ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಎನ್‌ಆರ್‌ಐ(NRI)ಗಳಿಗೆ ಇನ್‌ಕಮ್‌ ಟ್ಯಾಕ್ಸ್‌ ನಿಯಮಗಳು ಮತ್ತು ಟ್ಯಾಕ್ಸ್‌ ರಿಟರ್ನ್ ಫೈಲ್ ಮಾಡುವ ಪ್ರೊಸೆಸ್

ಅನಿವಾಸಿ ಭಾರತೀಯರು, ಅಂದರೆ ಎನ್‌ಆರ್‌ಐಗಳು ಭಾರತದಲ್ಲಿ ಇನ್‌ಕಮ್‌ ಟ್ಯಾಕ್ಸ್‌ ಅನ್ನು ಪಾವತಿಸಬೇಕೆಂಬುದು ನಿಮಗೆ ತಿಳಿದಿದೆಯೇ?

ನಿವಾಸಿ ಭಾರತೀಯರು ಮಾತ್ರವಲ್ಲದೆ ಎನ್‌ಆರ್‌ಐಗಳು ಕೂಡ ಟ್ಯಾಕ್ಸೇಷನ್ ವ್ಯವಸ್ಥೆಯ ಅಡಿಯಲ್ಲಿ ಬರುತ್ತಾರೆ. ಈ ತುಣುಕಿನಲ್ಲಿ, ನಾವು ಎನ್ಆರ್‌ಐಗೆ ಇನ್‌ಕಮ್‌ ಟ್ಯಾಕ್ಸ್‌, ಲಭ್ಯವಿರುವ ಡಿಡಕ್ಷನ್‌ಗಳು ಮತ್ತು ವಿನಾಯಿತಿಗಳನ್ನು ಚರ್ಚಿಸಿದ್ದೇವೆ. ಓದುವುದನ್ನು ಮುಂದುವರಿಸಿ!

[ಮೂಲ]

ಎನ್‌ಆರ್‌ಐ(NRI)ಗಳಿಗೆ ಇನ್‌ಕಮ್‌ ಟ್ಯಾಕ್ಸ್‌ ಎಂದರೇನು?

ಪರಿಚಯಾತ್ಮಕ ಪ್ಯಾರಾಗ್ರಾಫ್‌ನಲ್ಲಿ ಹೇಳಿದಂತೆ, ಟ್ಯಾಕ್ಸೇಷನ್ ವ್ಯವಸ್ಥೆಯು ನಿವಾಸಿ ವ್ಯಕ್ತಿಗಳು ಮತ್ತು ಅನಿವಾಸಿ ಭಾರತೀಯರು, ಅಂದರೆ ಭಾರತದಲ್ಲಿನ ಎನ್‌ಆರ್‌ಐಗಳು ಇಬ್ಬರಿಗೂ ಅಪ್ಲೈ ಆಗುತ್ತದೆ.

ಇಲ್ಲಿ, ನಿವಾಸಿ ವ್ಯಕ್ತಿಗಳು ಜಾಗತಿಕ ಇನ್‌ಕಮ್‌ ಮೇಲೆ ಟ್ಯಾಕ್ಸ್‌ಗಳನ್ನು ಪಾವತಿಸಬೇಕಾಗುತ್ತದೆ, ಅಂದರೆ ಅವರು ಭಾರತದಲ್ಲಿ ಅಥವಾ ದೇಶದ ಹೊರಗೆ ಎಲ್ಲಿಯೇ ಗಳಿಸಿದ್ದರೂ ಅದು ಟ್ಯಾಕ್ಸೇಬಲ್ ಆಗಿರುತ್ತದೆ.

ಮತ್ತೊಂದೆಡೆ ಅನಿವಾಸಿಗಳಿಗೆ, ಭಾರತದಲ್ಲಿ ಗಳಿಸಿದ ಅಥವಾ ಸಂಚಿತ ಇನ್‌ಕಮ್‌ ಅನ್ನು ಭಾರತದಲ್ಲಿ ಟ್ಯಾಕ್ಸೇಬಲ್ ಎಂದು ಪರಿಗಣಿಸಲಾಗುತ್ತದೆ. ನಿಖರವಾಗಿ ಹೇಳುವುದಾದರೆ, ಎನ್‌ಆರ್‌ಐಗಳಿಗೆ, ಇತರ ದೇಶಗಳಿಂದ ಬರುವ ಇನ್‌ಕಮ್‌ ಭಾರತದಲ್ಲಿ ಟ್ಯಾಕ್ಸೇಬಲ್ ಆಗಿರುವುದಿಲ್ಲ.

