ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿ
Instant Policy, No Medical Check-ups

ಭಾರತೀಯರಿಗೆ ಬಾಲಿ ಟೂರಿಸ್ಟ್ ವೀಸಾ

ಭಾರತೀಯರಿಗೆ ವಿವರವಾದ ಬಾಲಿ-ಇಂಡೋನೇಷ್ಯಾ ವೀಸಾ ಗೈಡ್

ಪ್ರಯಾಣವು ಹೀಲಿಂಗ್ ಥೆರಪಿಯಾಗಿದ್ದು, ಅದು ಮನಸ್ಸು ಮಾತ್ರವಲ್ಲ ಆತ್ಮವನ್ನೂ ಶಾಂತಗೊಳಿಸುತ್ತದೆ. ಪ್ರಕೃತಿ ಪ್ರಿಯರು ಮತ್ತು ಪದೇ ಪದೇ ಪ್ರಯಾಣ ಮಾಡುವವರು ಇಂಡೋನೇಷ್ಯನ್ ದ್ವೀಪಲ್ಲಿರುವ ಬಾಲಿಯನ್ನು ಅದರ ರಮಣೀಯ ಸೌಂದರ್ಯಕ್ಕಾಗಿ ಇಷ್ಟಪಡುತ್ತಾರೆ.

ರೊಟೀನ್ ಲೈಫ್ ಮತ್ತು ಒತ್ತಡದ ಕೆಲಸದಿಂದ ಪಾರಾಗಲು, ರಜಾದಿನಗಳಿಗೆ ಬಾಲಿ ಯುವಜನರ ಫೇವರಿಟ್ ಡೆಸ್ಟಿನೇಷನ್ ಆಗಿದೆ. ಇಂಡೋನೇಷ್ಯಾದಲ್ಲಿರುವ 1700 ದ್ವೀಪಗಳಲ್ಲಿ ಉಳಿದೆಲ್ಲಕ್ಕಿಂತ ಇದು ಅತ್ಯಂತ ಪ್ರಕಾಶಮಾನವಾದ ದ್ವೀಪವಾಗಿದೆ. ಬಹುತೇಕ ವರ್ಷಪೂರ್ತಿ ಇರುವ ಪ್ರವಾಸಿಗರ ರಶ್‌ನಿಂದಾಗಿ, ನೀವು ಪ್ರವಾಸವನ್ನು ಪ್ರೀ-ಪ್ಲಾನ್ ಮಾಡುವುದು ನಿಜಕ್ಕೂ ಅವಶ್ಯ.

ಉತ್ಸವ! ಮತ್ತು ಅದೂ ಬಾಲಿ, ಖಂಡಿತವಾಗಿಯೂ ಅದು ಕಿಕ್‌ ಕೊಡುವ ಅತ್ಯಂತ ಸಂತೋಷದಾಯಕ ಪ್ಲಾನ್ ಆಗಿದೆ. ಸಹಜ ಸುಂದರ ಬೀಚ್‌ಗಳಿಗೆ ಜನಪ್ರಿಯವಾಗಿದೆ, ನೀವು ವಾಟರ್‌ ಸ್ಪೋರ್ಟ್ಸ್, ಟ್ರೆಡಿಷನಲ್ ಆರ್ಟ್ ಮತ್ತು ಫುಡ್‌ನೊಂದಿಗೆ ಸಾಕಷ್ಟು ಅಣ್ವೇಷಣೆ ನಡೆಸಬಹುದು. ಮತ್ತು ನೀವು ಮಿಸ್‌ ಮಾಡದೆ ನಿಮ್ಮ ಟ್ರಿಪ್ ಗಾಗಿ ಹೇಗೆ ಪ್ರಿಪೇರ್ ಆಗಬಹುದು ಎಂಬುದು ಇಲ್ಲಿದೆ.

