ಪಾಸ್‌ಪೋರ್ಟ್ ಗಾಗಿ ಅರ್ಜಿಯನ್ನು ಸಲ್ಲಿಸುವುದು ಹೇಗೆ: ಆನ್‌ಲೈನ್ ಹಾಗೂ ಆಫ್ಲೈನ್ ಪ್ರಕ್ರಿಯೆಯ ವಿವರಣೆ
ನೀವು ತೀರ್ಥ ಯಾತ್ರೆ, ಪರಿವಾರದ ಭೇಟಿ, ಶಿಕ್ಷಣ, ಪ್ರವಾಸ ಇತ್ಯಾದಿಗಳಿಗಾಗಿ ವಿದೇಶಕ್ಕೆ ಹೋಗಲು ಯೋಚಿಸುತ್ತಿದ್ದರೆ ನೀವು ತೆಗೆದುಕೊಂಡು ಹೋಗಬೇಕಾದ ವಸ್ತುಗಳ ಪಟ್ಟಿಯಲ್ಲಿ ಪಾಸ್‌ಪೋರ್ಟ್ ಮೊದಲಿನದಾಗಿರಬೇಕು.
ಅದಾಗ್ಯೂ, ಮೊದಲ ಬಾರಿಗೆ ಭಾರತದಿಂದ ಹೊರಗೆ ಪ್ರಯಾಣಿಸುತ್ತಿರುವ ವ್ಯಕ್ತಿಗಳು ಪಾಸ್‌ಪೋರ್ಟ್ ಗಾಗಿ ಆನ್‌ಲೈನ್ ಅರ್ಜಿ ಸಲ್ಲಿಕೆಯ ಸರಿಯಾದ ವಿಧಾನದ ಬಗ್ಗೆ ಗೊಂದಲಕ್ಕೀಡಾಗುವ ಸಾಧ್ಯತೆ ಹೆಚ್ಚಾಗಿಯೇ ಇರುತ್ತದೆ.
ನೀವು ಇಂತಹ ಸಂದರ್ಭದಲ್ಲಿ ಸಿಲುಕಿದ್ದರೆ, ಈ ಪ್ರಕ್ರಿಯೆಯ ಬಗ್ಗೆ ಮಾರ್ಗದರ್ಶನ ನೀಡಬಲ್ಲ ಸೂಕ್ತ ಲೇಖನ ಇಲ್ಲಿದೆ.
ಓದುದನ್ನು ಮುಂದುವರಿಸಿ!
ಪಾಸ್‌ಪೋರ್ಟ್ ಗಾಗಿ ಆನ್‌ಲೈನ್ ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಆನ್‌ಲೈನ್ ಪಾಸ್‌ಪೋರ್ಟ್ ಅಪ್ಲಿಕೇಶನ್ ಗಾಗಿ ವಿವರವಾದ ಹಂತಗಳು ಇಲ್ಲಿವೆ-
ಹಂತ 1: ಅಧಿಕೃತ ಪಾಸ್‌ಪೋರ್ಟ್ ಸೇವಾ ವೆಬ್ಸೈಟ್ ಗೆ ಭೇಟಿ ನೀಡಿ ಹಾಗೂ ನಿಮ್ಮನ್ನು ನೀವು ರಿಜಿಸ್ಟರ್ ಮಾಡಿ. ನೀವು ನಿಮ್ಮ ಅಸ್ತಿತ್ವದಲ್ಲಿರುವ ಖಾತೆಗೂ ಲಾಗಿನ್ ಮಾಡಿಕೊಳ್ಳಬಹುದು.
ಹಂತ 2: ಈಗ, "ಹೊಸ ಪಾಸ್‌ಪೋರ್ಟ್/ಪಾಸ್‌ಪೋರ್ಟ್ ಮರುಪಡೆಯುವಿಕೆಗೆ ಅರ್ಜಿ ಸಲ್ಲಿಸಿ" ಯ ಮೇಲೆ ಕ್ಲಿಕ್ ಮಾಡಿ. "ಹೊಸ ಪಾಸ್‌ಪೋರ್ಟ್' ವರ್ಗದ ಅಡಿಯಲ್ಲಿ ಪಾಸ್‌ಪೋರ್ಟ್ ಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸುವಾಗ ನೀವು ಅಸ್ತಿತ್ವದಲ್ಲಿರುವ ಪಾಸ್‌ಪೋರ್ಟ್ ಅನ್ನು ಹೊಂದಿರಬಾರದು ಎಂದು ಗಮನವಿರಲಿ.
