ಪಾಸ್ಪೋರ್ಟ್ ನಷ್ಟವನ್ನು ಆವರಿಸುವ ಪ್ರಯಾಣ ವಿಮೆ   

Instant Policy, No Medical Check-ups

ನಿಮ್ಮ ಪಾಸ್‌ಪೋರ್ಟ್ ಕಳೆದುಹೋದರೆ ಎಲ್ಲವೂ ಕಳೆದುಹೋಗುವುದಿಲ್ಲ

ಪಾಸ್‌ಪೋರ್ಟ್ ಇಂದು ನಮ್ಮ ಪ್ರಮುಖ ಟ್ರಾವೆಲ್ ಡಾಕ್ಯುಮೆಂಟ್ ಮಾತ್ರ ಆಗಿರದೆ, ಪ್ರಪಂಚದಾದ್ಯಂತ ನಮ್ಮ ಜರ್ನಿಗಳ ಅಲ್ಪ ಪ್ರಾತಿನಿಧ್ಯವಾಗಿದೆ. ನಮ್ಮ ಪಾಸ್‌ಪೋರ್ಟ್‌ನ ಪೇಜುಗಳಾದ್ಯಂತ ಇರುವ ಅಂಚೆಚೀಟಿಗಳು ಪ್ರಪಂಚದಾದ್ಯಂತ ನಾವು ಬಿಟ್ಟಿರುವ ಗುರುತುಗಳ ಬಹುತೇಕ ರೂಪಕವಾಗಿದೆ.

ಇದು ನಮ್ಮ ಇಂಟರ್‌ನ್ಯಾಷನಲ್ ಟ್ರಾವೆಲ್‌ಗೆ ಮಾತ್ರವಲ್ಲದೆ ಗುರುತಿನ ಉದ್ದೇಶಗಳಿಗಾಗಿ ಎಷ್ಟು ಮುಖ್ಯವಾದುದಾದರೂ ಅಥವಾ, ಇದನ್ನು ಪಡೆಯುವ ಪ್ರಕ್ರಿಯೆಯು, ವ್ಯಕ್ತಿಯೊಬ್ಬನಿಗೆ ಕೆಲವೊಮ್ಮೆ ಬೇಸರ ಉಂಟುಮಾಡಬಹುದು! ಪಾಸ್‌ಪೋರ್ಟ್‌ ಬಹುಶಃ ನಾವು ಹೊಂದಿರುವ ನಮ್ಮ ಟಾಪ್ ಐದು ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. "ಬೆಂಕಿಯಿಂದ ನೀವು ನಿಮ್ಮೊಂದಿಗೆ ಹೊರಗೊಯ್ಯುವ 5 ವಸ್ತುಗಳು ಯಾವುವು?" ಎಂಬ ರೀತಿಯ ಪ್ರಶ್ನೆಗೆ ನೀವು ಹೇಳುವ ಉತ್ತರದಲ್ಲಿ ಇದೂ ಒಂದು ಎಂದು ನಿಮಗೆ ತಿಳಿದಿದೆ.

ಈಗ, ನೀವು ವೆಕೇಶನ್‌ನಲ್ಲಿರುವಾಗ ಅಥವಾ ಕೆಟ್ಟ ಸಂದರ್ಭದಲ್ಲಿ, ನಿಮ್ಮ ಫ್ಲೈಟ್‌ನಿಂದ ಹೊರಡುವ ಮೊದಲು, ನಿಮ್ಮ ಪಾಸ್‌ಪೋರ್ಟ್‌ ಅನ್ನು ನೀವು ಕಳೆದುಕೊಳ್ಳುತ್ತೀರಿ ಎಂದು ಊಹಿಸಿ! ಕೆಲವೊಮ್ಮೆ, ನಾವು ಎಷ್ಟೇ ಜಾಗರೂಕರಾಗಿದ್ದರೂ, ಇವುಗಳು ಸಂಭವಿಸುತ್ತವೆ. ಆದ್ದರಿಂದ, ಅಂತಹ ಸಂದರ್ಭಗಳಲ್ಲಿ ನೀವು ಏನು ಮಾಡುತ್ತೀರಿ? ಅದೃಷ್ಟವಶಾತ್, ನೀವು ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ ನಿಮ್ಮ ಟ್ರಿಪ್ ಅನ್ನು ಮೊದಲೇ ಸುರಕ್ಷಿತಗೊಳಿಸಿದ್ದರೆ, ಅದು ನಿಮ್ಮನ್ನು ರಕ್ಷಿಸುತ್ತದೆ! ಅಂತಹ ದುಃಖಕರ ಸಂದರ್ಭಗಳಲ್ಲಿ, ನಿಮ್ಮ ಪಾಸ್‌ಪೋರ್ಟ್ ಅನ್ನು ನೀವು ಕಳೆದುಕೊಂಡಾಗ ನಿಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವುದಿಲ್ಲ ಎಂಬುದನ್ನು ಟ್ರಾವೆಲ್ ಇನ್ಶೂರೆನ್ಸ್ ಖಚಿತಪಡಿಸುತ್ತದೆ!

