ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಎಐಎಸ್ (AIS) ಎಂದರೇನು (ವಾರ್ಷಿಕ ಮಾಹಿತಿಯ ಸ್ಟೇಟ್‌ಮೆಂಟ್): ಪ್ರಾಮುಖ್ಯತೆ, ಫೀಚರ್‌ಗಳು ಮತ್ತು ಪ್ರಯೋಜನಗಳು

ವಾರ್ಷಿಕ ಮಾಹಿತಿ ಸ್ಟೇಟ್‌ಮೆಂಟ್‌ನೊಂದಿಗೆ (ಎಐಎಸ್) ನಿರ್ದಿಷ್ಟ ವರ್ಷಕ್ಕೆ ಎಲ್ಲಾ ಟ್ಯಾಕ್ಸ್ ಪೇಯರ್‌ಗಳ ವಿವರಗಳನ್ನು ನಿರ್ವಹಿಸುವ ಗುರಿಯನ್ನು ಭಾರತ ಸರ್ಕಾರ ಹೊಂದಿದೆ. ಇದು ಟ್ಯಾಕ್ಸ್ ಪೇಯರ್‌ಗಳ ಇನ್ಕಮ್, ಅವರ ಹಣಕಾಸಿನ ಟ್ರಾನ್ಸಾಕ್ಷನ್‌ಗಳು, ಇನ್ಕಮ್ ಟ್ಯಾಕ್ಸ್ ಪ್ರಕ್ರಿಯೆಗಳು, ಟ್ಯಾಕ್ಸ್ ವಿವರಗಳು ಇತ್ಯಾದಿಗಳಿಗೆ ಸಂಬಂಧಿಸಿದ ಎಲ್ಲಾ ಡೇಟಾವನ್ನು ಒಳಗೊಂಡಿದೆ. ಇದು ಪ್ರತಿ ವಿಧದ ಮಾಹಿತಿಗಾಗಿ, ರಿಪೋರ್ಟ್ ಮಾಡಿದ ಮೌಲ್ಯ ಮತ್ತು ಮಾರ್ಪಡಿಸಿದ ಮೌಲ್ಯ, ಎರಡನ್ನೂ ನಿರ್ವಹಿಸುತ್ತದೆ.

ನಿಮ್ಮ ಎಐಎಸ್ ಸ್ಟೇಟಸ್ ಮತ್ತು ಡೇಟಾದ ಬಗ್ಗೆ ನಿಮಗೆ ಕಾಳಜಿ ಇದೆಯೇ? ಹಾಗಿದ್ದರೆ, ಅದರ ಪಾತ್ರ, ಫೀಚರ್‌ಗಳು ಮತ್ತು ನಿಮ್ಮ ಡೇಟಾಬೇಸ್ ಅನ್ನು ಚೆಕ್ ಮಾಡುವ ವಿಧಾನಗಳನ್ನು ತಿಳಿಯಲು ಈ ಆರ್ಟಿಕಲ್‌ನ ಕೊನೆಯವರೆಗೂ ಓದಿ.

ಎಐಎಸ್ (AIS) ಎಂದರೇನು?

ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್, ನವೆಂಬರ್ 2021 ರಲ್ಲಿ. ಎಐಎಸ್ ನ ಹೊಸ ಫೀಚರ್ ಅನ್ನು ಪ್ರಾರಂಭಿಸಿತು, ಇದು ವಾರ್ಷಿಕ ಮಾಹಿತಿಯ ಸ್ಟೇಟ್‌ಮೆಂಟ್ ಅನ್ನು ಪ್ರತಿನಿಧಿಸುತ್ತದೆ. ಇದು ಟಿಡಿಎಸ್ ನ ಡೇಟಾವನ್ನು ಮತ್ತು ಹಣಕಾಸು ವರ್ಷದಲ್ಲಿ (ಎಫ್.ವೈ) ಟ್ಯಾಕ್ಸ್ ಪೇಯರ್‌ಗಳು ನಡೆಸಿದ ಕೆಲವು ನಿರ್ದಿಷ್ಟ ಹಣಕಾಸಿನ ಟ್ರಾನ್ಸಾಕ್ಷನ್‌ಗಳನ್ನು ಒಳಗೊಂಡಿದೆ. ಎಐಎಸ್ ಎನ್ನುವುದು ಫಾರ್ಮ್ 26 AS, ನ ಎಕ್ಸ್‌ಟೆಂಡೆಡ್ ವರ್ಷನ್ ಆಗಿದೆ. ಎಐಎಸ್ ಎನ್ನುವುದು ಇನ್ಕಮ್, ಇನ್ವೆಸ್ಟ್‌ಮೆಂಟ್ ಮತ್ತು ಖರ್ಚು ಸೇರಿದಂತೆ ಹಣಕಾಸಿನ ಟ್ರಾನ್ಸಾಕ್ಷನ್‌ಗಳನ್ನು ಒಳಗೊಂಡಿರುವ ಒಂದು ಕಾಂಪ್ರೆಹೆನ್ಸಿವ್ ಸ್ಟೇಟ್‌ಮೆಂಟ್ ಆಗಿದೆ. ಸರ್ಕಾರವು ಈ ಕೆಳಗಿನ ಉದ್ದೇಶಗಳೊಂದಿಗೆ ಎಐಎಸ್ ಅನ್ನು ಪರಿಚಯಿಸಿತು.

  • ಆನ್‌ಲೈನ್ ಪ್ರತಿಕ್ರಿಯೆಯನ್ನು ಪಡೆಯುವಾಗ, ಇದು ಟ್ಯಾಕ್ಸ್ ಪೇಯರ್‌ಗಳಿಗೆ ಸಂಪೂರ್ಣ ಮಾಹಿತಿಯನ್ನು ಡಿಸ್‌ಪ್ಲೇ ಮಾಡುತ್ತದೆ.

  • ಸ್ವಯಂಪ್ರೇರಿತ ಅನುಸರಣೆ ಮತ್ತು ರಿಟರ್ನ್‌ಗಳ ಅಡ್ವಾನ್ಸ್ ಪ್ರೀಫೈಲಿಂಗ್ ಅನ್ನು ಉತ್ತೇಜಿಸುವುದನ್ನು ಸರ್ಕಾರ ನಿರೀಕ್ಷಿಸುತ್ತದೆ.

  • ಇದು ಟ್ಯಾಕ್ಸ್ ಪೇಯರ್‌ಗಳು ಟ್ಯಾಕ್ಸ್ ಫೈಲಿಂಗ್ ಅನ್ನು ಅನುಸರಿಸದೇ ಇದ್ದಲ್ಲಿ ಅದನ್ನು ಗುರುತಿಸುತ್ತದೆ ಮತ್ತದನ್ನು ತಡೆಯುತ್ತದೆ. 

[ಮೂಲ]

ಎಐಎಸ್ (AIS) ಯಾವ ರೀತಿಯ ಮಾಹಿತಿಯನ್ನು ಡಿಸ್‌ಪ್ಲೇ ಮಾಡುತ್ತದೆ?

ಮೇಲೆ ಫೋಕಸ್ ಮಾಡುತ್ತದೆ. ಮಾಹಿತಿಯ ವಿಧಗಳು ಹಣಕಾಸು ವರ್ಷದಲ್ಲಿ ವ್ಯಕ್ತಿಯ ಹಣಕಾಸೂ ಸಂಬಂಧಿತ ಟ್ರಾನ್ಸಾಕ್ಷನ್‌ಗಳನ್ನು ಒಳಗೊಂಡಿರುತ್ತವೆ. ಅದು ಈ ಕೆಳಗಿರುವ ಕೆಲವು ರೀತಿಯ ಮಾಹಿತಿಗೆ ಸಂಬಂಧಿಸಿರಬಹುದು.

