ಆನ್‌ಲೈನ್‌ನಲ್ಲಿ ಇಂಟರ್ನ್ಯಾಷನಲ್ ಟ್ರಾವೆಲ್  ಇನ್ಶೂರೆನ್ಸ್ ಖರೀದಿಸಿ
Instant Policy, No Medical Check-ups

ಭಾರತದಲ್ಲಿ ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ?

ವಿದೇಶಗಳಿಗೆ ಭೇಟಿ ನೀಡುವಾಗ, ಕೆಲವರು ಬಸ್‌ಗಳಂತಹ ಸಾರ್ವಜನಿಕ ಸಾರಿಗೆಯನ್ನು ಆರಿಸಿಕೊಳ್ಳುತ್ತಾರೆ, ಆದರೆ ಇತರರು ಬೈಕುಗಳು ಮತ್ತು ಕಾರುಗಳಲ್ಲಿ ವಿದೇಶಿ ರಸ್ತೆಗಳಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ.

ನೀವು ಭಾರತೀಯ ಡ್ರೈವಿಂಗ್ ಲೈಸೆನ್ಸ್‌ನೊಂದಿಗೆ ನಿಮ್ಮ ವಾಹನದಲ್ಲಿ ಭಾರತದ ಪ್ರತಿಯೊಂದು ಮೂಲೆಯನ್ನು ಕವರ್ ಮಾಡಬಹುದು. ಆದರೆ ವಿದೇಶಿ ಬೀದಿಗಳು ಮತ್ತು ಹೆದ್ದಾರಿಗಳಲ್ಲಿ ಸವಾರಿ ಮಾಡುವಾಗ ಅಂತರಾಷ್ಟ್ರೀಯ ಡ್ರೈವಿಂಗ್ ಪರ್ಮಿಟ್ ಅಥವಾ ಲೈಸೆನ್ಸ್ ಹೊಂದುವುದು ಕಡ್ಡಾಯವಾಗಿದೆ.

ಅಂತರಾಷ್ಟ್ರೀಯ ಡ್ರೈವಿಂಗ್ ಪರ್ಮಿಟ್/ಲೈಸೆನ್ಸ್ ಎಂದರೇನು?

ಭಾರತದ ರಸ್ತೆ ಸಾರಿಗೆ ಪ್ರಾಧಿಕಾರವು ದೇಶದ ಹೊರಗೆ ಪ್ರಯಾಣಿಸಲು ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್, ಫೋರ್ ವೀಲರ್ ಅಥವಾ ಟು ವೀಲರ್ ಅನ್ನು ಓಡಿಸಲು ಕಾನೂನು ಡಾಕ್ಯುಮೆಂಟು ಅನ್ನು ನೀಡುತ್ತದೆ.

ಇದಲ್ಲದೆ, ಇದು ಚಾಲಕರ ಪರವಾನಗಿಯನ್ನು ಅಧಿಕೃತವಾಗಿ ಅನುವಾದ ಮಾಡಿ, ಡಾಕ್ಯುಮೆಂಟುಗಳನ್ನು ವಿದೇಶದಲ್ಲಿ ಅರ್ಥವಾಗುವ ಭಾಷೆಗಳಾಗಿ ಪರಿವರ್ತಿಸಲಾಗಿರುತ್ತದೆ.

ಭಾರತದಲ್ಲಿ ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

ಒಬ್ಬ ವ್ಯಕ್ತಿಯು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಐಡಿಪಿಗಾಗಿ ಅರ್ಜಿ ಸಲ್ಲಿಸಬಹುದು ಅಥವಾ ಅವರ RTO ನಿಂದ ನೇರವಾಗಿ ಅನುಮತಿಯನ್ನು ಪಡೆಯಬಹುದು.

  • ಹಂತ 1: ಕೆಳಗಿನ ಫಾರ್ಮುಗಳನ್ನು ಭರ್ತಿ ಮಾಡಿ:

    • ಫಾರ್ಮ್ 4A - ಒಬ್ಬ ವ್ಯಕ್ತಿಯ ರೈಡರ್ ಸಾಮರ್ಥ್ಯದ ಕುರಿತ ಪ್ರಮಾಣಪತ್ರ.

