ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಐಟಿಆರ್-2 ಫಾರ್ಮ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಪೂರ್ಣ ಮಾಹಿತಿ

ನೀವು ಇನ್‌ಕಮ್‌ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡಲು ಪ್ರಾರಂಭಿಸುವ ಮೊದಲು, ನೀವು ಸಂಬಂಧಿತ ಐಟಿಆರ್ ಫಾರ್ಮ್ ಅನ್ನು ನಿರ್ಧರಿಸಬೇಕು. ಆದಾಗ್ಯೂ, ಈ ಫಾರ್ಮ್‌ಗಳ ವಿವರಗಳನ್ನು ಡಿಕೋಡ್ ಮಾಡುವುದು ಟ್ಯಾಕ್ಸಿಂಗ್ ಆಗುವಂತದ್ದು ಮತ್ತು ಸಮಯ ತೆಗೆದುಕೊಳ್ಳುವಂತದ್ದು. ಆದ್ದರಿಂದ, ಇಂದು ನಾವು ಈ ಲೇಖನದ ಮೂಲಕ ಐಟಿಆರ್-2ರ ಕಾಂಪ್ರೆಹೆನ್ಸಿವ್ ಅವಲೋಕನವನ್ನು ನೀಡುತ್ತೇವೆ.

ಹೆಚ್ಚು ತಡಮಾಡದೆ, ಪ್ರಾರಂಭಿಸೋಣ!

ಐಟಿಆರ್-2 ಎಂದರೇನು?

ಐಟಿಆರ್ -2 ಇನ್‌ಕಮ್‌ ಟ್ಯಾಕ್ಸ್ ಫಾರ್ಮ್ ಆಗಿದ್ದು, ಇದು ವೈಯಕ್ತಿಕ ಟ್ಯಾಕ್ಸ್‌ಪೇಯರ್‌ಗಳಿಗೆ ಮತ್ತು ಯಾವುದೇ ವೃತ್ತಿ ಅಥವಾ ಬಿಸಿನೆಸ್‌ನಲ್ಲಿ ತೊಡಗಿಲ್ಲದ ಹಿಂದೂ ಅವಿಭಕ್ತ ಕುಟುಂಬಕ್ಕೆ (ಹೆಚ್‌ಯುಎಫ್) ಅಪ್ಲಿಕೇಬಲ್ ಆಗುತ್ತದೆ. ಇದರ ಅಪ್ಲಿಕೇಬಲಿಟಿ ಟ್ಯಾಕ್ಸ್‌ಪೇಯರ್‌ ಕೆಟಗರಿ ಮತ್ತು ಅವನ/ಅವಳ ಇನ್‌ಕಮ್‌ನ ಮೂಲವನ್ನು ಅವಲಂಬಿಸಿರುತ್ತದೆ. ಇನ್‌ಕಮ್‌ ಟ್ಯಾಕ್ಸ್‌ನಲ್ಲಿ ಐಟಿಆರ್ -2 ಎಂದರೇನು ಎಂದು ಈಗ ನಿಮಗೆ ತಿಳಿದಿದೆ, ಅದರ ಸ್ಟ್ರಕ್ಚರ್ ಇಲ್ಲಿದೆ.

ಐಟಿಆರ್-2 ಸ್ಟ್ರಕ್ಚರ್

ಐಟಿಆರ್-2 ಅರ್ಥವನ್ನು ಅಸೆಸ್ ಮಾಡಿದ ನಂತರ, ಫಾರ್ಮ್ ಹಲವಾರು ಘಟಕಗಳನ್ನು ಒಳಗೊಂಡಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು, ಅವುಗಳೆಂದರೆ:

  • ಭಾಗ ಎ: ಇದು ವೈಯಕ್ತಿಕ ಮಾಹಿತಿ ಮತ್ತು ಫೈಲಿಂಗ್ ಸ್ಟೇಟಸ್‌ನ ವಿವರಗಳನ್ನು ಒಳಗೊಂಡಿದೆ
  • ಭಾಗ ಬಿ: ಈ ಘಟಕವು ಎರಡು ಭಾಗಗಳನ್ನು ಹೊಂದಿದೆ:
    • ಭಾಗ ಬಿ-ಟಿಐ: ಇದು ಟ್ಯಾಕ್ಸ್ ವಿಧಿಸಬಹುದಾದ ಇನ್‌ಕಮ್‌ಗೆ ಸಂಬಂಧಿಸಿದಂತೆ ಒಟ್ಟು ಇನ್‌ಕಮ್‌ನ ಲೆಕ್ಕಾಚಾರವನ್ನು ಒಳಗೊಂಡಿರುತ್ತದೆ
    • ಭಾಗ ಬಿ-ಟಿಟಿಐ: ಈ ಭಾಗವು ಒಟ್ಟು ಇನ್‌ಕಮ್‌ ಮೇಲಿನ ಟ್ಯಾಕ್ಸ್ ಲಯಬಿಲಿಟಿಯನ್ನು ಲೆಕ್ಕಹಾಕುವುದನ್ನು ಒಳಗೊಂಡಿರುತ್ತದೆ

ಇದಲ್ಲದೆ, ಈ ಫಾರ್ಮ್ ಹಲವಾರು ಶೆಡ್ಯೂಲ್‌ಗಳನ್ನು ಒಳಗೊಂಡಿದೆ, ಅವುಗಳನ್ನು ಕೆಳಗೆ ವಿವರಿಸಲಾಗಿದೆ:

