ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಹಣಕಾಸು ವರ್ಷ 2023-24 (ಮೌಲ್ಯಮಾಪನ ವರ್ಷ 2024-25)ಗೆ ಸೀನಿಯರ್‌ ಸಿಟಿಜನ್‌ಗಳು ಮತ್ತು ಸೂಪರ್ ಸೀನಿಯರ್‌ ಸಿಟಿಜನ್‌ಗಳಿಗೆ ಹೊಸ ಇನ್‌ಕಮ್‌ ಟ್ಯಾಕ್ಸ್‌ ಸ್ಲ್ಯಾಬ್‌ಗಳು

2020-21ರಿಂದ, ಸ್ಯಾಲರಿ ಪಡೆಯುವ ವೈಯಕ್ತಿಕ ಟ್ಯಾಕ್ಸ್‌ಪೇಯರ್‌ಗಳು ಮತ್ತು ಬಿಸಿನೆಸ್ ಇನ್‌ಕಮ್‌ ಹೊಂದಿರದ ಪೆನ್ಷನರ್‌ಗಳು ಎರಡು ಟ್ಯಾಕ್ಸ್ ರೆಜಿಮ್‌ಗಳ ನಡುವೆ ಆಯ್ಕೆ ಮಾಡಬಹುದು. ಅವುಗಳೆಂದರೆ ಹೊಸ ರಿಯಾಯಿತಿ ಟ್ಯಾಕ್ಸ್ ರೆಜಿಮ್ ಮತ್ತು ಅಸ್ತಿತ್ವದಲ್ಲಿರುವ ಹಳೆಯ ರೆಜಿಮ್. 60 ವರ್ಷಕ್ಕಿಂತ ಮೇಲ್ಪಟ್ಟ ಟ್ಯಾಕ್ಸ್‌ಪೇಯರ್‌ಗಳು ಹಣಕಾಸು ವರ್ಷ 2023-24 (ಮೌಲ್ಯಮಾಪನ ವರ್ಷ 2024-25)ಗೆ ಹೊಸ ಇನ್‌ಕಮ್‌ ಟ್ಯಾಕ್ಸ್‌ ಸ್ಲ್ಯಾಬ್‌ಗಳನ್ನು ಹುಡುಕುತ್ತಿದ್ದರೆ, ಓದುವುದನ್ನು ಮುಂದುವರಿಸಿ. ಸೂಪರ್ ಸೀನಿಯರ್‌ ಸಿಟಿಜನ್‌ಗಳಿಗೆ ಟ್ಯಾಕ್ಸ್ ಸ್ಲ್ಯಾಬ್ ಸೇರಿದಂತೆ ಹಲವಾರು ಇತರ ಸಂಬಂಧಿತ ಸಂಗತಿಗಳ ಜೊತೆಗೆ ನೀವು ಇಲ್ಲಿ ಸೀನಿಯರ್‌ ಸಿಟಿಜನ್‌ಗಳಿಗೆ ಹೊಸ ಬಜೆಟ್ ಇನ್‌ಕಮ್‌ ಟ್ಯಾಕ್ಸ್‌ ಸ್ಲ್ಯಾಬ್‌ಗಳನ್ನು ಪಡೆಯುತ್ತೀರಿ!

ಭಾರತದಲ್ಲಿ ಯಾರನ್ನು ಸೀನಿಯರ್‌ ಸಿಟಿಜನ್‌ ಎಂದು ಪರಿಗಣಿಸಲಾಗುತ್ತದೆ?

ಹಿಂದಿನ ಆರ್ಥಿಕ ವರ್ಷದ ಕೊನೆಯ ದಿನದಂದು 60 ವರ್ಷಕ್ಕಿಂತ ಮೇಲ್ಪಟ್ಟ ಆದರೆ 80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ನಿವಾಸಿ ವ್ಯಕ್ತಿಯನ್ನು ಸೀನಿಯರ್‌ ಸಿಟಿಜನ್‌ ಎಂದು ಕಾನೂನು ವಿವರಿಸುತ್ತದೆ.

ಭಾರತದಲ್ಲಿ ಯಾರನ್ನು ಸೂಪರ್ ಸೀನಿಯರ್‌ ಸಿಟಿಜನ್‌ ಎಂದು ಪರಿಗಣಿಸಲಾಗುತ್ತದೆ?

ಹಿಂದಿನ ಆರ್ಥಿಕ ವರ್ಷದ ಕೊನೆಯ ದಿನದಂದು 80 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ನಿವಾಸಿ ವ್ಯಕ್ತಿಯನ್ನು ಕಾನೂನಿನ ಪ್ರಕಾರ ಸೂಪರ್ ಸೀನಿಯರ್ ಸಿಟಿಜನ್ ಎಂದು ಕರೆಯಲಾಗುತ್ತದೆ.

[ಮೂಲ]

ಹಣಕಾಸು ವರ್ಷ 2023-24 (ಮೌಲ್ಯಮಾಪನ ವರ್ಷ 2024-25)ಗೆ ಇನ್‌ಕಮ್‌ ಟ್ಯಾಕ್ಸ್‌ ಸ್ಲ್ಯಾಬ್‌ಗಳು - ಹೊಸ ಟ್ಯಾಕ್ಸ್ ರೆಜಿಮ್ (ಸೀನಿಯರ್ ಮತ್ತು ಸೂಪರ್ ಸೀನಿಯರ್‌ ಸಿಟಿಜನ್‌ಗಳಿಗೆ ಒಂದೇ)

