ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಭಾರತದಲ್ಲಿ ವಿದ್ಯಾರ್ಥಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

((ಮೂಲ: path2usa))

ನೀವು ವಿದೇಶದಲ್ಲಿ ಅಧ್ಯಯನ ಮಾಡಲು ಇಚ್ಛಿಸುತ್ತಿರುವ ವಿದ್ಯಾರ್ಥಿಯೇ?

ಹೌದು ಎಂದಾದರೆ, ಹಣಕಾಸಿನ ಯೋಜನೆಯ ಹೊರತಾಗಿ ನಿಮ್ಮ ಪ್ರಯಾಣದ ಅಗತ್ಯತೆಗಳ ಬಗ್ಗೆ ನೀವು ಕಾಳಜಿ ವಹಿಸಬೇಕಾಗುತ್ತದೆ.  ಇದು ವಿದ್ಯಾರ್ಥಿಗಳ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಸಿದ್ಧಪಡಿಸುವುದನ್ನು ಒಳಗೊಂಡಿರುತ್ತದೆ.

ಒಂದು ವೇಳೆ ನೀವು ಈ ಡಾಕ್ಯುಮೆಂಟುಗಳನ್ನು ಹೊಂದಿಲ್ಲದಿದ್ದರೆ, ವಿದ್ಯಾರ್ಥಿ ಪಾಸ್‌ಪೋರ್ಟ್ ಅರ್ಜಿ, ದಾಖಲಾತಿ ಮತ್ತು ಅರ್ಹತೆ ಸೇರಿದಂತೆ ಇತರೆ ವಿವರಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದು.

ಭಾರತದಲ್ಲಿ ವಿದ್ಯಾರ್ಥಿ ಪಾಸ್‌ಪೋರ್ಟ್ ಪಡೆಯುವ ಕ್ರಮಗಳು ಹೀಗಿವೆ:

 • ಹಂತ 1: ಅಧಿಕೃತ ಪಾಸ್‌ಪೋರ್ಟ್ ಸೇವಾ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಪ್ಲಿಕೇಶನ್ ಸಲ್ಲಿಸಿ.  

 • ಹಂತ 2: ಹತ್ತಿರದ ಪಾಸ್‌ಪೋರ್ಟ್ ಕಛೇರಿಯೊಂದಿಗೆ ಅಪಾಯಿಂಟ್‌ಮೆಂಟ್ ತೆಗೆದುಕೊಂಡು, ಅಗತ್ಯ ಡಾಕ್ಯುಮೆಂಟುಗಳ ವ್ಯವಸ್ಥೆ ಮಾಡಿಕೊಳ್ಳಿ.

 • ಹಂತ 3: ನಿಗದಿಪಡಿಸಿದ ದಿನಾಂಕದಂದು ಪಾಸ್‌ಪೋರ್ಟ್ ಪ್ರಾಧಿಕಾರವನ್ನು ಭೇಟಿ ಮಾಡಿ ಮತ್ತು ವೆರಿಫಿಕೇಶನ್ ಪ್ರಕ್ರಿಯೆಯಲ್ಲಿ ಸೆಲ್ಫ್ ಅಟೆಸ್ಟ್ ಮಾಡಿದ ಡಾಕ್ಯುಮೆಂಟುಗಳನ್ನು ಒದಗಿಸಿ.

 • ಹಂತ 4: ಸ್ವೀಕೃತಿ ರಶೀದಿಯನ್ನು ಸಂಗ್ರಹಿಸಿ ಮತ್ತು ಅಪ್‌ಡೇಟ್‌ಗಳಿಗಾಗಿ ಅಪ್ಲಿಕೇಶನ್ ಸ್ಟೇಟಸ್ ಅನ್ನು ಪರಿಶೀಲಿಸಿ.

ವಿದ್ಯಾರ್ಥಿ ಪಾಸ್‌ಪೋರ್ಟ್‌ಗೆ ಅಗತ್ಯವಿರುವ ಡಾಕ್ಯುಮೆಂಟುಗಳು ಯಾವುವು?

ವಿದ್ಯಾರ್ಥಿಗಳು ಅವರ ಉದ್ದೇಶಕ್ಕೆ ತಕ್ಕಂತೆ ಸಾಮಾನ್ಯ ಅಥವಾ ತತ್ಕಾಲ್ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. 