ಮೇಲಿನ ಚರ್ಚೆಯಿಂದ, ಓದುಗರು ಎನ್‌ಆರ್‌ಐಗೆ ಅಪ್ಲಿಕೇಬಲ್‌ ಆಗುವ ಇನ್‌ಕಮ್‌ ಟ್ಯಾಕ್ಸ್‌ನ ವಿಚಾರದ ಬಗ್ಗೆ ಸಂಕ್ಷಿಪ್ತ ಐಡಿಯಾ ಪಡೆದಿರಬಹುದು. ಈಗ, ಭಾರತದಲ್ಲಿನ ಎನ್‌ಆರ್‌ಐ ಟ್ಯಾಕ್ಸೇಷನ್ ವ್ಯವಸ್ಥೆಯ ವಿವಿಧ ಅಂಶಗಳ ಆಳಕ್ಕೆ ಧುಮುಕೋಣ.

[ಮೂಲ]

ಭಾರತದಲ್ಲಿ ಅನಿವಾಸಿ ಭಾರತೀಯರಿಗೆ ಟ್ಯಾಕ್ಸೇಷನ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ?

ಫಾರಿನ್ ಎಕ್ಸ್‌ಚೇಂಜ್‌ ಮ್ಯಾನೇಜ್‌ಮೆಂಟ್‌ ಆ್ಯಕ್ಟ್‌ (ಎಫ್‌ಇಎಮ್ಎ) ಪ್ರಕಾರ, ಒಬ್ಬ ನಾಗರಿಕ ನಿರ್ದಿಷ್ಟ ಸಂಖ್ಯೆಯ ದಿನಗಳನ್ನು ವಿದೇಶದಲ್ಲಿ ಕಳೆದಿದ್ದರೆ ಮತ್ತು ತರುವಾಯ ಭಾರತದಲ್ಲಿ ಗೈರುಹಾಜರಾಗಿದ್ದರೆ ಅವರನ್ನು ಎನ್‌ಆರ್‌ಐ ಎಂದು ಪರಿಗಣಿಸಲಾಗುತ್ತದೆ.

ಭಾರತದಲ್ಲಿ, ಪ್ರಾಥಮಿಕವಾಗಿ ಎರಡು ಆ್ಯಕ್ಟ್‌ಗಳು ಎನ್‌ಐರ್‌ಐಗಳನ್ನು ನಿರ್ವಹಿಸುತ್ತವೆ. ಅವುಗಳೆಂದರೆ,

  • ಫಾರಿನ್ ಎಕ್ಸ್‌ಚೇಂಜ್‌ ಮ್ಯಾನೇಜ್‌ಮೆಂಟ್‌ ಆ್ಯಕ್ಟ್‌, 1999 (ಎಫ್‌ಇಎಮ್ಎ)
  • ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್, 1961

ಭಾರತದಲ್ಲಿನ ಎನ್‌ಆರ್‌ಐ ಟ್ಯಾಕ್ಸೇಷನ್‌ ವ್ಯವಸ್ಥೆಗೆ ಹಿಂತಿರುಗುವುದಾದರೆ, ಭಾರತದ ಹೊರಗೆ/ಜಾಗತಿಕವಾಗಿ ಗಳಿಸಿದ ಇನ್‌ಕಮ್‌ ಭಾರತದಲ್ಲಿ ಟ್ಯಾಕ್ಸೇಬಲ್‌ ಆಗಿರದಿದ್ದರೂ, ಕೆಲವು ಪ್ರಕರಣಗಳಲ್ಲಿ ಭಾರತದಲ್ಲಿನ ಇನ್‌ಕಮ್‌ ಕೂಡ ಟ್ಯಾಕ್ಸೇಬಲ್ ಆಗಿರುತ್ತದೆ. ಇವುಗಳಲ್ಲಿ ಮೂಲ ಟರ್ಮ್ ಡೆಪಾಸಿಟ್ ಮೂಲಕ ಮಾಡುವ ಗಳಿಕೆ, ಮೂಲಭೂತ ಲಿಮಿಟ್ ಅನ್ನು ಮೀರಿದ ಪ್ರಾಪರ್ಟಿ ಬಾಡಿಗೆ (ಇನ್‌ಕಮ್‌ ಟ್ಯಾಕ್ಸ್‌, 1961ರಲ್ಲಿ ತಿಳಿಸಿರುವಂತೆ), ಇನ್‌ವೆಸ್ಟ್‌ಮೆಂಟ್‌ ಅಸಮಾನತೆಗಳಿಂದ ಮ್ಯೂಚುವಲ್ ಫಂಡ್, ಬಂಡವಾಳ ಲಾಭ(ಕ್ಯಾಪಿಟಲ್ ಗೇನ್ಸ್) ಗಳು ಒಳಗೊಂಡಿವೆ. ಈ ಎಲ್ಲಾ ಸಂದರ್ಭಗಳಲ್ಲಿ, ಎನ್‌ಆರ್‌ಐಗೆ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಫೈಲ್ ಮಾಡುವುದು ಕಡ್ಡಾಯವಾಗಿದೆ.

