ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿ
Instant Policy, No Medical Check-ups

ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವೇ?

ನೀವು ವಿದೇಶಕ್ಕೆ ಪ್ರಯಾಣಿಸಿದ್ದೀರಾ ಅಥವಾ ಶೀಘ್ರದಲ್ಲೇ ಇಂಟರ್ನ್ಯಾಷನಲ್ ಟ್ರಿಪ್ ಪ್ಲಾನ್ ಮಾಡುತ್ತಿದ್ದೀರಾ? ಹೌದು ಎಂದಾದರೆ, ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಪ್ರಾಮುಖ್ಯತೆಯ ಬಗ್ಗೆ ನೀವು ತಿಳಿದಿರಬೇಕು.

ನೀವು ವಿದೇಶದಲ್ಲಿರುವಾಗ, ತುರ್ತು ಬಿಕ್ಕಟ್ಟಿನ ಕಾರಣದಿಂದ ಉಂಟಾಗುವ ನಿಮ್ಮ ಎಲ್ಲಾ ಖರ್ಚುಗಳನ್ನು ನಿಮ್ಮ ಇನ್ಶೂರರ್ ನೋಡಿಕೊಳ್ಳಬಹುದು. ನಿಮ್ಮ ಎಲ್ಲಾ ಹಣವನ್ನು ನೀವು ಕಳೆದುಕೊಳ್ಳಬಹುದು ಅಥವಾ ವಿಮಾನಗಳ ವಿಳಂಬದಿಂದ ಸಿಕ್ಕಿಹಾಕಿಕೊಳ್ಳಬಹುದು ಅಥವಾ ಮೆಡಿಕಲ್ ತುರ್ತುಸ್ಥಿತಿಯಿಂದ ಬಳಲಬಹುದು.

ಆದರೆ ಚಿಂತಿಸಬೇಡಿ! ಇಂಥಾ ಬಹುತೇಕ ಹೆಚ್ಚಿನ ಸಂದರ್ಭಗಳಲ್ಲಿ, ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಕೆಲಸ ಮಾಡುತ್ತದೆ. ಈ ಇನ್ಶೂರೆನ್ಸ್ ಡಾಕ್ಯುಮೆಂಟ್ ತನ್ನ ಪಾತ್ರವನ್ನು ನಿರ್ವಹಿಸುತ್ತದೆ ಮತ್ತು ನಿಮ್ಮ ಅನಿರೀಕ್ಷಿತ ಹಣಕಾಸಿನ ನಷ್ಟಗಳನ್ನು ತಡೆಯುತ್ತದೆ. ಆದ್ದರಿಂದ, ಇಲ್ಲಿ ಟ್ರಾವೆಲ್ ಪಾಲಿಸಿ ಮುಖ್ಯ ಎಂದು ತೋರುತ್ತದೆ, ಆದರೆ ಅದು ಕಡ್ಡಾಯವಾಗಿದೆಯೇ ಎಂದು ನಾವು ತಿಳಿದುಕೊಳ್ಳೋಣವೇ?

ಇಂಟರ್ನ್ಯಾಷನಲ್ ಟ್ರಾವೆಲ್ ಗಾಗಿ ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವೇ?

ಪ್ರಪಂಚದಾದ್ಯಂತ ಸುಮಾರು 34 ದೇಶಗಳು ಪ್ರವಾಸಿಗರಿಗೆ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಕಡ್ಡಾಯಗೊಳಿಸಿವೆ. ಮೆಡಿಕಲ್ ತುರ್ತು ಪರಿಸ್ಥಿತಿ, ಅಪಘಾತಗಳು, ಲಗೇಜ್/ಪಾಸ್‌ಪೋರ್ಟ್‌ಗಳ ನಷ್ಟ, ಪ್ರಾಪರ್ಟಿ ಡ್ಯಾಮೇಜ್ ಅಥವಾ ದೈಹಿಕ ಗಾಯದ ಲಯಬಿಲಿಟಿಗಳಿಂದಾಗಿ ಪ್ರವಾಸಿಗರು ಆರ್ಥಿಕ ಬಿಕ್ಕಟ್ಟಿಗೆ ಸಿಲುಕುವುದನ್ನು ತಡೆಯುವುದಕ್ಕಾಗಿ ಅದನ್ನು ಈ ದೇಶಗಳು ಕಡ್ಡಾಯಗೊಳಿಸಿವೆ. ಅದು ಏಕೆಂದರೆ ಜೀವನ ಮತ್ತು ಚಿಕಿತ್ಸೆ ವೆಚ್ಚ ತುಂಬಾ ಹೆಚ್ಚಾಗಿದೆ.

