ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಪ್ಯಾನ್‌ನೊಂದಿಗೆ ಫಾರ್ಮ್ 26AS ಅನ್ನು ಡೌನ್‌ಲೋಡ್ ಮಾಡುವುದು ಮತ್ತು ವೀಕ್ಷಿಸುವುದು ಹೇಗೆ?

ಫಾರ್ಮ್ 26ASನ ಸ್ವರೂಪ ಮತ್ತು ಬಳಕೆಯ ಬಗ್ಗೆ ಪ್ರಚಲಿತವಾದ ಗೊಂದಲವಿದೆ. ಇದು ವ್ಯಕ್ತಿಗಳು ಭರಿಸಬೇಕಾಗಿರುವ ಟ್ಯಾಕ್ಸೇಷನ್‌ನ ಹೆಚ್ಚುವರಿ ಫಾರ್ಮ್‌ ಆಗಿದೆ ಎಂದು ಹಲವರು ನಂಬುತ್ತಾರೆ, ಆದರೆ ವಾಸ್ತವದಲ್ಲಿ, ಇದು ಎಲ್ಲಾ ಟ್ಯಾಕ್ಸ್-ಸಂಬಂಧಿತ ಮಾಹಿತಿಯನ್ನು ಒಳಗೊಂಡಿರುವ ಏಕೀಕೃತವಾದ ವಾರ್ಷಿಕ ಸ್ಟೇಟ್‌ಮೆಂಟ್‌ ಆಗಿದೆ.

ವ್ಯಕ್ತಿಗಳು ಐಟಿ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಪ್ಯಾನ್ ಲಾಂಚ್‌ನೊಂದಿಗೆ ಫಾರ್ಮ್ 26AS ಅನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು ಮತ್ತು ವೀಕ್ಷಿಸಬಹುದು.

ಆದಾಗ್ಯೂ, ನೀವು ತಿಳಿದುಕೊಳ್ಳಬೇಕಾದ ಕೆಲವು ಹೆಚ್ಚುವರಿ ಮಾಹಿತಿಗಳಿವೆ!

ಫಾರ್ಮ್ 26AS ಎಂದರೇನು?

2020ರ ಆರಂಭದಲ್ಲಿ, ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಯು ಫಾರ್ಮ್ 26AS ಅನ್ನು ವಾರ್ಷಿಕ ಮಾಹಿತಿ ಸ್ಟೇಟ್‌ಮೆಂಟ್‌ನಲ್ಲಿ ಪರಿಷ್ಕರಣೆ ಮಾಡಿದೆ. ಈಗ, ಇದು ನಿರ್ದಿಷ್ಟಪಡಿಸಿದ ವಿತ್ತೀಯ ವಹಿವಾಟುಗಳು, ಟ್ಯಾಕ್ಸ್ ಪೇಮೆಂಟ್‌ಗಳು, ಟ್ಯಾಕ್ಸ್‌ಪೇಯರ್‌ಗಳು ಕೈಗೊಂಡ ಪೂರ್ಣಗೊಂಡ ಪ್ರಕ್ರಿಯೆಗಳು, ಟಿಡಿಎಸ್‌/ಟಿಸಿಎಸ್‌ ವಿವರಗಳನ್ನು ಒಳಗೊಂಡಂತೆ ಡಿಮ್ಯಾಂಡ್ ಮತ್ತು ರಿಫಂಡ್‌ ಎರಡೂ ವಿವರಗಳನ್ನು ಒಳಗೊಂಡಿದೆ.

ಫಾರ್ಮ್ 26AS ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?

ನಿಮ್ಮ ಐಟಿಆರ್ ಅನ್ನು ಫೈಲ್‌ ಮಾಡುವ ಮೊದಲು, ನಿಮ್ಮ ಖಾತೆಯಲ್ಲಿ ಡೆಪಾಸಿಟ್‌ ಆಗಿರುವ ಟ್ಯಾಕ್ಸ್‌ ಅಮೌಂಟ್‌ ಅನ್ನು ಚೆಕ್‌ ಮಾಡಲು ನೀವು ಸ್ಟೇಟ್‌ಮೆಂಟ್‌ ಅನ್ನು ತಿಳಿದುಕೊಳ್ಳಬೇಕು. ಐಟಿಆರ್‌ ಫಾರ್ಮ್ 26AS ಎಂದರೆ ಏನು ಎಂದು ಈಗ ನಿಮಗೆ ತಿಳಿದಿದೆ, ಮುಂದೆ ಅದರ ಆ್ಯಕ್ಸೆಸ್ ಪಡೆಯಲು ಮತ್ತು ಅಗತ್ಯ ಮಾಹಿತಿಯನ್ನು ಅರಿಯಲು ಸುಲಭವಾದ ಮಾರ್ಗವನ್ನು ನೋಡೋಣ.