ಈ ಟ್ಯಾಕ್ಸ್ ಹೇರಿಕೆಯ ಪ್ರಕಾರ, ಟರ್ಮ್ ಡೆಪಾಸಿಟ್‌ಗಳು, ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳಿಂದ ದೊರಕುವ ಬಂಡವಾಳದ ಲಾಭದ ಮೇಲೆ ಉತ್ಪತ್ತಿಯಾಗುವ ಇಂಟರೆಸ್ಟ್ ಮೇಲೆ ಟಿಡಿಎಸ್‌ ಅತ್ಯಧಿಕ ದರದಲ್ಲಿ ಅಪ್ಲಿಕೇಬಲ್ ಆಗುತ್ತದೆ. ಸಾಮಾನ್ಯವಾಗಿ, ಈ ಘಟನೆಗಳು ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವ ಅಗತ್ಯವನ್ನು ನಿವಾರಿಸುತ್ತವೆ.

ಇತರ ಸಂದರ್ಭಗಳಲ್ಲಿ, ಒಟ್ಟಾರೆ ಟಿಡಿಎಸ್‌ ಅನಿವಾಸಿ ಭಾರತೀಯರ ಮೂಲ ಟ್ಯಾಕ್ಸ್‌ ಲಯಬಿಲಿಟಿಯನ್ನು ಸೇರಿಸದೇ ಇರುವ ಸಂಭವ ಜರುಗಬಹುದು. ಇಲ್ಲಿ, ಎನ್‌ಆರ್‌ಐಗಳಿಗೆ ಟ್ಯಾಕ್ಸ್ ರಿಫಂಡ್‌ಗಳಿಗೆ ಕ್ಲೈಮ್ ಮಾಡಲು ಟ್ಯಾಕ್ಸ್ ರಿಟರ್ನ್ ಸಲ್ಲಿಸುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ.

ಈಗ ಎನ್ಆರ್‌ಐ ಮತ್ತು ಟ್ಯಾಕ್ಸೇಷನ್ ವ್ಯವಸ್ಥೆಯ ಮೂಲಭೂತ ವ್ಯಾಖ್ಯಾನವು ವ್ಯಕ್ತಿಗಳಿಗೆ ಸ್ಪಷ್ಟವಾಗಿದೆ, ನಾವು ವಿನಾಯಿತಿ, ಡಿಡಕ್ಷನ್‌ಗಳು, ಟ್ಯಾಕ್ಸೇಬಲ್‌ ಇನ್‌ಕಮ್‌ ಮತ್ತು ಪ್ರಯೋಜನಗಳ ಮೇಲೆ ಕೇಂದ್ರೀಕರಿಸೋಣ. ಆದ್ದರಿಂದ, ಶುರು ಮಾಡೋಣ!

ಭಾರತದಲ್ಲಿ ಅನಿವಾಸಿ ಭಾರತೀಯರಿಗೆ ಇನ್‌ಕಮ್‌ ಟ್ಯಾಕ್ಸ್‌ ವಿನಾಯಿತಿಗಳು ಯಾವುವು?

ಎನ್‌ಆರ್‌ಐಗಳಿಗೆ ಟ್ಯಾಕ್ಸ್ ವಿನಾಯಿತಿಗಳು ಈ ಕೆಳಗಿನ ರೀತಿಯ ಇನ್‌ಕಮ್‌ ವಿಧಗಳ ಮೇಲೆ ಲಭ್ಯವಿದೆ -

  • ಸರ್ಕಾರ ನೀಡಿದ ಸೇವಿಂಗ್‌ ಸರ್ಟಿಫಿಕೇಟ್‌ಗಳು ಮತ್ತು ಬಾಂಡ್‌ಗಳ ಮೇಲೆ ಗಳಿಸಿದ ಇಂಟರೆಸ್ಟ್‌.
  • ಕ್ಯಾಪಿಟಲ್ ಗೇನ್ಸ್ (ಸೆಕ್ಷನ್ 54, 54F, ಮತ್ತು 54EC ಪ್ರಕಾರ ವಿನಾಯಿತಿ).
  • ಪಟ್ಟಿ ಮಾಡಲಾದ ಇಕ್ವಿಟಿ ಷೇರುಗಳು ಮತ್ತು ಇಕ್ವಿಟಿ ಮ್ಯೂಚುವಲ್ ಫಂಡ್‌ಗಳಿಂದ ನಿರ್ದಿಷ್ಟಪಡಿಸಿದ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್.
  • ಎನ್‌ಆರ್‌ಇ ಅಥವಾ ಎಫ್‌ಸಿಎನ್‌ಆರ್‌ ಖಾತೆಗಳಿಂದ ಉತ್ಪತ್ತಿಯಾಗುವ ಇನ್‌ಕಮ್‌.

[ಮೂಲ 1]

[ಮೂಲ 2]

ಭಾರತದಲ್ಲಿ ಎನ್‌ಆರ್‌ಐ(NRI)ಗಳಿಗೆ ಅಪ್ಲಿಕೇಬಲ್ ಆಗುವ ಇನ್‌ಕಮ್‌ ಟ್ಯಾಕ್ಸ್‌ ವಿನಾಯಿತಿಗಳು ಯಾವುವು?