  • ಶೆಡ್ಯೂಲ್ ಎಸ್(S): ಈ ಸೆಕ್ಷನ್ ಸ್ಯಾಲರಿಗಳಿಂದ ಬರುವ ಇನ್‌ಕಮ್‌ ವಿವರಗಳನ್ನು ಹೊಂದಿದೆ.
  • ಶೆಡ್ಯೂಲ್ ಸಿಜಿ(CG): ಇದು 'ಕ್ಯಾಪಿಟಲ್ ಗೇನ್ಸ್' ಎಂಬ ಶೀರ್ಷಿಕೆ ಅಡಿಯಲ್ಲಿ ಇನ್‌ಕಮ್‌ ಅನ್ನು ಲೆಕ್ಕಹಾಕುವುದನ್ನು ಒಳಗೊಂಡಿದೆ.
  • ಶೆಡ್ಯೂಲ್ ಹೆಚ್‌ಪಿ(HP): ಟ್ಯಾಕ್ಸ್‌ಪೇಯರ್‌ ಸೆಕ್ಷನ್ ಹೆಚ್‌ಪಿಯಲ್ಲಿ 'ಮನೆ ಪ್ರಾಪರ್ಟಿಯಿಂದ ಇನ್‌ಕಮ್‌' ವಿವರಗಳನ್ನು ಒದಗಿಸಬೇಕು.
  • ಶೆಡ್ಯೂಲ್ ಓಎಸ್(OS): ಇದು 'ಇತರ ಮೂಲಗಳಿಂದ ಬರುವ ಇನ್‌ಕಮ್‌' ಎಂಬ ಶೀರ್ಷಿಕೆ ಅಡಿಯಲ್ಲಿ ಒಬ್ಬರ ಇನ್‌ಕಮ್‌ ಅನ್ನು ಲೆಕ್ಕಹಾಕಲು ಕರೆ ನೀಡುತ್ತದೆ.
  • ಶೆಡ್ಯೂಲ್ ಬಿಎಫ್‌ಎಲ್‌ಎ(BFLA): ಈ ಸೆಕ್ಷನ್ ಹಿಂದಿನ ಆರ್ಥಿಕ ವರ್ಷಗಳಿಂದ ಉಂಟಾದ ಭರಿಸಲಾಗದ ನಷ್ಟಗಳ ಸೆಟ್ಟಿಂಗ್ ಆಫ್ ನಂತರದ ಇನ್‌ಕಮ್‌ ಸ್ಟೇಟ್‌ಮೆಂಟ್‌ ಅನ್ನು ಹೊಂದಿರುತ್ತದೆ.
  • ಶೆಡ್ಯೂಲ್ ಸಿವೈಎಲ್ಎ(CYLA): ಇದು ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಷ್ಟಗಳ ಸೆಟ್ಟಿಂಗ್ ಆಫ್ ನಂತರದ ಇನ್‌ಕಮ್‌ ಸ್ಟೇಟ್‌ಮೆಂಟ್‌ ಅನ್ನು ಹೊಂದಿದೆ.
  • ಶೆಡ್ಯೂಲ್ 80ಜಿ(80G): ಈ ಸೆಕ್ಷನ್ ಇನ್‌ಕಮ್‌ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 80G ಅಡಿಯಲ್ಲಿ ಡಿಡಕ್ಷನ್‌ಗೆ ಒಳಪಟ್ಟ ದೇಣಿಗೆಗಳ ಸ್ಟೇಟ್‌ಮೆಂಟ್‌ ಅನ್ನು ಹೊಂದಿದೆ.
  • ಶೆಡ್ಯೂಲ್ ಸಿಎಫ್ಎಲ್(CFL): ಇದು ನಷ್ಟದ ಸ್ಟೇಟ್‌ಮೆಂಟ್ ಅನ್ನು ಒಳಗೊಂಡಿರುತ್ತದೆ, ಅದನ್ನು ಮುಂದಿನ ಆರ್ಥಿಕ ವರ್ಷಗಳವರೆಗೆ ಕ್ಯಾರಿ ಫಾರ್ವರ್ಡ್ ಮಾಡಲಾಗುತ್ತದೆ.
  • ಶೆಡ್ಯೂಲ್ VI-A: ಇದು ಶೆಡ್ಯೂಲ್ VI-A ಪ್ರಕಾರ ವ್ಯಕ್ತಿಯ ಒಟ್ಟು ಇನ್‌ಕಮ್‌ನಿಂದ ಡಿಡಕ್ಷನ್‌ಗಳ ಸ್ಟೇಟ್‌ಮೆಂಟ್‌ ಆಗಿದೆ.
  • ಶೆಡ್ಯೂಲ್ ಎಎಂಟಿ(AMT): ಇದು ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 11JC ಅಡಿಯಲ್ಲಿ ಪಾವತಿಸಬೇಕಾದ ಪರ್ಯಾಯ ಕನಿಷ್ಠ ಟ್ಯಾಕ್ಸ್ ಅನ್ನು ಲೆಕ್ಕಹಾಕುವುದನ್ನು ಒಳಗೊಂಡಿದೆ.
  • ಶೆಡ್ಯೂಲ್ 80ಜಿಜಿಎ(80GGA): ಈ ಸೆಕ್ಷನ್ ಗ್ರಾಮೀಣಾಭಿವೃದ್ಧಿ ಅಥವಾ ವೈಜ್ಞಾನಿಕ ಸಂಶೋಧನೆಗಾಗಿ ದೇಣಿಗೆಗಳ ಸ್ಟೇಟ್‌ಮೆಂಟ್ ಅನ್ನು ಪ್ರಸ್ತುತಪಡಿಸುತ್ತದೆ.
  • ಶೆಡ್ಯೂಲ್ ಎಎಂಟಿಸಿ(AMTC): ಇದು ಸೆಕ್ಷನ್ 115JD ಅಡಿಯಲ್ಲಿ ವ್ಯಕ್ತಿಯ ಟ್ಯಾಕ್ಸ್ ಕ್ರೆಡಿಟ್ ಲೆಕ್ಕಾಚಾರವನ್ನು ಒಳಗೊಂಡಿದೆ.
