ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 194H

ಭಾರತದಲ್ಲಿ ನೋಂದಾಯಿತ ವಲಯದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಇನ್‌ಕಮ್‌ ಮೇಲೆ ನಿರ್ದಿಷ್ಟ ಪ್ರಮಾಣದ ಅಪ್ಲಿಕೇಬಲ್ ಆಗುವ ಟ್ಯಾಕ್ಸ್ ಅನ್ನು ಪಾವತಿಸಬೇಕಾಗುತ್ತದೆ. ಕಮಿಷನ್‌ಗಳು ಮತ್ತು ಬ್ರೋಕರೇಜ್‌ಗಳಂತಹ ಅನಿಯಂತ್ರಿತ ವಿಧಾನಗಳಿಂದ ಗಳಿಕೆ ಮಾಡುವ ವ್ಯಕ್ತಿಗಳ ಬಗ್ಗೆ ಈಗ ನೀವು ಅಚ್ಚರಿಗೊಳ್ಳಬಹುದು.

ಇವುಗಳು ಸಹ ಇನ್‌ಕಮ್‌ ಮೂಲವಾಗಿರುವುದರಿಂದ, ಭಾರತದಲ್ಲಿ ಇನ್‌ಕಮ್‌ ಟ್ಯಾಕ್ಸ್‌ ಸೆಕ್ಷನ್ 194H ಅಡಿಯಲ್ಲಿ ಕಮಿಷನ್‌ಗಳು ಮತ್ತು ಬ್ರೋಕರೇಜ್‌ಗಳು ಸಹ ಟಿಡಿಎಸ್‌ ಡಿಡಕ್ಷನ್‌ಗೆ ಒಳಪಡುತ್ತವೆ.

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 194H ಎಂದರೇನು?

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 194H ಕಮಿಷನ್ ಅಥವಾ ಬ್ರೋಕರೇಜ್ ಆಗಿ ಪಡೆದ ಗಳಿಕೆಯ ಮೇಲೆ ವಿಧಿಸಲಾದ ಟಿಡಿಎಸ್‌ನೊಂದಿಗೆ ವ್ಯವಹರಿಸುತ್ತದೆ.

ವ್ಯಕ್ತಿಗಳು ಮತ್ತು ಹೆಚ್‌ಯುಎಫ್‌ಗಳನ್ನು ಹೊರತುಪಡಿಸಿ ಇತರ ವ್ಯಕ್ತಿಗಳು ಈ ಟ್ಯಾಕ್ಸ್ ಅನ್ನು ಪಾವತಿಸಲು ಲಯಬಲ್‌ ಆಗಿರುತ್ತಾರೆ. ಇದು ಆರ್ಥಿಕ ವರ್ಷದಲ್ಲಿ ₹ 15000 ಮೀರಿದ ಇನ್‌ಕಮ್‌ಗೆ ಮಾತ್ರ ಅಪ್ಲಿಕೇಬಲ್‌ ಆಗುತ್ತದೆ. ಆದಾಗ್ಯೂ, ಸೆಕ್ಷನ್ 44AB ಅಡಿಯಲ್ಲಿ ಟ್ಯಾಕ್ಸ್ ಆಡಿಟ್ ಮಾಡಬೇಕಾದ ವ್ಯಕ್ತಿಗಳು ಮತ್ತು ಹೆಚ್‌ಯುಎಫ್‌ಗಳು ಈ ಟಿಡಿಎಸ್‌ ಅನ್ನು ಪಾವತಿಸಬೇಕಾಗುತ್ತದೆ.

[ಮೂಲ]

ಡಿಡಕ್ಟರ್‌ನ ಟ್ಯಾನ್ ಮತ್ತು ಡಿಡಕ್ಟೀಯ ಪ್ಯಾನ್‌ಗಳು ಟಿಡಿಎಸ್‌ ಡಿಡಕ್ಷನ್‌ಗೆ ಅಗತ್ಯವಿರುವ ಪ್ರಮುಖ ವಿವರಗಳಾಗಿವೆ.