ಎನ್‌ಆರ್‌ಐಗೆ ಇನ್‌ಕಮ್‌ ಟ್ಯಾಕ್ಸ್‌ ಡಿಡಕ್ಷನ್ ಅನ್ನು ಹಲವಾರು ಐಟಿ ಆ್ಯಕ್ಟ್‌ಗಳ ಅಡಿಯಲ್ಲಿ ಉಲ್ಲೇಖಿಸಲಾಗಿದೆ. ಅವುಗಳು ಈ ಕೆಳಗಿನಂತಿವೆ:

1. ಸೆಕ್ಷನ್ 80C

ಈ ಸೆಕ್ಷನ್ ಪ್ರಕಾರ, ಎನ್‌ಆರ್‌ಐಗಳು ಈ ಕೆಳಗಿನ ಸಂದರ್ಭಗಳಲ್ಲಿ ಇನ್‌ಕಮ್‌ ಟ್ಯಾಕ್ಸ್‌ ಡಿಡಕ್ಷನ್ ಅನ್ನು ಪಡೆಯಬಹುದು:

  • ಯುಎಲ್‌ಐಪಿಗಳು
  • ಎಲ್‌ಇಎಸ್‌ಎಸ್‌
  • ಹೋಮ್‌ ಲೋನ್‌ ಮೇಲಿನ ಪ್ರಿನ್ಸಿಪಾಲ್‌ ರೀಪೇಮೆಂಟ್‌ಗಳು
  • ಲೈಫ್ ಇನ್ಶೂರೆನ್ಸ್ ಪಾಲಿಸಿಗೆ ಪ್ರೀಮಿಯಂ ಪೇಮೆಂಟ್
  • ಮಕ್ಕಳಿಗೆ ಬೋಧನಾ ಶುಲ್ಕ ಪೇಮೆಂಟ್

[ಮೂಲ]

2. ಸೆಕ್ಷನ್ 80E

ಎನ್‌ಆರ್‌ಐ ಎಜುಕೇಷನ್ ಲೋನ್ ಮೇಲೆ ಇಂಟರೆಸ್ಟ್ ಅನ್ನು ಪಾವತಿಸಿದರೆ ಸೆಕ್ಷನ್ 80E ಅಡಿಯಲ್ಲಿ ಡಿಡಕ್ಷನ್ ಲಭ್ಯವಿದೆ

[ಮೂಲ]

3. ಸೆಕ್ಷನ್ 80TTA

ಸೆಕ್ಷನ್ 80TTA ಅಡಿಯಲ್ಲಿ, ಎನ್‌ಆರ್‌ಐಗಳು ಉಳಿತಾಯ ಬ್ಯಾಂಕ್ ಖಾತೆಯಲ್ಲಿ ಗಳಿಸಿದ ಇಂಟರೆಸ್ಟ್‌ ಮೇಲೆ ₹10,000 ಡಿಡಕ್ಷನ್ ಅನ್ನು ಕ್ಲೈಮ್ ಮಾಡಬಹುದು.

[ಮೂಲ]

4. ಸೆಕ್ಷನ್ 80D

ಸೆಕ್ಷನ್ 80D ಅಡಿಯಲ್ಲಿ ಇನ್‌ಕಮ್‌ ಟ್ಯಾಕ್ಸ್‌ ಡಿಡಕ್ಷನ್ ಲಭ್ಯವಿದೆ. ಇಲ್ಲಿ, ಅನಿವಾಸಿ ಭಾರತೀಯರು ಲೈಫ್ ಇನ್ಶೂರೆನ್ಸ್ ಪಾಲಿಸಿಗೆ ಪಾವತಿಸಿದ ಪ್ರೀಮಿಯಂನಲ್ಲಿ ಡಿಡಕ್ಷನ್ ಅನ್ನು ಕ್ಲೈಮ್ ಮಾಡಬಹುದು.

[ಮೂಲ]

5. ಸೆಕ್ಷನ್ 80G

ಈ ಸೆಕ್ಷನ್ ಪ್ರಕಾರ, ಎನ್‌ಐರ್‌ಐಗಳು ಅಪ್ರೂವ್‌ಡ್‌ ಚಾರಿಟೇಬಲ್‌ ಅಥವಾ ಧಾರ್ಮಿಕ ಚಟುವಟಿಕೆಗಳಿಗೆ ಸಂಬಂಧಿಸಿದ ದೇಣಿಗೆಗಳ ಮೇಲಿನ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಬಹುದು.

[ಮೂಲ]

ಎನ್‌ಆರ್‌ಐ(NRI)ಗಳಿಗೆ ಟ್ಯಾಕ್ಸೇಬಲ್ ಇನ್‌ಕಮ್ ಎಷ್ಟು?

ಅನಿವಾಸಿ ಭಾರತೀಯರಿಗೆ ಟ್ಯಾಕ್ಸೇಬಲ್ ಇನ್‌ಕಮ್‌ಗಳನ್ನು ಈ ಕೆಳಗೆ ಚರ್ಚಿಸಲಾಗಿದೆ.

