ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್ಕಮ್ ಟ್ಯಾಕ್ಸ್ ಆಕ್ಟ್ ನ ಸೆಕ್ಷನ್ 195 ಕುರಿತು ಸಮಗ್ರ ಮಾರ್ಗದರ್ಶಿ

ಇನ್ಕಮ್ ಟ್ಯಾಕ್ಸ್ ಆಕ್ಟ್ ನ ಸೆಕ್ಷನ್ 195 ಭಾರತದಿಂದ ಭಾರತದ ಅನಿವಾಸಿಗಳಿಗೆ ಪಾವತಿಸಿದ ಪೇಮೆಂಟುಗಳ ಮೇಲಿನ ಟ್ಯಾಕ್ಸ್ ಡಿಡಕ್ಷನ್ ಗಳ ಮೇಲೆ ಕೇಂದ್ರೀಕರಿಸುತ್ತದೆ. ಭಾರತದಲ್ಲಿ ಹಣಕಾಸಿನ ವಹಿವಾಟುಗಳನ್ನು ನಿರ್ವಹಿಸಲು ಅನಿವಾಸಿಗಳು ಗಳಿಸಿದ ಮೊತ್ತಕ್ಕೆ ಮೂಲದಲ್ಲಿ ಟ್ಯಾಕ್ಸ್  ಡಿಡಕ್ಟ್ ಮಾಡಲಾಗುತ್ತದೆ. ಸೆಕ್ಷನ್ 195 ಏನೆಂದು ತಿಳಿದುಕೊಳ್ಳುವುದರ ಜೊತೆಗೆ, ಅದರ ಪ್ರಮುಖ ಅಂಶಗಳನ್ನು ಓದಲು ಕೆಳಗೆ ಸ್ಕ್ರಾಲ್ ಮಾಡಿ ತಿಳಿಯೋಣ.

[ಮೂಲ]

ಐಟಿಎಯ ಸೆಕ್ಷನ್ 195 ರ ಅಡಿಯಲ್ಲಿ ಟ್ಯಾಕ್ಸ್ ಅನ್ನು ಡಿಡಕ್ಟ್ ಮಾಡಲು ಯಾರು ಜವಾಬ್ದಾರರು?

ಮೊದಲೇ ಹೇಳಿದಂತೆ, ಇನ್ಕಮ್ ಟ್ಯಾಕ್ಸ್ ಆಕ್ಟ್ ನ ಸೆಕ್ಷನ್ 195 ರ ಅಡಿಯಲ್ಲಿ ಅನಿವಾಸಿಗಳಿಗೆ ಪೇಮೆಂಟ್  ಮಾಡುವ ಮೊದಲು ಪೇಯರ್ ನ ಮೂಲದಲ್ಲಿ ಟ್ಯಾಕ್ಸ್ ಅನ್ನು ಡಿಡಕ್ಟ್ ಮಾಡುತ್ತಾರೆ. ಪೇಯರ್ ಎಂದು ಪರಿಗಣಿಸಲ್ಪಟ್ಟವರು ಮತ್ತು ಪೇಮೆಂಟುಗಳನ್ನು ಮಾಡುವ ಮೊದಲು ಟ್ಯಾಕ್ಸ್  ಡಿಡಕ್ಷನ್ ಗೆ ಜವಾಬ್ದಾರರಾಗಿರುವ ಘಟಕಗಳ ಪಟ್ಟಿ ಇಲ್ಲಿದೆ:

  • ಹಿಂದೂ ಅವಿಭಜಿತ ಕುಟುಂಬಗಳು/ ಹೆಚ್.ಯು.ಎಫ್ ಗಳು
  • ವ್ಯಕ್ತಿಗಳು ಅಥವಾ ಇಂಡಿವಿಜುವಲ್
  • ಭಾರತೀಯ ಅಥವಾ ಮಲ್ಟಿ ನ್ಯಾಷನಲ್ ಕಂಪನಿಗಳು
  • ವಿದೇಶೀ ಕಂಪನಿಗಳು
  • ಇತರ ಅನಿವಾಸಿಗಳಿಗೆ ಪೇಮೆಂಟುಗಳನ್ನು ರವಾನೆ ಮಾಡುವ ಅನಿವಾಸಿಗಳು