    • ಫಾರ್ಮ್ 1A - ರೈಡರ್‌ಗೆ ವೈದ್ಯಕೀಯ ಫಿಟ್‌ನೆಸ್‌ ಕುರಿತ ಫಾರ್ಮ್.

  • ಹಂತ 2: ಡ್ರೈವಿಂಗ್ ಲೈಸೆನ್ಸ್, ಗುರುತು ಮತ್ತು ವಸತಿ ಪುರಾವೆಗಳ ವಿವರಗಳನ್ನು ಒದಗಿಸಿ.

  • ಹಂತ 3: ಎಲ್ಲಾ ಅಗತ್ಯ ಡಾಕ್ಯುಮೆಂಟುಗಳನ್ನು ಫಾರ್ಮ್ ನೊಂದಿಗೆ ಸಲ್ಲಿಸಿ.

  • ಹಂತ 4: ಡ್ರೈವಿಂಗ್ ಪರೀಕ್ಷೆಯನ್ನು ತೆಗೆದುಕೊಳ್ಳಿ.

  • ಹಂತ 5: ಡಾಕ್ಯುಮೆಂಟ್ ಸಲ್ಲಿಸುವ ಸಮಯದಲ್ಲಿ ₹ 1,000 ಪಾವತಿ ಮಾಡಿ.

ಈ ಸರಳ ಹಂತಗಳನ್ನು ಅನುಸರಿಸಿದರೆ, ನಿಮ್ಮ ಅಪ್ಲಿಕೇಶನ್ ಯಶಸ್ವಿಯಾಗುತ್ತದೆ ಹಾಗೂ 4 ರಿಂದ 5 ವ್ಯವಹಾರ ದಿನಗಳಲ್ಲಿ ನಿಮ್ಮ ಐಡಿಎಲ್ ಅನ್ನು ನೀವು ಸ್ವೀಕರಿಸುತ್ತೀರಿ.

ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆಯಿಂದ ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಗೆ ಯಾರು ಬೇಕಾದರು ಅರ್ಜಿ ಸಲ್ಲಿಸುವಷ್ಟು ಸುಲಭವಾಗಿದೆ.ಯಾರಾದರೂ ಆಫ್‌ಲೈನ್ ಮಾರ್ಗವನ್ನು ತೆಗೆದುಕೊಳ್ಳಲು ಬಯಸಿದರೆ, ಅವರು ತಮ್ಮ ಆರ್‌ಟಿಒಗಳಿಗೆ ಹೋಗಿ ಫಾರ್ಮ್ ಗಳನ್ನು ಭರ್ತಿ ಮಾಡಿ, ಶುಲ್ಕವನ್ನು ಪಾವತಿಸಿ, ಅಗತ್ಯ ಡಾಕ್ಯುಮೆಂಟುಗಳನ್ನು ಸಲ್ಲಿಸಬಹುದು. RTO ನಿಮ್ಮ ಲೈಸೆನ್ಸ್ ಅನ್ನು ಅಂತಾರಾಷ್ಟ್ರೀಯವಾಗಿ ಪರಿವರ್ತಿಸುತ್ತದೆ.

ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸಲು ಅರ್ಹತೆಯ ಮಾನದಂಡಗಳು:

ಐಡಿಎಲ್ ಗೆ ಅರ್ಜಿ ಸಲ್ಲಿಸಲು ಅರ್ಹತೆಯ ಮಾನದಂಡಗಳು ಈ ಕೆಳಗಿನಂತಿವೆ -

  • 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಭಾರತೀಯ ನಾಗರಿಕರಾಗಿರಬೇಕು.

  • ವ್ಯಕ್ತಿಯು ಮಾನ್ಯವಾದ ಭಾರತೀಯ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿರಬೇಕು.

  • ಮಾನ್ಯವಾದ ಪಾಸ್‌ಪೋರ್ಟ್ ಮತ್ತು ವೀಸಾವನ್ನು ಹೊಂದಿರಬೇಕು.

ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸಲು ಅಗತ್ಯವಿರುವ ಡಾಕ್ಯುಮೆಂಟುಗಳು

ಭಾರತದಲ್ಲಿ ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸಲು ಅಗತ್ಯವಿರುವ ಡಾಕ್ಯುಮೆಂಟುಗಳು ಈ ಕೆಳಕಂಡಂತಿವೆ:

  • ಫಾರ್ಮ್ಸ್ 4A ಮತ್ತು 1A

  • ಮಾನ್ಯ ಡ್ರೈವರ್ಸ್ ಲೈಸೆನ್ಸ್ ಪ್ರತಿ

  • ಪಾಸ್‌ಪೋರ್ಟ್‌ ಮತ್ತು ವೀಸಾದ ಪ್ರತಿ

  • ಪರಿಶೀಲನೆಗಾಗಿ ಡ್ಯೂಪ್ಲಿಕೇಟ್ ವಿಮಾನ ಟಿಕೆಟ್‌ಗಳು

  • ಅಪ್ಲಿಕೇಶನ್ ಶುಲ್ಕ ₹ 1,000

  • ಅಗತ್ಯವಿರುವಂತೆ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು

  • ಭಾರತೀಯ ಪೌರತ್ವದ ಪ್ರಮಾಣೀಕೃತ ಪುರಾವೆ

  • ವಿಳಾಸ ಪುರಾವೆಯ ಪ್ರತಿ

  • ವಯಸ್ಸಿನ ಪುರಾವೆಯ ಪ್ರತಿ

ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸಲು ಅಗತ್ಯವಿರುವ ಡಾಕ್ಯುಮೆಂಟುಗಳ ಬಗ್ಗೆ ಈಗ ನಿಮಗೆ ತಿಳಿದಿದೆ, ಅದನ್ನು ಹೇಗೆ ನವೀಕರಿಸುವುದು ಎಂದು ತಿಳಿಯೋಣ.

ಭಾರತದಲ್ಲಿ ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಅನ್ನು ನವೀಕರಿಸುವುದು ಹೇಗೆ?

ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ನ ವ್ಯಾಲಿಡಿಟಿ ಅದರ ವಿತರಣೆಯ ದಿನಾಂಕದಿಂದ ಒಂದು ವರ್ಷದವರೆಗಿರುತ್ತದೆ. 

ಈ ಹಿಂದೆ ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಅನ್ನು ನವೀಕರಿಸುವುದು ಅಸಾಧ್ಯವಾಗಿತ್ತು, ಆದರೆ ಮೋಟಾರು ವಾಹನ ಕಾಯ್ದೆಯಲ್ಲಿನ ತಿದ್ದುಪಡಿಯಿಂದ ಇದೀಗ ಸಾಧ್ಯವಾಗಿದೆ. MoRTH ನ ಅಧಿಕೃತ ವೆಬ್‌ಸೈಟ್ ಮೂಲಕ ವ್ಯಕ್ತಿಯು ಇದನ್ನು ನವೀಕರಿಸಬಹುದಾಗಿದೆ. ಕಾರ್ಯವಿಧಾನಗಳು ಈ ಕೆಳಗಿನಂತಿವೆ -

  • ಹಂತ 1: ಆಯಾ ಭಾರತೀಯ ರಾಯಭಾರಿ ವೆಬ್ಸೈಟ್‌ಗಳಿಂದ ವಿವಿಧ ಅಪ್ಲಿಕೇಶನ್ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ, ಭರ್ತಿ ಮಾಡಿ.

  • ಹಂತ 2: ಈ ಕೆಳಗಿನ ಡಾಕ್ಯುಮೆಂಟುಗಳನ್ನು ಸಲ್ಲಿಸಿ:

    • ಅರ್ಜಿದಾರರ ಮಾನ್ಯವಾದ ಪಾಸ್‌ಪೋರ್ಟ್ ಮತ್ತು ವೀಸಾ ಸ್ಟೇಟಸಿನ ಒರಿಜಿನಲ್ ಮತ್ತು ಪ್ರತಿ.

    • ಮಾನ್ಯ ಮತ್ತು ಒರಿಜಿನಲ್ ಐಡಿಪಿ ಮತ್ತು ಭಾರತೀಯ ಡ್ರೈವಿಂಗ್ ಲೈಸೆನ್ಸ್..