ಬಾಲಿ-ಇಂಡೋನೇಷ್ಯಾಗೆ ಭಾರತೀಯರಿಗೆ ವೀಸಾ ಬೇಕೇ?

ಹೌದು, ಇಂಡೋನೇಷ್ಯಾಗೆ ಭಾರತೀಯರು 30 ದಿನಗಳ ವೀಸಾ ಆನ್ ಅರೈವಲ್ ಹೊಂದಿರುವುದು ಅವಶ್ಯ. ಅದನ್ನು ಪ್ರಾದೇಶಿಕ ಇಮಿಗ್ರೇಷನ್ ಆಫೀಸ್ ಮೂಲಕ ಹೆಚ್ಚುವರಿ 30 ದಿನಗಳಿಗೆ ವಿಸ್ತರಿಸಿಕೊಳ್ಳಬಹುದು. ನಿಮ್ಮ ಟ್ರಾವೆಲ್ ಉದ್ದೇಶದ ಪ್ರಕಾರ ನೀವು ವೀಸಾದ ವಿಧವನ್ನು ಆಯ್ಕೆ ಮಾಡಿಕೊಳ್ಳಬಹುದು. ಎಲ್ಲಾ ವೀಸಾ ಅಪ್ರೂವಲ್‌ಗಳನ್ನು ಡೈರೆಕ್ಟೋರೇಟ್ ಜನರಲ್ ಆಫ್ ಇಮಿಗ್ರೇಷನ್ ಮೂಲಕ ಮಾತ್ರ ನೀಡಲಾಗುತ್ತದೆ.

ಒಂದು ವೇಳೆ ನಿಮ್ಮ ಟ್ರಾವೆಲ್ ಅವಧಿಯು 30 ದಿನಗಳಿಗಿಂತ ಹೆಚ್ಚಿದ್ದರೆ ನಿಮಗೆ ವೀಸಾ ಅವಶ್ಯಕತೆ ಇದೆ. ನಿಮ್ಮ ಟ್ರಾವೆಲ್ ಉದ್ದೇಶದ ಪ್ರಕಾರ ನೀವು ವೀಸಾದ ವಿಧವನ್ನು ಆಯ್ಕೆ ಮಾಡಿಕೊಳ್ಳಬಹುದು.

ಭಾರತೀಯ ನಾಗರಿಕರಿಗೆ ಬಾಲಿಯಲ್ಲಿ ವೀಸಾ ಆನ್ ಅರೈವಲ್ ಇದೆಯೇ?

ನಿಮ್ಮ ಟ್ರಾವೆಲ್ ಅವಧಿ 30 ದಿನಗಳಾಗಿದ್ದರೆ, ನೀವು ಇಂಡೋನೇಷ್ಯಾ ಪ್ರವೇಶಿಸುವಾಗ ವೀಸಾ ಆನ್ ಅರೈವಲ್‌ಗೆ ಅಪ್ಲೈ ಮಾಡಬಹುದು. ಇದನ್ನು ರೂ.. 2,680* (Rp 500,000. /SGD 50 /ಯುಎಸ್ಡಿ 35) ವೆಚ್ಚದಲ್ಲಿ ಹೆಚ್ಚುವರಿ 30 ದಿನಗಳಿಗೆ ವಿಸ್ತರಿಸಿಕೊಳ್ಳಬಹುದು.

ಒಂದು ವೇಳೆ ನಿಮ್ಮ ಟ್ರಾವೆಲ್ ಅವಧಿಯು 30 ದಿನಗಳಿಗಿಂತ ಹೆಚ್ಚಿದ್ದರೆ, ನೀವು ಇಂಡೋನೇಷ್ಯಾ ಪ್ರವೇಶಿಸುವಾಗ ವೀಸಾ ಆನ್ ಅರೈವಲ್‌ಗೆ ಅಪ್ಲೈ ಮಾಡಬಹುದು.