ಹಂತ 3: ಪಾಸ್‌ಪೋರ್ಟ್ ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ನಲ್ಲಿ ನಿಖರವಾದ ವಿವರಗಳನ್ನು ಗಮನವಿಟ್ಟು ಭರ್ತಿ ಮಾಡಿ ಹಾಗೂ "ಸಬ್ಮಿಟ್" ಮೇಲೆ ಕ್ಲಿಕ್ ಮಾಡಿ.
ಹಂತ 4: ನಂತರ, ಹೋಮ್ ಪೇಜ್ ಗೆ ಹಿಂತಿರುಗಿ "ಸೇವ್ ಮಾಡಲಾದ/ಸಲ್ಲಿಸಲಾದ ಅಪ್ಲಿಕೇಶನ್ ಗಳನ್ನು ವಿವ್ಯೂ " ಅನ್ನು ಆಯ್ಕೆ ಮಾಡಿ.
ಹಂತ 5: "ಸೇವ್ ಮಾಡಲಾದ/ಸಲ್ಲಿಸಲಾದ ಅಪ್ಲಿಕೇಶನ್ ಗಳನ್ನು ವೀಕ್ಷಿಸಿ" ಇದರಲ್ಲಿ "ಪೇ ಅಂಡ್ ಅಪಾಯಿಂಟ್ಮೆಂಟ್ ಬುಕ್ ಮಾಡಿ" ಮೇಲೆ ಕ್ಲಿಕ್ ಮಾಡಿ.
ಹಂತ 6: ನೀವು ನಿಮ್ಮ ಅನುಕೂಲದ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಅಪಾಯಿಂಟ್ಮೆಂಟ್ ಅನ್ನು ಬುಕ್ ಮಾಡಬಹುದಾಗಿದೆ. ನಂತರ, ಆನ್‌ಲೈನ್ ಅಥವಾ ಆಫ್ಲೈನ್ ಪಾವತಿಯನ್ನು ಆಯ್ಕೆ ಮಾಡಿ ಹಾಗೂ ಮುಂದುವರಿಯಿರಿ.
ಈ ಪ್ರಕ್ರಿಯೆ ಪೂರ್ಣವಾದ ಬಳಿಕ, ' ಪ್ರಿಂಟ್ ಅಪ್ಲಿಕೇಶನ್ ರಿಸೀಪ್ಟ್' ನ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಅಪ್ಲಿಕೇಶನ್ ರೆಫೆರೆನ್ಸ್ ಸಂಖ್ಯೆಯನ್ನು ಬಳಸಿ ನೀವು ಅಪ್ಲಿಕೇಶನ್ ರಶೀದಿಯ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ನೀವು ಅಪಾಯಿಂಟ್ಮೆಂಟ್ ವಿವರಗಳನ್ನು ಹೊಂದಿರುವ ಒಂದು ಎಸ್ಎಂಎಸ್ ಅನ್ನು ಪಡೆಯುವಿರಿ. ನಿಗದಿತ ದಿನಾಂಕದಂದು ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ನೀವು ಭೇಟಿ ನೀಡಿದಾಗ ಇದು ನಿಮ್ಮ ಅಪಾಯಿಂಟ್ಮೆಂಟಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.
ನಿಮ್ಮ ಅರ್ಹತೆಯ ಪುರಾವೆಯಾಗಿ ನೀವು ಎಲ್ಲಾ ಒರಿಜಿನಲ್ ಡಾಕ್ಯುಮೆಂಟುಗಳನ್ನು ತೆಗೆದುಕೊಂಡು ಬರುವುದನ್ನು ಮರೆಯಬೇಡಿ.
