ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಭಾರತದಲ್ಲಿನ ಟರ್ಮ್ ಇನ್ಶೂರೆನ್ಸ್ ಕಂಪನಿಗಳ ಪಟ್ಟಿ

ಜೀವನದ ಅನಿರೀಕ್ಷಿತತೆಯಿಂದಾಗಿ, ಭವಿಷ್ಯದಲ್ಲಿ ಏನಡಗಿದೆ ಎಂಬುದನ್ನು ಊಹಿಸಲೂ ಕಷ್ಟವಾಗುತ್ತದೆ. ಕುಟುಂಬವನ್ನು ಪ್ರಾರಂಭಿಸುವ ವ್ಯಕ್ತಿಗಳು ಒಂದು ವೇಳೆ ತಮಗೆ ಯಾವುದೇ ಸಂದರ್ಭದಲ್ಲಿ ಕೆಲವು ದುರದೃಷ್ಟಕರ ಘಟನೆಗಳು ಸಂಭವಿಸಿದರೂ ಸಹ ತಮ್ಮ ಸಂಗಾತಿ, ಮಕ್ಕಳು, ಪೋಷಕರು ಮತ್ತು ಇತರ ಕುಟುಂಬ ಸದಸ್ಯರು ಆರ್ಥಿಕವಾಗಿ ಸುರಕ್ಷಿತವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.

ಉದಾಹರಣೆಗೆ, ಹಠಾತ್ ಕಾಯಿಲೆಯು ನಿಮ್ಮ ಆಯಸ್ಸನ್ನು ಕಡಿಮೆ ಮಾಡಬಹುದು, ಆ ಸಂದರ್ಭದಲ್ಲಿ ನಿಮ್ಮ ಕುಟುಂಬವು ಯಾವುದೇ ಜೀವನೋಪಾಯದ ಮಾರ್ಗವಿಲ್ಲದೆ ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತದೆ.

ಲೈಫ್ ಇನ್ಶೂರೆನ್ಸ್ ಪಾಲಿಸಿಗಳು ಅಥವಾ ವಿಶೇಷವಾಗಿ, ಟರ್ಮ್ ಇನ್ಶೂರೆನ್ಸ್ ಯೋಜನೆಗಳು ನಿಮ್ಮ ಪ್ರೀತಿಪಾತ್ರರನ್ನು ಅಂತಹ ಘಟನೆಗಳು ಎದುರಾದ ಸಂದರ್ಭದ ವಿರುದ್ಧ ರಕ್ಷಿಸುತ್ತವೆ. ನಿಮ್ಮ ಮರಣದ ಸಂದರ್ಭದಲ್ಲಿ ಈ ಪಾಲಿಸಿಗಳು ನಿಮ್ಮ ಕುಟುಂಬ ಸದಸ್ಯರಿಗೆ ದೊಡ್ಡ ಮೊತ್ತದ ಪರಿಹಾರವನ್ನು ಒದಗಿಸುತ್ತವೆ.

ಈ ಸಾವಿನ ಪ್ರಯೋಜನದೊಂದಿಗೆ, ನಿಮ್ಮ ಕುಟುಂಬದ ಸದಸ್ಯರು ಯಾವುದೇ ಹಣಕಾಸಿನ ಕೊರತೆಯನ್ನು ಎದುರಿಸದೆ ತಮ್ಮ ಜೀವನವನ್ನು ಮುಂದುವರಿಸಬಹುದು.

ಟರ್ಮ್ ಇನ್ಶೂರೆನ್ಸ್ ಎಂದರೇನು?

ಟರ್ಮ್ ಇನ್ಶೂರೆನ್ಸ್ ಯೋಜನೆಗಳು ನಿರ್ದಿಷ್ಟ ಪ್ರಕಾರದ ಲೈಫ್ ಇನ್ಶೂರೆನ್ಸ್ ಪಾಲಿಸಿಗಳಾಗಿದ್ದು ಅಲ್ಲಿ ಸಿಗುವ ಸಾವಿನ ಪ್ರಯೋಜನವು ಏಕೈಕ ಅನುಕೂಲವಾಗಿದೆ.

ಬೇರೆ ವಿವಿಧ ಲೈಫ್ ಇನ್ಶೂರೆನ್ಸ್ ಯೋಜನೆಗಳಲ್ಲಿ ಪಾಲಿಸಿದಾರರು ಪಾಲಿಸಿ ಅವಧಿಯ ನಂತರ ಹೂಡಿಕೆಯ ಮೇಲೆ ಗಣನೀಯ ಲಾಭವನ್ನು ಪಡೆದುಕೊಳ್ಳುವ ಹಾಗೆ, ಟರ್ಮ್ ಇನ್ಶೂರೆನ್ಸ್ ಅಂತಹ ಯಾವುದೇ ಹೆಚ್ಚುವರಿ ಪ್ರಯೋಜನವನ್ನು ನೀಡುವುದಿಲ್ಲ.