*ಡಿಸ್‌ಕ್ಲೈಮರ್‌: ಪ್ರಸ್ತುತ ಎಕ್ಸ್‌ಚೇಂಜ್‌ ರೇಟ್‌ ಪ್ರಕಾರ ಬದಲಾವಣೆಗೆ ಒಳಪಟ್ಟಿರುವುದರಿಂದ ಬೆಲೆಗಳು ಬದಲಾಗುತ್ತವೆ.

 

ಇಂಡೋನೇಷ್ಯಾದಲ್ಲಿ ವೀಸಾ ವಿಧಗಳು

ವೀಸಾ ವಿಧ ದಿನಗಳ ಸಂಖ್ಯೆ ವಿವರಗಳು
ಪ್ರವಾಸಿ 30-60 ದಿನಗಳು ವೀಸಾ ಆನ್ ಅರೈವಲ್‌ ಶುಲ್ಕಗಳು IDR500,000, 30 ದಿನಗಳವರೆಗೆ ವಿಸ್ತರಿಸಿಕೊಳ್ಳಬಹುದು.
ಸೋಷಿಯಲ್/ಕಲ್ಚರಲ್/ಟೂರಿಸ್ಟ್ -B211 60 ದಿನಗಳವರೆಗೆ ವ್ಯಾಲಿಡ್ 30 ದಿನಗಳಿಗೆ 3 ಸಲ ವಿಸ್ತರಿಸಿಕೊಳ್ಳಬಹುದು. ಇಂಡೋನೇಷ್ಯಾದ ಹೊರಗೆ ಕಾನ್ಸುಲೇಟ್ ಅಥವಾ ಎಂಬೆಸಿಯಿಂದ ನೀಡಲಾಗುತ್ತದೆ.
ಮಲ್ಟಿಪಲ್ ಎಂಟ್ರಿ ವೀಸಾ ಮಲ್ಟಿಪಲ್ ಎಂಟ್ರಿ ವೀಸಾ ಇಂಡೋನೇಷ್ಯಾದ ಹೊರಗೆ ಕಾನ್ಸುಲೇಟ್ ಅಥವಾ ಎಂಬೆಸಿಯಿಂದ ನೀಡಲಾಗುತ್ತದೆ. 1 ವರ್ಷಕ್ಕೆ ವ್ಯಾಲಿಡ್

