ್ಚ

  • ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಲಿಮಿಟೆಡ್ ಅಥವಾ ಯಾವುದೇ ಇತರ ಇನ್ಶೂರೆನ್ಸ್ ಕಂಪನಿಗೆ ನಿರ್ದಿಷ್ಟ ಇನ್ಶೂರೆನ್ಸ್ ಪಾಲಿಸಿಗಳನ್ನು ಅಥವಾ ವಿಕಲಚೇತನ ಅವಲಂಬಿತರನ್ನು ನೋಡಿಕೊಳ್ಳಲು ಸ್ಕೀಮ್‌ಗಳ ಖರೀದಿಗಾಗಿ ಪಾವತಿಸಿದ ಮೊತ್ತ 

ಸೆಕ್ಷನ್ 80DD ಅಡಿಯಲ್ಲಿ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಲು ಅಂಗವಿಕಲ ಅವಲಂಬಿತರಾಗಿ ಯಾರು ಅರ್ಹರಾಗುತ್ತಾರೆ?

ಅಂಗವೈಕಲ್ಯದ ವ್ಯಾಖ್ಯಾನವನ್ನು ವಿಕಲಾಂಗ ವ್ಯಕ್ತಿಗಳ (ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಪೂರ್ಣ ಭಾಗವಹಿಸುವಿಕೆ) ಆ್ಯಕ್ಟ್, 1995 ರ ಸೆಕ್ಷನ್ 2 ರ ಕ್ಲಾಸ್ (i) ನಲ್ಲಿ ಹೇಳಲಾಗಿದೆ. ಇದು ಆಟಿಸಂ, ಸೆರೆಬ್ರಲ್ ಪಾಲ್ಸಿ ಮತ್ತು ಬಹು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳನ್ನು ಒಳಗೊಂಡಿದೆ (ಆಥರೈಸ್ಡ್ ಮೆಡಿಕಲ್ ಅಥಾರಿಟಿಯಿಂದ ಸರ್ಟಿಫೈಡ್ ಆಗಿರಬೇಕು) ಇಂತಹವರನ್ನು ಅಂಗವಿಕಲ ವ್ಯಕ್ತಿಗಳೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಅವರು ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಲು ಕನಿಷ್ಠ 40% ಅಂಗವೈಕಲ್ಯವನ್ನು ಹೊಂದಿರಬೇಕು. 

ಮತ್ತೊಂದೆಡೆ, ಅವಲಂಬಿತರು ಎನ್ನುವುದು (ಸೆಕ್ಷನ್ 80DD ಅಡಿಯಲ್ಲಿ) ಸಂಗಾತಿ, ಮಕ್ಕಳು, ಪೋಷಕರು, ಒಡಹುಟ್ಟಿದವರು, ಹೆಚ್.ಯು.ಎಫ್ ಸದಸ್ಯರನ್ನು ಸೂಚಿಸುತ್ತದೆ.

ಒಟ್ಟಿನಲ್ಲಿ, ಅಂಗವಿಕಲ ಅವಲಂಬಿತರು ಎನ್ನುವುದು ಯಾವುದೇ ವ್ಯಕ್ತಿಯು (ಸಂಗಾತಿ, ಮಕ್ಕಳು, ಪೋಷಕರು, ಒಡಹುಟ್ಟಿದವರು, ಹೆಚ್.ಯು.ಎಫ್ ನ ಸದಸ್ಯರು) 40% ಅಂಗವೈಕಲ್ಯ ಹೊಂದಿರುವುದನ್ನು (ಆಫೀಷಿಯಲ್ ಮೆಡಿಕಲ್ ಅಥಾರಿಟಿಯಿಂದ ಸರ್ಟಿಫೈಡ್ ಆಗಿರಬೇಕು) ಸೂಚಿಸುತ್ತದೆ.

ಗಮನಿಸಿ: ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 80DD ಅಡಿಯಲ್ಲಿ ಡಿಡಕ್ಷನ್‌ ಎನ್ನುವುದು ಕೇವಲ ಟ್ಯಾಕ್ಸ್ ಪೇಯರ್‌ನ ಅಂಗವಿಕಲ ಅವಲಂಬಿತರಿಗೆ ಮಾತ್ರ ಲಭ್ಯವಿದೆಯೇ ಹೊರತು ಟ್ಯಾಕ್ಸ್ ಪೇಯರ್‌ಗಳಿಗೆ ಅಲ್ಲ.

