ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಹಣಕಾಸು ವರ್ಷ 2022-23 ಮತ್ತು ಹಣಕಾಸು ವರ್ಷ 2023-24ಗೆ ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್‌ಗಳು ಮತ್ತು ವಿನಾಯಿತಿ‌ಗಳು

ಕೇಂದ್ರ ಬಜೆಟ್ 2020 ಸೆಕ್ಷನ್ 115ಬಿಎಸಿ ಅಡಿಯಲ್ಲಿ ಹೊಸ ಟ್ಯಾಕ್ಸ್ ರೆಜಿಮ್ ಅನ್ನು ಪ್ರಸ್ತುತಪಡಿಸಿತು. ಈ ಹೊಸ ಟ್ಯಾಕ್ಸ್ ರೆಜಿಮ್ ಕಡಿಮೆ ಇನ್‌ಕಮ್‌ ಟ್ಯಾಕ್ಸ್‌ ದರಗಳ ಜೊತೆಗೆ ಹೆಚ್ಚಿನ ಟ್ಯಾಕ್ಸ್‌ ಸ್ಲ್ಯಾಬ್‌ಗಳ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಆದಾಗ್ಯೂ, ಕೇಂದ್ರ ಬಜೆಟ್ 2023 ಹೊಸ ರೆಜಿಮ್‌ನಲ್ಲಿ ಕೆಲವು ಬದಲಾವಣೆಗಳನ್ನು ಪ್ರಸ್ತಾಪಿಸಿತು ಮತ್ತು ಹಣಕಾಸು ವರ್ಷ 2023-24ರಿಂದ ಡಿಫಾಲ್ಟ್ ಸ್ಲ್ಯಾಬ್ ಎಂದು ಘೋಷಿಸಿತು. ಟ್ಯಾಕ್ಸ್‌ಪೇಯರ್‌ಗಳು ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ರಿಯಾಯಿತಿ ಟ್ಯಾಕ್ಸ್‌ಗಳನ್ನು ಪಾವತಿಸಲು ಬಯಸಿದರೆ ಹಳೆಯ ಟ್ಯಾಕ್ಸ್ ರೆಜಿಮ್‌ನಲ್ಲಿ ಲಭ್ಯವಿರುವ ಟ್ಯಾಕ್ಸ್‌ ವಿನಾಯಿತಿ‌ಗಳು ಮತ್ತು ಡಿಡಕ್ಷನ್‌ಗಳನ್ನು ತ್ಯಜಿಸಬೇಕಾಗುತ್ತದೆ.

ಮುಂಬರುವ ಸೆಗ್‌ಮೆಂಟ್‌ ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ವ್ಯಕ್ತಿಗಳು ಕ್ಲೈಮ್ ಮಾಡಬಹುದಾದ ಮತ್ತು ಮಾಡಲಾಗದ ಡಿಡಕ್ಷನ್‌ಗಳು ಮತ್ತು ವಿನಾಯಿತಿ‌ಗಳ ಸಾರಾಂಶ ಒದಗಿಸುತ್ತದೆ. ಆದ್ದರಿಂದ, ಆಸಕ್ತ ಓದುಗರು ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸ್ಕ್ರೋಲಿಂಗ್ ಮಾಡಬಹುದು.

ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಅನುಮತಿಸಲಾದ ಟ್ಯಾಕ್ಸ್ ಡಿಡಕ್ಷನ್‌ಗಳು ಮತ್ತು ವಿನಾಯಿತಿ‌ಗಳ ಪಟ್ಟಿ

ಕೇಂದ್ರ ಬಜೆಟ್ 2023ರಲ್ಲಿ ಪ್ರಸ್ತಾಪಿಸಲಾದ ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಪರಿಷ್ಕೃತ ಡಿಡಕ್ಷನ್‌ಗಳು ಮತ್ತು ವಿನಾಯಿತಿ‌ಗಳ ಕೆಳಗಿನ ಪಟ್ಟಿಯನ್ನು ನೋಡಿ, ಅರ್ಹ ಟ್ಯಾಕ್ಸ್‌ಪೇಯರ್‌ಗಳು ತಮ್ಮ ಟ್ಯಾಕ್ಸ್‌ ಲಯಬಿಲಿಟಿಗಳನ್ನು ಕಡಿಮೆ ಮಾಡಲು ಏಪ್ರಿಲ್ 1, 2023ರಿಂದ ಕ್ಲೈಮ್ ಮಾಡಬಹುದಾಗಿದೆ:

ಕೇಂದ್ರ ಬಜೆಟ್ 2023-24ರ ಪ್ರಕಾರ ಟ್ಯಾಕ್ಸ್ ಡಿಡಕ್ಷನ್‌ಗಳು ಮತ್ತು ವಿನಾಯಿತಿ‌ಗಳಿಗೆ ಅನುಮತಿಸಲಾಗಿದೆ.

ಹಣಕಾಸು ವರ್ಷ 2023-24ಗೆ ಪರಿಷ್ಕೃತ ಟ್ಯಾಕ್ಸ್ ರೆಜಿಮ್ ವಿನಾಯಿತಿ‌ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.

ಸ್ಯಾಲರೀಡ್ ವ್ಯಕ್ತಿಗಳಿಗೆ ಮತ್ತು ಪೆನ್ಷನರ್‌ಗಳಿಗೆ

ಅವರು ತಮ್ಮ ಸ್ಯಾಲರಿ/ಪೆನ್ಷನ್ ಇನ್‌ಕಮ್‌ ಮೇಲೆ ಮಾತ್ರ 'ಸ್ಯಾಲರಿಯಿಂದ ಇನ್‌ಕಮ್‌' ಹೆಡ್ ಅಡಿಯಲ್ಲಿ 50,000 ರೂಪಾಯಿಗಳ ಸ್ಟಾಂಡರ್ಡ್ ಡಿಡಕ್ಷನ್ ಕ್ಲೈಮ್ ಮಾಡಬಹುದು. ಕುಟುಂಬ ಪೆನ್ಷನರ್‌ಗಳು ರೂ.15,000ರಷ್ಟು ಸ್ಟಾಂಡರ್ಡ್ ಡಿಡಕ್ಷನ್‌ ಅಥವಾ ಕುಟುಂಬ ಪೆನ್ಷನ್‌ನ 1/3 ಭಾಗ, ಅದರಲ್ಲಿ ಯಾವುದು ಕಡಿಮೆ ಇದೆಯೋ ಅದನ್ನು 'ಇತರ ಮೂಲಗಳಿಂದ ಇನ್‌ಕಮ್‌' ಹೆಡ್ ಅಡಿಯಲ್ಲಿ ಪಡೆಯಬಹುದು.