ಭಾರತೀಯ ನಾಗರಿಕರಿಗೆ ಬಾಲಿ-ಇಂಡೋನೇಷ್ಯಾ ವೀಸಾದ ಶುಲ್ಕ

ವೀಸಾ ವಿಧ ದಿನಗಳ ಸಂಖ್ಯೆ ಶುಲ್ಕಗಳು
ಟೂರಿಸ್ಟ್ (ವೀಸಾ ಆನ್ ಅರೈವಲ್) 30-60 ● ರೂ. 2,680 ಅಥವಾ ಯುಎಸ್ಡಿ 35 ● ವಸತಿ ವಿಸ್ತರಣೆಗಾಗಿ, ಯಾರೇ ಭಾರತೀಯ ನಾಗರಿಕರು ಇಮಿಗ್ರೇಷನ್‌ ಹಾಲ್‌ನಲ್ಲಿ ರೂ. 4213 ಅಥವಾ ಯುಎಸ್ಡಿ 61.5 ಪಾವತಿಸಬೇಕು. ● ಒಂದು ವೇಳೆ ಏಜೆಂಟ್ ಸಹಾಯದಿಂದ ವಿಸ್ತರಣೆ ಅಪ್ಲೈ ಮಾಡಿದ್ದರೆ, ನೀವು ಅವರ ಶುಲ್ಕವಾಗಿ ರೂ..1817 ಅಥವಾ ಯುಎಸ್ಡಿ 26.50 ಪಾವತಿಸುವುದು ಅವಶ್ಯ.
ಸೋಷಿಯಲ್/ಕಲ್ಚರಲ್ ಉದ್ದೇಶಗಳು 30-60 ದಿನಗಳು ● B-211 ವೀಸಾ ಅರೈವಲ್ ಸಮಯದಲ್ಲಿ ಖರೀದಿಸಬಹುದು. ● ಟ್ರಾವೆಲ್ ಏಜೆಂಟ್ ಆಗಿದ್ದರೂ ಪರವಾಗಿಲ್ಲ ಒಬ್ಬ ವೈಯಕ್ತಿಕ ಪ್ರಾಯೋಜಕರು ಅವಶ್ಯ. ● ವಿಸ್ತರಣೆ ಸಾಧ್ಯವಿದೆ, ಆದರೆ ಗರಿಷ್ಠ 3 ಸಲ. ● ವೀಸಾ ಮತ್ತು ಪ್ರತೀ ವಿಸ್ತರಣೆಗೆ ಬೆಲೆ ರೂ.4216 ಅಥವಾ ಯುಎಸ್ಡಿ 61.5. ● ಒಂದು ವೇಳೆ ಏಜೆಂಟ್ ಸಹಾಯದಿಂದ ವಿಸ್ತರಣೆ ಅಪ್ಲೈ ಮಾಡಿದ್ದರೆ, ನೀವು ಅವರ ಶುಲ್ಕವಾಗಿ ರೂ..1817 ಅಥವಾ ಯುಎಸ್ಡಿ 26.50 ಪಾವತಿಸುವುದು ಅವಶ್ಯ.
ಬಿಸಿನೆಸ್ ಯಾವುದೇ ಆದರೆ 30 ದಿನಗಳಿಗಿಂತ ಹೆಚ್ಚು ಇಲ್ಲ ರೂ. 2900 ಅಥವಾ ಯುಎಸ್ಡಿ 42.30

ಬಾಲಿ-ಇಂಡೋನೇಷ್ಯಾ ವೀಸಾಗೆ ಅವಶ್ಯವಿರುವ ಡಾಕ್ಯುಮೆಂಟ್‌ಗಳು

(ನೀವು 30ಕ್ಕಿಂತ ಹೆಚ್ಚು ದಿನಗಳ ಕಾಲ ಪ್ರಯಾಣ ಮಾಡುತ್ತಿದ್ದರೆ)

ಬಾಲಿ ವೀಸಾಗೆ ಬೇಕಾದ ಮೊದಲ ಮತ್ತು ಅತಿಮುಖ್ಯ ಬೇಸಿಕ್ ಡಾಕ್ಯುಮೆಂಟ್ ಪಾಸ್‌ಪೋರ್ಟ್‌. ಟ್ರಾವೆಲ್ ದಿನಾಂಕ ಮೀರಿ 6 ತಿಂಗಳವರೆಗೆ ನಿಮ್ಮ ಪಾಸ್‌ಪೋರ್ಟ್ ವ್ಯಾಲಿಡ್ ಆಗಿದೆಯೇ ಎಂದು ಚೆಕ್ ಮಾಡಿ.

ಬಾಲಿ-ಇಂಡೋನೇಷ್ಯಾ ವೀಸಾಗೆ ಅಪ್ಲೈ ಮಾಡುವುದು ಹೇಗೆ?

ಪ್ರವಾಸಿಯಾಗಿ ಬಾಲಿಗೆ ಪ್ರಯಾಣ ಮಾಡುತ್ತಿದ್ದರೆ, ನಿಮ್ಮ ವಾಸ್ತವ್ಯ ಬಹುಶಃ 30 ದಿನಗಳಿಗಿಂತ ಕಡಿಮೆ ಇರುತ್ತದೆ. ಅಂಥಾ ಸಂದರ್ಭಗಳಲ್ಲಿ, ನೀವು ವೀಸಾ ಆನ್ ಅರೈವಲ್ ಪಡೆಯಬಹುದು. ಆಗ ಏರ್‌ಪೋರ್ಟ್‌ನಲ್ಲಿ ಹಾಜರುಪಡಿಸಬೇಕಾದ ವಸ್ತುಗಳೆಂದರೆ :

  • ಎರಡು ಖಾಲಿ ವೀಸಾ ಪುಟಗಳ ಜೊತೆಗೆ ಕನಿಷ್ಠ 6 ತಿಂಗಳ ವ್ಯಾಲಿಡಿಟಿ ಹೊಂದಿರುವ ಪಾಸ್‌ಪೋರ್ಟ್‌.