ಅಂತಹ ಯೋಜನೆಯ ಅವಧಿಯಲ್ಲಿ ಸ್ವಾಭಾವಿಕ ಸಂದರ್ಭಗಳಿಂದ ಇನ್ಶೂರೆನ್ಸ್ ಮಾಡಿಸಿದ ವ್ಯಕ್ತಿಯು ಮರಣಹೊಂದಿದರೆ ಮಾತ್ರ ಅಂತಹ ಪಾಲಿಸಿಯನ್ನು ಒಬ್ಬರು ಕ್ಲೈಮ್ ಮಾಡಬಹುದು.

ಆದಾಗ್ಯೂ, ಪಾಲಿಸಿ ಅವಧಿ ಮುಗಿದ ನಂತರ ಸಾವು ಸಂಭವಿಸಿದರೆ, ನಾಮಿನಿಗಳು ವಿಮಾದಾರರಿಂದ ಯಾವುದೇ ಹಣಕಾಸಿನ ಪರಿಹಾರವನ್ನು ಪಡೆಯಲು ಸಾಧ್ಯವಿಲ್ಲ.

ಟರ್ಮ್ ಇನ್ಶೂರೆನ್ಸ್ ಪ್ಲಾನ್‌ನ ಪ್ರಾಥಮಿಕ ಅನುಕೂಲವೆಂದರೆ ಅವುಗಳೊಂದಿಗೆ ಲಿಂಕ್ ಮಾಡಲಾದ ಕಡಿಮೆ ಪ್ರೀಮಿಯಂಗಳು. ಅಷ್ಟೇ ಅಲ್ಲದೆ, ಅಂತಹ ಪಾಲಿಸಿಗೆ ಸಂಬಂಧಿಸಿದ ಮರಣದ ಲಾಭದ ಮೊತ್ತವು ಬೇರೆ ಲೈಫ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಹೋಲಿಸಿದರೆ ಗಮನಾರ್ಹವಾಗಿದೆ. ಹೆಚ್ಚುವರಿ ಪ್ರಯೋಜನಗಳು ಈ ರೀತಿ ಇವೆ:

  • ಸ್ಟ್ಯಾಂಡರ್ಡ್ ಟರ್ಮ್ ಇನ್ಶೂರೆನ್ಸ್ ಪ್ಲಾನ್ ನೀಡುವ ಆರ್ಥಿಕ ರಕ್ಷಣೆಯನ್ನು ಹೆಚ್ಚಿಸಲು ಮಲ್ಟಿಪಲ್ ರೈಡರ್ಸ್ ಲಭ್ಯತೆ
  • ಟರ್ಮ್ ಇನ್ಶೂರೆನ್ಸ್ ಪೂರೈಕೆದಾರರು ಧೂಮಪಾನ ಮಾಡದ ಪಾಲಿಸಿದಾರರಿಗೆ ಪ್ರೀಮಿಯಂ ಕಡಿಮೆ ಮಾಡುವುದು ಸೇರಿದಂತೆ ನವೀನ ವೈಶಿಷ್ಟ್ಯಗಳು ಮತ್ತು ರಿಯಾಯಿತಿಗಳನ್ನು ನೀಡುತ್ತವೆ.
  • ಮದುವೆಯ ಸಮಯದಲ್ಲಿ ಅಥವಾ ನೀವು ಮೊದಲ ಬಾರಿಗೆ ಪೋಷಕರಾದಾಗ ನಿಮ್ಮ ಜೀವನದ ನಿರ್ಣಾಯಕ ಹಂತಗಳಲ್ಲಿ ನೀವು ಜೀವನದ ರಕ್ಷಣೆಯನ್ನು ಹೆಚ್ಚಿಸಬಹುದು.