ಸೆಕ್ಷನ್ 194H ಅಡಿಯಲ್ಲಿ ಟಿಡಿಎಸ್ ಡಿಡಕ್ಷನ್ ಯಾವಾಗ ಅಪ್ಲಿಕೇಬಲ್ ಆಗುತ್ತದೆ?

ಅಧಿಕೃತ ಘಟಕವು ಸೆಕ್ಷನ್ 194H ಅಡಿಯಲ್ಲಿ ಬ್ರೋಕರೇಜ್ ಮತ್ತು ಕಮಿಷನ್ ಮೇಲೆ ಟಿಡಿಎಸ್ ಅನ್ನು ಡಿಡಕ್ಟ್ ಮಾಡಬಹುದು, ಈ ಸಂದರ್ಭಗಳಲ್ಲಿ:

  • ನಿವಾಸಿ ಪೇಯಿಯ ಖಾತೆಯಲ್ಲಿ ಅಥವಾ ಪಾವತಿಯ ಸಮಯದಲ್ಲಿ, ಯಾವುದು ಮೊದಲು ಸಾಧ್ಯವಿದೆಯೋ ಅದಕ್ಕೆ ಕಮಿಷನ್ ಅನ್ನು ಕ್ರೆಡಿಟ್ ಮಾಡುವುದು.
  • ನಗದು, ಚೆಕ್ ಅಥವಾ ಡ್ರಾಫ್ಟ್ ಮೂಲಕ ಯಾವುದೇ ಸಸ್ಪೆನ್ಸ್ ಖಾತೆಗೆ ಕಮಿಷನ್ ಪಾವತಿಸುವುದು.

ಟಿಡಿಎಸ್ ಎಂಬುದು ಸೇವಾ ಪೂರೈಕೆದಾರರಿಗೆ ಪಾವತಿಸಬೇಕಾದ ಅಮೌಂಟ್ ಮೇಲೆ ಮೂಲದಲ್ಲಿ ಡಿಡಕ್ಟ್ ಮಾಡಲಾದ ಟ್ಯಾಕ್ಸ್ ಆಗಿದೆ. ನಂತರ ಅದನ್ನು ಭಾರತದ ಕೇಂದ್ರ ಸರ್ಕಾರಕ್ಕೆ ರವಾನೆ ಮಾಡಲಾಗುತ್ತದೆ. ಅಧಿಕೃತ ಘಟಕಗಳು ಮಾತ್ರ ಟಿಡಿಎಸ್ ಅನ್ನು ಡಿಡಕ್ಟ್ ಮಾಡಬಹುದು. ತಮ್ಮ ಟ್ಯಾಕ್ಸ್ ಆಡಿಟ್‌ ನಡೆಸಬೇಕಾದವರನ್ನು ಹೊರತುಪಡಿಸಿ ಒಬ್ಬ ವ್ಯಕ್ತಿ ಅಥವಾ ಹೆಚ್‌ಯುಎಫ್‌ (ಹಿಂದೂ ಅವಿಭಕ್ತ ಕುಟುಂಬ) ಹಾಗೆ ಮಾಡಲಾಗುವುದಿಲ್ಲ. ಡಿಡಕ್ಷನ್‌ನ 94H ತ್ರೆಶೋಲ್ಡ್ ಲಿಮಿಟ್ ₹ 15000. 

[ಮೂಲ]

ಸೆಕ್ಷನ್ 194H ಅಡಿಯಲ್ಲಿ ಡಿಡಕ್ಷನ್ ಅನ್ನು ಯಾವಾಗ ಡೆಪಾಸಿಟ್ ಮಾಡಬೇಕು?