ಸೆಕ್ಷನ್ 80CCD (2)

ಇನ್‌ಕಮ್‌ ಟ್ಯಾಕ್ಸ್‌ ಕಾಯಿದೆ, 1961ರ ಸೆಕ್ಷನ್ 80CCD (2) ಅಡಿಯಲ್ಲಿ, ಸ್ಯಾಲರೀಡ್ ವ್ಯಕ್ತಿಯು ರೂ.50,000ಗಳ ಸ್ಟಾಂಡರ್ಡ್ ಡಿಡಕ್ಷನ್ ಪ್ರಯೋಜನವನ್ನು ಕ್ಲೈಮ್ ಮಾಡಬಹುದು ಮತ್ತು ಉದ್ಯೋಗಿಯ ಎನ್‌ಪಿಎಸ್‌ ಖಾತೆಗೆ ಉದ್ಯೋಗದಾತರಿಂದ ಎನ್‌ಪಿಎಸ್‌ (ನ್ಯಾಷನಲ್ ಪೆನ್ಷನ್ ಸ್ಕೀಮ್)ಗೆ ಯಾವುದೇ ಕಾಂಟ್ರಿಬ್ಯೂಷನ್. ಆದಾಗ್ಯೂ, ಉದ್ಯೋಗಿಯ ಸ್ವಂತ ಕಾಂಟ್ರಿಬ್ಯೂಷನ್ ಮೇಲೆ ಯಾವುದೇ ಟ್ಯಾಕ್ಸ್ ಪ್ರಯೋಜನಗಳಿಲ್ಲ. ಖಾಸಗಿ ವಲಯದ ಉದ್ಯೋಗಿಗಳು ಕ್ಲೈಮ್ ಮಾಡಬಹುದಾದ ಗರಿಷ್ಠ ಡಿಡಕ್ಷನ್ ಅಮೌಂಟ್ ಅವರ ಸಂಬಳದ 10% ಆಗಿದ್ದರೆ ಸರ್ಕಾರಿ ಉದ್ಯೋಗಿ ತಮ್ಮ ಸಂಬಳದ 14% ಡಿಡಕ್ಷನ್ ಅನ್ನು ಪಡೆಯಬಹುದು.

ಅಗ್ನಿವೀರ್ ಕಾರ್ಪಸ್ ಫಂಡ್

ಇನ್‌ಕಮ್‌ ಟ್ಯಾಕ್ಸ್‌ ಕಾಯಿದೆಯ ಹೊಸದಾಗಿ ಪ್ರಸ್ತಾಪಿಸಲಾದ ಸೆಕ್ಷನ್ 80CCH ಅಡಿಯಲ್ಲಿ ಅಗ್ನಿವೀರ್ ಕಾರ್ಪಸ್ ಫಂಡ್‌ಗೆ ಮಾಡಿದ ಯಾವುದೇ ಕಾಂಟ್ರಿಬ್ಯೂಷನ್ ಅನ್ನು ಡಿಡಕ್ಷನ್ ಎಂದು ಕ್ಲೈಮ್ ಮಾಡಬಹುದು. ಈ ಕಾಂಟ್ರಿಬ್ಯೂಷನ್ ಅನ್ನು ಅಗ್ನಿವೀರ್ ಅಥವಾ ಕೇಂದ್ರ ಸರ್ಕಾರದ ಅಗ್ನಿವೀರ್‌ಗಳ ಸೇವಾ ನಿಧಿ ಖಾತೆಗೆ ನೀಡಬಹುದು.

ಸೆಕ್ಷನ್ 80JJAA

ಸೆಕ್ಷನ್ 80JJAA ಅಡಿಯಲ್ಲಿ, ಹೆಚ್ಚುವರಿ ಉದ್ಯೋಗಿ ವೆಚ್ಚದ 30%ವರೆಗೆ ಡಿಡಕ್ಟಿಬಲ್ ಆಗಿರುತ್ತದೆ.

ಅಸ್ತಿತ್ವದಲ್ಲಿರುವ ಟ್ಯಾಕ್ಸ್ ಡಿಡಕ್ಷನ್‌ಗಳು ಮತ್ತು ವಿನಾಯಿತಿ‌ಗಳನ್ನು ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಅನುಮತಿಸಲಾಗಿದೆ - ಹಣಕಾಸು ವರ್ಷ 2022-23 ಮತ್ತು ಹಣಕಾಸು ವರ್ಷ 2023-24

ಹಣಕಾಸು ವರ್ಷ 2022-23ರಂತೆಯೇ ಹಣಕಾಸು ವರ್ಷ 2023-24ಗೂ ಅದೇ ಅನುಮತಿಸಲಾದ ಡಿಡಕ್ಷನ್‌ಗಳ ಹೊಸ ಟ್ಯಾಕ್ಸ್ ರೆಜಿಮ್ ವಿನಾಯಿತಿ‌ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.

ಹೋಮ್ ಲೋನ್‌ಗಳು

ಬಾಡಿಗೆ ಪ್ರಾಪರ್ಟಿಗಾಗಿ ಎರವಲು ಪಡೆದ ಹೋಮ್‌ ಲೋನ್‌ನ ಇಂಟರೆಸ್ಟ್ ಅಂಶದ ಮೇಲಿನ ಡಿಡಕ್ಷನ್‌.

