ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 154: ವೈಶಿಷ್ಟ್ಯಗಳು ಮತ್ತು ತಿದ್ದುಪಡಿ ಪ್ರಕ್ರಿಯೆ

ಭಾರತದಲ್ಲಿ, ಟ್ಯಾಕ್ಸ್ ಪೇಯರ್‌ಗಳು ತಮ್ಮ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಅನ್ನು ಫೈಲ್ ಮಾಡುವಾಗ ತಪ್ಪುಗಳನ್ನು ಮಾಡಬಹುದು. ಮೌಲ್ಯಮಾಪನದ ಸಮಯದಲ್ಲಿ, ಸಂಬಂಧಪಟ್ಟ ಅಥಾರಿಟಿಯು ದಾಖಲೆಗಳಿಂದ ಅಂತಹ ತಪ್ಪುಗಳನ್ನು ಎತ್ತಿ ತೋರಿಸುತ್ತದೆ. 1961 ರ ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 154 ರ ಅಡಿಯಲ್ಲಿ ಟ್ಯಾಕ್ಸ್ ಪೇಯರ್‌ಗಳು ಈ ದೋಷಗಳನ್ನು ಸರಿಪಡಿಸಬಹುದು.

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 154 ಎಂದರೇನು?

ಕೆಲವೊಮ್ಮೆ ಮೌಲ್ಯಮಾಪನ ಅಧಿಕಾರಿ ಹೊರಡಿಸಿದ ಯಾವುದೇ ಆರ್ಡರ್‌ನಲ್ಲಿ ತಪ್ಪು ಇರಬಹುದು. ಅಂತಹ ಪರಿಸ್ಥಿತಿಯಲ್ಲಿ, ದಾಖಲೆಯಿಂದ ಗೊತ್ತಾಗುವ ತಪ್ಪುಗಳನ್ನು ಸೆಕ್ಷನ್ 154 ರ ಅಡಿಯಲ್ಲಿ ಸರಿಪಡಿಸಬಹುದು. ಸೆಕ್ಷನ್ 154 ರ ಅಡಿಯಲ್ಲಿ, ತಪ್ಪುಗಳನ್ನು ಸರಿಪಡಿಸಲು ಸಂಬಂಧಿಸಿದ ಪ್ರಾವಿಷನ್‌ಗಳನ್ನು ಈ ಆರ್ಟಿಕಲ್‌ನಲ್ಲಿ ಚರ್ಚಿಸಲಾಗಿದೆ.

[ಮೂಲ]

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 154 ರ ವೈಶಿಷ್ಟ್ಯಗಳು ಯಾವುವು?

 

ಈ ಸೆಕ್ಷನ್‌ನ ಕೆಲವು ಮುಖ್ಯ ಅಂಶಗಳನ್ನು ಕೆಳಗೆ ನೀಡಲಾಗಿದೆ.

  • ವ್ಯತ್ಯಾಸಗಳನ್ನು, ತಪ್ಪುಗಳನ್ನು ತಪ್ಪಿಸಲು ನಿಖರವಾದ ಮಾಹಿತಿಯ ಬಗ್ಗೆ ಆರ್ಡರ್ ನೀಡಲು ಐಟಿ ಡಿಪಾರ್ಟ್‌ಮೆಂಟ್ ಹೊಣೆಯಾಗಿದೆ.

  • ಟ್ಯಾಕ್ಸ್ ಮೊತ್ತವನ್ನು ಹೆಚ್ಚಿಸುವ ಅಥವಾ ಮೌಲ್ಯಮಾಪಕರಿಗೆ ಕಡಿಮೆ ವಿನಾಯಿತಿ ನೀಡುವಂತಹ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು, ರಿಜಿಸ್ಟರ್ಡ್ ಐಡಿ ಅಥವಾ ರಿಜಿಸ್ಟರ್ಡ್ ರೆಸಿಡೆನ್ಸಿಯಲ್ ಅಡ್ರೆಸ್‌ಗೆ, ಪತ್ರದಲ್ಲಿ ಇಮೇಲ್ ಕಳುಹಿಸುವುದು ಐಟಿ ಡಿಪಾರ್ಟ್‌ಮೆಂಟ್‌ಗೆ ಕಡ್ಡಾಯವಾಗಿದೆ.