ಭಾರತದಲ್ಲಿನ ಟರ್ಮ್ ಇನ್ಶೂರೆನ್ಸ್ ಕಂಪನಿಗಳ ಪಟ್ಟಿ

ಕಂಪನಿಯ ಹೆಸರು  ಸ್ಥಾಪಿಸಿದ ವರ್ಷ ಪ್ರಧಾನ ಕಛೇರಿಯ ಸ್ಥಳ 
ಭಾರತೀಯ ಜೀವ ವಿಮಾ ನಿಗಮ 1956 ಮುಂಬೈ
ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್. 2000 ನವ ದೆಹಲಿ
ಹೆಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್. 2000 ಮುಂಬೈ
ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್. 2000 ಮುಂಬೈ
ಆದಿತ್ಯ ಬಿರ್ಲಾ ಸನ್ಲೈಫ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್. 2000 ಮುಂಬೈ
ಕೊಟಕ್ ಮಹಿಂದ್ರಾ ಲೈಫ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್. 2001 ಮುಂಬೈ
ಪ್ರಮೇರಿಕಾ ಲೈಫ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್. 2008 ಗುರುಗ್ರಾಮ್ 
ಟಾಟಾ ಎಐಎ ಲೈಫ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್. 2000 ಮುಂಬೈ
ಬಜಾಜ್ ಅಲೈನ್ಜ್ ಲೈಫ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್. 2001 ಪುಣೆ
ಎಸ್‌ಬಿ‌ಐ ಲೈಫ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್. 2001 ಮುಂಬೈ
ಎಕ್ಸಾಯ್ಡ್ ಲೈಫ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್. 2001 ಬೆಂಗಳೂರು
ರಿಲಯನ್ಸ್ ನಿಪ್ಪೋನ್ ಲೈಫ್ ಇನ್ಶೂರೆನ್ಸ್ ಕಂಪನಿ 2001 ಮುಂಬೈ
ಸಹರಾ ಇಂಡಿಯಾ ಲೈಫ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್. 2000 ಕಾನ್ಪುರ
ಅವೀವಾ ಲೈಫ್ ಇನ್ಶೂರೆನ್ಸ್ ಕಂಪನಿ ಇಂಡಿಯಾ ಲಿಮಿಟೆಡ್. 2002 ಗುರುಗ್ರಾಮ್ 
ಪಿಎನ್‌ಬಿ ಮೆಟ್ಲೈಫ್ ಇಂಡಿಯ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್. 2001 ಮುಂಬೈ
ಭಾರ್ತಿ ಎಎಕ್ಸ್ಎ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ 2005 ಮುಂಬೈ
ಐಡಿಬಿಐ ಫೆಡರಲ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ 2008 ಮುಂಬೈ
ಫ್ಯೂಚರ್ ಜನರಲಿ ಇಂಡಿಯಾ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ 2006 ಮುಂಬೈ
ಶ್ರೀರಾಮ್ ಲೈಫ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್. 2005 ಹೈದೆರಾಬಾದ್
ಏಗಾನ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ 2008 ಮುಂಬೈ
ಕೆನರಾ ಹೆಚ್ಎಸ್‌ಬಿಸಿ ಓರಿಯೆಂಟಲ್ ಬ್ಯಾಂಕ್ ಓಫ್ ಕಾಮರ್ಸ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ 2007 ಗುರುಗ್ರಾಮ್
ಎಡೆಲ್ವೇಯ್ಸ್ ಟೋಕಿಯೋ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ 2009 ಮುಂಬೈ
ಸ್ಟಾರ್ ಯೂನಿಯನ್ ದಯ್- ಲ್ಚಿ ಲೈಫ್ ಇನ್ಶೂರೆನ್ಸ್ ಕಂಪೆನಿ ಲಿಮಿಟೆಡ್  2007 ಮುಂಬೈ
ಇಂಡಿಯಾಫಸ್ಟ್ ಲೈಫ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ 2009 ಮುಂಬೈ

ಅಂತಹ ಪಾಲಿಸಿಗಳನ್ನು ಪಡೆಯುವ ಮೊದಲು ಆಯ್ಕೆ ಮಾಡುವ ನಿರ್ದಿಷ್ಟ ಟರ್ಮ್ ಇನ್ಶೂರೆನ್ಸ್ ಪೂರೈಕೆದಾರರಿಂದ ಸಾಧಕ-ಬಾಧಕಗಳನ್ನು ಪರಿಗಣಿಸಬೇಕು.

ಕ್ಲೈಮ್ ಸೆಟ್ಲ್‌ಮೆಂಟ್ ಅನುಪಾತ, ಗ್ರಾಹಕ ಸೇವೆ ಮತ್ತು ಒಟ್ಟಾರೆ ಖ್ಯಾತಿಯಂತಹ ಇನ್ಶೂರೆನ್ಸ್ ಕಂಪನಿಯ ವಿವಿಧ ಆಯಾಮಗಳನ್ನು ನೀವು ಪರಿಶೀಲಿಸಬೇಕು..

