ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಸ್ಯಾಲರೀಡ್ ಉದ್ಯೋಗಿಗಳಿಗೆ ಮತ್ತು ಹೆಚ್.ಯು.ಎಫ್ ಗಳಿಗಾಗಿ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು

ಸ್ಯಾಲರೀಡ್ ಉದ್ಯೋಗಿಗಳಿಗೆ ಮತ್ತು ಹೆಚ್.ಯು.ಎಫ್ ಗಳಿಗಾಗಿ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳ ಬಗ್ಗೆ ಎಲ್ಲಾ

2022-23 ರ ಹಣಕಾಸು ವರ್ಷವು ಮುಕ್ತಾಯವಾಗುತ್ತಿದ್ದಂತೆ, ನಿಮ್ಮ ಟ್ಯಾಕ್ಸ್ ಲಯಬಿಲಿಟಿಗಳನ್ನು ಪರಿಶೀಲಿಸುವ ಮತ್ತು ವರ್ಷಕ್ಕೆ ನಿಮ್ಮ ಇನ್ಕಮ್ ಟ್ಯಾಕ್ಸ್ ಫೈಲ್ ಮಾಡಲು ತಯಾರಾಗುವ ಸಮಯ ಬರುತ್ತದೆ, ಹಣಕಾಸು ವರ್ಷ 2023-24 ಕ್ಕಾಗಿ ನಿಮ್ಮ ಟ್ಯಾಕ್ಸ್ ಗಳನ್ನು ಪ್ಲಾನ್ ಮಾಡುವ ಸಮಯವೂ ಇದೇ ಆಗಿರುತ್ತದೆ. ನಿಮ್ಮ ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಲು ಸಾಕಷ್ಟು ಸಮಯ ಉಳಿದಿದ್ದರೂ, ಹಣಕಾಸು ವರ್ಷ 2022-23 ಮತ್ತು ಹಣಕಾಸು ವರ್ಷ 2023-24 ಎರಡಕ್ಕೂ ಅನ್ವಯವಾಗುವ, ವಿವಿಧ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು ಮತ್ತು ದರಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

ಭಾರತದಲ್ಲಿ, ಪ್ರತಿ ವ್ಯಕ್ತಿ, ಹಿಂದೂ ಅವಿಭಜಿತ ಕುಟುಂಬ (ಹೆಚ್.ಯು.ಎಫ್), ಬಿಸಿನೆಸ್, ಕಾರ್ಪೊರೇಟ್ ಮತ್ತು ಇತರೆ ಸಂಸ್ಥೆಗಳು ಇನ್ಕಮ್ ಟ್ಯಾಕ್ಸ್ ಪಾವತಿಸಬೇಕಾಗುತ್ತದೆ ಹಾಗೂ ಇದನ್ನು ವಾರ್ಷಿಕವಾಗಿ ಕ್ಯಾಲ್ಕುಲೇಟ್ ಮಾಡಲಾಗುತ್ತದೆ. ಇನ್ಕಮ್ ಟ್ಯಾಕ್ಸ್ ನ ಆಡಳಿತ, ಸಂಗ್ರಹಣೆ ಮತ್ತು ವಸೂಲಾತಿಯನ್ನು ಇನ್ಕಮ್ ಟ್ಯಾಕ್ಸ್ ಆಕ್ಟ್, 1961 ರ ನಿಯಮಗಳ ಪ್ರಕಾರ ಸೆಟ್ ಮಾಡಲಾಗಿದೆ. 

ನಿಮ್ಮ ಇನ್ಕಮ್ ಟ್ಯಾಕ್ಸ್ ಅನ್ನು 5 ಪ್ರಮುಖ ಆದಾಯದಿಂದ ಆಗುವ ನಿಮ್ಮ ಗಳಿಕೆಯ ಆಧಾರದ ಮೇಲೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ, ಅವುಗಳೆಂದರೆ:

  • ಸ್ಯಾಲರಿ
  • ಕ್ಯಾಪಿಟಲ್ ಗೇನ್(ಬಂಡವಾಳ ಲಾಭ)ಗಳಿಂದ ಬಂದ ಆದಾಯ.
  • ಬಿಸಿನೆಸ್ ಮತ್ತು ವೃತ್ತಿಯಿಂದ ಬಂದ ಆದಾಯ
  • ಹೌಸ್ ಪ್ರಾಪರ್ಟಿಯಿಂದ ಬಂದ ಆದಾಯ
  • ಇತರೆ ಮೂಲಗಳಿಂದ ಬಂದ ಆದಾಯ

ಈಗ, ಸರ್ಕಾರವು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು, ಸೀನಿಯರ್ ಸಿಟಿಜನ್‌ಗಳು ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳಿಗೆ ಅನ್ವಯಿಸುವ ವಿಭಿನ್ನ ಟ್ಯಾಕ್ಸ್ ಸ್ಲ್ಯಾಬ್‌ಗಳನ್ನು ಮುಂದಿಡುತ್ತದೆ. ಕ್ಯಾಪಿಟಲ್ ಗೇನ್(ಬಂಡವಾಳ ಲಾಭ)ವನ್ನು ಹೊರತುಪಡಿಸಿ ಎಲ್ಲಾ ಮೂಲಗಳಿಂದ ಬರುವ ಆದಾಯಗಳಿಗಾಗಿ ಈ ಸ್ಲ್ಯಾಬ್ ದರಗಳ ಪ್ರಕಾರ ಟ್ಯಾಕ್ಸ್ ವಿಧಿಸಲಾಗುತ್ತದೆ.

2022-23 ಮತ್ತು 2023-24 ರ ಹಣಕಾಸು ವರ್ಷಗಳಿಗೆ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸ್ಯಾಲರೀಡ್ ವ್ಯಕ್ತಿಗಳು ಮತ್ತು ಹೆಚ್.ಯು.ಎಫ್ ಗಾಗಿ ವೈಯಕ್ತಿಕ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ನ ವಿವರಣೆಯನ್ನು ಈ ಕೆಳಗೆ ನೀಡಲಾಗಿದೆ. 

ಸ್ಯಾಲರೀಡ್ ವ್ಯಕ್ತಿಗಳಿಗೆ (60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಮತ್ತು ಹೆಚ್.ಯು.ಎಫ್ ಗಳಿಗಾಗಿ – ಹಣಕಾಸು ವರ್ಷ 2023-24 (ಮೌಲ್ಯಮಾಪನ ವರ್ಷ 2024-25) ಕ್ಕಾಗಿ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್

ಪ್ರಸ್ತುತ ಹಣಕಾಸು ವರ್ಷ 2023-24 ಕ್ಕೆ ನಿಮ್ಮ ಟ್ಯಾಕ್ಸ್ ಗಳನ್ನುಪ್ಲಾನ್ ಮಾಡಿ ಮತ್ತು ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಸ್ಯಾಲರೀಡ್ ಟ್ಯಾಕ್ಸ್ ಪೇಯರ್ ಗಳಿಗಾಗಿ ಇರುವ ರಿವೈಸ್ಡ್ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು ಮತ್ತು ಪ್ರಯೋಜನಗಳನ್ನು ಇಲ್ಲಿ ಪರಿಶೀಲಿಸಿ.

 

ಹಣಕಾಸು ವರ್ಷ 2023-24 ಕ್ಕಾಗಿ ಸ್ಯಾಲರೀಡ್ ವ್ಯಕ್ತಿ ಮತ್ತು ಹೆಚ್.ಯು.ಎಫ್ ಗಳಿಗಾಗಿ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು - ಹೊಸ ಟ್ಯಾಕ್ಸ್ ರೆಜಿಮ್ 

60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸ್ಯಾಲರೀಡ್ ವ್ಯಕ್ತಿಗಳು ರಿವೈಸ್ಡ್ ಹೊಸ ಟ್ಯಾಕ್ಸ್ ರೆಜಿಮ್ ಯನ್ನು ಆರಿಸಿಕೊಂಡರೆ, ಏಪ್ರಿಲ್ 1, 2023 ರಿಂದ ಅನ್ವಯವಾಗುವ ಟ್ಯಾಕ್ಸ್ ದರಗಳನ್ನು ಅನುಸರಿಸಬೇಕಾಗುತ್ತದೆ.

ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು ಟ್ಯಾಕ್ಸೇಷನ್ ದರ
₹3,00,000 ವರೆಗೆ ನಿಲ್
₹3,00,001 ಮತ್ತು ₹6,00,000 ನಡುವೆ ₹3,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 5%
₹6,00,001 ಮತ್ತು ₹9,00,000 ನಡುವೆ ₹6,00,000 ಮೀರಿದರೆ ₹15,000 + ನಿಮ್ಮ ಒಟ್ಟು ಆದಾಯದ 10%
₹9,00,001 ಮತ್ತು ₹12,00,000 ನಡುವೆ ₹₹9,00,000 ಮೀರಿದರೆ ₹45,000 + ನಿಮ್ಮ ಒಟ್ಟು ಆದಾಯದ 15%
₹12,00,001 ಮತ್ತು ₹15,00,000 ನಡುವೆ ₹12,00,000 ಮೀರಿದರೆ ₹90,000 + ನಿಮ್ಮ ಒಟ್ಟು ಆದಾಯದ 20%
₹15,00,000ಕ್ಕಿಂತ ಹೆಚ್ಚು ₹15,00,000 ಮೀರಿದರೆ ₹1,50,000 + ನಿಮ್ಮ ಒಟ್ಟು ಆದಾಯದ 30%

ಅಷ್ಟೇ ಅಲ್ಲದೆ, ನಿಮಗೆ ಹೆಚ್ಚುವರಿಯಾಗಿ 4% ಹೆಲ್ತ್ ಮತ್ತು ಎಜುಕೇಷನ್ ಸೆಸ್ ಅನ್ನು ವಿಧಿಸಲಾಗುತ್ತದೆ.

[ಮೂಲ]

ಹಣಕಾಸು ವರ್ಷ 2023-24 ಸ್ಯಾಲರೀಡ್ ವ್ಯಕ್ತಿ ಮತ್ತು ಹೆಚ್.ಯು.ಎಫ್ ಗಳಿಗಾಗಿ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು - ಹಳೆಯ ಟ್ಯಾಕ್ಸ್ ರೆಜಿಮ್ 

60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸ್ಯಾಲರೀಡ್ ವ್ಯಕ್ತಿಗಳು ಮತ್ತು ಹೆಚ್.ಯು.ಎಫ್ ಗಳಿಗಾಗಿ ಹಣಕಾಸು ವರ್ಷ 2023-24 ರ ಹಳೆಯ ಟ್ಯಾಕ್ಸ್ ರೆಜಿಮ್ ಈ ಕೆಳಗಿನಂತಿದೆ:

ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು ಟ್ಯಾಕ್ಸೇಷನ್ ದರ
₹2,50,000 ವರೆಗೆ ನಿಲ್
₹2,50,000 ಮತ್ತು ₹5,00,000 ನಡುವೆ ₹2,50,000 ಮೀರಿದರೆ ನಿಮ್ಮ ಒಟ್ಟು ಆದಾಯದ 5%
₹5,00,000 ಮತ್ತು ₹10,00,000 ನಡುವೆ ₹5,00,000 ಮೀರಿದರೆ ₹12,500 + ನಿಮ್ಮ ಒಟ್ಟು ಆದಾಯದ 20%
₹10,00,000ಕ್ಕಿಂತ ಹೆಚ್ಚು ₹10,00,000 ಮೀರಿದರೆ ₹1,12,500 + ನಿಮ್ಮ ಒಟ್ಟು ಆದಾಯದ 30%

[ಮೂಲ]

ಸ್ಯಾಲರೀಡ್ ವ್ಯಕ್ತಿಗಳಿಗೆ (60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಮತ್ತು ಹೆಚ್.ಯು.ಎಫ್ ಗಳಿಗೆ – ಹಣಕಾಸು ವರ್ಷ 2022-23 (ಮೌಲ್ಯಮಾಪನ ವರ್ಷ 2023-24)ಕ್ಕಾಗಿ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್

ಹಣಕಾಸು ವರ್ಷ 2022-23 ಕ್ಕಾಗಿ ನಿಗದಿತ ದಿನಾಂಕದ ಮೊದಲು, ಅಂದರೆ 31 ಜುಲೈ, 2023 ಕ್ಕಿಂತ ಮೊದಲು, ರಿಟರ್ನ್ಸ್ ಫೈಲ್ ಮಾಡುವುದು ಮಾಸಿಕ ಸ್ಯಾಲರಿಗಳನ್ನು ಪಡೆಯುವ ಟ್ಯಾಕ್ಸ್ ಪೇಯರ್ ಗಳ ಕರ್ತವ್ಯವಾಗಿರುತ್ತದೆ. ಹಾಗೆ ಮಾಡಲು, ಈ ಕೆಳಗಿನ ಟ್ಯಾಕ್ಸ್ ದರಗಳನ್ನು ಅನುಸರಿಸಬೇಕು.

 

ಸ್ಯಾಲರೀಡ್ ವ್ಯಕ್ತಿಗಳು ಮತ್ತು ಹೆಚ್.ಯು.ಎಫ್ ಗಳಿಗಾಗಿ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು ಮತ್ತು ಹಣಕಾಸು ವರ್ಷ 2022-23 ಗಾಗಿ - ಹೊಸ ಟ್ಯಾಕ್ಸ್ ರೆಜಿಮ್ 

ಹಣಕಾಸು ವರ್ಷ 2022-23 ಕ್ಕಾಗಿ ಹೊಸ ಟ್ಯಾಕ್ಸ್ ರೆಜಿಮ್ ನ ಟ್ಯಾಕ್ಸ್ ದರಗಳನ್ನು ಕೆಳಗೆ ನೀಡಲಾಗಿದೆ. ಇವುಗಳನ್ನು ತಿಳಿದುಕೊಳ್ಳುವುದು ನಿಮಗೆ 31 ಜುಲೈ 2023 ರವರೆಗೆ ರಿಟರ್ನ್ಸ್ ಫೈಲ್ ಮಾಡಲು ಸಹಾಯ ಮಾಡುತ್ತದೆ.

ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು ಟ್ಯಾಕ್ಸೇಷನ್ ದರ
₹2,50,000 ವರೆಗೆ ನಿಲ್
₹2,50,000 ಮತ್ತು ₹5,00,000 ನಡುವೆ ₹3,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 5%
₹5,00,000 ಮತ್ತು ₹7,00,000 ನಡುವೆ ₹5,00,000 ಮೀರಿದರೆ ₹12,500 + ನಿಮ್ಮ ಒಟ್ಟು ಆದಾಯದ 10%
₹7,50,000 ಮತ್ತು ₹10,00,000 ನಡುವೆ ₹7,50,000 ಮೀರಿದರೆ ₹37,500 + ನಿಮ್ಮ ಒಟ್ಟು ಆದಾಯದ 15%
₹10,00,000 ಮತ್ತು ₹12,50,000 ನಡುವೆ ₹10,00,000 ಮೀರಿದರೆ ₹75,000 + ನಿಮ್ಮ ಒಟ್ಟು ಆದಾಯದ 20%
₹12,50,000 ಮತ್ತು ₹15,00,000 ನಡುವೆ ₹12,50,000 ಮೀರಿದರೆ ₹1,25,000 + ನಿಮ್ಮ ಒಟ್ಟು ಆದಾಯದ 25%
₹15,00,000 ಕ್ಕಿಂತ ಹೆಚ್ಚು ₹15,00,000 ಮೀರಿದರೆ ₹1,87,500 + ನಿಮ್ಮ ಒಟ್ಟು ಆದಾಯದ 30%

ಹಣಕಾಸು ವರ್ಷ 2022-23 ಕ್ಕಾಗಿ ಸ್ಯಾಲರೀಡ್ ವ್ಯಕ್ತಿಗಳು ಮತ್ತು ಹೆಚ್.ಯು.ಎಫ್ ಗಳಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು - ಹಳೆಯ ಟ್ಯಾಕ್ಸ್ ರೆಜಿಮ್ 

ಹಣಕಾಸು ವರ್ಷ 2022-23 ಕ್ಕಾಗಿ ನೀವು ಹಳೆಯ ಟ್ಯಾಕ್ಸ್ ರೆಜಿಮ್ ಅನ್ನು ಆರಿಸಿಕೊಂಡಿದ್ದರೆ, ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ದರಗಳು ಈ ಕೆಳಗಿನಂತಿರುತ್ತವೆ:

ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳು ಟ್ಯಾಕ್ಸೇಷನ್ ದರ
₹2,50,000 ವರೆಗೆ ನಿಲ್
₹2,50,001 ಮತ್ತು ₹5,00,000 ನಡುವೆ ₹2,50,000 ಮೀರಿದರೆ ನಿಮ್ಮ ಒಟ್ಟು ಆದಾಯದ 5%
₹5,00,001 ಮತ್ತು ₹10,00,000 ನಡುವೆ ₹5,00,000 ಮೀರಿದರೆ ₹12,500 + ನಿಮ್ಮ ಒಟ್ಟು ಆದಾಯದ 20%
₹10,00,000ಕ್ಕಿಂತ ಹೆಚ್ಚು ₹10,00,000 ಮೀರಿದರೆ ₹1,12,500 + ನಿಮ್ಮ ಒಟ್ಟು ಆದಾಯದ 30%