  • ಟಿಡಿಎಸ್ ಮತ್ತು ಟಿಸಿಎಸ್: ಟಿಡಿಎಸ್/ಟಿಸಿಎಸ್ ನ ಇನ್ಫರ್ಮೇಷನ್ ಕೋಡ್, ಇನ್ಫರ್ಮೇಷನ್ ಮೌಲ್ಯ ಮತ್ತು ಇನ್ಫರ್ಮೇಷನ್ ಡಿಸ್ಕ್ರಿಪ್ಷನ್ ಅನ್ನು ಸೇರಿಸಲಾಗಿದೆ.

  • ನಿರ್ದಿಷ್ಟಪಡಿಸಿದ ಹಣಕಾಸು ಟ್ರಾನ್ಸಾಕ್ಷನ್‌ಗಳು (ಎಸ್.ಎಫ್.ಟಿ): ಎಸ್.ಎಫ್.ಟಿ ಕೋಡ್, ಇನ್ಫರ್ಮೇಷನ್ ಮೌಲ್ಯ ಮತ್ತು ಇನ್ಫರ್ಮೇಷನ್ ಡಿಸ್ಕ್ರಿಪ್ಷನ್ ಸೇರಿದಂತೆ ಎಸ್.ಎಫ್.ಟಿ ಅಡಿಯಲ್ಲಿ ರಿಪೋರ್ಟ್ ಮಾಡುವ ಎಂಟಿಟಿಗಳನ್ನು ಇಲ್ಲಿ ಕಾಣಬಹುದು.

  • ಟ್ಯಾಕ್ಸ್ ಪಾವತಿ: ಸ್ವಯಂ-ಮೌಲ್ಯಮಾಪನ ಟ್ಯಾಕ್ಸ್ ಮತ್ತು ಅಡ್ವಾನ್ಸ್ ಟ್ಯಾಕ್ಸ್‌ನಂತಹ ಟ್ಯಾಕ್ಸ್ ಪಾವತಿ ಡೇಟಾವನ್ನು ಎಐಎಸ್ ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.

  • ರಿಫಂಡ್ ಮತ್ತು ಡಿಮ್ಯಾಂಡ್: ಇದು ರಿಫಂಡ್ ಅನ್ನು ಆರಂಭಿಸಿದ (ಮೌಲ್ಯಮಾಪನ ವರ್ಷ ಮತ್ತು ಮೊತ್ತ) ಮತ್ತು ಡಿಮ್ಯಾಂಡ್‌ನ ಹೆಚ್ಚಳ ಮತ್ತು ಹಣಕಾಸು ವರ್ಷದ ಮಾಹಿತಿಯನ್ನು ಒಳಗೊಂಡಿದೆ.

  • ಇತರ ಮಾಹಿತಿ: ಇವುಗಳು ಮುಖ್ಯವಾಗಿ ರಿಫಂಡ್‌ನ ಮೇಲಿನ ಇಂಟರೆಸ್ಟ್, ವಿದೇಶಿ ಕರೆನ್ಸಿಯ ಖರೀದಿ, ವಿದೇಶಿ ರೆಮಿಟನ್ಸ್, ಅನುಬಂಧ-II ಸ್ಯಾಲರಿ ಇತ್ಯಾದಿಗಳ ಕುರಿತಾದ ಡೇಟಾವನ್ನು ಒಳಗೊಂಡಿರುತ್ತದೆ. 

[ಮೂಲ]

ಎಐಎಸ್ (AIS) ನ ಫೀಚರ್‌ಗಳೇನು?

ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನಿಂದ ಈ ಹೊಸ ಸೇರ್ಪಡೆಯ ಬಗ್ಗೆ ನೀವು ಎಲ್ಲ ಮಾಹಿತಿಯನ್ನು ಕಲಿಯುವಾಗ, ಎಐಎಸ್ (AIS) ನ ಫೀಚರ್‌ಗಳ ಬಗ್ಗೆ ಇನ್ನಷ್ಟು ತಿಳಿಯಲು ನಿಮಗೆ ಕುತೂಹಲವಿರಬೇಕು. ಎಐಎಸ್ ನ ಈ ಪ್ರಮುಖ ಫೀಚರ್‌ಗಳು ಮತ್ತು ಜವಾಬ್ದಾರಿಗಳನ್ನು ಕಂಡುಹಿಡಿಯಲು ನೀವು ಈ ಕೆಳಗಿನ ಸೆಕ್ಷನ್ ಅನ್ನು ರೆಫರ್ ಮಾಡಬಹುದು.

  • ಇದು ಇಂಟರೆಸ್ಟ್, ಡಿವಿಡೆಂಡ್, ಮ್ಯೂಚುವಲ್ ಫಂಡ್ ಟ್ರಾನ್ಸಾಕ್ಷನ್‌ಗಳು, ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್‌ಗಳು, ವಿದೇಶಿ ರೆಮಿಟನ್ಸ್ ಮಾಹಿತಿ ಮತ್ತು ಇತರರಿಗೆ ಸಂಬಂಧಿಸಿದ ವಿವರವಾದ ಮಾಹಿತಿಯನ್ನು ಒಳಗೊಂಡಿದೆ.

  • ಟ್ಯಾಕ್ಸ್ ಪೇಯರ್‌ಗಳ ಮಾಹಿತಿ ಸಾರಾಂಶ (TIS), ಐಟಿಆರ್ ಫೈಲಿಂಗ್ ಪ್ರಕ್ರಿಯೆಯನ್ನು ಸರಳಗೊಳಿಸಲು ಎಐಎಸ್ ಅಡಿಯಲ್ಲಿ ಈ ಡೇಟಾವನ್ನು ವಿವರಿಸುತ್ತದೆ.

  • ಐಟಿಆರ್ ಅನ್ನು ಫೈಲ್ ಮಾಡುವ ಮೊದಲು ಪಿಡಿಎಫ್, ಜೆ.ಎಸ್.ಒ.ಎನ್ ಮತ್ತು ಸಿ.ಎಸ್.ವಿ ಫೈಲ್ ಫಾರ್ಮ್ಯಾಟ್‌ಗಳಲ್ಲಿ, ಈ ವೆಬ್‌ಸೈಟ್‌ನಿಂದ ಮಾಹಿತಿಯನ್ನು ಡೌನ್‌ಲೋಡ್ ಮಾಡಲು ಇದು ಟ್ಯಾಕ್ಸ್ ಪೇಯರ್‌ಗಳನ್ನು ಎನೇಬಲ್‌ಗೊಳಿಸುತ್ತದೆ.

  • ಅವರು ಎಐಎಸ್ ನ ಮಾಹಿತಿಯ ಕುರಿತು ಆನ್‌ಲೈನ್ ಫೀಡ್ ಬ್ಯಾಕ್ ನೀಡಬಹುದು.

  • ಇದಲ್ಲದೆ, ಎಐಎಸ್ ಯುಟಿಲಿಟಿಯು ಟ್ಯಾಕ್ಸ್ ಪೇಯರ್‌ಗಳಿಗೆ ತಮ್ಮ ಡೇಟಾವನ್ನು ಡೌನ್‌ಲೋಡ್ ಮಾಡಲು ಎನೇಬಲ್‌ಗೊಳಿಸುತ್ತದೆ 

[ಮೂಲ]

ಎಐಎಸ್ (AIS) ನ ಪ್ರಯೋಜನಗಳು ಯಾವುವು?