    • ಯುಟಿಲಿಟಿ ಬಿಲ್, ಗುತ್ತಿಗೆ ಒಪ್ಪಂದ, ರಾಜ್ಯ ಗುರುತಿನ ಚೀಟಿ ಅಥವಾ ಅಡಮಾನ ಪತ್ರ ಸೇರಿದಂತೆ ನಿವಾಸದ ಪುರಾವೆ.

    • ಅಗತ್ಯವಿರುವಷ್ಟು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು.

  • ಹಂತ 3: ಡಾಕ್ಯುಮೆಂಟ್‌ಗಳು ಮತ್ತು ಫಾರ್ಮ್‌ಗಳ ಜೊತೆಗೆ ₹ 2,000 ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ನವೀಕರಣ ಶುಲ್ಕವನ್ನು ಸಲ್ಲಿಸಿ.. ರಾಯಭಾರ ಕಚೇರಿಯಿಂದ ಪಾವತಿಯ ರಸೀದಿ ಮತ್ತು ಗುರುತಿನ ಪ್ರಮಾಣಪತ್ರವನ್ನು ಪಡೆಯಬಹುದು.

  • ಹಂತ 4: MORTH ನ ಅಧಿಕೃತ ವೆಬ್‌ಸೈಟ್‌ನಿಂದಅರ್ಜಿ ಸಲ್ಲಿಸಿ ಮತ್ತು ರಾಯಭಾರ ಕಚೇರಿಯ ಎಲ್ಲಾ ಡಾಕ್ಯುಮೆಂಟುಗಳನ್ನು ಅಪ್‌ಲೋಡ್ ಮಾಡಿ.

ನಂತರ, ಭಾರತೀಯ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ನಿಮ್ಮ ಐಡಿಪಿಅನ್ನು ಮರುಹಂಚಿಕೆ ಮಾಡಿ, ಅದನ್ನು ನಿಮ್ಮ ಅಂಚೆ ವಿಳಾಸಕ್ಕೆ ಕಳುಹಿಸುತ್ತದೆ.

ಇದಲ್ಲದೆ, ವಿದೇಶದಲ್ಲಿ ಡ್ರೈವಿಂಗ್ ಪರ್ಮಿಟ್ ಅನ್ನು ಮರು ನೀಡುವುದರಲ್ಲಿ ಯಾವುದೇ ಹೆಚ್ಚಿನ ಸಮಸ್ಯೆಗಳಿದ್ದರೆ, ಅದನ್ನು MoRTH ನಲ್ಲಿ ವಿಚಾರಿಸಬೇಕು. ಹೀಗಾಗಿ, ನಿಮ್ಮ ಐಡಿಎಲ್ ನ ವ್ಯಾಲಿಡಿಟಿಯನ್ನು ನೀವು ಇನ್ನೊಂದು ವರ್ಷದವರೆಗೆ ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು.

ಅಂತರಾಷ್ಟ್ರೀಯ ಡ್ರೈವಿಂಗ್ ಪರ್ಮಿಟ್ ನ ಪ್ರಯೋಜನಗಳು ಯಾವುವು?

ಅಂತರಾಷ್ಟ್ರೀಯ ಪರ್ಮಿಟ್ ನೊಂದಿಗೆ, ನೀವು ವಿದೇಶಿ ರಸ್ತೆಗಳಲ್ಲಿ ಆಯಾ ವಿದೇಶಿ ಅಧಿಕಾರಿಗಳೊಂದಿಗೆ ಯಾವುದೇ ತೊಂದರೆಗೆ ಒಳಗಾಗದೆ ಸಂಚರಿಸಬಹುದು. ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಹಲವಾರು ಇತರ ಪ್ರಯೋಜನಗಳು ಹೀಗಿವೆ. ಅವುಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

  • ವಿದೇಶಿ ರಸ್ತೆಗಳಲ್ಲಿ ಕಾರನ್ನು ಬಾಡಿಗೆಗೆ ನೀಡಿ ಮತ್ತು ಚಾಲನೆ ಮಾಡಬಹುದು.

  • ಇದು ಗುರುತಿನ ಪುರಾವೆಯಾಗಿಯೂ ಕೆಲಸ ಮಾಡುತ್ತದೆ.