  • ಮುಂದಿನ ಮತ್ತು ಹಿಂತಿರುಗುವ ವಿಮಾನಗಳ ಪುರಾವೆ.

 

ನಿಮ್ಮ ವಾಸ್ತವ್ಯವು 30 ದಿನಗಳಿಗಿಂತ ಹೆಚ್ಚಿಗೆ ಇದ್ದರೆ ಟೂರಿಸ್ಟ್ ವೀಸಾಗೆ ಅಪ್ಲೈ ಮಾಡುವ ಪ್ರೊಸೆಸ್:

  • ಪ್ರೊಸೀಜರ್‌ಗಾಗಿ ಮತ್ತು ಅಪ್ಲಿಕೇಷನ್‌ ಫಾರ್ಮ್ ಡೌನ್‌ಲೋಡ್ ಮಾಡಲು ಆನ್‌ಲೈನ್‌ಗೆ ಭೇಟಿ ನೀಡಿ.

  • ಭೇಟಿಯ ಉದ್ದೇಶವನ್ನು ತಿಳಿಸುವ ಕವರ್ ಲೆಟರ್ ಅನ್ನು ಡ್ರಾಫ್ಟ್ ಮಾಡಿ.

  • ನಿಮ್ಮ ಪಾಸ್‌ಪೋರ್ಟ್‌ ಎರಡು ಖಾಲಿ ವೀಸಾ ಪುಟಗಳ ಜೊತೆಗೆ ಕನಿಷ್ಠ 6 ತಿಂಗಳ ವ್ಯಾಲಿಡಿಟಿ ಹೊಂದಿದೆಯೇ ಎಂದು ಚೆಕ್ ಮಾಡಿ.

  • ಫಾರ್ಮ್‌ಗೆ ನಿಮ್ಮ ಫೋಟೋಗ್ರಾಫ್‌ ಅನ್ನು ಅಂಟಿಸಿ. ಫೋಟೋಗ್ರಾಫ್ ಕೇವಲ 3 ತಿಂಗಳು ಹಳೆಯದಾಗಿರಬಹುದು.

  • ನಿಮ್ಮ ದೃಢೀಕೃತ ವಿಮಾನ ಟಿಕೆಟ್‌ಗಳನ್ನು ಪಡೆಯಿರಿ ಮತ್ತು ಅದನ್ನು ಅಪ್ಲಿಕೇಷನ್ ಫಾರ್ಮ್‌ನೊಂದಿಗೆ ಲಗತ್ತಿಸಿ.

  • ಫೈಲ್ ಜೊತೆಗೆ 10 ಅಥವಾ 25ಯುಎಸ್ಡಿ ಶುಲ್ಕವನ್ನು ಪಾವತಿಸಬೇಕು.

  • ಬಾಲಿ ಇಂಡೋನೇಷ್ಯಾದಲ್ಲಿನ ನಿಮ್ಮ ಹೋಟೆಲ್ ಬುಕಿಂಗ್ ಪುರಾವೆಯನ್ನು ತೋರಿಸಿ. ಒಂದು ವೇಳೆ ನೀವು ಬಾಲಿಯಲ್ಲಿ ಸ್ಪಾನ್ಸರ್ ಹೊಂದಿರುವ ಅದೃಷ್ಟವಂತರಾಗಿದ್ದರೆ, ಸ್ಪಾನ್ಸರ್ ಪತ್ರವನ್ನು ಹಾಜರುಪಡಿಸಿ. ಫೈಲ್ ಪ್ರೊಸೆಸ್ ಆಗಲು 3-4 ದಿನಗಳು ಬೇಕಾಗುತ್ತವೆ.