ಎನ್‌ಪಿಎಸ್‌, ಪಿಪಿಎಫ್‌ ಮತ್ತು ಇಪಿಎಫ್‌

  • ತಮ್ಮ ಉದ್ಯೋಗಿಗಳ ಎನ್‌ಪಿಎಸ್‌ ಮತ್ತು ಇಪಿಎಫ್‌ ಮತ್ತು ನಿವೃತ್ತಿ ಖಾತೆಗಳಿಗೆ ಉದ್ಯೋಗದಾತರ ಕಾಂಟ್ರಿಬ್ಯೂಷನ್‌ಗಳು ಟ್ಯಾಕ್ಸ್ ವಿನಾಯಿತಿ‌ಗೆ ಅಪ್ಲಿಕೇಬಲ್ ಆಗುತ್ತವೆ. ಆದಾಗ್ಯೂ, ಟ್ಯಾಕ್ಸ್ ವಿನಾಯಿತಿ‌ಗೆ ಅರ್ಹತೆ ಪಡೆಯಲು ಎಲ್ಲಾ ಉದ್ಯೋಗಿ ಖಾತೆಗಳಿಗೆ ಆರ್ಥಿಕ ವರ್ಷದಲ್ಲಿ ಮಾಡಿದ ಕಾಂಟ್ರಿಬ್ಯೂಷನ್‌ಗಳು ₹ 7.5 ಲಕ್ಷಕ್ಕಿಂತ ಹೆಚ್ಚಿರಬಾರದು.
  • ತಮ್ಮ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್ ಖಾತೆಯಿಂದ ಇಂಟರೆಸ್ಟ್ ಅನ್ನು ಪಡೆಯುವ ಟ್ಯಾಕ್ಸ್‌ಪೇಯರ್‌ಗಳು ಆ ಇಂಟರೆಸ್ಟ್ ನ ಮೇಲೆ ಟ್ಯಾಕ್ಸ್ ವಿನಾಯಿತಿ‌ಗಳನ್ನು ಪಡೆಯಬಹುದು, ಎರಡನೆಯದು 9.5%ಕ್ಕಿಂತ ಹೆಚ್ಚು ಇಲ್ಲ.
  • ಎನ್‌ಪಿಎಸ್‌ ಖಾತೆಯಿಂದ ಪಡೆದ ಲಂಪ್-ಸಮ್ ಮೆಚ್ಯುರಿಟಿ ಅಮೌಂಟ್ ಟ್ಯಾಕ್ಸ್ ವಿನಾಯಿತಿ‌ಗೆ ಅರ್ಹವಾಗಿದೆ ಮತ್ತು ಟೈರ್ I ಎನ್‌ಪಿಎಸ್‌ ಖಾತೆಯಿಂದ ಭಾಗಶಃ ನಿಧಿಯನ್ನು ವಿತ್‌ಡ್ರಾವಲ್‌ ಮಾಡುವುದು ಟ್ಯಾಕ್ಸ್ ವಿನಾಯಿತಿ‌ ಹೊಂದಿದೆ.
  • ಪಿಪಿಎಫ್ ಖಾತೆಯಿಂದ ಪಡೆದ ಇಂಟರೆಸ್ಟ್ ಅಥವಾ ಮೆಚ್ಯೂರಿಟಿ ಅಮೌಂಟ್ ತೆರಿಗೆ ಟ್ಯಾಕ್ಸ್ ವಿನಾಯಿತಿ‌ಗೆ ಅರ್ಹವಾಗಿದೆ.

ಉಳಿತಾಯ ಸ್ಕೀಮ್‌ಗಳು

  • ಸೆಕ್ಷನ್ 10(15)(i) ಪ್ರಕಾರ, ತಮ್ಮ ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ ಇಂಟರೆಸ್ಟ್ ಅನ್ನು ಪಡೆಯುವ ಟ್ಯಾಕ್ಸ್‌ಪೇಯರ್‌ಗಳು ವೈಯಕ್ತಿಕ ಮತ್ತು ಜಂಟಿ ಖಾತೆಗಳ ಸಂದರ್ಭದಲ್ಲಿ ಕ್ರಮವಾಗಿ ₹3,500 ಮತ್ತು ₹ 7,000ವರೆಗೆ ವಿನಾಯಿತಿ‌ಗಳನ್ನು ಕ್ಲೈಮ್ ಮಾಡಬಹುದು.
  • ಸೆಕ್ಷನ್ 10(10D) ಪ್ರಕಾರ, ಖಾತೆಯ ಮೆಚ್ಯುರಿಟಿ ನಂತರ ಲೈಫ್ ಇನ್ಶೂರೆನ್ಸ್ ಕಂಪನಿಯಿಂದ ಪಡೆದ ಹಣವು ತೆರಿಗೆ ಟ್ಯಾಕ್ಸ್ ವಿನಾಯಿತಿ‌ಗೆ ಅರ್ಹವಾಗಿರುತ್ತದೆ. 
  • ಸುಕನ್ಯಾ ಸಮೃದ್ಧಿ ಖಾತೆಯಿಂದ ಪಡೆದ ಇಂಟರೆಸ್ಟ್ ಗಳು ಮತ್ತು ಮೆಚ್ಯೂರಿಟಿ ಅಮೌಂಟ್‌ಗಳಿಗೆ ಟ್ಯಾಕ್ಸ್ ವಿನಾಯಿತಿ‌ ನೀಡಲಾಗಿದೆ.