ಏಪ್ರಿಲ್ ಮತ್ತು ಫೆಬ್ರವರಿಯಲ್ಲಿ ಡಿಡಕ್ಟ್ ಮಾಡಲಾದ ಟಿಡಿಎಸ್ ಅನ್ನು ಪಾವತಿಸಲು ಕೊನೆಯ ದಿನಾಂಕವು ಪ್ರತಿ ತಿಂಗಳ 7ನೇ ದಿನವಾಗಿದೆ. ಮಾರ್ಚ್ ತಿಂಗಳಿಗೆ, ಡೆಪಾಸಿಟ್ ಮಾಡಲು ಕೊನೆಯ ದಿನಾಂಕ ಏಪ್ರಿಲ್ 30 ಆಗಿದೆ. ಉದಾಹರಣೆಗೆ, ಬ್ರೋಕರೇಜ್ ಮೇಲಿನ ಟಿಡಿಎಸ್ ಅನ್ನು ಡಿಸೆಂಬರ್ 15ರಂದು ಡಿಡಕ್ಟ್ ಮಾಡಿದರೆ, ಅದನ್ನು ಜನವರಿ 7ರ ಮೊದಲು ಸರ್ಕಾರಕ್ಕೆ ಡೆಪಾಸಿಟ್ ಮಾಡಬೇಕು. 

[ಮೂಲ]

ಸೆಕ್ಷನ್ 194H ಅಡಿಯಲ್ಲಿ ಇಂಟರೆಸ್ಟ್ ದರಗಳು

ಆರ್ಥಿಕ ವರ್ಷ 2022-23ಕ್ಕೆ ಸೆಕ್ಷನ್ 194H ಅಡಿಯಲ್ಲಿ ಟಿಡಿಎಸ್ ಡಿಡಕ್ಷನ್ ದರಗಳು 5%. ಆದಾಗ್ಯೂ, ಪೇಯಿಗೆ ಪ್ಯಾನ್ ವಿವರಗಳನ್ನು ನೀಡಲು ಸಾಧ್ಯವಾಗದಿದ್ದರೆ, ಟಿಡಿಎಸ್ ಡಿಡಕ್ಷನ್ 20% ಆಗಿರುತ್ತದೆ.

[ಮೂಲ 1]

[ಮೂಲ 2]

ಟಿಡಿಎಸ್ ದರದ ಮೇಲೆ ಹೆಚ್ಚುವರಿ ಸರ್‌ಚಾರ್ಜ್ ಮತ್ತು ಎಜುಕೇಷನ್‌ ಸೆಸ್ ವಿಧಿಸಲಾಗುವುದಿಲ್ಲ. ಆದಾಗ್ಯೂ, ಟಿಡಿಎಸ್ ಅಡಿಯಲ್ಲಿ ವಿವಿಧ ಸೆಕ್ಷನ್‌ಗಳು ವಿಭಿನ್ನ ದರಗಳ ಡಿಡಕ್ಷನ್‌ಗಳನ್ನು ಹೊಂದಿವೆ.

ಸೆಕ್ಷನ್ 194H ಅಡಿಯಲ್ಲಿ ಬ್ರೋಕರೇಜ್‌ನ ವ್ಯಾಖ್ಯಾನ ಮತ್ತು ಸಂಯೋಜನೆ

ಕಮಿಷನ್ ಅಥವಾ ಬ್ರೋಕರೇಜ್ ಎನ್ನುವುದು ವಿಸ್ತಾರವಾದ ಪದವಾಗಿದ್ದು, ಮತ್ತೊಂದು ಘಟಕದ ಪರವಾಗಿ ಕೆಲಸ ಮಾಡಲು ವ್ಯಕ್ತಿಯು ಸ್ವೀಕರಿಸಿದ ಅಮೌಂಟ್ ಅನ್ನು ಒಳಗೊಂಡಿರುತ್ತದೆ. ಉದಾಹರಣೆಗೆ, ಕಟ್ಟಡದ ಮಾಲೀಕರು ತನ್ನ ಮನೆಯನ್ನು ಖರೀದಿದಾರರಿಗೆ ಮಾರಾಟ ಮಾಡುತ್ತಿದ್ದಾರೆ ಮತ್ತು ನೀವು ಖರೀದಿದಾರ ಮತ್ತು ಮಾರಾಟಗಾರರನ್ನು ಕನೆಕ್ಟ್ ಮಾಡಿದ್ದೀರಿ. ಆಗ ಅವರಿಂದ ನಿಮಗೆ ಸಿಗುವ ಅಮೌಂಟ್ ಕಮಿಷನ್. ಪೇಯರ್ ಟಿಡಿಎಸ್ ಡಿಡಕ್ಷನ್‌ಗೆ ಅಧಿಕಾರ ನೀಡಿದರೆ ಟಿಡಿಎಸ್ ಡಿಡಕ್ಷನ್ ಅಪ್ಲಿಕೇಬಲ್ ಆಗುತ್ತದೆ.