ಇತರ ದೇಶಗಳಲ್ಲಿ ಪ್ರವಾಸಿಗರಿಗೆ ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವಾಗಿಲ್ಲದಿರಬಹುದು, ಆದರೆ ನೀವು ಯಾವುದೇ ವಿದೇಶಿ ದೇಶವನ್ನು ಅನ್ವೇಷಿಸುವ ಮೊದಲು ಅದನ್ನು ಹೊಂದುವುದನ್ನು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ. ಇದು ಪ್ರಸ್ತುತವಾಗಿದೆ ಏಕೆಂದರೆ:

ನೀವು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಏಕೆ ಖರೀದಿಸಬೇಕು?

ಯುಎಸ್‌, ಜಪಾನ್, ಯುಕೆ ಮತ್ತು ಇತರ ದೇಶಗಳಂತಹ ಅನೇಕ ದೇಶಗಳಿವೆ, ಅಲ್ಲಿ ಮೆಡಿಕಲ್ ಚಿಕಿತ್ಸೆಯ ವೆಚ್ಚವು ಗಮನಾರ್ಹವಾಗಿ ಹೆಚ್ಚಾಗಿದೆ. ಯಾವುದೇ ಅನಿರೀಕ್ಷಿತ ಘಟನೆಯು ನಿಮ್ಮನ್ನು ವಿದೇಶದ ನೆಲದಲ್ಲಿ ಸಿಕ್ಕಿಹಾಕಿಸಬಹುದು. ಮತ್ತು ಖಂಡಿತವಾಗಿಯೂ, ಅದು ಸಂಭವಿಸುವುದನ್ನು ನೀವು ಬಯಸಲಾರಿರಿ. ನೀವು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಏಕೆ ಖರೀದಿಸಬೇಕು ಎಂಬುದಕ್ಕೆ ಕಾರಣಗಳು ಇಲ್ಲಿವೆ:

  • ಮೆಡಿಕಲ್ ಅಸಿಸ್ಟೆನ್ಸ್: ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ತಕ್ಷಣದ ಚಿಕಿತ್ಸೆ ಅಥವಾ ತುರ್ತು ಸ್ಥಳಾಂತರಿಸುವಿಕೆಗೆ ಉಂಟಾಗುವ ನಿಮ್ಮ ಎಲ್ಲಾ ಮೆಡಿಕಲ್ ವೆಚ್ಚಗಳನ್ನು ಕವರ್ ಮಾಡುತ್ತದೆ.
  • ಕ್ಯಾನ್ಸಲೇಷನ್ ವೆಚ್ಚ: ಕೆಲವು ಅನಿವಾರ್ಯ ಸಂದರ್ಭಗಳಿಂದಾಗಿ ನೀವು ಪ್ರವಾಸವನ್ನು ಮುಂದುವರಿಸಲು ಅಥವಾ ಆರಂಭಿಸಲು ಸಾಧ್ಯವಿಲ್ಲ ಎಂದು ಭಾವಿಸೋಣ, ಆದರೆ ಎಲ್ಲಾ ಬುಕಿಂಗ್‌ಗಳನ್ನು ಮಾಡಿ ಆಗಿದೆ. ವಿಮಾನ-ಟಿಕೆಟ್‌ಗಳು ಮತ್ತು ಹೋಟೆಲ್ ಬುಕಿಂಗ್‌ಗಳ ಕ್ಯಾನ್ಸಲೇಷನ್ ವೆಚ್ಚವನ್ನು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುವುದು.
  • ನಿಮ್ಮ ಪಾಸ್‌ಪೋರ್ಟ್‌ ನಷ್ಟ : ನಿಮ್ಮ ಪಾಸ್‌ಪೋರ್ಟ್/ವ್ಯಾಲೆಟ್ ಕಳೆದುಹೋದರೆ, ನಿಮ್ಮ ಟ್ರಾವೆಲ್ ಪಾಲಿಸಿ ಪೂರೈಕೆದಾರರು ತುರ್ತು ಹಣವನ್ನು ವ್ಯವಸ್ಥೆ ಮಾಡುತ್ತಾರೆ ಮತ್ತು ಪಾಸ್‌ಪೋರ್ಟ್ ಅನ್ನು ಬದಲಾಯಿಸುತ್ತಾರೆ.
  • ನಿಮ್ಮ ಬ್ಯಾಗೇಜ್ ನಷ್ಟ: ನಿಮ್ಮ ಇನ್ಶೂರೆನ್ಸ್ ಕಂಪನಿಯು ಪೂರ್ವನಿರ್ಧರಿತ ಮೊತ್ತದ ಪರಿಹಾರವನ್ನು ವ್ಯವಸ್ಥೆ ಮಾಡುತ್ತದೆ. ಈ ಪರಿಹಾರದ ಮಿತಿಯನ್ನು ನಿಮ್ಮ ರೆಫರೆನ್ಸ್‌ಗಾಗಿ ಟ್ರಾವೆಲ್ ಪಾಲಿಸಿಯಲ್ಲಿ ಉಲ್ಲೇಖಿಸಲಾಗಿದೆ.
  • ವಿಮಾನದ ವಿಳಂಬ: ನೀವು ಖರೀದಿಸಿದ ಟ್ರಾವೆಲ್ ಪಾಲಿಸಿಯು ವಿಮಾನಗಳ ಕ್ಯಾನ್ಸಲೇಶನ್/ವಿಳಂಬವನ್ನು ಕವರ್ ಮಾಡುತ್ತದೆ.

