ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಸೀನಿಯರ್‌ ಸಿಟಿಜನ್‌ಗಳು ಮತ್ತು ಸೂಪರ್ ಸೀನಿಯರ್‌ ಸಿಟಿಜನ್‌ಗಳಿಗೆ ಇನ್‌ಕಮ್‌ ಟ್ಯಾಕ್ಸ್‌ ಪ್ರಯೋಜನಗಳು

ನಾವು ಇಷ್ಟಪಡುತ್ತೇವೆಯೋ ಇಲ್ಲವೋ, ನಾವೆಲ್ಲರೂ ಭವಿಷ್ಯದ ಬಗ್ಗೆ ಚಿಂತಿಸುತ್ತೇವೆ ಮತ್ತು ಸುರಕ್ಷಿತ ನಾಳೆಯನ್ನು ಹೊಂದಲು ಹಣವನ್ನು ಉಳಿತಾಯ ಮಾಡಲು ಮತ್ತು ಇನ್‌ವೆಸ್ಟ್‌ ಮಾಡಲು ಗಣನೀಯವಾಗಿ ಆಯ್ಕೆಗಳನ್ನು ಆರಿಸಿಕೊಳ್ಳುತ್ತೇವೆ. ಪರಿಣಾಮವಾಗಿ, ಇಂದು ನಾವು ಮಾಡುವ ಬಹುತೇಕ ಕೆಲಸಗಳು ನಮ್ಮ ಬೆಳವಣಿಗೆಗೆ ಮತ್ತು ದೇಶದ ಒಟ್ಟಾರೆ ಬೆಳವಣಿಗೆಗೆ ಕೊಡುಗೆ ನೀಡುತ್ತವೆ. 

ಆದಾಗ್ಯೂ, ತಮ್ಮ ತಾರುಣ್ಯದ ದಿನಗಳಲ್ಲಿ ಈಗಾಗಲೇ ಸಾಕಷ್ಟು ಕಾಂಟ್ರಿಬ್ಯೂಷನ್ ನೀಡಿರುವ 60 ವರ್ಷಕ್ಕಿಂತ ಮೇಲ್ಪಟ್ಟ ಟ್ಯಾಕ್ಸ್‌ಪೇಯರ್ಗಳಿಗೆ ಕೆಲವು ಇನ್‌ಕಮ್‌ ಟ್ಯಾಕ್ಸ್‌ ಪ್ರಯೋಜನಗಳು ಇರಬೇಕು ಎಂಬುದನ್ನು ನೀವು ಯೋಚಿಸುವುದಿಲ್ಲವೇ? ಆದ್ದರಿಂದ, ಸೀನಿಯರ್‌ ಸಿಟಿಜನ್‌ಗಳಿಗೆ ಇರುವ ಈ ಕೆಲವು ಇನ್‌ಕಮ್‌ ಟ್ಯಾಕ್ಸ್‌ ಪ್ರಯೋಜನಗಳ ಬಗ್ಗೆ ಮಾತನಾಡೋಣ.

ಭಾರತದಲ್ಲಿ ಯಾರನ್ನು ಸೀನಿಯರ್‌ ಸಿಟಿಜನ್‌ ಎಂದು ಪರಿಗಣಿಸಲಾಗುತ್ತದೆ?

ಇನ್‌ಕಮ್‌ ಟ್ಯಾಕ್ಸ್‌ ಪ್ರಕಾರ, ಸೀನಿಯರ್‌ ಸಿಟಿಜನ್‌ಗಳು ಎಂದರೆ ಆರ್ಥಿಕ ವರ್ಷದ ಯಾವುದೇ ಸಮಯದಲ್ಲಿ 60 ವರ್ಷ ಆಗಿರುವ ಅಥವಾ ಅದಕ್ಕಿಂತ ಹೆಚ್ಚು ಆದರೆ 80 ವರ್ಷಗಳಿಗಿಂತ ಕಡಿಮೆ ವಯಸ್ಸು ಹೊಂದಿರುವ ನಿವಾಸಿ ವ್ಯಕ್ತಿ.