ಅಗತ್ಯವಾಗಿ ಬೇಕಾಗಿರುವ ಡಾಕ್ಯುಮೆಂಟುಗಳು ಹೀಗಿವೆ -

1. ವಿಳಾಸ ಪುರಾವೆ (ಪ್ರಸ್ತುತ ನಿವಾಸ)

 • ಆಧಾರ್ ಕಾರ್ಡ್

 • ಇತ್ತೀಚಿನ ದೂರವಾಣಿ ಬಿಲ್ 

 • ಅಪ್ರಾಪ್ತ ವಯಸ್ಕರಾಗಿದ್ದಲ್ಲಿ ಪೋಷಕರ ಪಾಸ್‌ಪೋರ್ಟ್ ನ ಪ್ರತಿ (ಮೊದಲ ಮತ್ತು ಕೊನೆಯ ಪುಟ)  

 • ಪ್ರತಿಷ್ಠಿತ ಉದ್ಯೋಗದಾತರಿಂದ ನೀಡಲಾದ ಸರ್ಟಿಫಿಕೇಟ್

 • ಮತದಾರರ ಗುರುತಿನ ಚೀಟಿ

 • ಆದಾಯ ತೆರಿಗೆ ಮೌಲ್ಯಮಾಪನದ ಆದೇಶ

 • ವಿದ್ಯುತ್ ಅಥವಾ ನೀರಿನಂತಹ ಇತ್ತೀಚಿನ ಯುಟಿಲಿಟಿ ಬಿಲ್

 • ಸಕ್ರಿಯ ಬ್ಯಾಂಕ್ ಖಾತೆಯ ಪಾಸ್‌ಬುಕ್‌ನ ಫೋಟೋಕಾಪಿ 

 • ಬಾಡಿಗೆ ಒಪ್ಪಂದ

2. ಜನ್ಮ ದಿನಾಂಕದ ಪುರಾವೆ

 • ಜನನ ಪ್ರಮಾಣಪತ್ರ

 • ವಿದ್ಯಾರ್ಥಿಗಳು ಪಾಸ್‌ಪೋರ್ಟ್‌ಗಳಿಗೆ ಮಾಧ್ಯಮಿಕ ಶಾಲೆಯ ಟ್ರಾನ್ಸ್ಫರ್  ಸರ್ಟಿಫಿಕೇಟುಗಳನ್ನು ಸಲ್ಲಿಸುವ ಅಗತ್ಯವಿದೆ. ಮಾನ್ಯತೆ ಪಡೆದ ಮಂಡಳಿ ಅಥವಾ ಶಿಕ್ಷಣ ಸಂಸ್ಥೆಯು ಈ ಪ್ರಮಾಣಪತ್ರವನ್ನು ನೀಡಬೇಕು.

 • ಅವನು/ಅವಳು ಓದುತ್ತಿರುವ ಶಿಕ್ಷಣ ಸಂಸ್ಥೆಯಿಂದ ನೀಡಲಾದ ಅರ್ಜಿದಾರರ ಗುರುತಿನ ಚೀಟಿಯ ಪ್ರತಿ.

 • ವಿಶ್ವವಿದ್ಯಾನಿಲಯ ಅಥವಾ ಕಾಲೇಜು ನೀಡಿದ ಬೋನಾಫೈಡ್ ಪ್ರಮಾಣಪತ್ರ.

ಒರಿಜಿನಲ್ ಡಾಕ್ಯುಮೆಂಟುಗಳು ಲಭ್ಯವಿಲ್ಲದಿದ್ದರೆ, ನೀವು ಸೂಕ್ತ ಕಾರಣಗಳೊಂದಿಗೆ ಪ್ರಮಾಣಪತ್ರ ಅಥವಾ ಪತ್ರವನ್ನು ಸಲ್ಲಿಸಬಹುದು. ಹೆಚ್ಚುವರಿಯಾಗಿ, ವಿದ್ಯಾರ್ಥಿಗಳ ಪಾಸ್‌ಪೋರ್ಟ್ ಅಪ್ಲಿಕೇಶನ್ ಗಳಿಗಾಗಿ,  ಸಂಸ್ಥೆಯ ಮುಖ್ಯಸ್ಥರು ದೃಢೀಕರಿಸಿದ ಡಾಕ್ಯುಮೆಂಟುಗಳ ನಕಲು ಪ್ರತಿಗಳನ್ನು ಸಲ್ಲಿಸಬಹುದು.

ವಿದ್ಯಾರ್ಥಿ ಪಾಸ್‌ಪೋರ್ಟ್‌ಗೆ ಅಗತ್ಯವಿರುವ ಶುಲ್ಕ ಎಷ್ಟು?

ಈ ಪಾಸ್‌ಪೋರ್ಟ್ ಪಡೆಯಲು ಒಬ್ಬಾತ  ₹1500 ಪಾವತಿಸಬೇಕು.ಅವರು ಅಧಿಕೃತ ಪಾಸ್‌ಪೋರ್ಟ್ ಸೇವಾ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಮೂಲಕ ಪಾವತಿ ಮಾಡಬಹುದು.

