ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 24: ಹೌಸಿಂಗ್ ಲೋನ್‌ಗಳಿಂದ ಡಿಡಕ್ಷನ್‌ಗಳ ವಿಧಗಳು

ಮನೆಯನ್ನು ಖರೀದಿಸುವುದು ಗಣನೀಯ ಇನ್ವೆಸ್ಟ್‌ಮೆಂಟ್‌ಗಳನ್ನು ಒಳಗೊಂಡಿರುತ್ತದೆ. ಆದ್ದರಿಂದ, ಹಲವಾರು ಜನರು ಹೋಮ್ ಲೋನ್ ಮೂಲಕ ಹೊರಗಿನಿಂದ ಹಣಕಾಸಿನ ಸಹಾಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 24, ಅರ್ಹ ಸಾಲಗಾರರಿಗೆ ಆ ಹೋಮ್ ಲೋನ್‌ಗೆ ಪಾವತಿಸಿದ ಇಂಟರೆಸ್ಟ್‌ನ ಮೇಲೆ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಆನಂದಿಸಲು ಅನುಮತಿಸುತ್ತದೆ.

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 24 ಎಂದರೇನು?

ಐಟಿ ಆ್ಯಕ್ಟ್‌ನ ಸೆಕ್ಷನ್ 24 ಹೌಸ್ ಪ್ರಾಪರ್ಟಿಯಿಂದ ಬರುವ ಆದಾಯದಿಂದ ಲಭ್ಯವಿರುವ ಡಿಡಕ್ಷನ್‌ಗಳನ್ನು ವಿವರಿಸುತ್ತದೆ. ಇದು ಹೋಮ್ ಲೋನ್‌ನ ಮೇಲಿನ ಇಂಟರೆಸ್ಟ್ ಅನ್ನು ಇತರ ಡಿಡಕ್ಷನ್‌ಗಳ ಜೊತೆಗೆ ಟ್ಯಾಕ್ಸ್ ಡಿಡಕ್ಷನ್‌ಗಳಾಗಿ ಅನುಮತಿಸುತ್ತದೆ. ಒಬ್ಬ ವ್ಯಕ್ತಿಯು ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಕ್ಲೈಮ್‌ ಮಾಡುವ ಮನೆಯಲ್ಲಿ ವಾಸಿಸಲು, ಯಾವುದೇ ಒತ್ತಾಯವಿಲ್ಲ. 

[ಮೂಲ]

ಕೆಳಗಿನ ಕೆಟಗರಿಗಳನ್ನು ಹೌಸಿಂಗ್ ಪ್ರಾಪರ್ಟಿಯಿಂದ ಬರುವ ಇನ್ಕಮ್ ಎಂದು ಪರಿಗಣಿಸಲಾಗುತ್ತದೆ:

  • ಒಬ್ಬ ವ್ಯಕ್ತಿಯು ಮನೆಯನ್ನು ಬಾಡಿಗೆಗೆ ನೀಡಿದರೆ, ಆ ಬಾಡಿಗೆಯನ್ನು ಇನ್ಕಮ್ ಎಂದು ಪರಿಗಣಿಸಲಾಗುತ್ತದೆ.

  • ಒಬ್ಬ ವ್ಯಕ್ತಿಯು ಎರಡಕ್ಕಿಂತ ಹೆಚ್ಚು ಮನೆಗಳನ್ನು ಹೊಂದಿದ್ದರೆ, ಎರಡು ಮನೆ ಪ್ರಾಪರ್ಟಿಗಳನ್ನು ಹೊರತುಪಡಿಸಿ ಎಲ್ಲಾ ಮನೆಗಳ ನೆಟ್ ವಾರ್ಷಿಕ ಮೌಲ್ಯವನ್ನು ಅವನ/ಅವಳ ಇನ್ಕಮ್ ಎಂದು ಪರಿಗಣಿಸಲಾಗುತ್ತದೆ. ಒಬ್ಬ ವ್ಯಕ್ತಿಯು ಎರಡು ಮನೆಗಳವರೆಗೆ ಹೊಂದಿದ್ದಲ್ಲಿ, ಆ ಹೌಸಿಂಗ್ ಪ್ರಾಪರ್ಟಿಯಿಂದ ಅಂದಾಜು ಮಾಡಲಾದ ಆದಾಯವು ಶೂನ್ಯವಾಗಿರುತ್ತದೆ. 