ಸೆಕ್ಷನ್ 194H ಅಡಿಯಲ್ಲಿ ಕಮಿಷನ್ ಎಂದು ಪರಿಗಣಿಸಲಾಗುವ ಪ್ಯಾರಾಮೀಟರ್‌ಗಳೆಂದರೆ:

  • ಇನ್ನೊಬ್ಬ ವ್ಯಕ್ತಿಯ ಪರವಾಗಿ ಕೆಲಸ ಮಾಡುವ ವ್ಯಕ್ತಿ
  • ಯಾವುದೇ ಉತ್ಪನ್ನದ ಮಾರಾಟ ಅಥವಾ ಖರೀದಿಗೆ ಸಂಬಂಧಿಸಿದ ಸೇವೆ.
  • ವಿಶೇಷ ಸೇವೆಯನ್ನು ಹೊರತುಪಡಿಸಿದ ಯಾವುದೇ ಸೇವೆ.
  • ಮೌಲ್ಯಯುತ ಅಸೆಟ್‌ಗಳು ಅಥವಾ ಅಮೂಲ್ಯ ಪದಾರ್ಥಗಳನ್ನು ಲಿಂಕ್ ಮಾಡುವ ಟ್ರಾನ್ಸಾಕ್ಷನ್ 

[ಮೂಲ]

ಯಾವಾಗ ಘಟಕಗಳು ಸೆಕ್ಷನ್ 194H ಅಡಿಯಲ್ಲಿ ಶೂನ್ಯ ಟ್ಯಾಕ್ಸ್ ಅಥವಾ ಕಡಿಮೆ ಡಿಡಕ್ಷನ್ ಅನ್ನು ಕ್ಲೈಮ್ ಮಾಡಬಹುದು?

194H ಟಿಡಿಎಸ್ ಅಡಿಯಲ್ಲಿ ಕಮಿಷನ್ ಮೇಲೆ, ಒಂದು ಆರ್ಥಿಕ ವರ್ಷದಲ್ಲಿ ಇನ್‌ಕಮ್‌ ಟ್ಯಾಕ್ಸ್‌ ಆಗಿ ಒಟ್ಟು ಲಯಬಲ್ ಅಮೌಂಟ್‌ಗಿಂತ ಡಿಡಕ್ಟ್ ಮಾಡಲಾದ ಅಮೌಂಟ್ ಹೆಚ್ಚಾದಾಗ ಒಂದು ಘಟಕವು ಕಡಿಮೆ ಅಥವಾ ಶೂನ್ಯ ಡಿಡಕ್ಷನ್ ಅನ್ನು ಕ್ಲೈಮ್ ಮಾಡಬಹುದು. ಅಂತಹ ಡಿಡಕ್ಷನ್‌ಗೆ ಅಪ್ಲೈ ಮಾಡಲು, ನೀವು ಫಾರ್ಮ್ 13 ಅನ್ನು ಫೈಲ್ ಮಾಡಬೇಕು ಮತ್ತು ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಗೆ ಆನ್‌ಲೈನ್‌ನಲ್ಲಿ ಸಬ್‌ಮಿಟ್‌ ಮಾಡಬೇಕು. 

[ಮೂಲ]

ಸೆಕ್ಷನ್ 194H ಅಡಿಯಲ್ಲಿ ಬ್ರೋಕರೇಜ್‌ಗೆ ಯಾವಾಗ ವಿನಾಯಿತಿ ನೀಡಲಾಗುತ್ತದೆ?