ಪಾವತಿ ಮಾಡುವುದರಿಂದ, ವಿದ್ಯಾರ್ಥಿ ಪಾಸ್‌ಪೋರ್ಟ್ ವೆರಿಫಿಕೇಶನ್ ಗಾಗಿ ಹತ್ತಿರದ ಪಾಸ್‌ಪೋರ್ಟ್ ಕಛೇರಿಯೊಂದಿಗೆ ಅಪಾಯಿಂಟ್‌ಮೆಂಟ್ ಬುಕ್ ಮಾಡಲು ಸಹಾಯವಾಗುತ್ತದೆ.

ಲಭ್ಯವಿರುವ ಕೆಲವು ಪಾವತಿ ವಿಧಾನಗಳು ಹೀಗಿವೆ -

 • ಡೆಬಿಟ್ ಕಾರ್ಡ್

 • ಇಂಟರ್ನೆಟ್ ಬ್ಯಾಂಕಿಂಗ್

 • ಕ್ರೆಡಿಟ್ ಕಾರ್ಡ್

 • SBI ಚಲನ್

ಹೆಚ್ಚುವರಿಯಾಗಿ, ಆನ್‌ಲೈನ್‌ನಲ್ಲಿ ಚಲನ್ ಮೂಲಕ ಮತ್ತು ಹತ್ತಿರದ SBI ಶಾಖೆಗೆ ಭೇಟಿ ನೀಡುವ ಮೂಲಕ ಪಾವತಿ ಮಾಡಬಹುದು.

ವಿದ್ಯಾರ್ಥಿ ಪಾಸ್‌ಪೋರ್ಟ್‌ಗೆ ಯಾರು ಅರ್ಜಿ ಸಲ್ಲಿಸಬಹುದು?

ಭಾರತದಲ್ಲಿ ವಿದ್ಯಾರ್ಥಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ನೀವು ಈ ಕೆಳಗಿನ ಅರ್ಹತಾ ನಿಯಮಗಳನ್ನು ಪೂರೈಸಬೇಕು -

 • 18 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳನ್ನು ವಯಸ್ಕರೆಂದು ಪರಿಗಣಿಸಲಾಗುತ್ತದೆ.  ಅವರು ಸೆಲ್ಫ್  ಅಟೆಸ್ಟ್ ಮಾಡಿದ  ಅಗತ್ಯವಿರುವ  ಡಾಕ್ಯುಮೆಂಟುಗಳನ್ನು ಸಲ್ಲಿಸಬೇಕಾಗುತ್ತದೆ.

 • ಅಪ್ರಾಪ್ತ ಅರ್ಜಿದಾರರಾಗಿದ್ದಲ್ಲಿ, ಪೋಷಕರ ಡಾಕ್ಯುಮೆಂಟುಗಳನ್ನು ಲಗ್ಗತ್ತಿಸಬಹುದು.

 • ಅಪ್ರಾಪ್ತ ವಯಸ್ಕರಾದ ಅವನು/ಅವಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ನಾನ್-ಇ.ಸಿ.ಆರ್ ಅರ್ಹತೆಯನ್ನು ಹೊಂದಿರುತ್ತಾರೆ.

 • ವಿದ್ಯಾರ್ಥಿಗಳು ಪ್ರಸ್ತುತ ವಿಳಾಸದ ಪುರಾವೆಯನ್ನು ತಮ್ಮ ಪೋಷಕರ ಹೆಸರಿನಲ್ಲಿ ಸಲ್ಲಿಸಬಹುದು

ಅಪ್ರಾಪ್ತ ಅರ್ಜಿದಾರರಿಗೆ, ಪೋಷಕರ ಒಪ್ಪಿಗೆ ಕಡ್ಡಾಯವಾಗಿರುವುದನ್ನುಗಮನಿಸಿ.

ಅರ್ಹ ಅರ್ಜಿದಾರರು ವೆರಿಫಿಕೇಶನ್ ಗಾಗಿ ಅಧಿಕೃತ ಪೇಪರ್‌ಗಳನ್ನು ಸಲ್ಲಿಸಬೇಕಾಗುತ್ತದೆ.  ವಿದ್ಯಾರ್ಥಿಗಳಿಗಾಗಿ ಪಾಸ್‌ಪೋರ್ಟ್‌ಗೆ ಅಗತ್ಯವಿರುವ ಡಾಕ್ಯುಮೆಂಟುಗಳನ್ನು ನಾವು ಪಟ್ಟಿ ಮಾಡಿದ್ದೇವೆ.