ನೀವು 26AS ಅನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಲು ಎರಡು ಮಾರ್ಗಗಳಿವೆ -

  • ನೀವು ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಬಹುದು, ಅಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ನಿಮ್ಮ ಪ್ಯಾನ್‌ನೊಂದಿಗೆ ಲಿಂಕ್ ಮಾಡಬೇಕು. ಈ ನಿಟ್ಟಿನಲ್ಲಿ, ನಿಮ್ಮ ಬ್ಯಾಂಕ್ ಎನ್‌ಎಸ್‌ಡಿಎಲ್‌ನಲ್ಲಿ ನೋಂದಾಯಿಸಲ್ಪಟ್ಟಿದೆಯೇ ಎಂದು ನೀವು ಪರಿಶೀಲಿಸಬೇಕು ಮತ್ತು ಅಂತಹ ಸೌಲಭ್ಯಗಳನ್ನು ಒದಗಿಸಬೇಕು.
  • ನೀವು ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್ ಅನ್ನು ಸಹ ಬಳಸಬಹುದು ಮತ್ತು ಪ್ಯಾನ್, ಜನನ ದಿನಾಂಕ ಅಥವಾ ಇನ್‌ಕಾರ್ಪೊರೇಷನ್‌ ದಿನಾಂಕ ಇತ್ಯಾದಿಗಳೊಂದಿಗೆ ಫಾರ್ಮ್ 26AS ಅನ್ನು ವೀಕ್ಷಿಸಬಹುದು.

ನಿಮ್ಮ ವಾರ್ಷಿಕ ಮಾಹಿತಿ ಸ್ಟೇಟ್‌ಮೆಂಟ್‌ನ ಪ್ರತಿಯನ್ನು ಇರಿಸಿಕೊಳ್ಳಲು ಬಯಸುವಿರಾ? ಅದನ್ನು ಡೌನ್‌ಲೋಡ್ ಮಾಡಲು ಕೆಳಗೆ ತಿಳಿಸಲಾದ ಪ್ರೊಸೀಜರ್ ಅನ್ನು ಅನುಸರಿಸಿ.

ಹಂತ 1: ನೀವೇ ನೋಂದಾಯಿಸಲು ಮತ್ತು ಪ್ರೊಸೆಸ್ ಅನ್ನು ಪ್ರಾರಂಭಿಸಲು ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಯ ಇ-ಫಿಲ್ಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ.

ಹಂತ 2: ಮುಂದೆ, ನಿಮ್ಮ ಯೂಸರ್ ಐಡಿ (ಆಧಾರ್ ಅಥವಾ ಪ್ಯಾನ್) ನಮೂದಿಸಿ. ಈಗ ಸುರಕ್ಷಿತ ಆ್ಯಕ್ಸೆಸ್ ಅನ್ನು ಖಚಿತಪಡಿಸಲು ಮತ್ತು ಪಾಸ್‌ವರ್ಡ್ ನಮೂದಿಸಲು ನೀಡಿರುವ ಚೆಕ್ ಬಾಕ್ಸ್ ಅನ್ನು ಆಯ್ಕೆ ಮಾಡಿ.