ರೂ. 50 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಹೆಚ್ಚುವರಿ ಸರ್‌ಚಾರ್ಜ್‌

ನಿಮ್ಮ ಆದಾಯವು ₹50 ಲಕ್ಷಗಳನ್ನು ಮೀರಿದರೆ, ಹಣಕಾಸು ವರ್ಷ 2023-24 ಕ್ಕಾಗಿ ಒಟ್ಟು ಟ್ಯಾಕ್ಸ್ ಅನ್ನು ನಿರ್ಣಯಿಸಲು ನಿಮ್ಮ ಪ್ರಸ್ತುತ ಇನ್ಕಮ್ ಟ್ಯಾಕ್ಸ್ ದರಗಳ ಮೇಲೆ ನೀಡಿರುವ ದರಗಳ ಪ್ರಕಾರ ಹೆಚ್ಚುವರಿ ಸರ್‌ಚಾರ್ಜ್‌ ಅನ್ನು ವಿಧಿಸಲಾಗುತ್ತದೆ.

ಹಣಕಾಸು ವರ್ಷ 2022-23ಕ್ಕಾಗಿ, ₹5 ಕೋಟಿಗಿಂತ ಹೆಚ್ಚಿನ ಆದಾಯದ ಮೇಲಿನ ಅತಿ ಹೆಚ್ಚು ಸರ್‌ಚಾರ್ಜ್‌ 37% ಆಗಿತ್ತು ಎಂಬುದನ್ನು ಗಮನಿಸಿ. ಕೆಂದ್ರ ಬಜೆಟ್ 2023 ರ ನಂತರ, ಈ ಹೆಚ್ಚುವರಿ ಶುಲ್ಕವನ್ನು 25% ಕ್ಕೆ ಇಳಿಸಲಾಗಿದೆ ಹಾಗೂ ಏಪ್ರಿಲ್ 1, 2023 ರಿಂದ ಜಾರಿಗೆ ಬಂದದೆ, ಆದರೆ ಎಲ್ಲಾ ಇತರೆ ಸರ್‌ಚಾರ್ಜ್‌ ದರಗಳು ಅದೇ ಆಗಿರುತ್ತವೆ.

ಟ್ಯಾಕ್ಸೇಬಲ್ ಇನ್ಕಮ್

ಸರ್‌ಚಾರ್ಜ್‌

₹50 ಲಕ್ಷಕ್ಕಿಂತ ಹೆಚ್ಚು ಆದರೆ ₹1 ಕೋಟಿಗಿಂತ ಕಡಿಮೆ ಇನ್ಕಮ್ ಹೊಂದಿರುವವರಿಗೆ

10%

₹1 ಕೋಟಿಗಿಂತ ಹೆಚ್ಚು ಆದರೆ ₹2 ಕೋಟಿಗಿಂತ ಕಡಿಮೆ ಇನ್ಕಮ್ ಹೊಂದಿರುವವರಿಗೆ

15%

₹ 2 ಕೋಟಿಗಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ

25%

ಸ್ಯಾಲರೀಡ್ ವ್ಯಕ್ತಿಗಳಿಗೆ ಮತ್ತು ಹೆಚ್.ಯು.ಎಫ್ ಗಳಿಗೆ ಇನ್ಕಮ್ ಟ್ಯಾಕ್ಸ್ ರಿಯಾಯಿತಿ–ಹಣಕಾಸು ವರ್ಷ 2023-24 ಮತ್ತು ಹಣಕಾಸು ವರ್ಷ 2022-23

ಕೇಂದ್ರ ಬಜೆಟ್ 2023 ರ ಪ್ರಕಾರ, ಸ್ಯಾಲರೀಡ್ ವ್ಯಕ್ತಿಗಳು ಇನ್ಕಮ್ ಟ್ಯಾಕ್ಸ್ ಆಕ್ಟ್, 1961 ರ ಸೆಕ್ಷನ್ 87A ಅಡಿಯಲ್ಲಿ ಇನ್ಕಮ್ ಟ್ಯಾಕ್ಸ್ ರಿಯಾಯಿತಿಯನ್ನು ಪಡೆಯಬಹುದು. ಈ ರಿಯಾಯಿತಿಯು ₹ 7 ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಗಳಿಸುವ ವ್ಯಕ್ತಿಗಳಿಗೆ ಹೊಸ ಟ್ಯಾಕ್ಸ್ ರೆಜಿಮ್ ನ ಅಡಿಯಲ್ಲಿ ಸ್ವಲ್ಪ ಕಡಿಮೆ ಟ್ಯಾಕ್ಸ್ ಮೊತ್ತವನ್ನು ಪಾವತಿಸಲು ಅನುಮತಿಸುತ್ತದೆ. ಇದರರ್ಥ ನೀವು ಪಾವತಿಸಬೇಕಾದ ಒಟ್ಟು ಟ್ಯಾಕ್ಸ್ ₹25,000 ವರೆಗೆ ಇದ್ದರೆ, ಈ ಮೊತ್ತವು ಒಟ್ಟು ವಿನಾಯಿತಿಯಾಗಿರುತ್ತದೆ. ಹಣಕಾಸು ವರ್ಷ 2022-23 ಕ್ಕೆ ಈ ಲಿಮಿಟ್ ಅನ್ನು ₹ 5 ಲಕ್ಷಕ್ಕೆ ಸೆಟ್ ಮಾಡಲಾಗಿತ್ತು. 

ಹಳೆಯ ಟ್ಯಾಕ್ಸ್ ರೆಜಿಮ್ ನಲ್ಲಿ, ₹12,500 ರ ಟ್ಯಾಕ್ಸ್ ರಿಯಾಯಿತಿಯು ಎರಡೂ ಹಣಕಾಸು ವರ್ಷಗಳವರೆಗೆ, ಅಂದರೆ ₹5 ಲಕ್ಷದವರೆಗಿನ ಆದಾಯದವರೆಗೆ, ಒಂದೇ ಆಗಿರುತ್ತದೆ.

ಹಣಕಾಸು ವರ್ಷ 2023-24 ಕ್ಕೆ ಸೆಕ್ಷನ್ 87A ಅಡಿಯಲ್ಲಿ ರಿಯಾಯಿತಿಯನ್ನು ಕ್ಲೈಮ್ ಮಾಡಲು ಸ್ಯಾಲರೀಡ್ ವ್ಯಕ್ತಿಗಳಿಗೆ ಅರ್ಹತೆ:

  • ಅವರು ಭಾರತದ ನಿವಾಸಿ ಆಗಿರಬೇಕು.
  • ಸೆಕ್ಷನ್ 80 ರ ಅಡಿಯಲ್ಲಿ ಎಲ್ಲಾ ಡಿಡಕ್ಷನ್‌ಗಳ ನಂತರದ ಒಟ್ಟು ಆದಾಯವು ₹ 7 ಲಕ್ಷಗಳಿಗಿಂತ ಹೆಚ್ಚಿರಬಾರದು.

ಹೆಚ್.ಯು.ಎಫ್ 87A ಅಡಿಯಲ್ಲಿ ರಿಯಾಯಿತಿಗೆ ಅನರ್ಹರು

[ಮೂಲ]

ಹೊಸ ಟ್ಯಾಕ್ಸ್ ರೆಜಿಮ್ ನ ಅಡಿಯಲ್ಲಿ ಸ್ಯಾಲರೀಡ್ ವ್ಯಕ್ತಿಗಳು ಮತ್ತು ಹೆಚ್.ಯು.ಎಫ್ ಗಳಿಗಾಗಿ ಅನುಮತಿಸಲಾಗದ ಹೊಸ ಇನ್ಕಮ್ ಟ್ಯಾಕ್ಸ್ ವಿನಾಯಿತಿಗಳು ಮತ್ತು ಡಿಡಕ್ಷನ್‌ಗಳು- ಹಣಕಾಸು ವರ್ಷ 2023-24

ಹಣಕಾಸು ವರ್ಷ 2023-24 ಕ್ಕೆ ಹೊಸ ಟ್ಯಾಕ್ಸ್ ರೆಜಿಮ್ ಅನ್ನು ಆರಿಸಿಕೊಳ್ಳುವ ಸ್ಯಾಲರೀಡ್ ವ್ಯಕ್ತಿಗಳು, ಕೇಂದ್ರ ಬಜೆಟ್ 2023 ಘೋಷಿಸಿದಂತೆ 1 ಏಪ್ರಿಲ್ 2023 ರಿಂದ ಈ ಕೆಳಗಿನ ಡಿಡಕ್ಷನ್‌ಗಳು ಮತ್ತು ಪ್ರಯೋಜನಗಳನ್ನು ಬಿಟ್ಟುಬಿಡಬೇಕಾಗುತ್ತದೆ.