  • ವಿದೇಶದಲ್ಲಿ ಯಾವುದೇ ಹೆಚ್ಚುವರಿ ಚಾಲನಾ ಪರೀಕ್ಷೆಗಳ ಅಗತ್ಯವಿರುವುದಿಲ್ಲ.

  • ನೀವು ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ನೊಂದಿಗೆ ಸುಮಾರು 150 ದೇಶಗಳಿಗೆ ಭೇಟಿ ನೀಡಬಹುದು.

  • ನೀವು ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿದ್ದರೆ ನೀವು ವಿದೇಶದಲ್ಲಿ ಅಪಘಾತಕ್ಕೆ ವಿಮೆಯನ್ನೂ ಪಡೆಯಬಹುದು.

  • ವಿದೇಶಿ ಅಧಿಕಾರಿಗಳೊಂದಿಗೆ ಸಂವಹನವು ಕಾರ್ಯಸಾಧ್ಯವಾಗುತ್ತದೆ.

  • ಗ್ರಾಮಾಂತರ ರಸ್ತೆಗಳು ಮತ್ತು ದೃಶ್ಯಗಳನ್ನು ಅನುಭವಿಸಬಹುದು.

ನೀವು ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸಲು ಮತ್ತು ನಿಮ್ಮ ವಾಹನವನ್ನು ವಿದೇಶಿ ಪ್ರವಾಸಕ್ಕೆ ತೆಗೆದುಕೊಳ್ಳಲು ಇದು ಉತ್ತಮ ಸಮಯವಾಗಿದೆ. ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದುಕೊಳ್ಳುವುದರಿಂದ ಸ್ಥಳೀಯ ಅಧಿಕಾರಿಗಳೊಂದಿಗೆ ತೊಂದರೆಯಾಗದಂತೆ ವಿದೇಶಿ ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿ ಕಾರುಗಳನ್ನು ಮುಕ್ತವಾಗಿ ಬಾಡಿಗೆಗೆ ಪಡೆದು, ಸಂಚರಿಸಬಹುದಾಗಿದೆ.

ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಪಡೆಯಿರಿ.

ನಿಮ್ಮ ಸುರಕ್ಷತೆಗೆ ಐಡಿಎಲ್ ಒಂದಿದ್ದರೆ ಸಾಲದು.. ಅದಕ್ಕಾಗಿ ಸಂಪೂರ್ಣ ರಕ್ಷಣೆಗಾಗಿ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಿ:

ಪ್ರಯಾಣಕ್ಕಾಗಿ ನಿಮ್ಮ ಉದ್ದೇಶ ಏನೇ ಇರಲಿ, ಕೆಲಸ ಅಥವಾ ರಜೆಯಿರಲಿ, ಟ್ರಾವೆಲ್ ಇನ್ಶೂರೆನ್ಸ್ ಕವರ್ ಅನ್ನು ಖರೀದಿಸುವುದನ್ನು ಮಾತ್ರ ತಪ್ಪಿಸಿಕೊಳ್ಳಬೇಡಿ. ಇದು ನಿಮಗೆ ಹೀಗೆ ಸಹಾಯ ಮಾಡಲಿದೆ:

  • ರದ್ದುಗೊಂಡ ಪ್ರವಾಸ: ನಿಮ್ಮ ಪ್ರಯಾಣದ ಯೋಜನೆಯನ್ನು ನೀವು ರದ್ದುಗೊಳಿಸಬೇಕಾದರೆ ಗಾಬರಿಯಾಗಬೇಡಿ, ಆ ಚಿಂತೆಗಳನ್ನು ವಿಮಾ ಕಂಪನಿಗೆ ಬಿಟ್ಟುಬಿಡಿ. ನೀವು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ನೀವು ಸುಲಭವಾಗಿ ಟಿಕೆಟ್‌ಗಳನ್ನು ಪಡೆದು, ಉಳಿದೆಲ್ಲವನ್ನೂ ರದ್ದುಗೊಳಿಸಬಹುದು ಹಾಗೂ ಮರುಪಾವತಿ ಮಾಡಬಹುದು. ಅನಾರೋಗ್ಯ, ಗಾಯ, ಭಯೋತ್ಪಾದಕ ಘಟನೆ ಮತ್ತು ಇತರ ಸನ್ನಿವೇಶಗಳ ಸಂದರ್ಭದಲ್ಲಿ ಪ್ರವಾಸ ರದ್ದತಿಯ ವೆಚ್ಚವನ್ನು ಇದು ಭರಿಸುತ್ತದೆ.