  • ಪಾವತಿಸಬೇಕಾದ ಟ್ಯಾಕ್ಸ್‌ನ ಸೇರ್ಪಡೆ ಅಥವಾ ವಿನಾಯಿತಿ ಮೊತ್ತದಲ್ಲಿನ ಡಿಡಕ್ಷನ್‌ಗಳಿಗೆ ಸಂಬಂಧಿಸಿದಂತೆ ಸೆಕ್ಷನ್ 154 ರ ಅಡಿಯಲ್ಲಿ ತೆಗೆದುಕೊಳ್ಳಲಾದ ಯಾವುದೇ ಕ್ರಮದ ಬಗ್ಗೆ ಟ್ಯಾಕ್ಸ್ ಪೇಯರ್‌ಗಳಿಗೆ ತಿಳಿಸಲು, ಐಟಿ ಡಿಪಾರ್ಟ್‌ಮೆಂಟ್‌ ಲಯಬಲ್ ಆಗಿರುತ್ತದೆ. ಅಲ್ಲದೆ, ಐಟಿ ಡಿಪಾರ್ಟ್‌ಮೆಂಟ್‌ಗೆ, ಟ್ಯಾಕ್ಸ್ ಪೇಯರ್‌ಗಳಿಗೆ ಅಂತಹ ದೋಷಗಳನ್ನು ವಿವರಿಸಲು ಅವಕಾಶ ನೀಡಬೇಕು.

  • ಹೆಚ್ಚುವರಿ ಫಂಡ್ಸ್ ಅನ್ನು ಟ್ಯಾಕ್ಸ್ ಪೇಯರ್‌ಗಳ ಅಕೌಂಟ್‌ಗೆ ಕ್ರೆಡಿಟ್ ಮಾಡಿದರೆ, ಅದನ್ನು ಸೆಕ್ಷನ್ 154 ರ ಅಡಿಯಲ್ಲಿ ಪರಿಗಣಿಸಲಾಗುತ್ತದೆ. 

  • ಟ್ಯಾಕ್ಸ್ ಪೇಯರ್‌ಗಳು ಹೆಚ್ಚುವರಿ ರಿಫಂಡ್ ಅನ್ನು ಐಟಿ ಡಿಪಾರ್ಟ್‌ಮೆಂಟ್‌ಗೆ ಹಿಂತಿರುಗಿಸಬೇಕು.

  • ಅಪ್ಲಿಕೇಶನ್ ಅನ್ನು ಸ್ವೀಕರಿಸಿದ ತಿಂಗಳ ಕೊನೆಯಿಂದ 6 ತಿಂಗಳೊಳಗೆ ಮೌಲ್ಯಮಾಪಕರು ಮಾಡಿದ ಅಪ್ಲಿಕೇಶನ್‌ಗಳನ್ನು ಐಟಿ ಡಿಪಾರ್ಟ್‌ಮೆಂಟ್‌ ಡಿಸ್‌ಪೋಸ್ ಮಾಡಬೇಕು.

  • ಸುಯೋ ಮೋಟೋ ಆಧಾರದ ಅಡಿಯಲ್ಲಿ, ಸೆಕ್ಷನ್ 154 ರ ಅಡಿಯಲ್ಲಿ ತಿದ್ದುಪಡಿಗಾಗಿ ಟೈಮ್ ಲಿಮಿಟ್ ಎನ್ನುವುದು ಆರ್ಡರ್ ಅನ್ನು ಪಾಸ್ ಮಾಡಿದ ಹಣಕಾಸು ವರ್ಷದ ಕೊನೆಯಿಂದ 4 ವರ್ಷಗಳವರೆಗೆ ಇರುತ್ತದೆ.

  • ಐಟಿ ಕಮಿಷನರ್, ಆರ್ಡರ್ ಅನ್ನು ಪಾಸ್ ಮಾಡಿದರೆ ದೋಷಗಳನ್ನು 2 ರೀತಿಯಲ್ಲಿ ಸರಿಪಡಿಸಲು ಅವನು/ಅವಳು ಅಧಿಕಾರ ಹೊಂದಿರುತ್ತಾರೆ-

    • ಅವನ ಅಥವಾ ಅವಳ ಸ್ವಂತ ಪ್ರಸ್ತಾಪದ ಮೇಲೆ

    • ಟ್ಯಾಕ್ಸ್ ಪೇಯರ್‌ಗಳು ಮಾಡಿದ ಅಪ್ಲಿಕೇಶನ್

ಅದೇನೇ ಇದ್ದರೂ, ಇನ್ಕಮ್ ಟ್ಯಾಕ್ಸ್, 1961 ರ ಸೆಕ್ಷನ್ 154 ರ ಅಡಿಯಲ್ಲಿ ಟ್ಯಾಕ್ಸ್ ಪೇಯರ್‌ಗಳು ಸರಿಪಡಿಸಬಹುದಾದ ದೋಷಗಳ ಪಟ್ಟಿ ಲಿಮಿಟೆಡ್ ಆಗಿದೆ.