ಎಐಎಸ್ ಅನ್ನು ರಚಿಸುವ ಉದ್ದೇಶ ಮತ್ತು ಫೀಚರ್‌ಗಳನ್ನು ನೀವೀಗ ಅರ್ಥಮಾಡಿಕೊಂಡಿದ್ದೀರಿ, ಟ್ಯಾಕ್ಸ್ ಪೇಯರ್‌ಗಳ ದೃಷ್ಟಿಕೋನದಿಂದ ಎಐಎಸ್ ನ ಪ್ರಯೋಜನಗಳ ಬಗ್ಗೆ ನೀವು ಅಚ್ಚರಿ ಪಡುತ್ತಿರಬೇಕು. ನೀವು ಭಾರತದ ಟ್ಯಾಕ್ಸ್ ಪೇಯರ್‌ ಪ್ರಜೆಯಾಗಿದ್ದರೆ, ಪ್ರತಿ ವರ್ಷವು ನಿಮಗೆ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ (ITR) ಫೈಲ್ ಮಾಡುವ ತೊಂದರೆಗಳು ತಿಳಿದಿರುತ್ತವೆ. ಎಐಎಸ್ ಅನ್ನು ಸೇರಿಸುವ ಮೂಲಕ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ ಅದನ್ನು ಇನ್ನಷ್ಟು ಸರಳಗೊಳಿಸುತ್ತದೆ. ಅಡ್ವಾನ್ಸ್ ಟ್ಯಾಕ್ಸ್ ಅಗತ್ಯತೆಗಳನ್ನು ಮೌಲ್ಯಮಾಪನ ಮಾಡುವಾಗ ಮತ್ತು ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುವಾಗ, ಎಐಎಸ್ ಒಂದು ಪ್ರಮುಖ ಸಹಾಯವಾಗಿದೆ. 

ಇನ್ಕಮ್ ಮತ್ತು ಇನ್ವೆಸ್ಟ್‌ಮೆಂಟ್‌ ವಿವರಗಳನ್ನು ತುಂಬುವ ಅನಗತ್ಯ ತೊಂದರೆಗಳನ್ನು ಎಐಎಸ್ ನೊಂದಿಗೆ ಸುಲಭಗೊಳಿಸಲಾಗುತ್ತದೆ, ಏಕೆಂದರೆ ಇದು ಟ್ಯಾಕ್ಸ್ ಪೇಯರ್‌ಗಳಿಗೆ ಇಂತಹವುಗಳ ವಿರುದ್ಧ ರೆಡಿಮೇಡ್ ರಿಮೈಂಡರ್ ಆಗಿದೆ. ಹೀಗಾಗಿ, ನಿಮ್ಮ ವಾರ್ಷಿಕ ಐಟಿಆರ್ ಅನ್ನು ಫೈಲ್ ಮಾಡುವಾಗ ಇನ್ಕಮ್ ಮತ್ತು ಟ್ಯಾಕ್ಸ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಕಲೆಕ್ಟ್ ಮಾಡಲು, ನೀವೀಗ ಮೊದಲಿಗಿಂತಲೂ ಕಡಿಮೆ ಸವಾಲನ್ನು ಎದುರಿಸಬೇಕಾಗುತ್ತದೆ. 

ಇದಲ್ಲದೆ, ಟ್ಯಾಕ್ಸ್‌ಗಳನ್ನು ತಡೆಹಿಡಿಯಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ಇನ್ಕಮ್ ವಿವರಗಳನ್ನು ಎಐಎಸ್ ರಿಪೋರ್ಟ್ ಮಾಡುತ್ತದೆ. ಈ ಹಿಂದೆ, 26AS ನಲ್ಲಿ ಇದನ್ನು ತಿಳಿಸುವ ಯಾವುದೇ ಆಯ್ಕೆಗಳಿಲ್ಲದ ಕಾರಣ ಟ್ಯಾಕ್ಸ್ ಪೇಯರ್‌ಗಳು, ಇಂಟರೆಸ್ಟ್ ಇನ್ಕಮ್ ರಿಪೋರ್ಟ್ ಮಾಡುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಆದಾಗ್ಯೂ, ಈಗ ಅವರು ಹಣಕಾಸು ವರ್ಷದಲ್ಲಿ ಗಳಿಸಿದ ಎಲ್ಲಾ ಇನ್ಕಮ್ ಅನ್ನು ರಿಪೋರ್ಟ್ ಮಾಡಲು ಸಾಧ್ಯವಾಗುತ್ತದೆ.