ಕೇಂದ್ರ ಬಜೆಟ್ 2023 ಹೊಸ ಟ್ಯಾಕ್ಸ್ ರೆಜಿಮ್ ಅನ್ನು ಡಿಫಾಲ್ಟ್ ರೆಜಿಮ್ ಆಗಿ ಪರಿಷ್ಕರಿಸಿದೆ, ಇದು ಏಪ್ರಿಲ್ 1, 2023ರಿಂದ ಜಾರಿಗೆ ಬಂದಿದೆ. ಈ ರೆಜಿಮ್ ಅಡಿಯಲ್ಲಿ ಇನ್‌ಕಮ್‌ ಟ್ಯಾಕ್ಸ್‌ ಸ್ಲ್ಯಾಬ್‌ಗಳು ಎಲ್ಲಾ ಟ್ಯಾಕ್ಸ್‌ಪೇಯರ್‌ಗಳಿಗೆ ಅವರ ವಯಸ್ಸನ್ನು ಲೆಕ್ಕಿಸದೆ ಒಂದೇ ಆಗಿರುತ್ತವೆ. 60ರಿಂದ 80 ವರ್ಷ ವಯಸ್ಸಿನ ಸೀನಿಯರ್‌ ಸಿಟಿಜನ್‌ಗಳು ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟ ಸೂಪರ್ ಸೀನಿಯರ್‌ ಸಿಟಿಜನ್‌ಗಳು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪಾವತಿಸುವ ಟ್ಯಾಕ್ಸ್‌ಗಳಷ್ಟನ್ನು ಪಾವತಿಸಬೇಕಾಗುತ್ತದೆ ಎಂದು ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಸೂಚಿಸಲಾಗಿದೆ, ಅವುಗಳೆಂದರೆ:

ಇನ್‌ಕಮ್‌ ಟ್ಯಾಕ್ಸ್‌ ಸ್ಲ್ಯಾಬ್‌ಗಳು ಟ್ಯಾಕ್ಸೇಷನ್ ದರ
₹3,00,000ವರೆಗೆ ನಿಲ್
₹3,00,001 ಮತ್ತು ₹6,00,000 ನಡುವೆ ₹3,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 5%
₹6,00,001 ಮತ್ತು ₹9,00,000 ನಡುವೆ ₹15,000 + ₹6,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 10%
₹9,00,001 ಮತ್ತು ₹12,00,000 ನಡುವೆ ₹9,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 15% + ₹45,000
₹12,00,001 ಮತ್ತು ₹15,00,000 ನಡುವೆ ₹12,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 20% + ₹90,000
₹15,00,000ಕ್ಕಿಂತ ಹೆಚ್ಚು ₹15,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 30% + ₹1,50,000

[ಮೂಲ]

ಹಣಕಾಸು ವರ್ಷ 2023-24 (ಮೌಲ್ಯಮಾಪನ ವರ್ಷ 2024-25)ಗೆ ಸೀನಿಯರ್‌ ಸಿಟಿಜನ್‌ಗಳಿಗೆ ಇನ್‌ಕಮ್‌ ಟ್ಯಾಕ್ಸ್‌ ಸ್ಲ್ಯಾಬ್‌ಗಳು - ಹಳೆಯ ಟ್ಯಾಕ್ಸ್ ರೆಜಿಮ್ (ಸೀನಿಯರ್ ಮತ್ತು ಸೂಪರ್ ಸೀನಿಯರ್‌ ಸಿಟಿಜನ್‌ಗಳಿಗೆ ಭಿನ್ನವಾಗಿದೆ)

60ರಿಂದ 80 ವರ್ಷ ವಯಸ್ಸಿನ ಸೀನಿಯರ್‌ ಸಿಟಿಜನ್‌ಗಳು ಹಳೆಯ ಟ್ಯಾಕ್ಸ್ ರೆಜಿಮ್ ಅನ್ನು ಆರಿಸಿಕೊಂಡರೆ, ಈ ಕೆಳಗಿನ ದರಗಳ ಪ್ರಕಾರ ಹಣಕಾಸು ವರ್ಷ 2023-24ಕ್ಕೆ ರಿಟರ್ನ್ಸ್ ಫೈಲ್ ಮಾಡುವುದು ಅವಶ್ಯವಾಗಿದೆ.

ಇನ್‌ಕಮ್‌ ಟ್ಯಾಕ್ಸ್‌ ಸ್ಲ್ಯಾಬ್‌ಗಳು ಟ್ಯಾಕ್ಸೇಷನ್ ದರ
₹3,00,000ವರೆಗೆ ನಿಲ್
₹3,00,001 ರಿಂದ - ₹5,00,000 ₹3,00,000 ಮೀರಿದರೆ ನಿಮ್ಮ ಒಟ್ಟು ಆದಾಯದ 5%
₹5,00,001 ರಿಂದ - ₹10,00,000 ₹10,000 + ₹5,00,000 ಮೀರಿದ ನಿಮ್ಮ ಒಟ್ಟು ಆದಾಯದ 20%
₹10,00,000ಕ್ಕಿಂತ ಹೆಚ್ಚು ₹1,10,000 + ₹10,00,000 ಮೀರಿದ ನಿಮ್ಮ ಒಟ್ಟು ಆದಾಯದ 30%

ಇದರೊಂದಿಗೆ, ನಿಮಗೆ ಹೆಚ್ಚುವರಿ 4% ಹೆಲ್ತ್ ಮತ್ತು ಎಜುಕೇಷನ್ ಸೆಸ್‌ ವಿಧಿಸಲಾಗುವುದು, ಇದು ಕ್ಯಾಲ್ಕುಲೇಟ್ ಮಾಡಿದ ಟ್ಯಾಕ್ಸ್ ಅಮೌಂಟ್‌ಗೆ ಅಪ್ಲಿಕೇಬಲ್ ಆಗುತ್ತದೆ.

[ಮೂಲ]

ಹಣಕಾಸು ವರ್ಷ 2023-24 (ಮೌಲ್ಯಮಾಪನ ವರ್ಷ 2024-25)ಗೆ ಸೂಪರ್ ಸೀನಿಯರ್‌ ಸಿಟಿಜನ್‌ಗಳಿಗೆ ಇನ್‌ಕಮ್‌ ಟ್ಯಾಕ್ಸ್‌ ಸ್ಲ್ಯಾಬ್‌ಗಳು - ಹಳೆಯ ಟ್ಯಾಕ್ಸ್ ರೆಜಿಮ್

80 ವರ್ಷಕ್ಕಿಂತ ಮೇಲ್ಪಟ್ಟ ಸೀನಿಯರ್‌ ಸಿಟಿಜನ್‌ಗಳಿಗೆ, ಹಣಕಾಸು ವರ್ಷ 2023-24ಗೆ ಹಳೆಯ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಬರುವ ಟ್ಯಾಕ್ಸ್ ದರವು ಈ ಕೆಳಗಿನಂತಿರುತ್ತದೆ:

ಇನ್‌ಕಮ್‌ ಟ್ಯಾಕ್ಸ್‌ ಸ್ಲ್ಯಾಬ್‌ಗಳು ಟ್ಯಾಕ್ಸೇಷನ್ ದರ
₹5,00,000ವರೆಗೆ ನಿಲ್
₹5,00,001 ರಿಂದ - ₹10,00,000 ₹5,00,000 ಮೀರಿದ ನಿಮ್ಮ ಒಟ್ಟು ಆದಾಯದ 20%
₹10,00,000ಕ್ಕಿಂತ ಹೆಚ್ಚು ₹10,00,000 ಮೀರಿದ ನಿಮ್ಮ ಒಟ್ಟು ಆದಾಯದ 30%

ಸೂಪರ್-ಸೀನಿಯರ್‌ ಸಿಟಿಜನ್‌ಗಳು ಕ್ಯಾಲ್ಕುಲೇಟ್ ಮಾಡಿದ ಟ್ಯಾಕ್ಸ್ ಅಮೌಂಟ್ ಮೇಲೆ ಹೆಚ್ಚುವರಿ 4% ಹೆಲ್ತ್ ಮತ್ತು ಎಜುಕೇಷನ್ ಸೆಸ್ ಪಾವತಿಸಲು ಹೊಣೆಗಾರರಾಗುತ್ತಾರೆ. 

[ಮೂಲ]

ಹಣಕಾಸು ವರ್ಷ 2023-24ಗೆ ರೂ.50 ಲಕ್ಷಗಳನ್ನು ಮೀರಿದ ಇನ್‌ಕಮ್‌ಗೆ ಸರ್‌ಚಾರ್ಜ್‌

₹50 ಲಕ್ಷಕ್ಕಿಂತ ಹೆಚ್ಚಿನ ಟ್ಯಾಕ್ಸ್ ವಿಧಿಸಬಹುದಾದ ಇನ್‌ಕಮ್‌ ಅನ್ನು ಹೊಂದಿರುವ ಸೀನಿಯರ್‌ ಮತ್ತು ಸೂಪರ್‌ ಸೀನಿಯರ್‌ ಸಿಟಿಜನ್‌ಗಳು ಎರಡೂ ಆರ್ಥಿಕ ವರ್ಷಗಳ ಟ್ಯಾಕ್ಸ್ ಅನ್ನು ಅಸೆಸ್ ಮಾಡಲು ಕೆಳಗಿನ ಸರ್‌ಚಾರ್ಜ್‌ಗಳನ್ನು ಪರಿಗಣಿಸಬೇಕು. ಈ ಸರ್‌ಚಾರ್ಜ್‌ಗಳು ಏಪ್ರಿಲ್ 1, 2023ರಿಂದ ಜಾರಿಗೆ ಬಂದಿದೆ.

ಹಣಕಾಸು ವರ್ಷ 2023-24(ಮೌಲ್ಯಮಾಪನ ವರ್ಷ 2024-25)ಗೆ, ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ2023ರ ಕೇಂದ್ರ ಬಜೆಟ್ ಪ್ರಕಾರ ₹5 ಕೋಟಿಗಿಂತ ಹೆಚ್ಚಿನ ಇನ್‌ಕಮ್‌ ಮೇಲಿನ ಅತ್ಯಧಿಕ ಸರ್‌ಚಾರ್ಜ್‌ ಅನ್ನು 37% ರಿಂದ 25%ಗೆ ಇಳಿಸಲಾಗಿದೆ, ಇದು ಏಪ್ರಿಲ್ 1, 2023ರಿಂದ ಜಾರಿಗೆ ಬಂದಿದೆ. 2022-23 ಮತ್ತು 2023-24ರ ಆರ್ಥಿಕ ವರ್ಷಗಳಿಗೆ ಉಳಿದ ಸರ್‌ಚಾರ್ಜ್‌ ದರಗಳು ಒಂದೇ ಆಗಿರುತ್ತವೆ.

ಟ್ಯಾಕ್ಸೇಬಲ್ ಇನ್‌ಕಮ್‌ ಸರ್‌ಚಾರ್ಜ್ (ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ)
₹ 50 ಲಕ್ಷಕ್ಕಿಂತ ಹೆಚ್ಚು ಆದರೆ ₹1 ಕೋಟಿಗಿಂತ ಕಡಿಮೆ 10%
₹1 ಕೋಟಿಗಿಂತ ಹೆಚ್ಚು ಆದರೆ ₹2 ಕೋಟಿಗಿಂತ ಕಡಿಮೆ 15%
₹2 ಕೋಟಿಗೂ ಹೆಚ್ಚು 25%

(ಮೇಲಿನ ಹೆಚ್ಚುವರಿ ಸರ್‌ಚಾರ್ಜ್‌ಗಳನ್ನು ಇನ್‌ಕಮ್‌ ಟ್ಯಾಕ್ಸ್‌ ಅಮೌಂಟ್ ಮೇಲೆ ವಿಧಿಸಲಾಗುತ್ತದೆ)

[ಮೂಲ]

ಸೀನಿಯರ್‌ ಸಿಟಿಜನ್‌ಗಳು ಮತ್ತು ಸೂಪರ್ ಹಿರಿಯ ನಾಗರಿಕರಿಗೆ ಹೊಸ ಇನ್‌ಕಮ್‌ ಟ್ಯಾಕ್ಸ್‌ ಅನ್ನು ಹೇಗೆ ಕ್ಯಾಲ್ಕುಲೇಟ್ ಮಾಡಲಾಗುತ್ತದೆ?

ಬೇಸಿಕ್ ಸ್ಯಾಲರಿ, ಫಿಕ್ಸ್‌ಡ್‌ ಅಲೋಯನ್ಸ್‌ಗಳು, ಮನೆ ಬಾಡಿಗೆ ಅಲೋಯನ್ಸ್ ಮತ್ತು ಇತರ ಇನ್‌ಕಮ್‌ ಮೂಲಗಳ ಆಧಾರದಲ್ಲಿ ಸೀನಿಯರ್‌ ಸಿಟಿಜನ್‌ಗಳ ಇನ್‌ಕಮ್‌ ಟ್ಯಾಕ್ಸ್‌ ಅನ್ನು ಕ್ಯಾಲ್ಕುಲೇಟ್ ಮಾಡಲಾಗುತ್ತದೆ. ಸೀನಿಯರ್‌ ಸಿಟಿಜನ್‌ಗಳ ಟ್ಯಾಕ್ಸ್ ಕ್ಯಾಲ್ಕುಲೇಟ್ ಮಾಡುವ ಪ್ರೊಸೀಜರ್ 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೂ ಒಂದೇ ಆಗಿರುತ್ತದೆ.

