ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಮಹಿಳೆಯರಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು

ಮಹಿಳೆಯರಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ ಬಗ್ಗೆ ಎಲ್ಲಾ

ಭಾರತದಲ್ಲಿ, ಇನ್ಕಮ್ ಟ್ಯಾಕ್ಸ್ ಅನ್ನು ಪ್ರಗತಿಪರಯ ಸ್ವರೂಪವೆಂದು ವರ್ಗೀಕರಿಸಬಹುದು. ಇದರರ್ಥ ಒಬ್ಬ ವ್ಯಕ್ತಿಯ ಲಿಂಗವನ್ನು ಲೆಕ್ಕಿಸದೆ ಪಾವತಿಸಬೇಕಾದ ಇನ್ಕಮ್ ಟ್ಯಾಕ್ಸ್ ಹೆಚ್ಚಳದ ದರವು ವ್ಯಕ್ತಿಯ ಆದಾಯದ ಹೆಚ್ಚಳಕ್ಕೆ ನೇರವಾಗಿ ಅನುಪಾತದಲ್ಲಿರುತ್ತದೆ.

ಕಷ್ಟ ಅನಿಸುತ್ತದೆಯೇ?

ಸರಳವಾಗಿ ಹೇಳುವುದಾದರೆ, ಅವರ ಆದಾಯದ ಹೆಚ್ಚಳದೊಂದಿಗೆ ವ್ಯಕ್ತಿಯ ಟ್ಯಾಕ್ಸ್ ಲಯಬಿಲಿಟಿ ಹೆಚ್ಚಾಗುತ್ತದೆ ಎಂದರ್ಥ. ಅವರ ಆದಾಯದ ಹೊರತಾಗಿ, ಇದು ಅವರ ವಯಸ್ಸಿನ ಮೇಲೆ ಸಹ ಅವಲಂಬಿತವಾಗಿರುತ್ತದೆ.

ಟ್ಯಾಕ್ಸೇಶನ್ ಉದ್ದೇಶಗಳಿಗಾಗಿ, ಟ್ಯಾಕ್ಸ್ ಪೇಯರ್ ಗಳನ್ನು ಮೂರು ವಿಶಾಲ ಗುಂಪುಗಳಾಗಿ ವರ್ಗೀಕರಿಸಲಾಗಿದೆ -

  • 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು.
  • 60 ರಿಂದ 80 ವರ್ಷ ವಯಸ್ಸಿನ ವ್ಯಕ್ತಿಗಳು (ಸೀನಿಯರ್ ಸಿಟಿಜನ್‌ಗಳು).
  • 80 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು (ಸೂಪರ್ ಸೀನಿಯರ್ ಸಿಟಿಜನ್‌ಗಳು).

ಈ ಹಿಂದೆ, ಭಾರತದಲ್ಲಿ ಪುರುಷ ಮತ್ತು ಮಹಿಳಾ ಟ್ಯಾಕ್ಸ್ ಪೇಯರ್ ಗಳಿಗೆ ಮೂಲ ಟ್ಯಾಕ್ಸ್ ವಿನಾಯಿತಿ ಲಿಮಿಟ್ ಅನ್ನು ಪ್ರತ್ಯೇಕಿಸಲಾಗಿತ್ತು. ಅವರು ಗಳಿಸಿದ ಆದಾಯದ ಮೇಲೆ ಟ್ಯಾಕ್ಸ್ ಪೇಮೆಂಟ್ ವಿಷಯ ಬಂದಾಗ ಮಹಿಳೆಯರು ಹೆಚ್ಚಿನ ಮೂಲಭೂತ ವಿನಾಯಿತಿ ಲಿಮಿಟ್ ಅನ್ನು ಅನುಭವಿಸುತ್ತಿದ್ದರು.

ಆದಾಗ್ಯೂ, 2012-13 ರಿಂದ, ಮೂಲ ವಿನಾಯಿತಿ ಲಿಮಿಟ್ ನಲ್ಲಿನ ಈ ವ್ಯತ್ಯಾಸವು ದೂರವಾಗಿದೆ ಮತ್ತು ಪುರುಷರು ಮತ್ತು ಮಹಿಳೆಯರಿಗೆ ಅವರ ಆದಾಯ ಮತ್ತು ವಯಸ್ಸಿಗೆ ಸಂಬಂಧಿಸಿದಂತೆ ಸಾಮಾನ್ಯ ಟ್ಯಾಕ್ಸ್ ಸ್ಲ್ಯಾಬ್‌ಗಳನ್ನು ಪರಿಚಯಿಸಲಾಗಿದೆ.

60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು, ಸೀನಿಯರ್ ಸಿಟಿಜನ್‌ಗಳು ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳ ವಿವರವಾದ ವಿವರಣೆಯನ್ನು ಈ ಕೆಳಗೆ ನೀಡಲಾಗಿದೆ.

ಮಹಿಳೆಯರಿಗಾಗಿ ಇರುವ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳ ವಿವರವಾದ ನೋಟ

ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು ಒಬ್ಬರ ಆದಾಯ ಮತ್ತು ವಯಸ್ಸಿನ ಆಧಾರದ ಮೇಲೆ ಅನ್ವಯವಾಗುವ ಟ್ಯಾಕ್ಸ್ ದರಗಳನ್ನು ಉಲ್ಲೇಖಿಸುತ್ತವೆ. ಈಗ, ವರ್ಗೀಕರಣ ಪ್ರಕ್ರಿಯೆಯು ಒಂದೇ ಆಗಿದ್ದರೂ, ಪ್ರತಿ ಕೇಂದ್ರ ಬಜೆಟ್ ಸಮಯದಲ್ಲಿ ಸ್ಲ್ಯಾಬ್‌ಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ಬದಲಾವಣೆಗಳನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿರದ ಬಜೆಟ್‌ಗಾಗಿ, ಟ್ಯಾಕ್ಸ್ ದರಗಳು ಹಿಂದಿನ ಹಣಕಾಸು ವರ್ಷದಂತೆಯೇ ಇರುತ್ತವೆ.

ಮಹಿಳೆಯರಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು (60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು)

ಹೊಸ ರೆಜಿಮ್ ಅಡಿಯಲ್ಲಿ ಮಹಿಳೆಯರಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ - ಹಣಕಾಸು ವರ್ಷ 2023-24

ಕೇಂದ್ರ ಬಜೆಟ್ 2023 ಹೊಸ ಟ್ಯಾಕ್ಸ್ ರೆಜಿಮ್ ಅನ್ನು ಡೀಫಾಲ್ಟ್ ರೆಜಿಮ್ ಆಗಿ ಪ್ರಸ್ತಾಪಿಸಿದೆ. ಹಣಕಾಸು ವರ್ಷ 2023-24 ರ ರಿವೈಸ್ಡ್ ಟ್ಯಾಕ್ಸ್ ಇನ್ಕಮ್ ಟ್ಯಾಕ್ಸ್ ದರಗಳು ಈ ಕೆಳಗಿನಂತಿವೆ:

ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು ಟ್ಯಾಕ್ಸೇಷನ್ ದರ
₹3,00,000 ವರೆಗೆ ನಿಲ್
₹3,00,001 ಮತ್ತು ₹6,00,000 ನಡುವೆ ₹3,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 5%
₹6,00,001 ಮತ್ತು ₹9,00,000 ನಡುವೆ ₹6,00,000 ಮೀರಿದರೆ ₹15,000 + ನಿಮ್ಮ ಒಟ್ಟು ಆದಾಯದ 10%
₹9,00,001 ಮತ್ತು ₹12,00,000 ನಡುವೆ ₹₹9,00,000 ಮೀರಿದರೆ ₹45,000 + ನಿಮ್ಮ ಒಟ್ಟು ಆದಾಯದ 15%
₹12,00,001 ಮತ್ತು ₹15,00,000 ನಡುವೆ ₹12,00,000 ಮೀರಿದರೆ ₹90,000 + ನಿಮ್ಮ ಒಟ್ಟು ಆದಾಯದ 20%
₹15,00,000ಕ್ಕಿಂತ ಹೆಚ್ಚು ₹15,00,000 ಮೀರಿದರೆ ₹1,50,000 + ನಿಮ್ಮ ಒಟ್ಟು ಆದಾಯದ 30%

[ಮೂಲ]

ಹೊಸ ರೆಜಿಮ್ ಅಡಿಯಲ್ಲಿ ಮಹಿಳೆಯರಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು - ಹಣಕಾಸು ವರ್ಷ 2022-23

ಹಿಂದಿನ ಹಣಕಾಸು ವರ್ಷ 2022-23 ಕ್ಕೆ ಈ ಕೆಳಗಿನ ಟ್ಯಾಕ್ಸ್ ದರಗಳು ಮಾರ್ಚ್ 31, 2023 ರವರೆಗೆ ಅನ್ವಯವಾಗುತ್ತವೆ. ಮಹಿಳಾ ಟ್ಯಾಕ್ಸ್ ಪೇಯರ್ ಗಳು ಹೊಸ ಟ್ಯಾಕ್ಸ್ ರೆಜಿಮ್ ಅನ್ನು ಆಯ್ಕೆ ಮಾಡಿಕೊಂಡಿದ್ದರೆ ಜುಲೈ 31, 2023 ರವರೆಗೆ ರಿಟರ್ನ್ಸ್ ಫೈಲ್ ಮಾಡಲು ಈ ದರಗಳನ್ನು ಪರಿಗಣಿಸಬೇಕು.

ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು ಟ್ಯಾಕ್ಸೇಷನ್ ದರ
₹2,50,000 ವರೆಗೆ ನಿಲ್
₹2,50,000 ಮತ್ತು ₹5,00,000 ನಡುವೆ ₹3,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 5%
₹5,00,000 ಮತ್ತು ₹7,00,000 ನಡುವೆ ₹5,00,000 ಮೀರಿದರೆ ₹12,500 + ನಿಮ್ಮ ಒಟ್ಟು ಆದಾಯದ 10%
₹7,50,000 ಮತ್ತು ₹10,00,000 ನಡುವೆ ₹7,50,000 ಮೀರಿದರೆ ₹37,500 + ನಿಮ್ಮ ಒಟ್ಟು ಆದಾಯದ 15%
₹10,00,000 ಮತ್ತು ₹12,50,000 ನಡುವೆ ₹10,00,000 ಮೀರಿದರೆ ₹75,000 + ನಿಮ್ಮ ಒಟ್ಟು ಆದಾಯದ 20%
₹12,50,000 ಮತ್ತು ₹15,00,000 ನಡುವೆ ₹12,50,000 ಮೀರಿದರೆ ₹1,25,000 + ನಿಮ್ಮ ಒಟ್ಟು ಆದಾಯದ 25%
₹15,00,000 ಕ್ಕಿಂತ ಹೆಚ್ಚು ₹15,00,000 ಮೀರಿದರೆ ₹1,87,500 + ನಿಮ್ಮ ಒಟ್ಟು ಆದಾಯದ 30%

[ಮೂಲ]

 ಹಳೆಯ ರೆಜಿಮ್ ಅಡಿಯಲ್ಲಿ ಮಹಿಳೆಯರಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ - ಹಣಕಾಸು ವರ್ಷ 2022-23 ಮತ್ತು ಹಣಕಾಸು ವರ್ಷ 2023-24

ಹಳೆಯ ಟ್ಯಾಕ್ಸ್ ರೆಜಿಮ್ ಗಾಗಿ, ಹಣಕಾಸು ವರ್ಷ 2022-23 ಮತ್ತು ಹಣಕಾಸು ವರ್ಷ 2023-24 ಎರಡಕ್ಕೂ, 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ಟ್ಯಾಕ್ಸ್ ಸ್ಲ್ಯಾಬ್‌ಗಳು ಒಂದೇ ಆಗಿರುತ್ತವೆ, ಅವುಗಳು ಈ ಕೆಳಗಿನಂತಿವೆ:

ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು ಟ್ಯಾಕ್ಸೇಷನ್ ದರ
₹2,50,000 ವರೆಗೆ ನಿಲ್
₹2,50,000 ಮತ್ತು ₹5,00,000 ನಡುವೆ ₹2,50,000 ಮೀರಿದರೆ ನಿಮ್ಮ ಒಟ್ಟು ಆದಾಯದ 5%
₹5,00,000 ಮತ್ತು ₹10,00,000 ನಡುವೆ ₹5,00,000 ಮೀರಿದರೆ ₹12,500 + ನಿಮ್ಮ ಒಟ್ಟು ಆದಾಯದ 20%
₹10,00,000ಕ್ಕಿಂತ ಹೆಚ್ಚು ₹10,00,000 ಮೀರಿದರೆ ₹1,12,500 + ನಿಮ್ಮ ಒಟ್ಟು ಆದಾಯದ 30%

ಕ್ಯಾಲ್ಕುಲೇಟ್ ಮಾಡಾಲಾದ ಟ್ಯಾಕ್ಸ್ ಮೊತ್ತದ ಮೇಲೆ ಹೆಚ್ಚುವರಿ ಹೆಲ್ತ್ ಮತ್ತು ಎಜುಕೇಶನ್ ಸೆಸ್ 4% ರಲ್ಲಿ ಅನ್ವಯವಾಗುತ್ತವೆ.

[ಮೂಲ]

ಸೀನಿಯರ್ ಸಿಟಿಜನ್ ಮಹಿಳೆಯರಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು

 ಹೊಸ ರೆಜಿಮ್ ಅಡಿಯಲ್ಲಿ ಸೀನಿಯರ್ ಸಿಟಿಜನ್ ಮಹಿಳೆಯರಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ - ಹಣಕಾಸು ವರ್ಷ 2023-24

ಕೇಂದ್ರ ಬಜೆಟ್ 2023 ರ ಪ್ರಕಾರ, ಈ ಕೆಳಗಿನ ಟ್ಯಾಕ್ಸ್ ಸ್ಲ್ಯಾಬ್‌ಗಳು ಹೊಸ ಟ್ಯಾಕ್ಸ್ ವ್ಯವಸ್ಥೆಯನ್ನು ಆಯ್ಕೆ ಮಾಡಿರುವ, 60 ವರ್ಷಕ್ಕಿಂತ ಮೇಲ್ಪಟ್ಟ ಆದರೆ 80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಿಗೆ ಅನ್ವಯವಾಗುತ್ತದೆ.

ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು ಟ್ಯಾಕ್ಸೇಷನ್ ದರ
₹3,00,000 ವರೆಗೆ ನಿಲ್
₹3,00,001 ಮತ್ತು ₹6,00,000 ನಡುವೆ ₹3,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 5%
₹6,00,001 ಮತ್ತು ₹9,00,000 ನಡುವೆ ₹6,00,000 ಮೀರಿದರೆ ₹15,000 + ನಿಮ್ಮ ಒಟ್ಟು ಆದಾಯದ 10%
₹9,00,001 ಮತ್ತು ₹12,00,000 ನಡುವೆ ₹₹9,00,000 ಮೀರಿದರೆ ₹45,000 + ನಿಮ್ಮ ಒಟ್ಟು ಆದಾಯದ 15%
₹12,00,001 ಮತ್ತು ₹15,00,000 ನಡುವೆ ₹12,00,000 ಮೀರಿದರೆ ₹90,000 + ನಿಮ್ಮ ಒಟ್ಟು ಆದಾಯದ 20%
₹15,00,000ಕ್ಕಿಂತ ಹೆಚ್ಚು ₹15,00,000 ಮೀರಿದರೆ ₹1,50,000 + ನಿಮ್ಮ ಒಟ್ಟು ಆದಾಯದ 30%

[ಮೂಲ]

 ಹೊಸ ರೆಜಿಮ್ ಅಡಿಯಲ್ಲಿ ಸೀನಿಯರ್ ಸಿಟಿಜನ್ ಮಹಿಳೆಯರಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ - ಹಣಕಾಸು ವರ್ಷ 2022-23

ಹಣಕಾಸು ವರ್ಷ 2022-23 ಕ್ಕೆ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಲು, ಹೊಸ ಟ್ಯಾಕ್ಸ್ ರೆಜಿಮ್ ಅನ್ನು ಆಯ್ಕೆ ಮಾಡಿಕೊಂಡಿರುವ ಸೀನಿಯರ್ ಸಿಟಿಜನ್ ಮಹಿಳೆಯರು ನಿರ್ದಿಷ್ಟ ದರಗಳನ್ನು ಅನುಸರಿಸಬೇಕು.

ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು ಟ್ಯಾಕ್ಸೇಷನ್ ದರ
₹2,50,000 ವರೆಗೆ ನಿಲ್
₹2,50,001 ರಿಂದ ₹5,00,000 ₹2,50,000 ಮೇಲೆ 5%
₹5,00,001 ರಿಂದ ₹7,50,000 ₹5,00,000 ಮೀರಿದರೆ ₹12,500 + 10%
₹7,50,001 ರಿಂದ ₹10,00,00 ₹37,500 + ₹7,50,000 ಮೀರಿದರೆ ₹37,500 + 15%
₹10,00,001 ರಿಂದ ₹12,50,000 ₹10,00,000 ಮೀರಿದರೆ ₹75,000 + 20%
₹12,50,001 ರಿಂದ ₹15,00,000 ₹12,50,000 ಮೀರಿದರೆ ₹1,25,000 + 25%
₹15,00,000ಕ್ಕಿಂತ ಹೆಚ್ಚು ₹15,00,000 ಮೀರಿದರೆ ₹1,87,500 + 30%

[ಮೂಲ]

 ಹಳೆಯ ರೆಜಿಮ್ ಅಡಿಯಲ್ಲಿ ಸೀನಿಯರ್ ಸಿಟಿಜನ್ ಮಹಿಳೆಯರಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ - ಹಣಕಾಸು ವರ್ಷ 2022-23 ಮತ್ತು ಹಣಕಾಸು ವರ್ಷ 2023-24

60 ವರ್ಷಕ್ಕಿಂತ ಮೇಲ್ಪಟ್ಟ ಆದರೆ 80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಹಳೆಯ ಇನ್ಕಮ್ ಟ್ಯಾಕ್ಸ್ ರೆಜಿಮ್ ಅನ್ನು ಆರಿಸಿಕೊಂಡಿದ್ದರೆ, ಕೆಳಗಿನ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳ ಆಧಾರದ ಮೇಲೆ ಟ್ಯಾಕ್ಸ್ ಅನ್ನು ಪಾವತಿಸಬೇಕಾಗುತ್ತದೆ. 2022-23 ಮತ್ತು 2023-24 ಎರಡೂ ಹಣಕಾಸು ವರ್ಷಗಳಿಗೆ ಟ್ಯಾಕ್ಸ್ ಸ್ಲ್ಯಾಬ್‌ಗಳು ಒಂದೇ ಆಗಿರುತ್ತವೆ.

ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು ಟ್ಯಾಕ್ಸೇಷನ್ ದರ
₹3,00,000 ವರೆಗೆ ನಿಲ್
₹3,00,001 ರಿಂದ - ₹5,00,000 ₹3,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 5%
₹5,00,001 ರಿಂದ - ₹10,00,000 ₹5,00,000 ಮೀರಿದರೆ ₹10,000 + ನಿಮ್ಮ ಒಟ್ಟು ಆದಾಯದ 20%
₹10,00,000ಕ್ಕಿಂತ ಹೆಚ್ಚು ₹10,00,000 ಮೀರಿದರೆ ₹1,10,000 + ನಿಮ್ಮ ಒಟ್ಟು ಆದಾಯದ 30%

ಸೀನಿಯರ್ ಸಿಟಿಜನ್‌ಗಳಿಗೆ ಹೆಚ್ಚುವರಿ ಹೆಲ್ತ್ ಮತ್ತು ಎಜುಕೇಶನ್ ಸೆಸ್ ಅನ್ನು 4% ರಲ್ಲಿ ವಿಧಿಸಲಾಗುತ್ತದೆ ಹಾಗೂ ಇದು ಕ್ಯಾಲ್ಕುಲೇಟ್ ಮಾಡಲಾದ ಟ್ಯಾಕ್ಸ್ ಮೊತ್ತಕ್ಕೆ ಅನ್ವಯವಾಗುತ್ತದೆ.

[ಮೂಲ]

ಸೂಪರ್ ಸೀನಿಯರ್ ಸಿಟಿಜನ್ ಮಹಿಳೆಯರಿಗಾಗಿ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು

 ಹೊಸ ರೆಜಿಮ್ ಅಡಿಯಲ್ಲಿ ಸೂಪರ್ ಸೀನಿಯರ್ ಸಿಟಿಜನ್ ಮಹಿಳೆಯರಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ - ಹಣಕಾಸು ವರ್ಷ 2023-24

ಏಪ್ರಿಲ್ 1, 2023 ರಿಂದ ಅನ್ವಯವಾಗುವ ಕೆಳಗಿನ ಟ್ಯಾಕ್ಸ್ ದರಗಳ ಪ್ರಕಾರ 80 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಟ್ಯಾಕ್ಸ್ ಗಳನ್ನು ಪಾವತಿಸಲು ಜವಾಬ್ದಾರರಾಗಿರುತ್ತಾರೆ.

ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು ಟ್ಯಾಕ್ಸೇಷನ್ ದರ
₹3,00,000 ವರೆಗೆ ನಿಲ್
₹3,00,001 ಮತ್ತು ₹6,00,000 ನಡುವೆ ₹3,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 5%
₹6,00,001 ಮತ್ತು ₹9,00,000 ನಡುವೆ ₹6,00,000 ಮೀರಿದರೆ ₹15,000 + ನಿಮ್ಮ ಒಟ್ಟು ಆದಾಯದ 10%
₹9,00,001 ಮತ್ತು ₹12,00,000 ನಡುವೆ ₹₹9,00,000 ಮೀರಿದರೆ ₹45,000 + ನಿಮ್ಮ ಒಟ್ಟು ಆದಾಯದ 15%
₹12,00,001 ಮತ್ತು ₹15,00,000 ನಡುವೆ ₹12,00,000 ಮೀರಿದರೆ ₹90,000 + ನಿಮ್ಮ ಒಟ್ಟು ಆದಾಯದ 20%
₹15,00,000ಕ್ಕಿಂತ ಹೆಚ್ಚು ₹15,00,000 ಮೀರಿದರೆ ₹1,50,000 + ನಿಮ್ಮ ಒಟ್ಟು ಆದಾಯದ 30%

[ಮೂಲ]

 ಹೊಸ ರೆಜಿಮ್ ಅಡಿಯಲ್ಲಿ ಸೂಪರ್ ಸೀನಿಯರ್ ಸಿಟಿಜನ್ ಮಹಿಳೆಯರಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ - ಹಣಕಾಸು ವರ್ಷ 2022-23

ಹಣಕಾಸು ವರ್ಷ 2022-23 ಗಾಗಿ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಲು, ಹೊಸ ಟ್ಯಾಕ್ಸ್ ರೆಜಿಮ್ ಅನ್ನು ಆಯ್ಕೆ ಮಾಡಿಕೊಂಡಿರುವ ಸೂಪರ್ ಸೀನಿಯರ್ ಸಿಟಿಜನ್ ಮಹಿಳೆಯರು ಇಲ್ಲಿ ನೀಡಲಾದ ದರಗಳನ್ನು ಅನುಸರಿಸಬೇಕು.

ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು ಟ್ಯಾಕ್ಸೇಷನ್ ದರ
₹2,50,000 ವರೆಗೆ ನಿಲ್
₹2,50,001 ರಿಂದ ₹5,00,000 ₹2,50,000 ಮೇಲೆ 5%
₹5,00,001 ರಿಂದ ₹7,50,000 ₹5,00,000 ಮೀರಿದರೆ ₹12,500 + 10%
₹7,50,001 ರಿಂದ ₹10,00,00 ₹37,500 + ₹7,50,000 ಮೀರಿದರೆ ₹37,500 + 15%
₹10,00,001 ರಿಂದ ₹12,50,000 ₹10,00,000 ಮೀರಿದರೆ ₹75,000 + 20%
₹12,50,001 ರಿಂದ ₹15,00,000 ₹12,50,000 ಮೀರಿದರೆ ₹1,25,000 + 25%
₹15,00,000ಕ್ಕಿಂತ ಹೆಚ್ಚು ₹15,00,000 ಮೀರಿದರೆ ₹1,87,500 + 30%

[ಮೂಲ]

 ಹಳೆಯ ರೆಜಿಮ್ ಅಡಿಯಲ್ಲಿ ಸೂಪರ್ ಸೀನಿಯರ್ ನಾಗರಿಕ ಮಹಿಳೆಯರಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ - ಹಣಕಾಸು ವರ್ಷ 2022-23 ಮತ್ತು ಹಣಕಾಸು ವರ್ಷ 2023-24

80 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಟ್ಯಾಕ್ಸ್ ಪೇಯರ್ ಗಳು ಹಿಂದಿನ ಮತ್ತು ಪ್ರಸ್ತುತ ಹಣಕಾಸು ವರ್ಷಗಳಿಗಾಗಿ, ಹಳೆಯ ರೆಜಿಮ್ ಅಡಿಯಲ್ಲಿ, ಈ ಕೆಳಗಿನ ಟ್ಯಾಕ್ಸ್ ದರಗಳನ್ನು ಪರಿಗಣಿಸಬೇಕು.

ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು ಟ್ಯಾಕ್ಸೇಷನ್ ದರ
₹5,00,000ವರೆಗೆ ನಿಲ್
₹5,00,001 ರಿಂದ - ₹10,00,000 ₹5,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 20%
₹10,00,001ಕ್ಕಿಂತ ಹೆಚ್ಚು ₹10,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 30%

ಕ್ಯಾಲ್ಕುಲೇಟ್ ಮಾಡಲಾದ ಟ್ಯಾಕ್ಸ್ ಮೊತ್ತದ ಮೇಲೆ ಹೆಚ್ಚುವರಿ 4% ಹೆಲ್ತ್ ಮತ್ತು ಎಜುಕೇಶನ್ ಸೆಸ್ ಅನ್ನು ಸಹ ಅನ್ವಯಿಸಲಾಗುತ್ತದೆ.

[ಮೂಲ]

ಹೆಚ್ಚುವರಿ ಸರ್‌ಚಾರ್ಜ್‌

ರೂ .50 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ಮಹಿಳೆಯರಿಗೆ ಸರ್‌ಚಾರ್ಜ್‌ ಅನ್ನು ವಿಧಿಸಲಾಗುತ್ತದೆ. 1 ಏಪ್ರಿಲ್ 2023 ರಿಂದ ಅನ್ವಯವಾಗುವ ಸರ್‌ಚಾರ್ಜ್‌ ಗಳು ಈ ಕೆಳಗಿನಂತಿವೆ:

ಟ್ಯಾಕ್ಸೇಬಲ್ ಇನ್ಕಮ್ ಆದಾಯ ತೆರಿಗೆ ಮೇಲಿನ ಸರ್ಚಾರ್ಜ್ ದರ
₹ 50 ಲಕ್ಷಕ್ಕಿಂತ ಹೆಚ್ಚು ಮತ್ತು ₹ 1 ಕೋಟಿಗಿಂತ ಕಡಿಮೆ ಆದಾಯ ಹೊಂದಿರುವ ವ್ಯಕ್ತಿಗಳಿಗೆ 10%
₹1 ಕೋಟಿಗಿಂತ ಹೆಚ್ಚು ಮತ್ತು ₹2 ಕೋಟಿಗಿಂತ ಕಡಿಮೆ ಆದಾಯ ಹೊಂದಿರುವ ವ್ಯಕ್ತಿಗಳಿಗೆ 15%
₹2 ಕೋಟಿಗಿಂತ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿಗಳಿಗೆ 25%

ಹಣಕಾಸು ಮಸೂದೆ 2023 ಕ್ಕಿಂತ ಮೊದಲು, ₹ 5 ಕೋಟಿಗಿಂತ ಹೆಚ್ಚಿನ ಆದಾಯದ ಮೇಲೆ 37% ರಷ್ಟು ಗರಿಷ್ಟ ಸರ್‌ಚಾರ್ಜ್‌ ಅನ್ನು ವಿಧಿಸಲಾಗುತ್ತಿತ್ತು ಎಂಬುದನ್ನು ಗಮನಿಸಿ. ಆದಾಗ್ಯೂ, ಮೇಲಿನ ಕೋಷ್ಟಕದಲ್ಲಿ ತಿಳಿಸಿರುವಂತೆ ಏಪ್ರಿಲ್ 1, 2023 ರಿಂದ, ಈ ಸರ್‌ಚಾರ್ಜ್‌ ಅನ್ನು 25% ಕ್ಕೆ ಇಳಿಸಲಾಗಿದೆ.