ಟ್ರಾವೆಲ್ ಇನ್ಶೂರೆನ್ಸ್‌ನಿಂದಾಗಿ ವೀಸಾ ಅಪ್ಲಿಕೇಶನ್ ಮೇಲೆ ಯಾವುದೇ ಸಕಾರಾತ್ಮಕ ಪರಿಣಾಮ ಇದೆಯೇ?

ಹೌದು, ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ವೀಸಾ ಅಪ್ಲಿಕೇಶನ್ ಪ್ರೊಸೆಸ್ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ವೀಸಾ ಪ್ರೊಸೆಸಿಂಗ್‌ಗೆ ಇರುವ ಮೂಲಭೂತ ಅವಶ್ಯಕತೆಗಳಲ್ಲಿ ಟ್ರಾವೆಲ್ ಪಾಲಿಸಿಯ ಅಗತ್ಯವನ್ನು ನಮೂದಿಸಲಾಗಿದೆ. ಮೆಡಿಕಲ್ ಅಥವಾ ಇತರ ತುರ್ತು ಸಂದರ್ಭದಲ್ಲಿ, ನೀವು ವೆಚ್ಚವನ್ನು ಭರಿಸಲು ಸಾಧ್ಯವಿದೆ ಎಂದು ಅಧಿಕಾರಿಗಳು ತಮಗೆ ಮತ್ತು ನಿಮಗೆ ಭರವಸೆ ನೀಡಲು ಬಯಸುತ್ತಾರೆ. 

ಟ್ರಾವೆಲ್ ಪಾಲಿಸಿಯು ದೈಹಿಕ ಗಾಯ ಅಥವಾ ಪ್ರಾಪರ್ಟಿಯ ನಿಮ್ಮ ಲಯಬಿಲಿಟಿಯನ್ನು ಕವರ್ ಮಾಡುತ್ತದೆ. ಆದ್ದರಿಂದ, ಇನ್ಶೂರೆನ್ಸ್ ಕಡ್ಡಾಯವಾಗಿರುವ ದೇಶಗಳ ಎಂಬೆಸಿಯ ರೆಪ್ರೆಸೆಂಟೇಟಿವ್‌ಗಳು ನಿಮ್ಮ ಟ್ರಾವೆಲ್ ಪಾಲಿಸಿಯನ್ನು ಮುಂಚಿತವಾಗಿ ಚೆಕ್ ಮಾಡುತ್ತಾರೆ. ನಿಮ್ಮ ತಪ್ಪಿನಿಂದಾಗಿ ನೀವು ಅಥವಾ ನೀವು ಭೇಟಿ ನೀಡುವ ದೇಶದ ಸ್ಥಳೀಯ ಪ್ರಜೆಗಳು ತೊಂದರೆ ಅನುಭವಿಸುವುದನ್ನು ಅವರು ಬಯಸುವುದಿಲ್ಲ.