ಇನ್ಕಮ್ ಟ್ಯಾಕ್ಸ್ ಆಕ್ಟ್ ನ ಸೆಕ್ಷನ್ 195 ರ ಅಡಿಯಲ್ಲಿ ಅಂತಹ ಅನಿವಾಸಿಗಳಿಗೆ ಪೇಮೆಂಟುಗಳನ್ನು ಮಾಡುವಾಗ ಡಿಡಕ್ಟರ್ ಮೂಲದಲ್ಲಿ ಟ್ಯಾಕ್ಸ್ ಅನ್ನು ಡಿಡಕ್ಟ್ ಮಾಡಬೇಕಾಗುತ್ತದೆ.

ಇನ್ಕಮ್ ಟ್ಯಾಕ್ಸ್ ಆಕ್ಟ್ ನ ಸೆಕ್ಷನ್ 195 ರ ಅಡಿಯಲ್ಲಿ ಟಿಡಿಎಸ್ ಅನ್ನು ಹೇಗೆ ಡಿಡಕ್ಟ್ ಮಾಡುವುದು?

ಇನ್ಕಮ್ ಟ್ಯಾಕ್ಸ್ ಆಕ್ಟ್ ನ ಸೆಕ್ಷನ್ 195 ರ ಅಡಿಯಲ್ಲಿ ಮೂಲದಲ್ಲಿ ಟ್ಯಾಕ್ಸ್ ಅನ್ನು ಡಿಡಕ್ಟ್ ಮಾಡುವಾಗ ಪೇಯರ್ಸ್ ಕೆಳಗೆ ತಿಳಿಸಿದ ಹಂತಗಳನ್ನು ಅನುಸರಿಸಬೇಕು:

  • ಹಂತ 1:ಟ್ಯಾಕ್ಸ್ ಇನ್ಫರ್ಮೇಶನ್ ನೆಟ್‌ವರ್ಕ್‌ನ  ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. 'ಆನ್‌ಲೈನ್‌ನಲ್ಲಿಅಪ್ಲೈ ಮಾಡಿ' ಆಯ್ಕೆಮಾಡಿ ಮತ್ತು 'ಹೊಸ ಟ್ಯಾನ್' ಆಯ್ಕೆಮಾಡಿ. ನಂತರ, 'ಡಿಡಕ್ಟರ್ಸ್ ಕೆಟಗರಿ' ಆಯ್ಕೆಯ ಅಡಿಯಲ್ಲಿ ಸೂಕ್ತವಾದ ಡಿಡಕ್ಟರ್  ಕೆಟಗರಿಯನ್ನು ಆಯ್ಕೆಮಾಡಿ ಮತ್ತು ಮುಂದುವರೆಯಲು 'ಸೆಲೆಕ್ಟ್' ಆಯ್ಕೆಮಾಡಿ ಮತ್ತು ಫಾರ್ಮ್ 49B ಅನ್ನು ಭರ್ತಿ ಮಾಡಿ. ಈ ರೀತಿಯಾಗಿ, ಐಟಿಎಯ ಸೆಕ್ಷನ್ 195 ರ ಅಡಿಯಲ್ಲಿ ಆದೇಶಿಸಿದ ಪೇಯರ್ಸ್  ಟ್ಯಾನ್ ಅಥವಾ ಟ್ಯಾಕ್ಸ್ ಡಿಡಕ್ಷನ್ ಅಕೌಂಟ್ ನಂಬರ್ ಅನ್ನು ಪಡೆಯಬಹುದು.
  • ಹಂತ 2:ಪೇಯರ್ಸ್ ತಮ್ಮ ಮತ್ತು ಎನ್.ಆರ್ ಗಳ ಪ್ಯಾನ್ ವಿವರಗಳನ್ನು ಫಾರ್ಮ್‌ನಲ್ಲಿ ಟೈಪ್ ಮಾಡಬೇಕಾಗುತ್ತದೆ. ಈಗ, ಪೇಮೆಂಟ್ ಅನ್ನು ಸ್ವೀಕರಿಸುವವರಿಗೆ ರವಾನೆ ಮಾಡುವಾಗ ಮೂಲದಲ್ಲಿ ಅನ್ವಯವಾಗುವ ಟ್ಯಾಕ್ಸ್ ಅನ್ನುಡಿಡಕ್ಟ್ ಮಾಡಿ.
  • ಹಂತ 3 :ಟಿಡಿಎಸ್ ದರವನ್ನು ಮತ್ತು ಮಾರಾಟ ಪತ್ರದಲ್ಲಿ ಟಿಡಿಎಸ್  ಅನ್ನು ಅನ್ವಯಿಸಲಾದ ಮೊತ್ತವನ್ನು ನಿರ್ದಿಷ್ಟಪಡಿಸಿ.
  • ಹಂತ  4: ಪೇಯರ್ಸ್ ಮುಂದಿನ ತಿಂಗಳ 7ನೇ ತಾರೀಖಿನೊಳಗೆ ಫಾರ್ಮ್ ಸಂಖ್ಯೆ ಅಥವಾ ಚಲನ್ ಮೂಲಕ ಟಿಡಿಎಸ್ ಅನ್ನು ಡೆಪಾಸಿಟ್ ಮಾಡಬೇಕಾಗುತ್ತದೆ.
  • ಹಂತ 5 ಪೇಯರ್ಸ್ ನೀಡಿದ ಹಣಕಾಸು ವರ್ಷದ ಸೂಕ್ತ ತ್ರೈಮಾಸಿಕದಲ್ಲಿ ಫಾರ್ಮ್ 27Q ಅನ್ನು ಭರ್ತಿ ಮಾಡುವ ಮೂಲಕ ತಮ್ಮ ಟಿಡಿಎಸ್ ರಿಟರ್ನ್ಸ್ ಅನ್ನು ಫೈಲ್ ಮಾಡಬೇಕಾಗುತ್ತದೆ. ಇದಲ್ಲದೆ, ಅನಿವಾಸಿಗಳಿಗೆ ಟಿಡಿಎಸ್ ಸರ್ಟಿಫಿಕೇಟ್, ಫಾರ್ಮ್ 16A ಅನ್ನು ನೀಡಿ. ಮೂಲದಲ್ಲಿ ಡಿಡಕ್ಟ್ ಮಾಡಲಾದ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುವ ದಿನಾಂಕದಿಂದ 15 ದಿನಗಳ ಒಳಗಾಗಿ ಸ್ವೀಕರಿಸುವವರಿಗೆ ಈ ಸರ್ಟಿಫಿಕೇಟ್ ಅನ್ನು ನೀಡಿ.

ಇನ್ಕಮ್ ಟ್ಯಾಕ್ಸ್ ಆಕ್ಟ್ ನ ಸೆಕ್ಷನ್ 195 ರ ಅಡಿಯಲ್ಲಿ ಟಿಡಿಎಸ್ ದರಗಳು ಯಾವುವು?