[ಮೂಲ]

ಟ್ಯಾಕ್ಸೇಬಲ್ ಇನ್ಕಮ್ ಅನ್ನು ಹೇಗೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ?

ಭಾರತದ ಇನ್ಕಮ್ ಟ್ಯಾಕ್ಸ್ ಇಲಾಖೆಯು ಆದಾಯದ ಐದು ಶೀರ್ಷಿಕೆಗಳನ್ನು ನಿಗದಿಪಡಿಸಿದೆ ಹಾಗೂ ಇದರ ಅಡಿಯಲ್ಲಿ ನಿಮ್ಮ ಇನ್ಕಮ್ ಟ್ಯಾಕ್ಸ್ ಅನ್ನು ಕ್ಯಾಲ್ಕುಲೇಟ್ ಮಾಡಲಾಗುತ್ತದೆ. ಅವುಗಳೆಂದರೆ:

  • ಸ್ಯಾಲರಿಯಿಂದ ಆದಾಯ
  • ಹೌಸ್ ಪ್ರಾಪರ್ಟಿಯಿಂದ ಆದಾಯ
  • ಬಿಸಿನೆಸ್ ಮತ್ತು ವೃತ್ತಿಯಿಂದ ಆದಾಯ
  • ಕ್ಯಾಪಿಟಲ್ ಲಾಭಗಳಿಂದ ಆದಾಯ.
  • ಫಿಕ್ಸೆಡ್ ಡೆಪಾಸಿಟ್ ಗಳು, ಉಳಿತಾಯ ಖಾತೆಗಳು ಇತ್ಯಾದಿಗಳಿಂದ ಸಂಗ್ರಹಿಸಿದ ಇಂಟರೆಸ್ಟ್ ಅನ್ನು ಒಳಗೊಂಡಿರುವ ಇತರೆ ಮೂಲಗಳಿಂದ ಬಂದ ಯಾವುದೇ ಆದಾಯ.

 ಈಗ, ನಿಮ್ಮ ಟ್ಯಾಕ್ಸ್ ಲಯಬಿಲಿಟಿಗಳು ಹೆಚ್ಚುತ್ತಿವೆ ಎಂದು ನೀವು ಯೋಚಿಸುತ್ತಿದ್ದರೆ - ಚಿಂತಿಸಬೇಡಿ!

ಇನ್ಕಮ್ ಟ್ಯಾಕ್ಸ್ ಆಕ್ಟ್ ಮಹಿಳೆಯರಿಗೆ ಮತ್ತು ಇತರೆ ಎಲ್ಲಾ ಟ್ಯಾಕ್ಸ್ ಪೇಯರ್ ಗಳಿಗೆ ಕೆಲವು ಇನ್ಕಮ್ ಟ್ಯಾಕ್ಸ್ ವಿನಾಯಿತಿಗಳನ್ನು ಮುಂದಿಟ್ಟಿದ್ದು ಇವು ನಿಮ್ಮ ಆದಾಯದ ಒಂದು ಭಾಗವನ್ನು ಉಳಿಸಲು ನಿಮಗೆ ಸಹಾಯ ಮಾಡುತ್ತವೆ. ಈ ವಿನಾಯಿತಿಗಳನ್ನು ಪ್ರಾಥಮಿಕವಾಗಿ ಭಾರತೀಯರಲ್ಲಿ ಉಳಿತಾಯದ ಅಭ್ಯಾಸವನ್ನು ಬೆಳೆಸಲು ಜಾರಿಗೆ ತರಲಾಗಿದೆ.

ಇನ್ಕಮ್ ಟ್ಯಾಕ್ಸ್ ಆಕ್ಟ್, 1961 ಕಡ್ಡಾಯಗೊಳಿಸಿದಂತೆ, ನೀವು ಪಡೆಯಬಹುದಾದ ಇನ್ಕಮ್ ಟ್ಯಾಕ್ಸ್ ರಿಬೇಟ್ ಮತ್ತು ವಿನಾಯಿತಿಗಳನ್ನು ನಾವು ನೋಡೋಣ.

ಮಹಿಳೆಯರಿಗಾಗಿ ಇನ್ಕಮ್ ಟ್ಯಾಕ್ಸ್ ರಿಬೇಟ್

2023 ರ ಕೇಂದ್ರ ಬಜೆಟ್, 1961 ರ ಇನ್ಕಮ್ ಟ್ಯಾಕ್ಸ್ ಆಕ್ಟ್ ಸೆಕ್ಷನ್ 87A ಅಡಿಯಲ್ಲಿ, ಹೊಸ ಟ್ಯಾಕ್ಸ್ ರೆಜಿಮ್ ಗಾಗಿ ಮಹಿಳೆಯರನ್ನೂ ಒಳಗೊಂಡಂತೆ ವೈಯಕ್ತಿಕ ಟ್ಯಾಕ್ಸ್ ಪೇಯರ್ ಗಳಿಗೆ ಟ್ಯಾಕ್ಸ್ ವಿನಾಯಿತಿಯನ್ನು ಘೋಷಿಸಿತು. ಹಿಂದಿನ ಮತ್ತು ಪ್ರಸ್ತುತ ಹಣಕಾಸು ವರ್ಷಗಳಿಗೆ ವಿವಿಧ ವಯೋಮಾನದ ಮಹಿಳೆಯರಿಗೆ ಅನ್ವಯವಾಗುವ ಟ್ಯಾಕ್ಸ್ ರಿಬೇಟ್ ಈ ಕೆಳಗಿನಂತಿದೆ.

ವಯಸ್ಸು

ಹೊಸ ಟ್ಯಾಕ್ಸ್ ರೆಜಿಮ್ ನಲ್ಲಿ ಇನ್ಕಮ್ ಟ್ಯಾಕ್ಸ್ ರಿಬೇಟ್ ಹಳೆಯ ಟ್ಯಾಕ್ಸ್ ರೆಜಿಮ್ ನಲ್ಲಿ ಇನ್ಕಮ್ ಟ್ಯಾಕ್ಸ್ ರಿಬೇಟ್
FY 2022-23
ಹಣಕಾಸು ವರ್ಷ 2022-23
FY 2023-24
ಹಣಕಾಸು ವರ್ಷ 2023-24
ಹಣಕಾಸು ವರ್ಷ 2022-23 ಮತ್ತು ಹಣಕಾಸು ವರ್ಷ 2023-24 ಕ್ಕೆ ಒಂದೇ ರೀತಿ
60 ವರ್ಷಗಳ ಕೆಳಗೆ ₹5 ಲಕ್ಷದವರೆಗಿನ ಆದಾಯ (ಕ್ಯಾಲ್ಕುಲೇಟ್ ಮಾಡಲಾದ ಟ್ಯಾಕ್ಸ್ ಮೇಲೆ ₹12,500 ವರೆಗೆ) ₹7 ಲಕ್ಷದವರೆಗಿನ ಆದಾಯ (ಕ್ಯಾಲ್ಕುಲೇಟ್ ಮಾಡಲಾದ ಟ್ಯಾಕ್ಸ್ ಮೇಲೆ ₹25,000 ವರೆಗೆ) ₹5 ಲಕ್ಷದವರೆಗಿನ ಆದಾಯ (ಕ್ಯಾಲ್ಕುಲೇಟ್ ಮಾಡಲಾದ ಟ್ಯಾಕ್ಸ್ ಮೇಲೆ ₹12,500 ವರೆಗೆ)
60 ಮತ್ತು 80 ವರ್ಷಗಳ ನಡುವೆ ₹2.5 ಲಕ್ಷದವರೆಗಿನ ಆದಾಯ ₹3 ಲಕ್ಷದವರೆಗಿನ ಆದಾಯ ₹3 ಲಕ್ಷದವರೆಗಿನ ಆದಾಯ
60 ವರ್ಷಗಳ ಮೇಲೆ ₹2.5 ಲಕ್ಷದವರೆಗಿನ ಆದಾಯ ₹3 ಲಕ್ಷದವರೆಗಿನ ಆದಾಯ ₹5 ಲಕ್ಷದವರೆಗಿನ ಆದಾಯ

 ಬಜೆಟ್ 2023 ರ ಪ್ರಕಾರ ಹೊಸ ಟ್ಯಾಕ್ಸ್ ರೆಜಿಮ್ ನ ಅಡಿಯಲ್ಲಿ ಮಹಿಳೆಯರಿಗೆ ಇನ್ಕಮ್ ಟ್ಯಾಕ್ಸ್ ವಿನಾಯಿತಿಗಳನ್ನು ಅನುಮತಿಸಲಾಗಿದೆ