ಅಂಗವೈಕಲ್ಯದ ವ್ಯಾಖ್ಯಾನವು ವ್ಯಕ್ತಿಗಳಿಗೆ ಸ್ಪಷ್ಟವಾಗಿರುವುದರಿಂದ, ಸೆಕ್ಷನ್ 80DD ಅಡಿಯಲ್ಲಿ ಬರುವ ಅಂಗವೈಕಲ್ಯದ ವಿವಿಧ ಸ್ವರೂಪಗಳನ್ನು ಕಲಿಯೋಣ. ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 80DD ಅಡಿಯಲ್ಲಿ, ಕೆಳಗಿನ ರೀತಿಯ ಅಂಗವೈಕಲ್ಯ ಮತ್ತು ತೀವ್ರ ಅಂಗವೈಕಲ್ಯವನ್ನು ಪರಿಗಣಿಸಲಾಗುತ್ತದೆ.

[ಮೂಲ]

  • ಕುರುಡುತನ

  • ಶ್ರವಣ ದೋಷ

  • ಆಟಿಸಂ

  • ಬುದ್ಧಿಮಾಂದ್ಯತೆ

  • ಲೊಕೊಮೋಟರ್ ಅಸಮರ್ಥತೆ

  • ಕಡಿಮೆ ದೃಷ್ಟಿ

  • ಮಾನಸಿಕ ಅಸ್ವಸ್ಥತೆ

  • ಸೆರೆಬ್ರಲ್ ಪಾಲ್ಸಿ

  • ಲೆಪ್ರೊಸಿ-ಕ್ಯುರ್ಡ್ 

[ಮೂಲ]

ಸೆಕ್ಷನ್ 80ಡಿಡಿ ಅಡಿಯಲ್ಲಿ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡುವುದು ಹೇಗೆ?

ಸೆಕ್ಷನ್ 80DD ಡಿಡಕ್ಷನ್ ಅನ್ನು ಕ್ಲೈಮ್ ಮಾಡಲು ಸಿದ್ಧರಿರುವ ವ್ಯಕ್ತಿಗಳು ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡುವ ಸಮಯದಲ್ಲಿ ಮೆಡಿಕಲ್ ಸರ್ಟಿಫಿಕೇಟ್ ಅನ್ನು (ಆಫೀಷಿಯಲ್ ಮೆಡಿಕಲ್ ಅಥಾರಿಟಿಯಿಂದ ನೀಡಲಾದ) ಸಬ್ಮಿಟ್ ಮಾಡಬೇಕು. ಇದಲ್ಲದೆ, ಅವರು ಫಾರ್ಮ್ 10-1A, ITR ಪೇಪರ್‌ಗಳು, ಸೆಲ್ಫ್-ಡಿಕ್ಲರೇಶನ್ ಮತ್ತು ಇತರ ಅಗತ್ಯ ಡಾಕ್ಯುಮೆಂಟುಗಳನ್ನು ಒದಗಿಸಬೇಕು.

ಅಂಗವಿಕಲ ಅವಲಂಬಿತರು ಮೆಡಿಕಲ್ ಸರ್ಟಿಫಿಕೇಟ್ ಅನ್ನು ಎಲ್ಲಿ ಪಡೆಯಬಹುದು ಎಂದು ಆಶ್ಚರ್ಯಪಡುತ್ತೀರಾ?

ಜನರು ಈ ಕೆಳಗಿನ ವ್ಯಕ್ತಿಗಳಿಂದ, ಅಂಗವಿಕಲ ಅವಲಂಬಿತರಿಗೆ ಮೆಡಿಕಲ್ ಸರ್ಟಿಫಿಕೇಟ್ ಅನ್ನು ಪಡೆಯಬಹುದು -

  • ಸರ್ಕಾರಿ ಆಸ್ಪತ್ರೆಯ ಚೀಫ್ ಮೆಡಿಕಲ್ ಆಫೀಸರ್ (ಸಿಎಮ್ಒ) ಅಥವಾ ಸಿವಿಲ್ ಸರ್ಜನ್.