ನಿರ್ದಿಷ್ಟ ವಹಿವಾಟುಗಳಿಗೆ ಅನ್ವಯವಾಗುವ ಟಿಡಿಎಸ್ ದರಗಳನ್ನು ವಿವರಿಸುವ ಕೆಳಗಿನ ಕೋಷ್ಟಕವನ್ನು ನೋಡೋಣ:

ವಿವರಗಳು

ಮೂಲದಲ್ಲಿ ಡಿಡಕ್ಟ್ ಮಾಡಲಾಗುವ ಟ್ಯಾಕ್ಸ್ ದರಗಳು

ಇನ್ವೆಸ್ಟ್ ಮಾಡುವುದರಿಂದ ಎನ್ಆರ್ ಗಳು ಮಾಡಿದ ಆದಾಯ

20%

ಸೆಕ್ಷನ್ 115E ಅಡಿಯಲ್ಲಿ ನಿರ್ದಿಷ್ಟಪಡಿಸಿದಂತೆ ಎನ್ಆರ್ ಐಗಳು ಲಾಂಗ್ ಟರ್ಮ್ ಕ್ಯಾಪಿಟಲ್ ಲಾಭವಾಗಿ ಗಳಿಸಿದ ಆದಾಯ

10%

ಸೆಕ್ಷನ್ 112 (1)(c)(iii) ಅಡಿಯಲ್ಲಿ ನಿರ್ದಿಷ್ಟಪಡಿಸಿದಂತೆ  ಲಾಂಗ್ ಟರ್ಮ್ ಕ್ಯಾಪಿಟಲ್ ಲಾಭವಾಗಿ ಗಳಿಸಿದ ಆದಾಯ

10%

ಸೆಕ್ಷನ್ 111A ಅಡಿಯಲ್ಲಿ ನಿರ್ದಿಷ್ಟಪಡಿಸಿದಂತೆ ಎನ್ಆರ್ ಐಗಳು ಶಾರ್ಟ್ ಟರ್ಮ್ ಕ್ಯಾಪಿಟಲ್ ಲಾಭವಾಗಿ ಮಾಡಿದ ಆದಾಯ

15%

10(33), 10(36) ಮತ್ತು ಸೆಕ್ಷನ್ 112A ಅಡಿಯಲ್ಲಿ ನಿರ್ದಿಷ್ಟಪಡಿಸದಿರುವ ಲಾಂಗ್ ಟರ್ಮ್ ಕ್ಯಾಪಿಟಲ್ ಲಾಭವಾಗಿ ಗಳಿಸಿದ ಇತರ ಆದಾಯ

20%

ವಿದೇಶಿ ಕರೆನ್ಸಿಯಲ್ಲಿರುವ ಎರವಲು ಪಡೆದ ಹಣದ ಮೇಲೆ ಭಾರತೀಯ ನಾಗರಿಕ ಅಥವಾ ಸರ್ಕಾರದಿಂದ ಪಾವತಿಸಬೇಕಾದ ಇಂಟರೆಸ್ಟ್(ಇದು ಸೆಕ್ಷನ್ 194LB ಅಥವಾ ಸೆಕ್ಷನ್ 194LC ಅಡಿಯಲ್ಲಿ ನಿರ್ದಿಷ್ಟಪಡಿಸಿದ ಇಂಟರೆಸ್ಟ್ ಮೂಲಕ ಗಳಿಸಿದ ಆದಾಯವಲ್ಲ)

20%

ಭಾರತೀಯ ವ್ಯಕ್ತಿ ಅಥವಾ ಸರ್ಕಾರದಿಂದ ಪೇಯೇಬಲ್ ರಾಯಧನದ(ರಾಯಲ್ಟಿ) ಮೂಲಕ ಗಳಿಸಿದ ಆದಾಯ

10%

ರಾಯಲ್ಟಿ ಮೂಲಕ ಗಳಿಸಿದ ಆದಾಯ(ಇದು ಮೇಲೆ ಉಲ್ಲೇಖಿಸಲಾದ ರಾಯಲ್ಟಿ ಅಲ್ಲ) ಒಬ್ಬ ವ್ಯಕ್ತಿ ಅಥವಾ ಸರ್ಕಾರದಿಂದ ಪೇಯೇಬಲ್

10%

ಟೆಕ್ನಿಕಲ್ ಸರ್ವೀಸ್ ಸಲ್ಲಿಸಲು ಫೀಸ್ ಮೂಲಕ ಆದಾಯ ಮತ್ತು ಭಾರತೀಯ ವ್ಯಕ್ತಿ ಅಥವಾ ಸರ್ಕಾರದಿಂದ ಪೇಯೇಬಲ್

10%

ಇತರೆ ಆದಾಯ

30%

ಹೀಗಾಗಿ, ಇನ್ಕಮ್ ಟ್ಯಾಕ್ಸ್ ಆಕ್ಟ್ ನ ಸೆಕ್ಷನ್ 195 ಟ್ಯಾಕ್ಸ್ ವಂಚನೆಯ ಸಾಧ್ಯತೆಗಳನ್ನು ತೆಗೆದುಹಾಕುವ ಪೇಮೆಂಟುಗಳನ್ನು ಮಾಡುವ ಮೊದಲು, ಮೂಲದಲ್ಲಿ ಟ್ಯಾಕ್ಸ್ ಅನ್ನು ಡಿಡಕ್ಟ್ ಮಾಡಲು ಪೇಯರ್ಸ್ ಗೆ ಅನುಮತಿಸುತ್ತದೆ. ಟ್ಯಾಕ್ಸ್  ಡಿಡಕ್ಷನ್ ಜವಾಬ್ದಾರಿಯು ಪೇಯರ್ ನದ್ದು ಆಗಿರುವುದರಿಂದ, ಇದು ಅನಿವಾಸಿಗಳಿಗೆ ಟ್ಯಾಕ್ಸ್ ಅನುಸರಣೆ ಮಾಡಲು ಸುಲಭವಾಗಿಸುತ್ತದೆ.

[ಮೂಲ 1]

[ಮೂಲ 2]

[ಮೂಲ 3]

[ಮೂಲ 4]

[ಮೂಲ 5]

ಪದೇ ಪದೇ ಕೇಳಲಾದ ಪ್ರಶ್ನೆಗಳು

ಸೆಕ್ಷನ್ 195 ರ ಅಡಿಯಲ್ಲಿ ಟಿಡಿಎಸ್ ಡಿಡಕ್ಟ್ ಆಗುವ ಪಾವತಿಯ ಯಾವುದೇ ಗರಿಷ್ಠ ಲಿಮಿಟ್ ಇದೆಯೇ?

ಇಲ್ಲ, ಇನ್ಕಮ್ ಟ್ಯಾಕ್ಸ್ ಸೆಕ್ಷನ್ 195 ರ ಅಡಿಯಲ್ಲಿ ಟಿಡಿಎಸ್ ಡಿಡಕ್ಟ್ ಮಾಡಲಾಗುವ  ಪಾವತಿಯ ಗರಿಷ್ಠ ಲಿಮಿಟ್ ಇಲ್ಲ.

ಆರ್‌ಎನ್‌ಒಆರ್ ಅಥವಾ ನಿವಾಸಿ ಆದರೆ ಸಾಮಾನ್ಯ ನಿವಾಸಿ ಅಲ್ಲದವರು ಸೆಕ್ಷನ್ 195 ಅಡಿಯಲ್ಲಿ ಒಳಗೊಳ್ಳುವರೇ ?

ಇಲ್ಲ, ನಿವಾಸಿ ಆದರೆ ಸಾಮಾನ್ಯ ನಿವಾಸಿ ಅಲ್ಲದವರು (ಆರ್‌ಎನ್‌ಒಆರ್) ಇನ್ಕಮ್  ಟ್ಯಾಕ್ಸ್ ಆಕ್ಟ್ ನ ಸೆಕ್ಷನ್ 195 ಅಡಿಯಲ್ಲಿ ಒಳಗೊಳ್ಳುವುದಿಲ್ಲ.

[ಮೂಲ]