ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್ಕಮ್ ಟ್ಯಾಕ್ಸ್ ಸೆಕ್ಷನ್ 87A ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿಯ ವಿವರಣೆ

1961 ರ ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌, ವ್ಯಕ್ತಿಗಳಿಗೆ ತಮ್ಮ ಟ್ಯಾಕ್ಸ್ ಲಯಬಿಲಿಟಿಗಳನ್ನು ಕಡಿಮೆ ಮಾಡಲು ಟ್ಯಾಕ್ಸ್ ವಿನಾಯಿತಿಯನ್ನು ಒದಗಿಸುವ ಹಲವಾರು ಪ್ರಾವಿಷನ್‌ಗಳನ್ನು ನೀಡುತ್ತದೆ. ಅಂತಹ ಒಂದು ಪ್ರಾವಿಷನ್ ಇನ್ಕಮ್ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 87A ಆಗಿದೆ. ನಿರ್ದಿಷ್ಟ ಹಣಕಾಸು ವರ್ಷದಲ್ಲಿ ₹ 5,00,000 ಒಳಗೆ ನೆಟ್ ಟ್ಯಾಕ್ಸೇಬಲ್ ಇನ್ಕಮ್ ಅನ್ನು ಗಳಿಸಿದಾಗ, ಜನರು ಸೆಕ್ಷನ್ 87A ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿಯನ್ನು ಆನಂದಿಸಬಹುದು. ಅರ್ಹ ಅಭ್ಯರ್ಥಿಗಳು ₹ 12,500 ವರೆಗೆ ಟ್ಯಾಕ್ಸ್ ರಿಯಾಯಿತಿ ಅಥವಾ ಮೌಲ್ಯಮಾಪನ ವರ್ಷದಲ್ಲಿ ಪಾವತಿಸಬೇಕಾದ ಒಟ್ಟು ಟ್ಯಾಕ್ಸ್ ಅಥವಾ ಯಾವುದು ಕಡಿಮೆಯೋ (ಸೆಸ್ ಸೇರಿಸುವ ಮೊದಲು) ಅದನ್ನು ಕ್ಲೈಮ್ ಮಾಡಬಹುದು.

ಈ ಸೆಕ್ಷನ್ ಬಗ್ಗೆ ಇನ್ನಷ್ಟು ತಿಳಿಯಲು ನೀವು ಕುತೂಹಲ ಹೊಂದಿದ್ದರೆ, ಓದುವುದನ್ನು ಮುಂದುವರೆಸಿ!

ಸೆಕ್ಷನ್ 87A ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿಯನ್ನು ಪಡೆಯಲು ಇರುವ ಅರ್ಹತೆಯ ಕ್ರೈಟಿರಿಯಗಳು ಯಾವುವು?

2022 ರ ಇತ್ತೀಚಿನ ಕೇಂದ್ರ ಬಜೆಟ್, ಸೆಕ್ಷನ್ 87A ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿಯನ್ನು ಪಡೆಯುವ ಪ್ರಾವಿಷನ್‌ಗಳನ್ನು ಬದಲಾಯಿಸಿಲ್ಲ.

ಸೆಕ್ಷನ್ 87A ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿಯನ್ನು ಪಡೆಯಲು ವ್ಯಕ್ತಿಗಳು ಅರ್ಹತಾ ಕ್ರೈಟಿರಿಯಗಳನ್ನು ಪೂರೈಸಬೇಕು:

  • ಟ್ಯಾಕ್ಸ್ ಪೇಯರ್ ಭಾರತೀಯ ಪ್ರಜೆಯಾಗಿರಬೇಕು.
  • ಚಾಪ್ಟರ್ VI-A ಅಡಿಯಲ್ಲಿ ನಿರ್ದಿಷ್ಟಪಡಿಸಿದಂತೆ ಸೆಕ್ಷನ್ 80D, 80C, ಇತ್ಯಾದಿಗಳ ಅಡಿಯಲ್ಲಿ ಡಿಡಕ್ಷನ್‌ನ ನಂತರ ವ್ಯಕ್ತಿಯ ನೆಟ್ ಟ್ಯಾಕ್ಸೇಬಲ್ ಇನ್ಕಮ್ ₹ 5,00,000 ಕ್ಕಿಂತ ಹೆಚ್ಚಿರಬಾರದು.
  • ವ್ಯಕ್ತಿಗಳು (60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು), 60 ವರ್ಷಕ್ಕಿಂತ ಮೇಲ್ಪಟ್ಟ ಆದರೆ 80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹಿರಿಯ ಭಾರತೀಯ ನಿವಾಸಿಗಳು ಈ ಸೆಕ್ಷನ್ ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿಯನ್ನು ಪಡೆಯಬಹುದು.
  • 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಭಾರತೀಯ ನಿವಾಸಿಗಳು ಈ ಸೆಕ್ಷನ್ ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿಯನ್ನು ಪಡೆಯಲು ಅರ್ಹರಾಗಿರುವುದಿಲ್ಲ.
  • ಮೌಲ್ಯಮಾಪನ ವರ್ಷ 2024-25 ರಿಂದ ಸೆಕ್ಷನ್ 115BAC(1A) ಅಡಿಯಲ್ಲಿ ಹೊಸ ತೆರಿಗೆ ಯೋಜನೆಯನ್ನು ಆಯ್ಕೆ ಮಾಡುವ ನಿವಾಸಿ ಯ ಒಟ್ಟು ಆದಾಯವು ₹7,00,000 ವರೆಗೆ ಇದ್ದರೆ, ಸೆಕ್ಷನ್ 87A ಅಡಿಯಲ್ಲಿ ಗರಿಷ್ಠ ₹ 25,000 ರಿಯಾಯಿತಿಯನ್ನು ಅನುಮತಿಸಲಾಗಿದೆ.

ಜೊತೆಗೆ, ಆರೋಗ್ಯ ಮತ್ತು ಎಜುಕೇಷನ್ ಸೆಸ್‌ನ 4% ಅನ್ನು ಸೇರಿಸುವ ಮೊದಲು, ಈ ಟ್ಯಾಕ್ಸ್ ರಿಯಾಯಿತಿಯು ನಿರ್ದಿಷ್ಟ ಮೌಲ್ಯಮಾಪನ ವರ್ಷದಲ್ಲಿ ಪಾವತಿಸಬೇಕಾದ ಒಟ್ಟು ಟ್ಯಾಕ್ಸ್‌ಗೆ ಅನ್ವಯಿಸುತ್ತದೆ.

ಸೆಕ್ಷನ್ 87A ಅಡಿಯಲ್ಲಿ, ವ್ಯಕ್ತಿಗಳು ರಿಯಾಯಿತಿಯನ್ನು ಕ್ಲೈಮ್ ಮಾಡಬಹುದಾದ ಟ್ಯಾಕ್ಸ್ ಲಯಬಿಲಿಟಿಗಳು

ಸೆಕ್ಷನ್ 87A ಅಡಿಯಲ್ಲಿ ಈ ಕೆಳಗಿನ ಟ್ಯಾಕ್ಸ್ ಲಯಬಿಲಿಟಿಗಳ ವಿರುದ್ಧ ವ್ಯಕ್ತಿಗಳು ಟ್ಯಾಕ್ಸ್ ರಿಯಾಯಿತಿಯನ್ನು ಪಡೆಯಬಹುದು:

  • ಇನ್ಕಮ್ ಟ್ಯಾಕ್ಸ್ ಸ್ಲ್ಯಾಬ್ ದರದ ಪ್ರಕಾರ ವ್ಯಕ್ತಿಗಳು ತಮ್ಮ ಇನ್ಕಮ್ ಟ್ಯಾಕ್ಸ್ ಮೇಲೆ ಈ ಸೆಕ್ಷನ್‌ನ ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿಯನ್ನು ಕ್ಲೈಮ್ ಮಾಡಬಹುದು.
  • ಮೌಲ್ಯಮಾಪಕರು ಈ ಕೆಳಗಿನ ಕ್ಯಾಪಿಟಲ್ ಲಾಭಗಳ ಮೇಲೆ ಟ್ಯಾಕ್ಸ್ ರಿಯಾಯಿತಿಯನ್ನು ಕ್ಲೈಮ್ ಮಾಡಬಹುದು:
  • ಸೆಕ್ಷನ್ 112 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಲಾಂಗ್-ಟರ್ಮ್ ಕ್ಯಾಪಿಟಲ್ ಲಾಭಗಳು - ಒಬ್ಬ ವ್ಯಕ್ತಿಯು ಇಕ್ವಿಟಿ-ಆಧಾರಿತ ಮ್ಯೂಚುಯಲ್ ಫಂಡ್ ಸ್ಕೀಮ್ ಅಥವಾ ಪಟ್ಟಿಮಾಡಿದ ಇಕ್ವಿಟಿ ಷೇರುಗಳನ್ನು ಹೊರತುಪಡಿಸಿ ಕ್ಯಾಪಿಟಲ್ ಆಸ್ತಿಯನ್ನು ಮಾರಾಟ ಮಾಡಿದಾಗ ಇದು ಅನ್ವಯಿಸುತ್ತದೆ. ಇಕ್ವಿಟಿ-ಆಧಾರಿತ ಮ್ಯೂಚುವಲ್ ಫಂಡ್ ಸ್ಕೀಮ್‌ಗಳು ಮತ್ತು ಇಕ್ವಿಟಿ ಷೇರುಗಳ ಮೇಲೆ ಎಲ್.ಟಿ.ಸಿ.ಜಿ ನಲ್ಲಿ ಪಾವತಿಸಬೇಕಾದ ಟ್ಯಾಕ್ಸ್ ಅನ್ನು ಅಡ್ಜಸ್ಟ್ ಮಾಡಲು ಸಾಧ್ಯವಿಲ್ಲ ಎಂಬುದನ್ನು ವ್ಯಕ್ತಿಗಳು ಗಮನಿಸಬೇಕು.
  • ಸೆಕ್ಷನ್ 111A ಅಡಿಯಲ್ಲಿ ನಿರ್ದಿಷ್ಟಪಡಿಸಿದ ಶಾರ್ಟ್-ಟರ್ಮ್ ಕ್ಯಾಪಿಟಲ್ ಲಾಭಗಳು - ಇದು ಇಕ್ವಿಟಿ-ಆಧಾರಿತ ಮ್ಯೂಚುಯಲ್ ಫಂಡ್ ಸ್ಕೀಮ್‌ಗಳು ಮತ್ತು ಪಟ್ಟಿಮಾಡಿದ ಇಕ್ವಿಟಿ ಷೇರುಗಳಿಗೆ ಅನ್ವಯಿಸುತ್ತದೆ. ಶಾರ್ಟ್-ಟರ್ಮ್ ಕ್ಯಾಪಿಟಲ್ ಲಾಭಕ್ಕೆ ಫ್ಲ್ಯಾಟ್ 15% ದರದಲ್ಲಿ ಟ್ಯಾಕ್ಸ್ ವಿಧಿಸಲಾಗುತ್ತದೆ.

ಸೆಕ್ಷನ್ 87A ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿಯನ್ನು ಕ್ಲೈಮ್ ಮಾಡಲು ಇರುವ ಪ್ರಕ್ರಿಯೆಯೇನು?

ಸೆಕ್ಷನ್ 87A ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿ ಎಂದರೇನು ಮತ್ತು ಅದರ ಅರ್ಹತಾ ಮಾನದಂಡಗಳನ್ನು ತಿಳಿದುಕೊಳ್ಳುವುದರ ಜೊತೆಗೆ, ಈ ಸೆಕ್ಷನ್‌ನ ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿಯನ್ನು ಆನಂದಿಸಲು ವ್ಯಕ್ತಿಗಳು ಅದರ ಪ್ರಕ್ರಿಯೆಗಳನ್ನು ಕಲಿಯಬೇಕಾಗುತ್ತದೆ.

ಆದ್ದರಿಂದ, ಈ ಕೆಳಗಿನ ಪ್ರಕ್ರಿಯೆಯನ್ನು ನೋಡೋಣ:

  • ಹಂತ 1: ವ್ಯಕ್ತಿಗಳು ತಮ್ಮ ಒಟ್ಟು ವಾರ್ಷಿಕ ಇನ್ಕಮ್ ಅನ್ನು ಮೌಲ್ಯಮಾಪನ ಮಾಡಬೇಕಾಗುತ್ತದೆ.
  • ಹಂತ 2: ನೆಟ್ ಟ್ಯಾಕ್ಸೇಬಲ್ ಇನ್ಕಮ್ ಅನ್ನು ಪಡೆಯಲು ಟ್ಯಾಕ್ಸ್ ಸೇವಿಂಗ್ಸ್ ಇನ್ವೆಸ್ಟ್‌ಮೆಂಟ್‌ಗಳ ವಿರುದ್ಧ ಕ್ಲೈಮ್ ಮಾಡಲಾದ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಕಳೆಯಿರಿ. 
  • ಹಂತ 3: ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುವಾಗ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಮತ್ತು ಒಟ್ಟು ಆದಾಯವನ್ನು ನಮೂದಿಸಿ. 
  • ಹಂತ 4: ನಿರ್ದಿಷ್ಟ ಹಣಕಾಸು ವರ್ಷದಲ್ಲಿ ವ್ಯಕ್ತಿಗಳ ಒಟ್ಟು ಗಳಿಕೆಯು ₹ 5,00,000 ಕ್ಕಿಂತ ಕಡಿಮೆಯಿದ್ದರೆ (ಅಥವಾ ಮೌಲ್ಯಮಾಪನ ವರ್ಷ 24-25 ಕ್ಕೆ ಹೊಸ ಟ್ಯಾಕ್ಸ್ ನಿಯಮಗಳಲ್ಲಿ ₹ 7,00,000 ಕ್ಕಿಂತ ಕಡಿಮೆಯಿದ್ದರೆ, ) ಅವರು ಸೆಕ್ಷನ್ 87A ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿಯನ್ನು ಕ್ಲೈಮ್ ಮಾಡಬಹುದು.

ಐಟಿಎ (ITA) ನ ಸೆಕ್ಷನ್ 87A ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿಯನ್ನು ಕ್ಯಾಲ್ಕುಲೇಟ್ ಮಾಡುವುದು ಹೇಗೆ?

ಸೆಕ್ಷನ್ 87A ಅಡಿಯಲ್ಲಿ ರಿಯಾಯಿತಿಯನ್ನು ಕ್ಲೈಮ್ ಮಾಡುವ ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು, ಒಂದು ಸರಳ ಉದಾಹರಣೆಯನ್ನು ಗಮನಿಸಿ:

ಶ್ರೀ ಅಲೋಕ್ ಅವರು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು 2022-23 ರಲ್ಲಿ ₹ 6,50,000 ಲಕ್ಷಗಳ ಒಟ್ಟು ವಾರ್ಷಿಕ ಇನ್ಕಮ್ ಅನ್ನು ಗಳಿಸುತ್ತಾರೆ. ಅವರು ಹಳೆಯ ಟ್ಯಾಕ್ಸ್ ನಿಯಮಗಳಲ್ಲಿಯೇ ಉಳಿಯಲು ನಿರ್ಧರಿಸುತ್ತಾರೆ. ಸೆಕ್ಷನ್ 80C ಅಡಿಯಲ್ಲಿ ₹ 1,50,000 ವರೆಗಿನ ಟ್ಯಾಕ್ಸ್ ವಿನಾಯಿತಿಯನ್ನು ಆನಂದಿಸಲು ಅವರು ಸ್ಕೀಮ್‌ಗಳಲ್ಲಿ ಇನ್ವೆಸ್ಟ್ ಮಾಡುತ್ತಾರೆ. ಹೀಗಾಗಿ, 2022-23 ರಲ್ಲಿ ಡಿಡಕ್ಷನ್‌ನ ನಂತರ ಅವರ ನೆಟ್ ಟ್ಯಾಕ್ಸೇಬಲ್ ಇನ್ಕಮ್ ₹ 5,00,000 ಆಗಿದೆ.

ವ್ಯಕ್ತಿಗಳು 87A ಅಡಿಯಲ್ಲಿ ₹ 12,500 ವರೆಗೆ ಟ್ಯಾಕ್ಸ್ ರಿಯಾಯಿತಿಯನ್ನು ಕ್ಲೈಮ್ ಮಾಡಬಹುದು ಅಥವಾ ಪಾವತಿಸಬೇಕಾದ ಟ್ಯಾಕ್ಸ್‌ನ ಒಟ್ಟು ಮೊತ್ತ, ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು ಕ್ಲೈಮ್ ಮಾಡಬಹುದು ಎಂದು ನಮಗೆ ತಿಳಿದಿದೆ. ಆದ್ದರಿಂದ, ಮೌಲ್ಯಮಾಪನ ವರ್ಷದಲ್ಲಿ ಪಾವತಿಸಬೇಕಾದ ಒಟ್ಟು ಟ್ಯಾಕ್ಸ್:

ವಿವರಗಳು ಮೊತ್ತ
ಒಟ್ಟು ವಾರ್ಷಿಕ ಇನ್ಕಮ್ ₹ 6,50,000
ಡಿಡಕ್ಟ್: ಸೆಕ್ಷನ್ 87A ಅಡಿಯಲ್ಲಿ ಡಿಡಕ್ಷನ್ * ₹ 1,50,000
ನೆಟ್ ಟ್ಯಾಕ್ಸೇಬಲ್ ಇನ್ಕಮ್ (ಡಿಡಕ್ಷನ್ ನಂತರ) ₹ 5,00,000
2022-23 ಹಣಕಾಸು ವರ್ಷದಲ್ಲಿ ಪಾವತಿಸಬೇಕಾದ ಇನ್ಕಮ್ ಟ್ಯಾಕ್ಸ್ (₹2,50,000- ₹5,00,000 ವರೆಗಿನ ಇನ್ಕಮ್‌ಗೆ 5% ₹ 12,500
ಡಿಡಕ್ಟ್: ಸೆಕ್ಷನ್ 87A ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿ ₹ 12,500
ಒಂದು ಮೌಲ್ಯಮಾಪನ ವರ್ಷದಲ್ಲಿ (2022-23) ಪಾವತಿಸಬೇಕಾದ ಒಟ್ಟು ಟ್ಯಾಕ್ಸ್ ನಿಲ್
ಸೇರಿಸಿ: ಆರೋಗ್ಯ ಮತ್ತು ಶಿಕ್ಷಣ ಸೆಸ್‌ನ 4% -

*80C ಜೊತೆಗೆ, ವ್ಯಕ್ತಿಗಳು ಮೆಡಿಕಲ್ ಇನ್ಶೂರೆನ್ಸ್‌ನಲ್ಲಿ ಇನ್ವೆಸ್ಟ್ ಮಾಡುವುದರ ವಿರುದ್ಧ ಸೆಕ್ಷನ್ 80D ಅಡಿಯಲ್ಲಿ ಮತ್ತು ಎನ್‌ಪಿಎಸ್ ನಲ್ಲಿ ಇನ್ವೆಸ್ಟ್ ಮಾಡುವಾಗ ಸೆಕ್ಷನ್ 80CCD ಅಡಿಯಲ್ಲಿ ಡಿಡಕ್ಷನ್‌ಗಳನ್ನು ಕ್ಲೈಮ್ ಮಾಡಬಹುದು. ಅದೇ ಸಮಯದಲ್ಲಿ, ಅವರು ಇತರ ಡಿಡಕ್ಷನ್‌ಗಳ ಜೊತೆಗೆ ಅರ್ಹ ಡೊನೇಶನ್‌ಗಳ ವಿರುದ್ಧ ಸೆಕ್ಷನ್ 80G ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್‌ಗಳನ್ನು ಸಹ ಆನಂದಿಸಬಹುದು.

ಹಣಕಾಸು ವರ್ಷ 2022-23 ರಿಂದ 2013-14 ರವರೆಗೆ ಗರಿಷ್ಠ ಟ್ಯಾಕ್ಸ್ ರಿಯಾಯಿತಿಯ ಲಿಮಿಟ್ ಎಷ್ಟು?

 

ಪ್ರತಿ ಹಣಕಾಸು ವರ್ಷದಲ್ಲಿ ನೆಟ್ ಟ್ಯಾಕ್ಸೇಬಲ್ ಇನ್ಕಮ್‌ನೊಂದಿಗೆ, ಗರಿಷ್ಠ ಟ್ಯಾಕ್ಸ್ ರಿಯಾಯಿತಿಯ ಲಿಮಿಟ್ ಅನ್ನು ವಿವರಿಸುವ ಕೆಳಗಿನ ಟೇಬಲ್ ಅನ್ನು ನಾವೀಗ ನೋಡೋಣ:

ಹಣಕಾಸು ವರ್ಷ ಒಟ್ಟು ಟ್ಯಾಕ್ಸೇಬಲ್ ಇನ್ಕಮ್ ಸೆಕ್ಷನ್ 87A ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿಯ ಲಿಮಿಟ್
2021-2022 ₹ 5,00,000 ₹ 12,500
2020-2021 ₹ 5,00,000 ₹ 12,500
2019-2020 ₹ 5,00,000 ₹ 12,500
2018-2019 ₹ 3,50,000 ₹ 2,500
2017-2018 ₹ 3,50,000 ₹ 2,500
2016-2017 ₹ 5,00,000 ₹ 5,000
2015-2016 ₹ 5,00,000 ₹ 2,000
2014-2015 ₹ 5,00,000 ₹ 2,000
2013-2014 ₹ 5,00,000 ₹ 2,000

ಹೀಗಾಗಿ, ಮೇಲೆ ತಿಳಿಸಲಾದ ಈ ಪಾಯಿಂಟರ್‌ಗಳ ಮೂಲಕ ಹೋಗುವುದರಿಂದ, ಸೆಕ್ಷನ್ 87A ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ಟ್ಯಾಕ್ಸ್ ಹೊರೆಯನ್ನು ಕಡಿಮೆ ಮಾಡುತ್ತದೆ.

[ಮೂಲ]

ಪದೇ ಪದೇ ಕೇಳಲಾದ ಪ್ರಶ್ನೆಗಳು

ಹಿಂದೂ ಅವಿಭಜಿತ ಕುಟುಂಬಗಳು ಮತ್ತು ಸಂಸ್ಥೆಗಳು ಸೆಕ್ಷನ್ 87A ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿಯನ್ನು ಕ್ಲೈಮ್ ಮಾಡಲು ಅರ್ಹವಾಗಿವೆಯೇ?

ಇಲ್ಲ, ಭಾರತದ ನಿವಾಸಿಗಳಾಗಿರುವ ವ್ಯಕ್ತಿಗಳು ಮಾತ್ರ ಸೆಕ್ಷನ್ 87A ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿಗಳನ್ನು ಕ್ಲೈಮ್ ಮಾಡಬಹುದು.

ಹಳೆಯ ಮತ್ತು ಹೊಸ ಟ್ಯಾಕ್ಸ್ ಅಡಿಯಲ್ಲಿ ಸೆಕ್ಷನ್ 87A ಅನ್ವಯಿಸುತ್ತದೆಯೇ?

ಹೌದು, ಸೆಕ್ಷನ್ 87A, ಹಳೆಯ ಮತ್ತು ಹೊಸ ಟ್ಯಾಕ್ಸ್ ನಿಯಮಗಳ ಅಡಿಯಲ್ಲಿ ವ್ಯಾಲಿಡ್ ಆಗಿದೆ.

ಸೆಕ್ಷನ್ 87A ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿಯನ್ನು ಕ್ಯಾಲ್ಕುಲೇಟ್ ಮಾಡುವಾಗ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆಯೇ?

ಇಲ್ಲ, ಸೆಕ್ಷನ್ 87A ಅಡಿಯಲ್ಲಿ ಟ್ಯಾಕ್ಸ್ ರಿಯಾಯಿತಿಯನ್ನು ಕ್ಲೈಮ್ ಮಾಡುವ ವ್ಯಕ್ತಿಯು ₹ 5 ಲಕ್ಷಗಳವರೆಗೆ ನೆಟ್ ಟ್ಯಾಕ್ಸೇಬಲ್ ಇನ್ಕಮ್ ಅನ್ನು ಗಳಿಸಬೇಕು (ಅಥವಾ ಹೊಸ ಟ್ಯಾಕ್ಸ್ ನಿಯಮಗಳಲ್ಲಿ ಮೌಲ್ಯಮಾಪನ ವರ್ಷ 24-25 ಕ್ಕೆ ₹7 ಲಕ್ಷಕ್ಕಿಂತ ಕಡಿಮೆ), ಮತ್ತು ಅವನು/ಅವಳು 50 ಲಕ್ಷಕ್ಕಿಂತ ಹೆಚ್ಚು ಆದರೆ ₹ 1 ಕೋಟಿಗಿಂತ ಕಡಿಮೆ ಇನ್ಕಮ್ ಅನ್ನು ಗಳಿಸಿದಾಗ, ಹೆಚ್ಚುವರಿ ಶುಲ್ಕವು ಅನ್ವಯಿಸುತ್ತದೆ.