  • ನ್ಯೂರಾಲಜಿಯಲ್ಲಿ ಡಾಕ್ಟರ್ ಆಫ್ ಮೆಡಿಸಿನ್ (ಎಮ್.ಡಿ) ಪದವಿ ಹೊಂದಿರುವ ನ್ಯೂರಾಲಜಿಸ್ಟ್.

  • ಐಎನ್ ಎಮ್.ಡಿ ಯಲ್ಲಿ ಸಮಾನವಾದ ನ್ಯೂರಾಲಜಿ ಪದವಿಯನ್ನು ಹೊಂದಿರುವ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್. (ಅದು ಮಗುವಾಗಿದ್ದರೆ).

[ಮೂಲ]

ಮೇಲೆ ತಿಳಿಸಿದ ಮಾಹಿತಿಯು, ಸೆಕ್ಷನ್ 80DD ಅಡಿಯಲ್ಲಿ ಡಿಡಕ್ಷನ್‌ಗಳ ಸಮಗ್ರ ಕಲ್ಪನೆಯನ್ನು ನೀಡುತ್ತದೆ. ಈ ವಿವರಗಳನ್ನು ಓದಿ ಮತ್ತು ಈ ಸೆಕ್ಷನ್‌ನ ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್‌ಗಳಿಗೆ ಅಪ್ಲೈ ಸಲ್ಲಿಸಿ. ನೆನಪಿಡಿ, 80U ಅಡಿಯಲ್ಲಿ ಡಿಡಕ್ಷನ್‌ ಎನ್ನುವುದು ಕೇವಲ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಅನ್ವಯಿಸುತ್ತದೆ; ಮತ್ತೊಂದೆಡೆ, ಅಂಗವಿಕಲ ಅವಲಂಬಿತರ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಟ್ಯಾಕ್ಸ್ ಪೇಯರ್‌ಗಳಿಗೆ 80DD ಅನ್ವಯಿಸುತ್ತದೆ. ಆದ್ದರಿಂದ, ವ್ಯಕ್ತಿಗಳು ಈ ಎರಡೂ ಸೆಕ್ಷನ್‌ಗಳ ಅಡಿಯಲ್ಲಿ ಏಕಕಾಲದಲ್ಲಿ ಟ್ಯಾಕ್ಸ್ ಡಿಡಕ್ಷನ್‌ಗಳಿಗೆ ಕ್ಲೈಮ್ ಮಾಡಲು ಸಾಧ್ಯವಿಲ್ಲ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಅನಿವಾಸಿ ಭಾರತೀಯರು ಸೆಕ್ಷನ್ 80DD ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್‌ಗಳಿಗಾಗಿ ಕ್ಲೈಮ್ ಮಾಡಬಹುದೇ?

ಇಲ್ಲ, ಅನಿವಾಸಿ ಭಾರತೀಯರು ಸೆಕ್ಷನ್ 80DD ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್‌ಗಳಿಗಾಗಿ ಕ್ಲೈಮ್ ಮಾಡುವಂತಿಲ್ಲ. 

[ಮೂಲ]

ಡಿಡಕ್ಷನ್‌ಗಳ ಮೊತ್ತವು, ವೈದ್ಯಕೀಯ ವೆಚ್ಚಗಳು ಅಥವಾ ಅವಲಂಬಿತ ಅಂಗವಿಕಲ ವ್ಯಕ್ತಿಯ ವಯಸ್ಸಿನ ಮೇಲೆ ಅವಲಂಬಿತವಾಗಿದೆಯೇ?

ಇಲ್ಲ, ಡಿಡಕ್ಷನ್‌ಗಳ ಮೊತ್ತವು, ವೈದ್ಯಕೀಯ ವೆಚ್ಚಗಳು ಅಥವಾ ವಿಕಲಾಂಗ ವ್ಯಕ್ತಿಯ ಅಂಗವೈಕಲ್ಯದ ತೀವ್ರತೆಯನ್ನು ಅವಲಂಬಿಸಿರುತ್ತದೆ. 

[ಮೂಲ]