ಆದಾಗ್ಯೂ, 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹೋಲಿಸಿದರೆ ಹಳೆಯ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಸೀನಿಯರ್ ಮತ್ತು ಸೂಪರ್‌ ಸೀನಿಯರ್‌ ಸಿಟಿಜನ್‌ಗಳಿಗೆ ಹೆಚ್ಚಿನ ವಿನಾಯಿತಿ ಲಿಮಿಟ್ ಅನ್ವಯಿಸುತ್ತದೆ ಎಂಬುದನ್ನು ಗಮನಿಸಬೇಕು.

ಪೆನ್ಷನರ್‌ಗಳು ಅಥವಾ ಸೀನಿಯರ್‌ ಸಿಟಿಜನ್‌ಗಳಿಗೆ ಇನ್‌ಕಮ್‌ ಟ್ಯಾಕ್ಸ್‌ ಅನ್ನು ಪ್ರತಿಯೊಂದು ಇನ್‌ಕಮ್‌ ಮೂಲಕ್ಕೂ ವಿಧಿಸಲಾಗುತ್ತದೆ. ಇದು ಪೆನ್ಷನ್, ಫಿಕ್ಸ್‌ಡ್‌ ಡೆಪಾಸಿಟ್‌ಗಳು, ಅಂಚೆ ಕಚೇರಿ ಸ್ಕೀಮ್‌ಗಳು, ಬಾಡಿಗೆ ಇನ್‌ಕಮ್‌, ಇಂಟರೆಸ್ಟ್ ಅಥವಾ ಉಳಿತಾಯ ಸ್ಕೀನ್‌ಗಳ ಗಳಿಕೆಗಳು ಅಥವಾ ರಿವರ್ಸ್ ಮಾರ್ಟ್‌ಗೇಜ್‌ಗಳನ್ನು ಒಳಗೊಂಡಿರುತ್ತದೆ. ಸೀನಿಯರ್‌ ಸಿಟಿಜನ್‌ಗಳ ಟ್ಯಾಕ್ಸ್ ಕ್ಯಾಲ್ಕುಲೇಷನ್ ಸಮಯದಲ್ಲಿ, ಗ್ರಾಚ್ಯುಯಿಟಿ ಮತ್ತು ನಿವೃತ್ತಿ ಪ್ರಯೋಜನಗಳನ್ನು ಹೊರಗಿಡಬೇಕಾಗುತ್ತದೆ.

ಸೀನಿಯರ್‌ ಸಿಟಿಜನ್‌ಗಳ ಇನ್‌ಕಮ್‌ ಟ್ಯಾಕ್ಸ್‌ ಅನ್ನು ಕ್ಯಾಲ್ಕುಲೇಟ್ ಮಾಡಲು, ಅನುಮತಿಸಬಹುದಾದ ಡಿಡಕ್ಷನ್‌ಗಳು ಮತ್ತು ಸೀನಿಯರ್‌ ಸಿಟಿಜನ್‌ಗಳ ಹಣಕಾಸು ವರ್ಷ 2023-24ನ ಹೊಸ ಇನ್‌ಕಮ್‌ ಟ್ಯಾಕ್ಸ್‌ ಸ್ಲ್ಯಾಬ್‌ ಜೊತೆಗೆ ಸಂಪೂರ್ಣ ಇನ್‌ಕಮ್‌ ಅನ್ನು ಪರಿಗಣಿಸಲಾಗುತ್ತದೆ. ಇನ್‌ಕಮ್‌ ಟ್ಯಾಕ್ಸ್‌ ಕ್ಯಾಲ್ಕುಲೇಟರ್ ಟ್ಯಾಕ್ಸೇಬಲ್‌ ಇನ್‌ಕಮ್‌ ಅನ್ನು ನಿರ್ಧರಿಸಲು ಸೂಕ್ತ ಸಾಧನವಾಗಿದೆ. ನಿಮ್ಮ ಅಂದಾಜು ಟ್ಯಾಕ್ಸ್ ಲಯಬಿಲಿಟಿಯನ್ನು ನೀವು ತಿಳಿದುಕೊಳ್ಳಲು ಬಯಸಿದರೆ, ಈ ಕೆಳಗಿನ ವಿವರಗಳನ್ನು ಒದಗಿಸಬೇಕು:

  • ಇನ್‌ಕಮ್‌ ಟ್ಯಾಕ್ಸ್‌ ಕ್ಯಾಲ್ಕುಲೇಟ್ ಮಾಡಲು ಸೀನಿಯರ್‌ ಸಿಟಿಜನ್‌ಗಳು/ಸೂಪರ್ ಸೀನಿಯರ್‌ ಸಿಟಿಜನ್‌ಗಳು ಸಿದ್ಧರಿರುವ ಅಸೆಸ್‌ಮೆಂಟ್‌ ವರ್ಷ
  • ವಸತಿ ಸ್ಟೇಟಸ್, ಟ್ಯಾಕ್ಸ್‌ಪೇಯರ್‌ ವಿಧ
  • ಸ್ಯಾಲರಿಯಿಂದ ರೂ.50,000 ಸ್ಟಾಂಡರ್ಡ್ ಡಿಡಕ್ಷನ್‌ಗಳು (ಮೌಲ್ಯಮಾಪನ ವರ್ಷ 2024-25ರಿಂದ ಹೊಸ ಟ್ಯಾಕ್ಸ್ ಸ್ಕೀಮ್‌ನ ಅಡಿಯಲ್ಲಿ ಲಭ್ಯವಿದೆ. ಇದು ಮೌಲ್ಯಮಾಪನ ವರ್ಷ 2023-24ರಲ್ಲಿ ಹೊಸ ಟ್ಯಾಕ್ಸ್ ಸ್ಕೀಮ್ ಅಡಿಯಲ್ಲಿ ಲಭ್ಯವಿರಲಿಲ್ಲ.)
  • ಸೀನಿಯರ್‌ ಸಿಟಿಜನ್‌ಗಳಿಗೆ ಅಪ್ಲಿಕೇಬಲ್ ಆಗುವ ಇನ್‌ಕಮ್‌ ಟ್ಯಾಕ್ಸ್‌ ಸ್ಲ್ಯಾಬ್ ಪ್ರಕಾರ ಎಜುಕೇಷನ್ ಸೆಸ್ @ 4%
  • ಸರ್‌ಚಾರ್ಜ್‌ (ಅನ್ವಯವಾದರೆ)
  • ಒಟ್ಟು ಟ್ಯಾಕ್ಸ್ ಲಯಬಿಲಿಟಿ
  • ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ (ಐಟಿಐರ್‌) ಸಲ್ಲಿಸುವ ಅಂತಿಮ ದಿನಾಂಕ
  • ಸ್ಯಾಲರಿಯಿಂದ ಬರುವ ಆದಾಯ
  • ಮನೆ ಪ್ರಾಪರ್ಟಿಯಿಂದ ಆದಾಯ(ಅನ್ವಯವಾದರೆ)
  • ಇತರ ಮೂಲಗಳಿಂದ ಬರುವ ಆದಾಯ ಮತ್ತು ಬಂಡವಾಳ ಲಾಭಗಳು
  • ಯಾವುದೇ ವೃತ್ತಿ ಅಥವಾ ಬಿಸಿನೆಸ್‌ನಿಂದ ಬರುವ ಲಾಭ ಅಥವಾ ಗಳಿಕೆಗಳು
  • ಕೃಷಿ ಇನ್‌ಕಮ್‌ (ಅನ್ವಯವಾದರೆ)
  • ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್‌ಗಾಗಿ ಅಸೆಸ್‌ಮೆಂಟ್‌ ಪೂರ್ಣಗೊಳಿಸುವುದು
  • ಟಿಸಿಎಸ್ ಅಥವಾ ಟಿಡಿಎಸ್ (ಅನ್ವಯವಾದರೆ)

[ಮೂಲ]

ಹೊಸ ಇನ್‌ಕಮ್‌ ಟ್ಯಾಕ್ಸ್‌ ರೆಜಿಮ್‌ನಲ್ಲಿ ಸೀನಿಯರ್‌ ಸಿಟಿಜನ್‌ಗಳು ಮತ್ತು ಸೂಪರ್ ಸೀನಿಯರ್‌ ಸಿಟಿಜನ್‌ಗಳಿಗೆ ಅಪ್ಲಿಕೇಬಲ್ ಆಗುವ ಡಿಡಕ್ಷನ್‌ಗಳು ಯಾವುವು?

ಯೂನಿಯನ್‌ ಬಜೆಟ್ 2023-24ರ ಪ್ರಕಾರ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೀನಿಯರ್‌ ಸಿಟಿಜನ್‌ಗಳಿಗೆ ಅನ್ವಯವಾಗುವ ಡಿಡಕ್ಷನ್‌ಗಳು ಈ ಕೆಳಗಿನಂತಿವೆ:

  • ಪೆನ್ಷನ್: ₹50,000 ಸ್ಟಾಂಡರ್ಡ್ ಡಿಡಕ್ಷನ್ ಅಸ್ತಿತ್ವದಲ್ಲಿರುತ್ತದೆ (ಮೌಲ್ಯಮಾಪನ ವರ್ಷ 2024-25ರಿಂದ ಹೊಸ ಟ್ಯಾಕ್ಸ್ ಸ್ಕೀಮ್ ಅಡಿಯಲ್ಲಿ ಲಭ್ಯವಿದೆ. ಇದು ಮೌಲ್ಯಮಾಪನ ವರ್ಷ 2023-24ರಲ್ಲಿ ಹೊಸ ಟ್ಯಾಕ್ಸ್ ಸ್ಕೀಮ್ ಅಡಿಯಲ್ಲಿ ಲಭ್ಯವಿರಲಿಲ್ಲ) ಕುಟುಂಬ ಪೆನ್ಷನ್‌ಗಳು ಸೇರಿದಂತೆ ಪಿಂಚಣಿದಾರರಿಗೆ ವಾರ್ಷಿಕವಾಗಿ. ಸ್ಯಾಲರಿ ಇನ್‌ಕಮ್‌ನಂತೆಯೇ ಟ್ಯಾಕ್ಸ್‌ನ ವಾರ್ಷಿಕ ಪೇಮೆಂಟ್‌ಗಳ ರೂಪದಲ್ಲಿರುವ ಪೆನ್ಷನ್‌ಗಳಿಗೆ ಇದು ಅನ್ವಯ ಆಗುತ್ತದೆ. ಇದು ಸೆಕ್ಷನ್ 80D ಅಡಿಯಲ್ಲಿ ಬರುತ್ತದೆ.
  • ಸೆಕ್ಷನ್ 87A ಅಡಿಯಲ್ಲಿ ರಿಬೇಟ್: ಹೊಸ ಇನ್‌ಕಮ್‌ ಟ್ಯಾಕ್ಸ್ ರೆಜಿಮ್‌ ಅಡಿಯಲ್ಲಿ, ಹಣಕಾಸು ವರ್ಷ 2023-24 (ಮೌಲ್ಯಮಾಪನ ವರ್ಷ 2024-25)ಗೆ ಸೆಕ್ಷನ್ 87ಎ ಅಡಿಯಲ್ಲಿ ರಿಬೇಟ್ ಅಮೌಂಟ್‌ ಅನ್ನು ಹಣಕಾಸು ವರ್ಷ 2022-23ರಲ್ಲಿ ₹5 ಲಕ್ಷದಿಂದ ₹7 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಹಿಂದೆ ₹12,500 ಇದ್ದಿದ್ದು ಈಗ ₹25,000 ಆಗಿರುವ ಟ್ಯಾಕ್ಸ್ ವಿನಾಯಿತಿಯನ್ನು ಸೀನಿಯರ್‌ ಮತ್ತು ಸೂಪರ್‌ ಸೀನಿಯರ್‌ ಸಿಟಿಜನ್‌ಗಳು ಈಗ ಪಡೆಯಬಹುದು ಎಂಬುದನ್ನು ಇದು ಸೂಚಿಸುತ್ತದೆ. ಆದಾಗ್ಯೂ, ಹಳೆಯ ಟ್ಯಾಕ್ಸ್‌ ರೆಜಿಮ್ ಅಡಿಯಲ್ಲಿ ರಿಬೇಟ್‌ ಅದೇ ಆಗಿರುತ್ತದೆ, ಇದು ₹5 ಲಕ್ಷದವರೆಗಿನ ಟ್ಯಾಕ್ಸೇಬಲ್‌ ಇನ್‌ಕಮ್‌ಗೆ ₹25,000 ಆಗಿದೆ.
  • ಹೆಲ್ತ್‌ ಇನ್ಶೂರೆನ್ಸ್: ಸೆಕ್ಷನ್ 80D ಪ್ರಕಾರ, ಸೀನಿಯರ್‌ ಸಿಟಿಜನ್‌ಗಳು ತಮ್ಮ ಮೆಡಿಕಲ್ ವೆಚ್ಚಗಳು ಮತ್ತು/ಅಥವಾ ಹೆಲ್ತ್‌ ಇನ್ಶೂರೆನ್ಸ್ ಪ್ರೀಮಿಯಂಗಾಗಿ ವಾರ್ಷಿಕ ₹50,000ವರೆಗಿನ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಬಹುದು. ಹೆಚ್ಚುವರಿಯಾಗಿ, ಅವಲಂಬಿತ ಸೀನಿಯರ್‌ಗಳು ಈ ಹಿಂದೆ ಹೇಳಿದಂತೆ ಕ್ರಿಟಿಕಲ್‌ ಇಲ್‌ನೆಸ್‌ಗಳಿಗೆ ಗರಿಷ್ಠ ₹1 ಲಕ್ಷದವರೆಗಿನ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಬಹುದು. ಇದು ಸೆಕ್ಷನ್ 80DDB ಅಡಿಯಲ್ಲಿ ಬರುತ್ತದೆ.