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 154 ರ ಅಡಿಯಲ್ಲಿ ತಿದ್ದುಪಡಿಯನ್ನು ಫೈಲ್ ಮಾಡಲು ಯಾರು ಅರ್ಹರು?

143(1) ರ ಅಡಿಯಲ್ಲಿ ಸಿಪಿಸಿ ಯಿಂದ ಆರ್ಡರ್ ಅಥವಾ ನೋಟಿಸ್ ಅನ್ನು ಸ್ವೀಕರಿಸಿದ ನಂತರ, ಕೆಳಗಿನ ಪಾರ್ಟಿಗಳು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ತಿದ್ದುಪಡಿ ರಿಕ್ವೆಸ್ಟ್‌ಗಳನ್ನು ಫೈಲ್ ಮಾಡಬಹುದು.

  • ರಿಜಿಸ್ಟರ್ಡ್ ಟ್ಯಾಕ್ಸ್ ಪೇಯರ್‌ಗಳು

  • ಇ.ಆರ್.ಐ ಗಳು (ಕ್ಲೈಂಟ್ ಪ್ಯಾನ್ ಅನ್ನು ಒಳಗೊಂಡಿರುವವರು ಮಾತ್ರ)

  • ಅಧಿಕೃತ ಪ್ರತಿನಿಧಿಗಳು ಮತ್ತು ಸಹಿ ಮಾಡಿದವರು

ಹೆಚ್ಚುವರಿಯಾಗಿ, ಇನ್ಕಮ್ ಟ್ಯಾಕ್ಸ್ ಅಥಾರಿಟಿಯು ಈ ಕೆಳಗಿನ ದೋಷಗಳ ವಿರುದ್ಧ ಸರಿಪಡಿಸಲು ಮಾತ್ರ ಅನುಮತಿಸುತ್ತದೆ.

  • ಅಸ್ಪಷ್ಟ ಮಾಹಿತಿ

  • ತಪ್ಪು ಮಾಹಿತಿ

  • ಅಂಕಗಣಿತದ ದೋಷಗಳು

  • ಟ್ಯಾಕ್ಸ್‌ಗಳಲ್ಲಿನ ವ್ಯತ್ಯಾಸಗಳು

  • ಟ್ಯಾಕ್ಸ್ ಕ್ರೆಡಿಟ್‌ಗಳಲ್ಲಿನ ನಿರಾಕರಣೆ/ವಿರೋಧ

  • ತಪ್ಪು ಲಿಂಗವನ್ನು ನಿರ್ದಿಷ್ಟಪಡಿಸುವುದು

  • ಸಣ್ಣ ಕ್ಲೆರಿಕಲ್ ತಪ್ಪುಗಳು

  • ಕಾನೂನಿನ ಕಡ್ಡಾಯ ಪ್ರಾವಿಷನ್‌ಗಳ ಕಡೆಗೆ ಸಡಿಲತೆ

  • ಕ್ಯಾಪಿಟಲ್ ಗೇನ್ಸ್‌ಗಾಗಿ ಯಾವುದೇ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸದಿರುವುದು

ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ಗೆ, ಈ ಯಾವುದೇ ದೋಷಗಳ ಸಂಭಾವ್ಯದ ಬಗ್ಗೆ ಸಂಬಂಧಪಟ್ಟ ಟ್ಯಾಕ್ಸ್ ಪೇಯರ್‌ಗಳಿಗೆ ತಿಳಿಸುತ್ತದೆ.

[ಮೂಲ]

ಆನ್‌ಲೈನ್‌ನಲ್ಲಿ ಸೆಕ್ಷನ್ 154 ಅಡಿಯಲ್ಲಿ ತಿದ್ದುಪಡಿಯನ್ನು ಫೈಲ್ ಮಾಡುವುದು ಹೇಗೆ?