ಕೆಟಗರಿ ವಿನಾಯಿತಿ
ಸ್ಯಾಲರೀಡ್ ಮಹಿಳೆಯರಿಗಾಗಿ ಅವರ ಸ್ಯಾಲರಿ ಆದಾಯದ ಮೇಲೆ ಮಾತ್ರ 'ಸ್ಯಾಲರಿಗಳ ಆದಾಯ' ಶೀರ್ಷಿಕೆಯ ಅಡಿಯಲ್ಲಿ ₹ 50,000 ವರೆಗಿನ ಸ್ಟಾಂಡರ್ಡ್ ಡಿಡಕ್ಷನ್.
ಸೆಕ್ಷನ್ 80ಸಿಸಿಡಿ (2) ಅವರ ಎನ್.ಪಿ.ಎಸ್ ಅಕೌಂಟ್ ಗೆ ಉದ್ಯೋಗದಾತರಿಂದ ದೊರೆತ ಯಾವುದೇ ಎನ್.ಪಿ.ಎಸ್ (ನ್ಯಾಷನಲ್ ಪೆನ್ಷನ್ ಸ್ಕೀಮ್) ಕೊಡುಗೆಯ ಮೇಲೆ ವಿನಾಯಿತಿ. ಆದಾಗ್ಯೂ, ಉದ್ಯೋಗಿಯ ಸ್ವಂತ ಕೊಡುಗೆಯ ಮೇಲೆ ಯಾವುದೇ ಟ್ಯಾಕ್ಸ್ ಪ್ರಯೋಜನಗಳನ್ನು ಅನುಮತಿಸಲಾಗುವುದಿಲ್ಲ.
ಖಾಸಗಿ ವಲಯದ ಉದ್ಯೋಗಿಗಳಿಗೆ ಇದು ಅವರ ಸ್ಯಾಲರಿಯ 10% ವರೆಗೆ ಇದ್ದರೆ, ಸರ್ಕಾರಿ ನೌಕರರಿಗೆ ಇದು ಅವರ ಸ್ಯಾಲರಿಯ 14% ವರೆಗೆ ಇರುತ್ತದೆ.
ಅಗ್ನಿವೀರ್ ಕಾರ್ಪಸ್ ನಿಧಿ (80CCH) ಅಗ್ನಿವೀರ್ ಅವರ ಸೇವಾ ನಿಧಿ ಖಾತೆಗೆ ಅಗ್ನಿವೀರ್ ಅಥವಾ ಕೇಂದ್ರ ಸರ್ಕಾರದ ಕೊಡುಗೆ ಸೇರಿದಂತೆ ಅಗ್ನಿವೀರ್ ಕಾರ್ಪಸ್ ನಿಧಿಗೆ ಮಾಡಿದ ಯಾವುದೇ ಕೊಡುಗೆ.
ಸೆಕ್ಷನ್ 80JJAA ಹೆಚ್ಚುವರಿ ಉದ್ಯೋಗಿ ವೆಚ್ಚ, 30% ವರೆಗೆ

 ಹೊಸ ಟ್ಯಾಕ್ಸ್ ರೆಜಿಮ್ ನಲ್ಲಿ ಮಹಿಳೆಯರಿಗೆ ಅಸ್ತಿತ್ವದಲ್ಲಿರುವ ಇನ್ಕಮ್ ಟ್ಯಾಕ್ಸ್ ವಿನಾಯಿತಿಗಳನ್ನು ಅನುಮತಿಸಲಾಗಿದೆ - ಹಣಕಾಸು ವರ್ಷ 2022-23 ಮತ್ತು ಹಣಕಾಸು ವರ್ಷ 2023-24

ಕೆಟಗರಿ ವಿನಾಯಿತಿಗಳು
ಉಳಿತಾಯ ಸ್ಕೀಮ್‌ಗಳು ಪೋಸ್ಟ್ ಆಫೀಸ್ ಉಳಿತಾಯ ಖಾತೆಯ ಮೇಲಿನ ಇಂಟರೆಸ್ಟ್ ಗಾಗಿ ಸೆಕ್ಷನ್ 10(15)(i) ಅಡಿಯಲ್ಲಿ ವೈಯಕ್ತಿಕ ಖಾತೆಗಳಿಗೆ ₹ 3,500 ಮತ್ತು ಜಂಟಿ ಖಾತೆಗಳಿಗೆ ₹ 7,000 ವರೆಗಿನ ವಿನಾಯಿತಿ ಇದೆ.
ಲೈಫ್ ಇನ್ಶೂರೆನ್ಸ್ ಖಾತೆಯ ಮುಕ್ತಾಯದ ನಂತರ ಅದರಿಂದ ಪಡೆದ ಫಂಡ್ ಗಳು ಸೆಕ್ಷನ್ 10(10D) ಪ್ರಕಾರ ಟ್ಯಾಕ್ಸ್ ವಿನಾಯಿತಿಗೆ ಅರ್ಹವಾಗಿರುತ್ತವೆ
ಸುಕನ್ಯಾ ಸಮೃದ್ಧಿ ಖಾತೆಯಿಂದ ಪಡೆದ ಇಂಟರೆಸ್ಟ್ ಗಳು ಮತ್ತು ಮೆಚ್ಯೂರಿಟಿ ಮೊತ್ತಗಳು.
ಎನ್‌ಪಿಎಸ್‌, ಪಿಪಿಎಫ್‌ ಮತ್ತು ಇಪಿಎಫ್‌ ಉದ್ಯೋಗಿಗಳ ಎನ್‌ಪಿಎಸ್‌ ಮತ್ತು ಇಪಿಎಫ್‌ ಮತ್ತು ನಿವೃತ್ತಿ ಖಾತೆಗಳಿಗೆ ಉದ್ಯೋಗದಾತರ ಕೊಡುಗೆಗಳ ಮೇಲೆ ಟ್ಯಾಕ್ಸ್ ವಿನಾಯಿತಿ, ಒಂದು ಹಣಕಾಸು ವರ್ಷದಲ್ಲಿ ₹ 7.5 ಲಕ್ಷದವರೆಗೆ.
ನಿಮ್ಮ ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಖಾತೆಯಿಂದ ಪಡೆದ ಇಂಟರೆಸ್ಟ್ ಮೇಲಿನ ವಿನಾಯಿತಿ, 9.5% ವರೆಗೆ.
ಎನ್.ಪಿ.ಎಸ್ ಖಾತೆಯಿಂದ ಪಡೆದ ಲಂಪ್‌ಸಮ್ ಮೆಚ್ಯೂರಿಟಿ ಮೊತ್ತ ಮತ್ತು ಟಿಯರ್ I ಎನ್.ಪಿ.ಎಸ್ ಖಾತೆಯಿಂದ ಭಾಗಶಃ ಫಂಡ್ ವಿದ್‌ಡ್ರಾವಲ್ ಮೇಲಿನ ಟ್ಯಾಕ್ಸ್ ವಿನಾಯಿತಿ.
ಪಿಪಿಎಫ್ ಖಾತೆಯಿಂದ ಪಡೆದ ಇಂಟರೆಸ್ಟ್ ಅಥವಾ ಮೆಚ್ಯೂರಿಟಿ ಮೊತ್ತ.
ಹೋಮ್ ಲೋನ್‌ಗಳು ಬಾಡಿಗೆ ಪ್ರಾಪರ್ಟಿಗಾಗಿ ಎರವಲು ಪಡೆದ ಹೋಮ್ ಲೋನ್ ನ ಇಂಟರೆಸ್ಟ್ ಅಂಶ.
ಗ್ರಾಚ್ಯುಟಿ ಸರ್ಕಾರೇತರ ಉದ್ಯೋಗಿಗಳಿಗೆ ಉದ್ಯೋಗದಾತರ ಗ್ರಾಚ್ಯುಟಿಗಾಗಿ ₹ 20 ಲಕ್ಷದವರೆಗೆ ವಿನಾಯಿತಿ ನೀಡಲಾಗಿದೆ ಮತ್ತು ಸರ್ಕಾರಿ ನೌಕರರಿಗೆ ಸಂಪೂರ್ಣ ಗ್ರಾಚ್ಯುಟಿಗೆ ಟ್ಯಾಕ್ಸ್ ನಿಂದ ವಿನಾಯಿತಿ ನೀಡಲಾಗಿದೆ.
ಉದ್ಯೋಗದಾತರಿಂದ ಅಲೋವೆನ್ಸ್‌ಗಳು ಅಂಗವಿಕಲ ಉದ್ಯೋಗಿಗಳಿಗೆ ಪ್ರಯಾಣ ಅಲೋವೆನ್ಸ್‌ಗಳು, ಕನ್ವೆಯನ್ಸ್ ಅಲೋವೆನ್ಸ್, ಉದ್ಯೋಗಿಯ ಪ್ರಯಾಣ ವೆಚ್ಚ ಅಥವಾ ಟ್ರಾನ್ಸಫರ್ ಅನ್ನು ಕವರ್ ಮಾಡಲು ಒದಗಿಸಲಾದ ಅಲೋವೆನ್ಸ್‌ಗಳು, ವಿಶೇಷ ಸವಲತ್ತುಗಳು ಮತ್ತು ದೈನಂದಿನ ಅಲೋವೆನ್ಸ್‌ಗಳ ಮೇಲಿನ ವಿನಾಯಿತಿ.
ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಲು ಉದ್ಯೋಗದಾತರಿಂದ ಒದಗಿಸಲಾದ ಉದ್ಯೋಗಿಗಳಿಗೆ ಅಲೋವೆನ್ಸ್‌ಗಳು.
ಸರ್ಕಾರೇತರ ನೌಕರರು ಪರಿವರ್ತಿತ ಅಥವಾ ಕಮ್ಯೂಟೆಡ್ ಪೆನ್ಷನ್ ಅನ್ನು ಪಡೆದಿದ್ದು ಅವರು ಉದ್ಯೋಗಿ ಗ್ರಾಚ್ಯುಟಿಯನ್ನು ಸ್ವೀಕರಿಸಿದರೆ ಅದರಲ್ಲಿ 1/3 ಭಾಗವು ಟ್ಯಾಕ್ಸ್ ವಿನಾಯಿತಿಗೆ ಅರ್ಹತೆ ಪಡೆಯುತ್ತದೆ. ಉದ್ಯೋಗಿಗಳು ಗ್ರಾಚ್ಯುಟಿಯನ್ನು ಪಡೆಯದಿದ್ದರೆ, ಅವರ ½ ಕಮ್ಯುಟೆಡ್ ಪೆನ್ಷನ್ ಗಳಿಗೆ ಟ್ಯಾಕ್ಸ್ ವಿನಾಯಿತಿಯನ್ನು ನೀಡಲಾಗುತ್ತದೆ.
ಉದ್ಯೋಗದಾತರಿಂದ ಸ್ವೀಕರಿಸಲಾದ ಉಡುಗೊರೆಗಳು, ₹5,000 ವರೆಗೆ.
ರಿಟೈರ್‌ಮೆಂಟ್ ರಜೆ ನಗದೀಕರಣದ ಅಥವಾ ಎನ್ಕ್ಯಾಶ್ಮೆಂಟ್ ಮೇಲೆ ವಿನಾಯಿತಿ.
ವಾಲಂಟರಿ ರಿಟೈರ್‌ಮೆಂಟ್ ಗಾಗಿ ಉದ್ಯೋಗದಾತರಿಂದ ಪಡೆದ ವಿತ್ತೀಯ ಪ್ರಯೋಜನಗಳು, ₹5 ಲಕ್ಷದವರೆಗೆ.
ಎಜುಕೇಶನ್ ವಿದ್ಯಾರ್ಥಿವೇತನ, ಹಿಂಬಡ್ತಿ ಕಾಂಪನ್ಸೇಶನ್ ಮತ್ತು ರಿಟೈರ್‌ಮೆಂಟ್ ಮತ್ತು ಮರಣಕ್ಕೆ ವಿತ್ತೀಯ ಪ್ರಯೋಜನಗಳು.