  • ಅಪ್ಲಿಕೆಂಟ್ ಬ್ಯಾಂಕ್‌ನಲ್ಲಿ ಬೇಕಾಗುವಷ್ಟು ಫಂಡ್‌ಗಳನ್ನು ಹೊಂದಿರಬೇಕು. ಅದು ನೀವು ಬಾಲಿಯಲ್ಲಿರುವಾಗ ನಿಮ್ಮ ವಾಸ್ತವ್ಯವು ಆರಾಮದಾಯಕವಾಗಿರುತ್ತದೆ ಎಂಬ ಪುರಾವೆಯಾಗಿರುತ್ತದೆ.

  • ಎಲ್ಲಾ ಅಪ್ಲಿಕೆಂಟ್‌ಗಳು ಫೈಲ್ ಟ್ರ್ಯಾಕಿಂಗ್‌ ನಂಬರ್‌ ಪಡೆಯುತ್ತಾರೆ, ಅದು ನಿಮ್ಮ ವೀಸಾದ ಸ್ಟೇಟಸ್‌ ತಿಳಿಯಲು ಸಹಾಯ ಮಾಡುತ್ತದೆ.

  • ಎಲ್ಲಾ ಪ್ರೊಸೆಸ್ ಪೂರ್ತಿಯಾದ ಬಳಿಕ, ನೀವು ನಿಮ್ಮ ಪಾಸ್‌ಪೋರ್ಟ್‌ ಅನ್ನು ಕಲೆಕ್ಟ್‌ ಮಾಡಬಹುದು. ಸಂತೋಷದ ಸಮಯಗಳಿಗಾಗಿ ಗೆಟ್‌ ಸೆಟ್‌ ಗೋ.

ಬಾಲಿ ಇಂಡೋನೇಷ್ಯಾ ಟೂರಿಸ್ಟ್ ವೀಸಾ ಪ್ರೊಸೆಸಿಂಗ್ ಸಮಯ

ವಾಸ್ತವ್ಯ 30 ದಿನಗಳಿಗಿಂತ ಹೆಚ್ಚಿಗೆ ಇದ್ದರೆ ಟೂರಿಸ್ಟ್ ವೀಸಾ ಪ್ರೊಸೆಸಿಂಗ್‌ಗೆ 2ರಿಂದ 15 ದಿನಗಳ ಅಗತ್ಯವಿದೆ. ಬಾಲಿ ಪ್ರಪಂಚದಾದ್ಯಂತ ಇರುವ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಾಸ್ತವ್ಯ 30 ದಿನಗಳಿಗಿಂತ ಕಡಿಮೆ ಇದ್ದರೆ ಭಾರತವೂ ಸೇರಿದಂತೆ ಕೆಲವು ದೇಶಗಳು ವೀಸಾ ವಿಸ್ತರಣೆಗೆ ಅನುವು ಮಾಡಿಕೊಡುತ್ತದೆ.

ನಾನು ಇಂಡೋನೇಷ್ಯಾಗೆ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಬೇಕೇ?