ಹೊಸ ಇನ್‌ಕಮ್‌ ಟ್ಯಾಕ್ಸ್‌ ರೆಜಿಮ್‌ನಲ್ಲಿ ಸೀನಿಯರ್‌ ಸಿಟಿಜನ್‌ಗಳು ಮತ್ತು ಸೂಪರ್ ಸೀನಿಯರ್‌ ಸಿಟಿಜನ್‌ಗಳಿಗೆ ಅನ್ವಯವಾಗುವ ವಿನಾಯಿತಿಗಳು ಯಾವುವು?

ಹೊಸ ಟ್ಯಾಕ್ಸ್‌ ರೆಜಿಮ್‌ ಅನ್ನು ಆಯ್ಕೆಮಾಡುವ ಒಬ್ಬ ವೈಯಕ್ತಿಕ ಟ್ಯಾಕ್ಸ್‌ಪೇಯರ್‌ ಹಳೆಯ ಅಥವಾ ಅಸ್ತಿತ್ವದಲ್ಲಿರುವ ಇನ್‌ಕಮ್‌ ಟ್ಯಾಕ್ಸ್‌ ರೆಜಿಮ್ ಅಡಿಯಲ್ಲಿ ಲಭ್ಯವಿರುವ ಬಹುತೇಕ ಟ್ಯಾಕ್ಸ್ ವಿನಾಯಿತಿ‌ಗಳನ್ನು ತ್ಯಜಿಸಬೇಕಾಗುತ್ತದೆ.

ಹಣಕಾಸು ವರ್ಷ 2023-24ಗೆ ಸೀನಿಯರ್‌ ಸಿಟಿಜನ್‌ಗಳು ಮತ್ತು ಸೂಪರ್ ಸೀನಿಯರ್‌ ಸಿಟಿಜನ್‌ಗಳಿಗೆ ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ, ಈ ಎರಡು ಕೆಟಗರಿಯ ವಯಸ್ಸಿನವರಿಗೆ ಯಾವುದೇ ಹೆಚ್ಚಿಸಿದ ಬೇಸಿಕ್ ವಿನಾಯಿತಿ‌ ಲಿಮಿಟ್ ಅಸ್ತಿತ್ವದಲ್ಲಿಲ್ಲ. ಯಾವುದೇ ವ್ಯಕ್ತಿ, ವಯಸ್ಸಿನ ಹೊರತಾಗಿಯೂ, ನಿರ್ದಿಷ್ಟ ಆರ್ಥಿಕ ವರ್ಷದಲ್ಲಿ ಬೇಸಿಕ್ ವಿನಾಯಿತಿ ಲಿಮಿಟ್ ಆಗಿ ₹3 ಲಕ್ಷಗಳನ್ನು ಹೊಂದಿರುತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ. ಹಣಕಾಸು ವರ್ಷ 2022-23ಗೆ, ಈ ಬೇಸಿಕ್ ವಿನಾಯಿತಿ ಲಿಮಿಟ್ ಅನ್ನು ₹2.5 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಸೀನಿಯರ್‌ ಸಿಟಿಜನ್‌ಗಳು ಮತ್ತು ಸೂಪರ್ ಸೀನಿಯರ್‌ ಸಿಟಿಜನ್‌ಗಳಿಗೆ ಹೊಸ ಇನ್‌ಕಮ್‌ ಟ್ಯಾಕ್ಸ್‌ ರೆಜಿಮ್ ಪ್ರಯೋಜನಗಳು ಯಾವುವು?

ಸೀನಿಯರ್‌ ಸಿಟಿಜನ್‌ಗಳಿಗೆ ಇರುವ ಕೆಲವು ಸಾಮಾನ್ಯ ಪ್ರಯೋಜನಗಳು, ಅವು ಅವರ ಆರ್ಥಿಕ ಜವಾಬ್ದಾರಿಗಳನ್ನು ಸರಾಗಗೊಳಿಸಲು ಸಹಾಯ ಮಾಡಬಹುದು:

● ಸೆಕ್ಷನ್[1] 80TTB ಅಡಿಯಲ್ಲಿ, ಸೀನಿಯರ್‌ ಸಿಟಿಜನ್‌ಗಳು ನಿರ್ದಿಷ್ಟ ಆರ್ಥಿಕ ವರ್ಷದಲ್ಲಿ ಉಳಿತಾಯ ಬ್ಯಾಂಕ್ ಖಾತೆಗಳು, ಬ್ಯಾಂಕ್ ಡೆಪಾಸಿಟ್‌ಗಳು, ಅಂಚೆ ಕಚೇರಿ ಡೆಪಾಸಿಟ್‌ಗಳು ಅಥವಾ ಸಹಕಾರಿ ಬ್ಯಾಂಕ್‌ಗಳಿಂದ ₹50,000ವರೆಗಿನ ಇಂಟರೆಸ್ಟ್ ಯನ್ನು ಗಳಿಸಿದರೆ ಟ್ಯಾಕ್ಸ್ ಪಾವತಿಸುವ ಅಗತ್ಯವಿಲ್ಲ.