 ಬಜೆಟ್ 2023 ರ ಪ್ರಕಾರ ಹೊಸ ಟ್ಯಾಕ್ಸ್ ರೆಜಿಮ್ ನ ಅಡಿಯಲ್ಲಿ ಮಹಿಳೆಯರಿಗೆ ಇನ್ಕಮ್ ಟ್ಯಾಕ್ಸ್ ವಿನಾಯಿತಿಗಳನ್ನು ಅನುಮತಿಸಲಾಗುವುದಿಲ್ಲ.

ಕೆಟಗರಿ ವಿನಾಯಿತಿಗಳು
ಹೋಮ್ ಲೋನ್ ಗಳು (ವಿಭಾಗ 80C ಮತ್ತು 80EE/ 80EEA ಅಡಿಯಲ್ಲಿ) ₹1.5 ಲಕ್ಷದವರೆಗಿನ ಹೌಸಿಂಗ್ ಲೋನ್ ಗಳ ಇಂಟರೆಸ್ಟ್ ಮತ್ತು ಅಸಲು ಮೊತ್ತದ ಪಾವತಿಯ ಮೇಲಿನ ಡಿಡಕ್ಷನ್.
ಸೆಕ್ಷನ್ 80C ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್, ಲೈಫ್ ಇನ್ಶೂರೆನ್ಸ್ ಪ್ರೀಮಿಯಂ ಮತ್ತು ಸಾರ್ವಜನಿಕ ಪ್ರಾವಿಡೆಂಟ್ ಫಂಡ್ ನಲ್ಲಿ ಮಾಡಿದ ಇನ್‌ವೆಸ್ಟ್‌ಮೆಂಟ್‌ಗಳು.
ಸೆಕ್ಷನ್ 80E ಸ್ಟೂಡೆಂಟ್ ಲೋನ್ ಡೆಟ್ ಮೇಲೆ ಪಾವತಿಸಿದ ಇಂಟರೆಸ್ಟ್.
ದಾನ (ಸೆಕ್ಷನ್ 80G ಅಡಿಯಲ್ಲಿ) ವೈಜ್ಞಾನಿಕ ಸಂಶೋಧನೆಯಲ್ಲಿ ದೇಣಿಗೆ ಅಥವಾ ವೆಚ್ಚಗಳು.
ನ್ಯಾಷನಲ್ ಡಿಫೆನ್ಸ್ ಫಂಡ್, ಪ್ರಧಾನ ಮಂತ್ರಿಗಳ ನ್ಯಾಷನಲ್ ರಿಲೀಫ್ ಫಂಡ್, ಕೋಮು ಸೌಹಾರ್ದತೆಗಾಗಿನ ನ್ಯಾಷನಲ್ ಫೌಂಡೇಷನ್, ನ್ಯಾಷನಲ್/ ಸ್ಟೇಟ್ ಬ್ಲಡ್ ಟ್ರಾನ್ಸ್‌ಫ್ಯುಷನ್ ಕೌನ್ಸಿಲ್ ಒಳಗೊಂಡಂತೆ ಡಿಡಕ್ಷನ್‌ಗಳು.

ಹೊಸ ಟ್ಯಾಕ್ಸ್ ರೆಜಿಮ್ ನಲ್ಲಿ ಮಹಿಳೆಯರಿಗೆ ಅಸ್ತಿತ್ವದಲ್ಲಿರುವ ಇನ್ಕಮ್ ಟ್ಯಾಕ್ಸ್ ವಿನಾಯಿತಿಗಳನ್ನು ಅನುಮತಿಸಲಾಗುವುದಿಲ್ಲ -ಹಣಕಾಸು ವರ್ಷ 2022-23 ಮತ್ತು ಹಣಕಾಸು ವರ್ಷ 2023-24

ಕೆಟಗರಿ ವಿನಾಯಿತಿಗಳು

ಸ್ಯಾಲರಿ ಡಿಡಕ್ಷನ್‌ಗಳು
ಹೌಸ್ ರೆಂಟ್ ಅಲೋವೆನ್ಸ್ ಮತ್ತು ಲೀವ್ ಟ್ರಾವೆಲ್ ಅಲೋವೆನ್ಸ್.
₹ 2,500ರ ಪ್ರೊಫೆಷನಲ್ ಟ್ಯಾಕ್ಸ್
ಸರ್ಕಾರಿ ನೌಕರರಿಗೆ- ಪ್ರೊಫೆಷನಲ್ ಟ್ಯಾಕ್ಸ್ ಮತ್ತು ಮನರಂಜನಾ ಅಲೋವೆನ್ಸ್ ಮೇಲಿನ ಡಿಡಕ್ಷನ್‌ಗಳು.

ಸೇವಿಂಗ್ಸ್ ಅಕೌಂಟ್
ಸೆಕ್ಷನ್ 80TTA ಮತ್ತು 80TTB ಅಡಿಯಲ್ಲಿ ಸೇವಿಂಗ್ಸ್ ಅಕೌಂಟ್ ನಿಂದ ಪಡೆದ ಇಂಟರೆಸ್ಟ್ (ಸೀನಿಯರ್ ಸೀನಿಯರ್ ಸಿಟಿಜನ್‌ಗಳ ಡೆಪಾಸಿಟ್ ಗಳ ಮೇಲಿನ ಇಂಟರೆಸ್ಟ್ ಗೆ ಟ್ಯಾಕ್ಸ್ ವಿಧಿಸಲಾಗುತ್ತದೆ).
ಸೆಕ್ಷನ್ 10(14)ರ ಅಡಿಯಲ್ಲಿ ವಿಶೇಷ ಅಲೋವೆನ್ಸ್‌ಗಳು
ಸೆಕ್ಷನ್ 10AA ಅಡಿಯಲ್ಲಿ ವಿಶೇಷ ಆರ್ಥಿಕ ವಲಯದಲ್ಲಿ ಬಿಸಿನೆಸ್ ಪ್ರೊಫೆಷನಲ್ ಗಳು ಮತ್ತು ಮಾಲೀಕರು.

ಹೋಮ್ ಲೋನ್ ಗಳು (ಸೆಕ್ಷನ್ 24(B) ಅಡಿಯಲ್ಲಿ)
ಸ್ವಯಂ ಆಕ್ರಮಿತ/ಖಾಲಿ ಪ್ರಾಪರ್ಟಿಗಾಗಿ ಹೋಮ್ ಲೋನ್ ಇಂಟರೆಸ್ಟ್ ಪಾವತಿ.
ಹೌಸ್ ಪ್ರಾಪರ್ಟಿ ಖರೀದಿ/ನಿರ್ಮಾಣ/ ರಿಪೇರಿ/ಪುನರ್ನಿರ್ಮಾಣಕ್ಕಾಗಿ ₹2,00,000 ವರೆಗಿನ ಇಂಟರೆಸ್ಟ್ ಪಾವತಿ.

ಇತರೆ ಸೆಕ್ಷನ್ ಗಳು
ಐಟಿ ಆಕ್ಟ್ ನ ಸೆಕ್ಷನ್ 35(1)(ii), 35(2 AA), 32AD, 33AB, 35(1)iii), 33ABA, 35(1)(ii), 35ಸಿಸಿಸಿ(A) ಮತ್ತು 35AD ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್‌.
ಸೆಕ್ಷನ್ 32(ii) (A) ಅಡಿಯಲ್ಲಿ ನಿರ್ದಿಷ್ಟ ಪಡಿಸಿದ ಹೆಚ್ಚುವರಿ ಡೆಪ್ರಿಸಿಯೇಷನ್.
ಕಳೆದ ವರ್ಷಗಳ ಬಳಕೆಯಾಗಿಲ್ಲದ ಡೆಪ್ರಿಸಿಯೇಷನ್ ಅನ್ನು ಅಡ್ಜಸ್ಟ್ ಮಾಡುವ ಆಯ್ಕೆ.
ಅಧ್ಯಾಯ VI-Aಯಲ್ಲಿರುವ 80IA, 80CCC, 80C, 80ಸಿಸಿಡಿ, 80D, 80CCG, 80DDB, 80EE, 80E, 80EEA, 80DD, 80EEB, 80GG, 8IB, 80IAC, ಮತ್ತು 80IAB ಅಡಿಯಲ್ಲಿ ನಿರ್ದಿಷ್ಟಪಡಿಸಿದ ಡಿಡಕ್ಷನ್‌ಗಳು.
ಮೈನರ್ ಮಕ್ಕಳು, ಹೆಲ್ಪರ್ ಅಲೋವೆನ್ಸ್‌ಗಳು ಮತ್ತು ಮಕ್ಕಳ ಎಜುಕೇಷನ್‌ಗೆ ಅಲೋವೆನ್ಸ್‌ಗಳು.