ಹಂತ 3: ಮೆನುವಿನಿಂದ 'ಇ-ಫೈಲ್' ಆಯ್ಕೆಮಾಡಿ. 'ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್' ಮೇಲೆ ಕ್ಲಿಕ್ ಮಾಡಿ ಮತ್ತು ಡ್ರಾಪ್‌ಡೌನ್‌ನಿಂದ ಸತತವಾಗಿ 'ಫಾರ್ಮ್ 26AS ವೀಕ್ಷಿಸಿ' ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ 4: ಮುಂದೆ, ಒಂದು ಡಿಸ್‌ಕ್ಲೈಮರ್‌ ಪಾಪ್ ಅಪ್ ಆಗುತ್ತದೆ, ನಿಮ್ಮನ್ನು ಥರ್ಡ್‌-ಪಾರ್ಟಿ ವೆಬ್‌ಸೈಟ್‌ಗೆ (ಟ್ರೇಸಸ್(TRACES) ಪೋರ್ಟಲ್) ಮರುನಿರ್ದೇಶಿಸಲಾಗುತ್ತದೆ ಎಂದು ಉಲ್ಲೇಖಿಸಲಾಗುತ್ತದೆ, ಅಲ್ಲಿಂದ ಮುಂದುವರಿಯಲು ನೀವು ಕನ್ಫರ್ಮ್ ಮಾಡುವ ಅವಶ್ಯಕತೆ ಇದೆ. ಈಗ, ಪ್ರೊಸೆಸ್ ಅನ್ನು ಪೂರ್ಣಗೊಳಿಸಲು ಮೌಲ್ಯಮಾಪನ ವರ್ಷ ಮತ್ತು ಫಾರ್ಮ್ಯಾಟ್ ಅನ್ನು ಇಲ್ಲಿ ಆಯ್ಕೆಮಾಡಿ.

ನೀವು ಅದನ್ನು ಆನ್‌ಲೈನ್‌ನಲ್ಲಿ ನೋಡಲು ಬಯಸಿದರೆ, ಎಚ್‌ಟಿಎಮ್‌ಎಲ್‌ ಫಾರ್ಮ್ಯಾಟ್‌ ಅನ್ನು ಆಯ್ಕೆಮಾಡಿ. ನೀವು ಟ್ರೇಸಸ್‌ ವೆಬ್‌ಸೈಟ್‌ನಿಂದ 26AS ಅನ್ನು ಡೌನ್‌ಲೋಡ್ ಮಾಡಲು ಬಯಸಿದರೆ ಮತ್ತು ನಂತರ ನಿಮ್ಮ ಟ್ಯಾಕ್ಸ್ ಕ್ರೆಡಿಟ್ ಸ್ಟೇಟ್‌ಮೆಂಟ್‌ನ ವಿವಿಧ ಭಾಗಗಳನ್ನು ನೋಡಲು ಬಯಸಿದರೆ, ಪಿಡಿಎಫ್‌ ಫಾರ್ಮ್ಯಾಟ್‌ನಲ್ಲಿ ಇರಲಿ.

ಫಾರ್ಮ್ 26ASನಲ್ಲಿನ ವಿವಿಧ ಭಾಗಗಳು ಯಾವುವು?

ಫಾರ್ಮ್ 26AS ಒಟ್ಟು 8 ಭಾಗಗಳನ್ನು ಹೊಂದಿದೆ, Aನಿಂದ H ವರೆಗೆ ಮತ್ತು ಅವುಗಳಲ್ಲಿ ಪ್ರತಿಯೊಂದೂ ನಿರ್ದಿಷ್ಟ ಟ್ಯಾಕ್ಸ್‌ ಅಂಶದೊಂದಿಗೆ ವ್ಯವಹರಿಸುತ್ತದೆ. ಅವುಗಳೆಂದರೆ;

ಭಾಗ 1: ಮೂಲದಲ್ಲಿ ಡಿಡಕ್ಟ್ ಮಾಡಲಾದ ಟ್ಯಾಕ್ಸ್ ವಿವರಗಳು (ಟಿಡಿಎಸ್)

ನೀವು ಟ್ರೇಸಸ್ ವೆಬ್‌ಸೈಟ್‌ನಲ್ಲಿ ಫಾರ್ಮ್ 26AS ಅನ್ನು ವೀಕ್ಷಿಸಿದಾಗ, ಪೆನ್ಷನ್ ಇನ್‌ಕಮ್, ಸ್ಯಾಲರಿ, ಇಂಟರೆಸ್ಟ್‌ ಇನ್‌ಕಮ್‌ ಇತ್ಯಾದಿಗಳ ಮೇಲಿನ ಟಿಡಿಎಸ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀವು ಕಾಣಬಹುದು. ಇದು ಕಲೆಕ್ಷನ್ ಅಕೌಂಟ್ ನಂಬರ್ (ಟಿಎಎನ್‌) ಜೊತೆಗೆ ಟ್ಯಾಕ್ಸ್ ಡಿಡಕ್ಷನ್ ವಿವರಗಳನ್ನು ಮತ್ತು ಎಷ್ಟು ಟಿಡಿಎಸ್ ಅನ್ನು ಡೆಪಾಸಿಟ್ ಮತ್ತು ಕಡಿತ ಮಾಡಲಾಗಿದೆ ಎಂಬುದನ್ನು ತೋರಿಸುತ್ತದೆ.