ಪಾಸ್‌ಪೋರ್ಟ್ ನಷ್ಟದ ಕವರ್ ಎಂದರೇನು?

ಪಾಸ್‌ಪೋರ್ಟ್ ನಷ್ಟದ ಕವರ್ ಎನ್ನುವುದು ಡಿಜಿಟ್‌ನ ಟ್ರಾವೆಲ್ ಇನ್ಶೂರೆನ್ಸ್‌ನಲ್ಲಿ ಒಳಗೊಂಡಿರುವ ಪ್ರಯೋಜನವಾಗಿದ್ದು, ಇದು ನೀವು ವೆಕೇಶನ್‌ನಲ್ಲಿರುವಾಗ ನಿಮ್ಮ ಪಾಸ್‌ಪೋರ್ಟ್ ಅನ್ನು ಕಳೆದುಕೊಂಡರೆ, ತಾತ್ಕಾಲಿಕ ಪಾಸ್‌ಪೋರ್ಟ್ ಪಡೆಯುವ ಮತ್ತು ಹೊಸ ಪಾಸ್‌ಪೋರ್ಟ್ ಅನ್ನು ಪಡೆಯುವ ವೆಚ್ಚಗಳನ್ನು ಕವರ್ ಮಾಡುತ್ತದೆ. ನೀವು ಎಲ್ಲಿಗೆ ಟ್ರಾವೆಲ್ ಮಾಡುತ್ತಿದ್ದೀರಿ ಎನ್ನುವುದನ್ನು ಲೆಕ್ಕಿಸದೆ- ಆಯಾ ದೇಶದ ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ ನೀವು ನಿಮ್ಮನ್ನು ಸುರಕ್ಷಿತವಾಗಿರಿಸಿಕೊಳ್ಳುವವರೆಗೆ ಈ ಇನ್ಶೂರೆನ್ಸ್ ಪಾಲಿಸಿಯು ಪ್ರಪಂಚದಾದ್ಯಂತ ನಿಮ್ಮನ್ನು ಕವರ್ ಮಾಡುತ್ತದೆ.

ಈ ಕವರ್ ಯಾವಾಗ ಬಳಕೆಗೆ ಬರುತ್ತದೆ?

ನೀವು ವೆಕೇಶನ್‌ನಲ್ಲಿರುವಾಗ ನಿಮ್ಮ ಪಾಸ್‌ಪೋರ್ಟ್ ಅನ್ನು ನೀವು ಕಳೆದುಕೊಂಡರೆ, ನೀವು ಭೇಟಿ ನೀಡುತ್ತಿರುವ ದೇಶದ ಆಯಾ ಭಾರತೀಯ ಎಂಬೆಸಿಯಿಂದ ಪಾಸ್‌ಪೋರ್ಟ್ ರಿಪ್ಲೇಸ್‌ಮೆಂಟ್ ಪಡೆಯುವ ವೆಚ್ಚಗಳನ್ನು ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಕವರ್ ಮಾಡುತ್ತದೆ.

ಪಾಸ್‌ಪೋರ್ಟ್ ಕಳೆದುಹೋದ ಸಂದರ್ಭದಲ್ಲಿ ನಾನು ಏನು ಮಾಡಬೇಕು?

ನನ್ನ ಟ್ರಿಪ್‌ನಲ್ಲಿ ನಾನು ನನ್ನ ಪಾಸ್‌ಪೋರ್ಟ್ ಕಳೆದುಕೊಂಡರೆ?

ನಿಮ್ಮ ಪಾಸ್‌ಪೋರ್ಟ್ ಅನ್ನು ಕಳೆದುಕೊಳ್ಳುವ ವಿಷಯ ಜೀವ ಹಿಂಡುತ್ತದೆ! ಆದರೆ ಇದೇನು ಇಷ್ಟಕ್ಕೆ ಜಗತ್ತು ಮುಗಿದು ಹೋಗುವುದಿಲ್ಲ. ನಿಮ್ಮ ಪಾಸ್‌ಪೋರ್ಟ್ ಕಳೆದುಹೋಗಿದೆ ಅಥವಾ ಕಳ್ಳತನವಾಗಿದೆ ಎಂದು ನೀವು ಅರಿತುಕೊಂಡ ನಂತರ ಮಾಡಬೇಕಾದ ಮೊದಲ ಕೆಲಸವೆಂದರೆ, ಅದನ್ನು ಪೊಲೀಸರಿಗೆ ರಿಪೋರ್ಟ್ ಮಾಡುವುದು ಮತ್ತು ರಿಟನ್ ಪೊಲೀಸ್ ರಿಪೋರ್ಟ್‌ಗಾಗಿ ರಿಕ್ವೆಸ್ಟ್ ಮಾಡುವುದು. ನಿಮ್ಮ ಕಳೆದುಹೋದ ಅಥವಾ ಕಳುವಾದ ಪಾಸ್‌ಪೋರ್ಟ್ ಅನ್ನು ಒಮ್ಮೆ ರಿಪೋರ್ಟ್ ಮಾಡಿದರೆ, ಹತ್ತಿರದ ಇಂಡಿಯನ್ ಕಾನ್ಸ್ಯೂಲೇಟ್ ಅಥವಾ ಇಂಡಿಯನ್ ಎಂಬೆಸಿಯಿಂದ ಡುಪ್ಲಿಕೇಟ್ ಪಾಸ್‌ಪೋರ್ಟ್ ಅಥವಾ ಎಮರ್ಜೆನ್ಸಿ ಟ್ರಾವೆಲ್ ಡಾಕ್ಯುಮೆಂಟ್ ಅನ್ನು ಪಡೆಯಲು ನೀವು ಪೊಲೀಸ್ ರಿಪೋರ್ಟ್ ಅನ್ನು ಬಳಸಬಹುದು. ನೀವು ಮಾಡಬೇಕಾಗಿರುವುದು ಇಷ್ಟೇ, ನಮ್ಮ 24x7 ಟ್ರಾವೆಲ್ ಅಸಿಸ್ಟೆಂಟ್ ಹೆಲ್ಪ್‌ಲೈನ್‌ನಲ್ಲಿ ನಮಗೆ ಮಿಸ್ಡ್ ಕಾಲ್ ನೀಡಿ ಮತ್ತು ಹತ್ತಿರದ ಇಂಡಿಯನ್ ಕಾನ್ಸ್ಯೂಲೇಟ್ ಅಥವಾ ಇಂಡಿಯನ್ ಎಂಬೆಸಿಯ ವಿಳಾಸವನ್ನು ನೀಡುವುದರ ಜೊತೆಗೆ ತಾತ್ಕಾಲಿಕ ಅಥವಾ ಎಮರ್ಜೆನ್ಸಿ ಪಾಸ್‌ಪೋರ್ಟ್ ಅನ್ನು ಹೇಗೆ ಪಡೆಯುವುದು ಎಂಬ ಪ್ರಕ್ರಿಯೆಯನ್ನು ತಿಳಿಸಲು ನಾವು 10-ನಿಮಿಷಗಳಲ್ಲಿ ನಿಮಗೆ ಪುನಃ ಕರೆ ಮಾಡುತ್ತೇವೆ.