ಅಷ್ಟೇ ಅಲ್ಲದೇ, ಕಂಪನಿಯ ಪಾಲಿಸಿ ವೈಶಿಷ್ಟ್ಯಗಳು ಅಂತಹ ಲೈಫ್ ಕವರೇಜ್‌ನಿಂದ ನೀವು ಬಯಸುತ್ತಿರುವ ಸೌಲಭ್ಯಗಳೊಂದಿಗೆ ಹೊಂದಿಕೆಯಾಗಬೇಕು.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಟರ್ಮ್ ಇನ್ಶೂರೆನ್ಸ್ ಸ್ಟ್ಯಾಂಡರ್ಡ್ ಲೈಫ್ ಇನ್ಶೂರೆನ್ಸ್ ನಿಂದ ಹೇಗೆ ಭಿನ್ನವಾಗಿದೆ?

ಟರ್ಮ್ ಇನ್ಶೂರೆನ್ಸ್ ಒಂದು ರೀತಿಯ ಲೈಫ್ ಇನ್ಶೂರೆನ್ಸ್ ಆಗಿದ್ದರೂ, ನೀವು ಅದನ್ನು ಹೂಡಿಕೆಯ ಒಂದು ರೂಪವೆಂದು ಪರಿಗಣಿಸಬಾರದು. ಅಂತಹ ಯೋಜನೆಗಳು ನಿಗದಿತ ಅವಧಿಯನ್ನು ಹೊಂದಿರುತ್ತವೆ ಮತ್ತು ಹಣಕಾಸಿನ ರಿಟರ್ನ್ ಆಗಿ ಮರಣ ಪ್ರಯೋಜನವನ್ನು ಮಾತ್ರ ನೀಡುತ್ತವೆ.

ಹೀಗಾಗಿ, ವಿಮಾದಾರ ವ್ಯಕ್ತಿಯು ಪಾಲಿಸಿ ಅವಧಿಯನ್ನು ಮೀರಿದರೆ, ಆತ/ಆಕೆ ಅದರಿಂದ ಯಾವುದೇ ಪರಿಹಾರವನ್ನು ಪಡೆಯಲು ಸಾಧ್ಯವಿಲ್ಲ.

ಆದಾಗ್ಯೂ, ಈ ಅವಧಿಯಲ್ಲಿ ಪಾಲಿಸಿದಾರರು ಮರಣಹೊಂದಿದರೆ, ನಾಮಿನಿಗಳು ಟರ್ಮ್ ಇನ್ಶೂರೆನ್ಸ್ ಪ್ಲಾನ್‌ಗೆ ಲಿಂಕ್ ಮಾಡಲಾದ ಮರಣ ಪ್ರಯೋಜನ ಪರಿಹಾರವನ್ನು ಕ್ಲೈಮ್ ಮಾಡಬಹುದು.

ಸ್ಟ್ಯಾಂಡರ್ಡ್ ಲೈಫ್ ಇನ್ಶೂರೆನ್ಸ್ ಯೋಜನೆಯಲ್ಲಿ, ಪಾಲಿಸಿದಾರರು ಒಂದು ವೇಳೆ ಇನ್ನೂ ಜೀವಂತವಾಗಿದ್ದರೆ, ಪ್ಲಾನ್ ಅವಧಿ ಮುಗಿದ ನಂತರ ರಿಟರ್ನ್ ಕ್ಲೇಮ್ ಮಾಡಬಹುದು

ಟರ್ಮ್ ಇನ್ಶೂರೆನ್ಸ್ ಪಾಲಿಸಿಗಳು ಏಕೆ ಪ್ರಯೋಜನಕಾರಿ?

ವಿಶೇಷವಾಗಿ ನೀವು ಸಂಗಾತಿ ಮತ್ತು ಮಕ್ಕಳಂತಹ ಅವಲಂಬಿತ ಕುಟುಂಬ ಸದಸ್ಯರನ್ನು ಹೊಂದಿದ್ದರೆ, ಎಲ್ಲಾ ಲೈಫ್ ಇನ್ಶೂರೆನ್ಸ್ ಯೋಜನೆಗಳಿಗೆ ಲಿಂಕ್ ಮಾಡಲಾದ ಮರಣ ಪ್ರಯೋಜನಗಳು ಅತ್ಯಂತ ಅನುಕೂಲಕರವಾಗಿವೆ. 

ಈ ಸಾವಿನ ನಂತರದ ಪ್ರಯೋಜನವು ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಮರಣದ ನಂತರ ಬಳಸಬಹುದಾದ ಹಣಕಾಸಿನ ನಿಧಿಯಾಗಿ ಕಾರ್ಯನಿರ್ವಹಿಸಬಹುದು. ಟರ್ಮ್ ಇನ್ಶೂರೆನ್ಸ್ ಪಾಲಿಸಿಗಳು ಈ ಮರಣದ ಪ್ರಯೋಜನವನ್ನು ಹೊರತುಪಡಿಸಿ ಯಾವುದೇ ಹಣಕಾಸಿನ ಲಾಭವನ್ನು ಒದಗಿಸುವುದಿಲ್ಲ.