ಭಾಗ 2: ಮೂಲ 15G & 15Hನಲ್ಲಿ ಟ್ಯಾಕ್ಸ್ ಡಿಡಕ್ಷನ್ ವಿವರಗಳು

ಫಾರ್ಮ್ 15G ಮತ್ತು 15H ಎನ್ನುವುದು ವ್ಯಕ್ತಿಗಳು ತಮ್ಮ ಒಟ್ಟು ಇನ್‌ಕಮ್‌ ಟ್ಯಾಕ್ಸೇಬಲ್‌ ಲಿಮಿಟ್‌ಗಿಂತ ಕಡಿಮೆ ಬಿದ್ದರೆ, ಕೆಲವು ಪ್ರಕಾರದ ಇನ್‌ಕಮ್‌ ಮೇಲೆ ಮೂಲದಲ್ಲಿ ಟ್ಯಾಕ್ಸ್‌ ಡಿಡಕ್ಷನ್ ಅನ್ನು ತಪ್ಪಿಸಲು (ಟಿಡಿಎಸ್) ಬಳಸುವ ಸೆಲ್ಫ್-ಡಿಕ್ಲರೇಷನ್ ಫಾರ್ಮ್ ಆಗಿದೆ, ಟ್ಯಾಕ್ಸ್‌ಪೇಯರ್‌ಗಳಿಗೆ ನೆಮ್ಮದಿಯನ್ನು ಒದಗಿಸುತ್ತದೆ.

ಭಾಗ 3: ಸೆಕ್ಷನ್ 194Bಗೆ ಪ್ರಾವಿಷನ್ / ಸೆಕ್ಷನ್ 194Rನ ಸಬ್‌-ಸೆಕ್ಷನ್‌ (1)ಗೆ ಮೊದಲ ಪ್ರಾವಿಷನ್ / ವಿಭಾಗ 194Sನ ಸಬ್‌-ಸೆಕ್ಷನ್‌(1)ಗೆ ಪ್ರಾವಿಷನ್ ಅಡಿಯಲ್ಲಿನ ಟ್ರಾನ್ಸಾಕ್ಷನ್‌ಗಳ ವಿವರಗಳು

ಭಾಗ 4: ಸೆಕ್ಷನ್ 194IA ಅಡಿಯಲ್ಲಿ ಸ್ಥಿರ ಪ್ರಾಪರ್ಟಿಯ ಮಾರಾಟದ ಮೇಲೆ ಡಿಡಕ್ಟ್ ಮಾಡಲಾದ ಟ್ಯಾಕ್ಸ್ ವಿವರಗಳು

ಫಾರ್ಮ್ 26AS ನ ಈ ಸೆಕ್ಷನ್ ಪ್ರಾಪರ್ಟಿಯನ್ನು ಖರೀದಿಸುವಾಗ ನೀವು ಡಿಡಕ್ಟ್‌ ಮಾಡಿದ ಮತ್ತು ಡೆಪಾಸಿಟ್ ಮಾಡಿದ ಟಿಡಿಎಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿದೆ.

ಭಾಗ 5: ಫಾರ್ಮ್-26QE ಪ್ರಕಾರ ಸೆಕ್ಷನ್ 194Sನ ಸಬ್‌-ಸೆಕ್ಷನ್‌(1) ಪ್ರಾವಿಷನ್ ಅಡಿಯಲ್ಲಿ ಟ್ರಾನ್ಸಾಕ್ಷನ್‌ಗಳ ವಿವರಗಳು (ವರ್ಚುವಲ್ ಡಿಜಿಟಲ್ ಅಸೆಟ್‌ನ ಮಾರಾಟಗಾರರಿಗೆ