  • ಸೆಕ್ಷನ್ 80C ಅಡಿಯಲ್ಲಿ, ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್, ಲೈಫ್ ಇನ್ಶೂರೆನ್ಸ್ ಪ್ರೀಮಿಯಂ ಮತ್ತು ಸಾರ್ವಜನಿಕ ಪ್ರಾವಿಡೆಂಟ್ ಫಂಡ್ ನಲ್ಲಿ ಮಾಡಿದ ಹೂಡಿಕೆಗಳು ಡಿಡಕ್ಷನ್‌ಗೆ ಲಭ್ಯವಿಲ್ಲ.
  • ಸೆಕ್ಷನ್ 80C ಮತ್ತು 80EE/ 80EEA ಅಡಿಯಲ್ಲಿ, ₹1.5 ಲಕ್ಷದವರೆಗಿನ ಹೌಸಿಂಗ್ ಲೋನ್ ಇಂಟರೆಸ್ಟ್ ಮತ್ತು ಅಸಲು ಮೊತ್ತದ ಪಾವತಿಯ ಮೇಲಿನ ಡಿಡಕ್ಷನ್ ಅನ್ನು ಟ್ಯಾಕ್ಸ್ ವಿನಾಯಿತಿಗಾಗಿ ಕ್ಲೈಮ್ ಮಾಡಲಾಗುವುದಿಲ್ಲ.
  • ಸೆಕ್ಷನ್ 80E ಅಡಿಯಲ್ಲಿ ಸ್ಟೂಡೆಂಟ್ ಲೋನ್ ಡೆಟ್ ನ ಮೇಲೆ ಪಾವತಿಸಲಾದ ಇಂಟರೆಸ್ಟ್.

[ಮೂಲ]

ಹೊಸ ಟ್ಯಾಕ್ಸ್ ರೆಜಿಮ್ ನ ಅಡಿಯಲ್ಲಿ ಸ್ಯಾಲರೀಡ್ ವ್ಯಕ್ತಿಗಳು ಮತ್ತು ಹೆಚ್.ಯು.ಎಫ್ ಗಳಿಗೆ ಅನುಮತಿಸಲಾಗದ ಅಸ್ತಿತ್ವದಲ್ಲಿರುವ ಇನ್ಕಮ್ ಟ್ಯಾಕ್ಸ್ ವಿನಾಯಿತಿಗಳು ಮತ್ತು ಡಿಡಕ್ಷನ್‌ಗಳು - ಹಣಕಾಸು ವರ್ಷ 2022-23 ಮತ್ತು ಹಣಕಾಸು ವರ್ಷ 2023-24

ನೀವು ಹೊಸ ಟ್ಯಾಕ್ಸ್ ರೆಜಿಮ್ ಅನ್ನು ಆರಿಸಿಕೊಂಡರೆ, ಹಿಂದಿನ ಮತ್ತು ಪ್ರಸ್ತುತ ಹಣಕಾಸು ವರ್ಷಗಳಲ್ಲಿ ಈ ಕೆಳಗಿನ ವಿನಾಯಿತಿಗಳು ಮತ್ತು ಡಿಡಕ್ಷನ್‌ಗಳಿಂದ ನೀವು ಪ್ರಯೋಜನಗಳನ್ನು ಕ್ಲೈಮ್ ಮಾಡಲು ಸಾಧ್ಯವಿಲ್ಲ. 

  • ಹೌಸ್ ರೆಂಟ್ ಅಲೋವೆನ್ಸ್ (ಎಚ್.ಅರ್.ಎ), ವ್ಯಕ್ತಿಯ ಬಾಡಿಗೆ ಮತ್ತು ಸ್ಯಾಲರಿ ರಚನೆಯ ಆಧಾರದ ಮೇಲೆ. 
  • ₹ 2,500 ರ ಪ್ರೊಫೆಷನಲ್ ಟ್ಯಾಕ್ಸ್. 
  • ಲೀವ್ ಟ್ರಾವೆಲ್ ಅಲೋವೆನ್ಸ್ (ಎಲ್‌.ಟಿ.ಎ) 
  • ಮನರಂಜನಾ ಆಲೋವೆನ್ಸ್ ಮೇಲಿನ ಡಿಡಕ್ಷನ್‌ಗಳು (ಸರ್ಕಾರಿ ಉದ್ಯೋಗಿಗಳಿಗೆ ಅನ್ವಯವಾಗುತ್ತದೆ).
  • ಸೆಕ್ಷನ್ 24(b) ಅಡಿಯಲ್ಲಿ ಸ್ವಯಂ-ವಾಸಿಸುವ/ ಖಾಲಿ ಪ್ರಾಪರ್ಟಿ ಮೇಲೆ ಹೋಮ್ ಲೋನ್‌ನ ಇಂಟರೆಸ್ಟ್ ಪಾವತಿಯಲ್ಲಿ ಡಿಡಕ್ಷನ್‌. 
  • ಸೆಕ್ಷನ್ 24(b) ಅಡಿಯಲ್ಲಿ ಮನೆ ಆಸ್ತಿಯ ಖರೀದಿ/ನಿರ್ಮಾಣ/ ದುರಸ್ತಿ/ಪುನರ್ನಿರ್ಮಾಣಕ್ಕಾಗಿ ₹2 ಲಕ್ಷದವರೆಗಿನ ಇಂಟರೆಸ್ಟ್ ಪಾವತಿ ಮೇಲಿನ ಡಿಡಕ್ಷನ್.
  • ಐಟಿ ಆಕ್ಟ್ ನ ಸೆಕ್ಷನ್ 35(1)(ii), 35(2AA), 32AD, 33AB, 35(1)(iii), 33ABA, 35(1)(ii), 35CCC(a) ಮತ್ತು 35AD ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್‌. 
  • ಸೆಕ್ಷನ್ 32(ii) (a) ಅಡಿಯಲ್ಲಿ ನಿರ್ದಿಷ್ಟ ಪಡಿಸಿದಂತೆ ಹೆಚ್ಚುವರಿ ಡಿಪ್ರಿಸಿಯೇಷನ್.
  • ಕಳೆದ ವರ್ಷಗಳ ಬಳಕೆಯಾಗಿಲ್ಲದ ಡಿಪ್ರಿಸಿಯೇಷನ್ ಅನ್ನು ಅಡ್ಜಸ್ಟ್ ಮಾಡುವ ಆಯ್ಕೆ.
  • ಅಧ್ಯಾಯ VI-Aಯಲ್ಲಿರುವ 80IA, 80CCC, 80C, 80CCD, 80D, 80CCG, 80DDB, 80EE, 80E, 80EEA, 80DD, 80EEB, 80GG, 8IB, 80IAC, ಮತ್ತು 80IAB ಅಡಿಯಲ್ಲಿ ನಿರ್ದಿಷ್ಟಪಡಿಸಿದಂತೆ ಡಿಡಕ್ಷನ್‌ಗಳು. 
  • ಮೈನರ್ ಮಕ್ಕಳು, ಹೆಲ್ಪರ್ ಅಲೋವೆನ್ಸ್‌ಗಳು ಮತ್ತು ಮಕ್ಕಳ ಎಜುಕೇಷನ್‌ಗೆ ಅಲೋವೆನ್ಸ್‌ಗಳು. 

[ಮೂಲ]

ಹೊಸ ಟ್ಯಾಕ್ಸ್ ರೆಜಿಮ್ ನಡಿಯಲ್ಲಿ ಸ್ಯಾಲರೀಡ್ ವ್ಯಕ್ತಿಗಳಿಗೆ ಅನುಮತಿಸಲಾದ ಹೊಸ ಇನ್ಕಮ್ ಟ್ಯಾಕ್ಸ್ ವಿನಾಯಿತಿಗಳು ಮತ್ತು ಡಿಡಕ್ಷನ್‌ಗಳು - ಹಣಕಾಸು ವರ್ಷ 2023-24

ಸ್ಯಾಲರೀಡ್ ಟ್ಯಾಕ್ಸ್ ಪೇಯರ್ ಗಳು ಹಣಕಾಸು ವರ್ಷ 2023-24 ಕ್ಕಾಗಿ ಹೊಸ ಟ್ಯಾಕ್ಸ್ ರೆಜಿಮ್ ಅನ್ನು ಆರಿಸಿಕೊಂಡರೆ, ಅವರು ಕೇಂದ್ರ ಬಜೆಟ್ 2023 ರಲ್ಲಿ ಘೋಷಿಸಲಾದ ಹೆಚ್ಚುವರಿ ಇನ್ಕಮ್ ಟ್ಯಾಕ್ಸ್ ವಿನಾಯಿತಿಗಳಿಂದ ಪ್ರಯೋಜನ ಪಡೆಯಬಹುದು.

  • ಅವರು ತಮ್ಮ ಸ್ಯಾಲರಿ ಗಳಿಕೆಯ ಮೇಲೆ ಮಾತ್ರ ಸ್ಯಾಲರಿಯಿಂದ ಆದಾಯ' ಶೀರ್ಷಿಕೆಯ ಅಡಿಯಲ್ಲಿ ₹ 50,000 ಪ್ರಮಾಣಿತ ಡಿಡಕ್ಷನ್ ಅನ್ನು ಕ್ಲೈಮ್ ಮಾಡಬಹುದು.
  • ಇನ್ಕಮ್ ಟ್ಯಾಕ್ಸ್ ಆಕ್ಟ್, 1961 ರ ಸೆಕ್ಷನ್ 80CCD (2) ಅಡಿಯಲ್ಲಿ, ಉದ್ಯೋಗಿಗಳ ಎನ್.ಪಿ.ಎಸ್ ಖಾತೆಗೆ ಉದ್ಯೋಗದಾತರಿಂದ ದೊರೆತಿರುವ ಯಾವುದೇ ಎನ್.ಪಿ.ಎಸ್ (ನ್ಯಾಷನಲ್ ಪೆನ್ಷನ್ ಸ್ಕೀಮ್) ಕೊಡುಗೆಯ ಪ್ರಯೋಜನವು ಲಭ್ಯವಿದೆ. ಆದಾಗ್ಯೂ, ಉದ್ಯೋಗಿಯ ಸ್ವಂತ ಕೊಡುಗೆಯ ಮೇಲೆ ಯಾವುದೇ ಟ್ಯಾಕ್ಸ್ ಡಿಡಕ್ಷನ್ ಅನ್ನು ಅನುಮತಿಸಲಾಗುವುದಿಲ್ಲ. 
  • ಖಾಸಗಿ ವಲಯದ ಉದ್ಯೋಗಿಗಳಿಗೆ, ಗರಿಷ್ಠ ಡಿಡಕ್ಷನ್ ಮೊತ್ತವು ಅವರ ಸ್ಯಾಲರಿಯ 10% ಆಗಿದ್ದರೆ, ಸರ್ಕಾರಿ ಉದ್ಯೋಗಿಗೆ ಇದು ಅವರ ಸ್ಯಾಲರಿಯ 14% ಆಗಿರುತ್ತದೆ.
  • ಸೆಕ್ಷನ್ 80JJAA ಅಡಿಯಲ್ಲಿ ಹೊಸ ಉದ್ಯೋಗಿ ವೆಚ್ಚದ ಮೊತ್ತವು 30% ವರೆಗೆ ಡಿಡಕ್ಟಿಬಲ್ ಆಗಿರುತ್ತದೆ.

[ಮೂಲ]

ಹೊಸ ಟ್ಯಾಕ್ಸ್ ರೆಜಿಮ್ ನ ಅಡಿಯಲ್ಲಿ ಸ್ಯಾಲರೀಡ್ ವ್ಯಕ್ತಿಗಳಿಗೆ ಅನುಮತಿಸಲಾದ ಅಸ್ತಿತ್ವದಲ್ಲಿರುವ ಇನ್ಕಮ್ ಟ್ಯಾಕ್ಸ್ ವಿನಾಯಿತಿಗಳು ಮತ್ತು ಡಿಡಕ್ಷನ್‌ಗಳು- ಹಣಕಾಸು ವರ್ಷ 2022-23 ಮತ್ತು ಹಣಕಾಸು ವರ್ಷ 2023-24

2022-23 ಮತ್ತು 2023-24 ಎರಡೂ ಹಣಕಾಸು ವರ್ಷಗಳಿಗೆ ಅನ್ವಯವಾಗುವ ಇನ್ಕಮ್ ಟ್ಯಾಕ್ಸ್ ಡಿಡಕ್ಷನ್‌ಗಳು ಈ ಕೆಳಗಿನಂತಿವೆ. ಹಣಕಾಸು ವರ್ಷ 2022-23 ಕ್ಕಾಗಿ ರಿಟರ್ನ್‌ಗಳನ್ನು ಸಲ್ಲಿಸುವಾಗ ಮತ್ತು ಹಣಕಾಸು ವರ್ಷ 2023-24 ಕ್ಕಾಗಿ ಟ್ಯಾಕ್ಸ್ ರಿಟರ್ನ್ಸ್‌ಗಾಗಿ ಪ್ಲಾನ್ ಮಾಡುತ್ತಿರುವಾಗ ಹೊಸ ಟ್ಯಾಕ್ಸ್ ರೆಜಿಮ್ ಅನ್ನು ಆಯ್ಕೆಮಾಡುವ ಸ್ಯಾಲರೀಡ್ ವ್ಯಕ್ತಿಗಳು ಈ ಪ್ರಯೋಜನಗಳನ್ನು ಪಡೆಯಬಹುದು.