[ಮೂಲ]

ಭಾರತದಲ್ಲಿ ಯಾರನ್ನು ಸೂಪರ್ ಸೀನಿಯರ್‌ ಸಿಟಿಜನ್‌ ಎಂದು ಪರಿಗಣಿಸಲಾಗುತ್ತದೆ?

ಸೂಪರ್ ಸೀನಿಯರ್ ಸಿಟಿಜನ್ ಎಂದರೆ ಆರ್ಥಿಕ ವರ್ಷದ ಯಾವುದೇ ಸಮಯದಲ್ಲಿ 80 ವರ್ಷ ಆಗಿರುವ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಒಬ್ಬ ನಿವಾಸಿ ವ್ಯಕ್ತಿ.

ಸೀನಿಯರ್‌ ಸಿಟಿಜನ್‌ಗಳು ವಿಶೇಷ ಇನ್‌ಕಮ್‌ ಟ್ಯಾಕ್ಸ್‌ ಪ್ರಯೋಜನಗಳನ್ನು ಏಕೆ ಹೊಂದಿರಬೇಕು?

ಭಾರತದ ಇತಿಹಾಸವು ಸಾಂಸ್ಕೃತಿಕವಾಗಿ ಶ್ರೀಮಂತ ಹಿನ್ನೆಲೆಯನ್ನು ಹೊಂದಿದೆ, ಅಲ್ಲಿ ಹಿರಿಯರಿಗೆ ಗೌರವ ಮತ್ತು ಪ್ರೀತಿಯನ್ನು ನೀಡಲಾಗುತ್ತದೆ. ಸಂತಸದ ಮತ್ತು ಕೆಟ್ಟ ಘಟನೆಗಳ ಕುರಿತು ಜನರೇಷನ್‌ಗಳಿಗೆ ಮಾರ್ಗದರ್ಶನ ನೀಡುವ ಕುರಿತು ಅವರು ಕಾಳಜಿ ವಹಿಸುತ್ತಾರೆ. 

ಸಂಸ್ಕೃತಿ ಮತ್ತು ನೈತಿಕ ಮೌಲ್ಯಗಳನ್ನು ಹಾಗೆಯೇ ಇರಿಸಿಕೊಳ್ಳಲು ಮತ್ತು ಸೀನಿಯರ್‌ ಸಿಟಿಜನ್‌ಗಳಿಗೆ ವಿಶೇಷ ಇನ್‌ಕಮ್‌ ಟ್ಯಾಕ್ಸ್‌ ಪ್ರಯೋಜನಗಳನ್ನು ನೀಡಲು ಸರ್ಕಾರವು ಒಟ್ಟಾಗಿ ಕೆಲಸ ಮಾಡುತ್ತಿದೆ. ಜೀವನದ ಈ ಹಂತದಲ್ಲಿ ಅವರನ್ನು ಒತ್ತಡದಿಂದ ಮುಕ್ತಗೊಳಿಸುವುದು ಅವರ ಐಡಿಯಾ. ಒಂದು ವೇಳೆ ನೀವು ಅಥವಾ ನಿಮ್ಮ ಸೀನಿಯರ್‌ ಸಿಟಿಜನ್‌ ಪೋಷಕರು ತಮ್ಮ ಫಂಡ್‌ಗಳನ್ನು ಪ್ಲಾನ್ ಮಾಡುತ್ತಿದ್ದೀರಿ. ಅಂತಹ ಸಂದರ್ಭದಲ್ಲಿ, ಸೀನಿಯರ್‌ ಮತ್ತು ಸೂಪರ್ ಸೀನಿಯರ್‌ ಸಿಟಿಜನ್‌ಗಳಿಗೆ ಇರುವ ಟ್ಯಾಕ್ಸ್‌ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.