  • ಶೆಡ್ಯೂಲ್ ಎಸ್ಐ(SI): ಈ ಸೆಕ್ಷನ್ ವಿಶೇಷ ದರಗಳಲ್ಲಿ ಟ್ಯಾಕ್ಸೇಷನ್ ಮಾಡಬಲ್ಲ ಇನ್‌ಕಮ್‌ ಸ್ಟೇಟ್‌ಮೆಂಟ್‌ ಅನ್ನು ಒಳಗೊಂಡಿದೆ.
  • ಶೆಡ್ಯೂಲ್ ಇಐ(EI): ಇದು ವಿನಾಯಿತಿ ಇನ್‌ಕಮ್‌ನ ವಿವರಗಳನ್ನು ಹೊಂದಿದೆ, ಅಂದರೆ, ಒಬ್ಬರ ಒಟ್ಟು ಇನ್‌ಕಮ್‌ನಲ್ಲಿ ಒಳಗೊಂಡಿರದ ಇನ್‌ಕಮ್‌.
  • ಶೆಡ್ಯೂಲ್ ಎಸ್‌ಪಿಐ(SPI): ಇದು ಶೆಡ್ಯೂಲ್ಎಚ್‌ಪಿ, ಸಿಜಿ ಮತ್ತು ಓಎಸ್ ಪ್ರಕಾರ ಈ ವ್ಯಕ್ತಿಯ ಇನ್‌ಕಮ್‌ನಲ್ಲಿ ಒಳಗೊಂಡಿರುವ ಟ್ಯಾಕ್ಸ್‌ಪೇಯರ್‌ಗಳ ಸಂಗಾತಿ/ಮೈನರ್ ಮಗು/ಮಗನ ಹೆಂಡತಿ ಅಥವಾ ಅಂತಹ ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳ ಸಂಘದ ಇನ್‌ಕಮ್‌ ಸ್ಟೇಟ್‌ಮೆಂಟ್‌ ಆಗಿದೆ.
  • ಶೆಡ್ಯೂಲ್ ಟಿಆರ್(TR): ಟ್ಯಾಕ್ಸ್‌ಪೇಯರ್‌ ಭಾರತದ ಹೊರಗೆ ಪಾವತಿಸಿದ ಟ್ಯಾಕ್ಸ್‌ಗಳ ವಿವರಗಳನ್ನು ಶೆಡ್ಯೂಲ್ ಟಿಆರ್‌ನಲ್ಲಿ ಒದಗಿಸಬೇಕು.
  • ಶೆಡ್ಯೂಲ್ ಪಿಟಿಐ(PTI): ಇದು ಸೆಕ್ಷನ್ 115UA, 115UB ಪ್ರಕಾರ ಬಿಸಿನೆಸ್ ಟ್ರಸ್ಟ್‌ಗಳು ಅಥವಾ ಇನ್‌ವೆಸ್ಟ್‌ಮೆಂಟ್‌ ಫಂಡ್‌ಗಳಿಂದ ಬಂದ ಇನ್‌ಕಮ್‌ ವಿವರಗಳನ್ನು ಒಳಗೊಂಡಿದೆ.
  • ಶೆಡ್ಯೂಲ್ ಎಫ್ಎಸ್ಐ(FSI): ಇದು ಭಾರತದ ಹೊರಗೆ ಉದ್ಭವಿಸುವ ಅಥವಾ ಗಳಿಸುವ ಇನ್‌ಕಮ್‌ನ ಸ್ಟೇಟ್‌ಮೆಂಟ್ ಅನ್ನು ಪ್ರಸ್ತುತಪಡಿಸುತ್ತದೆ.
  • ಶೆಡ್ಯೂಲ್ ಎಎಲ್‌(AL): ಇದು ವರ್ಷಾಂತ್ಯದಲ್ಲಿ ಒಬ್ಬರ ಅಸೆಟ್‌ಗಳು ಮತ್ತು ಲಯಬಿಲಿಟಿಗಳನ್ನು ಸೂಚಿಸುತ್ತದೆ. ಟ್ಯಾಕ್ಸ್‌ಪೇಯರ್‌ನ ಒಟ್ಟು ಇನ್‌ಕಮ್ ₹50,00,000 ಮೀರಿದರೆ ಮಾತ್ರ ಇದು ಅಪ್ಲಿಕೇಬಲ್ ಆಗುತ್ತದೆ.
  • ಶೆಡ್ಯೂಲ್ ಎಫ್ಎ: ಈ ಸೆಕ್ಷನ್ ಭಾರತದ ಹೊರಗಿನ ಮೂಲಗಳಿಂದ ಬರುವ ಇನ್‌ಕಮ್‌ ಮತ್ತು ಯಾವುದೇ ವಿದೇಶಿ ಅಸೆಟ್‌ಗಳ ವಿವರಗಳನ್ನು ಹೊಂದಿದೆ.
  • ಶೆಡ್ಯೂಲ್ 5ಎ(5A): ಇದು ಸಂಗಾತಿಗಳ ನಡುವೆ ಒಬ್ಬರ ಇನ್‌ಕಮ್‌ ಹಂಚಿಕೆಯ ಸ್ಟೇಟ್‌ಮೆಂಟ್‌ ಅನ್ನು ಪ್ರಸ್ತುತಪಡಿಸುತ್ತದೆ.
  • ಶೆಡ್ಯೂಲ್ ಡಿಐ(DI): ಇದು ಟ್ಯಾಕ್ಸ್ ಉಳಿತಾಯ ಇನ್‌ವೆಸ್ಟ್‌ಮೆಂಟ್‌ಗಳು, ಡೆಪಾಸಿಟ್‌ಗಳು ಅಥವಾ ಡಿಡಕ್ಷನ್ ಅಥವಾ ವಿನಾಯಿತಿಗೆ ಅರ್ಹವಾದ ಪೇಮೆಂಟ್‌ಗಳ ವಿವರಗಳನ್ನು ಒಳಗೊಂಡಿದೆ.
  • ಈಗ ನೀವು ಐಟಿಆರ್-2 ರ ಬಗ್ಗೆ ತಿಳಿದಿದ್ದೀರಿ, ಮುಂದೆ ಇದು ನಿಮಗೆ ಅಪ್ಲಿಕೇಬಲ್ ಆಗುತ್ತದೆಯೇ ಎಂದು ಕಂಡುಹಿಡಿಯೋಣ.

ಐಟಿಆರ್-2 ಫಾರ್ಮ್‌ಗೆ ಯಾರು ಅರ್ಹರು?

ಮೇಲೆ ತಿಳಿಸಿದಂತೆ, 'ಬಿಸಿನೆಸ್ ಅಥವಾ ವೃತ್ತಿಯಿಂದ ಲಾಭ ಮತ್ತು ಗೇನ್ಸ್' ಎಂಬ ಶೀರ್ಷಿಕೆ ಅಡಿಯಲ್ಲಿ ಮೂಲಗಳಿಂದ ಇನ್‌ಕಮ್‌ ಅನ್ನು ಪಡೆಯದ ವ್ಯಕ್ತಿಗಳು ಮತ್ತು ಹಿಂದೂ ಅವಿಭಕ್ತ ಕುಟುಂಬಗಳು (ಹೆಚ್‌ಯುಎಫ್) ಐಟಿಆರ್-2 ಅನ್ನು ಫೈಲ್ ಮಾಡಬಹುದು. ಆದ್ದರಿಂದ, ನೀವು ಈ ಕೆಳಗಿನ ಮೂಲಗಳಿಂದ ಇನ್‌ಕಮ್‌ ಅನ್ನು ಗಳಿಸಿದರೆ ಐಟಿಆರ್-2 ಫಾರ್ಮ್‌ನೊಂದಿಗೆ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಫೈಲ್ ಮಾಡಲು ಅರ್ಹರಾಗಿದ್ದೀರಿ:

  • ಸ್ಯಾಲರಿ ಅಥವಾ ಪೆನ್ಷನ್
  • ಮನೆ ಪ್ರಾಪರ್ಟಿ (ಒಂದಕ್ಕಿಂತ ಹೆಚ್ಚು ವಸತಿ ಪ್ರಾಪರ್ಟಿ ಒಳಗೊಂಡಂತೆ)
  • ಪ್ರಾಪರ್ಟಿ ಅಥವಾ ಇನ್‌ವೆಸ್ಟ್‌ಮೆಂಟ್‌ಗಳ ಮಾರಾಟದ ಮೇಲಿನ ಕ್ಯಾಪಿಟಲ್‌ ಗೇನ್ಸ್‌ ಅಥವಾ ನಷ್ಟಗಳು (ಸಣ್ಣ ಮತ್ತು ದೀರ್ಘಾವಧಿಯ ಇನ್‌ವೆಸ್ಟ್‌ಮೆಂಟ್‌ಗಳನ್ನು ಒಳಗೊಂಡಿರುತ್ತದೆ)
  • ಇತರ ಮೂಲಗಳಿಂದ ಇನ್‌ಕಮ್‌, ಉದಾಹರಣೆಗೆ ಲಾಟರಿಗಳಿಂದ ಬಹುಮಾನಗಳನ್ನು ಗೆಲ್ಲುವುದು, ಕುದುರೆ ರೇಸಿಂಗ್, ಇತ್ಯಾದಿ.
  • ₹5,000ಕ್ಕಿಂತ ಹೆಚ್ಚಿನ ಕೃಷಿ ಇನ್‌ಕಮ್‌
  • ಭಾರತದ ಹೊರಗಿನ ಸಂಚಿತ ಇನ್‌ಕಮ್‌ (ವಿದೇಶಿ ಇನ್‌ಕಮ್‌)
  • ವಿದೇಶಿ ಅಸೆಟ್‌ಗಳಿಂದ ಇನ್‌ಕಮ್‌
  • ಹೆಚ್ಚುವರಿಯಾಗಿ, ಯಾವುದೇ ಕಂಪನಿಯ ಡೈರೆಕ್ಟರ್ ಆಗಿರುವ ಅಥವಾ ಕಂಪನಿಯ ಪಟ್ಟಿಮಾಡದ ಈಕ್ವಿಟಿ ಶೇರುಗಳಲ್ಲಿ ಇನ್‌ವೆಸ್ಟ್‌ ಮಾಡಿದ ಟ್ಯಾಕ್ಸ್‌ಪೇಯರ್‌ ಐಟಿಆರ್‌-2ನೊಂದಿಗೆ ರಿಟರ್ನ್ಸ್ ಫೈಲ್ ಮಾಡುವ ಅಗತ್ಯವಿದೆ.

ಹಾಗಾದರೆ, ಈ ಐಟಿಆರ್‌-2 ಅರ್ಹತೆಯ ಅಡಿಯಲ್ಲಿ ಯಾರು ಬರುವುದಿಲ್ಲ? ಈ ಕೆಳಗಿನ ವರ್ಗದ ಟ್ಯಾಕ್ಸ್‌ಪೇಯರ್‌ಗಳು ಐಟಿಆರ್‌-2 ಅನ್ನು ಫೈಲ್ ಮಾಡಲು ಸಾಧ್ಯವಿಲ್ಲ:

  • ವೃತ್ತಿ ಅಥವಾ ಬಿಸಿನೆಸ್‌ನಿಂದ ಇನ್‌ಕಮ್‌ ಗಳಿಸುವ ವ್ಯಕ್ತಿ ಅಥವಾ ಹಿಂದೂ ಅವಿಭಕ್ತ ಕುಟುಂಬ (ಹೆಚ್‌ಯುಎಫ್‌).
  • ಐಟಿಆರ್‌-1 ಫಾರ್ಮ್‌ನೊಂದಿಗೆ ರಿಟರ್ನ್‌ಗಳನ್ನು ಫೈಲ್ ಮಾಡಲು ಅರ್ಹರಾಗಿರುವ ಟ್ಯಾಕ್ಸ್‌ಪೇಯರ್‌ಗಳು.

[ಮೂಲ]

ಐಟಿಆರ್-2 ಅನ್ನು ಫೈಲ್ ಮಾಡುವುದು ಹೇಗೆ?

ನೀವು ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಅನ್ನು ಆಫ್‌ಲೈನ್‌ನಲ್ಲಿ ಫೈಲ್ ಮಾಡಬಹುದು ಅಥವಾ ಆನ್‌ಲೈನ್ ಮಾರ್ಗವನ್ನು ತೆಗೆದುಕೊಳ್ಳಬಹುದು. ಆದಾಗ್ಯೂ, 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಟ್ಯಾಕ್ಸ್‌ಪೇಯರ್‌ಗಳು ಮಾತ್ರ ಐಟಿಆರ್‌-2ನ ಆಫ್‌ಲೈನ್ ಫೈಲಿಂಗ್ ಅನ್ನು ಆರಿಸಿಕೊಳ್ಳಬಹುದು.

ಆದ್ದರಿಂದ, ಈ ವ್ಯಕ್ತಿಗಳು ಭೌತಿಕ ಐಟಿಆರ್‌-2 ಫಾರ್ಮ್ ಮತ್ತು ಗಳಿಸಿದ ಇನ್‌ಕಮ್‌ ಮೇಲಿನ ವಿವರಗಳ ಬಾರ್-ಕೋಡೆಡ್ ರಿಟರ್ನ್ ಮೂಲಕ ಸುಲಭವಾಗಿ ರಿಟರ್ನ್‌ಗಳನ್ನು ಒದಗಿಸಬಹುದು. ಇದಲ್ಲದೆ, ಅಸೆಸ್ಸೀ ಈ ಪೇಪರ್ ಫಾರ್ಮ್ ಅನ್ನು ಸಬ್‌ಮಿಟ್‌ ಮಾಡಿದಾಗ, ಅವನು/ಅವಳು ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಯಿಂದ ಸ್ವೀಕೃತಿಯನ್ನು ಪಡೆಯುತ್ತಾನೆ.

ಈ ಹಂತಗಳನ್ನು ಅನುಸರಿಸುವ ಮೂಲಕ ಆನ್‌ಲೈನ್‌ನಲ್ಲಿ ಐಟಿಆರ್‌-2 ಅನ್ನು ಫೈಲ್ ಮಾಡಲು ಆಯ್ಕೆ ಮಾಡಬಹುದು:

  • ಹಂತ 1: ಇನ್‌ಕಮ್‌ ಟ್ಯಾಕ್ಸ್‌ ಇ-ಫೈಲಿಂಗ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಹಂತ 2: ನಿಮ್ಮ ಯೂಸರ್‌ ಐಡಿ (ಪ್ಯಾನ್), ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ಒದಗಿಸುವ ಮೂಲಕ ಈ ಪೋರ್ಟಲ್‌ಗೆ ಲಾಗ್ ಇನ್ ಆಗಿ.
  • ಹಂತ 3: ಮೆನುವಿನಲ್ಲಿ 'ಇ-ಫೈಲ್' ಆಯ್ಕೆಯನ್ನು ಆರಿಸಿ.
  • ಹಂತ 4: 'ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಹಂತ 5: ನಿಮ್ಮ ಪ್ಯಾನ್ ವಿವರಗಳು ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಪೇಜಿನಲ್ಲಿ ಆಟೋ-ಪಾಪ್ಯುಲೇಟ್ ಆಗುತ್ತವೆ. ಈಗ, ಮುಂದುವರಿಯಿರಿ ಮತ್ತು 'ಮೌಲ್ಯಮಾಪನ ವರ್ಷ,' ಮತ್ತು ನಂತರ 'ಐಟಿಆರ್‌ ಫಾರ್ಮ್ ಸಂಖ್ಯೆ' ಆಯ್ಕೆಮಾಡಿ.
  • ಹಂತ 6: ‘ಫೈಲಿಂಗ್ ಟೈಪ್’ ಆಯ್ಕೆಮಾಡಿ ಮತ್ತು ‘ಒರಿಜಿನಲ್/ರಿವೈಸ್‌ಡ್‌ ರಿಟರ್ನ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಹಂತ 7: ಈಗ 'ಕಂಟಿನ್ಯೂ' ಮೇಲೆ ಕ್ಲಿಕ್ ಮಾಡಿ.
  • ಹಂತ 8: ಇಲ್ಲಿ, ನೀವು ಸೂಚನೆಗಳನ್ನು ಎಚ್ಚರಿಕೆಯಿಂದ ಓದಬೇಕು. ನಂತರ, ಎಲ್ಲಾ ಅಪ್ಲಿಕೇಬಲ್ ಆಗುವ ಮತ್ತು ಕಡ್ಡಾಯ ಫೀಲ್ಡ್ ಗಳಲ್ಲಿ ವಿವರಗಳನ್ನು ನಮೂದಿಸುವ ಮೂಲಕ ಐಟಿಆರ್-2 ಫಾರ್ಮ್ ಅನ್ನು ಭರ್ತಿ ಮಾಡಲು ಮುಂದುವರಿಯಿರಿ.
  • ಹಂತ 9: ಸೆಷನ್ ಸಮಯ ಮೀರುವುದರಿಂದ ಡೇಟಾ ನಷ್ಟವನ್ನು ತಪ್ಪಿಸಲು ನಿಯತಕಾಲಿಕವಾಗಿ 'ಸೇವ್ ಡ್ರಾಫ್ಟ್' ಬಟನ್ ಅನ್ನು ಆಯ್ಕೆ ಮಾಡಲು ಮರೆಯದಿರಿ.
  • ಹಂತ 10: ‘ಟ್ಯಾಕ್ಸಸ್ ಪೇಯ್ಡ್’ ಮತ್ತು ‘ವೆರಿಫಿಕೇಷನ್’ ಟ್ಯಾಬ್‌ಗಳಲ್ಲಿ ಸೂಕ್ತವಾದ ವೆರಿಫಿಕೇಷನ್ ಆಯ್ಕೆಯನ್ನು ಆರಿಸಿ.
  • ಹಂತ 11: ನಿಮ್ಮ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಅನ್ನು ವೆರಿಫೈ ಮಾಡಲು ಈ ಕೆಳಗಿನ ಯಾವುದೇ ಆಯ್ಕೆಗಳನ್ನು ಆರಿಸಿಕೊಳ್ಳಿ:

ಐಟಿಆರ್‌ ಫೈಲ್ ಮಾಡಿದ ದಿನಾಂಕದಿಂದ 30 ದಿನಗಳಲ್ಲಿ ಇ-ವೆರಿಫಿಕೇಷನ್.