  • ವೈದ್ಯಕೀಯ ತುರ್ತುಸ್ಥಿತಿಗಳು: ವಿದೇಶದಲ್ಲಿ ವೈದ್ಯಕೀಯ ತುರ್ತುಪರಿಸ್ಥಿತಿಯ ಕಾರಣದಿಂದಾಗಿ ನೀವು ತೊಂದರೆ ಅನುಭವಿಸಬಹುದು. ಮತ್ತು ಡ್ರೈವಿಂಗ್‌ನಿಂದ ಅದು ಸಂಭವಿಸಿದರೆ, ತೊಂದರೆಗಳು ಇನ್ನೂ ಹೆಚ್ಚಾಗಬಹುದು. ಆದರೆ ನೀವು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ನಿಮ್ಮ ಎಲ್ಲಾ ಆತಂಕಗಳನ್ನು ಬಿಟ್ಟುಬಿಡಿ.

  • ತುರ್ತು ಸ್ಥಳಾಂತರಿಸುವಿಕೆಗಳು: ವೈದ್ಯಕೀಯ ತುರ್ತುಸ್ಥಿತಿಗಳು ಯಾರೊಂದಿಗಾದರೂ ಯಾವಾಗ ಬೇಕಾದರೂ ಸಂಭವಿಸಬಹುದು. ನೀವು ರಜೆಗಾಗಿ ಅಥವಾ ಕೆಲಸಕ್ಕಾಗಿ ಹೊರಗಿರುವಾಗ ಹೆಚ್ಚುವರಿ ಕಾಳಜಿಯನ್ನು ಏಕೆ ಕಳೆದುಕೊಳ್ಳುತ್ತೀರಿ? ಟ್ರಾವೆಲ್ ಕವರ್ ಅನ್ನು ಖರೀದಿಸುವುದರಿಂದ ಏರ್‌ಲಿಫ್ಟ್‌ಗಳು ಅಥವಾ ವೈದ್ಯಕೀಯವಾಗಿ ಸುಸಜ್ಜಿತವಾದ ವಿಮಾನಗಳಂತಹ ತುರ್ತು ಸ್ಥಳಾಂತರಿಸುವಿಕೆಗೆ ನಿಮಗೆ ಸಹಾಯ ಮಾಡುತ್ತದೆ.

  • ಲಗೇಜ್ ನಷ್ಟ, ಸಾಮಾನು ಸರಂಜಾಮು ವಿಳಂಬ ಮತ್ತು ವಿಮಾನಗಳ ವಿಳಂಬ: ವಿದೇಶಕ್ಕೆ ಪ್ರಯಾಣಿಸುವಾಗ ಅಂತಹ ವಿಷಯಗಳಿಗೆ ಸಿದ್ಧರಾಗಿರಬೇಕು. ಮಾನವ ದೋಷವು ಸಾಮಾನ್ಯವಾಗಿರುವುದರಿಂದ ಈ ವಿಮೆಯು ನಿಮಗೆ ಹೆಚ್ಚು ಸಹಾಯಕ್ಕೆ ಬರುತ್ತದೆ. ಟ್ರಾವೆಲ್ ಇನ್ಶೂರೆನ್ಸ್ ಕವರ್‌ನೊಂದಿಗೆ, ಬ್ಯಾಗ್‌ಗಳ ನಷ್ಟ ಅಥವಾ ವಿಳಂಬಕ್ಕೆ ಪರಿಹಾರವನ್ನು ಪಡೆಯುವ ಭರವಸೆಯನ್ನು ನೀವು ಉಳಿಸಿಕೊಳ್ಳಬಹುದು.