60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೀನಿಯರ್‌ ಸಿಟಿಜನ್‌ಗಳಿಗೆ ವಿಶೇಷ ಇನ್‌ಕಮ್‌ ಟ್ಯಾಕ್ಸ್‌ ಪ್ರಯೋಜನಗಳು

60 ವರ್ಷ ಮೇಲ್ಪಟ್ಟ ಟ್ಯಾಕ್ಸ್‌ಪೇಯರ್‌ಗಳಿಗೆ ಆರ್ಥಿಕ ಜವಾಬ್ದಾರಿಗಳನ್ನು ಸುಗಮಗೊಳಿಸುವ ಕೆಲವು ವಿನಾಯಿತಿಗಳು, ಡಿಡಕ್ಷನ್‌ಗಳು ಮತ್ತು ಪ್ರಯೋಜನಗಳು ಇಲ್ಲಿವೆ.

1. ಪ್ರಾಥಮಿಕ ವಿನಾಯಿತಿ ಪ್ರಯೋಜನ

ಟ್ಯಾಕ್ಸ್ ಪಾವತಿಸುವಷ್ಟರ ಇನ್‌ಕಮ್‌ ಬ್ರಾಕೆಟ್‌ನ ಅಡಿಯಲ್ಲಿ ಬರುವ ಭಾರತದಲ್ಲಿನ ಪ್ರತಿಯೊಬ್ಬ ವ್ಯಕ್ತಿಗೂ ಕೆಲವು ಪ್ರಾಥಮಿಕ ಮನ್ನಾಗಳನ್ನು ಅನುಮತಿಸಲಾಗಿದೆ. 

ಸೀನಿಯರ್‌ ಸಿಟಿಜನ್‌ಗಳಿಗೆ, ಏಪ್ರಿಲ್ 1, 2023ರಿಂದ ಜಾರಿಗೆ ಬರುವಂತೆ ಎರಡೂ ಟ್ಯಾಕ್ಸ್ ರೆಜಿಮ್‌ಗಳ ಅಡಿಯಲ್ಲಿ ಸರ್ಕಾರವು ಈ ಮೂಲ ವಿನಾಯಿತಿ ಲಿಮಿಟ್‌ ಅನ್ನು ₹3 ಲಕ್ಷದವರೆಗೆ ಹೆಚ್ಚಿಸಿದೆ. 

ಸೂಪರ್ ಸಿಟಿಜನ್‌ಗಳು ತಮ್ಮ ಇನ್‌ಕಮ್‌ ಮತ್ತು ವಯಸ್ಸು ಪರಿಗಣನೆ ಪ್ರಕಾರ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ. ಅವರಿಗೆ, ಈ ಮನ್ನಾ ಒಂದು ಆರ್ಥಿಕ ವರ್ಷದಲ್ಲಿ ಹಳೆಯ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ₹5 ಲಕ್ಷದವರೆಗೆ ಇರುತ್ತದೆ. ಹೊಸ ರೆಜಿಮ್ ಅಡಿಯಲ್ಲಿ, ಮೂಲ ವಿನಾಯಿತಿ ಲಿಮಿಟ್ ₹3 ಲಕ್ಷದವರೆಗೆ ಇರುತ್ತದೆ. 

ಸೀನಿಯರ್ ಅಥವಾ ಸೂಪರ್ ಸಿಟಿಜನ್‌ಗಳನ್ನು ಹೊರತುಪಡಿಸಿ, ಸಾಮಾನ್ಯ ನಾಗರಿಕರಿಗೆ ಈ ವಿನಾಯಿತಿ ಹಳೆಯ ಟ್ಯಾಕ್ಸ್‌ ರೆಜಿಮ್‌ ಅಡಿಯಲ್ಲಿ ₹2,50,000/-ವರೆಗೆ ಮಾತ್ರ ಇರುತ್ತದೆ, ಇದು ಅವರು ಹೆಚ್ಚಿನ ಟ್ಯಾಕ್ಸ್ ಪಾವತಿಸುವಂತೆ ಮಾಡುತ್ತದೆ. 