ಐಟಿಆರ್ ಫೈಲ್ ಮಾಡಿದ ದಿನಾಂಕದಿಂದ 30 ದಿನಗಳ ಒಳಗೆ ಪೋಸ್ಟ್ ಮೂಲಕ ಬಂದ ಸಹಿ ಮಾಡಿದ ಐಟಿಆರ್-ವಿ ಮೂಲಕ ವೆರಿಫಿಕೇಷನ್

[ಮೂಲ]

  • ಹಂತ 12: ‘ಪ್ರಿವ್ಯೂ ಆ್ಯಂಡ್ ಸಬ್‌ಮಿಟ್‌’ ಮೇಲೆ ಕ್ಲಿಕ್ ಮಾಡಿ. ಇಲ್ಲಿ, ನಿಮ್ಮ ಐಟಿಆರ್‌ನಲ್ಲಿರುವ ಎಲ್ಲಾ ಡೇಟಾದ ನಿಖರತೆಯನ್ನು ನೀವು ವೆರಿಫೈ ಮಾಡಬೇಕು.
  • ಹಂತ 13: ‘ಸಬ್‌ಮಿಟ್‌’ ಮೇಲೆ ಕ್ಲಿಕ್ ಮಾಡಿ.

ಐಟಿಆರ್‌-2 ಅನ್ನು ಆನ್‌ಲೈನ್‌ನಲ್ಲಿ ಫೈಲ್ ಮಾಡುವುದು ಹೇಗೆ ಎಂಬುದು ಅಲ್ಲಿಗೆ ಮುಕ್ತಾಯವಾಗುತ್ತದೆ.

ಆದರೆ ತಡೆಯಿರಿ, ಎಕ್ಸೆಲ್ ಸೌಲಭ್ಯದೊಂದಿಗೆ ನೀವು ಆನ್‌ಲೈನ್ ರಿಟರ್ನ್ ಅನ್ನು ಸಹ ಫೈಲ್ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ? ಈ ಪ್ರೊಸೆಸ್ ಮೂಲಕ ನೀವು ಐಟಿಆರ್-2 ಅನ್ನು ಆನ್‌ಲೈನ್‌ನಲ್ಲಿ ಹೇಗೆ ಫೈಲ್ ಮಾಡಬಹುದು ಎಂಬುದು ಇಲ್ಲಿ ತಿಳಿಸಲಾಗಿದೆ.

ಹೌದು, ನೀವು ಎಕ್ಸೆಲ್ ಸೌಲಭ್ಯವನ್ನು ಬಳಸಿಕೊಂಡು ನಿಮ್ಮ ಐಟಿಆರ್ ಅನ್ನು ಆಫ್‌ಲೈನ್‌ನಲ್ಲಿ ಸಿದ್ಧಪಡಿಸಬಹುದು ಮತ್ತು ಅದನ್ನು ಆನ್‌ಲೈನ್‌ನಲ್ಲಿ ಸಬ್‌ಮಿಟ್‌ ಮಾಡಬಹುದು. ಹಾಗೆ ಮಾಡಲು, ಈ ಹಂತಗಳನ್ನು ಅನುಸರಿಸಿ:

  • ಹಂತ 1: ಇನ್‌ಕಮ್‌ ಟ್ಯಾಕ್ಸ್‌ ಇ-ಫೈಲಿಂಗ್ ಪೋರ್ಟಲ್‌ಗೆ ಭೇಟಿ ನೀಡಿ.
  • ಹಂತ 2: ಮೇಲಿನ ಬಾರ್‌ನಲ್ಲಿ 'ಡೌನ್‌ಲೋಡ್ಸ್' ಆಯ್ಕೆಮಾಡಿ.
  • ಹಂತ 3: ಡ್ರಾಪ್-ಡೌನ್ ಮೆನುವಿನಿಂದ, ಮೌಲ್ಯಮಾಪನ ವರ್ಷವನ್ನು ಆಯ್ಕೆಮಾಡಿ.
  • ಹಂತ 4: ಮೈಕ್ರೋಸಾಫ್ಟ್ ಎಕ್ಸೆಲ್ ಫೈಲ್ ಅನ್ನು ಡೌನ್‌ಲೋಡ್ ಮಾಡಲು ಮುಂದುವರಿಯಿರಿ. ಇಲ್ಲಿ, ಜಿಪ್ ಫೈಲ್ ಅನ್ನು ಡೌನ್‌ಲೋಡ್ ಮಾಡಲಾಗಿದೆ.
  • ಹಂತ 5: ಈ ಫೈಲ್ ಅನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಎಕ್ಸ್‌ಟ್ರಾಕ್ಟ್ ಮಾಡಿ ಮತ್ತು ಅದನ್ನು ತೆರೆಯಿರಿ. 'ಎನೇಬಲ್ ಕಂಟೆಂಟ್' ಆಯ್ಕೆಮಾಡಿ.
  • ಹಂತ 6: 'ಎನೇಬಲ್ ಮ್ಯಾಕ್ರೋಸ್' ಮೇಲೆ ಕ್ಲಿಕ್ ಮಾಡಿ.
  • ಹಂತ 7: ಎಕ್ಸೆಲ್ ಫೈಲ್ ತೆರೆದ ನಂತರ, ನೀವು ಈ ಕೆಳಗಿನ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು:
    • ಕೆಂಪು ಫೀಲ್ಡ್‌ಗಳನ್ನು ಭರ್ತಿ ಮಾಡುವುದು ಕಡ್ಡಾಯವಾಗಿದೆ.
    • ಹಸಿರು ಫೀಲ್ಡ್‌ಗಳು ಡೇಟಾ ಎಂಟ್ರಿಗಾಗಿ.
    • ಡೇಟಾವನ್ನು 'ಕಟ್' ಅಥವಾ 'ಪೇಸ್ಟ್' ಮಾಡಬೇಡಿ. ಆದ್ದರಿಂದ, ಯಾವುದೇ ಹಂತದಲ್ಲಿ 'Ctrl + X' ಮತ್ತು 'Ctrl + V' ಅನ್ನು ಬಳಸಬೇಡಿ.
  • ಹಂತ 8: ಪ್ರತಿ ಟ್ಯಾಬ್ ಅಡಿಯಲ್ಲಿ ಡೇಟಾವನ್ನು ಸೇರಿಸಿ ಮತ್ತು 'ವ್ಯಾಲಿಡೇಟ್' ಆಯ್ಕೆ ಮಾಡಿ.
  • ಹಂತ 9: ಈ ಐಟಿಆರ್‌ ಫಾರ್ಮ್‌ನ ಎಲ್ಲಾ ಟ್ಯಾಬ್‌ಗಳನ್ನು ವ್ಯಾಲಿಡೇಟ್‌ ಮಾಡಿ ಮತ್ತು ನಂತರ ಟ್ಯಾಕ್ಸ್ ಅನ್ನು ಕ್ಯಾಲ್ಕುಲೇಟ್ ಮಾಡಿ.
  • ಹಂತ 10: ಅದನ್ನು ಎಕ್ಸ್‌ಎಂಎಲ್‌ ಫೈಲ್ ಆಗಿ ರಚಿಸಿ ಮತ್ತು ಸೇವ್ ಮಾಡಿ.
  • ಹಂತ 11: ಈಗ, ಇನ್‌ಕಮ್‌ ಟ್ಯಾಕ್ಸ್‌ ಇ-ಫೈಲಿಂಗ್ ವೆಬ್‌ಸೈಟ್‌ಗೆ ಹೋಗಿ ಮತ್ತು ಪೋರ್ಟಲ್‌ಗೆ ಲಾಗಿನ್ ಆಗಿ.
  • ಹಂತ 12: ಇಲ್ಲಿ, ಈ ಹಿಂದೆ ಚರ್ಚಿಸಿದಂತೆ ಅದೇ ಹಂತಗಳನ್ನು ಅನುಸರಿಸಿ.
  • ಹಂತ 13: ‘ಒರಿಜಿನಲ್/ರಿವೈಸ್‌ಡ್ ರಿಟರ್ನ್’ ಆಯ್ಕೆಯನ್ನು ಆರಿಸಿದ ನಂತರ, ‘ಸಬ್‌ಮಿಷನ್‌ ಮೋಡ್’ ಮೇಲೆ ಕ್ಲಿಕ್ ಮಾಡಿ.
  • ಹಂತ 14: ಈಗ, 'ಅಪ್‌ಲೋಡ್ ಎಕ್ಸ್‌ಎಂಎಲ್‌' ಆಯ್ಕೆಯನ್ನು ಬಳಸಿ ಮತ್ತು ಎಕ್ಸೆಲ್ ಫೈಲ್ ಅನ್ನು ಸಬ್‌ಮಿಟ್‌ ಮಾಡಿ. ನಂತರ, ಹಿಂದಿನ ಸೂಚನೆಯಂತೆ ಐಟಿಆರ್-2 ಅನ್ನು ಫೈಲ್ ಮಾಡಲು ಮುಂದುವರಿಯಿರಿ.