● ಸೀನಿಯರ್‌ ಸಿಟಿಜನ್‌ಗಳು ಬಿಸಿನೆಸ್ ಇನ್‌ಕಮ್‌ ಅನ್ನು ಹೊಂದಿಲ್ಲದಿದ್ದರೆ ನಿರ್ದಿಷ್ಟ ಆರ್ಥಿಕ ವರ್ಷಕ್ಕೆ ಮುಂಗಡ ಟ್ಯಾಕ್ಸ್ ಅನ್ನು ಪಾವತಿಸುವುದರಿಂದ ವಿನಾಯಿತಿ ನೀಡಲಾಗುತ್ತದೆ. 

  • ಅವರು ರಿವರ್ಸ್ ಮಾರ್ಟ್‌ಗೇಜ್ ಸ್ಕೀಮ್‌ ಪ್ರಯೋಜನವನ್ನು ಸಹ ಪಡೆಯಬಹುದು, ಅದರ ಅಡಿಯಲ್ಲಿ ಅವರು ಇಎಂಐಗಳನ್ನು ಸ್ವೀಕರಿಸಿದರೆ, ಅಂತಹ ಮನೆ ಟ್ರಾನ್ಸ್‌ಫರ್‌ಗಳ ಮೇಲೆ ಅವರು ಯಾವುದೇ ಬಂಡವಾಳ ಲಾಭದ ಟ್ಯಾಕ್ಸ್ ಅನ್ನು ಪಾವತಿಸಬೇಕಾಗಿಲ್ಲ.
  • ಸೆಕ್ಷನ್ 80DDB ಅಡಿಯಲ್ಲಿ, ಅವರು ನಿರ್ದಿಷ್ಟ ಡಿಸೀಸ್‌ಳಿಗೆ ತಗಲುವ ಮೆಡಿಕಲ್‌ ವೆಚ್ಚಗಳಿಗಾಗಿ ₹1,00,000 ಡಿಡಕ್ಷನ್ ಅನ್ನು ಕ್ಲೈಮ್[2] ಮಾಡಬಹುದು.

[ಮೂಲ]

ಸೀನಿಯರ್‌ ಸಿಟಿಜನ್‌ಗಳು ಮತ್ತು ಸೂಪರ್ ಸೀನಿಯರ್‌ ಸಿಟಿಜನ್‌ಗಳಿಗೆ ಹೊಸ ಇನ್‌ಕಮ್‌ ಟ್ಯಾಕ್ಸ್‌ ರೆಜಿಮ್ ಅಡಿಯಲ್ಲಿ ಯಾವ ಪ್ರಯೋಜನಗಳನ್ನು ಬಿಟ್ಟುಬಿಡುವುದು ಅವಶ್ಯ?

ಹಣಕಾಸು ವರ್ಷ 2023-24ಗೆ ಸೀನಿಯರ್‌ ಸಿಟಿಜನ್‌ಗಳು ಮತ್ತು ಸೂಪರ್‌ ಸೀನಿಯರ್‌ ಸಿಟಿಜನ್‌ಗಳು ಹೊಸ ಟ್ಯಾಕ್ಸ್ ರೆಜಿಮ್ ಅನ್ನು ಆರಿಸಿಕೊಂಡರೆ, ಅವರು ಕೆಲವು ಇನ್‌ಕಮ್‌ ಟ್ಯಾಕ್ಸ್‌ ಪ್ರಯೋಜನಗಳನ್ನು ತ್ಯಜಿಸಬೇಕಾಗುತ್ತದೆ, ಅವುಗಳು ಈ ಕೆಳಗಿನಂತಿವೆ:

  • ಹೌಸ್ ರೆಂಟ್ ಅಲೋಯನ್ಸ್ (ಎಚ್‌ಆರ್‌ಎ)
  • ಲೀವ್ ಟ್ರಾವೆಲ್ ಅಲೋಯನ್ಸ್ (ಎಲ್‌ಟಿಎ)
  • ಇತರ ವಿಶೇಷ ಅಲೋಯನ್ಸ್‌ಗಳು ಒಳಗೊಂಡಿವೆ - ರೀಲೊಕೇಷನ್ ಅಲೋಯನ್ಸ್ ಮತ್ತು ಹೆಲ್ಪರ್ ಅಲೋಯನ್ಸ್.
  • ಮಕ್ಕಳ ಎಜುಕೇಷನ್ ಅಲೋಯನ್ಸ್
  • ಉದ್ಯೋಗದ ಅವಧಿಯಲ್ಲಿನ ದೈನಂದಿನ ವೆಚ್ಚಗಳು
  • ವೃತ್ತಿಪರ ಟ್ಯಾಕ್ಸ್
  • ಸೆಕ್ಷನ್ 24ರ ಅಡಿಯಲ್ಲಿ ಹೌಸಿಂಗ್ ಲೋನ್ ಮೇಲಿನ ಇಂಟರೆಸ್ಟ್ (ಪ್ರಾಪರ್ಟಿ ಸ್ವಯಂ ಆಕ್ರಮಿಸಿಕೊಂಡಿದ್ದರೆ, ಅಂತಹ ಡಿಡಕ್ಷನ್‌ಗಳು ಲಭ್ಯವಿರುವುದಿಲ್ಲ. ಆದಾಗ್ಯೂ, ಲೆಟ್-ಔಟ್ ಪ್ರಾಪರ್ಟಿಯ ಮೇಲಿನ ಇಂಟರೆಸ್ಟ್ ಲಭ್ಯವಿದೆ)
  • 80C, 80D, 80E, 80TTB, ಇತ್ಯಾದಿಗಳಂತಹ ಅಧ್ಯಾಯ VI-A ಅಡಿಯಲ್ಲಿನ ಡಿಡಕ್ಷನ್‌. ಆದಾಗ್ಯೂ, 80CCD(2) ಅಡಿಯಲ್ಲಿ ಅಧಿಸೂಚಿತ ಪೆನ್ಷನ್‌ ಸ್ಕೀಮ್‌ಗಳ ಡಿಡಕ್ಷನ್‌ ಮತ್ತು 80JJAA ಮತ್ತು 80CCH(2) ಅಡಿಯಲ್ಲಿ ಇತರ ಡಿಡಕ್ಷನ್‌ಗಳುಎಲ್ಲಾ ಲಭ್ಯವಿದೆ.