[ಮೂಲ]

2. ಮೆಡಿಕಲ್ ಇನ್ಶೂರೆನ್ಸ್ ಅಡಿಯಲ್ಲಿ ಪ್ರಯೋಜನಗಳು

ಸೆಕ್ಷನ್ 80D ಅಡಿಯಲ್ಲಿ, ಸೀನಿಯರ್‌ ಸಿಟಿಜನ್‌ಗಳಿಗೆ ₹50,000ವರೆಗಿನ ಹೆಲ್ತ್‌ ಇನ್ಶೂರೆನ್ಸ್ ಪ್ರೀಮಿಯಂನ ಪೇಮೆಂಟ್ ಖಾತೆಯ ಮೇಲೆ ಒಂದು ಪ್ರಯೋಜನವನ್ನು ನೀಡಲಾಗುತ್ತದೆ. ಮೆಡಿಕಲೀ ಇನ್ಶೂರ್ಡ್ ಆಗದಿರುವ ಸೂಪರ್ ಸೀನಿಯರ್‌ ಸಿಟಿಜನ್‌ಗಳು ಕೂಡ ಈ ಪ್ರಯೋಜನವನ್ನು ಆನಂದಿಸಬಹುದು.

ಸೂಪರ್ ಸಿಟಿಜನ್‌ಗಳಿಗೆ, ಸೆಕ್ಷನ್ 80D ಅಡಿಯಲ್ಲಿ, ಮೆಡಿಕಲ್ ಪ್ರೀಮಿಯಂ ಪೇಮೆಂಟ್‌ಗೆ ಡಿಡಕ್ಷನ್‌ ಮತ್ತು ಅವರ ಚಿಕಿತ್ಸೆಗೆ ಉಂಟಾದ ನಿಜವಾದ ವೆಚ್ಚಗಳನ್ನು ಅನುಮತಿಸಲಾಗಿದೆ.

ಈ ಬಗ್ಗೆ ಇನ್ನಷ್ಟು ತಿಳಿಯಿರಿ: ಹೆಲ್ತ್‌ ಇನ್ಶೂರೆನ್ಸ್ ಟ್ಯಾಕ್ಸ್ ಪ್ರಯೋಜನಗಳು

[ಮೂಲ]

3. ಇಂಟರೆಸ್ಟ್ ಇನ್‌ಕಮ್‌ ಮೇಲೆ ಸವಲತ್ತು

ಭಾರತದ ನಿವಾಸಿಯಾಗಿರುವ ಸೀನಿಯರ್‌ ಸಿಟಿಜನ್‌ಗಳು ಆರ್ಥಿಕ ವರ್ಷದಲ್ಲಿ ಗಳಿಸಿದ ₹50,000ವರೆಗಿನ ಇಂಟರೆಸ್ಟ್ ಗೆ ಯಾವುದೇ ಟ್ಯಾಕ್ಸ್ ಅನ್ನು ಪಾವತಿಸಬೇಕಾಗಿಲ್ಲ. 

ಇನ್‌ಕಮ್‌ ಟ್ಯಾಕ್ಸ್‌ನ ಸೆಕ್ಷನ್ 80ಟಿಟಿಬಿ ಅಡಿಯಲ್ಲಿ ಅನ್ವಯಿಸುತ್ತದೆ, ಇದು ಉಳಿತಾಯ ಬ್ಯಾಂಕ್ ಖಾತೆ, ಬ್ಯಾಂಕ್‌ನಲ್ಲಿನ ಡೆಪಾಸಿಟ್ ಮತ್ತು/ಅಥವಾ ಪೋಸ್ಟ್-ಆಫೀಸ್‌ನಲ್ಲಿನ ಡೆಪಾಸಿಟ್‌ಗಳಲ್ಲಿ ಗಳಿಸಿದ ಇಂಟರೆಸ್ಟ್ ಅನ್ನು ಪರಿಗಣಿಸುತ್ತದೆ. ತಮ್ಮ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಫೈಲ್ ಮಾಡುವಾಗ, ಸೀನಿಯರ್‌ ಸಿಟಿಜನ್‌ಗಳು ಫಾರ್ಮ್ 15H ಅನ್ನು ಭರ್ತಿ ಮಾಡಬೇಕು. 