ಹಳೆಯ ಟ್ಯಾಕ್ಸ್ ರೆಜಿಮ್ ನ ಅಡಿಯಲ್ಲಿ ಮಹಿಳೆಯರಿಗೆ ಇನ್ಕಮ್ ಟ್ಯಾಕ್ಸ್ ವಿನಾಯಿತಿಗಳು

2022-23 ಮತ್ತು 2023-24 ರ ಹಣಕಾಸು ವರ್ಷಗಳಲ್ಲಿ ಮಹಿಳೆಯರಿಗೆ ಹಳೆಯ ಟ್ಯಾಕ್ಸ್ ರೆಜಿಮ್ ನ ಅಡಿಯಲ್ಲಿ ಕೆಲವು ಅಲೋವೆನ್ಸ್‌ಗಳು ಮತ್ತು ಡಿಡಕ್ಷನ್‌ಗಳು.

  • ₹50,000 ವರೆಗೆ ಸ್ಟಾಂಡರ್ಡ್ ಡಿಡಕ್ಷನ್.
  • ಲೀವ್ ಟ್ರಾವೆಲ್ ಅಲೋವೆನ್ಸ್(ಎಲ್.ಟಿ.ಎ) ಮತ್ತು ಹೌಸ್ ರೆಂಟ್ ಅಲೋವೆನ್ಸ್(ಎಚ್.ಆರ್.ಎ)
  • ನಿವಾಸದಲ್ಲಿ ಬಳಸಿದ ದೂರವಾಣಿ ಮತ್ತು ಮೊಬೈಲ್‌ನ ವೆಚ್ಚಗಳಿಗೆ ರಿಇಂಬರ್ಸ್‌ಮೆಂಟ್.
  • ಪುಸ್ತಕಗಳು, ದಿನಪತ್ರಿಕೆಗಳು, ನಿಯತಕಾಲಿಕಗಳು, ಜರ್ನಲ್ ಗಳು ಇತ್ಯಾದಿಗಳ ಮೇಲೆ ಮಾಡಿದ ವೆಚ್ಚಗಳ ರಿಇಂಬರ್ಸ್‌ಮೆಂಟ್.
  • ಫುಡ್ ಕೂಪನ್‌ಗಳ ಮೇಲಿನ ವೆಚ್ಚಗಳು.
  • ಬಿಸಿನೆಸ್ ಉದ್ದೇಶಗಳಿಗಾಗಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ಸ್ಥಳಾಂತರದ ಅಲೋವೆನ್ಸ್ ಪ್ರಯೋಜನಗಳು.
  • ಆರೋಗ್ಯ ಕ್ಲಬ್ ಸೌಲಭ್ಯಗಳು, ಕ್ಯಾಬ್ ಸೌಲಭ್ಯಗಳು, ಉಡುಗೊರೆಗಳು ಅಥವಾ ವೋಚರ್‌ಗಳಂತಹ ಉದ್ಯೋಗದಾತರಿಂದ ಒದಗಿಸಲಾದ ವಿಭಿನ್ನ ಸೌಲಭ್ಯಗಳ ಮೇಲಿನ ಪ್ರಯೋಜನಗಳು.

ಇನ್ಕಮ್ ಟ್ಯಾಕ್ಸ್ ಆಕ್ಟ್ ನ ಸೆಕ್ಷನ್ 80 ರ ಅಡಿಯಲ್ಲಿ, ಮಹಿಳಾ ಟ್ಯಾಕ್ಸ್ ಪೇಯರ್ ಗಳು ಈ ಕೆಳಗಿನ ವಿನಾಯಿತಿಗಳಿಂದ ಇನ್ಕಮ್ ಟ್ಯಾಕ್ಸ್ ಪ್ರಯೋಜನಗಳನ್ನು ಪಡೆಯಬಹುದು:


ಸೆಕ್ಷನ್
ಪ್ರಯೋಜನ ಲಿಮಿಟ್
ಸೆಕ್ಷನ್ 80C ಇವುಗಳಿಂದ ಆದ ಗಳಿಕೆಗಳ ಮೇಲೆ-
ಹೋಮ್ ಲೋನ್ ಗಳ ಮೇಲಿನ ಅಸಲು ಪಾವತಿ
ಟ್ಯಾಕ್ಸ್ ಉಳಿತಾಯದ ಫಿಕ್ಸೆಡ್ ಡೆಪಾಸಿಟ್
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್
ಇಕ್ವಿಟಿ ಲಿಂಕ್ಡ್ ಉಳಿತಾಯ ಸ್ಕೀಮ್
ನ್ಯಾಷನಲ್ ಪೆನ್ಷನ್ ಸ್ಕೀಮ್
ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್
ಸಾರ್ವಜನಿಕ ಪ್ರಾವಿಡೆಂಟ್ ಫಂಡ್
ಸೀನಿಯರ್ ಸಿಟಿಜನ್‌ಗಳ ಉಳಿತಾಯ ಸ್ಕೀಮ್
ಸುಕನ್ಯಾ ಸಮೃದ್ಧಿ ಯೋಜನೆ, ಇತ್ಯಾದಿ.
₹1.5 ಲಕ್ಷಗಳವರೆಗಿನ ಗರಿಷ್ಠ ವಿನಾಯಿತಿ ಲಿಮಿಟ್.
ಸೆಕ್ಷನ್ 80CCC ಎಲ್ಐಸಿ ವರ್ಷಾಶನ ಪ್ಲಾನ್ ಗಳಲ್ಲಿ ಡೆಪಾಸಿಟ್ ಮಾಡಿದ ಮೊತ್ತದ ಮೇಲೆ. ₹1.5 ಲಕ್ಷಗಳವರೆಗಿನ ಗರಿಷ್ಠ ವಿನಾಯಿತಿ ಲಿಮಿಟ್.
ಸೆಕ್ಷನ್ 80TTA ಬ್ಯಾಂಕ್ ಉಳಿತಾಯ ಖಾತೆಯಿಂದ ಗಳಿಸಿದ ಇಂಟರೆಸ್ಟ್ ಮೇಲೆ. ₹10,000 ವರೆಗಿನ ಲಿಮಿಟ್.
ಸೆಕ್ಷನ್ 80GG ವ್ಯಕ್ತಿಯು ಹೌಸ್ ರೆಂಟ್ ಅಲೋವೆನ್ಸ್ ಗಳಿಸದಿದ್ದಾಗ ಬಾಡಿಗೆ ಪಾವತಿ. ಇವುಗಳ ನಡುವಿನ ಕಡಿಮೆ ಮೊತ್ತ -
ಪಾವತಿಸಿದ ಬಾಡಿಗೆ - (ಒಟ್ಟು ಆದಾಯದ 10%)
ಒಟ್ಟು ಆದಾಯದ 25%
ಪ್ರತೀ ತಿಂಗಳು ₹5000
ಸೆಕ್ಷನ್ 24a ಸ್ವಯಂ-ವಾಸಿಸುವ ಪ್ರಾಪರ್ಟಿ ಮತ್ತು ಲೆಟ್ ಔಟ್ ಪ್ರಾಪರ್ಟಿಗಾಗಿ ಹೋಮ್ ಲೋನ್ ಗಳ ಮೇಲಿನ ಇಂಟರೆಸ್ಟ್. ಸ್ವಯಂ-ವಾಸಿಸುವ ಪ್ರಾಪರ್ಟಿಗೆ ₹2 ಲಕ್ಷದವರೆಗೆ.
ಲೆಟ್-ಔಟ್ ಆಸ್ತಿಗೆ ಲಿಮಿಟ್ ಇಲ್ಲ.
ಸೆಕ್ಷನ್ 80E ಎಜುಕೇಶನ್ ಲೋನ್ ಮೇಲೆ ಪಾವತಿಸಲಾದ ಒಟ್ಟು ಇಂಟರೆಸ್ಟ್. ಗರಿಷ್ಠ ಮೊತ್ತದ ಮೇಲೆ ಯಾವುದೇ ಲಿಮಿಟ್ ಇಲ್ಲ.
ಸೆಕ್ಷನ್ 80EEA ಮೊದಲಿಗರಿಗೆ ಹೋಮ್ ಲೋನ್ ಇಂಟರೆಸ್ಟ್ ₹50,000 ದವರೆಗೆ
ಸೆಕ್ಷನ್ 80CCG ಮೊದಲ ಬಾರಿಯ ಇನ್ವೆಸ್ಟರ್ ಗಳಿಗೆ ರಾಜೀವ್ ಗಾಂಧಿ ಈಕ್ವಿಟಿ ಸ್ಕೀಮ್ ಅಡಿಯಲ್ಲಿ ಈಕ್ವಿಟಿ ಉತ್ಪನ್ನಗಳಲ್ಲಿ ಇನ್ವೆಸ್ಟ್ ಮೆಂಟ್ . ಇವುಗಳ ನಡುವಿನ ಕಡಿಮೆ ಮೊತ್ತ -
₹25,000 ಅಥವಾ ಈಕ್ವಿಟಿ ಸ್ಕೀಮ್ ಗಳ ಇನ್ವೆಸ್ಟ್ ಮೆಂಟ್ ಮೊತ್ತದ 50%.
ಸೆಕ್ಷನ್ 80D ಸ್ವಯಂ ಮತ್ತು ಕುಟುಂಬಕ್ಕಾಗಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಪ್ರೀಮಿಯಂ. ₹25,000 (ಸ್ವಯಂ, ಸಂಗಾತಿ ಮತ್ತು ಅವಲಂಬಿತ ಮಕ್ಕಳಿಗೆ) + 60 ವರ್ಷಕ್ಕಿಂತ ಕೆಳಗಿನ ಪೋಷಕರಿಗೆ ₹25,000.
₹25,000 (ಸ್ವಯಂ, ಸಂಗಾತಿ ಮತ್ತು ಅವಲಂಬಿತ ಮಕ್ಕಳಿಗೆ) + ₹50,000 ವರೆಗೆ (60 ವರ್ಷ ಮೇಲ್ಪಟ್ಟ ಪೋಷಕರಿಗೆ).
60 ವರ್ಷಕ್ಕಿಂತ ಮೇಲ್ಪಟ್ಟ ಒಬ್ಬ ಸದಸ್ಯರಿರುವ ಹೆಚ್.ಯು.ಎಫ್ ಸದಸ್ಯರಿಗೆ ₹50,000 ವರೆಗೆ + ₹50,000 ವರೆಗೆ (60 ವರ್ಷಕ್ಕಿಂತ ಮೇಲ್ಪಟ್ಟ ಪೋಷಕರಿಗೆ).
ಸೆಕ್ಷನ್ 80DDB ನಿರ್ದಿಷ್ಟಪಡಿಸಲಾದ ರೋಗಗಳಿಂದ ಬಳಲುತ್ತಿರುವ ಅವಲಂಬಿತ ವ್ಯಕ್ತಿಗಳ ವೈದ್ಯಕೀಯ ಚಿಕಿತ್ಸೆ. 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ, ₹ 40,000 ವರೆಗಿನ ಡಿಡಕ್ಷನ್ ಲಭ್ಯವಿದೆ.
ಸೆಕ್ಷನ್ 80GGC ರಾಜಕೀಯ ಪಕ್ಷಗಳಿಗೆ ಕೊಡುಗೆ. ಕ್ಯಾಶ್ ಹೊರತುಪಡಿಸಿ ಪಾವತಿ ವಿಧಾನಗಳ ಮೇಲೆ ಯಾವುದೇ ಲಿಮಿಟ್ ಗಳಿಲ್ಲ.
ಸೆಕ್ಷನ್ 80G ಚಾರಿಟೇಬಲ್ ಸಂಸ್ಥೆಗಳಿಗೆ ಕೊಡುಗೆಗಳು ಮತ್ತು ಕೆಲವು ರಿಲೀಫ್ ಫಂಡ್ ಗಳು. ಕೆಲವು ಚಾರಿಟೇಬಲ್ ದೇಣಿಗೆಗಳು 50% ಡಿಡಕ್ಷನ್ ಗಳಿಗೆ ಅರ್ಹವಾಗಿವೆ ಮತ್ತು ಕೆಲವು 100% ಡಿಡಕ್ಷನ್ ಗಳಿಗೆ ಅರ್ಹವಾಗಿವೆ.