ಮೌಲ್ಯಮಾಪನ ವರ್ಷ 2022-2023ಗಾಗಿ ಐಟಿಆರ್‌-2ನಲ್ಲಿನ ಗಮನಾರ್ಹ ಬದಲಾವಣೆಗಳು

ಮೌಲ್ಯಮಾಪನ ವರ್ಷ 22-23ಗೆ ಸಂಬಂಧಿಸಿದಂತೆ ಐಟಿಆರ್-2ನಲ್ಲಿನ ಪ್ರಮುಖ ಬದಲಾವಣೆಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ:

  • ಕ್ಯಾಪಿಟಲ್ ಗೇನ್ಸ್ ಶೆಡ್ಯೂಲ್ ಅಡಿಯಲ್ಲಿ ಟ್ಯಾಕ್ಸ್‌ಪೇಯರ್‌ ಹೆಚ್ಚುವರಿ ಡಿಸ್‌ಕ್ಲೋಷರ್‌ ಅನ್ನು ಒದಗಿಸಬೇಕಾಗುತ್ತದೆ. ಈ ಡಿಸ್‌ಕ್ಲೋಷರ್‌ಗಳು ಈ ಕೆಳಗಿನವುಗಳಿಗೆ ಸಂಬಂಧಿಸಿವೆ:
    •   ಕಟ್ಟಡ/ಭೂಮಿಯ ಸ್ವಾಧೀನ ಮತ್ತು ಟ್ರಾನ್ಸ್‌ಫರ್‌ ದಿನಾಂಕಗಳು
    •   ಸುಧಾರಣೆಯ ವೆಚ್ಚದ ವಿವರಗಳು, ಸುಧಾರಣೆಯ ವರ್ಷ ಮತ್ತು ಸುಧಾರಣೆಯ ಇಂಡೆಕ್ಸ್‌ಡ್‌ ವೆಚ್ಚ
    •   ಸ್ವಾಧೀನದ ವೆಚ್ಚ ಮತ್ತು ಇಂಡೆಕ್ಸ್‌ಡ್‌ ವೆಚ್ಚಕ್ಕೆ ಸಂಬಂಧಿಸಿದ ಪ್ರತ್ಯೇಕ ಡಿಸ್‌ಕ್ಲೋಷರ್‌ಗಳು
    •   ಪ್ರಾಪರ್ಟಿಯು ವಿದೇಶಿ ನೆಲದಲ್ಲಿ ಇದ್ದರೆ, ನಂತರ ದೇಶದ ಕೋಡ್ ಮತ್ತು ಜಿಪ್ ಕೋಡ್
  • ಟ್ಯಾಕ್ಸ್‌ಪೇಯರ್‌ ಪ್ರಾವಿಡೆಂಟ್ ಫಂಡ್‌ ಮೇಲೆ ಸಂಗ್ರಹವಾದ ಇಂಟರೆಸ್ಟ್‌ನ ವರದಿಗಳನ್ನು ಒದಗಿಸಬೇಕಾಗುತ್ತದೆ, ಅದರ ಮೇಲೆ ಅವರು ವಿನಾಯಿತಿಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.
  • ಇಎಸ್‌ಓಪಿ ಮೇಲೆ ಡಿಫರ್‌ಡ್‌ ಟ್ಯಾಕ್ಸ್ ಅನ್ನು ವರದಿ ಮಾಡಲು ಹೊಸ ಶೆಡ್ಯೂಲ್‌ನ ಪ್ರಾವಿಶನ್ ಇದೆ. ಒಬ್ಬರು ಈ ಕೆಳಗಿನ ವಿವರಗಳನ್ನು ಬಹಿರಂಗಪಡಿಸಬೇಕು:
    • ಫೈಲ್‌ ಮಾಡಲಾದ ಐಟಿಆರ್‌ನಲ್ಲಿನ ಟ್ಯಾಕ್ಸ್‌ ಡಿಫರ್‌ಡ್‌
    • ನಿರ್ದಿಷ್ಟ ಸೆಕ್ಯುರಿಟಿಗಳ ಮಾರಾಟದ ದಿನಾಂಕ ಮತ್ತು ಅಂತಹ ಮಾರಾಟದ ಮೇಲೆ ಪಾವತಿಸಬೇಕಾದ ಟ್ಯಾಕ್ಸ್ ಅಮೌಂಟ್
    • ಪ್ರಸ್ತುತ ಮೌಲ್ಯಮಾಪನ ವರ್ಷದಲ್ಲಿ ಪಾವತಿಸಬೇಕಾದ ಟ್ಯಾಕ್ಸ್ ಅಮೌಂಟ್
    • ಅಸೆಸ್ಸೀ ಇನ್ನು ಮುಂದೆ ಸಂಸ್ಥೆಯ ಭಾಗವಾಗಿರದ ದಿನಾಂಕ
    •   ಮುಂದಿನ ಮೌಲ್ಯಮಾಪನ ವರ್ಷಕ್ಕೆ ಮುಂದುವರಿಯುವ ಟ್ಯಾಕ್ಸ್ ಅಮೌಂಟ್‌ನ ಬಾಕಿ
  • ಸೆಕ್ಷನ್ 89A ಪ್ರಕಾರ, ಅಸೆಸ್ಸೀ ಅಧಿಸೂಚಿತ ದೇಶದಲ್ಲಿ ಹೊಂದಿರುವ ನಿವೃತ್ತಿ ಪ್ರಯೋಜನಗಳ ಖಾತೆಯಿಂದ ಇನ್‌ಕಮ್‌ನ ಟ್ಯಾಕ್ಸೇಷನ್‌ನಿಂದ ಪರಿಹಾರವನ್ನು ಪಡೆಯುತ್ತಾರೆ. ಹೊಸ ಐಟಿಆರ್ ಫಾರ್ಮ್‌ನಲ್ಲಿ, ಸ್ಯಾಲರಿ ಅಥವಾ ಶೆಡ್ಯೂಲ್ Sನ ಇನ್‌ಕಮ್‌ ವಿವರಗಳಿಗೆ ಈ ಕೆಳಗಿನ ಡಿಸ್‌ಕ್ಲೋಷರ್‌ಗಳ ಅಗತ್ಯವಿದೆ:
    • ಸೆಕ್ಷನ್ 89A ಅಡಿಯಲ್ಲಿ ಉಲ್ಲೇಖಿಸಲಾದ ಅಧಿಸೂಚಿತ ದೇಶದಲ್ಲಿ ನಿರ್ವಹಿಸಲಾದ ನಿವೃತ್ತಿ ಪ್ರಯೋಜನಗಳ ಖಾತೆಯ ಇನ್‌ಕಮ್‌
    • ಸೆಕ್ಷನ್ 89A ಅಡಿಯಲ್ಲಿ ತಿಳಿಸಲಾದ ದೇಶಗಳನ್ನು ಹೊರತುಪಡಿಸಿ ಬೇರೆ ಯಾವುದೇ ದೇಶದಲ್ಲಿ ಅಸ್ತಿತ್ವದಲ್ಲಿರುವ ನಿವೃತ್ತಿ ಪ್ರಯೋಜನಗಳ ಖಾತೆಯಿಂದ ಬರುವ ಇನ್‌ಕಮ್‌
  • ಪೆನ್ಷನರ್‌ಗಳು ತಮ್ಮ ಉದ್ಯೋಗದ ಸ್ವರೂಪದ ಮತ್ತಷ್ಟು ಕ್ಲಾಸಿಫಿಕೇಷನ್ ಅನ್ನು ಒದಗಿಸಬೇಕಾಗಿದೆ. ಪೆನ್ಷನರ್‌ಗಳಿಗೆ ಈ ಕೆಳಗಿನ ಆಯ್ಕೆಗಳನ್ನು ಅಳವಡಿಸಲಾಗಿದೆ:
    •   ಪೆನ್ಷನರ್‌ಗಳು – CG
    •   ಪೆನ್ಷನರ್‌ಗಳು – PSU
    •   ಪೆನ್ಷನರ್‌ಗಳು – SC
    •   ಪೆನ್ಷನರ್‌ಗಳು – ಇತರರು
  • ಶೆಡ್ಯೂಲ್ FAಗೆ ಕ್ಯಾಲೆಂಡರ್ ವರ್ಷದಲ್ಲಿ ಹೊಂದಿರುವ ವಿದೇಶಿ ಅಸೆಟ್‌ಗಳ ಡಿಸ್‌ಕ್ಲೋಷರ್‌ನ ಅಗತ್ಯವಿದೆ:
    • ನಿವಾಸಿ ಟ್ಯಾಕ್ಸ್‌ಪೇಯರ್‌ ತನ್ನ ವಿದೇಶಿ ಅಸೆಟ್‌ಗಳನ್ನು ಮತ್ತು ಶೆಡ್ಯೂಲ್ FA ಅಡಿಯಲ್ಲಿ ಗಳಿಸಿದ ಎಲ್ಲಾ ವಿದೇಶಿ ಇನ್‌ಕಮ್‌ ಅನ್ನು ಹೊಸ ಐಟಿಆರ್ ಫಾರ್ಮ್‌ಗಳಲ್ಲಿ ಬಹಿರಂಗಪಡಿಸಬೇಕಾಗುತ್ತದೆ.
    • ಟ್ಯಾಕ್ಸ್‌ಪೇಯರ್‌ ವಿದೇಶಿ ಅಸೆಟ್‌ನ ಬೆನಿಫೀಷಿಯಲ್ ಮಾಲೀಕರಾಗಿದ್ದರೂ ಅಥವಾ ವಿದೇಶಿ ಘಟಕದಲ್ಲಿ ಯಾವುದೇ ಹಣಕಾಸಿನ ಇಂಟರೆಸ್ಟ್ ಅನ್ನು ಹೊಂದಿದ್ದರೂ ಸಹ, ಅವರು ಐಟಿಆರ್‌ ರೂಪದಲ್ಲಿ ಸಮರ್ಪಕ ವರದಿಯನ್ನು ಒದಗಿಸಬೇಕಾಗುತ್ತದೆ.
    • ಇದಲ್ಲದೆ, ಭಾರತದ ಹೊರಗೆ ರಚಿಸಲಾದ ಟ್ರಸ್ಟ್‌ಗಳಲ್ಲಿ ವಿದೇಶಿ ಈಕ್ವಿಟಿ ಮತ್ತು ಲೋನ್‌ ಇಂಟರೆಸ್ಟ್‌ನಂತಹ ವಿದೇಶಿ ಅಸೆಟ್‌ಗಳನ್ನು ಹೊಂದಿದ್ದರೆ ಅಸೆಸ್ಸೀ ಮಾಹಿತಿಯನ್ನು ಬಹಿರಂಗಪಡಿಸಬೇಕಾಗುತ್ತದೆ. ಹೆಚ್ಚುವರಿಯಾಗಿ, ವಿದೇಶಿ ಡೆಪಾಸಿಟ್ ಖಾತೆಯ ಬಗ್ಗೆ ಮಾಹಿತಿ, ಅಪ್ಲಿಕೇಬಲ್ ಆದರೆ, ಅಗತ್ಯವಿದೆ.