ತಮಾಷೆ ಮತ್ತು ಎಂಜಯ್‌ಮೆಂಟ್‌ಗಾಗಿ ಶೀಘ್ರದಲ್ಲೇ ಬಾಲಿಗೆ ಪ್ರಯಾಣಿಸುತ್ತಿದ್ದೀರೇ? ಹೌದು ಎಂದಾದರೆ, ನಿಮ್ಮ ಪ್ರಯಾಣಕ್ಕೆ ಸಿದ್ಧರಾಗುವ ಮೊದಲು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನಿಮಗಾಗಿ ಸ್ವಲ್ಪ ಮನಃಶಾಂತಿಯನ್ನು ಪಡೆಯಿರಿ. ಅದು ಕಡ್ಡಾಯವಲ್ಲದೇ ಇದ್ದರೂ ತುರ್ತು ಪರಿಸ್ಥಿತಿಗಳಲ್ಲಿ ಅದನ್ನು ಹೊಂದಿರುವುದು ಖಂಡಿತವಾಗಿಯೂ ಉತ್ತಮ ಐಡಿಯಾ. ಬಾಲಿಗೆ ಭೇಟಿ ಕೊಡುವ ಯಾರೇ ಆದರೂ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಬೇಕು :

ಭಾರತೀಯ ನಾಗರಿಕರಿಗೆ ಬಾಲಿ ವೀಸಾ ಕುರಿತು ಪದೇಪದೇ ಕೇಳಲಾದ ಪ್ರಶ್ನೆಗಳು

ಇಂಡೋನೇಷ್ಯಾಗೆ ನನ್ನ ವೀಸಾ ಆನ್ ಅರೈವಲ್‌ಗೆ ತೊಂದರೆ-ಮುಕ್ತ ಅಪ್ರೂವಲ್ ಖಚಿತಪಡಿಸಿಕೊಳ್ಳಲು ನಾನು ಯಾವೆಲ್ಲಾ ಡಾಕ್ಯುಮೆಂಟ್‌ಗಳನ್ನು ಸಬ್ಮಿಟ್‌ ಮಾಡಬೇಕು?

ಇಂಡೋನೇಷ್ಯಾಗೆ ನನ್ನ ವೀಸಾ ಆನ್ ಅರೈವಲ್‌ಗೆ ಸುಲಭವಾಗಿ ಅಪ್ರೂವಲ್ ಪಡೆಯಲು, ನೀವು ಈ ಕೆಳಗಿನ ಸಬ್ಮಿಟ್‌ ಮಾಡಲೇಬೇಕು-

  • ಎರಡು ಖಾಲಿ ಪುಟಗಳ ಜೊತೆಗೆ ಕನಿಷ್ಠ 6 ತಿಂಗಳ ವ್ಯಾಲಿಡಿಟಿ ಪೀರಿಯಡ್ ಹೊಂದಿರುವ ಭಾರತೀಯ ಪಾಸ್‌ಪೋರ್ಟ್.
  • ಕನ್ಫರ್ಮ್ ಆದ ವಿಮಾನದ ರಿಟರ್ನ್ ಟಿಕೆಟ್.

ಭಾರತೀಯ ವೀಸಾ ಆನ್ ಅರೈವಲ್ ಹೋಲ್ಡರ್‌ಗಳಿಗೆ ಸೀಪೋರ್ಟ್‌ಗಳ ಮೂಲಕ ಇಂಡೋನೇಷ್ಯಾ ಪ್ರವೇಶಿಸಲು ಅನುಮತಿ ಇದೆಯೇ?

ಹೌದು, ಇಂಡೋನೇಷ್ಯಾಗೆ ವೀಸಾ ಆನ್ ಅರೈವಲ್ ಹೊಂದಿರುವುದರಿಂದ, ನೀವು ಯಾವುದೇ ಇಂಟರ್‌ನ್ಯಾಷನಲ್ ಸೀಪೋರ್ಟ್‌ಗಳ ಮೂಲಕ ದೇಶವನ್ನು ಪ್ರವೇಶಿಸಬಹುದು. ಅಲ್ಲದೇ, ಎಲ್ಲಾ ಅವಶ್ಯಕ ಡಾಕ್ಯುಮೆಂಟ್ಗಳನ್ನು ಒಯ್ಯುವುದನ್ನು ಖಚಿತಪಡಿಸಿಕೊಳ್ಳಿ.