  • ಫೋನ್ ಅಸಿಸ್ಟನ್ಸ್:  ವಿದೇಶದಲ್ಲಿ ಆತಂಕ ಅಥವಾ ನೋವಿನಲ್ಲಿರುವಾಗ, ನಿಮಗೆ ಸುರಕ್ಷತೆಯ ಭರವಸೆ ನೀಡುವ ವ್ಯಕ್ತಿಯೊಂದಿಗೆ ನೀವು ಯಾವಾಗಲೂ ಸಂಪರ್ಕ ಹೊಂದಲು ಬಯಸುತ್ತೀರಿ. ಟ್ರಾವೆಲ್ ಕವರ್‌ನೊಂದಿಗೆ, ಜಗತ್ತಿನಾದ್ಯಂತ ಮತ್ತು ದಿನದ ಯಾವುದೇ ಭಾಗದಲ್ಲಿ ಯಾರೊಂದಿಗಾದರೂ ಸುಲಭವಾಗಿ ನೀವು ಸಂಪರ್ಕಿಸಬಹುದು.

  • ಪರ್ಸನಲ್ ಲಯಬಿಲಿಟಿ ಬಾಂಡ್: ಟ್ರಾವೆಲ್ ಇನ್ಶೂರೆನ್ಸ್ ಈ ಪ್ರಯೋಜನದಡಿಯಲ್ಲಿ, ನೀವು ಕಾರನ್ನು ಚಾಲನೆ ಮಾಡುವಾಗ ಉದ್ಭವಿಸಬಹುದಾದ ಯಾವುದೇ ತುರ್ತು ಪರಿಸ್ಥಿತಿಗಳಿಗೆ ನೀವು ರಕ್ಷಣೆ ಪಡೆಯುತ್ತೀರಿ.. ಇದು ನಿಮಗೆ ಉಂಟಾಗಬಹುದಾದ ಆಕ್ಸಿಡೆಂಟ್ಗಳಿಗೆ ಅಥವಾ ನಿಮ್ಮ ಬಾಡಿಗೆ ಕಾರಿಗೆ ಉಂಟಾಗಬಹುದಾದ ಹಾನಿಯನ್ನೂ ಒಳಗೊಂಡಿರುತ್ತದೆ. ಆದ್ದರಿಂದ, ಆದ್ದರಿಂದ, ನೀವು ಉತ್ತಮ ಅಂತರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ನಿಮ್ಮ ವಿದೇಶ ಪ್ರವಾಸದ ಸಮಯದಲ್ಲಿ ನೀವು ಹೆಚ್ಚುವರಿ ಕಾರು ಇನ್ಶೂರೆನ್ಸ್ ಅನ್ನು ಖರೀದಿಸಬೇಕಾಗುವುದಿಲ್ಲ.    

ಭಾರತದಲ್ಲಿ ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪರ್ಮಿಟ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು:

ವೀಸಾ ಇಲ್ಲದೆ ನಾವು ಭಾರತದಲ್ಲಿ ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆಯಬಹುದೇ?

ಮಾನ್ಯ ಡ್ರೈವಿಂಗ್ ಲೈಸೆನ್ಸ್ , ಪಾಸ್‌ಪೋರ್ಟ್ ಮತ್ತು ವೀಸಾ ಹೊಂದಿರುವ ಅರ್ಜಿದಾರರಿಗೆ ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಅನ್ನು ನೀಡಲಾಗುತ್ತದೆ. ಆದ್ದರಿಂದ ಈ ಯಾವುದೇ ಮಾನ್ಯ ಡಾಕ್ಯುಮೆಂಟುಗಳ ಅನುಪಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ಅಂತರಾಷ್ಟ್ರೀಯ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸಲು ಅನರ್ಹನಾಗಿರುತ್ತಾನೆ.

ಅಂತರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಎಷ್ಟು ಕಾಲ ಮಾನ್ಯವಾಗಿರುತ್ತದೆ?

ಅಂತರರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಅದರ ವಿತರಣೆಯ ದಿನಾಂಕದಿಂದ ಅಥವಾ ದೇಶೀಯ ಲೈಸೆನ್ಸ್ ನ ವ್ಯಾಲಿಡಿಟಿಯಿಂದ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ, ಯಾವುದು ಮೊದಲು ಆಗುತ್ತದೆ ಅದು.