ಪಾಸ್‌ಪೋರ್ಟ್ ಅಪ್ಲಿಕೇಶನ್ ಗಾಗಿ ಅಗತ್ಯವಿರುವ ದಾಖಲೆಗಳು
ಯಾವುದೇ ಗೊಂದಲವಿಲ್ಲದೆ ಹೊಸ ಪಾಸ್‌ಪೋರ್ಟ್ ಗಾಗಿ ಅರ್ಜಿ ಸಲ್ಲಿಸಲು ವ್ಯಕ್ತಿಗಳು ಈ ಕೆಳಗೆ ನೀಡಲಾದ ಡಾಕ್ಯುಮೆಂಟುಗಳನ್ನು ಒದಗಿಸಬೇಕಾಗುವುದು-
ಪ್ರಸ್ತುತ ವಿಳಾಸದ ಪುರಾವೆ, ಇವುಗಳಲ್ಲಿ ಯಾವುದಾದರೂ ಆಗಿರಬಹುದು -
ಯಾವುದೇ ಉಪಯುಕ್ತತೆಯ ಬಿಲ್ ಗಳು
ಆದಾಯ ತೆರಿಗೆ ಮೌಲ್ಯಮಾಪನ ಆದೇಶ, ಚುನಾವಣಾ ಆಯೋಗದ ಐಡಿ
ಆಧಾರ್ ಕಾರ್ಡ್, ಬಾಡಿಗೆ ಒಪ್ಪಂದ.
ಹೆತ್ತವರ ಪಾಸ್‌ಪೋರ್ಟ್ ಪ್ರತಿ (ಮೊದಲ ಹಾಗೂ ಕೊನೆಯ ಪುಟ), ಅಪ್ರಾಪ್ತ ವಯಸ್ಕರಾಗಿದ್ದಲ್ಲಿ
ಜನನ ದಿನಾಂಕದ ಪುರಾವೆ ಇವುಗಳಲ್ಲಿ ಯಾವುದಾದರೂ ಆಗಿರಬಹುದು -
ಜನನ ಹಾಗೂ ಮರಣದ ರೆಜಿಸ್ಟ್ರಾರ್ ಅಥವಾ ನಗರಸಭೆ ಅಥವಾ ಅನ್ಯ ನಿಗದಿತ ಅಧಿಕಾರ ಒದಗಿಸಿರುವಂತಹ ಜನನ ಪ್ರಮಾಣಪತ್ರ.
ಆಧಾರ್ ಕಾರ್ಡ್
ವೋಟರ್ ಐಡಿ ಕಾರ್ಡ್
ಆದಾಯ ತೆರಿಗೆ ಇಲಾಖೆ ನೀಡಿರುವ ಪಾನ್ ಕಾರ್ಡ್
- ಇಸಿಆರ್ ಅಲ್ಲದ(ಪೂರ್ವದಲ್ಲಿ ಇಸಿಎನ್ಆರ್ ಆಗಿದ್ದ) ಯಾವುದೇ ವರ್ಗಗಳ ಡಾಕ್ಯುಮೆಂಟ್ ಪುರಾವೆ
ಪಾಸ್‌ಪೋರ್ಟ್ ಅಪ್ಲಿಕೇಶನ್ ಶುಲ್ಕ
ಆನ್‌ಲೈನ್ ಅಥವಾ ಆಫ್ಲೈನ್ ಆಗಿ ಪಾಸ್‌ಪೋರ್ಟ್ ಅಪ್ಲಿಕೇಶನ್ ಸಲ್ಲಿಸಲು ಅಗತ್ಯವಿರುವ ಶುಲ್ಕಗಳನ್ನು ಹೊಂದಿರುವ ಕೋಷ್ಟಕವನ್ನು ಇಲ್ಲಿ ನೀಡಲಾಗಿದೆ -
| ಸೇವೆಗಳು | ಅಪ್ಲಿಕೇಶನ್ ಶುಲ್ಕ | ತತ್ಕಾಲ್ ಅಪ್ಲಿಕೇಶನ್ ಶುಲ್ಕ |
| 10 ವರ್ಷಗಳ ವ್ಯಾಲಿಡಿಟಿ ಹೊಂದಿರುವ ವೀಸಾ ಪುಟಗಳು (36 ಪುಟಗಳು) ಮುಗಿದುಹೋಗಿರುವ ಕಾರಣದಿಂದಾಗಿ ಹೆಚ್ಚುವರಿ ಕಿರುಹೊತ್ತಿಗೆಯುಳ್ಳ ಹೊಸ ಪಾಸ್‌ಪೋರ್ಟ್/ಪಾಸ್‌ಪೋರ್ಟ್ ಮರು-ಸಂಚಿಕೆ. | ₹ 1,500 | ₹ 2,000 |