1. ಹೌಸ್ ಪ್ರಾಪರ್ಟಿಯಿಂದ ಬರುವ ಇನ್‌ಕಮ್‌

ಎನ್‌ಆರ್‌ಐಗಳಿಗೆ, ಭಾರತದಲ್ಲಿ ಇರುವ ಪ್ರಾಪರ್ಟಿಯಿಂದ ಬರುವ ಯಾವುದೇ ಇನ್‌ಕಮ್‌ ಐಟಿ ಆ್ಯಕ್ಟ್‌ಗಳ ಪ್ರಕಾರ ಟ್ಯಾಕ್ಸೇಬಲ್ ಆಗಿರುತ್ತದೆ. ಇಲ್ಲಿ, ಟ್ಯಾಕ್ಸ್ ಕ್ಯಾಲ್ಕುಲೇಷನ್ ಪ್ರೊಸೆಸ್ ಭಾರತೀಯ ನಿವಾಸಿಗಳಿಗಿರುವಂತೆಯೇ ನಿಯಮಗಳನ್ನು ಅನುಸರಿಸುತ್ತದೆ. ನಿಖರವಾಗಿ ಹೇಳುವುದಾದರೆ, ಅನಿವಾಸಿ ಭಾರತೀಯರು ಈ ಕೆಳಗಿನ ಅನುಕೂಲಗಳನ್ನು ಆನಂದಿಸಬಹುದು,

  • ಪ್ರಾಪರ್ಟಿ ಟ್ಯಾಕ್ಸ್ ಮೇಲೆ ಡಿಡಕ್ಷನ್
  • ಹೋಮ್ ಲೋನ್ ಸಂದರ್ಭದಲ್ಲಿ ಇಂಟರೆಸ್ಟ್ ಡಿಡಕ್ಷನ್
  • ಐಟಿ ಆ್ಯಕ್ಟ್‌ನ ಸೆಕ್ಷನ್ 80C ಅಡಿಯಲ್ಲಿ ಹೋಮ್‌ ಲೋನ್‌ನ ಅಸಲು ಅಮೌಂಟ್‌ ಮೇಲೆ ಡಿಡಕ್ಷನ್ ಲಭ್ಯವಿದೆ. ಇದರೊಂದಿಗೆ, ಪ್ರಾಪರ್ಟಿ ಖರೀದಿಯ ಮೇಲೆ ಸ್ಟ್ಯಾಂಪ್ ಡ್ಯೂಟಿ ಮತ್ತು ರಿಜಿಸ್ಟ್ರೇಷನ್ ಶುಲ್ಕಗಳ ಮೇಲೆ ಡಿಡಕ್ಷನ್ ಲಭ್ಯವಿದೆ.

[ಮೂಲ]

  • ಎನ್‌ಆರ್‌ಐಗಳು 30% ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಕ್ಲೈಮ್ ಮಾಡಬಹುದು.

[ಮೂಲ]

2. ಸ್ಯಾಲರಿಯಿಂದ ಬರುವ ಇನ್‌ಕಮ್‌

ಎನ್‌ಆರ್‌ಐಗಳ ಸ್ಯಾಲರಿ ಎರಡು ಷರತ್ತುಗಳ ಅಡಿಯಲ್ಲಿ ಟ್ಯಾಕ್ಸೇಬಲ್ ಆಗಿರುತ್ತವೆ. ಅವುಗಳೆಂದರೆ,

  • ಷರತ್ತು 1: ಇಲ್ಲಿ, ಎನ್‌ಆರ್‌ಐ ಭಾರತದಲ್ಲಿ ಸ್ಯಾಲರಿಯನ್ನು ನೇರವಾಗಿ ಭಾರತೀಯ ಬ್ಯಾಂಕ್ ಖಾತೆಯಲ್ಲಿ ಪಡೆದರೆ, ಅದು ಎನ್ಆರ್‌ಐಗೆ ಇನ್‌ಕಮ್‌ ಟ್ಯಾಕ್ಸ್‌ ನಿಯಮಗಳ ಪ್ರಕಾರ ಟ್ಯಾಕ್ಸೇಬಲ್ ಆಗಿರುತ್ತದೆ. ಆ ಎನ್ಆರ್‌ಐ ಪರವಾಗಿ ಬೇರೆ ಯಾರಾದರೂ ಇನ್‌ಕಮ್‌ ಅನ್ನು ಪಡೆದಾಗ ಮತ್ತೊಂದು ಪರಿಸ್ಥಿತಿಯಲ್ಲಿ ಈ ಷರತ್ತು ಅಪ್ಲೈ ಆಗುತ್ತದೆ. 
  • ಷರತ್ತು 2: ಈ ಷರತ್ತಿನ ಪ್ರಕಾರ, ಎನ್‌ಆರ್‌ಐ ಭಾರತದಲ್ಲಿ ಸಲ್ಲಿಸಿದ ಸೇವೆಗಳಿಗೆ ಸ್ಯಾಲರಿಯನ್ನು ಗಳಿಸಿದರೆ, ಅದನ್ನು ಭಾರತದಲ್ಲಿ ಟ್ಯಾಕ್ಸೇಬಲ್ ಇನ್‌ಕಮ್ ಎಂದು ಪರಿಗಣಿಸಲಾಗುತ್ತದೆ.