  • ಉದ್ಯೋಗದಾತರು ತಮ್ಮ ಉದ್ಯೋಗಿಗಳ ಎನ್.ಪಿ.ಎಸ್ ಮತ್ತು ಇ.ಪಿ.ಎಫ್ ಮತ್ತು ನಿವೃತ್ತಿ ಖಾತೆಗಳಿಗೆ ಒಂದು ಹಣಕಾಸು ವರ್ಷದಲ್ಲಿ ಮಾಡಿದ ಕೊಡುಗೆಗಳು, ₹ 7.5 ಲಕ್ಷಗಳವರೆಗಿನ ಟ್ಯಾಕ್ಸ್ ವಿನಾಯಿತಿಗೆ ಅರ್ಹವಾಗಿರುತ್ತದೆ.
  • ತಮ್ಮ ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ ಖಾತೆಯಿಂದ ಅವರು ಗಳಿಸಿದ ಇಂಟರೆಸ್ಟ್ ಮೇಲಿನ ಟ್ಯಾಕ್ಸ್ ವಿನಾಯಿತಿ, 9.5% ವರೆಗೆ.
  • ಎನ್.ಪಿ.ಎಸ್ ಖಾತೆಯಿಂದ ಪಡೆದ ಲಂಪ್‌ಸಮ್ ಮೆಚ್ಯೂರಿಟಿ ಮೊತ್ತ ಮತ್ತು ಟಿಯರ್ I ಎನ್.ಪಿ.ಎಸ್ ಖಾತೆಯಿಂದ ಭಾಗಶಃ ಫಂಡ್ ವಿದ್‌ಡ್ರಾವಲ್, ಇವೆರಡೂ ಟ್ಯಾಕ್ಸೇಶನ್ ವಿನಾಯಿತಿಯನ್ನು ಪಡೆದಿವೆ.
  • ಪಿ.ಪಿ.ಎಫ್ ಖಾತೆಯಿಂದ ಪಡೆದ ಇಂಟರೆಸ್ಟ್ ಅಥವಾ ಮೆಚ್ಯೂರಿಟಿ ಮೊತ್ತದ ಮೇಲಿನ ಟ್ಯಾಕ್ಸ್ ವಿನಾಯಿತಿ.
  • ಅಂಗವಿಕಲ ಉದ್ಯೋಗಿಗಳಿಗೆ ಟ್ರಾವೆಲ್ ಅಲೋವೆನ್ಸ್, ಒಬ್ಬ ಉದ್ಯೋಗಿಯ ಪ್ರಯಾಣ ವೆಚ್ಚ ಅಥವಾ ಟ್ರಾನ್ಸಫರ್ ಅನ್ನು ಕವರ್ ಮಾಡುವ ಅಲೋವೆನ್ಸ್‌ಗಳು, ಕನ್ವೆಯನ್ಸ್ ಅಲೋವೆನ್ಸ್, ದೈನಂದಿನ ಅಲೋವೆನ್ಸ್‌ಗಳು ಟ್ಯಾಕ್ಸ್ ವಿನಾಯಿತಿಗೆ ಅರ್ಹವಾಗಿವೆ, ಅಧಿಕೃತ ಡ್ಯೂಟಿಗಳನ್ನು ನಿರ್ವಹಿಸಲು ಉದ್ಯೋಗಿಗಳಿಗೆ ಅಲೋವೆನ್ಸ್ ಗಳು.
  • ಸೆಕ್ಷನ್ 10(15)(i) ಅಡಿಯಲ್ಲಿ ಕ್ರಮವಾಗಿ ಅವರ ಪೋಸ್ಟ್ ಆಫೀಸ್ ಉಳಿತಾಯಗಳ ವೈಯಕ್ತಿಕ ಮತ್ತು ಜಂಟಿ ಖಾತೆಗಳ ಮೇಲಿನ ಇಂಟರೆಸ್ಟ್ ಮೇಲೆ ₹ 3,500 ಮತ್ತು ₹ 7,000 ವರೆಗಿನ ವಿನಾಯಿತಿಗಳು. 
  • ಸೆಕ್ಷನ್ 10(10D) ಅಡಿಯಲ್ಲಿ ಲೈಫ್ ಇನ್ಶೂರೆನ್ಸ್ ಕಂಪನಿ ಖಾತೆಯಿಂದ ಪಡೆದ ಮೆಚ್ಯೂರಿಟಿ ಮೊತ್ತಕ್ಕೆ ವಿನಾಯಿತಿ ನೀಡಲಾಗಿದೆ. 
  • ಸುಕನ್ಯಾ ಸಮೃದ್ಧಿ ಖಾತೆಯಿಂದ ಪಡೆದ ಇಂಟರೆಸ್ಟ್ ಮತ್ತು ಮೆಚ್ಯೂರಿಟಿ ಮೊತ್ತದ ಮೇಲಿನ ಟ್ಯಾಕ್ಸ್ ವಿನಾಯಿತಿ.
  • ಉದ್ಯೋಗದಾತರಿಂದ ಪಡೆದ ₹ 5,000 ವರೆಗಿನ ಉಡುಗೊರೆಗಳಿಗಾಗಿ ಟ್ಯಾಕ್ಸ್ ನಿಂದ ವಿನಾಯಿತಿ ಪಡೆಯಬಹುದು.
  • ಸರ್ಕಾರೇತರ ಉದ್ಯೋಗಿಗಳು ತಮ್ಮ ಉದ್ಯೋಗದಾತರಿಂದ ಪಡೆಯುವ ಗ್ರಾಚ್ಯುಟಿ ಮೊತ್ತದ ಮೇಲೆ ₹20 ಲಕ್ಷಗಳವರೆಗಿನ ವಿನಾಯಿತಿ. ಸರ್ಕಾರಿ ನೌಕರರಿಗೆ, ಸಂಪೂರ್ಣ ಗ್ರಾಚ್ಯುಟಿಗೆಯು ಟ್ಯಾಕ್ಸ್ ನಿಂದ ವಿನಾಯಿತಿ ಪಡೆದಿರುತ್ತದೆ.
  • ಸರ್ಕಾರೇತರ ಉದ್ಯೋಗಿಗಳು ಗ್ರಾಚ್ಯುಟಿಯನ್ನು ಪಡೆದರೆ ಅವರ ಕಮ್ಯೂಟೆಡ್ ಪೆನ್ಷನ್ ನ 1/3 ರಷ್ಟು ವಿನಾಯಿತಿಯನ್ನು ಆನಂದಿಸಬಹುದು. ಸರ್ಕಾರೇತರ ಉದ್ಯೋಗಿಗಳು ಗ್ರಾಚ್ಯುಟಿಯನ್ನು ಪಡೆದರೆ ಅವರ ಕಮ್ಯೂಟೆಡ್ ಪೆನ್ಷನ್ ನ 1/3 ರಷ್ಟು ವಿನಾಯಿತಿಯನ್ನು ಕ್ಲೈಮ್ ಮಾಡಬಹುದು.
  • ಬಾಡಿಗೆ ಪ್ರಾಪರ್ಟಿಗಾಗಿ ಎರವಲು ಪಡೆದ ಹೋಮ್ ಲೋನ್ ನ ಇಂಟರೆಸ್ಟ್, ಟ್ಯಾಕ್ಸ್ ಡಿಡಕ್ಷನ್‌ಗೆ ಅರ್ಹವಾಗಿರುತ್ತದೆ.
  • ರಿಟೈರ್‌ಮೆಂಟ್ ಸಮಯದಲ್ಲಿ ರಜೆ ನಗದೀಕರಣ ಅಥವಾ ಎನ್ಕ್ಯಾಶ್ಮೆಂಟ್.
  • ವಾಲಂಟರಿ ರಿಟೈರ್‌ಮೆಂಟ್ ಗಾಗಿ ಉದ್ಯೋಗದಾತರಿಂದ ಪಡೆದ ವಿತ್ತೀಯ ಪ್ರಯೋಜನಗಳು, ₹ 5 ಲಕ್ಷದವರೆಗೆ. 
  • ಎಜುಕೇಷನ್ ವಿದ್ಯಾರ್ಥಿವೇತನಗಳು, ಹಿಂಬಡ್ತಿ ಕಾಂಪನ್ಸೇಶನ್ ಮತ್ತು ರಿಟೈರ್‌ಮೆಂಟ್ ಗಾಗಿ ವಿತ್ತೀಯ ಪ್ರಯೋಜನಗಳು.

[ಮೂಲ]

ಹಳೆಯ ಟ್ಯಾಕ್ಸ್ ರೆಜಿಮ್ ನ ಅಡಿಯಲ್ಲಿ ಸ್ಯಾಲರೀಡ್ ವ್ಯಕ್ತಿಗಳಿಗೆ ಅನುಮತಿಸಲಾದ ಇನ್ಕಮ್ ಟ್ಯಾಕ್ಸ್ ಡಿಡಕ್ಷನ್‌ಗಳು ಮತ್ತು ವಿನಾಯಿತಿಗಳು- ಹಣಕಾಸು ವರ್ಷ 2022-23 ಮತ್ತು 2023-24

ಹಣಕಾಸು ವರ್ಷಗಳಲ್ಲಿ 2022-23 ಮತ್ತು 2023-24 ಕ್ಕಾಗಿ, ಹಳೆಯ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ, ಸ್ಯಾಲರೀಡ್ ವ್ಯಕ್ತಿಗಳ ಟ್ಯಾಕ್ಸ್ ಲಯಬಿಲಿಟಿಯನ್ನು ಕಡಿಮೆ ಮಾಡಲು ಸಹಾಯ ಮಾಡುವ ಆಲೋವೆನ್ಸ್ ಮತ್ತು ಡಿಡಕ್ಷನ್‌ಗಳ ರೂಪದಲ್ಲಿರುವ ಕೆಲವು ಇನ್ಕಮ್ ಟ್ಯಾಕ್ಸ್ ಪ್ರಯೋಜನಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಅವುಗಳೆಂದರೆ:

  • ₹50,000 ವರೆಗಿನ ಸ್ಟಾಂಡರ್ಡ್ ಡಿಡಕ್ಷನ್.
  • ನಾಲ್ಕು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಟ್ರಾವೆಲ್ ಆಲೋವೆನ್ಸ್ (ಎಲ್.ಟಿ.ಎ) ಮತ್ತು ಹೌಸ್ ರೆಂಟ್ ಆಲೋವೆನ್ಸ್ (ಎಚ್.ಆರ್.ಎ).
  • ನಿವಾಸದಲ್ಲಿ ಬಳಸಿದ ಟೆಲಿಫೋನ್ ಮತ್ತು ಮೊಬೈಲ್‌ನ ವೆಚ್ಚಗಳಿಗೆ ರಿಇಂಬರ್ಸ್‌ಮೆಂಟ್. 
  • ಉದ್ಯೋಗಿಗಳು ಪುಸ್ತಕಗಳು, ದಿನಪತ್ರಿಕೆಗಳು, ನಿಯತಕಾಲಿಕಗಳು, ಜರ್ನಲ್ ಗಳು ಇತ್ಯಾದಿಗಳ ಮೇಲೆ ಮಾಡಿದ ವೆಚ್ಚಗಳ ಮೇಲೆ ಟ್ಯಾಕ್ಸ್-ಮುಕ್ತ ರಿಇಂಬರ್ಸ್‌ಮೆಂಟ್ ಅನ್ನು ಕ್ಲೈಮ್ ಮಾಡಬಹುದು.
  • ಫುಡ್ ಕೂಪನ್‌ಗಳ ಮೇಲಿನ ವೆಚ್ಚಗಳು.
  • ಬಿಸಿನೆಸ್ ಉದ್ದೇಶಗಳಿಗಾಗಿ ಒಂದು ನಗರದಿಂದ ಇನ್ನೊಂದು ನಗರಕ್ಕೆ ಸ್ಥಳಾಂತರದ ಅಲೋವೆನ್ಸ್ ಪ್ರಯೋಜನಗಳು.
  • ಆರೋಗ್ಯ ಕ್ಲಬ್ ಸೌಲಭ್ಯಗಳು, ಕ್ಯಾಬ್ ಸೌಲಭ್ಯಗಳು, ಉಡುಗೊರೆಗಳು ಅಥವಾ ವೋಚರ್‌ಗಳಂತಹ ಉದ್ಯೋಗದಾತರಿಂದ ಒದಗಿಸಲಾದ ವಿಭಿನ್ನ ಸೌಲಭ್ಯಗಳ ಮೇಲಿನ ಪ್ರಯೋಜನಗಳು. 