ನಿಮ್ಮ ಎಐಎಸ್ (AIS) ಅನ್ನು ಚೆಕ್ ಮಾಡುವ ಪ್ರಕ್ರಿಯೆ ಏನು?

ಈಗ ನೀವು ಎಐಎಸ್ ನ ಫೀಚರ್‌ಗಳು ಮತ್ತು ಪ್ರಯೋಜನಗಳ ಬಗ್ಗೆ ಎಲ್ಲವನ್ನೂ ತಿಳಿದಿದ್ದೀರಿ, ಈ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಡೇಟಾವನ್ನು ಚೆಕ್ ಮಾಡುವ ಪ್ರಕ್ರಿಯೆಗಳ ಕುರಿತು ನೀವೀಗ ಯೋಚಿಸಬೇಕು. ನಿಮ್ಮ ಎಐಎಸ್ ಡೇಟಾವನ್ನು ಚೆಕ್ ಮಾಡಲು ನೀವು ಈ ಕೆಳಗಿನ ಹಂತಗಳನು ಅನುಸರಿಸಬೇಕು.

  • ಹಂತ 2: ಮೇಲ್ಭಾಗದಲ್ಲಿರುವ ಆ್ಯನುವಲ್ ಇನ್ಫರ್ಮೇಷನ್ ಸ್ಟೇಟ್‌ಮೆಂಟ್ (ಎಐಎಸ್) ಬಟನ್ ಮೇಲೆ ಕ್ಲಿಕ್ ಮಾಡಿ

  • ಹಂತ 3: ಎಐಎಸ್ ಹೋಮ್ ಪೇಜಿಗೆ ನಿಮ್ಮನ್ನು ರಿಡೈರೆಕ್ಟ್ ಮಾಡುವ ಪಾಪ್-ಅಪ್ ಅನ್ನು ನೀವು ನೋಡುತ್ತೀರಿ. 'ಪ್ರೋಸೀಡ್' ಬಟನ್ ಮೇಲೆ ಕ್ಲಿಕ್ ಮಾಡಿ.

  • ಹಂತ 4: ಅನುಸರಣೆ ಪೋರ್ಟಲ್‌ಗೆ ರಿಡೈರೆಕ್ಟ್ ಮಾಡಿದ ನಂತರ, ನೀವು ಹೋಮ್ ಪೇಜಿನಲ್ಲಿ ಟ್ಯಾಕ್ಸ್ ಪೇಯರ್‌ಗಳ ಮಾಹಿತಿ ಸಾರಾಂಶ (ಟಿಐಎಸ್) ಮತ್ತು ವಾರ್ಷಿಕ ಮಾಹಿತಿ ಸ್ಟೇಟ್‌ಮೆಂಟ್ (ಎಐಎಸ್) ಅನ್ನು ಕಾಣಬಹುದು. 

  • ಹಂತ 5: ಈ ಹಂತದಲ್ಲಿ ನೀವು ಹಣಕಾಸು ವರ್ಷವನ್ನು ಆಯ್ಕೆ ಮಾಡಬೇಕಾಗುತ್ತದೆ. ಒಮ್ಮೆ ನೀವು ಡೇಟಾವನ್ನು ಕಂಡುಕೊಂಡರೆ, ಆಯಾ ಟೈಲ್‌ಗಳ ಮೇಲೆ ಕ್ಲಿಕ್ ಮಾಡುವ ಮೂಲಕ ನೀವದನ್ನು ಪಿಡಿಎಫ್ ಅಥವಾ ಜೆ.ಎಸ್.ಒ.ಎನ್ ಫಾರ್ಮ್ಯಾಟ್‌ಗಳಲ್ಲಿ ಡೌನ್‌ಲೋಡ್ ಮಾಡಬಹುದು.