ವಿದ್ಯಾರ್ಥಿ ಪಾಸ್‌ಪೋರ್ಟ್ ಗೆ ತೆಗೆದುಕೊಳ್ಳುವ ಸಮಯ

ಪಾಸ್‌ಪೋರ್ಟ್  ಪಡೆಯುವ ಸಂಪೂರ್ಣ ಪ್ರಕ್ರಿಯೆಯು 25 ರಿಂದ 30 ದಿನಗಳನ್ನು ತೆಗೆದುಕೊಳ್ಳಬಹುದು  ಆದ್ದರಿಂದ ಅಪ್ಲಿಕೇಶನ್ ಅನ್ನು ಮುಂಚಿತವಾಗಿ ಸಲ್ಲಿಸುವುದು ಅತ್ಯಗತ್ಯ.

ಈ ಪಾಸ್‌ಪೋರ್ಟ್ ಪಡೆದುಕೊಂಡ ದಿನದಿಂದ ಹತ್ತು ವರ್ಷಗಳವರೆಗೆ ಮಾನ್ಯವಾಗಿರುತ್ತದೆ.  ಆದಾಗ್ಯೂ, ಪ್ರಸ್ತುತ ಪಾಸ್‌ಪೋರ್ಟ್‌ನ ಅವಧಿ ಮುಗಿಯುವ ಒಂದು ವರ್ಷದ ಮೊದಲು ನೀವು ಪಾಸ್‌ಪೋರ್ಟ್ ಅನ್ನು ನವೀಕರಿಸಲಾಗುವುದಿಲ್ಲ.

ನೀವು ವಿದೇಶಿ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಅಧ್ಯಯನಕ್ಕಾಗಿ ಅರ್ಜಿ ಸಲ್ಲಿಸಿದ್ದರೆ, ವಿದ್ಯಾರ್ಥಿ ಪಾಸ್‌ಪೋರ್ಟ್ ಅವಶ್ಯಕತೆಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ.  ಸಂಪೂರ್ಣ ಪ್ರಕ್ರಿಯೆಯನ್ನು ಸುಗಮಗೊಳಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

ಇದಲ್ಲದೆ, ನೀವು ಪಾಸ್‌ಪೋರ್ಟ್ ಅನ್ನು ಆದಷ್ಟು ಬೇಗ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಭಾರತದಲ್ಲಿನ ವಿದ್ಯಾರ್ಥಿ ಪಾಸ್‌ಪೋರ್ಟ್‌ಗಳ ಬಗೆಗಿನ ಸಾಮಾನ್ಯ ಪ್ರಶ್ನೆಗಳು:

ವಿದ್ಯಾರ್ಥಿ ಪಾಸ್‌ಪೋರ್ಟ್ ವ್ಯಾಲಿಡೇಷನ್ ಗಾಗಿ ನಾನು ನನ್ನ 12ನೇ ತರಗತಿಯ ಅಂಕ ಪಟ್ಟಿಯನ್ನು ಸಲ್ಲಿಸಬೇಕೇ?

ಹೌದು, ಕಾಲೇಜು ವಿದ್ಯಾರ್ಥಿ ಪಾಸ್‌ಪೋರ್ಟ್ ವ್ಯಾಲಿಡೇಷನ್ ಗಾಗಿ ಅಗತ್ಯವಿರುವ ಡಾಕ್ಯುಮೆಂಟುಗಳ ಅಡಿಯಲ್ಲಿ ನೀವು 12 ನೇ ತರಗತಿಯ ಅಂಕ ಪಟ್ಟಿಯನ್ನು ಸಲ್ಲಿಸಬೇಕು.

ಒಬ್ಬ ವಿದ್ಯಾರ್ಥಿ ಪಾಸ್‌ಪೋರ್ಟ್ ಅನ್ನು ಎಷ್ಟು ವೇಗವಾಗಿ ಪಡೆದುಕೊಳ್ಳಬಹುದು?

ಸಾಮಾನ್ಯವಾಗಿ ವಿದ್ಯಾರ್ಥಿ ಪಾಸ್‌ಪೋರ್ಟ್ ಪ್ರಕ್ರಿಯೆಯ ಸಮಯವು 25 ರಿಂದ 30 ದಿನಗಳನ್ನು ತೆಗೆದುಕೊಳ್ಳುತ್ತದೆ. ಆದಾಗ್ಯೂ, ಅಂತಿಮ ನಿರ್ಧಾರವು ಪಾಸ್‌ಪೋರ್ಟ್ ಅಧಿಕಾರಿಯ ಮೇಲೆ ಅವಲಂಬಿತವಾಗಿರುತ್ತದೆ.

ಅಪ್ರಾಪ್ತ ಅರ್ಜಿದಾರರ ಡಾಕ್ಯುಮೆಂಟುಗಳನ್ನು ಯಾರು ದೃಢೀಕರಿಸಬಹುದು?

ಅಪ್ರಾಪ್ತ ಅರ್ಜಿದಾರರಿಗೆ, ಪೋಷಕರು ಡಾಕ್ಯುಮೆಂಟುಗಳನ್ನು ದೃಢೀಕರಿಸಬಹುದು.