ಟ್ರಿಪ್‌ನಲ್ಲಿ ಪಾಸ್‌ಪೋರ್ಟ್ ಕಳೆದುಹೋದ ಸಂದರ್ಭದಲ್ಲಿ ಡಿಜಿಟ್‌ನ ಟ್ರಾವೆಲ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

ಪ್ರಕ್ರಿಯೆಯ ಮೂಲಕ ನಿಮಗೆ ಮಾರ್ಗದರ್ಶನ ನೀಡುವುದರ ಜೊತೆಗೆ, ನಿಮ್ಮ ಕಳೆದುಹೋದ ಪಾಸ್‌ಪೋರ್ಟ್ ಅನ್ನು ರಿಪ್ಲೇಸ್ ಮಾಡುವ ವೆಚ್ಚವನ್ನು ಸಹ ಡಿಜಿಟ್ ನಿಮಗೆ ಪಾವತಿಸುತ್ತದೆ. ಕ್ಲೈಮ್ ಮಾಡಬಹುದಾದ ವೆಚ್ಚಗಳು ಹೀಗಿವೆ:

1. ನಿಮ್ಮ ಜರ್ನಿಯನ್ನು ಮುಂದುವರೆಸಲು ಮತ್ತು/ಅಥವಾ ಭಾರತಕ್ಕೆ ಹಿಂತಿರುಗಲು, ಎಮರ್ಜೆನ್ಸಿ ಸರ್ಟಿಫಿಕೇಟ್ ಪಡೆಯಲು, ನಷ್ಟದ ಸ್ಥಳದಲ್ಲಿ ಸಂಬಂಧಿಸಿದ ಅಥಾರಿಟಿಗಳಿಗೆ ಪಾವತಿಸಬೇಕಾದ ನಿಗದಿತ ಶುಲ್ಕ.

2. ಎಮರ್ಜೆನ್ಸಿ ಸರ್ಟಿಫಿಕೇಟ್ ಅನ್ನು ಪಡೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ನೀವು ಮಾಡಬಹುದಾದ ಯಾವುದೇ ಮತ್ತು ಎಲ್ಲಾ ಇನ್ಸಿಡೆಂಟಲ್ ವೆಚ್ಚಗಳಿಗೆ USD 50 ರ ಸ್ಥಿರ ಮೊತ್ತ. ಉದಾಹರಣೆಗೆ, ನಾವು ಇಂಡಿಯನ್ ಕಾನ್ಸ್ಯೂಲೇಟ್ ಅಥವಾ ಇಂಡಿಯನ್ ಎಂಬೆಸಿಗೆ ಹೋಗಲು ಮತ್ತು ಹಿಂತಿರುಗಿ ಬರಲು ಕ್ಯಾಬ್ ಶುಲ್ಕವನ್ನು ಪಾವತಿಸಬಹುದು. ನೀವು ಕ್ಯಾಬ್ ದರದ ರಿಸಿಪ್ಟ್ ಇಟ್ಟುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ.

3. ಡೂಪ್ಲಿಕೇಟ್ ಪಾಸ್‌ಪೋರ್ಟ್ ಪಡೆಯಲು ಭಾರತದಲ್ಲಿನ ಸಂಬಂಧಪಟ್ಟ ಅಥಾರಿಟಿಗಳಿಗೆ ಪಾವತಿಸಬೇಕಾದ ಅಪ್ಲಿಕೇಶನ್ ಶುಲ್ಕದ ಸಂಪೂರ್ಣ ಮೊತ್ತವನ್ನು ಭಾರತೀಯ ರೂಪಾಯಿಗಳಲ್ಲಿ ಪಾವತಿಸಲಾಗುತ್ತದೆ.

ಟ್ರಾವೆಲ್ ಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು

ನಿಮ್ಮ ಟ್ರಿಪ್‌ನ ಸಮಯದಲ್ಲಿ ಉದ್ಭವಿಸಬಹುದಾದ ಕೆಲವು ಸಂದರ್ಭಗಳನ್ನು ಎದುರಿಸಲು, ಟ್ರಾವೆಲ್ ಮಾಡುವ ಮೊದಲು ನೀವು ಮಾಡಬಹುದಾದ ಕೆಲವು ವಿಷಯಗಳಿವೆ:

  • ಮೊದಲನೆಯದಾಗಿ, ನಿಮ್ಮ ಪಾಸ್‌ಪೋರ್ಟ್ ಮತ್ತು ವೀಸಾದ ಫೋಟೋ ಕಾಪಿಗಳನ್ನು ತೆಗೆದುಕೊಳ್ಳಿ ಮತ್ತು ಇವನ್ನು ನಿಮ್ಮ ಪಾಸ್‌ಪೋರ್ಟ್ ಇರಿಸುವ ಸ್ಥಳದಿಂದ ಪ್ರತ್ಯೇಕವಾದ ಸ್ಥಳದಲ್ಲಿ ಇರಿಸಿ. ನಿಮ್ಮ ಫೋನ್‌ನಲ್ಲಿ ನೀವು ಡಾಕ್ಯುಮೆಂಟ್‌ಗಳ ಕಾಪಿಯನ್ನು ಸಹ ಇರಿಸಿಕೊಳ್ಳಬಹುದು. ಆದರೆ ಒಂದು ವೇಳೆ ನಿಮ್ಮ ಪಾಸ್‌ಪೋರ್ಟ್‌ನೊಂದಿಗೆ ನಿಮ್ಮ ಫೋನ್ ಕೂಡ ಕಳುವಾದರೆ ಅಥವಾ ಕಳೆದುಹೋದರೆ, ನಿಮ್ಮ ಜರ್ನಿಯನ್ನು ಪ್ರಾರಂಭಿಸುವ ಮೊದಲು, ನಿಮ್ಮ ಪಾಸ್‌ಪೋರ್ಟ್ ಮತ್ತು ವೀಸಾದ ಕಾಪಿಯನ್ನು ಇಮೇಲ್ ಮಾಡಿ. ಆ ರೀತಿಯಲ್ಲಿ, ನೀವು ಎಲ್ಲಿದ್ದರೂ ನಿಮ್ಮ ಇಮೇಲ್ ಅಕೌಂಟ್‌ಗೆ ಲಾಗ್ ಇನ್ ಮಾಡಬಹುದು ಮತ್ತು ಡಾಕ್ಯುಮೆಂಟ್‌ಗಳ ಕಾಪಿಯನ್ನು ಪ್ರಿಂಟ್ಔಟ್ ತೆಗೆದುಕೊಳ್ಳಬಹುದು.

  • ಉಪಯೋಗವಾಗುವ ಇನ್ನೊಂದು ವಿಷಯವೆಂದರೆ, ಇಂಡಿಯನ್ ಕಾನ್ಸ್ಯೂಲೇಟ್ ಅಥವಾ ಇಂಡಿಯನ್ ಎಂಬೆಸಿಗಳ ಪಟ್ಟಿ ಮತ್ತು ನೀವು ವೆಕೇಶನ್ ಮೇಲೆ ಭೇಟಿ ನೀಡುವ ಎಲ್ಲಾ ದೇಶಗಳಲ್ಲಿ ಅವು ಇರುವ ವಿಳಾಸ ಮತ್ತು ಫೋನ್ ನಂಬರ್‌ಗಳ ಲಿಸ್ಟ್. ಸಹಜವಾಗಿ, ಈ ಪ್ರಕ್ರಿಯೆಯಲ್ಲಿ ನಿಮಗೆ ಸಹಾಯ ಮಾಡಲು ನಮ್ಮ ಟ್ರಾವೆಲ್ ಹೆಲ್ಪ್‌ಲೈನ್‌ ನಿಮಗಾಗಿ 24/7 ತೆರೆದಿರುತ್ತದೆ.

  • ಕೊನೆಯದಾಗಿ ಮತ್ತು ಮುಖ್ಯವಾಗಿ, ನಿಮ್ಮನ್ನು ಸುರಕ್ಷಿತವಾಗಿರಿಸಲು, ನಿಮ್ಮ ಟ್ರಿಪ್‌ನ ಡಿಪಾರ್ಚರ್‌ಗಿಂತ ಮುಂಚೆಯೇ ನೀವು ಡಿಜಿಟ್‌ನ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಏನಾದರೂ ಸಂಭವಿಸಿದಲ್ಲಿ ಡಿಜಿಟ್ ಟ್ರಾವೆಲ್ ಇನ್ಶೂರೆನ್ಸ್ ಕೇವಲ ನಿಮ್ಮ ಪಾಸ್‌ಪೋರ್ಟ್ ನಷ್ಟವನ್ನು ಕವರ್ ಮಾಡದೇ, ಟ್ರಾವೆಲ್ ಮಾಡುವಾಗ ವಿವಿಧ ರೀತಿಯ ಇತರ ರಿಸ್ಕ್‌ಗಳ ವಿರುದ್ಧವೂ ನಿಮ್ಮನ್ನು ರಕ್ಷಿಸುತ್ತದೆ.