ಎರಡೂ ಸಂದರ್ಭಗಳಲ್ಲಿ ಎನ್ಆರ್‌ಐಗೆ ಅಪ್ಲಿಕೇಬಲ್ ಆಗುವ ಟ್ಯಾಕ್ಸ್ ಸ್ಲ್ಯಾಬ್ ಅನ್ನು ಅನುಸರಿಸಲಾಗುತ್ತದೆ.

3. ಇತರ ಮೂಲಗಳಿಂದ ಬರುವ ಇನ್‌ಕಮ್‌

ಭಾರತದಲ್ಲಿ ಮೂಲದ ಇನ್‌ಕಮ್‌ (ಫಿಕ್ಸ್‌ಡ್‌ ಡೆಪಾಸಿಟ್‌ ಮತ್ತು ಉಳಿತಾಯ ಖಾತೆಯ ಮೇಲಿನ ಇಂಟರೆಸ್ಟ್‌) ಟ್ಯಾಕ್ಸೇಬಲ್‌ ಆಗಿರುತ್ತದೆ.

4. ಕ್ಯಾಪಿಟಲ್ ಗೇನ್ಸ್ ನಿಂದ ಬರುವ ಇನ್‌ಕಮ್‌

ಭಾರತದಲ್ಲಿ ನೆಲೆಗೊಂಡಿರುವ ಬಂಡವಾಳ ಅಸೆಟ್‌ಗಳನ್ನು ಟ್ರಾನ್ಸ್‌ಫರ್ ಮಾಡುವ ಮೂಲಕ ಯಾವುದೇ ಇನ್‌ಕಮ್‌ ಟ್ಯಾಕ್ಸೇಬಲ್ ಆಗಿರುತ್ತದೆ.

ಎನ್‌ಆರ್‌ಐ(NRI)ಗೆ ಇನ್‌ಕಮ್‌ ಟ್ಯಾಕ್ಸ್‌ ಫೈಲ್‌ ಮಾಡುವುದರಿಂದ ದೊರಕುವ ಪ್ರಯೋಜನಗಳು ಯಾವುವು?

ಇನ್‌ಕಮ್‌ ಟ್ಯಾಕ್ಸ್‌ ಅನ್ನು ಫೈಲ್‌ ಮಾಡುವುದು ಎನ್‌ಆರ್‌ಐಗೆ ಹಲವಾರು ಪ್ರಯೋಜನಗಳನ್ನು ಖಾತ್ರಿಗೊಳಿಸುತ್ತದೆ. ಅವುಗಳೆಂದರೆ,

  • ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ ದೇಶದೊಳಗಿನ ಬ್ಯಾಂಕ್ ಡೆಪಾಸಿಟ್‌ಗಳ ಮೇಲೆ ಎನ್‌ಆರ್‌ಐಗಳಿಗೆ ವೆಲ್ತ್ ಟ್ಯಾಕ್ಸ್‌ನಿಂದ ವಿನಾಯಿತಿ ನೀಡುತ್ತದೆ.
  • ಎನ್‌ಆರ್‌ಇ ಮತ್ತು ಎಫ್‌ಸಿಎನ್‌ಆರ್‌ ಖಾತೆಗಳ ಮೂಲಕ ನೀಡಿದ ಉಡುಗೊರೆಗಳು ಭಾರತದಲ್ಲಿ ಗಿಫ್ಟ್ ಟ್ಯಾಕ್ಸ್‌ನಿಂದ ಮುಕ್ತವಾಗಿವೆ.

ಎನ್‌ಆರ್‌ಐಗೆ ಇನ್‌ಕಮ್‌ ಟ್ಯಾಕ್ಸ್‌ ಡಿಡಕ್ಷನ್‌ಗಳು ಮತ್ತು ವಿನಾಯಿತಿಗಳ ಬಗ್ಗೆ ತಿಳಿದ ನಂತರ, ಸಂಬಂಧಪಟ್ಟ ವ್ಯಕ್ತಿಗಳು ಮುಂದಿನ ವಿಭಾಗದಲ್ಲಿ ಚರ್ಚಿಸಲಾಗಿರುವ ಸ್ಟೆಪ್‌-ಬೈ-ಸ್ಟೆಪ್ ಗೈಡ್ ಅನ್ನು ಅನುಸರಿಸಬಹುದು.

ಭಾರತದಲ್ಲಿ ಎನ್‌ಆರ್‌ಐ(NRI)ಗೆ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಅನ್ನು ಫೈಲ್‌ ಮಾಡುವುದು ಹೇಗೆ?