ಮೌಲ್ಯಮಾಪನ ವರ್ಷ 2020-21ಗಾಗಿ ಐಟಿಆರ್-2ನಲ್ಲಿ ಗಮನಾರ್ಹ ಬದಲಾವಣೆಗಳು

ಮೌಲ್ಯಮಾಪನ ವರ್ಷ 2020-21ಗೆ ಐಟಿಆರ್-2 ಹಲವಾರು ಗಮನಾರ್ಹ ಬದಲಾವಣೆಗಳಿಗೆ ಒಳಗಾಯಿತು, ಅವುಗಳಲ್ಲಿ ಅತ್ಯಂತ ಗಮನಾರ್ಹವಾದವುಗಳನ್ನು ಕೆಳಗೆ ಹೈಲೈಟ್ ಮಾಡಲಾಗಿದೆ:

  • ಆರ್‌ಎನ್‌ಓಆರ್‌ಗಳು ಮತ್ತು ಎನ್‌ಆರ್‌ಐಗಳು ತಮ್ಮ ಒಟ್ಟು ಇನ್‌ಕಮ್‌ ₹50,00,000 ಮೀರದಿದ್ದರೂ ಕಡ್ಡಾಯವಾಗಿ ಐಟಿಆರ್‌-2 ಅನ್ನು ಫೈಲ್ ಮಾಡಬೇಕು. ಹೀಗಾಗಿ, ಎನ್‌ಆರ್‌ಐಗಾಗಿ ಐಟಿಆರ್‌-2 ಅನ್ನು ಫೈಲ್ ಮಾಡುವುದು ಹೇಗೆ ಎಂದು ನೀವು ತಿಳಿದುಕೊಳ್ಳಬೇಕಾಗಬಹುದು.
  • ಒಂದಕ್ಕಿಂತ ಹೆಚ್ಚು ವಸತಿ/ಮನೆ ಪ್ರಾಪರ್ಟಿಯನ್ನು ಪಾವತಿಸಬೇಕಾದ ವೈಯಕ್ತಿಕ ಟ್ಯಾಕ್ಸ್‌ಪೇಯರ್‌ ಈಗ ಐಟಿಆರ್-2 ಫಾರ್ಮ್ ಅನ್ನು ಫೈಲ್ ಮಾಡಬೇಕಾಗುತ್ತದೆ.
  • ಒಬ್ಬ ವ್ಯಕ್ತಿಯು ಕಂಪನಿಯಲ್ಲಿ ಡೈರೆಕ್ಟರ್ ಸ್ಥಾನವನ್ನು ಹೊಂದಿದ್ದರೆ ಅಥವಾ ಪಟ್ಟಿ ಮಾಡದ ಈಕ್ವಿಟಿ ಇನ್‌ವೆಸ್ಟ್‌ಮೆಂಟ್‌ಗಳನ್ನು ಹೊಂದಿದ್ದರೆ, ಅವನು/ಅವಳು 'ಕಂಪನಿಯ ಟೈಪ್' ಅನ್ನು ಬಹಿರಂಗಪಡಿಸಬೇಕು.
  • ಐಟಿಆರ್-2 ಅನ್ನು ಫೈಲ್ ಮಾಡಲು ಲಯಬಲ್‌ ಆಗಿರುವ ಟ್ಯಾಕ್ಸ್‌ಪೇಯರ್‌ ಈ ಕೆಳಗಿನ ಮಾಹಿತಿಯನ್ನು ಕಡ್ಡಾಯವಾಗಿ ಬಹಿರಂಗಪಡಿಸಬೇಕು:
    • ₹2,00,000 ಮೀರಿದ ವಿದೇಶಿ ಪ್ರಯಾಣದ ವೆಚ್ಚ.
    • ಕರೆಂಟ್ ಖಾತೆಯಲ್ಲಿ ₹1 ಕೋಟಿಗಿಂತ ಹೆಚ್ಚಿನ ಕ್ಯಾಶ್ ಡೆಪಾಸಿಟ್‌ಗಳು.
    • ₹2,00,000 ಮೀರಿದ ವಿದ್ಯುತ್ ವೆಚ್ಚ.
  • ಒಟ್ಟು ₹50,00,000ಕ್ಕಿಂತ ಹೆಚ್ಚು ಇನ್‌ಕಮ್‌ ಹೊಂದಿರುವ ನಿವಾಸಿ ವ್ಯಕ್ತಿಗಳಿಗೆ ಐಟಿಆರ್‌-2 ಅಪ್ಲಿಕೇಬಲ್ ಆಗುತ್ತದೆ.
  • ಟ್ಯಾಕ್ಸ್ ಡಿಡಕ್ಷನ್‌ಗಳಿಗಾಗಿ ಶೆಡ್ಯೂಲ್‌ VI-A ಅನ್ನು ತಿದ್ದುಪಡಿ ಮಾಡಲಾಗಿದೆ. ಇದು ಈಗ ಸೆಕ್ಷನ್ 80EEA ಮತ್ತು 80EEB ಅಡಿಯಲ್ಲಿ ಡಿಡಕ್ಷನ್‌ಗಳನ್ನು ಒಳಗೊಂಡಿದೆ.
  • ಅಲ್ಲಿಗೆ ಐಟಿಆರ್-2 ಮೇಲಿನ ನಮ್ಮ ಗೈಡ್ ಮುಕ್ತಾಯವಾಗುತ್ತದೆ. ನಿಮ್ಮ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್‌ಗಳನ್ನು ಫೈಲ್ ಮಾಡುವ ಪ್ರೊಸೆಸ್ ಅನ್ನು ಸರಳಗೊಳಿಸಲು ನೀವು ಈಗ ಈ ಮಾಹಿತಿಯನ್ನು ಬಳಸಬಹುದು.

[ಮೂಲ 1]

[ಮೂಲ 2]

[ಮೂಲ 3]

ಪದೇ ಪದೇ ಕೇಳಲಾದ ಪ್ರಶ್ನೆಗಳು

ಐಟಿಆರ್-2 ಫಾರ್ಮ್ ಅನ್ನು ನಾನು ಎಲ್ಲಿ ಡೌನ್‌ಲೋಡ್ ಮಾಡಬಹುದು?

ಐಟಿಆರ್‌-2 ಫಾರ್ಮ್ ಅನ್ನು ಡೌನ್‌ಲೋಡ್ ಮಾಡಲು ನೀವು ಅಧಿಕೃತ ಇನ್‌ಕಮ್‌ ಟ್ಯಾಕ್ಸ್‌ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ನಾನು ಐಟಿಆರ್‌-2 ಅನ್ನು ಆನ್‌ಲೈನ್‌ನಲ್ಲಿ ಸಬ್‌ಮಿಟ್‌ ಮಾಡಬಹುದೇ?

ಹೌದು, ನೀವು ನಿಮ್ಮ ಐಟಿಆರ್‌-2 ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಸಬ್‌ಮಿಟ್‌ ಮಾಡಬಹುದು. ವಾಸ್ತವವಾಗಿ, 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಟ್ಯಾಕ್ಸ್‌ಪೇಯರ್‌ಗಳು ಮಾತ್ರ ಐಟಿಆರ್‌-2 ಅನ್ನು ಆಫ್‌ಲೈನ್‌ನಲ್ಲಿ ಸಬ್‌ಮಿಟ್‌ ಮಾಡಬಹುದು.

ಐಟಿಆರ್‌-2 ಅನ್ನು ಯಾರು ಫೈಲ್ ಮಾಡಬಹುದು?

'ಬಿಸಿನೆಸ್ ಅಥವಾ ವೃತ್ತಿಯಿಂದ ಲಾಭಗಳು ಮತ್ತು ಗೇನ್ಸ್' ಶೀರ್ಷಿಕೆ ಹೊರತಾಗಿ ಮೂಲದಿಂದ ಇನ್‌ಕಮ್‌ ಅನ್ನು ಗಳಿಸುವ ವ್ಯಕ್ತಿಗಳು ಮತ್ತು ಹೆಚ್‌ಯುಎಫ್‌ಗಳು ಐಟಿಆರ್‌-2 ಅನ್ನು ಫೈಲ್ ಮಾಡಬಹುದು.

[ಮೂಲ]