| 10 ವರ್ಷಗಳ ವ್ಯಾಲಿಡಿಟಿ ಹೊಂದಿರುವ ವೀಸಾ ಪುಟಗಳು (60 ಪುಟಗಳು) ಮುಗಿದುಹೋಗಿರುವ ಕಾರಣದಿಂದಾಗಿ ಹೆಚ್ಚುವರಿ ಕಿರುಹೊತ್ತಿಗೆಯುಳ್ಳ ಹೊಸ ಪಾಸ್‌ಪೋರ್ಟ್/ಪಾಸ್‌ಪೋರ್ಟ್ ಮರುಹಂಚಿಕೆ . | ₹ 2,000 | ₹ 2,000 |
| ಅಪ್ರಾಪ್ತ ವಯಸ್ಕರಿಗೆ (18 ವರ್ಷ ಕೆಳಪಟ್ಟವರಿಗೆ), 5 ವರ್ಷ ಮಾನ್ಯತೆ ಇರುವ ಅಥವಾ ಅವರು 18 ರ ವಯಸ್ಸನ್ನು ತಲುಪುವವರೆಗೆ, ಯಾವುದು ಮೊದಲು ಬರುವುದೋ, ಹೊಸ ಪಾಸ್‌ಪೋರ್ಟ್/ಪಾಸ್‌ಪೋರ್ಟ್ ಮರು-ಸಂಚಿಕೆ (36 ಪುಟಗಳು). | ₹ 1,000 | ₹ 2,000 |
| ಪಾಸ್‌ಪೋರ್ಟ್(36 ಪುಟಗಳು) ಕಳೆದುಹೋದಲ್ಲಿ, ಕೆಟ್ಟುಹೋದಲ್ಲಿ ಅಥವಾ ಕಳವಾದಲ್ಲಿ ಬದಲಿ ಪಾಸ್‌ಪೋರ್ಟ್ ನೀಡುವಿಕೆ | ₹ 3,000 | ₹ 2,000 |
| ಪಾಸ್‌ಪೋರ್ಟ್(60 ಪುಟಗಳು) ಕಳೆದುಹೋದಲ್ಲಿ, ಕೆಟ್ಟುಹೋದಲ್ಲಿ ಅಥವಾ ಕಳವಾದಲ್ಲಿ ಬದಲಿ ಪಾಸ್‌ಪೋರ್ಟ್ ನೀಡುವಿಕೆ | ₹ 3,500 | ₹ 2,000 |
| ಪೋಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (ಪಿಸಿಸಿ) | ₹ 500 | ಏನೂ ಇಲ್ಲ |
| ಇಸಿಆರ್ ತೆಗೆಯುವಿಕೆ ಪಾಸ್‌ಪೋರ್ಟ್‌ನ ಬದಲಿ (36 ಪುಟಗಳು) / ವೈಯಕ್ತಿಕ ವಿವರಗಳಲ್ಲಿ ಬದಲಾವಣೆ (10-ವರ್ಷದ ವ್ಯಾಲಿಡಿಟಿ) | ₹ 1,500 | ₹ 2,000 |
| ಇಸಿಆರ್ ತೆಗೆಯುವಿಕೆ/ವೈಯಕ್ತಿಕ ವಿವರಗಳ ಬದಲಾವಣೆಗಾಗಿ ಪಾಸ್‌ಪೋರ್ಟ್ ನ ಬದಲಿ (60 ಪುಟಗಳು)(10 ವರ್ಷ ವ್ಯಾಲಿಡಿಟಿ) | ₹ 2,000 | ₹ 2,000 |
| ಅಪ್ರಾಪ್ತ ವಯಸ್ಕರಿಗೆ (18 ವರ್ಷಕ್ಕಿಂತ ಕಡಿಮೆ ವಯಸ್ಸಿನ) ವೈಯಕ್ತಿಕ ವಿವರಗಳನ್ನು ತೆಗೆಯುವಿಕೆ ಪಾಸ್‌ಪೋರ್ಟ್‌ನ ಬದಲಿ (36 ಪುಟಗಳು), 5 ವರ್ಷಗಳ ವ್ಯಾಲಿಡಿಟಿ ಅಥವಾ ಅಪ್ರಾಪ್ತ ವಯಸ್ಕರಿಗೆ 18 ವರ್ಷ ವಯಸ್ಸಾಗುವವರೆಗೆ, ಯಾವುದು ಮೊದಲು ಆಗುತ್ತದೆ ಅದು. | ₹ 1,000 | ₹ 2,000 |