ಅಲ್ಲದೇ, ಸೆಕ್ಷನ್ 194a ಬ್ಯಾಂಕ್, ಅಂಚೆ ಕಚೇರಿ ಅಥವಾ ಸಹಕಾರಿ ಬ್ಯಾಂಕ್‌ನ ₹50,000ವರೆಗಿನ ಇಂಟರೆಸ್ಟ್ ಪೇಮೆಂಟ್‌ಗಳ ಮೇಲೆ ಹೆಚ್ಚಿನ ಟಿಡಿಎಸ್‌ ಡಿಡಕ್ಷನ್ ಪ್ರಯೋಜನವನ್ನು ಸೀನಿಯರ್‌ ಸಿಟಿಜನ್‌ಗಳಿಗೆ ಒದಗಿಸುತ್ತದೆ. ಸೀನಿಯರ್‌ ಸಿಟಿಜನ್‌ಗಳಲ್ಲದವರಿಗೆ ಈ ಲಿಮಿಟ್ ₹40,000 ಆಗಿದೆ.

[ಮೂಲ 1]

[ಮೂಲ 2]

4. ಐಟಿಆರ್‌ ಪೈಲ್ ಮಾಡುವುದರಿಂದ ವಿನಾಯಿತಿ

ಬಜೆಟ್ 2021 ಸೆಕ್ಷನ್ 194P ಅನ್ನು ಪರಿಚಯಿಸಿದೆ, ಅದರ ಅಡಿಯಲ್ಲಿ ಈ ಕೆಳಗಿನ ಮಾನದಂಡಗಳನ್ನು ಪೂರೈಸಿದರೆ 75 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೀನಿಯರ್‌ ಸಿಟಿಜನ್‌ಗಳು ಐಟಿಆರ್ ಫೈಲ್ ಮಾಡುವುದರಿಂದ ವಿನಾಯಿತಿ ಪಡೆಯುತ್ತಾರೆ:

  • ಅವರಿಗೆ ಪೆನ್ಷನ್‌ನಿಂದ ಮಾತ್ರ ಇನ್‌ಕಮ್‌ ಇರುತ್ತದೆ. 
  • ಅವರು ಅದೇ ಬ್ಯಾಂಕ್ ಖಾತೆಯಿಂದ ಇಂಟರೆಸ್ಟ್ ಮತ್ತು ಪೆನ್ಷನ್‌ನಿಂದ ಇನ್‌ಕಮ್‌ ಪಡೆಯುತ್ತಾರೆ.
  • ಅವರು ನಿರ್ದಿಷ್ಟ ಬ್ಯಾಂಕ್‌ಗೆ ಡಿಕ್ಲರೇಶನ್ ಫಾರ್ಮ್ 12BBA ಅನ್ನು ಒದಗಿಸಿರುತ್ತಾರೆ. 

5. ಮುಂಗಡ ಟ್ಯಾಕ್ಸ್ ಇಲ್ಲ

60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಆರ್ಥಿಕ ವರ್ಷದಲ್ಲಿ ಅವರು ₹10,000 ಅಥವಾ ಅದಕ್ಕಿಂತ ಹೆಚ್ಚಿನ ಟ್ಯಾಕ್ಸ್ ಲಯಬಿಲಿಟಿಯನ್ನು ಹೊಂದಿದ್ದರೆ ಮುಂಗಡ ಟ್ಯಾಕ್ಸ್ ಪಾವತಿಸಬೇಕಾಗುತ್ತದೆ, ಸೀನಿಯರ್‌ ಸಿಟಿಜನ್‌ಗಳು ಬಿಸಿನೆಸ್ ಅಥವಾ ವೃತ್ತಿಯಿಂದ ಇನ್‌ಕಮ್‌ ಅನ್ನು ಗಳಿಸದ ಹೊರತು ಈ ಹೊರೆಯಿಂದ ಮುಕ್ತರಾಗುತ್ತಾರೆ.

