ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ವ್ಯಾಕ್ಸಿನೇಷನ್ ಸರ್ಟಿಫಿಕೇಟಿನೊಂದಿಗೆ ಪಾಸ್‌ಪೋರ್ಟ್ ಅನ್ನು ಹೇಗೆ ಲಿಂಕ್ ಮಾಡುವುದು?

(ಮೂಲ: india.com)

ನೀವು ಉನ್ನತ ಶಿಕ್ಷಣ ಅಥವಾ ಉದ್ಯೋಗಕ್ಕಾಗಿ ವಿದೇಶ ಪ್ರಯಾಣಕ್ಕಾಗಿ ಯೋಜಿಸುತ್ತಿದ್ದೀರಾ? 

ಹೌದಾದರೆ, ಯಾವುದೇ ರೀತಿಯ ಅನಾನುಕೂಲತೆಯನ್ನು ತಪ್ಪಿಸಲು ವ್ಯಾಕ್ಸಿನ್  ಸರ್ಟಿಫಿಕೇಟಿನೊಂದಿಗೆ ಪಾಸ್‌ಪೋರ್ಟ್ ಅನ್ನು ಬೇಗನೆ ಲಿಂಕ್ ಮಾಡಿ.

ಏಕೆಂದರೆ ಕೋವಿಡ್-19 ಸೋಂಕು ಹರಡುವುದನ್ನು ಕಡಿಮೆ ಮಾಡಲು ಭಾರತ ಸರ್ಕಾರವು ದೇಶದ ಹೊರಗೆ ಪ್ರಯಾಣಿಸುವ ನಿವಾಸಿಗಳಿಗೆ ಈ ಹಂತವನ್ನು ಕಡ್ಡಾಯಗೊಳಿಸಿದೆ. ನಿಮ್ಮ ವ್ಯಾಕ್ಸಿನೇಷನ್ ಸರ್ಟಿಫಿಕೇಟಿನೊಂದಿಗೆ ನಿಮ್ಮ ಪಾಸ್‌ಪೋರ್ಟ್ ಲಿಂಕ್ ಮಾಡಿರುವುದು ವ್ಯಾಕ್ಸಿನೇಷನ್ ಸ್ಟೇಟಸ್ ಪರಿಶೀಲನೆಯ ಸಮಯದಲ್ಲಿ ಅಥವಾ ನಿರ್ಗಮನದ ಸಮಯದಲ್ಲಿ ಸಹಾಯಕವಾಗಿರುತ್ತದೆ.

ಈ ಪ್ರಕ್ರಿಯೆಯ ವಿವರವಾದ ಹಂತಗಳನ್ನು ತಿಳಿಯಲು ನೀವು ಬಯಸಿದರೆ, ಓದುವುದನ್ನು ಮುಂದುವರಿಸಿ!

ವ್ಯಾಕ್ಸಿನ್ ಸರ್ಟಿಫಿಕೇಟಿನೊಂದಿಗೆ ಪಾಸ್‌ಪೋರ್ಟ್ ಅನ್ನು ಲಿಂಕ್ ಮಾಡುವ ಹಂತಗಳು

ಕೋವಿನ್ ಆ್ಯಪ್‌ ಅಥವಾ ವೆಬ್‌ಸೈಟ್ ಮೂಲಕ ನಿಮ್ಮ ವ್ಯಾಕ್ಸಿನ್ ಸರ್ಟಿಫಿಕೇಟನ್ನು  ನಿಮ್ಮ ಪಾಸ್‌ಪೋರ್ಟ್‌ಗೆ ನೀವು ಸುಲಭವಾಗಿ ಲಿಂಕ್ ಮಾಡಬಹುದು. 

ಲಾಗ್ ಇನ್ ಮಾಡಿದ ನಂತರ ನೀವು ಈ ಕೆಳಗಿನ ಹಂತಗಳೊಂದಿಗೆ ಮುಂದುವರಿಯಬಹುದು - 

  • ಹಂತ 1: "ಅಕೌಂಟ್ ವಿವರ" ಟ್ಯಾಬ್‌ನಿಂದ "ಸಮಸ್ಯೆಯನ್ನು ರಚಿಸಿ" ಆಯ್ಕೆಮಾಡಿ.

  • ಹಂತ 2: ಲಭ್ಯವಿರುವ ಆಯ್ಕೆಗಳಿಂದ, "ಪಾಸ್‌ಪೋರ್ಟ್ ವಿವರಗಳನ್ನು ಸೇರಿಸಿ" ಆಯ್ಕೆಮಾಡಿ ಮತ್ತು ಮುಂದುವರಿಯಿರಿ.

  • ಹಂತ 3: ಮರುನಿರ್ದೇಶಿಸಲಾದ ಪುಟದಲ್ಲಿ, ನೀವು ಸೇರಿಸಲು ಬಯಸುವ ಪಾಸ್‌ಪೋರ್ಟ್ ವಿವರಗಳನ್ನು ಸದಸ್ಯರ ಹೆಸರಿನ ಮೇಲೆ ಕ್ಲಿಕ್ ಮಾಡಿ.

  • ಹಂತ 4: ನಂತರ, ಫಲಾನುಭವಿಯ ಪಾಸ್‌ಪೋರ್ಟ್ ಸಂಖ್ಯೆಯನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಡೈಲಾಗ್ ಬಾಕ್ಸ್ ಅನ್ನು ಟಿಕ್ ಮಾಡಿ. "ಸಬ್ಮಿಟ್" ಒತ್ತಿರಿ.

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತೀರಿ.

ಇದನ್ನು ಅನುಸರಿಸಿ, ವಿನಂತಿಯನ್ನು ಯಶಸ್ವಿಯಾಗಿ ನವೀಕರಿಸಲಾಗಿದೆ ಎಂದು ದೃಢೀಕರಿಸುವ ಮತ್ತೊಂದು ನೋಟಿಫಿಕೇಶನ್ ಅನ್ನು ನೀವು ಸ್ವೀಕರಿಸುತ್ತೀರಿ.

ವ್ಯಾಕ್ಸಿನ್ ಸರ್ಟಿಫಿಕೇಟಿನೊಂದಿಗೆ ಪಾಸ್‌ಪೋರ್ಟ್ ಅನ್ನು ಲಿಂಕ್ ಮಾಡಲು ಅಗತ್ಯವಿರುವ ಸಮಯದ ಕುರಿತು ನೀವು ಚಿಂತಿತರಾಗಿದ್ದಲ್ಲಿ, ಇದು ಕೆಲವೇ ಸೆಕೆಂಡುಗಳನ್ನು ತೆಗೆದುಕೊಳ್ಳುವುದರಿಂದ ನೀವು ಇನ್ನು ಚಿಂತಿಸಬೇಕಾಗಿಲ್ಲ .

ನೀವು ಕೋವಿನ್ ನಲ್ಲಿ ರಿಜಿಸ್ಟರ್ ಆಗಿದ್ದರೆ, ವ್ಯಾಕ್ಸಿನೇಷನ್ ಮೊದಲು ನೋಂದಾಯಿಸುವಾಗ ನಿಮ್ಮ ಫೋಟೋ ಐಡಿ ಪುರಾವೆಯಾಗಿ ನಿಮ್ಮ ಪಾಸ್‌ಪೋರ್ಟ್ ಅನ್ನು ನೀವು ಆಯ್ಕೆ ಮಾಡಬಹುದು ಎಂಬುದನ್ನು ಗಮನಿಸಿ. ನೀವು ಕೆಲವು ತಿಂಗಳುಗಳಲ್ಲಿ ವಿದೇಶಕ್ಕೆ ಪ್ರಯಾಣಿಸಲು ಯೋಜಿಸುತ್ತಿದ್ದರೆ ಇದು ಉತ್ತಮ ಆಯ್ಕೆಯಾಗಿದೆ.

ಪಾಸ್‌ಪೋರ್ಟ್‌ನೊಂದಿಗೆ ಲಿಂಕ್ ಮಾಡಲಾದ ವ್ಯಾಕ್ಸಿನೇಷನ್ ಸರ್ಟಿಫಿಕೇಟಿನಲ್ಲಿ  ಮಾಹಿತಿಯನ್ನು ಹೇಗೆ ಎಡಿಟ್ ಮಾಡುವುದು ಎಂಬುದನ್ನು ಈಗ ನಾವು ಕಲಿಯೋಣ.

ವ್ಯಾಕ್ಸಿನ್ ಸರ್ಟಿಫಿಕೇಟಿನೊಂದಿಗೆ ಪಾಸ್‌ಪೋರ್ಟ್‌ ಅನ್ನು ಲಿಂಕ್ ಮಾಡುವ ಪ್ರಾಮುಖ್ಯತೆ

ಒಬ್ಬ ವ್ಯಕ್ತಿಯನ್ನು ವಿಮಾನವನ್ನು ಹತ್ತಲು ಅನುಮತಿಸುವ ಮೊದಲು ವಿಮಾನ ನಿಲ್ದಾಣದ ಅಧಿಕಾರಿಗಳು ವ್ಯಾಕ್ಸಿನೇಷನ್ ಸ್ಟೇಟಸ್ ಅನ್ನು ಪರಿಶೀಲಿಸುತ್ತಾರೆ. ಇದು ಕೋವಿಡ್ -19 ಪ್ರೋಟೋಕಾಲ್‌ಗಳು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡಿಕೊಳ್ಳುದಕ್ಕೆ ಆಗಿದೆ.

ವರದಿಯೊಂದರ ಪ್ರಕಾರ, ಭಾರತ ಸರ್ಕಾರವು ಶಿಕ್ಷಣ, ಉದ್ಯೋಗಗಳು ಅಥವಾ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ವಿದೇಶಕ್ಕೆ ಹೋಗುವ ಎಲ್ಲಾ ಪ್ರಯಾಣಿಕರು ವ್ಯಾಕ್ಸಿನ್  ಸರ್ಟಿಫಿಕೇಟಿನೊಂದಿಗೆ ಪಾಸ್‌ಪೋರ್ಟ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಂದು ಘೋಷಿಸಿತು.

ನಿಮ್ಮ ಪಾಸ್‌ಪೋರ್ಟ್ ಅನ್ನು ವ್ಯಾಕ್ಸಿನ್ ಸರ್ಟಿಫಿಕೇಟಿನೊಂದಿಗೆ ಲಿಂಕ್ ಮಾಡಿದಾಗ, ಡೋಸೇಜ್, ವ್ಯಾಕ್ಸಿನ್ ಬ್ಯಾಚ್ ಸಂಖ್ಯೆ ಇತ್ಯಾದಿ ಪ್ರಮುಖ ವಿವರಗಳನ್ನು ನವೀಕರಿಸಲಾಗುತ್ತದೆ.

ಅಷ್ಟೇ ಅಲ್ಲದೆ, ಈ ಕೋವಿನ್ ವ್ಯಾಕ್ಸಿನೇಷನ್ ಸರ್ಟಿಫಿಕೇಟನ್ನು ವಿಮಾನ ನಿಲ್ದಾಣದಲ್ಲಿ ಸ್ಕ್ಯಾನ್ ಮಾಡಲಾಗುತ್ತದೆ. ತಾಂತ್ರಿಕವಾಗಿ, ವಿಮಾನ ನಿಲ್ದಾಣ ಪ್ರಾಧಿಕಾರವು ದೃಢೀಕರಣಕ್ಕಾಗಿ ಕೋವಾಕ್ಸಿನ್, ಕೋವಿಶೀಲ್ಡ್, ಸ್ಪುಟ್ನಿಕ್ ವಿ ವ್ಯಾಕ್ಸಿನೇಷನ್ ಸರ್ಟಿಫಿಕೇಟುಗಳಲ್ಲಿ QR ಕೋಡ್‌ಗಳನ್ನು ಸ್ಕ್ಯಾನ್ ಮಾಡುತ್ತದೆ.

ವ್ಯಾಕ್ಸಿನ್ ಸರ್ಟಿಫಿಕೇಟುಗಳೊಂದಿಗೆ  ಪಾಸ್‌ಪೋರ್ಟ್‌ಗಳನ್ನು ಲಿಂಕ್ ಮಾಡುವ ಮಾರ್ಗಗಳನ್ನು ಹುಡುಕುತ್ತಿರುವ ವ್ಯಕ್ತಿಗಳು ಈ ಕೆಳಗಿನ ವಿಭಾಗದಲ್ಲಿ ಚರ್ಚಿಸಲಾದ ಹಂತಗಳಿಂದ ಪ್ರಯೋಜನ ಪಡೆಯಬಹುದು.

ವ್ಯಾಕ್ಸಿನೇಷನ್ ಸರ್ಟಿಫಿಕೇಟಿನಲ್ಲಿ ಮಾಹಿತಿಯನ್ನು ನವೀಕರಿಸುವುದು ಹೇಗೆ?

ಪ್ರಮಾಣಪತ್ರದಲ್ಲಿನ ಬದಲಾವಣೆಗಳನ್ನು ನವೀಕರಿಸಲು ಈ ಹಂತಗಳನ್ನು ಅನುಸರಿಸಿ -

1. ಕೋವಿನ್  ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಒಟಿಪಿ ಯೊಂದಿಗೆ ಲಾಗ್ ಇನ್ ಮಾಡಿ.

2. ಅದರ ಹೋಮ್ ಪೇಜಿನಲ್ಲಿ "ಸಮಸ್ಯೆಯನ್ನುರಚಿಸಿ" ಕ್ಲಿಕ್ ಮಾಡಿ ಮತ್ತು ಮರುನಿರ್ದೇಶಿಸಲಾದ ಪೇಜಿನಲ್ಲಿ "ಸರ್ಟಿಫಿಕೇಟಿನಲ್ಲಿ ತಿದ್ದುಪಡಿ" ಆಯ್ಕೆಮಾಡಿ.

3. ಮುಂದೆ, ಡ್ರಾಪ್-ಡೌನ್ ಮೆನುವಿನಿಂದ ಸಂಬಂಧಪಟ್ಟ ವ್ಯಕ್ತಿಯನ್ನು ಆಯ್ಕೆಮಾಡಿ ಮತ್ತು ಎಲ್ಲಾ ತಿದ್ದುಪಡಿಗಳನ್ನು ಮಾಡಿ ಮತ್ತು ವಿವರಗಳನ್ನು ನವೀಕರಿಸಿ. ಮುಂದೆ, "ಸಬ್ಮಿಟ್ " ಮೇಲೆ ಕ್ಲಿಕ್ ಮಾಡಿ.

ಈ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ನೀವು ಸಂಪೂರ್ಣವಾಗಿ ವ್ಯಾಕ್ಸಿನ್ ಹಾಕಿರುವಿರಿ ಎಂಬುದನ್ನು ಸಾಬೀತುಪಡಿಸಲು ನೀವು ಈ ಲಿಂಕ್ ಮಾಡಿದ ಸರ್ಟಿಫಿಕೇಟಿನ ಹಾರ್ಡ್ ಪ್ರತಿಯನ್ನು ವಿಮಾನ ನಿಲ್ದಾಣದ ಪ್ರಾಧಿಕಾರಕ್ಕೆ ತೋರಿಸಬೇಕಾಗುತ್ತದೆ.

ಕೋವಿನ್  ಪೋರ್ಟಲ್‌ನಿಂದ ಈ ಸರ್ಟಿಫಿಕೇಟನ್ನು ಡೌನ್‌ಲೋಡ್ ಮಾಡುವ ಪ್ರಕ್ರಿಯೆಯನ್ನು ಕೆಳಗೆ ಚರ್ಚಿಸಲಾಗಿದೆ.

ಪಾಸ್‌ಪೋರ್ಟ್‌ನೊಂದಿಗೆ ಲಿಂಕ್ ಮಾಡಲಾದ ವ್ಯಾಕ್ಸಿನ್ ಸರ್ಟಿಫಿಕೇಟಿನ ಪ್ರತಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ?

ವ್ಯಾಕ್ಸಿನ್ ಸರ್ಟಿಫಿಕೇಟಿನೊಂದಿಗೆ ಪಾಸ್‌ಪೋರ್ಟ್ ಅನ್ನು ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ನೀವು ಈ ಕೆಳಗಿನ ಹಂತಗಳಲ್ಲಿ ಕೋವಿನ್ ಆ್ಯಪ್‌ ಮತ್ತು ಪೋರ್ಟಲ್‌ನಿಂದ ಲಿಂಕ್ ಮಾಡಲಾದ ವ್ಯಾಕ್ಸಿನೇಷನ್ ಸರ್ಟಿಫಿಕೇಟನ್ನು  ಡೌನ್‌ಲೋಡ್ ಮಾಡಬಹುದು -

1. ಡ್ಯಾಶ್‌ಬೋರ್ಡ್‌ನಲ್ಲಿ, ನೀವು ಮೊದಲ ಮತ್ತು ಎರಡನೇ ಡೋಸ್‌ನ ಮಾಹಿತಿಯನ್ನುನೋಡಬಹುದು. ಈ ಸರ್ಟಿಫಿಕೇಟನ್ನು ಡೌನ್‌ಲೋಡ್ ಮಾಡಲು ಅನ್ವಯವಾಗುವ ಆಯ್ಕೆಯನ್ನು ಕ್ಲಿಕ್ ಮಾಡಿ.

2. ಡೌನ್‌ಲೋಡ್ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಈ ಸರ್ಟಿಫಿಕೇಟಿನ PDF ಫಾರ್ಮ್ ಅನ್ನುಪಡೆಯಬಹುದು.

ನಿಮ್ಮ ಪಾಸ್‌ಪೋರ್ಟ್ ಅನ್ನು ವ್ಯಾಕ್ಸಿನ್ ಸರ್ಟಿಫಿಕೇಟಿನೊಂದಿಗೆ ಸುಲಭವಾಗಿ ಲಿಂಕ್ ಮಾಡಲು ಮೇಲೆ ಚರ್ಚಿಸಿದ ಹಂತಗಳನ್ನು ಅನುಸರಿಸಿ. 

ಇದು ಹೆಚ್ಚು ತೊಂದರೆಯಿಲ್ಲದೆ ವಿದೇಶಕ್ಕೆ ಪ್ರಯಾಣಿಸಲು ಮತ್ತು ಅದೇ ಸಮಯದಲ್ಲಿ ಕೋವಿಡ್  ಪ್ರೋಟೋಕಾಲ್‌ಗಳಿಗೆ ಅನುಸರಿಸಲು ನಿಮಗೆ ಮತ್ತೆ ಸಹಾಯ ಮಾಡುತ್ತದೆ.

ವ್ಯಾಕ್ಸಿನೇಷನ್ ಸರ್ಟಿಫಿಕೇಟಿನೊಂದಿಗೆ ಪಾಸ್‌ಪೋರ್ಟ್ ಅನ್ನು ಲಿಂಕ್ ಮಾಡುವ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ನಾನು ಮೊಬೈಲ್ ಸಂಖ್ಯೆ ಇಲ್ಲದೆಯೇ ನನ್ನ ಪಾಸ್‌ಪೋರ್ಟ್ ಲಿಂಕ್ ಮಾಡಿದ ವ್ಯಾಕ್ಸಿನೇಷನ್ ಸರ್ಟಿಫಿಕೇಟನ್ನು ಡೌನ್‌ಲೋಡ್ ಮಾಡಬಹುದೇ?

ಇಲ್ಲ, ವ್ಯಾಕ್ಸಿನ್ ಸರ್ಟಿಫಿಕೇಟಿಗೆ ರಿಜಿಸ್ಟರ್ ಮಾಡಲು  ಮತ್ತು ಡೌನ್‌ಲೋಡ್ ಮಾಡಲು ನೀವು ಮೊಬೈಲ್ ಸಂಖ್ಯೆಯನ್ನು ಒದಗಿಸುವ ಅಗತ್ಯವಿದೆ.

ಕೋವಿನ್ ಹೊರತುಪಡಿಸಿ ಯಾವುದೇ ಇತರ ಆ್ಯಪ್‌ನಿಂದ ನನ್ನ ಪಾಸ್‌ಪೋರ್ಟ್ ಲಿಂಕ್ ಮಾಡಿದ ವ್ಯಾಕ್ಸಿನೇಷನ್ ಸರ್ಟಿಫಿಕೇಟನ್ನು ಡೌನ್‌ಲೋಡ್ ಮಾಡಬಹುದೇ?

ಹೌದು, ನೀವು ಅರೋಗ್ಯಸೇತು  ಆ್ಯಪ್‌ನಲ್ಲಿ ಪರಿಶೀಲಿಸಬಹುದು ಮತ್ತು ಈ ವ್ಯಾಕ್ಸಿನ್  ಸರ್ಟಿಫಿಕೇಟನ್ನು ಡೌನ್‌ಲೋಡ್ ಮಾಡಲು ಕೋವಿನ್ ಟ್ಯಾಬ್ ಅನ್ನು ಕ್ಲಿಕ್ ಮಾಡಿ. ಸರ್ಕಾರಿ ವಾಟ್ಸಾಪ್ ಸಂಖ್ಯೆಗೆ ಸಂದೇಶವನ್ನು ಕಳುಹಿಸುವ ಮೂಲಕ ನೀವು ಈ ಸರ್ಟಿಫಿಕೇಟನ್ನು  ಸಹ ಪಡೆಯಬಹುದು.

ಪಾಸ್‌ಪೋರ್ಟ್ ಮತ್ತು ವ್ಯಾಕ್ಸಿನೇಷನ್ ಸರ್ಟಿಫಿಕೇಟಿಗೆ ಲಿಂಕ್ ಮಾಡುವ ಅಗತ್ಯವಿದೆಯೇ?

ಉದ್ಯೋಗ ಅಥವಾ ಶಾಲೆಗಾಗಿ ವಿದೇಶಕ್ಕೆ ಹೋಗುವ ವ್ಯಕ್ತಿಗಳಿಗೆ, ಭಾರತ ಸರ್ಕಾರವು ಪ್ರತಿರಕ್ಷಣೆ ದಾಖಲೆಗಳನ್ನು ಪಾಸ್‌ಪೋರ್ಟ್‌ಗಳಿಗೆ ಸಂಪರ್ಕಿಸುವುದನ್ನು ಕಡ್ಡಾಯಗೊಳಿಸಿದೆ.