ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 54 ಕುರಿತು ಸಂಪೂರ್ಣ ಗೈಡ್

ಭಾರತೀಯ ಟ್ಯಾಕ್ಸೇಷನ್ ಕಾನೂನುಗಳ ಪ್ರಕಾರ, ಪ್ರಾಪರ್ಟಿ ಮಾರಾಟದಿಂದ ವ್ಯಕ್ತಿ ಗಳಿಸಿದ ಯಾವುದೇ ಲಾಭವು ಸಾಮಾನ್ಯವಾಗಿ ಟ್ಯಾಕ್ಸೇಬಲ್ ಆಗಿರುತ್ತದೆ. ಆದಾಗ್ಯೂ, ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 54, ಹೊಸದನ್ನು ಖರೀದಿಸಲು ಲಾಭ ಇನ್‌ವೆಸ್ಟ್‌ ಮಾಡುವುದರಿಂದ ವಸತಿ ಪ್ರಾಪರ್ಟಿಯ ಮಾರಾಟದ ಮೇಲೆ ಟ್ಯಾಕ್ಸ್ ವಿನಾಯಿತಿಗಳನ್ನು ಪಡೆಯಲು ಅನುಮತಿಸುತ್ತದೆ. ಇದು ಹೆಚ್‌ಯುಎಫ್‌ಗಳಿಗೆ (ಹಿಂದೂ ಯುನಿಫೈಡ್‌ ಫ್ಯಾಮಿಲೀಸ್‌) ಮತ್ತು ಇತರ ಅರ್ಹ ವ್ಯಕ್ತಿಗಳಿಗೆ ಅಪ್ಲೈ ಆಗುತ್ತದೆ.

ನಿಮ್ಮ ಬಂಡವಾಳದ ಲಾಭ(ಕ್ಯಾಪಿಟಲ್ ಗೇನ್ಸ್)ದೊಂದಿಗೆ ಹೊಸ ಮನೆಯನ್ನು ಖರೀದಿಸಲು ನೀವು ಪ್ಲಾನ್‌ ಮಾಡುತ್ತಿದ್ದೀರಾ? ಹಾಗಾದರೆ, ಈ ಲೇಖನದಲ್ಲಿ ಈ ಸೆಕ್ಷನ್ ಮೂಲಕ ನೀವು ಪಡೆಯಬಹುದಾದ ಟ್ಯಾಕ್ಸ್‌ ವಿನಾಯಿತಿಯ ಬಗ್ಗೆ ಎಲ್ಲವನ್ನೂ ತಿಳಿಯಿರಿ!

ಇನ್‌ಕಮ್‌ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 54 ಎಂದರೇನು?

ಪ್ರಾಪರ್ಟಿಯಂತಹ ಬಂಡವಾಳದ ಅಸೆಟ್‌ ಅನ್ನು ಮಾರಾಟ ಮಾಡುವ ಅಥವಾ ಟ್ರಾನ್ಸ್‌ಫರ್‌ ಮಾಡುವ ಪ್ರೊಸೆಸ್‌ ಟ್ಯಾಕ್ಸೇಬಲ್‌ ಬಂಡವಾಳ ಲಾಭಗಳೊಂದಿಗೆ ಬರುತ್ತದೆ. ಆದಾಗ್ಯೂ, ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 54ರ ಅಡಿಯಲ್ಲಿ ಸರ್ಕಾರವು ನಾಗರಿಕರಿಗೆ ಅದನ್ನು ಸುಲಭವಾಗಿಸುತ್ತದೆ. ಇದರ ಪ್ರಕಾರ, ವಸತಿ ಗೃಹದ ಪ್ರಾಪರ್ಟಿಯನ್ನು ಮಾರಾಟ ಮಾಡುವ ವ್ಯಕ್ತಿ ಅಥವಾ ಹೆಚ್‌ಯುಎಫ್‌ ಅವರು ಹೊಸ ವಸತಿ ಪ್ರಾಪರ್ಟಿಯನ್ನು ಖರೀದಿಸಲು ಅಥವಾ ನಿರ್ಮಿಸಲು ಇನ್‌ವೆಸ್ಟ್‌ ಮಾಡಿದ್ದರೆ ಬಂಡವಾಳ ಲಾಭದಿಂದ ವಿನಾಯಿತಿ ಪಡೆಯಬಹುದು. ಹೀಗಾಗಿ, ಸೆಕ್ಷನ್ 54ರ ಅಡಿಯಲ್ಲಿ ಡಿಡಕ್ಷನ್ ಏನೆಂದು ನೀವು ತಿಳಿದುಕೊಳ್ಳಲು ಬಯಸುವುದಾದರೆ, ಟ್ಯಾಕ್ಸ್‌ಪೇಯರ್‌ಗಳು ಹೊಸದನ್ನು ಖರೀದಿಸಲು ಅಥವಾ ನಿರ್ಮಿಸಲು ಒಂದು ವಸತಿ ಪ್ರಾಪರ್ಟಿಯನ್ನು ಮಾರಾಟ ಮಾಡುವ ಬಂಡವಾಳ ಲಾಭವನ್ನು ಬಳಸಿದಾಗ ಇದು ಮುಖ್ಯವಾಗಿ ಅಪ್ಲೈ ಆಗುತ್ತದೆ.

ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಮತ್ತುಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ಎಂದರೇನು?

ನೀವು ನೋಡುವಂತೆ, ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ 54ರ ಪ್ರಕಾರ ಕೆಲವು ಷರತ್ತುಗಳ ಅಡಿಯಲ್ಲಿ ವಸತಿ ಪ್ರಾಪರ್ಟಿಯನ್ನು ಮಾರಾಟ ಮಾಡುವ ಅಥವಾ ಟ್ರಾನ್ಸ್‌ಫರ್‌ ಮಾಡುವ ಮೂಲಕ ಗಳಿಸಿದ ಬಂಡವಾಳ ಲಾಭಕ್ಕೆ ಟ್ಯಾಕ್ಸೇಷನ್‌ನಿಂದ ವಿನಾಯಿತಿ ಪಡೆಯಬಹುದು. ಆದಾಗ್ಯೂ, ಈ ಸಂದರ್ಭದಲ್ಲಿ ದೀರ್ಘಾವಧಿಯ ಮತ್ತು ಅಲ್ಪಾವಧಿಯ ಬಂಡವಾಳ ಲಾಭ(ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ಸ್)ಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.

ಈ ಟ್ಯಾಕ್ಸ್‌ಪೇಯರ್‌ಗಳು ಮೂರು ವರ್ಷಗಳ ಒಳಗೆ ಅಸೆಟ್‌ಗಳನ್ನು ಮಾರಾಟ ಮಾಡುವ ಅಥವಾ ಟ್ರಾನ್ಸ್‌ಫರ್‌ ಮಾಡುವ ಮೂಲಕ ಗಳಿಸಿದ ಲಾಭವನ್ನು ಅಲ್ಪಾವಧಿಯ ಬಂಡವಾಳ ಲಾಭ ಎಂದು ಪರಿಗಣಿಸಲಾಗುತ್ತದೆ. ಶೇರುಗಳಿಗೆ, ಅಂತಹ ಲಾಭಗಳು ಸುಮಾರು ಒಂದು ವರ್ಷದ ಮಾಲೀಕತ್ವಕ್ಕೆ ಅಪ್ಲೈ ಆಗುತ್ತದೆ.

ಮತ್ತೊಂದೆಡೆ, ದೀರ್ಘಾವಧಿಯ ಬಂಡವಾಳ ಲಾಭ(ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್)ಗಳು ಸುಮಾರು ಮೂರು ವರ್ಷಗಳವರೆಗೆ ಅಸೆಟ್‌ಗಳನ್ನು ಮಾರಾಟ ಮಾಡುವ ಅಥವಾ ವರ್ಗಾಯಿಸುವ ಲಾಭವನ್ನು ಉಲ್ಲೇಖಿಸುತ್ತವೆ. ಶೇರುಗಳು ಅಥವಾ ಮ್ಯೂಚುವಲ್ ಫಂಡ್‌ಗಳ ಅವಧಿಯು ಒಂದು ವರ್ಷಕ್ಕಿಂತ ಹೆಚ್ಚು ಇರಬೇಕು. ಅಲ್ಪಾವಧಿಯ ಬಂಡವಾಳ ಲಾಭಗಳು ಸುಮಾರು 15% ಟ್ಯಾಕ್ಸ್ ದರಗಳನ್ನು ಹೊಂದಿವೆ, ಇದು ದೀರ್ಘಾವಧಿಯ ಬಂಡವಾಳ ಲಾಭಗಳ ವಿಷಯದಲ್ಲಿ 20%ನಷ್ಟು ಹೆಚ್ಚಾಗುತ್ತದೆ. ಪಟ್ಟಿ ಮಾಡಲಾದ ಭದ್ರತೆಗಳು, ಈಕ್ವಿಟಿ ಆಧಾರಿತ ಫಂಡ್‌ಗಳ ಘಟಕಗಳು ಮತ್ತು ಝೀರೋ-ಕೂಪನ್ ಬಾಂಡ್‌ಗಳಂತಹ ಅಸೆಟ್‌ಗಳನ್ನು ದೀರ್ಘಾವಧಿಯ ಬಂಡವಾಳ ಅಸೆಟ್‌ಗಳೆಂದು ಪರಿಗಣಿಸಲಾಗುತ್ತದೆ.

[ಮೂಲ]

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 54ರ ಅಡಿಯಲ್ಲಿ ಅನುಮತಿಸಲಾದ ವಿನಾಯಿತಿಗಳು ಯಾವುವು?

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 10ರ ಅಡಿಯಲ್ಲಿ ವಿನಾಯಿತಿಯ ಉಪಭಾಗವಾದ ಸೆಕ್ಷನ್ 54ರ ಬಗ್ಗೆ ಎಲ್ಲವನ್ನೂ ತಿಳಿಯುವಾಗ, ಕ್ಯಾಪಿಟಲ್ ಗೇನ್ಸ್ ನಲ್ಲಿ ಅವರು ಪಡೆಯುವ ವಿನಾಯಿತಿಗಳ ವಿಧಗಳನ್ನು ಗುರುತಿಸುವುದು ಅವಶ್ಯ. ಈ ಕೆಳಗಿನ ಷರತ್ತುಗಳಲ್ಲಿ ಕ್ಯಾಪಿಟಲ್ ಗೇನ್ಸ್ ಅನ್ನು ಇನ್‌ವೆಸ್ಟ್‌ ಮಾಡುವ ಜನರಿಗೆ ಇಂತಹ ವಿನಾಯಿತಿಗಳು ಲಭ್ಯವಿರುತ್ತವೆ.

  • ಮೊದಲು ಹಿಂದಿನ ಆಸ್ತಿಯನ್ನು ವರ್ಗಾಯಿಸಿದ 2 ವರ್ಷಗಳೊಳಗೆ ಮತ್ತು ಟ್ರಾನ್ಸ್‌ಫರ್‌ನ ಮೊದಲು 1 ವರ್ಷದ ಒಳಗೆ ಮತ್ತೊಂದು ವಸತಿ ಪ್ರಾಪರ್ಟಿಯನ್ನು ಖರೀದಿಸಲು ಕ್ಯಾಪಿಟಲ್ ಗೇನ್ಸ್ ಅನ್ನು ಬಳಸಿದಾಗ.
  • ಹಿಂದಿನ ಪ್ರಾಪರ್ಟಿಯನ್ನು ಮಾರಾಟ ಮಾಡಿದ ದಿನಾಂಕದಿಂದ ಮೂರು ವರ್ಷಗಳಲ್ಲಿ ವ್ಯಕ್ತಿಗಳು ಹೊಸ ವಸತಿ ಗೃಹ ಪ್ರಾಪರ್ಟಿಯನ್ನು ನಿರ್ಮಿಸಿದಾಗ.

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 54 ರ ಅಡಿಯಲ್ಲಿ ಡಿಡಕ್ಷನ್ ನಂತರದ ವಿನಾಯಿತಿ ಅಮೌಂಟ್, ಪ್ರಾಪರ್ಟಿಯನ್ನು ಮಾರಾಟ ಮಾಡುವುದದಿಂದ ಬರುವ ದೀರ್ಘಾವಧಿಯ ಕ್ಯಾಪಿಟಲ್ ಗೇನ್ಸ್ ಗಳಿಗೆ ಅಥವಾ ಹೊಸದನ್ನು ಖರೀದಿಸಲು ಇನ್‌ವೆಸ್ಟ್ ಮಾಡಿದ ಅಮೌಂಟ್‌ಗೆ, ಯಾವುದು ಕಡಿಮೆ ಇರುತ್ತದೋ ಅದಕ್ಕೆ ಅಪ್ಲಿಕೇಬಲ್ ಆಗುತ್ತದೆ. ಎರಡನೇ ಪ್ರಕರಣದಲ್ಲಿ ಉಳಿದಿರುವ ಬಾಕಿ ಅಮೌಂಟ್ (ಯಾವುದಾದರೂ ಇದ್ದರೆ) ಈ ಆ್ಯಕ್ಟ್‌ನ ಅಡಿಯಲ್ಲಿ ಟ್ಯಾಕ್ಸೇಬಲ್‌ ಆಗಿರುತ್ತದೆ.

ವಿವರಣೆ

ಶ್ರೀ X ಅವರು ತಮ್ಮ ವಸತಿ ಪ್ರಾಪರ್ಟಿಯನ್ನು ₹45,00,000ಕ್ಕೆ ಮಾರಾಟ ಮಾಡುತ್ತಾರೆ ಮತ್ತು ಅಂತಹ ವಸತಿ ಗೃಹದ ಪ್ರಾಪರ್ಟಿಯ ಸೂಚ್ಯಂಕ ವೆಚ್ಚವು 10,00,000 ಎಂದು ಊಹಿಸಬಹುದಾಗಿದೆ. ₹20,00,000ಕ್ಕೆ ಹೊಸ ವಿಲ್ಲಾ ಖರೀದಿಗೆ ಮುಂದುವರಿಯುತ್ತಾರೆ. ಅದರಂತೆ, ಅವರ ಕ್ಯಾಪಿಟಲ್ ಗೇನ್ಸ್ ಅನ್ನು ಈ ಕೆಳಗಿನಂತೆ ಕ್ಯಾಲ್ಕುಲೇಟ್ ಮಾಡಬಹುದಾಗಿದೆ.

ವಿವರಗಳು ಅಮೌಂಟ್
ಮಾರಾಟದ ಪರಿಗಣನೆ ₹ 45,00,000.00
ಕಡಿಮೆ ಸೂಚ್ಯಂಕದ ಸ್ವಾಧೀನ ವೆಚ್ಚ ₹ 10,00,000.00
ವಸತಿ ಪ್ರಾಪರ್ಟಿ ಮಾರಾಟದ ಮೇಲೆ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ₹ 35,00,000.00
ವಸತಿ ಪ್ರಾಪರ್ಟಿಯಲ್ಲಿ ಮಾಡಿದ ಇನ್‌ವೆಸ್ಟ್‌ಮೆಂಟ್‌ (ವ್ಯತ್ಯಾಸ) -₹ 20,00,000.00
ಬ್ಯಾಲೆನ್ಸ್ - ಕ್ಯಾಪಿಟಲ್ ಗೇನ್ಸ್ ಅನ್ನು = ₹ 15,00,000.00

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 54ರ ಅಡಿಯಲ್ಲಿ ವಿನಾಯಿತಿಗಳ ಪ್ರಕಾರ, ಕ್ಯಾಪಿಟಲ್ ಗೇನ್ಸ್ ಮತ್ತು ಹೊಸ ಪ್ರಾಪರ್ಟಿಯಲ್ಲಿನ ಇನ್‌ವೆಸ್ಟ್‌ಮೆಂಟ್‌ ನಡುವೆ ಯಾವುದು ಕಡಿಮೆಯೋ ಅದನ್ನು ಟ್ಯಾಕ್ಸೇಷನ್‌ನಿಂದ ವಿನಾಯಿತಿ ನೀಡಲಾಗುತ್ತದೆ. ಆದ್ದರಿಂದ, ಮೇಲಿನ ಉದಾಹರಣೆಯ ಸಂದರ್ಭದಲ್ಲಿ, ವಸತಿ ಪ್ರಾಪರ್ಟಿಯಲ್ಲಿ ಮಾಡಿದ ಇನ್‌ವೆಸ್ಟ್‌ಮೆಂಟ್‌ಗೆ, ಅಂದರೆ ₹20,00,000ಕ್ಕೆ ಟ್ಯಾಕ್ಸೇಷನ್‌ ವಿನಾಯಿತಿ ನೀಡಲಾಗುತ್ತದೆ.

[ಮೂಲ]

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 54ರ ಅಡಿಯಲ್ಲಿ ಡಿಡಕ್ಷನ್ ಅನ್ನು ಕ್ಲೈಮ್ ಮಾಡಲು ಯಾರು ಅರ್ಹರು?

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 54ರ ಪ್ರಾವಿಷನ್ ಗಳ ಪ್ರಕಾರ, ಯಾವುದೇ ವ್ಯಕ್ತಿ (ಟ್ಯಾಕ್ಸ್‌ಪೇಯರ್‌) ತಮ್ಮ ವಸತಿ ಪ್ರಾಪರ್ಟಿಯನ್ನು ಮಾರಾಟ ಮಾಡುತ್ತಾರೆ ಮತ್ತು ಅವರು ಹೊಸ ಪ್ರಾಪರ್ಟಿಯನ್ನು ಖರೀದಿಸಲು ಕ್ಯಾಪಿಟಲ್ ಗೇನ್ಸ್ ಅನ್ನು ಬಳಸಿದರೆ ಟ್ಯಾಕ್ಸ್ ವಿನಾಯಿತಿಗೆ ಅರ್ಹರಾಗಿರುತ್ತಾರೆ. ಆದಾಗ್ಯೂ, ಟ್ಯಾಕ್ಸ್‌ಪೇಯರ್‌ ಟ್ಯಾಕ್ಸ್‌ ವಿನಾಯಿತಿಗಾಗಿ ಕೆಳಗಿನ ಅರ್ಹತಾ ಮಾನದಂಡಗಳನ್ನು ಹೊಂದಿ ಅರ್ಹತೆ ಪಡೆಯಬೇಕು.

  • ಅಪ್ಲಿಕೆಂಟ್‌ಗಳು ಕೇವಲ ವ್ಯಕ್ತಿಗಳು ಅಥವಾ ಹೆಚ್‌ಯುಎಫ್‌ ಅನ್ನು ಮಾತ್ರ ಒಳಗೊಂಡಿರುತ್ತಾರೆ ಮತ್ತು ಯಾವುದೇ ಇತರ ಸಂಸ್ಥೆಗಳು ಈ ವಿನಾಯಿತಿಗೆ ಅರ್ಹರಾಗಿರುವುದಿಲ್ಲ.
  • ಇದಲ್ಲದೆ, ಪ್ರಾಪರ್ಟಿಯು ವಾಸಯೋಗ್ಯ ಆಗಿರಬೇಕು.
  • ಮಾರಾಟದಲ್ಲಿರುವ ಮನೆ ಪ್ರಾಪರ್ಟಿಯು ದೀರ್ಘಾವಧಿಯ ಬಂಡವಾಳ ಅಸೆಟ್ ಆಗಿರಬೇಕು.
  • ಟ್ರಾನ್ಸ್‌ಫರ್‌ಗೆ ಒಂದು ವರ್ಷದ ಮೊದಲು ಅಥವಾ ಮಾರಾಟದ ಎರಡು ವರ್ಷಗಳ ನಂತರ ಅಥವಾ ಟ್ರಾನ್ಸ್‌ಫರ್‌ ದಿನಾಂಕದಿಂದ 3 ವರ್ಷಗಳ ಒಳಗೆ ನಿರ್ಮಿಸಲಾದ ಹೊಸ ವಸತಿ ಪ್ರಾಪರ್ಟಿಯನ್ನು ಖರೀದಿಸಬೇಕು.
  • ಮನೆ ಪ್ರಾಪರ್ಟಿಯನ್ನು ಭಾರತದಲ್ಲಿ ಮಾರಾಟ ಮಾಡಬೇಕು ಮತ್ತು ಖರೀದಿ ಮಾಡಿರಬೇಕು.

[ಮೂಲ]

ಸೆಕ್ಷನ್ 54ರ ಅಡಿಯಲ್ಲಿ ಪ್ರಯೋಜನವನ್ನು ಕ್ಲೈಮ್ ಮಾಡಿದ ನಂತರ ಪ್ರಾಪರ್ಟಿಯ ಟ್ರಾನ್ಸ್‌ಫರ್‌ಗೆ ಸಂಬಂಧಿಸಿದ ಪ್ರಾವಿಷನ್ ಗಳು ಯಾವುವು?

ಈ ಸೆಕ್ಷನ್ ಮತ್ತು ಅದರ ಅದರ ವಿನಾಯಿತಿ ನಿಯಮಗಳು ಸರಳವೆಂದು ತೋರುತ್ತದೆಯಾದರೂ, ಹಲವಾರು ನಿಯಮಗಳು ಅದರೊಂದಿಗೆ ಲಿಂಕ್ ಆಗಿವೆ. ಉದಾಹರಣೆಗೆ, ನೀವು ಸೆಕ್ಷನ್ 54ರ ಅಡಿಯಲ್ಲಿ ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 10ರ ಅಡಿಯಲ್ಲಿ ವಿನಾಯಿತಿಯನ್ನು ಪಡೆಯುವ ಗುರಿಯನ್ನು ಹೊಂದಿದ್ದೀರಿ ಎಂದು ಭಾವಿಸೋಣ. ಅಂತಹ ಸಂದರ್ಭದಲ್ಲಿ, ವಿನಾಯಿತಿ ಪ್ರಯೋಜನಗಳನ್ನು ಕ್ಲೈಮ್ ಮಾಡಿದ ನಂತರ ನಿಮ್ಮ ಪ್ರಾಪರ್ಟಿಯನ್ನು ಟ್ರಾನ್ಸ್‌ಫರ್‌ ಮಾಡುವಾಗ ನೀವು ಈ ಕೆಳಗಿನ ಕಡ್ಡಾಯ ಷರತ್ತುಗಳನ್ನು ಪೂರೈಸುವುದು ಅವಶ್ಯವಾಗುತ್ತದೆ.

  • ನಿಮ್ಮ ಹಳೆಯ ವಸತಿ ಪ್ರಾಪರ್ಟಿಯನ್ನು ಮಾರಾಟ ಮಾಡಿದ ತಕ್ಷಣ ನೀವು ಹೊಸ ವಸತಿ ಪ್ರಾಪರ್ಟಿಯನ್ನು ಖರೀದಿಸಬೇಕು ಅಥವಾ ಹೊಸ ಮನೆ ಪ್ರಾಪರ್ಟಿಯನ್ನು ನಿರ್ಮಿಸಬೇಕು.
  • ಇದಲ್ಲದೆ, ಹಳೆಯ ಪ್ರಾಪರ್ಟಿಯನ್ನು ಮಾರಾಟ ಮಾಡುವ ಒಂದು ವರ್ಷದ ಮೊದಲು, ಅದರ ಮಾರಾಟದ ಎರಡು ವರ್ಷಗಳ ನಂತರ ಅಥವಾ ಮಾರಾಟದ ಮೂರು ವರ್ಷಗಳಲ್ಲಿ ನಿರ್ಮಿಸಲಾದ ನಿಮ್ಮ ಹೊಸ ವಸತಿ ಪ್ರಾಪರ್ಟಿಯನ್ನು ನೀವು ಖರೀದಿಸಬೇಕು.
  • ಒಂದು ಮನೆ ಪ್ರಾಪರ್ಟಿಯ ವಿರುದ್ಧ ಮಾತ್ರ ನೀವು ಈ ವಿನಾಯಿತಿ ಪ್ರಯೋಜನವನ್ನು ಕ್ಲೈಮ್ ಮಾಡಬಹುದು.
  • ಇನ್‌ಕಮ್‌ ಟ್ಯಾಕ್ಸ್‌ ಪೈಲ್‌ ಮಾಡುವ ದಿನಾಂಕದ ಮೊದಲು ನೀವು ಹೊಸ ಪ್ರಾಪರ್ಟಿಯನ್ನು ನಿರ್ಮಿಸಲು ಅಥವಾ ಖರೀದಿಸಲು ವಿಫಲರಾಗಿದ್ದೀರಿ ಎಂದು ಭಾವಿಸೋಣ. ಅಂತಹ ಸಂದರ್ಭದಲ್ಲಿ, ಈ ವಿನಾಯಿತಿಯನ್ನು ಪಡೆಯಲು ನೀವು ಯಾವುದೇ ಸಾರ್ವಜನಿಕ ವಲಯದ ಬ್ಯಾಂಕ್‌ನಲ್ಲಿ ಕ್ಯಾಪಿಟಲ್ ಗೇನ್ಸ್ ಗಳ ಅಕೌಂಟ್ ಸ್ಕೀಮ್‌ನ ಅಡಿಯಲ್ಲಿ ಅಮೌಂಟ್ ಅನ್ನು ಡೆಪಾಸಿಟ್ ಮಾಡಬೇಕಾಗುತ್ತದೆ.

[ಮೂಲ]

ಕ್ಯಾಪಿಟಲ್ ಗೇನ್ಸ್ ಅಕೌಂಟ್ ಸ್ಕೀಮ್ ಎಂದರೇನು?

ಸೆಕ್ಷನ್ 10ರ ಅಡಿಯಲ್ಲಿ ಇನ್‌ಕಮ್‌ ಟ್ಯಾಕ್ಸ್‌ ವಿನಾಯಿತಿಯ ಈ ಪ್ರಯೋಜನಗಳನ್ನು ಬಳಸಿಕೊಳ್ಳುವ ಅತ್ಯಗತ್ಯ ಅಂಶವೆಂದರೆ ಸೆಕ್ಷನ್ 54 ಮೂಲಕ ಕ್ಯಾಪಿಟಲ್ ಗೇನ್ಸ್ ಗಳ ಅಕೌಂಟ್ ಸ್ಕೀಮ್‌ನೊಂದಿಗೆ ಲಿಂಕ್ ಆಗುತ್ತದೆ. ಈ ಸೆಕ್ಷನ್ ಹೊಸ ಪ್ರಾಪರ್ಟಿಯನ್ನು ಖರೀದಿಸಲು ಕೆಲವು ಕಡ್ಡಾಯ ದಿನಾಂಕಗಳನ್ನು ನಿಗದಿಪಡಿಸಿದೆ ಮತ್ತು ಆ ಮೂಲಕ ಅದರ ಪ್ರಯೋಜನಗಳನ್ನು ಬಳಸಿಕೊಳ್ಳುತ್ತದೆ.

ಆದಾಗ್ಯೂ, ನೀವು ನಿಗದಿತ ದಿನಾಂಕದ ಮೊದಲು ಪ್ರಾಪರ್ಟಿಯನ್ನು ಖರೀದಿಸಲು ಅಥವಾ ನಿರ್ಮಿಸಲು ವಿಫಲರಾಗಿದ್ದೀರಿ ಮತ್ತು ಇನ್ನೂ ವಿನಾಯಿತಿಯನ್ನು ಪಡೆಯಲು ಬಯಸುತ್ತೀರಿ ಎಂದು ಭಾವಿಸೋಣ. ಅಂತಹ ಸಂದರ್ಭದಲ್ಲಿ, ನೀವು ಬಂಡವಾಳ ಲಾಭಗಳ ಡೆಪಾಸಿಟ್ ಸ್ಕೀಮ್‌ನಲ್ಲಿ ಹಳೆಯ ಮನೆಯ ಪ್ರಾಪರ್ಟಿಯ ನಿಮ್ಮ ಬಂಡವಾಳ ಲಾಭದ ಇನ್‌ಕಮ್‌ ಅನ್ನು ಇನ್‌ವೆಸ್ಟ್‌ ಮಾಡಬಹುದು. ನೀವು ಯಾವುದೇ ಅಧಿಕೃತ/ಅಪ್ರೂವ್‌ಡ್‌ ಬ್ಯಾಂಕ್ ಶಾಖೆಯಿಂದ ಅಂತಹ ಖಾತೆಯನ್ನು ತೆರೆಯಬಹುದು.

ಸಿಜಿಎಎಸ್(ಕ್ಯಾಪಿಟಲ್ ಗೇನ್ಸ್ ಅಕೌಂಟ್ ಸ್ಕೀಮ್) ತೆರೆಯಲು, ನೀವು ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಸಲ್ಲಿಸುವ ದಿನಾಂಕದ ಮೊದಲು ಡೆಪಾಸಿಟ್ ಮಾಡಬೇಕಾಗುತ್ತದೆ. ಇದಲ್ಲದೆ, ಈ ಸೆಕ್ಷನ್ ಒದಗಿಸಿದಂತೆ ನೀವು ಮನೆಯನ್ನು ಖರೀದಿಸಲು ಅಥವಾ ನಿರ್ಮಿಸಲು ಡೆಪಾಸಿಟ್ ಮಾಡಿದ ಅಮೌಂಟ್ ಅನ್ನು ಬಳಸಬೇಕಾಗುತ್ತದೆ. 2 ಅಥವಾ 3 ವರ್ಷಗಳಲ್ಲಿ ಹೊಸ ಮನೆಯನ್ನು ನಿರ್ಮಿಸಲು ನೀವು ಈ ಅಮೌಂಟ್ ಅನ್ನು ನಿಮ್ಮ ಸಿಜಿಎಎಸ್‌ಗೆ ಟ್ರಾನ್ಸ್‌ಫರ್‌ ಮಾಡಬಹುದು. ಆದಾಗ್ಯೂ, ಈ ಅವಧಿಯಲ್ಲಿ ನೀವು ಹಾಗೆ ಮಾಡಲು ವಿಫಲವಾದರೆ ನಿಮ್ಮ ಬಂಡವಾಳ ಲಾಭವನ್ನು ಟ್ಯಾಕ್ಸೇಬಲ್ ಮಾಡಲಾಗುತ್ತದೆ.

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 54 ಹೌಸಿಂಗ್ ಪ್ರಾಪರ್ಟಿಯನ್ನು ಮಾರಾಟ ಮಾಡಿದ ನಂತರ ನಿಮ್ಮ ಬಂಡವಾಳ ಲಾಭದ ಟ್ಯಾಕ್ಸೇಷನ್ ಅನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ ಎಂದು ಈಗ ನಿಮಗೆ ತಿಳಿದಿದೆ. ಆದಾಗ್ಯೂ, ಇದನ್ನು ಸ್ವೀಕರಿಸಲು, ಈ ಕಾನೂನಿನ ಅಗತ್ಯತೆ ಪ್ರಕಾರ ನಿಗದಿತ ಅವಧಿಯೊಳಗೆ ನೀವು ಹೊಸ ವಸತಿ ಪ್ರಾಪರ್ಟಿಯನ್ನು ಖರೀದಿಸಲು ಅಥವಾ ನಿರ್ಮಿಸಲು ಸಾಧ್ಯವಾಗಬೇಕು. ಒಮ್ಮೆ ನೀವು ಇದನ್ನು ಮಾಡಿದರೆ, ನಿಮ್ಮ ಬಂಡವಾಳ ಲಾಭದ ಮೇಲೆ ಟ್ಯಾಕ್ಸ್ ಪಾವತಿಸುವುದನ್ನು ನೀವು ಯಶಸ್ವಿಯಾಗಿ ತಪ್ಪಿಸಬಹುದು.

[ಮೂಲ]

ಪದೇ ಪದೇ ಕೇಳಲಾದ ಪ್ರಶ್ನೆಗಳು

ನಾನು ಕ್ಯಾಪಿಟಲ್ ಗೇನ್ಸ್ ಅನ್ನು ಘೋಷಿಸದಿದ್ದರೆ ಏನಾಗುತ್ತದೆ?

ಇನ್‌ಕಮ್‌ ಅನ್ನು ಮರೆಮಾಚುವುದು ಭಾರತೀಯ ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ ಅಡಿಯಲ್ಲಿ ಗಮನಾರ್ಹ ದಂಡಗಳಿಗೆ ಕಾರಣವಾಗುತ್ತದೆ. ಇದಲ್ಲದೆ, ಇನ್‌ಕಮ್‌ ಟ್ಯಾಕ್ಸ್‌ ಫಾರ್ಮ್‌ಗಳು ಆರ್ಥಿಕ ವರ್ಷ 2020-21ರಿಂದ ಕ್ಯಾಪಿಟಲ್ ಗೇನ್ ವಹಿವಾಟಿನ ಡೇಟಾದೊಂದಿಗೆ ಮೊದಲೇ ತುಂಬಿರುತ್ತವೆ.

ಯಾವ ಬ್ಯಾಂಕುಗಳು ಕ್ಯಾಪಿಟಲ್ ಗೇನ್ ಅಕೌಂಟ್ ಸ್ಕೀಮ್ ಅನ್ನು ಹೊಂದಿವೆ?

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕ್, ಐಡಿಬಿಐ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಕಾರ್ಪೊರೇಷನ್ ಬ್ಯಾಂಕ್ ಸೇರಿದಂತೆ ಭಾರತೀಯ ಸರ್ಕಾರದ ಅಡಿಯಲ್ಲಿ ಬರುವ ಯಾವುದೇ ಅಧಿಕೃತ ಬ್ಯಾಂಕ್‌ಗಳು ಸಿಜಿಎಎಸ್‌ನೊಂದಿಗೆ ನಿಮಗೆ ಅಸಿಸ್ಟ್ ಮಾಡಬಹುದು.