ಫಾರ್ಮ್-26QE ಪ್ರಕಾರ, ಸೆಕ್ಷನ್ 194Sನ ಸಬ್-ಸೆಕ್ಷನ್ (1) ಪ್ರಾವಿಷನ್ ಅಡಿಯಲ್ಲಿ ಟ್ರಾನ್ಸಾಕ್ಷನ್‌ಗಳು, ನಿರ್ದಿಷ್ಟವಾಗಿ ಅಂತಹ ಅಸೆಟ್‌ಗಳನ್ನು ಟ್ರಾನ್ಸ್‌ಫರ್‌ ಮಾಡುವಾಗ ನಿಗದಿತ ದರದಲ್ಲಿ ಟಿಡಿಎಸ್‌ ಅನ್ನು ಡಿಡಕ್ಟ್‌ ಮಾಡುವ ಅಗತ್ಯವಿರುವ ವರ್ಚುವಲ್ ಡಿಜಿಟಲ್ ಅಸೆಟ್‌ಗಳ ಮಾರಾಟಗಾರರಿಗೆ ಸಂಬಂಧಿಸಿದೆ.

ಭಾಗ 6: ಮೂಲದಲ್ಲಿ ಸಂಗ್ರಹಿಸಲಾದ ಟ್ಯಾಕ್ಸ್ ವಿವರಗಳು (ಟಿಸಿಎಸ್)

ಈ ಭಾಗವು ಅವರು ಮಾರಾಟ ಮಾಡಿದ ಕೆಲವು ಉತ್ಪನ್ನಗಳ ಮಾರಾಟಗಾರರಿಂದ ಸಂಗ್ರಹಿಸಿದ ಟಿಸಿಎಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿದೆ. ಟಿಸಿಎಸ್ ಮೂಲತಃ ಇನ್‌ಕಮ್‌ ಟ್ಯಾಕ್ಸ್‌ ಆಗಿದ್ದು, ನಿರ್ದಿಷ್ಟಪಡಿಸಿದ ಸರಕುಗಳ ಮಾರಾಟದ ಮೇಲೆ ಮಾರಾಟಗಾರರು ಪೇಯರ್‌ಗಳು ಅಥವಾ ಖರೀದಿದಾರರಿಂದ ಸಂಗ್ರಹಿಸುತ್ತಾರೆ. ಆದ್ದರಿಂದ, ಈ ಭಾಗದಲ್ಲಿ ಟ್ಯಾಕ್ಸ್ ಸಂಗ್ರಹಕಾರರ ವಿವರಗಳು, ಸಂಗ್ರಹಿಸಿದ ಒಟ್ಟು ಟ್ಯಾಕ್ಸ್, ಪಾವತಿಸಿದ ಒಟ್ಟು ಅಮೌಂಟ್ ಇತ್ಯಾದಿಗಳನ್ನು ನೀವು ಕಾಣಬಹುದು.

ಭಾಗ 7: ಪಾವತಿಸಿದ ರಿಫಂಡ್‌ನ ವಿವರಗಳು

ಈ ಭಾಗವು ಟ್ಯಾಕ್ಸ್‌ಪೇಯರ್‌ಗಳಿಂದ ಪಡೆದ ಟ್ಯಾಕ್ಸ್ ರಿಫಂಡ್‌ಗಳ(ಯಾವುದಾದರೂ ಇದ್ದರೆ) ವಿವರಗಳನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ನಿರ್ದಿಷ್ಟ ರಿಫಂಡ್ ಮಾಡಲಾಗಿರುವ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇದು ಒಳಗೊಂಡಿದೆ. ಇದು ಪಾವತಿಸಿದ ಅಮೌಂಟ್, ಪೇಮೆಂಟ್ ವಿಧ ಮತ್ತು ದಿನಾಂಕ, ಇತರ ವಿವರಗಳನ್ನು ಒಳಗೊಂಡಿರುತ್ತದೆ.

ಭಾಗ 8: 194IA/ 194IB /194M/194S (ಖರೀದಿದಾರರಿಗೆ/ಪ್ರಾಪರ್ಟಿಯ ಬಾಡಿಗೆದಾರರಿಗೆ/ಕಂಟ್ರಾಕ್ಟರ್‌ಗಳಿಗೆ ಅಥವಾ ವೃತ್ತಿಪರರಿಗೆ ಪೇಮೆಂಟ್‌ ಮಾಡುವವರಿಗೆ/ ವರ್ಚುವಲ್ ಡಿಜಿಟಲ್ ಅಸೆಟ್‌ನ ಖರೀದಿದಾರರಿಗೆ) ಅಡಿಯಲ್ಲಿ ಮೂಲದಲ್ಲಿ ಡಿಡಕ್ಟ್‌ ಮಾಡಲಾದ ಟ್ಯಾಕ್ಸ್‌ನ ವಿವರಗಳು