ಗ್ರಾಚ್ಯುಟಿ

ತಮ್ಮ ಉದ್ಯೋಗದಾತರಿಂದ ಗ್ರಾಚ್ಯುಟಿ ಪಡೆಯುವ ಸರ್ಕಾರೇತರ ಉದ್ಯೋಗಿಗಳು ಆ ಗ್ರಾಚ್ಯುಟಿ ಮೊತ್ತದಲ್ಲಿ ₹20 ಲಕ್ಷದವರೆಗೆ ವಿನಾಯಿತಿ‌ ಕ್ಲೈಮ್ ಮಾಡಬಹುದು. ಸರ್ಕಾರಿ ನೌಕರರ ವಿಷಯದಲ್ಲಿ, ಅವರು ಪಡೆಯುವ ಸಂಪೂರ್ಣ ಗ್ರಾಚ್ಯುಟಿಗೆ ಟ್ಯಾಕ್ಸ್ ವಿನಾಯಿತಿ‌ ನೀಡಲಾಗುತ್ತದೆ.

ನಿವೃತ್ತಿ

  • ನಿವೃತ್ತಿಯ ಸಮಯದಲ್ಲಿ ರಜೆಗಳ ಎನ್‌ಕ್ಯಾಶ್‌ಮೆಂಟ್‌ ಕೆಲವು ಷರತ್ತುಗಳಿಗೆ ಒಳಪಟ್ಟು ಟ್ಯಾಕ್ಸ್ ವಿನಾಯಿತಿ‌ಗೆ ಅರ್ಹವಾಗಿದೆ.
  • ಷರತ್ತುಗಳಿಗೆ ಪೂರಕವಾಗಿದ್ದರೆ ವಾಲಂಟರಿ ನಿವೃತ್ತಿಯ ಕಾರಣಕ್ಕಾಗಿ ಉದ್ಯೋಗದಾತರಿಂದ ಪಡೆದ ವಿತ್ತೀಯ ಪ್ರಯೋಜನಗಳು ಟ್ಯಾಕ್ಸ್ ವಿನಾಯಿತಿ‌ಗೆ ಅರ್ಹವಾಗಿರುತ್ತವೆ. ಗರಿಷ್ಠ ವಿನಾಯಿತಿ‌ ಲಿಮಿಟ್ ₹5 ಲಕ್ಷದವರೆಗೆ ಇರುತ್ತದೆ.
  • ಎಜುಕೇಷನ್ ವಿದ್ಯಾರ್ಥಿವೇತನಗಳು, ಹಿಂಬಡ್ತಿ ಪರಿಹಾರ ಮತ್ತು ನಿವೃತ್ತಿ ಮತ್ತು ಮರಣದ ವಿತ್ತೀಯ ಪ್ರಯೋಜನಗಳು ಟ್ಯಾಕ್ಸ್ ವಿನಾಯಿತಿ‌ಗೆ ಅರ್ಹತೆ ಪಡೆಯುತ್ತವೆ.

ಉದ್ಯೋಗದಾತರಿಂದ ಅಲೋಯನ್ಸ್‌ಗಳು

  • ಅಂಗವಿಕಲ ಉದ್ಯೋಗಿಗಳಿಗೆ ಒದಗಿಸಲಾದ ಟ್ರಾವೆಲ್ ಅಲೋಯನ್ಸ್‌ಗಳು, ಕನ್ವೇಯನ್ಸ್ ಅಲೋಯನ್ಸ್‌, ಉದ್ಯೋಗಿಯ ಟ್ರಾವೆಲ್ ವೆಚ್ಚ ಅಥವಾ ಟ್ರಾನ್ಸ್‌ಫರ್‌ ಅನ್ನು ಕವರ್‌ ಮಾಡಲು ಒದಗಿಸಲಾದ ಅಲೋಯನ್ಸ್‌ಗಳು, ಪರ್ಕ್ವಿಸೈಟ್‌ಗಳು ಮತ್ತು ದೈನಂದಿನ ಅಲೋಯನ್ಸ್‌ಗಳು ಈ ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಟ್ಯಾಕ್ಸ್ ವಿನಾಯಿತಿ‌ಗೆ ಅರ್ಹವಾಗಿವೆ.
  • ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸಲು ಉದ್ಯೋಗಿಗಳಿಗೆ ಅಲೋಯನ್ಸ್‌ಗಳನ್ನು ಒದಗಿಸುವ ಉದ್ಯೋಗದಾತರಿಗೆ ಟ್ಯಾಕ್ಸ್ ವಿನಾಯಿತಿ‌ ನೀಡಲಾಗುತ್ತದೆ.
  • ಸರ್ಕಾರೇತರ ನೌಕರರು ಕಮ್ಯುಟೆಡ್ ಪೆನ್ಷನ್ ಅನ್ನು ಪಡೆದರೆ, ಉದ್ಯೋಗಿ ಗ್ರಾಚ್ಯುಟಿಯನ್ನು ಸ್ವೀಕರಿಸಿದರೆ ಅದರಲ್ಲಿ 1/3 ಭಾಗವು ಟ್ಯಾಕ್ಸ್ ವಿನಾಯಿತಿ‌ಗೆ ಅರ್ಹತೆ ಪಡೆಯುತ್ತದೆ. ಉದ್ಯೋಗಿಗಳು ಗ್ರಾಚ್ಯುಟಿಯನ್ನು ಪಡೆಯದಿದ್ದರೆ, ನಂತರ ½ ಕಮ್ಯುಟೆಡ್ ಪೆನ್ಷನ್‌ಗಳಿಗೆ ಟ್ಯಾಕ್ಸ್ ವಿನಾಯಿತಿ‌ ನೀಡಲಾಗುತ್ತದೆ.
  • ಉದ್ಯೋಗದಾತರಿಂದ ಪಡೆದ ಉಡುಗೊರೆಗಳು, ₹5,000 ಮೀರದಿದ್ದರೆ ಟ್ಯಾಕ್ಸ್ ವಿನಾಯಿತಿ‌ಗೆ ಅರ್ಹವಾಗಿದೆ.

ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಅನುಮತಿಸಲಾಗದ ಟ್ಯಾಕ್ಸ್ ಡಿಡಕ್ಷನ್‌ಗಳು ಮತ್ತು ವಿನಾಯಿತಿ‌ಗಳ ಪಟ್ಟಿ

ಕೇಂದ್ರ ಬಜೆಟ್ 2023ರಲ್ಲಿ ಪ್ರಸ್ತಾಪಿಸಲಾದ ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಪರಿಷ್ಕೃತ ಡಿಡಕ್ಷನ್‌ಗಳು ಮತ್ತು ವಿನಾಯಿತಿ‌ಗಳ ಕೆಳಗಿನ ಪಟ್ಟಿಯನ್ನು ನೋಡಿ, ಅದರಂತೆ ಅರ್ಹ ಟ್ಯಾಕ್ಸ್‌ಪೇಯರ್‌ಗಳು ಏಪ್ರಿಲ್ 1, 2023ರಿಂದ ಕ್ಲೈಮ್ ಮಾಡಲು ಸಾಧ್ಯವಿಲ್ಲ.

ಕೇಂದ್ರ ಬಜೆಟ್ 2023-24ರ ಪ್ರಕಾರ ಟ್ಯಾಕ್ಸ್ ಡಿಡಕ್ಷನ್‌ಗಳು ಮತ್ತು ವಿನಾಯಿತಿ‌ಗಳನ್ನು ಅನುಮತಿಸಲಾಗುವುದಿಲ್ಲ

ಕೇಂದ್ರ ಬಜೆಟ್ 2023ರಲ್ಲಿ ವೈಯಕ್ತಿಕ ಟ್ಯಾಕ್ಸ್‌ಪೇಯರ್‌ಗಳಿಗೆ ಹೊಸ ಟ್ಯಾಕ್ಸ್ ರೆಜಿಮ್‌ನಿಂದ 70 ವಿನಾಯಿತಿ‌ಗಳು ಮತ್ತು ಡಿಡಕ್ಷನ್‌ಗಳನ್ನು ತೆಗೆದುಹಾಕಲಾಗಿದೆ. ಟ್ಯಾಕ್ಸ್‌ಪೇಯರ್‌ಗಳು ಕ್ಲೈಮ್ ಮಾಡಲಾಗದ ಕೆಲವು ವಿಚಾರಗಳ ಪರಿಷ್ಕೃತ ಪಟ್ಟಿಗಳು ಇಲ್ಲಿದೆ.

ಹೋಮ್ ಲೋನ್‌ಗಳು

ಸೆಕ್ಷನ್ 80C ಮತ್ತು 80EE/ 80EEA ಅಡಿಯಲ್ಲಿ ರೂ.1.5 ಲಕ್ಷ ವರೆಗಿನ ಹೋಮ್ ಲೋನ್‌ ಮೇಲಿನ ಇಂಟರೆಸ್ಟ್ ಮತ್ತು ಅಸಲು ಅಮೌಂಟ್ ಪೇಮೆಂಟ್ ಮೇಲೆ ಡಿಡಕ್ಷನ್‌.

ಸೆಕ್ಷನ್ 80C

ಸೆಕ್ಷನ್ 80C ಅಡಿಯಲ್ಲಿ ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್, ಲೈಫ್ ಇನ್ಶೂರೆನ್ಸ್ ಪ್ರೀಮಿಯಂ ಮತ್ತು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಡಿಯಲ್ಲಿ ಮಾಡಿದ ಇನ್‌ವೆಸ್ಟ್‌ಮೆಂಟ್‌ಗಳು.

ಸೆಕ್ಷನ್ 80E

ಸೆಕ್ಷನ್ 80E ಅಡಿಯಲ್ಲಿ ವಿದ್ಯಾರ್ಥಿ ಸಾಲದ ಮೇಲೆ ಪಾವತಿಸಿದ ಇಂಟರೆಸ್ಟ್ ಅನ್ನು ಇನ್ನು ಮುಂದೆ ತೆರಿಗೆ ಪರಿಹಾರಕ್ಕಾಗಿ ಕ್ಲೈಮ್ ಮಾಡಲಾಗುವುದಿಲ್ಲ.

ಚಾರಿಟಿ

  • ವೈಜ್ಞಾನಿಕ ಸಂಶೋಧನೆಗೆ ನೀಡಿದ ದೇಣಿಗೆ ಅಥವಾ ವೆಚ್ಚಗಳು ಡಿಡಕ್ಟಿಬಲ್ ಅಲ್ಲ.
  • ನ್ಯಾಷನಲ್ ಡಿಫೆನ್ಸ್ ಫಂಡ್, ಪ್ರಧಾನ ಮಂತ್ರಿಗಳ ನ್ಯಾಷನಲ್ ರಿಲೀಫ್ ಫಂಡ್, ಕೋಮು ಸೌಹಾರ್ದತೆಗಾಗಿನ ನ್ಯಾಷನಲ್ ಫೌಂಡೇಷನ್, ನ್ಯಾಷನಲ್/ ಸ್ಟೇಟ್ ಬ್ಲಡ್ ಟ್ರಾನ್ಸ್‌ಫ್ಯುಷನ್ ಕೌನ್ಸಿಲ್ ಒಳಗೊಂಡಂತೆ ಸೆಕ್ಷನ್ 80G ಅಡಿಯಲ್ಲಿನ ಡಿಡಕ್ಷನ್‌ಗಳು.

ಅಸ್ತಿತ್ವದಲ್ಲಿರುವ ಟ್ಯಾಕ್ಸ್ ಡಿಡಕ್ಷನ್‌ಗಳು ಮತ್ತು ವಿನಾಯಿತಿ‌ಗಳನ್ನು ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಅನುಮತಿಸಲಾಗುವುದಿಲ್ಲ- ಹಣಕಾಸು ವರ್ಷ 2022-23 ಮತ್ತು ಹಣಕಾಸು ವರ್ಷ 2023-24

ನೀಡಲಾದ ಪಟ್ಟಿಯು 2023-24ರ ಆರ್ಥಿಕ ವರ್ಷಕ್ಕೆ ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಅನುಮತಿಸದ ಟ್ಯಾಕ್ಸ್ ಡಿಡಕ್ಷನ್‌ ಮತ್ತು ವಿನಾಯಿತಿ‌ಗಳನ್ನು ಒಳಗೊಂಡಿದೆ, ಅದು ಆರ್ಥಿಕ ವರ್ಷ 2022-23ರಂತೆಯೇ ಇರುತ್ತದೆ.