ಪಾಸ್‌ಪೋರ್ಟ್ ಅಪ್ಲಿಕೇಶನ್ ಪ್ರಕ್ರಿಯೆ ಸಮಯ
ಪಾಸ್‌ಪೋರ್ಟ್ ಅನ್ನು ಇಂಡಿಯಾ ಪೋಸ್ಟ್ ನ ಸ್ಪೀಡ್ ಪೋಸ್ಟ್ ಮೂಲಕ, ಪಾಸ್‌ಪೋರ್ಟ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡುವಾಗ, ಅರ್ಜಿದಾರ ನೀಡಿರುವ ವಿಳಾಸಕ್ಕೆ ಕಳಿಸಲಾಗುತ್ತದೆ.
ಸಾಮಾನ್ಯ ಪಾಸ್‌ಪೋರ್ಟ್ ಅರ್ಜಿದಾರರಿಗೆ ಪ್ರಕ್ರಿಯಾ ಸಮಯವು 30 ರಿಂದ 45 ದಿನಗಳಾಗಿರುತ್ತದೆ. ಆದರೆ, ತತ್ಕಾಲ್ ವಿಧಾನದ ಅಡಿಯಲ್ಲಿ ನೀಡಲಾದ ಅಪ್ಲಿಕೇಶನ್ ಗಳಿಗಾಗಿ ಪಾಸ್‌ಪೋರ್ಟ್ ಪ್ರಕ್ರಿಯೆ ಸಮಯವು 7 to 14 ದಿನಗಳಾಗಿರುತ್ತದೆ.
ಇಂಡಿಯಾ ಪೋಸ್ಟ್ ನ ಸ್ಪೀಡ್ ಪೋಸ್ಟ್ ಪೋರ್ಟಲ್ ನಲ್ಲಿ ಲಭ್ಯವಿರುವ ಟ್ರ್ಯಾಕಿಂಗ್ ಉಪಯುಕ್ತತೆಯ ವೈಶಿಷ್ಟ್ಯವನ್ನು ಬಳಸಿ ನೀವು ಡೆಲಿವರಿ ಸ್ಟೇಟಸ್ ಅನ್ನು ಪತ್ತೆಹಚ್ಚಬಹುದಾಗಿದೆ.
ಪಾಸ್‌ಪೋರ್ಟ್ ಅಪ್ಲಿಕೇಶನ್ ಗಾಗಿ ಅಗತ್ಯವಿರುವ ಅರ್ಹತೆಗಳು
ಒಂದು ಯಶಸ್ವೀ ಪಾಸ್‌ಪೋರ್ಟ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಆನಂದಿಸಲು ವ್ಯಕ್ತಿಗಳು ಈ ಕೆಳಗಿನ ಅರ್ಹತೆಯ ಮಾನದಂಡಗಳನ್ನು ಪೂರೈಸಬೇಕಾಗುವುದು-
18 ವರ್ಷ ಹಾಗೂ ಅದನ್ನು ಮೇಲ್ಪಟ್ಟ ಭಾರತೀಯ ನಾಗರಿಕರು ಪಾಸ್‌ಪೋರ್ಟ್ ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
18 ವರ್ಷವಾಗಿರದ ಮಕ್ಕಳು 5 ವರ್ಷ ವ್ಯಾಲಿಡಿಟಿ ಇರುವ ಅಥವಾ ಅವರು 18 ವರ್ಷಗಳನ್ನು ಪೂರೈಸುವವರೆಗಿನ ಅವಧಿಗಾಗಿ ಪಾಸ್‌ಪೋರ್ಟ್ ಅರ್ಜಿ ಸಲ್ಲಿಸಬಹುದು.