[ಮೂಲ]

ಆದ್ದರಿಂದ, ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 24 ರ ಅಡಿಯಲ್ಲಿ ಡಿಡಕ್ಷನ್‌ಗಳಿಗೆ ಒಳಪಟ್ಟ ನಂತರ, ಹೆಚ್ಚುವರಿ ಹೌಸಿಂಗ್ ಪ್ರಾಪರ್ಟಿಗಳು ಮತ್ತು ಬಾಡಿಗೆ ಇನ್ಕಮ್‌ಗಳ ವಾರ್ಷಿಕ ಮೌಲ್ಯದಿಂದ ಬರುವ ಇನ್ಕಮ್, ಟ್ಯಾಕ್ಸ್‌ಗೆ ಒಳಪಡುತ್ತದೆ ಎಂಬುದನ್ನು ಗಮನಿಸಿ.

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 24 ರ ಅಡಿಯಲ್ಲಿ ಡಿಡಕ್ಷನ್‌ಗಳ ವಿಧಗಳು ಯಾವುವು?

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 24 ರ ಅಡಿಯಲ್ಲಿ ಮೂರು ವಿಧದ ಡಿಡಕ್ಷನ್‌ಗಳನ್ನು ಪರಿಗಣಿಸಲಾಗುತ್ತದೆ:

1. ಸ್ಟ್ಯಾಂಡರ್ಡ್ ಡಿಡಕ್ಷನ್‌

ಟ್ಯಾಕ್ಸ್ ಪೇಯರ್‌ಗಳು ನೆಟ್ ವಾರ್ಷಿಕ ಮೌಲ್ಯದಲ್ಲಿ 30% ರಷ್ಟು ಡಿಡಕ್ಷನ್‌ ಅನ್ನು ಕ್ಲೈಮ್ ಮಾಡಬಹುದು. ಈ ಡಿಡಕ್ಷನ್‌ಗಳು, ರಿಪೇರಿ, ಇನ್ಶೂರೆನ್ಸ್ ಇತ್ಯಾದಿಗಳ ಮೇಲಿನ ನೈಜ ವೆಚ್ಚಗಳನ್ನು ಲೆಕ್ಕಿಸದೆಯೇ ಅನ್ವಯಿಸುತ್ತದೆ. ಹಾಗಾಗಿ ಸ್ವಯಂ-ನೆಲೆಸಿರುವ ಮನೆಯ ವಾರ್ಷಿಕ ನೆಟ್ ಮೌಲ್ಯವು ಶೂನ್ಯವಾಗಿರುವುದರಿಂದ, ಸ್ಟ್ಯಾಂಡರ್ಡ್ ಡಿಡಕ್ಷನ್‌ ಡೀಫಾಲ್ಟ್ ಆಗಿ ಶೂನ್ಯವಾಗಿರುತ್ತದೆ.

2. ಸೆಕ್ಷನ್ 24 ರ ಅಡಿಯಲ್ಲಿ ಹೌಸಿಂಗ್ ಲೋನ್ ಮೇಲಿನ ಇಂಟರೆಸ್ಟ್ ಮೇಲಿನ ಡಿಡಕ್ಷನ್‌

ಸಾಲಗಾರರು ಹೌಸಿಂಗ್ ಲೋನ್ ಮೇಲಿನ ಇಂಟರೆಸ್ಟ್‌ನ ಮೇಲೆ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಆನಂದಿಸಬಹುದು. ಸ್ವಯಂ-ನೆಲೆಸಿರುವ ಹೌಸ್ ಪ್ರಾಪರ್ಟಿಗಳಿಗೆ ₹ 2,00,000 ವರೆಗೆ ಡಿಡಕ್ಷನ್‌ಗಳು ಲಭ್ಯವಿವೆ. ಆದರೆ ಬಾಡಿಗೆಗೆ ನೀಡಿರುವ ಪ್ರಾಪರ್ಟಿ ಮೇಲಿನ ಡಿಡಕ್ಷನ್‌ಗಳಿಗೆ ಯಾವುದೇ ಲಿಮಿಟ್ ಇಲ್ಲ. ಅವರು ಹೋಮ್ ಲೋನ್ ಅನ್ನು ಸಾಲವಾಗಿ ಪಡೆದಿರುವ ಆ ಮನೆಯಲ್ಲಿ ವಾಸಿಸುವವರಿಗೆ ಇದು ಅನ್ವಯಿಸುತ್ತದೆ ಮತ್ತು ಇದು ಕೂಡ ಖಾಲಿ ಮನೆಗಳಿಗೆ ಮಾತ್ರ ವ್ಯಾಲಿಡ್ ಆಗಿರುತ್ತದೆ. ಒಬ್ಬ ವ್ಯಕ್ತಿಯು ಮನೆಯನ್ನು ಬಾಡಿಗೆಗೆ ಪಡೆದರೆ, ಹೌಸ್ ಲೋನ್‌ನ ಸಂಪೂರ್ಣ ಇಂಟರೆಸ್ಟ್, ಇನ್ಕಮ್ ಟ್ಯಾಕ್ಸ್ ಡಿಡಕ್ಷನ್‌ಗಳಿಗೆ ಅರ್ಹವಾಗಿದೆ.