ಇಂಡೋನೇಷ್ಯಾಗೆ ಟೂರಿಸ್ಟ್ ವೀಸಾ ಆನ್ ಅರೈವಲ್ ಅನ್ನು ಯಾವುದೇ ಇತರ ಪರ್ಮಿಟ್ ಅಥವಾ ವೀಸಾ ವಿಧಾನಕ್ಕೆ ಪರಿವರ್ತಿಸಿಕೊಳ್ಳಲು ನಾನು ಅರ್ಹನಾಗಿದ್ದೇನೆಯೇ?

ಇಲ್ಲ, ಇಂಡೋನೇಷ್ಯಾಗೆ ಟೂರಿಸ್ಟ್ ವೀಸಾ ಆನ್ ಅರೈವಲ್ ಅನ್ನು ಕಟ್ಟುನಿಟ್ಟಾಗಿ ಪ್ರವಾಸ ಮತ್ತು ಪ್ರಯಾಣಕ್ಕೆ ಬಳಸಲಾಗುತ್ತದೆ. ನಾವು ಯಾವುದೇ ಇನ್ನಿತರ ಪರ್ಮಿಟ್ ಅಥವಾ ವೀಸಾ ವಿಧಾನಕ್ಕೆ ಪರಿವರ್ತಿಸಲು ಸಾಧ್ಯವಿಲ್ಲ.

ಒಂದು ವೇಳೆ ನನ್ನ ವೀಸಾ ಆನ್ ಅರೈವಲ್ ಎಕ್ಸ್‌ಪೈರ್ ಆದ ಬಳಿಕವೂ ನಾನು ಇಂಡೋನೇಷ್ಯಾದಲ್ಲಿ ಉಳಿದುಕೊಂಡರೆ ನಾನು ಯಾವ ಪರಿಣಾಮಗಳನ್ನು ಎದುರಿಸಬಹುದು?

ಇಂಡೋನೇಷ್ಯಾದಲ್ಲಿ ನೀವು ಹೆಚ್ಚವರಿಯಾಗಿ ವಾಸ್ತವ್ಯ ಮಾಡಿದ ಪೀರಿಯಡ್ ಆಧಾರದಲ್ಲಿ, ದಿನವಹಿ ದಂಡಗಳು, ಡೀಪೋರ್ಟೇಷನ್ ಅಥವಾ ಬ್ಲಾಕ್‌ಲಿಸ್ಟಿಂಗ್‌ನಂತಹ ಪರಿಣಾಮಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ, ನಿಮ್ಮ ವೀಸಾ ಅವಧಿ ಎಕ್ಸ್‌ಪೈರ್ ಆಗುವ ಮೊದಲು ಅದನ್ನು ರಿನೀವ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ.

ಇಂಡೋನೇಷ್ಯಾಗೆ ಭೇಟಿ ಕೊಡುವಾಗ ನಾನು ನನ್ನ ವೀಸಾ ಆನ್ ಅರೈವಲ್ ಅನ್ನು ಎಲ್ಲಿ ಕಲೆಕ್ಟ್ ಮಾಡಬಹುದು?

ಒಮ್ಮೆ ಅಪ್ರೂವ್ ಆದ ಮೇಲೆ, ನೀವು ಇಂಡೋನೇಷ್ಯಾವನ್ನು ತಲುಪಿದ ನಂತರ ಅನುಮತಿಸಲಾದ ಭೂ ಗಡಿಯಾದ ಪಶ್ಚಿಮ ಕಾಲಿಮಂಟನ್‌ನ ಎಂಟಿಕಾಂಗ್‌ನಲ್ಲಿ, ಮುಖ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ಗಳಲ್ಲಿ ಮತ್ತು ಸೀಪೋರ್ಟ್‌ಗಳಲ್ಲಿ ನಿಮ್ಮ ವೀಸಾ ಆನ್ ಅರೈವಲ್ ಅನ್ನು ಕಲೆಕ್ಟ್ ಮಾಡಿಕೊಳ್ಳಬಹುದು.