ಈ ಇನ್ಕಮ್ ಟ್ಯಾಕ್ಸ್ ವಿನಾಯಿತಿಗಳ ಅನ್ವಯವನ್ನು ಅವುಗಳ ಲಿಮಿಟ್ ಗಳೊಂದಿಗೆ ವಿವರಿಸುವ ಕೋಷ್ಟಕವು ಈ ಕೆಳಗಿನಂತಿದೆ:

ಸೆಕ್ಷನ್ ಪ್ರಯೋಜನ
ಲಿಮಿಟ್

ಸೆಕ್ಷನ್ 80C

ಇದರ ಆದಾಯದ ಮೇಲೆ -
ಹೋಮ್ ಲೋನ್ ಗಳ ಮೇಲಿನ ಅಸಲು ಪಾವತಿ
ಟ್ಯಾಕ್ಸ್ ಉಳಿಸುವ ಸ್ಥಿರ ಡೆಪಾಸಿಟ್ ಗಳು
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್
ಇಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್
ನ್ಯಾಷನಲ್ ಪೆನ್ಷನ್ ಸ್ಕೀಮ್
ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್
ಸಾರ್ವಜನಿಕ ಪ್ರಾವಿಡೆಂಟ್ ಫಂಡ್
ಸೀನಿಯರ್ ಸಿಟಿಜನ್‌ಗಳ ಉಳಿತಾಯ ಸ್ಕೀಮ್
ಸುಕನ್ಯಾ ಸಮೃದ್ಧಿ ಯೋಜನೆ, ಇತ್ಯಾದಿ.

₹1.5 ಲಕ್ಷಗಳವರೆಗಿನ ಗರಿಷ್ಠ ವಿನಾಯಿತಿ ಲಿಮಿಟ್.

ಸೆಕ್ಷನ್ 80CCC

ಎಲ್ಐಸಿ ವರ್ಷಾಶನ ಪ್ಲಾನ್ ಗಳಲ್ಲಿ ಡೆಪಾಸಿಟ್ ಮಾಡಿದ ಮೊತ್ತದ ಮೇಲೆ.

₹1.5 ಲಕ್ಷಗಳವರೆಗಿನ ಗರಿಷ್ಠ ವಿನಾಯಿತಿ ಲಿಮಿಟ್.

ಸೆಕ್ಷನ್ 80TTA

ಬ್ಯಾಂಕ್ ಉಳಿತಾಯ ಖಾತೆಯಿಂದ ಗಳಿಸಿದ ಇಂಟರೆಸ್ಟ್ ಮೇಲೆ.

₹10,000 ವರೆಗಿನ ಲಿಮಿಟ್.

ಸೆಕ್ಷನ್ 80ಜಿಜಿ

ವ್ಯಕ್ತಿಯು ಹೌಸ್ ರೆಂಟ್ ಅಲೋವೆನ್ಸ್ ಗಳಿಸದಿದ್ದಾಗ ಬಾಡಿಗೆ ಪಾವತಿ.

ಇವುಗಳ ನಡುವಿನ ಕಡಿಮೆ ಮೊತ್ತ-
ಪಾವತಿಸಿದ ಬಾಡಿಗೆ - (ಒಟ್ಟು ಆದಾಯದ 10%)
ಒಟ್ಟು ಆದಾಯದ 25%
ಪ್ರತೀ ತಿಂಗಳು ₹5000

ಸೆಕ್ಷನ್ 24a

ಸ್ವಯಂ-ವಾಸಿಸುವ ಪ್ರಾಪರ್ಟಿ ಮತ್ತು ಲೆಟ್ ಔಟ್ ಪ್ರಾಪರ್ಟಿಗಾಗಿ ಹೋಮ್ ಲೋನ್ ಗಳ ಮೇಲಿನ ಬಡ್ಡಿ.

ಸ್ವಯಂ-ವಾಸಿಸುವ ಪ್ರಾಪರ್ಟಿಗೆ ₹2 ಲಕ್ಷದವರೆಗೆ.
ಲೆಟ್-ಔಟ್ ಪ್ರಾಪರ್ಟಿಗೆ ಲಿಮಿಟ್ ಇಲ್ಲ.

ಸೆಕ್ಷನ್ 80E

ಎಜುಕೇಶನ್ ಲೋನ್ ಮೇಲೆ ಪಾವತಿಸಲಾದ ಒಟ್ಟು ಇಂಟರೆಸ್ಟ್.

ಗರಿಷ್ಠ ಮೊತ್ತದ ಮೇಲೆ ಯಾವುದೇ ಲಿಮಿಟ್ ಇಲ್ಲ.

ಸೆಕ್ಷನ್ 80EEA

ಮೊದಲಿಗರಿಗೆ ಹೋಮ್ ಲೋನ್ ಇಂಟರೆಸ್ಟ್

₹50,000 ದವರೆಗೆ

ಸೆಕ್ಷನ್ 80CCG

ಮೊದಲ ಬಾರಿಯ ಹೂಡಿಕೆದಾರರಿಗೆ ರಾಜೀವ್ ಗಾಂಧಿ ಇಕ್ವಿಟಿ ಸ್ಕೀಮ್ ಅಡಿಯಲ್ಲಿ ಇಕ್ವಿಟಿ ಉತ್ಪನ್ನಗಳಲ್ಲಿ ಹೂಡಿಕೆ.

ಇವುಗಳ ನಡುವಿನ ಕಡಿಮೆ ಮೊತ್ತ- ₹25,000 ಅಥವಾ
ಇಕ್ವಿಟಿ ಸ್ಕೀಮ್ ಗಳಲ್ಲಿನ ಹೂಡಿಕೆ ಮೊತ್ತದ 50%

ಸೆಕ್ಷನ್ 80D

ಸ್ವಯಂ ಮತ್ತು ಕುಟುಂಬಕ್ಕಾಗಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಪ್ರೀಮಿಯಂ.

₹25,000 (ಸ್ವಯಂ, ಸಂಗಾತಿ ಮತ್ತು ಅವಲಂಬಿತ ಮಕ್ಕಳಿಗೆ) + 60 ವರ್ಷದೊಳಗಿನ ಪೋಷಕರಿಗೆ ₹ 25,000.
₹ 25,000 (ಸ್ವಯಂ, ಸಂಗಾತಿ ಮತ್ತು ಅವಲಂಬಿತ ಮಕ್ಕಳಿಗೆ) + ₹ 50,000 ವರೆಗೆ (60 ವರ್ಷಕ್ಕಿಂತ ಮೇಲ್ಪಟ್ಟ ಪೋಷಕರಿಗೆ).
60 ವರ್ಷಕ್ಕಿಂತ ಮೇಲ್ಪಟ್ಟ ಒಬ್ಬ ಸದಸ್ಯರಿರುವ ಹೆಚ್.ಯು.ಎಫ್ ಸದಸ್ಯರಿಗೆ ₹50,000 ವರೆಗೆ + ₹50,000 ವರೆಗೆ (60 ವರ್ಷಕ್ಕಿಂತ ಮೇಲ್ಪಟ್ಟ ಪೋಷಕರಿಗೆ).

ಸೆಕ್ಷನ್ 80DDB

ನಿರ್ದಿಷ್ಟಪಡಿಸಲಾದ ರೋಗಗಳಿಂದ ಬಳಲುತ್ತಿರುವ ಅವಲಂಬಿತ ವ್ಯಕ್ತಿಗಳ ವೈದ್ಯಕೀಯ ಚಿಕಿತ್ಸೆ.

60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ, ₹ 40,000 ವರೆಗಿನ ಡಿಡಕ್ಷನ್ ಲಭ್ಯವಿದೆ.

ಸೆಕ್ಷನ್ 80GGC

ರಾಜಕೀಯ ಪಕ್ಷಗಳಿಗೆ ಕೊಡುಗೆ.