3. ಮುನ್ಸಿಪಲ್ ಟ್ಯಾಕ್ಸ್ ಡಿಡಕ್ಷನ್‌

ಆಯಾ ಪ್ರದೇಶದ ಮುನ್ಸಿಪಲ್ ಕಾರ್ಪೊರೇಶನ್‌ಗೆ ವಾರ್ಷಿಕವಾಗಿ ಮುನ್ಸಿಪಲ್ ಟ್ಯಾಕ್ಸ್ ಅನ್ನು ಪಾವತಿಸಲು ವ್ಯಕ್ತಿಗಳು ಜವಾಬ್ದಾರರಾಗಿರುತ್ತಾರೆ. ಹೌಸಿಂಗ್ ಪ್ರಾಪರ್ಟಿಯ ನೆಟ್ ವಾರ್ಷಿಕ ಮೌಲ್ಯವನ್ನು ಪಡೆಯಲು ಈ ಮುನ್ಸಿಪಲ್ ಟ್ಯಾಕ್ಸ್ ಅನ್ನು ಒಟ್ಟು ವಾರ್ಷಿಕ ಮೌಲ್ಯದಿಂದ ಕಳೆಯಲಾಗುತ್ತದೆ. ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಮನ್ಸಿಪಲ್ ಟ್ಯಾಕ್ಸ್ ಅನ್ನು ಪಾವತಿಸಿದ ಮನೆ ಮಾಲೀಕರು, ಆ ವರ್ಷದಲ್ಲಿ ಮುನ್ಸಿಪಲ್ ಟ್ಯಾಕ್ಸ್‌ನಲ್ಲಿ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಬಹುದು. 

[ಮೂಲ]

ಹೋಮ್ ಲೋನ್ ಇಂಟರೆಸ್ಟ್‌ನ ಮೇಲಿನ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಲು ಇರುವ ಕಂಡೀಶನ್‌ಗಳು ಯಾವುವು?

ಸ್ವಯಂ-ನೆಲೆಸಿರುವ ಹೌಸ್ ಪ್ರಾಪರ್ಟಿಗಳ ಮೇಲೆ ₹ 2,00,000 ವರೆಗಿನ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಲು, ವ್ಯಕ್ತಿಗಳು ಈ ಕೆಳಗಿನ ಕಂಡೀಶನ್‌ಗಳನ್ನು ಪೂರೈಸಬೇಕಾಗುತ್ತದೆ:

  • ವ್ಯಕ್ತಿಗಳು ಹೌಸಿಂಗ್ ಪ್ರಾಪರ್ಟಿಯನ್ನು ನಿರ್ಮಿಸಲು ಅಥವಾ ಖರೀದಿಸಲು 1ನೇ ಏಪ್ರಿಲ್ 1999 ರಂದು ಅಥವಾ ಅದರ ನಂತರದಲ್ಲಿ ಸಾಲವಾಗಿ ಪಡೆದ ಹೋಮ್ ಲೋನ್.

  • ಒಬ್ಬ ವ್ಯಕ್ತಿಯು ಈ ಲೋನ್ ಅನ್ನು ಸಾಲವಾಗಿ ಪಡೆದ ಹಣಕಾಸು ವರ್ಷದಿಂದ 5 ವರ್ಷಗಳಲ್ಲಿ (ಅದು ಮೊದಲು 2015-2016 ರ ವರೆಗೆ 3 ವರ್ಷಗಳಾಗಿತ್ತು) ಮನೆಯನ್ನು ಸ್ವಾಧೀನಪಡಿಸಿಕೊಳ್ಳಬೇಕು ಅಥವಾ ನಿರ್ಮಿಸಬೇಕು.

  • ಸಾಲವಾಗಿ ಪಡೆದ ಫಂಡ್‌ಗಾಗಿ ಪಾವತಿಸಬೇಕಾದ ಇಂಟರೆಸ್ಟ್‌ನ ಮೌಲ್ಯಮಾಪನ ಮಾಡುವವರು ಇಂಟರೆಸ್ಟ್ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು. 

[ಮೂಲ]

ಐಟಿಎ (ITA) ಯ ಸೆಕ್ಷನ್ 24 ರ ಅಡಿಯಲ್ಲಿ ಹೊರತುಪಡಿಸಿದ ಸಂದರ್ಭಗಳು ಯಾವುವು?

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 24 ರ ಅಡಿಯಲ್ಲಿ ಕೆಲವು ಹೊರತುಪಡಿಸಿದ ನಿಯಮಗಳು ಇಲ್ಲಿವೆ:

  • ಮಾಲೀಕರು ಲೆಟ್ ಔಟ್ ಹೌಸ್ ಪ್ರಾಪರ್ಟಿಯನ್ನು ಹೊಂದಿದ್ದರೆ, ಅವರು ಹೋಮ್ ಲೋನ್‌ಗಾಗಿ ಪಾವತಿಸಿದ ಒಟ್ಟಾರೆ ಇಂಟರೆಸ್ಟ್‌ಗೆ ಮೇಲಿನ ಲಿಮಿಟ್ ಇಲ್ಲದೆ, ಇನ್ಕಮ್ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಬಹುದು.

  • ವ್ಯಕ್ತಿಗಳು ತಮ್ಮ ಉದ್ಯೋಗ ಅಥವಾ ಬಿಸಿನೆಸ್‌ನ ಉದ್ದೇಶದ ಕಾರಣದಿಂದಾಗಿ, ಇತರ ನಗರಗಳ ಮನೆಯಲ್ಲಿ ನೆಲೆಸಿರದಿದ್ದರೆ ಮತ್ತು ಬಾಡಿಗೆ ಪ್ರಾಪರ್ಟಿಯಲ್ಲಿ ವಾಸಿಸುತ್ತಿದ್ದರೆ, ಅವರು ಹೋಮ್ ಲೋನ್‌ಗಾಗಿ ಪಾವತಿಸಿದ ಇಂಟರೆಸ್ಟ್‌ನ ಮೇಲೆ ₹ 2,00,000 ವರೆಗೆ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಬಹುದು. ಇದನ್ನು ಈಗಲೂ ಸ್ವಯಂ ನೆಲೆಸಿರುವ ಪ್ರಾಪರ್ಟಿ ಎಂದು ಪರಿಗಣಿಸಬಹುದು. 

  • ಬಾಡಿಗೆದಾರರನ್ನು ಅರೇಂಜ್ ಮಾಡಲು ಅಥವಾ ಲೋನ್‌ಗಾಗಿ ಪಾವತಿಸಬೇಕಾದ ಹೆಚ್ಚುವರಿ ಶುಲ್ಕಗಳಿಗಾಗಿ, ಬ್ರೋಕರೇಜ್‌ನಲ್ಲಿ ಉಂಟಾದ ವೆಚ್ಚಗಳಿಗೆ ಸೆಕ್ಷನ್ 24 ರ ಅಡಿಯಲ್ಲಿ ಯಾವುದೇ ಡಿಡಕ್ಷನ್‌ಗಳಿಲ್ಲ. 

  • ವ್ಯಕ್ತಿಗಳು ಮನೆಯನ್ನು ನಿರ್ಮಿಸಲು ಅಥವಾ ಖರೀದಿಸಲು ಹೋಮ್ ಲೋನ್ ಅನ್ನು ಸಾಲವಾಗಿ ಪಡೆದಾಗ, ಅವರು ಪ್ರಾಪರ್ಟಿಯನ್ನು ನಿರ್ಮಿಸಿದ ಐದು ವರ್ಷಗಳವರೆಗೆ ಹೋಮ್ ಲೋನ್‌ಗೆ ಪಾವತಿಸಬೇಕಾದ ಇಂಟರೆಸ್ಟ್‌ನ ಮೇಲೆ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಬಹುದು. 

ಈ ಡಿಡಕ್ಷನ್‌ಗಳನ್ನು ಪ್ರತಿ ಹಣಕಾಸು ವರ್ಷಕ್ಕೆ 5 ಸಮಾನ ಕಂತುಗಳಲ್ಲಿ ವ್ಯವಸ್ಥೆಗೊಳಿಸಲಾಗುತ್ತದೆ. ಮೊದಲ ಕಂತನ್ನು ಮನೆ ನಿರ್ಮಾಣ ಅಥವಾ ಮನೆ ಖರೀದಿ ಪೂರ್ಣಗೊಂಡ ವರ್ಷದಲ್ಲಿ ಸ್ವೀಕರಿಸುತ್ತಾರೆ.

ಆದಾಗ್ಯೂ, ಒಬ್ಬ ವ್ಯಕ್ತಿಯು ಹೋಮ್ ಲೋನ್‌ನ ಅಡಿಯಲ್ಲಿ ಮಂಜೂರಾದ ಫಂಡ್ ಅನ್ನು ಅಸ್ತಿತ್ವದಲ್ಲಿರುವ ಮನೆಯನ್ನು ದುರಸ್ತಿ ಮಾಡಲು ಅಥವಾ ಮರುನಿರ್ಮಾಣ ಮಾಡಲು ಬಳಸಿದರೆ ಇದು ಅನ್ವಯಿಸುವುದಿಲ್ಲ. ಈ ಸಂದರ್ಭದಲ್ಲಿ ಗರಿಷ್ಠ ಡಿಡಕ್ಷನ್‌ನ ಲಿಮಿಟ್ ₹ 2,00,000 ವರೆಗೆ ಇರುವುದಿಲ್ಲ, ಬದಲಿಗೆ ಅದು ₹30,000 ಆಗಿರುತ್ತದೆ. 

[ಮೂಲ]

ಹೌಸಿಂಗ್ ಪ್ರಾಪರ್ಟಿಯಿಂದ ಪಡೆದ ಇನ್ಕಮ್ ಅನ್ನು ಕ್ಯಾಲ್ಕುಲೇಶನ್ ಮಾಡುವುದು ಹೇಗೆ?

ಹೌಸಿಂಗ್ ಪ್ರಾಪರ್ಟಿಯಿಂದ ಪಡೆದ ಇನ್ಕಮ್ ಅನ್ನು ಹೇಗೆ ಕ್ಯಾಲ್ಕುಲೇಶನ್ ಮಾಡುವುದು ಎಂಬುದನ್ನು ಅರ್ಥಮಾಡಿಕೊಳ್ಳಲು, ನಾವು ಒಂದು ಉದಾಹರಣೆಯನ್ನು ನೋಡೋಣ:

ಶ್ರೀ ಅಮಿತ್ ₹ 4,00,000 ಹೋಮ್ ಲೋನ್ ಅನ್ನು ತೆಗೆದುಕೊಳ್ಳುತ್ತಾರೆ ಮತ್ತು ಅವರು ವಾರ್ಷಿಕವಾಗಿ ಪಾವತಿಸುವ ಇಂಟರೆಸ್ಟ್ ₹ 2,00,000 ಮತ್ತು ಹೌಸಿಂಗ್ ಪ್ರಾಪರ್ಟಿಯು ನಿರ್ಮಾಣ ಹಂತದಲ್ಲಿದ್ದಾಗ, ₹1,50,000 ಇಂಟರೆಸ್ಟ್ ಅನ್ನು ಪಾವತಿಸಿದರು. ಪ್ರಾಪರ್ಟಿಯಿಂದ ಅವರ ತಿಂಗಳ ಬಾಡಿಗೆ ಇನ್ಕಮ್ ₹30,000. ಮನೆಗೆ ಮುನ್ಸಿಪಲ್ ಟ್ಯಾಕ್ಸ್ ಆಗಿ ₹10 ಸಾವಿರ ಪಾವತಿಸುತ್ತಾರೆ. ಈಗ, ಎರಡು ಅಂಶಗಳ ಆಧಾರದ ಮೇಲೆ ಅವರ ಇನ್ಕಮ್ ಅನ್ನು ಕ್ಯಾಲ್ಕುಲೇಟ್ ಮಾಡೋಣ -

  • ಸ್ವಯಂ ನೆಲೆಸಿರುವ ಪ್ರಾಪರ್ಟಿ

  • ಬಾಡಿಗೆಯ ಪ್ರಾಪರ್ಟಿ

ಹೌಸಿಂಗ್ ಪ್ರಾಪರ್ಟಿಯಿಂದ ಗಳಿಸಿದ ಒಟ್ಟು ಇನ್ಕಮ್ ಅನ್ನು ಕ್ಯಾಲ್ಕುಲೇಟ್ ಮಾಡುವ ಫಾರ್ಮುಲಾ ಹೀಗಿದೆ -

ಹೌಸಿಂಗ್ ಪ್ರಾಪರ್ಟಿಯಿಂದ ಇನ್ಕಮ್ = ( ವಾರ್ಷಿಕ ನೆಟ್ ಮೌಲ್ಯ - ಸ್ಟ್ಯಾಂಡರ್ಡ್ ಡಿಡಕ್ಷನ್) - (ಹೋಮ್ ಲೋನ್ ಇಂಟರೆಸ್ಟ್ + ಪ್ರೀ ಕನ್ಸ್ಟ್ರಕ್ಷನ್ ಇಂಟರೆಸ್ಟ್). 

[ಮೂಲ]

ಫಲಿತಾಂಶಗಳನ್ನು ಕೆಳಗೆ ಸೂಚಿಸಲಾದ ಟೇಬಲ್ ಮೂಲಕ ತೋರಿಸಲಾಗಿದೆ:

ಕ್ಯಾಲ್ಕುಲೇಷನ್‌ ವಿವರಗಳು ಬಾಡಿಗೆಯ ಪ್ರಾಪರ್ಟಿ ಸ್ವಯಂ ನೆಲೆಸಿರುವ ಪ್ರಾಪರ್ಟಿ
ಒಟ್ಟು ವಾರ್ಷಿಕ ಮೌಲ್ಯ (ಬಾಡಿಗೆ ಇನ್ಕಮ್ = ₹ 30000*12) ₹ 3,60,000 ನಿಲ್
ಕಳೆಯಿರಿ: ಮುನ್ಸಿಪಲ್ ಟ್ಯಾಕ್ಸ್‌ಗಳು ₹ 10,000 ನಿಲ್
ಎನ್ಎವಿ ಅಥವಾ ನೆಟ್ ವಾರ್ಷಿಕ ಮೌಲ್ಯ ₹ 3,50,000 ನಿಲ್
ಕಳೆಯಿರಿ: ಸ್ಟ್ಯಾಂಡರ್ಡ್ ಡಿಡಕ್ಷನ್ (ನೆಟ್ ವಾರ್ಷಿಕ ಮೌಲ್ಯದ 30%) ₹ 1,05,000 ಎನ್‌ಎ
ಕಳೆಯಿರಿ: ಹೋಮ್ ಲೋನ್ ಇಂಟರೆಸ್ಟ್ ₹ 2,00,000 ₹ 2,00,000
ಕಳೆಯಿರಿ: ಪ್ರೀ ಕನ್ಸ್ಟ್ರಕ್ಷನ್ ಇಂಟರೆಸ್ಟ್ (₹ 1,50,000 ರಲ್ಲಿ 1/5) ₹ 30,000 ₹ 30,000
ಹೌಸಿಂಗ್ ಪ್ರಾಪರ್ಟಿಯಿಂದ ಗಳಿಸಿದ ಒಟ್ಟು ಇನ್ಕಮ್ ₹ 15,000 -₹ 2,30,000
ಒಟ್ಟು ನಷ್ಟದ ಮೊತ್ತದ ಲಿಮಿಟ್ - ₹ 2,00,000