ಟ್ಯಾಕ್ಸ್ ಕಂಪ್ಲಯನ್ಸ್ ಮತ್ತು ಸಂಗ್ರವನ್ನು ಖಚಿತಪಡಿಸುವ, ಕ್ರಮವಾಗಿ ಪ್ರಾಪರ್ಟಿ ಖರೀದಿದಾರರು/ ಬಾಡಿಗೆದಾರರು, ಕಂಟ್ರಾಕ್ಟರ್‌ಗಳಿಗೆ ಪೇಮೆಂಟ್ ಮಾಡುವ ವ್ಯಕ್ತಿಗಳು/ ವೃತ್ತಿಪರರು ಮತ್ತು ವರ್ಚುವಲ್ ಡಿಜಿಟಲ್ ಅಸೆಟ್‌ಗಳ ಖರೀದಿದಾರರಂತಹ ವಿವಿಧ ವರ್ಗಗಳ ಟ್ಯಾಕ್ಸ್‌ಪೇಯರ್‌ಗಳಿಗೆ ಅಪ್ಲಿಕೇಬಲ್‌ ಆಗುವ 194IA, 194IB, 194M, ಮತ್ತು 194S ಸೆಕ್ಷನ್‌ಗಳ ಅಡಿಯಲ್ಲಿ ಮೂಲದಲ್ಲಿ (ಟಿಡಿಎಸ್) ಡಿಡಕ್ಟ್‌ ಮಾಡಲಾದ ಟ್ಯಾಕ್ಸ್‌.

ಭಾಗ 9: ಫಾರ್ಮ್ 26QE (ವರ್ಚುವಲ್ ಡಿಜಿಟಲ್ ಅಸೆಟ್ ಅನ್ನು ಖರೀದಿಸುವವರಿಗೆ) ಪ್ರಕಾರ 194Sನ ಸಬ್‌-ಸೆಕ್ಷನ್ (1) ಪ್ರಾವಿಷನ್ ಅಡಿಯಲ್ಲಿ ಟ್ರಾನ್ಸಾಕ್ಷನ್‌ಗಳು/ಡಿಮ್ಯಾಂಡ್ ಪೇಮೆಂಟ್‌ಗಳ ವಿವರಗಳು

ಫಾರ್ಮ್ 26QE ಪ್ರಕಾರ, ಸೆಕ್ಷನ್ 194Sನ ಸಬ್-ಸೆಕ್ಷನ್ (1) ರ ಪ್ರಾವಿಷನ್ ಅಡಿಯಲ್ಲಿ ಟ್ರಾನ್ಸಾಕ್ಷನ್‌ಗಳು/ಡಿಮ್ಯಾಂಡ್ ಪೇಮೆಂಟ್‌ಗಳು, ಅಂತಹ ಪೇಮೆಂಟ್‌ಗಳನ್ನು ಮಾಡುವಾಗ ನಿಗದಿತ ದರದಲ್ಲಿ ಟಿಡಿಎಸ್‌ ಅನ್ನು ಡಿಡಕ್ಟ್‌ ಮಾಡುವುದು ಅಗತ್ಯವಿರುವ ವರ್ಚುವಲ್ ಡಿಜಿಟಲ್ ಅಸೆಟ್‌ಗಳ ಖರೀದಿದಾರರಿಗೆ ಅಪ್ಲೈ ಆಗುತ್ತದೆ.

ಭಾಗ 10: ಟಿಡಿಎಸ್/ಟಿಸಿಎಸ್ ಡಿಫಾಲ್ಟ್‌ಗಳು* (ಸ್ಟೇಟ್‌ಮೆಂಟ್‌ಗಳ ಪ್ರೊಸೆಸಿಂಗ್)

ಶಾರ್ಟ್ ಡಿಡಕ್ಷನ್, ಇಂಟರೆಸ್ಟ್‌ ಪೇಮೆಂಟ್‌ ಡಿಫಾಲ್ಟ್‌, ಶುಲ್ಕ ತಡವಾಗಿ ಫೈಲ್ ಮಾಡುವಿಕೆ ಇತ್ಯಾದಿಗಳನ್ನು ಒಳಗೊಂಡಂತೆ ಸಬ್‌ಮಿಟ್‌ ಮಾಡಿದ ಟ್ಯಾಕ್ಸ್‌ ಡಿಡಕ್ಷನ್‌ ಅಥವಾ ಸಂಗ್ರಹಿತ ಸ್ಟೇಟ್‌ಮೆಂಟ್‌ಗಳಲ್ಲಿನ ವ್ಯತ್ಯಾಸಗಳು ಅಥವಾ ದೋಷಗಳನ್ನು ಟಿಡಿಎಸ್/ಟಿಸಿಎಸ್ ಡಿಫಾಲ್ಟ್‌ಗಳು ಉಲ್ಲೇಖಿಸುತ್ತವೆ. ಇಲ್ಲಿ ನೀವು ಟ್ಯಾಕ್ಸ್ ಡಿಫಾಲ್ಟ್‌ಗಳ ಬಗ್ಗೆ ಮಾಹಿತಿಯನ್ನು ತಿಳಿಯಬಹುದು. ಅಲ್ಲದೆ, ನೀವು ಸೆಕ್ಷನ್ 234E, ಇತ್ಯಾದಿ ಅಡಿಯಲ್ಲಿ ತಡವಾದ ಶುಲ್ಕಗಳು, ಸ್ಟೇಟ್‌ಮೆಂಟ್‌ಗಳ ಪ್ರೊಸೆಸಿಂಗ್‌ಗೆ ಸಂಬಂಧಿಸಿದಂತೆ ಡಿಫಾಲ್ಟ್‌ಗಳ ಬಗ್ಗೆ ವಿವರಗಳನ್ನು ತಿಳಿಯಬಹುದು. ಪ್ಯಾನ್ ಸಂಖ್ಯೆಯಿಂದ ಫಾರ್ಮ್ 26AS ಅನ್ನು ಡೌನ್‌ಲೋಡ್ ಮಾಡುವುದು ಮತ್ತು ಡಿಡಕ್ಟರ್‌ರನ್ನು ಸಂಪರ್ಕಿಸಲು ಪ್ರತಿಯನ್ನು ಇಟ್ಟುಕೊಳ್ಳುವುದು ಮತ್ತು ನೀವು ಯಾವುದೇ ವ್ಯತ್ಯಾಸವನ್ನು ಕಂಡುಕೊಂಡರೆ ಸ್ಪಷ್ಟೀಕರಣವನ್ನು ಕೇಳುವುದು ಸೂಕ್ತವಾಗಿದೆ.

26AS ಟ್ಯಾಕ್ಸ್ ಕ್ರೆಡಿಟ್ ಸ್ಟೇಟ್‌ಮೆಂಟ್‌ನಲ್ಲಿ ಇತ್ತೀಚಿನ ಅಪ್‌ಡೇಟ್‌ಗಳು ಯಾವುವು?

ಸಿಬಿಡಿಟಿ (ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್) ಪರಿಚಯಿಸಿದ ಫಾರ್ಮ್ 26AS ಫೈಲಿಂಗ್‌ನಲ್ಲಿ ಕೆಲವು ಹೊಸ ಬದಲಾವಣೆಗಳನ್ನು ನೀವು ಕಾಣಬಹುದು. ಅವುಗಳನ್ನು ಚೆಕ್ ಮಾಡಿ!

  • ಷೇರುಗಳ ಖರೀದಿ, ಕ್ರೆಡಿಟ್ ಕಾರ್ಡ್ ಪೇಮೆಂಟ್‌ಗಳು, ವಿದೇಶಿ ಕರೆನ್ಸಿ, ಸರಕು ಮತ್ತು ಸೇವೆಗಳ ಕ್ಯಾಶ್ ಪೇಮೆಂಟ್ ಇತ್ಯಾದಿಗಳನ್ನು ಒಳಗೊಂಡಂತೆ ಎಲ್ಲಾ ರೀತಿಯ ಟ್ರಾನ್ಸಾಕ್ಷನ್‌ಗಳ ಕಾಂಪ್ರೆಹೆನ್ಸಿವ್ ಮಾಹಿತಿಯನ್ನು ಫಾರ್ಮ್ 26AS ಹೊಂದಿರುತ್ತದೆ.
  • ಎಲ್ಲಾ ಟ್ಯಾಕ್ಸ್‌ಪೇಯರ್‌ಗಳ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಇಮೇಲ್ ಐಡಿ, ಇತ್ಯಾದಿಗಳನ್ನು ನೀವು ಪ್ಯಾನ್‌ನೊಂದಿಗೆ ಫಾರ್ಮ್ 26AS ಅನ್ನು ವೀಕ್ಷಿಸಿದಾಗ ಈಗ ಕಾಣಬಹುದು.
  • ಇದು ಲೈವ್ 26AS ಫಾರ್ಮ್ ಆಗಿರುತ್ತದೆ, ಇದು ಪ್ರತಿ 3 ತಿಂಗಳಿಗೊಮ್ಮೆ ಅಪ್‌ಡೇಟ್‌ ಆಗುತ್ತದೆ.