ಹೀಗಾಗಿ, ನೀವು ನೋಡುವಂತೆ, ಎಐಎಸ್ ಇನ್ಕಮ್ ಟ್ಯಾಕ್ಸ್ ಆ್ಯಕ್ಟ್, 1961 ರ ಅಡಿಯಲ್ಲಿ ಒಂದು ಮೌಲ್ಯಯುತವಾದ ಸೇರ್ಪಡೆಯಾಗಿದೆ. ಇದು ಹಣಕಾಸು ವರ್ಷದಲ್ಲಿ ಹಣಕಾಸು ಚಟುವಟಿಕೆಗಳು ಮತ್ತು ಟ್ರಾನ್ಸಾಕ್ಷನ್‌ಗಳ ಬಗ್ಗೆ ನಿಗಾ ಇಡಲು ಸರ್ಕಾರ ಮತ್ತು ಟ್ಯಾಕ್ಸ್ ಪೇಯರ್‌ಗಳನ್ನು ಎನೇಬಲ್‌ಗೊಳಿಸುತ್ತದೆ. ಹೆಚ್ಚುವರಿಯಾಗಿ, ನಿಮ್ಮ ವಾರ್ಷಿಕ ಐಟಿಆರ್ ಅನ್ನು ಫೈಲ್ ಮಾಡುವಾಗ, ಎಲ್ಲಾ ಮಾಹಿತಿಯನ್ನು ಮುಂಚಿತವಾಗಿಯೇ ತಿಳಿಸುವ ಸಂದರ್ಭದಲ್ಲಿ ಇದು ಪ್ರಮುಖ ಸಹಾಯವಾಗಬಹುದು. 

[ಮೂಲ]

ಎಐಎಸ್ (AIS) ನಲ್ಲಿ ತೋರುವ ವಿವಿಧ ರೀತಿಯ ಮಾಹಿತಿಗಳು ಯಾವುವು?

ಮಾಹಿತಿಯನ್ನು ಎರಡು ಭಾಗಗಳಲ್ಲಿ ಡಿಸ್‌ಪ್ಲೇ ಮಾಡಲಾಗುತ್ತದೆ, ಭಾಗ A ಮತ್ತು B.

ಭಾಗ A ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ

  • ಹೆಸರು

  • ಹುಟ್ಟಿದ ದಿನಾಂಕ/ಇನ್‌ಕಾರ್ಪೋರೇಶನ್/ಫಾರ್ಮೇಶನ್

  • ಪ್ಯಾನ್

  • ಮಾಸ್ಕ್ಡ್ ಆಧಾರ್ ನಂಬರ್

  • ಟ್ಯಾಕ್ಸ್ ಪೇಯರ್‌ಗಳ ಸಂಪರ್ಕ ವಿವರಗಳು

ಭಾಗ B ಈ ಕೆಳಗಿನವುಗಳನ್ನು ಒಳಗೊಂಡಿದೆ

  • ಟಿಡಿಎಸ್/ಟಿಸಿಎಸ್ ಮಾಹಿತಿ

  • ಎಸ್.ಎಫ್.ಟಿ ಮಾಹಿತಿ

  • ಟ್ಯಾಕ್ಸ್‌ಗಳ ಪಾವತಿ

  • ಡಿಮ್ಯಾಂಡ್ ಮತ್ತು ರಿಫಂಡ್

  • ರಿಫಂಡ್ ಮೇಲಿನ ಇಂಟರೆಸ್ಟ್, ಹೊರಗಿನ ವಿದೇಶಿ ರೆಮಿಟನ್ಸ್, ವಿದೇಶಿ ಕರೆನ್ಸಿ ಖರೀದಿ ಇತ್ಯಾದಿಗಳಂತಹ ಇತರ ಮಾಹಿತಿ.