ಸ್ಯಾಲರಿ ಡಿಡಕ್ಷನ್‌ಗಳು

  • ಬಾಡಿಗೆ ಪಾವತಿ ಮತ್ತು ಸ್ಯಾಲರಿ ರಚನೆಯ ಆಧಾರದ ಮೇಲೆ ಹೌಸ್ ರೆಂಟ್ ಅಲೋಯನ್ಸ್.
  • ಪ್ರೊಫೆಷನಲ್ ಟ್ಯಾಕ್ಸ್ ₹ 2,500.
  • ಲೀವ್ ಟ್ರಾವೆಲ್ ಅಲೋಯನ್ಸ್.
  • ಪ್ರೊಫೆಷನಲ್ ಟ್ಯಾಕ್ಸ್ ಮತ್ತು ಎಂಟರ್‌ಟೇನ್‌ಮೆಂಟ್‌ ಅಲೋಯನ್ಸ್‌ ಮೇಲಿನ ಡಿಡಕ್ಷನ್‌ಗಳು (ಸರ್ಕಾರಿ ನೌಕರರಿಗೆ ಅಪ್ಲಿಕೇಬಲ್ ಆಗುತ್ತದೆ).

ಸೇವಿಂಗ್ಸ್ ಅಕೌಂಟ್

  • ಸೆಕ್ಷನ್ 80TTA ಮತ್ತು 80TTB ಅಡಿಯಲ್ಲಿ ಸೇವಿಂಗ್ಸ್ ಅಕೌಂಟ್‌ನಿಂದ ಪಡೆದ ಇಂಟರೆಸ್ಟ್ , (ಸೀನಿಯರ್ ಸಿಟಿಗಳ ಡೆಪಾಸಿಟ್‌ಗಳ ಮೇಲಿನ ಇಂಟರೆಸ್ಟ್ ಗೆ ಟ್ಯಾಕ್ಸ್ ವಿಧಿಸಲಾಗುತ್ತದೆ.
  • ಸೆಕ್ಷನ್ 10(14)ರ ಅಡಿಯಲ್ಲಿ ವಿಶೇಷ ಅಲೋಯನ್ಸ್‌ಗಳು.
  • ಸ್ಪೆಷಲ್ ಎಕಾನಾಮಿಕ್ ಝೋನ್‌ನಲ್ಲಿನ ಬಿಸಿನೆಸ್ ಪ್ರೊಫೆಷನಲ್‌ಗಳು ಮತ್ತು ಮಾಲೀಕರು ಸೆಕ್ಷನ್ 10 AA ಅಡಿಯಲ್ಲಿ ಟ್ಯಾಕ್ಸ್ ವಿನಾಯಿತಿ‌ ಕ್ಲೈಮ್ ಮಾಡಲು ಸಾಧ್ಯವಿಲ್ಲ.

ಹೋಮ್ ಲೋನ್‌ಗಳು

  • ಸೆಕ್ಷನ್ 24(b) ಅಡಿಯಲ್ಲಿ ಸ್ವಯಂ-ಆಕ್ರಮಿತ/ ಖಾಲಿ ಪ್ರಾಪರ್ಟಿಗೆ ಹೋಮ್ ಲೋನ್‌ನ ಇಂಟರೆಸ್ಟ್ ಪೇಮೆಂಟ್‌ನಲ್ಲಿ ಡಿಡಕ್ಷನ್‌.
  • ಸೆಕ್ಷನ್ 24 (b) ಅಡಿಯಲ್ಲಿ ಮನೆ ಪ್ರಾಪರ್ಟಿ ಖರೀದಿ/ನಿರ್ಮಾಣ/ದುರಸ್ತಿ/ಪುನರ್ನಿರ್ಮಾಣಕ್ಕಾಗಿ ರೂ.2,00,000ವರೆಗಿನ ಇಂಟರೆಸ್ಟ್ ಪೇಮೆಂಟ್‌ನಲ್ಲಿ ಡಿಡಕ್ಷನ್‌.

ಇತರ ಅಲೋಯನ್ಸ್‌ಗಳು

  • ಐಟಿ ಕಾಯ್ದೆಯ ಸೆಕ್ಷನ್ 35(1)(ii), 35(2AA), 32AD, 33AB, 35(1)iii), 33ABA, 35(1)(ii), 35CCC(a) ಮತ್ತು 35AD ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್‌.
  • ಸೆಕ್ಷನ್ 32(ii) (a) ಅಡಿಯಲ್ಲಿ ನಿರ್ದಿಷ್ಟ ಪಡಿಸಿದ ಹೆಚ್ಚುವರಿ ಡೆಪ್ರಿಸಿಯೇಷನ್.
  • ಕಳೆದ ವರ್ಷಗಳ ಬಳಕೆಯಾಗಿಲ್ಲದ ಡೆಪ್ರಿಸಿಯೇಷನ್ ಅನ್ನು ಅಡ್ಜಸ್ಟ್ ಮಾಡುವ ಆಯ್ಕೆ.
  • ಅಧ್ಯಾಯ VI-ಎಯಲ್ಲಿರುವ 80IA, 80CCC, 80C, 80CCD, 80D, 80CCG, 80DDB, 80EE, 80E, 80EEA, 80DD, 80EEB, 80GG, 80IB, 80IAC, ಮತ್ತು 80IAB ಅಡಿಯಲ್ಲಿ ನಿರ್ದಿಷ್ಟಪಡಿಸಿದ ಡಿಡಕ್ಷನ್‌ಗಳು. 
  • ಮೈನರ್ ಮಕ್ಕಳು, ಹೆಲ್ಪರ್ ಅಲೋಯನ್ಸ್‌ಗಳು ಮತ್ತು ಮಕ್ಕಳ ಎಜುಕೇಷನ್‌ಗೆ ಅಲೋಯನ್ಸ್‌ಗಳು.