ಇವುಗಳ ಬಗ್ಗೆ ಇನ್ನಷ್ಟು ತಿಳಿಯಿರಿ:

ಆದ್ದರಿಂದ, ಅಂತಹ ವಿನಾಯಿತಿಗಳು ಮತ್ತು ಪ್ರಯೋಜನಗಳು ಜಾರಿಯಲ್ಲಿರುವಾಗ, ಸೂಕ್ತವಾದ ಇನ್ವೆಸ್ಟ್ ಮೆಂಟ್ ಗಳು ಮತ್ತು ವೆಚ್ಚಗಳನ್ನು ಮಾಡುವ ಮೂಲಕ ಮಹಿಳೆಯರು ತಮ್ಮ ಟ್ಯಾಕ್ಸ್ ಲಯಬಿಲಿಟಿಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಈ ಇನ್ವೆಸ್ಟ್ ಮೆಂಟ್ ಗಳು ಬಹುಪಾಲು ದೀರ್ಘಾವಧಿಯದ್ದಾಗಿದ್ದರೂ, ಟ್ಯಾಕ್ಸ್ ಅನ್ನು ಉಳಿಸುವ ವಿಷಯದಲ್ಲಿ ಅತ್ಯಂತ ಪ್ರಯೋಜನಕಾರಿಯಾಗಿರುತ್ತವೆ.

ಆದ್ದರಿಂದ, ಹಣಕಾಸು ವರ್ಷ 2022-23 ಕ್ಕಾಗಿ ನಿಮ್ಮ ಟ್ಯಾಕ್ಸ್ ರಿಟರ್ನ್‌ಗಳನ್ನು ಫೈಲ್ ಮಾಡುವ ಮೊದಲು ಮತ್ತು ಹಣಕಾಸು ವರ್ಷ 2023-24 ಕ್ಕೆ ಟ್ಯಾಕ್ಸ್ ಪ್ಲಾನಿಂಗ್ ಮಾಡುವ ಮೊದಲು, ನೀವು ಮಹಿಳೆಯರಿಗೆ ಸಂಬಂಧಿಸಿದ ಐಟಿ ಸ್ಲ್ಯಾಬ್‌ಗಳನ್ನು ಮತ್ತು ಟ್ಯಾಕ್ಸೇಶನ್ ನ ಸಂಪೂರ್ಣ ವ್ಯವಸ್ಥೆಯ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿರುವುದನ್ನು ಖಚಿತಪಡಿಸಿಕೊಳ್ಳಲು ಅನ್ವಯವಾಗುವ ಎಲ್ಲಾ ವಿನಾಯಿತಿಗಳನ್ನು ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ.

[ಮೂಲ]

ಮಹಿಳೆಯರಿಗಾಗಿ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಭಾರತದಲ್ಲಿ ಮಹಿಳೆಯರಿಗೆ ಇನ್ಕಮ್ ಟ್ಯಾಕ್ಸ್ ಲಯಬಿಲಿಟಿಗಳು ವಿಭಿನ್ನವಾಗಿವೆಯೇ?

ಈ ಹಿಂದೆ ದೇಶದಲ್ಲಿ, ಮಹಿಳೆಯರ ಮೇಲಿನ ಟ್ಯಾಕ್ಸೇಶನ್ ನ ಮೂಲ ವಿನಾಯಿತಿ ಲಿಮಿಟ್ ಪುರುಷ ಟ್ಯಾಕ್ಸ್ ಪೇಯರ್ ಗಳಿಗಿಂತ ಹೆಚ್ಚಿತ್ತು. ಹಣಕಾಸು ವರ್ಷ 2012-13 ರಿಂದ, ಟ್ಯಾಕ್ಸ್ ಸ್ಲ್ಯಾಬ್‌ಗಳನ್ನು ವ್ಯಕ್ತಿಯ ಆದಾಯ ಮತ್ತು ವಯಸ್ಸಿನ ಆಧಾರದ ಮೇಲೆ ನಿರ್ಧರಿಸುವುದರೊಂದಿಗೆ ಈ ಪ್ರತ್ಯೇಕತೆಯನ್ನು ರದ್ದುಗೊಳಿಸಲಾಗಿದೆ.

ಟ್ಯಾಕ್ಸ್ ಫೈಲ್ ಮಾಡುವ ದಿನಾಂಕವು ಪ್ರತಿಯೊಬ್ಬ ಟ್ಯಾಕ್ಸ್ ಪೇಯರ್ ಗೆ ಒಂದೇ ಆಗಿರುತ್ತದೆಯೇ?

ಇಲ್ಲ, ಇನ್ಕಮ್ ಟ್ಯಾಕ್ಸ್ ಫೈಲಿಂಗ್ ನ ಅಂತಿಮ ದಿನಾಂಕವು ಬದಲಾಗುತ್ತದೆ. ವೈಯಕ್ತಿಕ ಟ್ಯಾಕ್ಸ್ ಪೇಯರ್ ಗಳಿಗೆ, ಮೌಲ್ಯಮಾಪನ ವರ್ಷದ ಜುಲೈ 31 ರಂದು ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿದೆ.

ಗೃಹಿಣಿಗೆ ಟ್ಯಾಕ್ಸ್ ಪಾವತಿಯಿಂದ ವಿನಾಯಿತಿ ಇದೆಯೇ?

ಗೃಹಿಣಿಯ ಒಟ್ಟು ಆದಾಯವು, ಉಡುಗೊರೆಗಳು ಅಥವಾ ಉಳಿತಾಯ ಖಾತೆಯಿಂದ ಗಳಿಸಿದ ಇಂಟರೆಸ್ಟ್ ನಿಂದ ಹೇಳಲಾದ ಸ್ಲ್ಯಾಬ್ ಅನ್ನು ಮೀರಿದರೆ, ಅವರು ಆಯ್ಕೆಮಾಡಿದ ರೆಜಿಮ್ ಪ್ರಕಾರ ಐಟಿಆರ್ ಅನ್ನು ಫೈಲ್ ಮಾಡಬೇಕು.