6. ನಿಗದಿತ ಡಿಸೀಸ್‌ಗಳ ಚಿಕಿತ್ಸೆಗೆ ಅಲೋಯನ್ಸ್

60ವರ್ಷಕ್ಕಿಂತ ಕಡಿಮೆ ವಯಸ್ಸಿನ ವೈಯಕ್ತಿಕ ಟ್ಯಾಕ್ಸ್‌ಪೇಯರ್‌ಗಳು ಮತ್ತು ಅವಲಂಬಿತ ಸಂಬಂಧಿಕರ ಮೆಡಿಕಲ್ ಚಿಕಿತ್ಸೆಗೆ ₹40,000ದಷ್ಟು ವೆಚ್ಚವಾಗಿದ್ದರೆ ಟ್ಯಾಕ್ಸ್ ಪಾವತಿಸದಿರಲು ಭಾರತ ಸರ್ಕಾರವು ಅನುಮತಿಸುತ್ತದೆ. 

ಅವಲಂಬಿತ ಸೀನಿಯರ್ ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ, ಇನ್‌ಕಮ್‌ ಟ್ಯಾಕ್ಸ್‌ ಕಾಯಿದೆಯ ಸೆಕ್ಷನ್ 80DDB ಪ್ರಕಾರ, ಆರ್ಥಿಕ ವರ್ಷದಲ್ಲಿ ಅವರು ನಿರ್ದಿಷ್ಟ ಡಿಸೀಸ್/ಕ್ರಿಟಿಕಲ್‌ ಇಲ್‌ನೆಸ್‌ಗೆ ಯಾವುದೇ ಚಿಕಿತ್ಸೆಯನ್ನು ಪಡೆದರೆ ಈ ಡಿಡಕ್ಷನ್ ಲಿಮಿಟ್ ₹1 ಲಕ್ಷದವರೆಗೆ ಇರುತ್ತದೆ. 

[ಮೂಲ]

7. ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಪ್ರಯೋಜನಗಳು

ಸೂಪರ್ ಸೀನಿಯರ್‌ ಸಿಟಿಜನ್‌ಗಳು (80 ವರ್ಷ ಮೇಲ್ಪಟ್ಟ ವ್ಯಕ್ತಿಗಳು) ಸಹಜ್ (ಐಟಿಆರ್ 1) ಅಥವಾ ಸುಗಮ್ (ಐಟಿಆರ್ 4) ಮೂಲಕ ತಮ್ಮ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಫೈಲ್ ಮಾಡಬಹುದು. ಅವರು ಅದನ್ನು ಒಂದೋ ಮ್ಯಾನ್ಯುವಲೀ ಅಥವಾ ಎಲೆಕ್ಟ್ರಾನಿಕಲೀ ಆಯ್ಕೆ ಮಾಡಬಹುದು. 

8. ರಿವರ್ಸ್ ಮಾರ್ಟ್‌ಗೇಜ್ ಸ್ಕೀಮ್ ಅಡಿಯಲ್ಲಿ ಯಾವುದೇ ಟ್ಯಾಕ್ಸ್ ಇಲ್ಲ

ಮಾಸಿಕ ಗಳಿಕೆಯನ್ನು ಮಾಡಲು ಸೀನಿಯರ್‌ ಸಿಟಿಜನ್‌ಗಳು ತಮ್ಮ ಯಾವುದೇ ವಸತಿಗಳ ಮೇಲೆ ರಿವರ್ಸ್ ಮಾರ್ಟ್‌ಗೇಜ್ ಮಾಡಬಹುದು. ಪ್ರಾಪರ್ಟಿಯ ಮಾಲೀಕತ್ವವು ಹಿರಿಯ ನಾಗರಿಕರೊಂದಿಗೆ ಉಳಿದಿದೆ ಮತ್ತು ಅವರಿಗೆ ಮಾಸಿಕ ಪೇಮೆಂಟ್‌ಗಳನ್ನು ನೀಡಲಾಗುತ್ತದೆ. ಮಾಲೀಕರಿಗೆ ಕಂತುಗಳಲ್ಲಿ ಪಾವತಿಸಿದ ಅಮೌಂಟ್‌ಗೆ ಇನ್‌ಕಮ್‌ ಟ್ಯಾಕ್ಸ್‌ನಿಂದ ವಿನಾಯಿತಿ ನೀಡಲಾಗುತ್ತದೆ.