ಮೊದಲನೆಯದಾಗಿ ಎನ್‌ಆರ್‌ಐಗಳು ಭಾರತದಲ್ಲಿ ತಂಗಿರುವ ದಿನಗಳ ಸಂಖ್ಯೆಯನ್ನು ಆಧರಿಸಿ ಪ್ರತಿ ವರ್ಷ ನಿವಾಸದ ಹಕ್ಕನ್ನು ತೀರ್ಮಾನಿಸಬೇಕು. ನಂತರ ಫಾರ್ಮ್ 26AS ನಲ್ಲಿ ಕಾಣಿಸಿದಂತೆ ಟ್ಯಾಕ್ಸ್ ರಿಟರ್ನ್‌ನಲ್ಲಿ ಪಾವತಿಸಿದ ಟಿಡಿಎಸ್‌ ಅನ್ನು ಹೋಲಿಕೆ ಮಾಡಿ ಮತ್ತು ಟ್ಯಾಕ್ಸೇಬಲ್ ಇನ್‌ಕಮ್‌ ಮತ್ತು ಟ್ಯಾಕ್ಸ್‌ ಲಯಬಿಲಿಟಿಯನ್ನು ಮೌಲ್ಯಮಾಪನ ಮಾಡಿ.

[ಮೂಲ]

ಎನ್‌ಆರ್‌ಐಗಳ ಗಳಿಕೆಗೆ ವಿದೇಶದಲ್ಲಿ ಮತ್ತು ಭಾರತದಲ್ಲಿ ಟ್ಯಾಕ್ಸ್ ವಿಧಿಸಿದರೆ, ಅವರು ಡಿಟಿಎಎ (ಡಬಲ್ ಟ್ಯಾಕ್ಸೇಷನ್ ಟ್ರೀಟಿ) ಅಡಿಯಲ್ಲಿ ವಿನಾಯಿತಿಗಳನ್ನು ಪಡೆಯಬಹುದು. ಎನ್‌ಆರ್‌ಐಗೆ ಸರಿಯಾದ ಐಟಿಆರ್‌ ಫಾರ್ಮ್‌ಗಳನ್ನು ಫೈಲ್‌ ಮಾಡುವ ಮೂಲಕ ಪ್ರೊಸೆಸ್ ಅನ್ನು ಮುಂದುವರಿಸಿ.

ನಂತರ ಐಟಿಆರ್ ಫೈಲ್‌ ಮಾಡುವ ಎನ್ಆರ್‌ಐಗಳು ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಬೇಕು. ಭಾರತದಲ್ಲಿ ಖಾತೆಯನ್ನು ಹೊಂದಿರುವವರು ಕಡಲಾಚೆಯ ಬ್ಯಾಂಕ್ ಖಾತೆಗಳ ವಿವರಗಳನ್ನು ನಮೂದಿಸಬೇಕಾಗಿಲ್ಲ. ಭಾರತದಲ್ಲಿ ಖಾತೆಯನ್ನು ಹೊಂದಿರದವರು, ಅವರು ತಮ್ಮ ಕಡಲಾಚೆಯ ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸಬಹುದು. ಐಟಿಆರ್‌ನಲ್ಲಿ ಅಸೆಟ್‌ಗಳು ಮತ್ತು ಲಯಬಿಲಿಟಿಗಳು ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವುದು ಅಷ್ಟೇ ಮುಖ್ಯ.

ಐಟಿಆರ್‌ ಅನ್ನು ಒಮ್ಮೆ ಅಪ್‌ಲೋಡ್ ಮಾಡಿದ ನಂತರ, ಅದರ ಬಗ್ಗೆ ವೆರಿಫಿಕೇಷನ್ ಅನ್ನು 30 ದಿನಗಳ ಒಳಗೆ ಮಾಡಬೇಕು.

[ಮೂಲ]

ಆಫ್‌ಲೈನ್ ಪ್ರೊಸೆಸ್

  • ಹಂತ-1 - ಐಟಿಆರ್‌ ಫಾರ್ಮ್ ಅನ್ನು ಸಂಗ್ರಹಿಸಿ ಮತ್ತು ಅಗತ್ಯವಿರುವ ಮಾಹಿತಿಯೊಂದಿಗೆ ಅದನ್ನು ಭರ್ತಿ ಮಾಡಿ.
  • ಹಂತ-2 - ಇನ್‌ಕಮ್‌ ಟ್ಯಾಕ್ಸ್‌ ಅಧಿಕಾರಿಗೆ ಸ್ವೀಕೃತಿ ಫಾರ್ಮ್‌ನೊಂದಿಗೆ ಫಾರ್ಮ್ ಅನ್ನು ಸಲ್ಲಿಸಿ. ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಮತ್ತು ಫೈಲಿಂಗ್ ಅನ್ನು ಭಾರತದ ಹೊರಗಿನ ಅಧಿಕೃತ ವ್ಯಕ್ತಿಯಿಂದ ವೆರಿಫೈ ಮಾಡಿಸಬೇಕು ಮತ್ತು ದೃಢೀಕರಿಸಬೇಕು.