15 ರಿಂದ 18 ವರ್ಷದ ಮಕ್ಕಳು, 10 ವರ್ಷ ಮಾನ್ಯತೆ ಇರುವ ಪಾಸ್‌ಪೋರ್ಟ್ ಅನ್ನು ಪಡೆಯಬಹುದು. ಹೆತ್ತವರು ಸಹ ಅವರ ಮಕ್ಕಳ ಪರವಾಗಿ ಪಾಸ್‌ಪೋರ್ಟ್ ಆಯ್ಕೆಯನ್ನು ಮಾಡಬಹುದು, ಹಾಗೂ ಇದು ಅವರು 18 ತಲುಪುವವರೆಗೆ ಮಾನ್ಯವಾಗಿರುತ್ತದೆ.
ಪಾಸ್‌ಪೋರ್ಟ್ ನ ವ್ಯಾಲಿಡಿಟಿ ಹಾಗೂ ಅವಧಿ ಮುಕ್ತಾಯ
ನಿಮ್ಮ ಹೊಸ ಪಾಸ್‌ಪೋರ್ಟ್ ಎಷ್ಟು ಸಮಯದವರೆಗೆ ಮಾನ್ಯವಾಗಿರುತ್ತದೆ ಎಂದು ನೀವು ಯೋಚಿಸುತ್ತಿದ್ದರೆ, ಒಂದು ಸಂಕ್ಷಿಪ್ತ ಮೇಲ್ನೋಟ ಇಲ್ಲಿದೆ -
ಒಂದು ಸಾಮಾನ್ಯ ಪಾಸ್‌ಪೋರ್ಟ್ 36/60 ಪುಟಗಳನ್ನು ಹೊಂದಿದ್ದು ಅದರ ಹಂಚಿಕೆಯ ದಿನಾಂಕದಿಂದ 10 ವರ್ಷಗಳವರೆಗೆ ಮಾನ್ಯವಾಗಿರುತ್ತದೆ
18 ವರ್ಷಗಳಿಗಿಂತ ಕಡಿಮೆ ವಯಸ್ಸಿನ ನಾಗರಿಕರಿಗೆ, ಪಾಸ್‌ಪೋರ್ಟ್‌ನ ಮಾನ್ಯತೆಯು 5 ವರ್ಷಗಳದ್ದಾಗಿರುತ್ತದೆ.
15-18 ವಯಸ್ಸಿನ ಅಪ್ರಾಪ್ತ ವಯಸ್ಕರು 10 ವರ್ಷಗಳ ಮಾನ್ಯತೆ ಇರುವ ಪಾಸ್‌ಪೋರ್ಟ್ ಅನ್ನು ಆಯ್ಕೆ ಮಾಡಬಹುದು. ಇದಲ್ಲದೆ, ಅವರು 18 ವರ್ಷದವರಾಗುವವರೆಗೆ ಮಾನ್ಯವಾಗಿರುವ ಪಾಸ್‌ಪೋರ್ಟ್ ಆಯ್ಕೆಯನ್ನು ಮಾಡಬಹುದು.
ಈಗ ಆನ್‌ಲೈನ್ ನಲ್ಲಿ ಪಾಸ್‌ಪೋರ್ಟ್ ಗಾಗಿ ಅರ್ಜಿ ಸಲ್ಲಿಸಲು ಬೇಕಾಗಿರುವ ವಿವಿಧ ಆವಶ್ಯಕತೆಗಳ ಬಗ್ಗೆ ನೀವು ತಿಳಿದುಕೊಂಡಿರುವ ನಂತರ, ನಾವು ಚರ್ಚಿಸಿರುವ ಅಪ್ಲಿಕೇಶನ್ ಪ್ರಕ್ರಿಯೆಯೊಂದಿಗೆ ಮುಂದುವರಿಯಿರಿ.