ಈ ಎಲ್ಲಾ ಬದಲಾವಣೆಗಳ ಹಿಂದಿನ ಮುಖ್ಯ ಉದ್ದೇಶವೆಂದರೆ ಟ್ಯಾಕ್ಸ್ ಫೈಲಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಸ್ಥಾಪಿಸುವುದು. ಅಂತಹ ಹಣಕಾಸಿನ ಮಾಹಿತಿಯ ಮೇಲೆ ಗಮನವನ್ನು ಇಟ್ಟುಕೊಳ್ಳುವುದರಿಂದ ಐಟಿಆರ್ ಅನ್ನು ಫೈಲ್ ಮಾಡುವಾಗ ವ್ಯತ್ಯಾಸಗಳನ್ನು ತಪ್ಪಿಸುವುದು ಸುಲಭವಾಗುತ್ತದೆ.

ಈಗ ಇ-ಫೈಲಿಂಗ್ ಪೋರ್ಟಲ್‌ನ ಪ್ರಾರಂಭದೊಂದಿಗೆ ಇನ್‌ಕಮ್‌ ಟ್ಯಾಕ್ಸ್‌ ಫಾರ್ಮ್ 26AS ಡೌನ್‌ಲೋಡ್ ಪ್ರೊಸೆಸ್ ಸರಳವಾಗಿದೆ. ನಿಮ್ಮ ಟ್ಯಾಕ್ಸ್ ನಿರ್ಬಂಧಗಳು, ಟ್ರಾನ್ಸಾಕ್ಷನ್ ವಿವರಗಳು ಇತ್ಯಾದಿಗಳನ್ನು ನೀವು ಕೆಲವೇ ನಿಮಿಷಗಳಲ್ಲಿ ಚೆಕ್ ಮಾಡಹುದು.

ಪದೇ ಪದೇ ಕೇಳಲಾದ ಪ್ರಶ್ನೆಗಳು

ನೀವು ಭಾರತದ ಹೊರಗೆ ವಾಸಿಸುತ್ತಿದ್ದರೆ ನೀವು ಫಾರ್ಮ್ 26AS ಅನ್ನು ಆ್ಯಕ್ಸೆಸ್ ಮಾಡಬಹುದೇ?

ಹೌದು, ನೀವು ಟ್ರೇಸಸ್ ವೆಬ್‌ಸೈಟ್‌ನಲ್ಲಿ ಎನ್‌ಆರ್‌ಐ ಸೇವೆಗಳಿಗೆ ರಿಜಿಸ್ಟರ್‌ ಮಾಡಿಕೊಳ್ಳಬೇಕು ಮತ್ತು ಫಾರ್ಮ್ 26AS ಅನ್ನು ವೀಕ್ಷಿಸಲು, ಡೌನ್‌ಲೋಡ್ ಮಾಡಲು ಮತ್ತು ಇ ಫೈಲಿಂಗ್ ಮಾಡಲು ಅದೇ ಹಂತಗಳನ್ನು ಅನುಸರಿಸಬಹುದು.

ಫಾರ್ಮ್ 26ASನಲ್ಲಿ ನಾನು ಹೇಗೆ ತಿದ್ದುಪಡಿಗಳನ್ನು ಮಾಡಬಹುದು?

ನಿಮ್ಮ ಫಾರ್ಮ್ 26ASನಲ್ಲಿ ಯಾವುದೇ ರೀತಿಯ ದೋಷಗಳನ್ನು ನೀವು ಗಮನಿಸಿದರೆ, ನೀವು ನೇರವಾಗಿ ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಯನ್ನು ಸಂಪರ್ಕಿಸಿ ಮತ್ತು ಅದನ್ನು ಸರಿಪಡಿಸಲು ವಿನಂತಿಸಬಹುದು.