9. ಪೆನ್ಷನ್ ಇನ್‌ಕಮ್‌ನ ಸ್ಟಾಂಡರ್ಡ್ ಡಿಡಕ್ಷನ್‌ಗಳು

ರೂ.15,000ವರೆಗಿನ ಡಿಡಕ್ಷನ್ ಪ್ರಯೋಜನಗಳನ್ನು ಪಡೆಯಬಹುದಾದ ಕುಟುಂಬದ ಪೆನ್ಷನರ್‌ಗಳು ಸೇರಿದಂತೆ ಸೀನಿಯರ್‌ ಸಿಟಿಜನ್‌ಗಳಿಗೆ ಅವರ ಪೆನ್ಷನ್‌ ಇನ್‌ಕಮ್‌ಗಾಗಿ ₹50,000 ಸ್ಟಾಂಡರ್ಡ್ ಡಿಡಕ್ಷನ್ ಅನ್ನು ಅನುಮತಿಸಲಾಗಿದೆ. 

ಅಲ್ಲದೆ, ವ್ಯಕ್ತಿಗಳು ಹಣಕಾಸು ವರ್ಷ 2022-23 ಮತ್ತು ಹಣಕಾಸು ವರ್ಷ 2022-23ಗೆ ಸೀನಿಯರ್ ಮತ್ತು ಸೂಪರ್ ಸೀನಿಯರ್‌ ಸಿಟಿಜನ್‌ಗಳಿಗೆ ಇನ್‌ಕಮ್‌ ಟ್ಯಾಕ್ಸ್‌ ಸ್ಲ್ಯಾಬ್‌ಗಳನ್ನು ಚೆಕ್ ಮಾಡಬಹುದು.

[ಮೂಲ]

ಸೀನಿಯರ್‌ ಸಿಟಿಜನ್‌ಗಳಿಗೆ ಟ್ಯಾಕ್ಸ್ ಪ್ರಯೋಜನಗಳ ಬಗ್ಗೆ ಪದೇಪದೇ ಕೇಳಲಾದ ಪ್ರಶ್ನೆಗಳು

ಸೀನಿಯರ್‌ ಸಿಟಿಜನ್‌ಗಳಿಗೆ ಸ್ಟಾಂಡರ್ಡ್ ಡಿಡಕ್ಷನ್ ಎಂದರೇನು?

ಇನ್‌ಕಮ್‌ ಟ್ಯಾಕ್ಸ್‌ ಕಾಯಿದೆಯಲ್ಲಿನ ಇತ್ತೀಚಿನ ಬದಲಾವಣೆಗಳ ಪ್ರಕಾರ, ಸೀನಿಯರ್‌ ಸಿಟಿಜನ್‌ಗಳಿಗೆ ಹಣಕಾಸು ವರ್ಷ 2023-24ಕ್ಕೆ ₹50,000 ಸ್ಟಾಂಡರ್ಡ್ ಡಿಡಕ್ಷನ್ ಆಗಿದೆ.

ಇನ್‌ಕಮ್‌ ಟ್ಯಾಕ್ಸ್‌ ಪಾವತಿಸಲು ಸೀನಿಯರ್‌ ಸಿಟಿಜನ್‌ಗಳಿಗೆ ಗರಿಷ್ಠ ವಯಸ್ಸು ಎಷ್ಟು?

ಇದು ವಯಸ್ಸಿನ ಮೇಲೆ ಅವಲಂಬಿತವಾಗಿರುವುದಿಲ್ಲ ಆದರೆ ಆಯಾ ಸೀನಿಯರ್‌ ಸಿಟಿಜನ್‌ಗಳ ಬೇಸಿಕ್ ಇನ್‌ಕಮ್‌ ಮೇಲೆ ಅವಲಂಬಿತವಾಗಿರುತ್ತದೆ (ಇದು ಬಾಡಿಗೆ ಅಲೋಯನ್ಸ್‌ಗಳು, ಫಿಕ್ಸ್‌ಡ್‌ ಮತ್ತು ಇತರ ಇನ್‌ಕಮ್‌ ಮೂಲಗಳನ್ನು ಒಳಗೊಂಡಿರುತ್ತದೆ). ಆದಾಗ್ಯೂ, ಹಳೆಯ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ, ವಿನಾಯಿತಿ ಲಿಮಿಟ್ ಸೀನಿಯರ್ ಮತ್ತು ಸೂಪರ್ ಸೀನಿಯರ್‌ ಸಿಟಿಜನ್‌ಗಳಿಗೆ ಕ್ರಮವಾಗಿ ₹3 ಲಕ್ಷ ಮತ್ತು ₹5 ಲಕ್ಷಗಳು.