ಹೀಗಾಗಿ, ನೀವು ನೋಡುವಂತೆ, ಎಐಎಸ್ ಇನ್ಕಮ್ ಟ್ಯಾಕ್ಸ್ ಆ್ಯಕ್ಟ್, 1961 ರ ಅಡಿಯಲ್ಲಿ ಒಂದು ಮೌಲ್ಯಯುತವಾದ ಸೇರ್ಪಡೆಯಾಗಿದೆ. ಇದು ಸರ್ಕಾರ ಮತ್ತು ಟ್ಯಾಕ್ಸ್ ಪೇಯರ್‌ಗಳಿಗೆ ಹಣಕಾಸು ವರ್ಷದಲ್ಲಿ ಅವರ ಹಣಕಾಸಿನ ಚಟುವಟಿಕೆಗಳು ಮತ್ತು ಟ್ರಾನ್ಸಾಕ್ಷನ್‌ಗಳನ್ನು ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ, ನಿಮ್ಮ ವಾರ್ಷಿಕ ಐಟಿಆರ್ ಅನ್ನು ಫೈಲ್ ಮಾಡುವಾಗ, ಎಲ್ಲಾ ಮಾಹಿತಿಯನ್ನು ಮುಂಚಿತವಾಗಿಯೇ ತಿಳಿಸುವ ಸಂದರ್ಭದಲ್ಲಿ ಇದು ಪ್ರಮುಖ ಸಹಾಯವಾಗಬಹುದು. 

[ಮೂಲ]

ಪದೇ ಪದೇ ಕೇಳಲಾದ ಪ್ರಶ್ನೆಗಳು

ಎಐಎಸ್ (AIS) ಮತ್ತು ಟಿಐಎಸ್ (TIS) ಗಳ ನಡುವಿನ ವ್ಯತ್ಯಾಸವೇನು?

ಟಿಐಎಸ್ ಇದು ಟಿಐಎಸ್ ನಿಂದ ಮಾಹಿತಿಯನ್ನು ಸಾರಾಂಶಗೊಳಿಸುತ್ತದೆ ಮತ್ತು ಅಗ್ರಿಗೇಟ್ ಮಾಡುತ್ತದೆ. ಮಾಹಿತಿಯನ್ನು ಒಟ್ಟು ಸ್ಯಾಲರಿ, ಇಂಟರೆಸ್ಟ್, ಡಿವಿಡೆಂಡ್, ಇತ್ಯಾದಿ ಕೆಟಗರಿಗಳ ಪ್ರಕಾರ ಡಿಸ್‌ಪ್ಲೇ ಮಾಡಲಾಗುತ್ತದೆ 

[ಮೂಲ]

ಡೌನ್‌ಲೋಡ್ ಮಾಡಿದ ಪಿಡಿಎಫ್ (PDF) ಫೈಲ್‌ಗಳಿಗೆ ಎಐಎಸ್ (AIS) ಪಾಸ್‌ವರ್ಡ್ ಏನಿರುತ್ತದೆ?

ಪಿಡಿಎಫ್ ಫೈಲ್‌ಗಳು ಸಾಮಾನ್ಯವಾಗಿ ಪಾಸ್‌ವರ್ಡ್ ಪ್ರೊಟೆಕ್ಟೆಡ್ ಆಗಿರುತ್ತವೆ. ವೈಯಕ್ತಿಕ ಟ್ಯಾಕ್ಸ್ ಪೇಯರ್‌ಗಳ ಸಂದರ್ಭದಲ್ಲಿ, ಪ್ಯಾನ್ (ದೊಡ್ಡ ಕೇಸ್‌ನಲ್ಲಿ) ಮತ್ತು ಹುಟ್ಟಿದ ದಿನಾಂಕದ ಕಾಂಬಿನೇಶನ್ ಮುಖ್ಯವಾಗಿ ಈ ಪಾಸ್‌ವರ್ಡ್ ಅನ್ನು ರಚಿಸುತ್ತದೆ.