[ಮೂಲ]

ಹಣಕಾಸು ವರ್ಷ 2022-23 ಮತ್ತು ಹಣಕಾಸು ವರ್ಷ 2023-24ಗೆ ಹೊಸ ಟ್ಯಾಕ್ಸ್ ರೆಜಿಮ್‌ಗೆ ಲಭ್ಯವಿರುವ ವಿನಾಯಿತಿ‌ಗಳು ಮತ್ತು ಡಿಡಕ್ಷನ್‌ಗಳ ಹೋಲಿಕೆ

2022-23 ಮತ್ತು 2023-24ರ ಆರ್ಥಿಕ ವರ್ಷಗಳು ಮತ್ತು ಟ್ಯಾಕ್ಸ್ ರೆಜಿಮ್‌ಗಳ ಅಡಿಯಲ್ಲಿ ಲಭ್ಯವಿರುವ ಎಲ್ಲಾ ಸಾಮಾನ್ಯ ವಿನಾಯಿತಿ‌ಗಳು ಮತ್ತು ಡಿಡಕ್ಷನ್‌ಗಳ ಒಟ್ಟಾರೆ ಐಡಿಯಾವನ್ನು ಪಡೆಯಲು ಟ್ಯಾಕ್ಸ್‌ಪೇಯರ್‌ಗಳು ಈ ಕೆಳಗಿನ ಕೋಷ್ಟಕವನ್ನು ನೋಡಬಹುದು.

ವಿವರಗಳು ಹಣಕಾಸು ವರ್ಷ 2022-23 ಕ್ಕಾಗಿ ಹೊಸ ಟ್ಯಾಕ್ಸ್ ರೆಜಿಮ್
ಹಣಕಾಸು ವರ್ಷ 2023-24 ಕ್ಕಾಗಿ ಹೊಸ ಟ್ಯಾಕ್ಸ್ ರೆಜಿಮ್
ಇನ್‌ಕಮ್‌ ಲೆವೆಲ್‌ವರೆಗೆ ರಿಬೇಟ್‌ ಅರ್ಹತೆ ₹ 5,00,000 ₹ 7,00,000
ಸ್ಟಾಂಡರ್ಡ್ ಡಿಡಕ್ಷನ್
ಇಲ್ಲ ₹ 50,000
ಪರಿಣಾಮಕಾರಿ ಟ್ಯಾಕ್ಸ್ ಫ್ರೀ ಸ್ಯಾಲರಿ ಇನ್‌ಕಮ್‌ ₹ 5,00,000 ₹ 7,50,000
87A ಅಡಿಯಲ್ಲಿ ರಿಬೇಟ್
₹12,500 ₹25,000
80CCH ಅಡಿಯಲ್ಲಿ ಅಗ್ನಿವೀರ್ ಕಾರ್ಪಸ್ ಫಂಡ್‌ಗೆ ನೀಡಿದ ಎಲ್ಲಾ ಕಾಂಟ್ರಿಬ್ಯೂಷನ್‌ಗಳು ಅಸ್ತಿತ್ವದಲ್ಲಿಲ್ಲ ಹೌದು
ಎಚ್‌ಆರ್‌ಎ ವಿನಾಯಿತಿ‌ ಇಲ್ಲ ಇಲ್ಲ
ಲೀವ್ ಟ್ರಾವೆಲ್ ಅಲೋಯನ್ಸ್ (ಎಲ್‌ಟಿಎ) ಇಲ್ಲ ಇಲ್ಲ
ಹೆಚ್ಚುವರಿ ಎಂಪ್ಲಾಯೀ ವೆಚ್ಚದ 30% (ಸೆಕ್ಷನ್ 80JJAA ಅಡಿಯಲ್ಲಿ) ಇಲ್ಲ ಹೌದು
ದಿನಕ್ಕೆ 2 ಊಟಕ್ಕೆ ಒಳಪಟ್ಟು ಊಟಕ್ಕೆ ರೂ.50ರ ಫುಡ್ ಅಲೋಯನ್ಸ್ ಒಳಗೊಂಡಂತೆ ಇತರ ಅಲೋಯನ್ಸ್‌ಗಳು ಇಲ್ಲ ಇಲ್ಲ
ಎಂಟರ್‌ಟೇನ್‌ಮೆಂಟ್‌ ಅಲೋಯನ್ಸ್‌ ಡಿಡಕ್ಷನ್‌ ಮತ್ತು ಪ್ರೊಫೆಷನಲ್ ಟ್ಯಾಕ್ಸ್ ಇಲ್ಲ ಇಲ್ಲ
ಅಫೀಷಿಯಲ್ ಉದ್ದೇಶಗಳಿಗಾಗಿ ಪರ್ಕ್ವಿಸೈಟ್‌ಗಳು ಹೌದು ಹೌದು
ಸ್ವಯಂ-ಆಕ್ರಮಿತ ಅಥವಾ ಖಾಲಿ ಪ್ರಾಪರ್ಟಿಯ ಮೇಲೆ 24ಬಿ ಅಡಿಯಲ್ಲಿ ಹೋಮ್ ಲೋನ್ ಮೇಲಿನ ಇಂಟರೆಸ್ಟ್ ಇಲ್ಲ ಇಲ್ಲ
ಬಾಡಿಗೆಗೆ ನೀಡಿದ ಪ್ರಾಪರ್ಟಿ ಮೇಲೆ 24B ಅಡಿಯಲ್ಲಿ ಹೋಮ್ ಲೋನ್ ಮೇಲಿನ ಇಂಟರೆಸ್ಟ್ ಹೌದು ಹೌದು
80C ಅಡಿಯಲ್ಲಿ ಡಿಡಕ್ಷನ್‌ (ಇಪಿಎಫ್, ಎಲ್ಐಸಿ, ಇಎಲ್ಎಸ್ಎಸ್, ಪಿಪಿಎಫ್, ಎಫ್‌ಡಿ, ಮಕ್ಕಳ ಬೋಧನಾ ಶುಲ್ಕ, ಇತ್ಯಾದಿ.) ಇಲ್ಲ ಇಲ್ಲ
ಎನ್‌ಪಿಎಸ್‌ಗೆ ಉದ್ಯೋಗಿಯ (ಸ್ವಂತ) ಕಾಂಟ್ರಿಬ್ಯೂಷನ್‌ ಇಲ್ಲ ಇಲ್ಲ
ಎನ್‌ಪಿಎಸ್‌ಗೆ ಉದ್ಯೋಗದಾತರ ಕಾಂಟ್ರಿಬ್ಯೂಷನ್‌ ಹೌದು ಹೌದು
ಮೆಡಿಕಲ್ ಇನ್ಶೂರೆನ್ಸ್ ಪ್ರೀಮಿಯಂ - 80D ಇಲ್ಲ ಇಲ್ಲ
ಅಂಗವಿಕಲ ವ್ಯಕ್ತಿ - 80U ಇಲ್ಲ ಇಲ್ಲ
ಎಜುಕೇಷನ್ ಲೋನ್ ಮೇಲೆ ಇಂಟರೆಸ್ಟ್ - 80E ಇಲ್ಲ ಇಲ್ಲ
ಎಲೆಕ್ಟ್ರಿಕ್ ವೆಹಿಕಲ್ ಲೋನ್ ಮೇಲೆ ಇಂಟರೆಸ್ಟ್ - 80EEB ಇಲ್ಲ ಇಲ್ಲ
ರಾಜಕೀಯ ಪಕ್ಷ/ ಟ್ರಸ್ಟ್‌ ಇತ್ಯಾದಿಗೆ ದೇಣಿಗೆ. - 80G ಇಲ್ಲ ಇಲ್ಲ
80TTA ಮತ್ತು 80TTB ಅಡಿಯಲ್ಲಿ ಸೇವಿಂಗ್ಸ್ ಬ್ಯಾಂಕ್ ಇಂಟರೆಸ್ಟ್ ಇಲ್ಲ ಇಲ್ಲ
ಇತರ ಅಧ್ಯಾಯ VI-A ಡಿಡಕ್ಷನ್‌ಗಳು ಇಲ್ಲ ಇಲ್ಲ
ಕುಟುಂಬ ಪೆನ್ಷನ್ ಇನ್‌ಕಮ್‌ ಮೇಲೆ ಡಿಡಕ್ಷನ್‌ ಹೌದು ಹೌದು
ರೂ.5,000ವರೆಗಿನ ಉಡುಗೊರೆಗಳು ಹೌದು ಹೌದು
ಸ್ವಯಂ ನಿವೃತ್ತಿ ಮೇಲೆ ವಿನಾಯಿತಿ‌ 10(10C) ಹೌದು ಹೌದು
10(10)ರ ಅಡಿಯಲ್ಲಿ ಗ್ರಾಚ್ಯುಟಿ ಮೇಲಿನ ವಿನಾಯಿತಿ‌ ಹೌದು ಹೌದು
10(10AA) ಅಡಿಯಲ್ಲಿ ಲೀವ್ ಎನ್‌ಕ್ಯಾಶ್‌ಮೆಂಟ್‌ ಮೇಲಿನ ವಿನಾಯಿತಿ‌ ಹೌದು ಹೌದು
ದೈನಂದಿನ ಅಲೋಯನ್ಸ್ ಹೌದು ಹೌದು
ವಿಶೇಷ ಚೇತನ ವ್ಯಕ್ತಿಗೆ ಸಾರಿಗೆ ಅಲೋಯನ್ಸ್ ಹೌದು ಹೌದು
ಕನ್ವೇಯನ್ಸ್ ಅಲೋಯನ್ಸ್ ಹೌದು ಹೌದು