ಇನ್ಕಮ್ ಅನ್ನು ಮೌಲ್ಯಮಾಪನ ಮಾಡಿದ ನಂತರ, ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ ಸೆಲ್ಫ್-ಜನರೇಟ್ ಮಾಡಲಾದ ತಿದ್ದುಪಡಿ ಆರ್ಡರ್‌ಗಳನ್ನು ಅಥವಾ ಆಯಾ ಟ್ಯಾಕ್ಸ್ ಪೇಯರ್‌ಗಳಿಗೆ ನೋಟಿಸ್‌ಗಳನ್ನು ನೀಡುತ್ತದೆ.

ಆನ್‌ಲೈನ್‌ನಲ್ಲಿ ಸೆಕ್ಷನ್ 154 ಅಡಿಯಲ್ಲಿ ತಿದ್ದುಪಡಿಯನ್ನು ಹೇಗೆ ಫೈಲ್ ಮಾಡಬೇಕು ಎಂದು ಹುಡುಕುತ್ತಿರುವವರಿಗೆ, ಈ ಕೆಳಗಿನ ವಿಭಾಗವು ಸಮಗ್ರ ಚಿತ್ರಣವನ್ನು ನೀಡುತ್ತದೆ.

  • ಹಂತ 1: ಇನ್ಕಮ್ ಟ್ಯಾಕ್ಸ್‌ನ ಆಫೀಷಿಯಲ್ ವೆಬ್‌ಸೈಟ್‌ಗೆ ಹೋಗಿ.
  • ಹಂತ 2: ರಿಜಿಸ್ಟ್ರೇಷನ್‌ಗಾಗಿ ಲಾಗ್ ಇನ್ ಮಾಡಿ ಅಥವಾ ಸೈನ್ ಅಪ್ ಮಾಡಿ.
  • ಹಂತ 3: 'ಮೈ ಅಕೌಂಟ್‌' ಗೆ ನ್ಯಾವಿಗೇಟ್ ಮಾಡಿ ಮತ್ತು 'ಸೆಕ್ಷನ್ 143(1)/154 ರ ಅಡಿಯಲ್ಲಿ ರಿಕ್ವೆಸ್ಟ್ ಫಾರ್ ಇಂಟಿಮೇಶನ್' ಅನ್ನು ಕ್ಲಿಕ್ ಮಾಡಿ.

ಗಮನಿಸಿ: ನೀವು ಪ್ಯಾನ್ ನಂಬರ್ ಅನ್ನು ನಮೂದಿಸಬೇಕಾದಲ್ಲಿ ಸಣ್ಣ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.

  • ಹಂತ 4: ಸಂಬಂಧಿತ ಮೌಲ್ಯಮಾಪನ ವರ್ಷವನ್ನು ಆಯ್ಕೆಮಾಡಿ ಮತ್ತು ತಿದ್ದುಪಡಿಯನ್ನು ಫೈಲ್ ಮಾಡಲು ಸಿಪಿಸಿ ಕಮ್ಯುನಿಕೇಶನ್ ನಂಬರ್ ಅನ್ನು ನೀಡಿ ಮತ್ತು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ.
  • ಹಂತ 5: 3 ರಿಕ್ವೆಸ್ಟ್ ಪ್ರಕಾರಗಳಾದ- 'ರಿಟರ್ನ್ ಡೇಟಾ ಕರೆಕ್ಷನ್', ಟ್ಯಾಕ್ಸ್ ಕ್ರೆಡಿಟ್ ಮಿಸ್‌ಮ್ಯಾಚ್ ಮತ್ತು ಟ್ಯಾಕ್ಸ್ ಅಥವಾ ಇಂಟರೆಸ್ಟ್ ಕಂಪ್ಯೂಟೇಶನ್' ಮತ್ತು 'ಒನ್ಲಿ ರಿಪ್ರೊಸೆಸ್ ದಿ ರಿಟರ್ನ್' ಇವುಗಳಲ್ಲಿ ಯಾವುದು ಅನ್ವಯಿಸುತ್ತದೆಯೋ ಅದನ್ನು ಆಯ್ಕೆ ಮಾಡಿ.
  • ಹಂತ 6: 'ರಿಟರ್ನ್ ಡೇಟಾ ಕರೆಕ್ಷನ್' ಅನ್ನು ಆಯ್ಕೆಮಾಡುವಾಗ, ತಿದ್ದುಪಡಿ ಮಾಡಲು 4 ಕಾರಣಗಳನ್ನು ಆಯ್ಕೆಮಾಡಿ. ಸರಿಪಡಿಸಬೇಕಾದ ರಿಟರ್ನ್‌ಗಳಲ್ಲಿ ಶೆಡ್ಯೂಲ್‌ಗಳನ್ನು ಸೇರಿಸಿ ಮತ್ತು ಎಕ್ಸ್ಎಮ್ಎಲ್ ಅನ್ನು ಅಪ್‌ಲೋಡ್ ಮಾಡಿ.

ಗಮನಿಸಿ: 'ಒನ್ಲಿ ರಿಪ್ರೊಸೆಸ್ ದಿ ರಿಟರ್ನ್' ಅನ್ನು ಆಯ್ಕೆಮಾಡುವಾಗ, ಟ್ಯಾಕ್ಸ್ ಪೇಯರ್‌ಗಳು ತಮ್ಮ ಇನ್ಕಮ್ ಟ್ಯಾಕ್ಸ್ ರಿಟರ್ನ್‌ಗಳನ್ನು ಅಪ್‌ಲೋಡ್ ಮಾಡುವ ಅಗತ್ಯವಿಲ್ಲ.

  • ಹಂತ 7: ಫಾರ್ಮ್ 26AS ನಲ್ಲಿ ಟಿಡಿಎಸ್ ವಿವರಗಳನ್ನು ಚೆಕ್ ಮಾಡಿ, ನಿಮ್ಮ ಎಲ್ಲಾ ಇನ್‌ಪುಟ್‌ಗಳನ್ನು ರಿ-ಚೆಕ್ ಮತ್ತು 'ಸಬ್ಮಿಟ್' ಬಟನ್ ಮೇಲೆ ಕ್ಲಿಕ್ ಮಾಡಿ

ಟ್ಯಾಕ್ಸ್ ಪೇಯರ್‌ಗಳು ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಐಟಿ ಡಿಪಾರ್ಟ್‌ಮೆಂಟ್ ರೆಫರೆನ್ಸ್ ನಂಬರ್ ಅನ್ನು ಜನರೇಟ್ ಮಾಡುತ್ತದೆ. ಮುಂದಿನ ಪ್ರಕ್ರಿಯೆಗಾಗಿ ಈ ನಂಬರ್ ಅನ್ನು ಸಿಪಿಸಿ ಬೆಂಗಳೂರಿಗೆ ಕಳುಹಿಸಲಾಗುತ್ತದೆ.

ತಿದ್ದುಪಡಿಯ ಅಪ್ಲಿಕೇಶನ್ ಅನ್ನು ಫೈಲ್ ಮಾಡಲು ಅನುಸರಿಸಬೇಕಾದ ಪ್ರಕ್ರಿಯೆ

ಯಾವುದೇ ತಿದ್ದುಪಡಿ ಅಪ್ಲಿಕೇಶನ್ ಅನ್ನು ಫೈಲ್ ಮಾಡುವ ಮೊದಲು ಟ್ಯಾಕ್ಸ್ ಪೇಯರ್‌ಗಳು ಈ ಕೆಳಗಿನ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. 

  • ಟ್ಯಾಕ್ಸ್ ಪೇಯರ್‌ಗಳು ತಿದ್ದುಪಡಿಗಾಗಿ ಅಪ್ಲಿಕೇಶನ್ ಫೈಲ್ ಮಾಡಲು ಬಯಸುವ ಆರ್ಡರ್ ಅನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಬೇಕು. 
  • ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್ ಹೊರಡಿಸಿದ ಆರ್ಡರ್‌ನಲ್ಲಿ ಯಾವುದೇ ತಪ್ಪು ಇದೆ ಎಂದು ಟ್ಯಾಕ್ಸ್ ಪೇಯರ್‌ಗಳು ಅನೇಕ ಬಾರಿ ಭಾವಿಸಬಹುದು ಆದರೆ ವಾಸ್ತವವಾಗಿ, ಟ್ಯಾಕ್ಸ್ ಪೇಯರ್‌ಗಳ ಕ್ಯಾಲ್ಕುಲೇಶನ್‌ಗಳು ತಪ್ಪಾಗಿರಬಹುದು ಮತ್ತು ಸಿಪಿಸಿ ಈ ತಪ್ಪುಗಳನ್ನು ಸರಿಪಡಿಸಿರಬಹುದು. ಉದಾ. ಟ್ಯಾಕ್ಸ್ ಪೇಯರ್‌ಗಳು ಇನ್ಕಮ್‌ನ ರಿಟರ್ನ್‌ನಲ್ಲಿ ತಪ್ಪಾದ ಇಂಟರೆಸ್ಟ್ ಅನ್ನು ಕ್ಯಾಲ್ಕುಲೇಟ್ ಮಾಡಿರಬಹುದು ಮತ್ತು ಮಾಹಿತಿಯಲ್ಲಿ ಇಂಟರೆಸ್ಟ್ ಅನ್ನು ಸರಿಯಾಗಿ ಕ್ಯಾಲ್ಕುಲೇಟ್ ಮಾಡಿರಬಹುದು. 
  • ಆದ್ದರಿಂದ, ಮೇಲೆ ಚರ್ಚಿಸಿದ ಸಂದರ್ಭಗಳಲ್ಲಿ ತಿದ್ದುಪಡಿಯ ಅಪ್ಲಿಕೇಶನ್ ಅನ್ನು ತಪ್ಪಿಸಲು ಟ್ಯಾಕ್ಸ್ ಪೇಯರ್‌ಗಳು ಆರ್ಡರ್ ಅನ್ನು ಅಧ್ಯಯನ ಮಾಡಬೇಕು ಮತ್ತು ಯಾವುದಾದರೂ ದೋಷಗಳಿದ್ದರೆ ಅವುಗಳನ್ನು ದೃಢೀಕರಿಸಬೇಕು. 
  • ಅವರು ಆರ್ಡರ್‌ಗಳಲ್ಲಿ ಯಾವುದಾದರೂ ತಪ್ಪನ್ನು ಗಮನಿಸಿದರೆ ಮಾತ್ರ ಅವರು ಸೆಕ್ಷನ್ 154 ರ ಅಡಿಯಲ್ಲಿ ತಿದ್ದುಪಡಿಗಾಗಿ ಅಪ್ಲಿಕೇಶನ್ ಫೈಲ್ ಮಾಡಲು ಮುಂದುವರೆಯಬೇಕು. 
  • ಇದಲ್ಲದೆ, ಇದು ದಾಖಲೆಗಳಿಂದ ಸ್ಪಷ್ಟವಾಗಿ ತಿಳಿಯುವ ತಪ್ಪೇ ಹೊರತು ಇದು ಚರ್ಚೆ, ವಿವರಣೆ, ತನಿಖೆ ಇತ್ಯಾದಿಗಳ ಅಗತ್ಯವಿರುವ ತಪ್ಪಲ್ಲ ಎನ್ನುವುದನ್ನು ಅವರು ದೃಢೀಕರಿಸಬೇಕು. ಟ್ಯಾಕ್ಸ್ ಪೇಯರ್‌ಗಳು ತಪ್ಪನ್ನು ಸರಿಪಡಿಸಲು ಆನ್‌ಲೈನ್ ಅಪ್ಲಿಕೇಶನ್ ಅನ್ನು ಫೈಲ್ ಮಾಡಬಹುದು. ತಿದ್ದುಪಡಿಗಾಗಿ ಆನ್‌ಲೈನ್ ಅಪ್ಲಿಕೇಶನ್ ಅನ್ನು ಫೈಲ್ ಮಾಡುವ ಮೊದಲು ಟ್ಯಾಕ್ಸ್ ಪೇಯರ್‌ಗಳು ಆಫೀಷಿಯಲ್ ವೆಬ್‌ಸೈಟ್‌ನಲ್ಲಿ ತಿಳಿಸಲಾದ ತಿದ್ದುಪಡಿ ಪ್ರಕ್ರಿಯೆಯನ್ನು ಗಮನಿಸಬೇಕು. 
  • ಸೆಕ್ಷನ್ 200A(1)/206CB ಅಡಿಯಲ್ಲಿ ಮಾಹಿತಿಯ ತಿದ್ದುಪಡಿಗಾಗಿ ಆನ್‌ಲೈನ್ ತಿದ್ದುಪಡಿ ಸ್ಟೇಟ್‌ಮೆಂಟ್ ಅನ್ನು ಸಬ್ಮಿಟ್ ಮಾಡಬೇಕು; ಅದರ ಪ್ರಕ್ರಿಯೆಯನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.
  • ಮೌಲ್ಯಮಾಪನವನ್ನು ಹೆಚ್ಚಿಸುವ ಅಥವಾ ರಿಫಂಡ್ ಅನ್ನು ಕಡಿಮೆ ಮಾಡುವ ಅಥವಾ ಟ್ಯಾಕ್ಸ್ ಪೇಯರ್‌ಗಳ (ಅಥವಾ ಡಿಡಕ್ಟರ್‌ಗಳ) ಲಯಬಿಲಿಟಿ ಹೆಚ್ಚಿಸುವ ಪರಿಣಾಮವನ್ನು ಹೊಂದಿರುವ ತಿದ್ದುಪಡಿ ಅಥವಾ ತಿದ್ದುಪಡಿಯನ್ನು ಸಂಬಂಧಿಸಿದ ಅಥಾರಿಟಿಯು, ಟ್ಯಾಕ್ಸ್ ಪೇಯರ್‌ಗಳಿಗೆ ಅಥವಾ ಡಿಡಕ್ಟರ್‌ಗಳಿಗೆ ಅದರ ಉದ್ದೇಶದ ಸೂಚನೆ ನೀಡದ ಹೊರತು ಮಾಡಲಾಗುವುದಿಲ್ಲ. ಮತ್ತು ಟ್ಯಾಕ್ಸ್ ಪೇಯರ್‌ಗಳಿಗೆ (ಡಿಡಕ್ಟರ್‌ಗಳಿಗೆ) ಕೇಳಲು ಒಂದು ಸಮಂಜಸವಾದ ಅವಕಾಶವನ್ನು ನೀಡುತ್ತದೆ.

[ಮೂಲ]

ಪದೇ ಪದೇ ಕೇಳಲಾದ ಪ್ರಶ್ನೆಗಳು

ಇನ್ಕಮ್ ಟ್ಯಾಕ್ಸ್ ತಿದ್ದುಪಡಿ ಆರ್ಡರ್ ವಿರುದ್ಧ ನಾನು ಮೇಲ್ಮನವಿ ಸಲ್ಲಿಸಬಹುದೇ?

ಹೌದು, ಸಿಪಿಸಿ ನೀಡಿದ ಇಂಟಿಮೇಶನ್ ಆರ್ಡರ್ ವಿರುದ್ಧ ನೀವು ನೇರವಾಗಿ ಸಿಐಟಿ(A) ಗೆ ಮೇಲ್ಮನವಿ ಸಲ್ಲಿಸಬಹುದು.

[ಮೂಲ]

ನಾನು ಪಾವತಿಸಿದ ನಂತರ ಸಿಪಿಸಿ ನೀಡಿರುವ ಡಿಮ್ಯಾಂಡ್ ಅನ್ನುಕ್ಯಾನ್ಸಲ್ ಮಾಡಲು ನಾನು ತಿದ್ದುಪಡಿಯನ್ನು ಫೈಲ್ ಮಾಡಬೇಕೆ?

ಇಲ್ಲ, ನೀವು ಪಾವತಿ ಮಾಡಿದ ನಂತರ ಡಿಮ್ಯಾಂಡ್ ಸ್ವಯಂಚಾಲಿತವಾಗಿ ಅಡ್ಜಸ್ಟ್ ಆಗುತ್ತದೆ.

ತಿದ್ದುಪಡಿ ರಿಕ್ವೆಸ್ಟ್ ಅನ್ನು ಫೈಲ್ ಮಾಡುವಾಗ, ಯಾವ ನಂಬರ್‌ನ ಅಗತ್ಯವಿದೆ?

ತಿದ್ದುಪಡಿ ರಿಕ್ವೆಸ್ಟ್ ಅನ್ನು ಫೈಲ್ ಮಾಡುವಾಗ ಸಿಪಿಸಿ ಆರ್ಡರ್ ನಂಬರ್ ಅಥವಾ ಇತ್ತೀಚಿನ ಫೈಲ್ ಮಾಡಿದ ಇನ್ಕಮ್ ಟ್ಯಾಕ್ಸ್ ರಿಟರ್ನ್‌ನ ಇಂಟಿಮೇಶನ್ ನಂಬರ್ ಅಥವಾ ಡಿಐಎನ್ ಅತ್ಯಗತ್ಯವಾಗಿದೆ.