ಸೀನಿಯರ್‌ ಸಿಟಿಜನ್‌ಗಳಿಗೆ ಹೆಲ್ತ್‌ ಇನ್ಶೂರೆನ್ಸ್ ಟ್ಯಾಕ್ಸ್ ಪ್ರಯೋಜನ ಲಿಮಿಟ್ ಏನು?

ಇನ್‌ಕಮ್‌ ಟ್ಯಾಕ್ಸ್‌ ಕಾಯಿದೆಯ ಸೆಕ್ಷನ್ 80D ಪ್ರಕಾರ, ಸೀನಿಯರ್‌ ಸಿಟಿಜನ್‌ಗಳು ವ್ಯಾಲಿಡ್ ಆದ ಹೆಲ್ತ್‌ ಇನ್ಶೂರೆನ್ಸ್ ಪ್ಲಾನ್ ಅನ್ನು ಆರಿಸಿಕೊಂಡಿದ್ದರೆ ಮತ್ತು ಅದಕ್ಕೆ ಅಗತ್ಯವಿರುವ ವಾರ್ಷಿಕ ಪ್ರೀಮಿಯಂ ಅನ್ನು ಪಾವತಿಸುತ್ತಿದ್ದರೆ ₹50,000ವರೆಗಿನ (ಇದು ಪ್ರಿವೆಂಟಿವ್ ಹೆಲ್ತ್ ಚೆಕಪ್‌ಗಳನ್ನು ಒಳಗೊಂಡಿರುತ್ತದೆ) ಟ್ಯಾಕ್ಸ್ ಪ್ರಯೋಜನವನ್ನು ಪಡೆಯಬಹುದು.

ಸೀನಿಯರ್‌ ಸಿಟಿಜನ್‌ಗಳಿಗೆ 80TTA ಮತ್ತು 80TTB ಎರಡೂ ಅಪ್ಲಿಕೇಬಲ್ ಆಗುತ್ತದೆಯೇ?

ಸೆಕ್ಷನ್ 80TTA ಮತ್ತು ಸೆಕ್ಷನ್ 80TTB ಅಡಿಯಲ್ಲಿ ಕ್ಲೈಮ್ ಮಾಡಲಾದ ಡಿಡಕ್ಷನ್‌ಗಳ ಒಂದೇ ಆಗಿರುತ್ತವೆ. ಆದಾಗ್ಯೂ, 80TTA 60 ವರ್ಷಕ್ಕಿಂತ ಕೆಳಗಿನ ಟ್ಯಾಕ್ಸ್‌ಪೇಯರ್‌ಗಳಿಗೆ ಮತ್ತು ಎಚ್‌ಯುಎಫ್ಗೆ ಮಾತ್ರ ರೂ.10,000ವರೆಗಿನ ಇಂಟರೆಸ್ಟ್ ಡಿಡಕ್ಷನ್ ನೀಡುತ್ತದೆ, ಆದರೆ 80TTB 60 ವರ್ಷಕ್ಕಿಂತ ಮೇಲ್ಪಟ್ಟ ವೈಯಕ್ತಿಕ ಟ್ಯಾಕ್ಸ್‌ಪೇಯರ್‌ಗಳಿಗೆ ಅನ್ವಯಿಸುತ್ತದೆ ಮತ್ತು ರೂ.50,000ವರೆಗಿನ ಪ್ರಯೋಜನಗಳನ್ನು ಒದಗಿಸುತ್ತದೆ.