ನಿಮಗೆ ತುರ್ತಾಗಿ ಪಾಸ್‌ಪೋರ್ಟ್ ಅಗತ್ಯವಿದ್ದರೆ, ನೀವು ಅದಕ್ಕೆ ಕಾರಣವನ್ನು ತಿಳಿಸುತ್ತಾ ನಿಮ್ಮ ಸ್ಥಳೀಯ ಆರ್ ಪಿ ಒ ಗೆ ಒಂದು ಅರ್ಜಿಯನ್ನು ಸಲ್ಲಿಸಬಹುದೆಂದು ಗಮನಿಸಿ. ಆಗ ಸ್ಥಳೀಯ ಅಧಿಕಾರಿಯು ನಿಮ್ಮ ಮನವಿಯ ಆಧಾರದ ಮೇಲೆ ಅದರ ಡೆಲಿವರಿ ಸಮಯವನ್ನು ನಿರ್ಧರಿಸುತ್ತಾರೆ.
ಪಾಸ್‌ಪೋರ್ಟ್ ಗಾಗಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುವುದರ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು
ನಾನು ಪಾವತಿ ಮಾಡಿದ ನಂತರ ಪಾಸ್‌ಪೋರ್ಟ್ ಅಪ್ಲಿಕೇಶನ್ ಗಾಗಿ ಮಾಡಿದ ಅಪಾಯಿಂಟ್ಮೆಂಟ್ ಮರುಬದಲಾಯಿಸಬಹುದೇ?
ಹೌದು, ನೀವು ಆರಂಭಿಕ ಅಪಾಯಿಂಟ್ಮೆಂಟ್ ದಿನಾಂಕವನ್ನು ಒಂದು ವರ್ಷದೊಳಗೆ ಎರಡು ಬಾರಿ ಮುಂದೂಡಬಹುದಾಗಿದೆ.
ಪಾಸ್‌ಪೋರ್ಟ್ ಅಪ್ಲಿಕೇಶನ್ ಗಳಿಗಾಗಿ ಲಭ್ಯವಿರುವ ಆನ್‌ಲೈನ್ ಪಾವತಿ ವಿಧಾನಗಳು ಯಾವುವು?
ಅಪಾಯಿಂಟ್ಮೆಂಟ್ ನಿಗದಿಪಡಿಸುವುದಕ್ಕಾಗಿ ಲಭ್ಯವಿರುವ ಆನ್‌ಲೈನ್ ಪಾವತಿ ವಿಧಾನಗಳು ಈ ರೀತಿ ಇವೆ-
SBI ವಾಲೆಟ್
SBI ಬ್ಯಾಂಕ್ ಚಲಾನ್
ಕ್ರೆಡಿಟ್/ಡೆಬಿಟ್ ಕಾರ್ಡ್ (ವೀಸಾ ಹಾಗೂ ಮಾಸ್ಟರ್ ಕಾರ್ಡ್)
ಇಂಟರ್ನೆಟ್ ಬ್ಯಾಂಕಿಂಗ್ (SBI ಮತ್ತು ಇತರ ಬ್ಯಾಂಕ್ ಗಳು)
ತತ್ಕಾಲ್ ಪಾಸ್‌ಪೋರ್ಟ್ ಗೆ ತಗಲುವ ಸಮಯವೆಷ್ಟು?
ಪೊಲೀಸ್ ವೆರಿಫಿಕೇಶನ್ ವರದಿಗಾಗಿ ಕಾಯದೆ, ನಿಮ್ಮಅಪ್ಲಿಕೇಶನ್ ಫಾರ್ಮ್ ನ ಯಶಸ್ವೀ ಸಲ್ಲಿಕೆಯಿಂದ ಮೂರನೆಯ ಕೆಲಸದ ದಿನದಂದು ನಿಮ್ಮ ಪಾಸ್‌ಪೋರ್ಟ್ ಅನ್ನು "ಗ್ರಾಂಟೆಡ್" ಎಂಬ ಅಂತಿಮ ಸ್ಥಿತಿಯೊಂದಿಗೆ ಕಳಿಸಲಾಗುತ್ತದೆ.