ಟಿಡಿಎಸ್ ಡಿಡಕ್ಷನ್ ವಿನಾಯಿತಿಯು ಈ ಕೆಳಗಿನ ಸಂದರ್ಭಗಳಲ್ಲಿ ನಡೆಯುತ್ತದೆ:

  • ಬ್ರೋಕರೇಜ್ ಒಂದು ಆರ್ಥಿಕ ವರ್ಷದಲ್ಲಿ ₹ 15,000 ಕ್ಕಿಂತ ಕಡಿಮೆ ಅಥವಾ ಅದಕ್ಕೆ ಸಮಾನವಾಗಿರುತ್ತದೆ.
  • ಉದ್ಯೋಗದಾತರು ಉದ್ಯೋಗಿಗೆ ಸ್ಯಾಲರಿ ಅಥವಾ ಕಮಿಷನ್ ಅನ್ನು ಪಾವತಿಸುತ್ತಿದ್ದರೆ (ಸೆಕ್ಷನ್ 192 ಅಡಿಯಲ್ಲಿ ಬರುತ್ತದೆ ಮತ್ತು 194H ಅಲ್ಲ).
  • ಇನ್ಶೂರೆನ್ಸ್ ಇನ್‌ಕಮ್‌ ಮತ್ತು ಲೋನ್ ಅಂಡರ್‌ರೈಟಿಂಗ್ ಕಮಿಷನ್.
  • ಅಧಿಕೃತ ಸಂಸ್ಥೆಯಿಂದ ಕಡಿಮೆ ಅಥವಾ ಶೂನ್ಯ ಟಿಡಿಎಸ್ ಸರ್ಟಿಫಿಕೇಟ್ ಅನ್ನು ಹೊಂದಿರುವ ವ್ಯಕ್ತಿಯು ಎಲ್ಲಾ ಸೇವೆಗಳಿಗೆ ಟಿಡಿಎಸ್ ವಿನಾಯಿತಿಯನ್ನು ಆನಂದಿಸುತ್ತಾರೆ.
  • ಕೇಂದ್ರ ಹಣಕಾಸು ವ್ಯಾಪ್ತಿಯ ಅಡಿಯಲ್ಲಿ ಹಣಕಾಸು ನಿಗಮಗಳಿಗೆ ಪಾವತಿಸುವುದು.
  • ವೇರ್‌ಹೌಸ್‌ ಸೇವೆಗಳಿಗೆ ವಿಧಿಸಲಾದ ಶುಲ್ಕಗಳು.
  • ಎನ್‌ಆರ್‌ಐ ಖಾತೆಯಿಂದ ಬಂದ ಇಂಟರೆಸ್ಟ್.
  • ಯಾವುದೇ ಬ್ಯಾಂಕ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಾಡಿದ ಪೇಮೆಂಟ್‌ಗಳು.
  • ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿನ ಯಾವುದೇ ಉಳಿತಾಯದಿಂದ ಬಂದ ಇಂಟರೆಸ್ಟ್‌ನ ಇನ್‌ಕಮ್‌.
  • ಸಾರ್ವಜನಿಕರಿಗೆ ಭದ್ರತೆ ಒದಗಿಸಲು ಬ್ರೋಕರೇಜ್.
  • ಸ್ವಾಧೀನಪಡಿಸಿಕೊಳ್ಳುವ ಬ್ಯಾಂಕ್ ಮತ್ತು ವ್ಯಾಪಾರಿ ಸಂಸ್ಥೆಯ ನಡುವೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ನಡೆಸಿದ ಟ್ರಾನ್ಸಾಕ್ಷನ್ ಮೇಲೆ ಕಮಿಷನ್ ಅನ್ನು ವಿಧಿಸಲಾಗುತ್ತದೆ.

ಟಿಡಿಎಸ್ ಡಿಡಕ್ಷನ್ ಒಂದು ವಿಸ್ತಾರವಾದ ಅಧ್ಯಾಯವಾಗಿದೆ. ಟಿಡಿಎಸ್ ಅಡಿಯಲ್ಲಿ ವಿವಿಧ ಸೆಕ್ಷನ್‌ಗಳಿವೆ; ಆದಾಗ್ಯೂ, ಇಲ್ಲಿ, ನಾವು ಸೆಕ್ಷನ್ 194H ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ಈ ಎಲ್ಲಾ ಮಾಹಿತಿಯು ವಿನಾಯಿತಿ ಸನ್ನಿವೇಶಗಳು, ಅಪ್ಲಿಕೇಬಲಿಟಿ ಮತ್ತು ಬ್ರೋಕರೇಜ್ ಸೇವೆಗಳ ಮೇಲಿನ ಟ್ಯಾಕ್ಸ್ ಲಿಮಿಟೇಷನ್‌ಗಳನ್ನು ತಿಳಿಯಲು ನಿಮಗೆ ಸಹಾಯ ಮಾಡುತ್ತದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಸೆಕ್ಷನ್ 194H ಅಡಿಯಲ್ಲಿ ಟಿಡಿಎಸ್ ಡಿಡಕ್ಷನ್ ಜಿಎಸ್‌ಟಿ ಬಿಲ್‌ಗಳಿಗೆ ಅಪ್ಲಿಕೇಬಲ್ ಆಗುತ್ತದೆಯೇ?