ಮೇಲೆ ತಿಳಿಸಿದ ಸೆಕ್ಷನ್‌ಗಳು ಎನ್‌ಆರ್‌ಐಗೆ ಇನ್‌ಕಮ್‌ ಟ್ಯಾಕ್ಸ್‌ನ ವಿವಿಧ ಅಂಶಗಳ ಬಗ್ಗೆ ಸಂಪೂರ್ಣವಾಗಿ ತಿಳಿಸುತ್ತವೆ. ವಿವರಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅದು ಟ್ಯಾಕ್ಸೇಬಲ್ ಇನ್‌ಕಮ್‌ ಆಗಿದ್ದರೆ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್‌ಗೆ ಅಪ್ಲೈ ಮಾಡಿ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಎನ್‌ಆರ್‌ಓ ಖಾತೆಯಲ್ಲಿ ಪಡೆದ ಇಂಟರೆಸ್ಟ್‌ ಮೇಲೆ ಎನ್‌ಆರ್‌ಐ ಟ್ಯಾಕ್ಸ್‌ ಅನ್ನು ಪಾವತಿಸಬೇಕೇ?

ಹೌದು, ಎನ್‌ಆರ್‌ಓ ಖಾತೆಯಲ್ಲಿ ಪಡೆದ ಇಂಟರೆಸ್ಟ್‌ ಮೇಲೆ ಎನ್‌ಆರ್‌ಐ ಟ್ಯಾಕ್ಸ್‌ ಅನ್ನು ಪಾವತಿಸಬೇಕಾಗುತ್ತದೆ.

ಎನ್‌ಆರ್‌ಐಗಳಿಗೆ ಇಕ್ವಿಟಿ-ಸಂಬಂಧಿತ ಕ್ಯಾಪಿಟಲ್ ಗೇನ್ಸ್ ಗೆ ಎಷ್ಟು ಟಿಡಿಎಸ್‌ ಅಪ್ಲಿಕೇಬಲ್‌ ಆಗುತ್ತದೆ?

ಇಕ್ವಿಟಿ-ಸಂಬಂಧಿತ ಬಂಡವಾಳ ಲಾಭ(ಕ್ಯಾಪಿಟಲ್ ಗೇನ್ಸ್)ಗಳ ಮೇಲೆ 10% ಟಿಡಿಎಸ್ ಅಪ್ಲಿಕೇಬಲ್‌ ಆಗುತ್ತದೆ.

[ಮೂಲ]

ಎನ್‌ಆರ್‌ಐಗಳು ಮಾಡಿದ ಇಕ್ವಿಟಿ-ಅಲ್ಲದ ಇನ್‌ವೆಸ್ಟ್‌ಮೆಂಟ್‌ಗೆ ಎಷ್ಟು ಟಿಡಿಎಸ್ ಅಪ್ಲಿಕೇಬಲ್‌ ಆಗುತ್ತದೆ?

30% ಟಿಡಿಎಸ್ ಇಕ್ವಿಟಿ-ಅಲ್ಲದ ಇನ್‌ವೆಸ್ಟ್‌ಮೆಂಟ್‌ಗಳಿಗೆ ಅಪ್ಲಿಕೇಬಲ್‌ ಆಗುತ್ತದೆ (ಉದಾಹರಣೆಗೆ ಸಾಲದ ಫಂಡ್‌ಗಳು).

ಎನ್‌ಆರ್‌ಐ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಫೈಲ್‌ ಮಾಡಲು ಕೊನೆಯ ದಿನಾಂಕ ಯಾವಾಗ?

ಎನ್‌ಆರ್‌ಐ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಫೈಲ್‌ ಮಾಡಲು ಕೊನೆಯ ದಿನಾಂಕ ಆರ್ಥಿಕ ವರ್ಷದ ಜುಲೈ 31 ಆಗಿದೆ.

[ಮೂಲ]

ಎನ್‌ಆರ್‌ಐಗಳು ಮುಂಗಡ ಟ್ಯಾಕ್ಸ್ ಪಾವತಿಸುವುದು ಅಗತ್ಯವೇ?

ಒಂದು ನಿರ್ದಿಷ್ಟ ಆರ್ಥಿಕ ವರ್ಷದಲ್ಲಿ ಅವರ ಟ್ಯಾಕ್ಸ್‌ ಬಾಧ್ಯತೆಗಳು ₹10,000 ಮೀರಿದರೆ ಎನ್‌ಆರ್‌ಐಗಳು ಮುಂಗಡ ಟ್ಯಾಕ್ಸ್ ಅನ್ನು ಭರಿಸಬೇಕಾಗುತ್ತದೆ. ಮುಂಗಡ ಟ್ಯಾಕ್ಸ್ ಅನ್ನು ಪಾವತಿಸದಿದ್ದಲ್ಲಿ, ವ್ಯಕ್ತಿಗಳು ಸೆಕ್ಷನ್ 234 ಬಿ ಮತ್ತು ಸೆಕ್ಷನ್ 234 ಸಿ ಪ್ರಕಾರ ಇಂಟರೆಸ್ಟ್‌ ಅನ್ನು ಭರಿಸಬೇಕಾಗುತ್ತದೆ.

[ಮೂಲ 1]

[ಮೂಲ 2]