ಕ್ಯಾಶ್ ಹೊರತುಪಡಿಸಿ ಪಾವತಿ ವಿಧಾನಗಳ ಮೇಲೆ ಯಾವುದೇ ಲಿಮಿಟ್ ಗಳಿಲ್ಲ.

ಸೆಕ್ಷನ್ 80G

ದತ್ತಿ ಸಂಸ್ಥೆಗಳಿಗೆ ಕೊಡುಗೆಗಳು ಮತ್ತು ಕೆಲವು ರಿಲೀಫ್ ಫಂಡ್ ಗಳು.

ಕೆಲವು ದತ್ತಿ ದೇಣಿಗೆಗಳು 50% ಡಿಡಕ್ಷನ್ ಗಳಿಗೆ ಅರ್ಹವಾಗಿವೆ ಮತ್ತು ಕೆಲವು 100% ಡಿಡಕ್ಷನ್ ಗಳಿಗೆ ಅರ್ಹವಾಗಿವೆ.

[ಮೂಲ 1]

[ಮೂಲ 2]

[ಮೂಲ 3]
[ಮೂಲ 4]

[ಮೂಲ 5]

[ಮೂಲ 6]

ಭಾರತದಲ್ಲಿ ಸ್ಯಾಲರೀಡ್ ಉದ್ಯೋಗಿಗಳಿಗೆ ಇವು ಕೆಲವು ಪ್ರಮುಖ ಇನ್ಕಮ್ ಟ್ಯಾಕ್ಸ್ ವಿನಾಯಿತಿಗಳಾಗಿವೆ.

ಸ್ಯಾಲರೀಡ್ ಜನರಿಗಾಗಿ ಇರುವ ಇಂತಹ ಆಲೋವೆನ್ಸ್ ಗಳು ಮತ್ತು ಇನ್ಕಮ್ ಟ್ಯಾಕ್ಸ್ ವಿನಾಯಿತಿಗಳೊಂದಿಗೆ, ನಿಮ್ಮ ಟ್ಯಾಕ್ಸ್ ಲಯಬಿಲಿಟಿಗಳನ್ನು ನೀವು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡಬಹುದು. ಆದ್ದರಿಂದ, ನೀವು ಹಿಂದಿನ ಹಣಕಾಸು ವರ್ಷಕ್ಕೆ ನಿಮ್ಮ ಇನ್ಕಮ್ ಟ್ಯಾಕ್ಸ್ ರಿಟರ್ನ್ಗಳನ್ನು ಫೈಲ್ ಮಾಡಲು ಪ್ರಾರಂಭಿಸುವ ಮೊದಲು, ನಿಮ್ಮ ಟ್ಯಾಕ್ಸ್ ಪಾವತಿಗಳಿಂದ ನೀವು ಪಡೆದುಕೊಳ್ಳಬಹುದಾದ ಎಲ್ಲಾ ಅನ್ವಯವಾಗುವ ಸ್ಲ್ಯಾಬ್‌ಗಳು, ವಿನಾಯಿತಿಗಳು ಮತ್ತು ಪ್ರಯೋಜನಗಳ ಕುರಿತು ನೀವು ಸಮಗ್ರವಾದ ಕಲ್ಪನೆಯನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. 

ಇವುಗಳ ಬಗ್ಗೆ ಇನ್ನಷ್ಟು ತಿಳಿಯಿರಿ:

ಸ್ಯಾಲರೀಡ್ ವ್ಯಕ್ತಿಗಳಿಗೆ ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್‌ಗಳ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳ ಮೇಲೆ ಇರುವ ಇನ್ಕಮ್ ಟ್ಯಾಕ್ಸ್ ವಿನಾಯಿತಿ ಎಷ್ಟು?

ಇನ್ಕಮ್ ಟ್ಯಾಕ್ಸ್ ಆಕ್ಟ್ 1961 ರ ಸೆಕ್ಷನ್ 80D ಪ್ರಕಾರ, ವ್ಯಕ್ತಿಗಳು ತಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಪಾವತಿಗಳಲ್ಲಿ ₹25,000 ವರೆಗಿನ ಡಿಡಕ್ಷನ್ ಅನ್ನು ಕ್ಲೈಮ್ ಮಾಡಬಹುದು. ನಿಮಗೆ, ನಿಮ್ಮ ಸಂಗಾತಿಗೆ ಅಥವಾ ಮಕ್ಕಳಿಗೆ ಪ್ರೀಮಿಯಂ ಪಾವತಿಗಳಲ್ಲಿ ಈ ಡಿಡಕ್ಷನ್ ಪಡೆಯಬಹುದು. ಇದಲ್ಲದೆ, ಈ ಪ್ರೀಮಿಯಂ 60 ವರ್ಷಕ್ಕಿಂತ ಮೇಲ್ಪಟ್ಟ ನಿಮ್ಮ ಪೋಷಕರಿಗಾಗಿದ್ದರೆ, ನೀವು ₹50,000 ವರೆಗಿನ ಡಿಡಕ್ಷನ್ ಅನ್ನು ಪಡೆಯಬಹುದು.

ಇದಲ್ಲದೆ, ನೀವು ವೈದ್ಯಕೀಯ ತಪಾಸಣೆಗಳಿಗಾಗಿ ಮಾಡಿದ ವೆಚ್ಚಗಳ ಮೇಲೆ ₹5000 ವರೆಗಿನ ಡಿಡಕ್ಷನ್ ಅನ್ನು ಕ್ಲೈಮ್ ಮಾಡಬಹುದು, ಇದನ್ನು ಮೇಲೆ ನಿಡಲಾದ ಲಿಮಿಟ್ ನಲ್ಲಿ ಸೇರಿಸಲಾಗಿದೆ.

[ಮೂಲ]

ಇನ್ಕಮ್ ಟ್ಯಾಕ್ಸ್ ಕ್ಯಾಲ್ಕುಲೇಶನ್ ಗಾಗಿ ಗೊತ್ತುಪಡಿಸಲಾದ ಸಮಯಾವಧಿ ಯಾವುದು?

ಇನ್ಕಮ್ ಟ್ಯಾಕ್ಸ್ ಅನ್ನು ವಾರ್ಷಿಕವಾಗಿ ಕ್ಯಾಲ್ಕುಲೇಟ್ ಮಾಡಲಾಗುತ್ತದೆ. ಇನ್ಕಮ್ ಟ್ಯಾಕ್ಸ್ ಆಕ್ಟ್ ಅಡಿಯಲ್ಲಿ, ಏಪ್ರಿಲ್ 1 ರಿಂದ ಮುಂದಿನ ಕ್ಯಾಲೆಂಡರ್ ವರ್ಷದ ಮಾರ್ಚ್ 31 ರ ನಡುವಿನ ಅವಧಿಯನ್ನು ಇನ್ಕಮ್ ಟ್ಯಾಕ್ಸ್ ಅನ್ನು ಕ್ಯಾಲ್ಕುಲೇಟ್ ಮಾಡುವ ಉದ್ದೇಶಕ್ಕಾಗಿ ಒಂದು ವರ್ಷವೆಂದು ಪರಿಗಣಿಸಲಾಗುತ್ತದೆ.

7 ಲಕ್ಷದವರೆಗಿನ ನನ್ನ ಆದಾಯವು ಇನ್ಕಮ್ ಟ್ಯಾಕ್ಸ್ ಮುಕ್ತವಾಗಿರುತ್ತದೆಯೇ?

ಹಣಕಾಸು ಮಸೂದೆ 2023 ₹7 ಲಕ್ಷದವರೆಗಿನ ವಾರ್ಷಿಕ ಆದಾಯ ಇರುವ ವ್ಯಕ್ತಿಗಳಿಗೆ ಯಾವುದೇ ಟ್ಯಾಕ್ಸ್ ವಿಧಿಸುವುದಿಲ್ಲ ಎಂದು ಘೋಷಿಸಿದೆ. ಆದ್ದರಿಂದ, ಹೌದು, ಕೇಂದ್ರ ಬಜೆಟ್ 2023-24 ರ ಅಡಿಯಲ್ಲಿ ನೀವು ಹೊಸ ಟ್ಯಾಕ್ಸ್ ರೆಜಿಮ್ ಯನ್ನು ಆರಿಸಿಕೊಂಡರೆ ಮಾತ್ರ ನಿಮ್ಮ ಆದಾಯವು ರೂ 7 ಲಕ್ಷದವರೆಗೆ ಇನ್ಕಮ್ ಟ್ಯಾಕ್ಸ್ ಮುಕ್ತವಾಗಿರುತ್ತದೆ.