ಪದೇ ಪದೇ ಕೇಳಲಾದ ಪ್ರಶ್ನೆಗಳು

ಕೃಷಿಯಿಂದ ಬರುವ ಇನ್‌ಕಮ್‌ ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಟ್ಯಾಕ್ಸ್ ವಿನಾಯಿತಿ‌ಗೆ ಅರ್ಹವಾಗಿದೆಯೇ?

ಹೌದು, ಕೃಷಿಯಿಂದ ಬರುವ ಇನ್‌ಕಮ್‌ ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಟ್ಯಾಕ್ಸ್ ವಿನಾಯಿತಿ‌ಗೆ ಅರ್ಹವಾಗಿದೆ.

[ಮೂಲ]

ಸೆಕ್ಷನ್ 87A ಅಡಿಯಲ್ಲಿನ ರಿಬೇಟ್‌ಗಳು ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಟ್ಯಾಕ್ಸ್ ವಿನಾಯಿತಿ‌ಗೆ ಅರ್ಹವಾಗಿವೆಯೇ?

ಹೊಸ ಟ್ಯಾಕ್ಸ್ ರೆಜಿಮ್ ನಿರ್ದಿಷ್ಟ ಟ್ಯಾಕ್ಸ್ ಡಿಡಕ್ಷನ್‌ ಮತ್ತು ವಿನಾಯಿತಿ‌ಗಳನ್ನು ತೆಗೆದುಹಾಕುವತ್ತ ಗಮನ ಹರಿಸುತ್ತದೆ. ಆದ್ದರಿಂದ, ಟ್ಯಾಕ್ಸ್‌ಪೇಯರ್‌ಗಳು ಹೊಸ ಅಥವಾ ಹಳೆಯ ಟ್ಯಾಕ್ಸ್ ರೆಜಿಮ್ ಅನ್ನು ಆರಿಸಿಕೊಂಡರೂ ಸೆಕ್ಷನ್ 87A ಅಡಿಯಲ್ಲಿ ರಿಬೇಟ್ ಕ್ಲೈಮ್ ಮಾಡಬಹುದು.

[ಮೂಲ]