ಇಲ್ಲ, ಸೆಕ್ಷನ್ 194H ಅಡಿಯಲ್ಲಿ ಕವರ್ ಆಗಿರುವ ಯಾವುದೇ ಬಿಲ್‌ನ ಜಿಎಸ್‌ಟಿ ಭಾಗದ ಮೇಲೆ ಟಿಡಿಎಸ್ ಡಿಡಕ್ಷನ್ ಅಪ್ಲಿಕೇಬಲ್ ಆಗುವುದಿಲ್ಲ. ಆದಾಗ್ಯೂ, ಇದು ಕಮಿಷನ್ ಅಮೌಂಟ್‌ಗೆ ಅಪ್ಲಿಕೇಬಲ್‌ ಆಗಬಹುದು. 

[ಮೂಲ]

ಸೆಕ್ಷನ್ 194H ಅಡಿಯಲ್ಲಿ ಎನ್‌ಐಎಲ್‌ ಟ್ಯಾಕ್ಸ್ ಅಥವಾ ಕಡಿಮೆ ಟಿಡಿಎಸ್ ಅನ್ನು ಕ್ಲೈಮ್ ಮಾಡಲು ಡಾಕ್ಯುಮೆಂಟ್ ಚೆಕ್‌ಲಿಸ್ಟ್ ಯಾವುದು?

ಎನ್‌ಐಎಲ್‌ ಟ್ಯಾಕ್ಸ್ ಅಥವಾ ಕಡಿಮೆ ಟಿಡಿಎಸ್‌ ಅನ್ನು ಕ್ಲೈಮ್ ಮಾಡಲು ಈ ಕೆಳಗಿನ ಡಾಕ್ಯುಮೆಂಟ್‌ಗಳು ಅವಶ್ಯಕ:

  • ಪ್ಯಾನ್ ಕಾರ್ಡ್
  • ಪಾವತಿಸುವ ಪಾರ್ಟಿಗಳ ಟಿಡಿಎಸ್ ಖಾತೆ ಸಂಖ್ಯೆ ಅಥವಾ ಟ್ಯಾನ್
  • ಕಳೆದ ಮೂರು ವರ್ಷಗಳ ಹಣಕಾಸು ಸ್ಟೇಟ್‌ಮೆಂಟ್‌ ಮತ್ತು ಇನ್‌ಕಮ್‌ ಸ್ಟೇಟ್‌ಮೆಂಟ್‌.
  • ಕಳೆದ ಮೂರು ವರ್ಷಗಳ ಆಡಿಟ್ ವರದಿ.
  • ಹಿಂದಿನ ಮೂರು ವರ್ಷಗಳ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್‌ನ ಸ್ವೀಕೃತಿಯ ಪ್ರತಿ.
  • ಕಳೆದ ಎರಡು ವರ್ಷಗಳ ಇ-ಟಿಡಿಎಸ್ ರಿಟರ್ನ್.
  • ಸಂಬಂಧಿತ ವೆಚ್ಚಗಳ ಅಡಿಯಲ್ಲಿನ ಎಲ್ಲಾ ಪೇಮೆಂಟ್‌ಗಳ ಚಾರ್ಟ್. ಈ ಸಂದರ್ಭದಲ್ಲಿ, ಕಮಿಷನ್ ಮತ್ತು ಬ್ರೋಕರೇಜ್‌ಗೆ ಸಂಬಂಧಿಸಿದ ಪೇಮೆಂಟ್‌ಗಳು. 

[ಮೂಲ]