ವ್ಯಕ್ತಿಗಳು ₹ 2,00,000 ವರೆಗಿನ ಇತರ ಇನ್ಕಮ್ ಮೂಲಗಳೊಂದಿಗೆ, ಹೌಸಿಂಗ್ ಪ್ರಾಪರ್ಟಿಯ ಮೂಲಕ ಗಳಿಸಿದ ಇನ್ಕಮ್‌ನಲ್ಲಿನ ಒಟ್ಟು ನಷ್ಟವನ್ನು ಅಡ್ಜಸ್ಟ್ ಮಾಡಬಹುದು. ಅವರು ಉಳಿದ ನಷ್ಟವನ್ನು 8 ವರ್ಷಗಳವರೆಗೆ ಕ್ಯಾರಿ ಫಾರ್ವರ್ಡ್ ಮಾಡಬಹುದು. ಆದಾಗ್ಯೂ, ಅವರು ಈ ಉಳಿದ ಮೊತ್ತವನ್ನು ಹೌಸಿಂಗ್ ಪ್ರಾಪರ್ಟಿಯಿಂದ ಗಳಿಸಿದ ಇನ್ಕಮ್‌ನ ವಿರುದ್ಧ ಮಾತ್ರ ಅಡ್ಜಸ್ಟ್ ಮಾಡಬಹುದು. 

[ಮೂಲ]

ಇಲ್ಲಿಯವರೆಗೂ ನೀವು ಓದಿದ್ದು ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 24 ರ ಕುರಿತ ಮಾಹಿತಿ. ಹೆಚ್ಚುವರಿಯಾಗಿ, ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಹೌಸಿಂಗ್ ಪ್ರಾಪರ್ಟಿಯಿಂದ ಗಳಿಸಿದ ಒಟ್ಟು ಇನ್ಕಮ್ ಅನ್ನು ಕ್ಯಾಲ್ಕುಲೇಟ್ ಮಾಡುವಾಗ ಈ ಎಲ್ಲ ಪಾಯಿಂಟರ್‌ಗಳನ್ನು ಪರಿಗಣಿಸಿ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಪ್ರಕಾರ 80EE ಮತ್ತು ಸೆಕ್ಷನ್ 24 ಇವುಗಳ ನಡುವಿನ ವ್ಯತ್ಯಾಸವೇನು?

ಐಟಿಎ ನ ಸೆಕ್ಷನ್ 80EE ಮತ್ತು 24 ರ ನಡುವಿನ ಪ್ರಾಥಮಿಕ ವ್ಯತ್ಯಾಸವೆಂದರೆ, ವೈಯಕ್ತಿಕ ಟ್ಯಾಕ್ಸ್ ಪೇಯರ್‌ಗಳು ಮೊದಲಿನ ಸಂದರ್ಭದಲ್ಲಿ ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ ₹ 50,000 ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಬಹುದು. ಆ ವ್ಯಕ್ತಿ ಅಥವಾ ಇನ್ನೊಬ್ಬ ಸದಸ್ಯರೊಂದಿಗೆ ಜಂಟಿಯಾಗಿ ಖರೀದಿಸಿದ ಪ್ರಾಪರ್ಟಿಯ ಮೇಲೆ ಇದು ಅನ್ವಯಿಸುತ್ತದೆ. 

ಮತ್ತೊಂದೆಡೆ, ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಪ್ರಕಾರ 24 ರ ಗರಿಷ್ಠ ಡಿಡಕ್ಷನ್‌ ಲಿಮಿಟ್, ಸ್ವಯಂ ನೆಲೆಸಿರುವ ಅಥವಾ ಖಾಲಿಯಿರುವ ಪ್ರಾಪರ್ಟಿಯ ಮೇಲೆ ₹2,00,000 ಆಗಿದೆ.

[ಮೂಲ]

ಒಂದೇ ಹಣಕಾಸು ವರ್ಷದಲ್ಲಿ ನೀವು ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 80EE ಮತ್ತು ಸೆಕ್ಷನ್ 24 ಅನ್ನು ಕ್ಲೈಮ್ ಮಾಡಬಹುದೇ?

ಹೌದು, ಸೆಕ್ಷನ್ 80EE ನಲ್ಲಿ ತಿಳಿಸಲಾದ ಅರ್ಹತಾ ಕ್ರೈಟೀರಿಯಗಳನ್ನು ನೀವು ಪೂರೈಸಿದರೆ, ನೀವು ಒಂದೇ ರೀತಿಯ ಹಣಕಾಸು ವರ್ಷದಲ್ಲಿ ಐಟಿಎ ನ ಸೆಕ್ಷನ್ 80EE ಮತ್ತು ಸೆಕ್ಷನ್ 24 ರ ಅಡಿಯಲ್ಲಿ ಟ್ಯಾಕ್ಸ್ ಪ್ರಯೋಜನಗಳನ್ನು ಆನಂದಿಸಬಹುದು. 

[ಮೂಲ]