[ಮೂಲ]

ಪದೇ ಪದೇ ಕೇಳಲಾದ ಪ್ರಶ್ನೆಗಳು

ಇನ್‌ಕಮ್‌ ಟ್ಯಾಕ್ಸ್‌ ಕಾನೂನಿನ ಅಡಿಯಲ್ಲಿ ಸೀನಿಯರ್‌ ಸಿಟಿಜನ್‌ಗಳು ಯಾವುದೇ ವಿಶೇಷ ಪ್ರಯೋಜನವನ್ನು ಪಡೆಯಬಹುದೇ?

ಹೌದು, ರಾಷ್ಟ್ರದ ಇನ್‌ಕಮ್‌ ಟ್ಯಾಕ್ಸ್‌ ಕಾನೂನು ಭಾರತದ ಸೀನಿಯರ್‌ ಸಿಟಿಜನ್‌ಗಳ ಕಾಳಜಿ ವಹಿಸುತ್ತದೆ. ಈ ವರ್ಗದ ವ್ಯಕ್ತಿಗಳಿಗೆ ಕಾನೂನು ಹಲವಾರು ಟ್ಯಾಕ್ಸ್ ಪ್ರಯೋಜನಗಳನ್ನು ಒದಗಿಸುತ್ತದೆ. ಸೀನಿಯರ್‌ ಸಿಟಿಜನ್‌ಗಳಿಗೆ ಮೀಸಲಾದ ಪ್ರಯೋಜನಗಳ ವಿಭಾಗವನ್ನು ತಿಳಿದುಕೊಳ್ಳುವುದರಿಂದ ಹೊಸ ಟ್ಯಾಕ್ಸ್ ರೆಜಿಮ್ ಅಡಿಯಲ್ಲಿ ಅಂತಹ ಎಲ್ಲಾ ಪ್ರಯೋಜನಗಳ ಕುರಿತು ತೀರ್ಮಾನ ತೆಗೆದುಕೊಳ್ಳಲು ನಿಮಗೆ ಸಹಾಯ ಆಗುತ್ತದೆ.

ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್‌ನ ಇ-ಫೈಲಿಂಗ್‌ನಿಂದ ಸೂಪರ್ ಸೀನಿಯರ್ ಸಿಟಿಜನ್‌ಗೆ ವಿನಾಯಿತಿ ನೀಡಲಾಗುತ್ತದೆಯೇ?

ಐಟಿಆರ್ ¼ ಫಾರ್ಮ್‌ನಲ್ಲಿ ತಮ್ಮ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಅನ್ನು ಫೈಲ್ ಮಾಡಿರುವ ಸೂಪರ್ ಸೀನಿಯರ್‌ ಸಿಟಿಜನ್‌ಗಳು 2019-20ರ ಅಸೆಸ್‌ಮೆಂಟ್‌ ವರ್ಷದಿಂದ ಪ್ರಾರಂಭವಾಗಿರುವ ಪೇಪರ್ ಮೋಡ್‌ನಲ್ಲಿ ಇನ್‌ಕಮ್‌ ರಿಟರ್ನ್ ಅನ್ನು ಫೈಲ್ ಮಾಡಲು ಅರ್ಹರಾಗಿರುತ್ತಾರೆ. ಇದು ಸೂಪರ್ ಸೀನಿಯರ್ ಸಿಟಿಜನ್ ಐಟಿಆರ್ 1/4 (ಸಂದರ್ಭದಲ್ಲಿ) ಇ-ಫೈಲ್ ಮಾಡುವುದು ಕಡ್ಡಾಯವಲ್ಲ ಎಂಬುದನ್ನು ಸೂಚಿಸುತ್ತದೆ. ಆದಾಗ್ಯೂ, ಅಂತಹ ವ್ಯಕ್ತಿಯು ಇ-ಫೈಲಿಂಗ್‌ ಮಾಡಲು ಬಯಸಿದರೆ, ಅವರು ಹಾಗೆ ಮಾಡಲು ಸ್ವತಂತ್ರರು.

ಐಟಿಆರ್ ಅಥವಾ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಫೈಲ್ ಮಾಡುವುದರಿಂದ ಸೀನಿಯರ್‌ ಸಿಟಿಜನ್‌ಗಳಿಗೆ ವಿನಾಯಿತಿ ಇದೆಯೇ?

1961ರ ಇನ್‌ಕಮ್‌ ಟ್ಯಾಕ್ಸ್‌ ಕಾಯಿದೆಯ ಪ್ರಕಾರ, ಸೀನಿಯರ್ ಮತ್ತು ಸೂಪರ್ ಸೀನಿಯರ್ ಸಿಟಿಜನ್‌ಗಳು ಐಟಿಆರ್ ಫೈಲ್ ಮಾಡುವುದರಿಂದ ವಿನಾಯಿತಿ ಹೊಂದಿಲ್ಲ. ಆದಾಗ್ಯೂ, ಪರಿಹಾರವನ್ನು ಒದಗಿಸಲು ಮತ್ತು 75 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಸೀನಿಯರ್‌ ಸಿಟಿಜನ್‌ಗಳ ಮೇಲೆ ಇರಬಹುದಾದ ಅವಲಂಬನೆ ಹೊರೆಯನ್ನು ಕಡಿಮೆ ಮಾಡಲು, ಫೈನಾನ್ಸ್ ಕಾಯಿದೆ 2021ರಲ್ಲಿ ಹೊಸ ಸೆಕ್ಷನ್, ಸೆಕ್ಷನ್ 194P ಅನ್ನು ಪರಿಚಯಿಸಲಾಗಿದೆ.