ಅದಕ್ಕಾಗಿಯೇ ಅಂತಹ ಯೋಜನೆಗಳನ್ನು ಆಯ್ಕೆ ಮಾಡುವ ಜನರು ಗಣನೀಯ ಮೊತ್ತವನ್ನು ಈ ಪ್ರಯೋಜನವನ್ನು ಪ್ರೀಮಿಯಂನ ಕೈಗೆಟುಕುವ ದರಗಳಲ್ಲಿ ಆರಿಸಿಕೊಳ್ಳಬಹುದು.

ಟರ್ಮ್ ಇನ್ಶೂರೆನ್ಸ್ ಕಂಪನಿಯಲ್ಲಿ ನೀವು ಏನನ್ನು ನೋಡಬೇಕು?

ಲೈಫ್ ಇನ್ಶೂರೆನ್ಸ್ ಕಂಪನಿಯಲ್ಲಿ ಪರಿಶೀಲಿಸಬೇಕಾದ ಪ್ರಮುಖ ಅಂಶವೆಂದರೆ ಅದರ ಕ್ಲೈಮ್ ಸೆಟಲ್ಮೆಂಟ್ ಅನುಪಾತ. ಈ ಡೇಟಾವು ಕಂಪನಿಯು ಸ್ವೀಕರಿಸುವ ಒಟ್ಟು ಕ್ಲೈಮ್‌ಗಳ ಲೆಕ್ಕಾಚಾರದಲ್ಲಿ ಎಷ್ಟು ಕ್ಲೈಮ್‌ಗಳನ್ನು ಸೆಟ್ಲ್ ಮಾಡುತ್ತದೆ ಎಂಬುದನ್ನು ಬಹಿರಂಗಪಡಿಸುತ್ತದೆ.

ಕ್ಲೈಮ್ ಇತ್ಯರ್ಥದ ಹೆಚ್ಚಿನ ಶೇಕಡಾವಾರುಗಳು ಕ್ಲೈಮ್‌ಗಳನ್ನು ಸಲ್ಲಿಸುವ ಸರಳ ಮತ್ತು ಸುವ್ಯವಸ್ಥಿತ ಪ್ರಕ್ರಿಯೆಯನ್ನು ಸೂಚಿಸುತ್ತವೆ. ಇದರ ಜೊತೆಗೆ, ನೀವು ಮಾರುಕಟ್ಟೆಯಲ್ಲಿ ವಿಮಾದಾರರಾಗಿ ಕಂಪನಿಯ ಖ್ಯಾತಿಯನ್ನು ಸಹ ಪರಿಶೀಲಿಸಬೇಕು. ಗೂಗಲ್ ಮತ್ತು ಫೇಸ್ಬುಕ್ ವಿಮರ್ಶೆಗಳು ಅಂತಹ ಅನಿಸಿಕೆಗಳನ್ನು ರೂಪಿಸಲು ನಿಮಗೆ ಸಹಾಯ ಮಾಡಬಹುದು.

ಭಾರತದಲ್ಲಿ ಎಷ್ಟು ಟರ್ಮ್ ಇನ್ಶೂರೆನ್ಸ್ ಪೂರೈಕೆದಾರರು ಇದ್ದಾರೆ?

ಭಾರತದಲ್ಲಿನ ಇತ್ತೀಚಿನ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿ‌ಎ‌ಐ) ಪಟ್ಟಿಯ ಪ್ರಕಾರ, ಪ್ರಸ್ತುತ ಭಾರತದಲ್ಲಿ 24 ಟರ್ಮ್ ಇನ್ಶೂರೆನ್ಸ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

ಈ ತರಹ ಬೇರೆ ಕಂಪನಿಗಳೂ ಇರಬಹುದು. ಆದಾಗ್ಯೂ, ಐಆರ್‌ಡಿ‌ಎ‌ಐ ಅನುಮೋದಿತ ಪೂರೈಕೆದಾರರಿಗೆ ಮಾತ್ರ ಅಂಟಿಕೊಳ್ಳುವುದು ಸುರಕ್ಷಿತವಾಗಿದೆ, ಏಕೆಂದರೆ ಅವರುಗಳು ಕೇಂದ್ರೀಯ ಸಂಸ್ಥೆಯು ನಿಗದಿಪಡಿಸಿದ ಎಲ್ಲಾ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ.