ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ದ್ವಿ ಪೌರತ್ವ ಎಂದರೇನು ಮತ್ತು ಅದು ಹೇಗೆ ಕೆಲಸ ಮಾಡುತ್ತದೆ?

ಮೂಲ: etimg

ದ್ವಿ ಪೌರತ್ವ ಬಗ್ಗೆ ಎಂದಾದರೂ ಕೇಳಿದ್ದೀರಾ? ಈ ಸೌಲಭ್ಯವು ನಿಮಗೆ ಎರಡು ದೇಶಗಳ ನಾಗರಿಕರಾಗಲು ಮತ್ತು ಪ್ರತಿ ದೇಶದ ಪೌರತ್ವ ಹಕ್ಕುಗಳನ್ನು ಏಕಕಾಲದಲ್ಲಿ ಹಂಚಿಕೊಳ್ಳಲು ಅನುಮತಿಸುತ್ತದೆ.

ಆದಾಗ್ಯೂ, ಪ್ರತಿಯೊಂದು ದೇಶವೂ ದ್ವಿ ಪೌರತ್ವಕ್ಕೆ ಅನುಮತಿ ನೀಡುವುದಿಲ್ಲ. ದೇಶಕ್ಕೆ ಅನುಗುಣವಾಗಿ ನಿಯಮಗಳು ಬದಲಾಗುತ್ತದೆ.

ಆದರೆ, ಭಾರತದ ಬಗ್ಗೆ ಏನು?

ಭಾರತದಲ್ಲಿ ದ್ವಿ ಪೌರತ್ವದ ನಿಯಮಗಳು ಮತ್ತು ಅದರ ವೇರಿಯೇಬಲ್ ಬಗ್ಗೆ ತಿಳಿಯಲು ಓದುವುದನ್ನು ಮುಂದುವರಿಸಿ.

ದ್ವಿ ಪೌರತ್ವ ಎಂದರೇನು?

ದ್ವಿ ಪೌರತ್ವ ಎಂದರೆ ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ರಾಷ್ಟ್ರೀಯತೆಯನ್ನು ಹೊಂದುವುದು. ಇದು ವ್ಯಕ್ತಿಗೆ ಒಂದು ದೇಶ-ನಿರ್ದಿಷ್ಟ ಹಕ್ಕುಗಳು ಮತ್ತು ಪ್ರಯೋಜನಗಳನ್ನು ನೀಡುತ್ತದೆ. ಉದಾಹರಣೆಗೆ, ನೀವು ಎರಡು ಅಥವಾ ದ್ವಿ ಪೌರತ್ವಗಳೊಂದಿಗೆ ಎರಡೂ ದೇಶಗಳಲ್ಲಿ ಕೆಲಸ ಮಾಡಬಹುದು, ಅಧ್ಯಯನ ಮಾಡಬಹುದು ಮತ್ತು ವಾಸಿಸಬಹುದು.

ಇದಲ್ಲದೆ, ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ ಮುಂತಾದ ಗುಣಮಟ್ಟದ ಸವಲತ್ತುಗಳನ್ನು ನೀವು ಪಡೆಯುವಿರಿ. 

ದ್ವಿ ಪೌರತ್ವ ಹೊಂದಿರುವ ವ್ಯಕ್ತಿಗಳು ಬಹು ಪಾಸ್‌ಪೋರ್ಟ್‌ಗಳನ್ನು ಹೊಂದಬಹುದಾದ್ದರಿಂದ, ಅದು ಅವರಿಗೆ ಸುಲಭವಾಗಿ ಪ್ರಯಾಣಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೇ, ಅವರು ಹೆಚ್ಚು ದೇಶಗಳಿಗೆ ವೀಸಾ ಇಲ್ಲದೆಯೇ ಪ್ರಯಾಣಿಸಬಹುದು.

ಭಾರತೀಯರು ದ್ವಿ ಪೌರತ್ವವನ್ನು ಹೊಂದಬಹುದೇ ಎಂಬ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ:

ಭಾರತವು ದ್ವಿ ಪೌರತ್ವವನ್ನು ಅನುಮತಿಸುತ್ತದೆಯೇ?

ಭಾರತೀಯ ಸಂವಿಧಾನವು ಎರಡು ಅಥವಾ ದ್ವಿ ಪೌರತ್ವಗಳ ಬಗ್ಗೆ ಯಾವುದೇ ನಿಬಂಧನೆಗಳನ್ನು ಹೊಂದಿಲ್ಲ. ಬದಲಾಗಿ, ಒಬ್ಬ ಭಾರತೀಯನು  ತಾನು ಆಯ್ಕೆಮಾಡಿದ ದೇಶಕ್ಕೆ ಎರಡನೇ ಪಾಸ್‌ಪೋರ್ಟ್ ಅನ್ನು ಪಡೆಯಬಹುದು. ಆದರೆ ಅವರು ಭಾರತೀಯ ಪೌರತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ.

1967 ರ ಪಾಸ್‌ಪೋರ್ಟ್ ಕಾಯಿದೆಯನ್ವಯ ಪ್ರತಿಯೊಬ್ಬ ಭಾರತೀಯ ನಿವಾಸಿಯು ಮತ್ತೊಂದು ದೇಶದ ರಾಷ್ಟ್ರೀಯತೆಯನ್ನು ಪಡೆದುಕೊಂಡ ನಂತರ ತಮ್ಮ ಪಾಸ್‌ಪೋರ್ಟ್‌ಗಳನ್ನು ಹತ್ತಿರದ ರಾಯಭಾರ ಕಚೇರಿಗೆ ಒಪ್ಪಿಸಬೇಕಾಗಿರುವುದು ಕಡ್ಡಾಯವಾಗಿದೆ. 

ಭಾರತೀಯರು ವಿದೇಶಿ ಪೌರತ್ವವನ್ನು ಪಡೆದ ನಂತರ ಭಾರತದ ಸಾಗರೋತ್ತರ ನಾಗರಿಕರ (ಒಸಿಐ) ಸ್ಥಾನಮಾನವನ್ನು ಪಡೆಯಬೇಕಾಗುತ್ತದೆ.

ದ್ವಿ ಪೌರತ್ವದ ಕೆಲವು ನಿಯಮಗಳು-

  • ಆರ್ಟಿಕಲ್ 5, 6 ಮತ್ತು 8 ರ ಪ್ರಕಾರ, ಸ್ವಯಂಪ್ರೇರಣೆಯಿಂದ ವಿದೇಶಿ ರಾಜ್ಯದ ಪೌರತ್ವವನ್ನು ಬಯಸುವ ವ್ಯಕ್ತಿಗಳು ಭಾರತೀಯ ನಾಗರೀಕತ್ವಕ್ಕೆ ಅನುಮತಿಸುವುದಿಲ್ಲ.

  • ಅವರು ಪೌರತ್ವ ವಿನಂತಿಯನ್ನು ಪಡೆಯಬಯಸುವ ವಿದೇಶಿ ರಾಜ್ಯದ ರಾಷ್ಟ್ರೀಯತೆಯನ್ನು ಪ್ರಶ್ನಿಸಬಹುದು.

  • ನಿರ್ದಿಷ್ಟ ವ್ಯಕ್ತಿಗಳು ತಮ್ಮ ಭಾರತೀಯ ಪಾಸ್‌ಪೋರ್ಟ್ ಮತ್ತು ಭಾರತೀಯ ಪೌರತ್ವವನ್ನು ಸ್ಥಾಪಿಸುವ ಇತರ ಡಾಕ್ಯುಮೆಂಟುಗಳನ್ನು ಹತ್ತಿರದ ಭಾರತೀಯ ರಾಯಭಾರಿ ಕಚೇರಿಯಲ್ಲಿ ಒಪ್ಪಿಸಬೇಕು.

ಭಾರತದಲ್ಲಿ ದ್ವಿ ಪೌರತ್ವಕ್ಕೆ ಯಾವುದೇ ನಿಬಂಧನೆಗಳಿಲ್ಲದಿದ್ದರೂ, ವ್ಯಕ್ತಿಗಳು ಒಸಿಐ ಕಾರ್ಡ್ ಅನ್ನು ಆಯ್ಕೆ ಮಾಡಬಹುದು. ಇದರಿಂದ ಅನೇಕ ಪ್ರಯೋಜನಗಳಿವೆ. ಅವುಗಳಲ್ಲಿ ಕೆಲವನ್ನು ಕೆಳಗೆ ಚರ್ಚಿಸಲಾಗಿದೆ.

ದ್ವಿ ಪೌರತ್ವದ ಪ್ರಯೋಜನಗಳೇನು?

ದ್ವಿ ಪೌರತ್ವ ಅಥವಾ ಒಸಿಐ  ಹೊಂದಿರುವ ವ್ಯಕ್ತಿಗಳು ಕೆಳಗಿನ ಪ್ರಯೋಜನಗಳನ್ನು ಪಡೆಯಬಹುದು -

  • ಭಾರತ ಮತ್ತು ಆಯ್ಕೆಮಾಡಿದ ದೇಶದಲ್ಲಿ ಅನಿರ್ದಿಷ್ಟವಾಗಿ ಬದುಕಲು, ಕೆಲಸ ಮಾಡಲು, ವ್ಯಾಪಾರವನ್ನು ಮುಂದುವರಿಸಲು ಸ್ವಾತಂತ್ರ್ಯವಿರುತ್ತದೆ.

  • ಬಹು ಪ್ರವೇಶ ಜೀವಿತಾವಧಿಯ ವೀಸಾಗಳು

  • ಅವರು ಸ್ವತ್ತುಗಳು ಮತ್ತು ಆಸ್ತಿಯನ್ನು ಹೊಂದಬಹುದು

  • ನೋಂದಾಯಿತ ಓಸಿಐಗೆ ಭಾರತದ ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಿಗೆ ಭೇಟಿ ನೀಡಲು ದೇಶೀಯ ಭಾರತೀಯ ಪ್ರವಾಸಿಗರಿಗಿರುವ ಪ್ರವೇಶ ಶುಲ್ಕವನ್ನೇ ವಿಧಿಸಲಾಗುತ್ತದೆ.

  • ಅಖಿಲ ಭಾರತ ಪೂರ್ವ ವೈದ್ಯಕೀಯ ಪರೀಕ್ಷೆ ಅಥವಾ ಇತರ ಪರೀಕ್ಷೆಗಳಿಗೆ ಹಾಜರಾಗಲು NRIಗಳೊಂದಿಗೆ ಸಮಾನತೆ ನೀಡಲಾಗುತ್ತದೆ. ಆದ್ದರಿಂದ, ಸಂಬಂಧಿತ ಕಾಯಿದೆಗಳಲ್ಲಿನ ನಿಬಂಧನೆಗಳ ಪ್ರಕಾರ ಅವರು ಪ್ರವೇಶಕ್ಕೆ ಅರ್ಹರಾಗಿರುತ್ತಾರೆ.

  • ಇಂಡಿವಿಜುಯಲ್ ಗಳು ಬಹು ಪಾಸ್‌ಪೋರ್ಟ್‌ಗಳನ್ನು ಹೊಂದಬಹುದು.

  • ಇತರ ದೇಶದ ಪಾಸ್‌ಪೋರ್ಟ್ ಸ್ವದೇಶಕ್ಕಿಂತ ಬಲವಾಗಿದ್ದರೆ "ವೀಸಾ ಆನ್ ಅರೈವಲ್" ಪಡೆಯುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

  • ಇನ್ನೊಂದು ದೇಶದಲ್ಲಿ ಯಾವುದೇ ಪ್ರಕ್ಷುಬ್ಧ ಪರಿಸ್ಥಿತಿ ಇದ್ದಲ್ಲಿ ಅವರು ಪೌರತ್ವ ಹೊಂದಿರುವ ದೇಶಕ್ಕೆ  ಎರಡನೇ ಪಾಸ್‌ಪೋರ್ಟ್‌ನೊಂದಿಗೆ, ಸ್ಥಳಾಂತರಗೊಳ್ಳಬಹುದು.

ವ್ಯಕ್ತಿಗಳು ತಮ್ಮ ವಿದೇಶಿ ಪೌರತ್ವವನ್ನು ಒಪ್ಪಿಕೊಂಡ ನಂತರ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು. ಆದಾಗ್ಯೂ, ಈ ಅಂಶವು ನವೀಕರಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಅವಲಂಬಿಸಿರುತ್ತದೆ.

ಈಗ ಭಾರತದಲ್ಲಿ ದ್ವಿ ಪೌರತ್ವವನ್ನು ಪಡೆಯಲು ಇರುವ ಅರ್ಹತೆಯ ಬಗ್ಗೆ ತಿಳಿಯೋಣ:

ದ್ವಿ ಪೌರತ್ವ ಪಡೆಯಲು ಯಾರು ಅರ್ಹರು?

ದ್ವಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು ವ್ಯಕ್ತಿಗಳು ಕೆಲವು ನಿಯತಾಂಕಗಳನ್ನು ಪರಿಶೀಲಿಸಬೇಕು. ಅರ್ಹತಾ ನಿಯತಾಂಕಗಳು ದೇಶಕ್ಕೆ ಅನುಗುಣವಾಗಿ ಬದಲಾಗಬಹುದು.

ಭಾರತೀಯ ಪೌರತ್ವದ ವಿಷಯದಲ್ಲಿ, ಅರ್ಜಿದಾರರು ನಮೂದಿಸಿದ ನಿಯತಾಂಕಗಳನ್ನು ಪೂರೈಸುವ ಅಗತ್ಯವಿದೆ.

  • ಸಾಮಾನ್ಯವಾಗಿ ಭಾರತದಲ್ಲಿ ಕನಿಷ್ಠ ಏಳು ವರ್ಷಗಳ ಕಾಲ ವಾಸಿಸುವ ಒಬ್ಬ ವ್ಯಕ್ತಿಯು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು.

  • ಸಾಮಾನ್ಯವಾಗಿ ಭಾರತದಲ್ಲಿ ಕನಿಷ್ಠ ಏಳು ವರ್ಷಗಳ ಕಾಲ ವಾಸಿಸುವ ಒಬ್ಬ ವ್ಯಕ್ತಿಯು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದು.

  • ಭಾರತೀಯ ಪೌರತ್ವವನ್ನು ಹೊಂದಿರುವ ಪೋಷಕರೊಂದಿಗೆ ವಯಸ್ಕರು ಭಾರತೀಯ ಪೌರತ್ವಕ್ಕೆ ಅರ್ಹರಾಗಿರುತ್ತಾರೆ. ಆದಾಗ್ಯೂ, ಅವರು ಕನಿಷ್ಠ ಒಂದು ವರ್ಷ ಭಾರತದಲ್ಲಿ ನೆಲೆಸಿರಬೇಕು.

  • ಇಬ್ಬರು ಪೋಷಕರು ಭಾರತೀಯ ಪ್ರಜೆಗಳಾಗಿದ್ದಲ್ಲಿ ಅಥವಾ ಅವರಲ್ಲಿ ಒಬ್ಬರು ಭಾರತೀಯ ಪ್ರಜೆಯಾಗಿದ್ದರೆ ಅವರ ಅಪ್ರಾಪ್ತ ವಯಸ್ಕ ಮಕ್ಕಳು ಅರ್ಜಿ ಸಲ್ಲಿಸಬಹುದು.

  • ಐದು ವರ್ಷಗಳ ಕಾಲ ಭಾರತದ ಸಾಗರೋತ್ತರ ಪ್ರಜೆಯಾಗಿ ನೋಂದಾಯಿತಗೊಂಡ ವ್ಯಕ್ತಿ.

  • 26.01.1950 ರಂದು ಭಾರತೀಯ ನಿವಾಸಿಗಳಾಗಲು ಅರ್ಹರಾಗಿರುವ ವಿದೇಶಿ ಪ್ರಜೆಗಳು ಅಥವಾ 26.01.1950 ರ ನಂತರ ಅಥವಾ ಯಾವುದೇ ಸಮಯದಲ್ಲಿ ಭಾರತದ ನಾಗರಿಕರಾಗಿದ್ದವರು ಅಥವಾ 15.08.1947 ರ ನಂತರ ಭಾರತದ ಭಾಗವಾದ ಪ್ರದೇಶಕ್ಕೆ ಸೇರಿದವರು.

ದ್ವಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ?

ದ್ವಿ ಪೌರತ್ವಕ್ಕಾಗಿ ಅರ್ಜಿ ಪ್ರಕ್ರಿಯೆಯು ದೇಶಕ್ಕೆ ಅನುಗುಣವಾಗಿ ಬದಲಾಗುತ್ತದೆ. ಉದಾಹರಣೆಗೆ, ಯುನೈಟೆಡ್ ಸ್ಟೇಟ್ಸ್‌ನಲ್ಲಿ ದ್ವಿ ಪೌರತ್ವಕ್ಕಾಗಿ ಸಲ್ಲಿಸಲು ಅಪ್ಲಿಕೇಶನ್  ಫಾರ್ಮ್ ಲಭ್ಯವಿದೆ.

ಯುಎಸ್ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಮೊದಲು ನೀವು ನಿಮ್ಮ ದೇಶದ ರಾಯಭಾರ ಕಚೇರಿ ಅಥವಾ ದೂತಾವಾಸವನ್ನು ಸಂಪರ್ಕಿಸಬೇಕು. ಮೊದಲ ಸ್ಥಾನದಲ್ಲಿರುವ ದ್ವಿ ಪೌರತ್ವ ದೇಶಗಳು ಯಾವುವು ಎಂಬುದನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಏಕೆಂದರೆ ಅಪ್ಲಿಕೇಶನ್‌ನಲ್ಲಿನ ಒಂದು ಸಣ್ಣ ತಪ್ಪು ವಾಸಿಸುವ ದೇಶದ ಪೌರತ್ವವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

ಆದಾಗ್ಯೂ, ನೀವು ಒಸಿಐ ಕಾರ್ಡ್ ಅನ್ನು ಆರಿಸಿಕೊಂಡರೆ, ನೀವು ಆನ್‌ಲೈನ್ ಅಪ್ಲಿಕೇಶನ್ ಅನ್ನು  ಸಲ್ಲಿಸಬೇಕು ಮತ್ತು ಡಾಕ್ಯುಮೆಂಟುಗಳನ್ನು ಸಲ್ಲಿಸಬೇಕು.

ಭಾರತದಲ್ಲಿ ದ್ವಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಬಯಸುವ ವ್ಯಕ್ತಿಗಳು ಓಸಿಐ ಕಾರ್ಡ್‌ಗೂ ಅರ್ಜಿ ಸಲ್ಲಿಸಬಹುದಾಗಿದ್ದು, ಆ ಹಂತಗಳು ಈ ಕೆಳಗಿನಂತಿವೆ -

  1. ಆನ್‌ಲೈನ್ OCI ಸೇವೆಗಳ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮನ್ನು ನೋಂದಾಯಿಸಿಕೊಳ್ಳಿ.

  2. ಅಪ್ಲಿಕೇಶನ್ ಸಲ್ಲಿಸುವ ಮೊದಲು ಅರ್ಹತೆ ಮತ್ತು ಅವಶ್ಯಕ ಡಾಕ್ಯುಮೆಂಟುಗಳ ಬಗ್ಗೆ ಪರಿಶೀಲಿಸಿ.

  3. ಫಾರ್ಮ್ ಅನ್ನು ಭರ್ತಿ ಮಾಡಲು ಮತ್ತು ಸಲ್ಲಿಸಲು "ಅಪ್ಲೈ  ಆನ್‌ಲೈನ್‌ " ಮೇಲೆ ಕ್ಲಿಕ್ ಮಾಡಿ.

ITAR ಸಂಖ್ಯೆಯೊಂದಿಗೆ ಭರ್ತಿ ಮಾಡಿದ ಅಪ್ಲಿಕೇಶನ್  ಎರಡು ಪ್ರಿಂಟ್‌ಔಟ್‌ಗಳನ್ನು ತೆಗೆದುಕೊಳ್ಳಿ. ಈ ಸಂಖ್ಯೆಯು ಈ ರೀತಿ ಕಾಣುತ್ತದೆ ಉದಾಹರಣೆಗೆ - ITAR00000511.

ಭಾರತದಲ್ಲಿ ದ್ವಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಅಗತ್ಯವಿರುವ ಡಾಕ್ಯುಮೆಂಟುಗಳು

ಓಸಿಐ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ವ್ಯಕ್ತಿಗಳು ಈ ಕೆಳಗಿನ ಡಾಕ್ಯುಮೆಂಟುಗಳನ್ನು ಸಲ್ಲಿಸಬೇಕು -

  1. ಪ್ರಸ್ತುತ ಪೌರತ್ವದ ಪುರಾವೆ

  2. ಒರಿಜಿನಲ್ ಪಾಸ್‌ಪೋರ್ಟ್ ಜೊತೆಗೆ ರದ್ದಾದ ಭಾರತೀಯ ಪಾಸ್‌ಪೋರ್ಟ್‌ನ ನಕಲು ಪ್ರತಿ. ಈ ಪಾಸ್‌ಪೋರ್ಟ್ ಡ್ರಿಲ್ ಸ್ಟ್ಯಾಂಪ್ ಹೊಂದಿರಬೇಕು.

  3.  ಓಸಿಐಯ ಅನುದಾನಕ್ಕೆ ಅವರ ಭಾರತೀಯ ಆಧಾರವಾಗಿ ಪೋಷಕರ/ಅಜ್ಜ-ಅಜ್ಜಿ, ಅವರ ಭಾರತೀಯ ಮೂಲದ ಸಂಬಂಧದ ಪುರಾವೆ.

  4. ವಸತಿ ಪುರಾವೆ 

  5. ಅರ್ಜಿದಾರರ ಪ್ರಸ್ತುತ ಮತ್ತು ಹಿಂದಿನ ಕೆಲಸದ ವಿವರಗಳು.

  6. ಪಿಐಓ ಕಾರ್ಡ್‌ದಾರರು ತಮ್ಮ ಕಾರ್ಡ್‌ಗಳ ನಕಲನ್ನು ಸಲ್ಲಿಸಬೇಕು.

  7. ಸಲ್ಲಿಸಿದ ಫೋಟೋಗಳು ಬಿಳಿ ಬಣ್ಣವನ್ನು ಹೊರತುಪಡಿಸಿ ತಿಳಿ ಬಣ್ಣದ ಹಿನ್ನೆಲೆಯನ್ನು ಹೊಂದಿರಬೇಕು.

ಅಪ್ರಾಪ್ತ ವಯಸ್ಕರಾಗಿದ್ದಲ್ಲಿ, ಕಡ್ಡಾಯವಾಗಿ ಸಲ್ಲಿಸಬೇಕಾದ ಡಾಕ್ಯುಮೆಂಟುಗಳು ಹೀಗಿವೆ: 

  • ಪೋಷಕರ ಪಾಸ್‌ಪೋರ್ಟ್‌ ನಕಲು ಪ್ರತಿ ಅಥವಾ ನಿವಾಸ ಪ್ರಮಾಣಪತ್ರ ಅಥವಾ ನೇಟಿವಿಟಿ ಪ್ರಮಾಣಪತ್ರ.

  • ಮಗುವಿನ ಜನನ ಪ್ರಮಾಣಪತ್ರ.

  • ಪೋಷಕರು ವಿಚ್ಛೇದನ ಪಡೆದಿದ್ದರೆ, ಮದುವೆಯ ಡಿಸೊಲ್ಯೂಷನ್ ನ ನ್ಯಾಯಾಲಯದ ಆದೇಶ, ಮಗುವಿನ ಪಾಲನೆಯನ್ನು ಉಲ್ಲೇಖಿಸಿ ಪೋಷಕರಿಗೆ ನೀಡಲಾದ ಓಸಿಐ ಕಾರ್ಡ್ ಪ್ರತಿ.

ಈಗ ತೊಂದರೆ -ಮುಕ್ತ ಅಪ್ಲಿಕೇಶನ್ ಳಿಗಾಗಿ ದ್ವಿ-ಪೌರತ್ವವನ್ನು ಅನುಮತಿಸುವ ದೇಶಗಳ ಬಗ್ಗೆ ಪರಿಶೀಲಿಸೋಣ. 

ಯಾವ ದೇಶಗಳು ದ್ವಿ ಪೌರತ್ವ ಪಾಲಿಸಿಯನ್ನು ಅನುಮತಿಸಿವೆ?

 ದ್ವಿ ಪೌರತ್ವವನ್ನು ಅನುಮತಿಸುವ ದೇಶಗಳ ಪಟ್ಟಿ ಹೀಗಿವೆ -

 

ದೇಶದ ಹೆಸರು ದೇಶದ ಹೆಸರು ದೇಶದ ಹೆಸರು
ಅಲ್ಬೇನಿಯಾ ದಿ ಗ್ಯಾಂಬಿಯಾ ಪರಾಗ್ವೆ
ಅಲ್ಜೀರಿಯಾ ಜರ್ಮನಿ ಪೆರು
ಅಮೇರಿಕನ್ ಸಮೋವಾ ಘಾನಾ ಫಿಲಿಪೈನ್ಸ್
ಅಂಗೋಲಾ ಗ್ರೀಸ್ ಪೋಲ್ಯಾಂಡ್
ಆಂಟಿಗುವಾ ಮತ್ತು ಬಾರ್ಬುಡಾ ಗ್ರೆನಡಾ ಪೋರ್ಚುಗಲ್
ಅರ್ಜೆಂಟೀನಾ ಗ್ವಾಟೆಮಾಲಾ ರೊಮೇನಿಯಾ
ಆಸ್ಟ್ರೇಲಿಯಾ ಗಿನಿಯಾ-ಬಿಸ್ಸೌ ರಷ್ಯಾ
ಅರ್ಮೇನಿಯಾ ಹೈಟಿ ಸೇಂಟ್ ಕಿಟ್ಸ್ ಮತ್ತು ನೆವಿಸ್
ಬಾರ್ಬಡೋಸ್ ಹೊಂಡುರಾಸ್ ಸೇಂಟ್ ಲೂಸಿಯಾ
ಬ್ರೆಜಿಲ್ ಹಾಂಗ್ ಕಾಂಗ್ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್
ಬೆಲ್ಜಿಯಂ ಹಂಗೇರಿ ಸಮೋವಾ
ಬೆಲೀಜ್ ಐಸ್ಲ್ಯಾಂಡ್ ಸ್ಕಾಟ್ಲ್ಯಾಂಡ್
ಬೆನಿನ್ ಇರಾಕ್ ಸರ್ಬಿಯಾ
ಬೊಲಿವಿಯಾ ಐರ್ಲೆಂಡ್ ಸೀಶೆಲ್ಸ್
ಬೋಸ್ನಿಯಾ ಮತ್ತು ಹರ್ಜೆಗೋವಿನಾ ಇಸ್ರೇಲ್ ಸಿಯೆರಾ ಲಿಯೋನ್
ಬಲ್ಗೇರಿಯಾ ಇಟಲಿ ಸ್ಲೊವೇನಿಯಾ
ಬುರ್ಕಿನಾ ಫಾಸೊ ಜಮೈಕಾ ಸೊಮಾಲಿಯಾ
ಬುರುಂಡಿ ಜೋರ್ಡಾನ್ ದಕ್ಷಿಣ ಆಫ್ರಿಕಾ
ಕಾಂಬೋಡಿಯಾ ಕೀನ್ಯಾ ಸುಡಾನ್
ಜೆಕ್ ರಿಪಬ್ಲಿಕ್ ದಕ್ಷಿಣ ಕೊರಿಯಾ ಸೌತ್ ಸುಡಾನ್
ಕೆನಡಾ ಕೊಸೊವೊ ಸ್ಪೇನ್
ಕೇಪ್ ವರ್ಡೆ ಕಿರ್ಗಿಸ್ತಾನ್ ಶ್ರೀಲಂಕಾ
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ಲಾಟ್ವಿಯಾ ಸ್ವೀಡನ್
ಚಿಲಿ ಲೆಬನಾನ್ ಸ್ವಿಟ್ಜರ್ಲೆಂಡ್
ಕೊಲಂಬಿಯಾ ಲಿಥುವೇನಿಯಾ ಸಿರಿಯಾ
ಕೊಮೊರೊಸ್ ಲಕ್ಸೆಂಬರ್ಗ್ ತೈವಾನ್
ರಿಪಬ್ಲಿಕ್ ಆಫ್ ಕಾಂಗೋ ಮಕಾವು ತಜಿಕಿಸ್ತಾನ್
ಕೋಸ್ಟರಿಕಾ ಮ್ಯಾಸಿಡೋನಿಯಾ ಥೈಲ್ಯಾಂಡ್
ಐವರಿ ಕೋಸ್ಟ್ ಮಾಲಿ ಟಿಬೆಟ್
ಕ್ರೊಯೇಷಿಯಾ ಮಾಲ್ಟಾ ಟ್ರಿನಿಡಾಡ್ ಮತ್ತು ಟೊಬಾಗೊ
ಸೈಪ್ರಸ್ ಮಾರಿಷಸ್ ಟುನೀಶಿಯಾ
ಡೆನ್ಮಾರ್ಕ್ ಮೆಕ್ಸಿಕೋ ಟರ್ಕಿ
ಜಿಬೌಟಿ ಮೊಲ್ಡೊವಾ ಉಗಾಂಡಾ
ಡೊಮಿನಿಕಾ ಮೊರಾಕೊ ಯುನೈಟೆಡ್ ಕಿಂಗ್‌ಡಮ್
ಡೊಮಿನಿಕನ್ ರಿಪಬ್ಲಿಕ್ ನಮೀಬಿಯಾ ಯುನೈಟೆಡ್ ಸ್ಟೇಟ್ಸ್
ಈಸ್ಟ್ ಟಿಮೋರ್ ನೌರು ಉರುಗ್ವೆ
ಈಕ್ವೆಡಾರ್ ನ್ಯೂಜಿಲೆಂಡ್ ವ್ಯಾಟಿಕನ್ ಸಿಟಿ
ಈಜಿಪ್ಟ್ ನಿಕರಾಗುವಾ ವೆನೆಜುವೆಲಾ
ಎಲ್ ಸಾಲ್ವಡಾರ್ ನೈಜರ್ ವಿಯೆಟ್ನಾಂ
ಈಕ್ವಟೋರಿಯಲ್ ಗಿನಿಯಾ ನೈಜೀರಿಯಾ ಬ್ರಿಟಿಷ್ ವರ್ಜಿನ್ ದ್ವೀಪಗಳು
ಫಿಜಿ ಪಾಕಿಸ್ತಾನ ಯೆಮೆನ್
ಫಿನ್ಲ್ಯಾಂಡ್ ಪನಾಮ ಜಾಂಬಿಯಾ
ಫ್ರಾನ್ಸ್ ಪಪುವಾ ನ್ಯೂ ಗಿನಿಯಾ ಜಿಂಬಾಬ್ವೆ

ದ್ವಿ ಪೌರತ್ವಕ್ಕೆ ಸಂಬಂಧಿಸಿದ ಪದೇ ಪದೇ ಕೇಳಲಾದ ಪ್ರಶ್ನೆಗಳು

ದ್ವಿ ಪೌರತ್ವದ ಅನಾನುಕೂಲತೆ ಏನು?

ದ್ವಿ  ಪೌರತ್ವವನ್ನು ಪಡೆಯಲು ನೀವು ಎರಡು ತೆರಿಗೆಯನ್ನು ಪಾವತಿಸಬೇಕು. ಅಲ್ಲದೆ ಈ ಪ್ರಕ್ರಿಯೆಯು ದೀರ್ಘ ಮತ್ತು ವೆಚ್ಚದಾಯಕವಾಗಿದೆ.

ದ್ವಿ ಪೌರತ್ವ ಹೊಂದಿರುವ ವ್ಯಕ್ತಿಗಳು ಎರಡೂ ದೇಶಗಳಲ್ಲಿ ತೆರಿಗೆ ಪಾವತಿಸುವ ಅಗತ್ಯವಿದೆಯೇ?

ಹೌದು, ದ್ವಿ ಪೌರತ್ವ ಹೊಂದಿರುವ ವ್ಯಕ್ತಿಗಳು ತಮ್ಮ ಆದಾಯವನ್ನು ಗಳಿಸುವ ದೇಶಕ್ಕೆ ತೆರಿಗೆಯನ್ನು ಪಾವತಿಸಲು ಬದ್ಧರಾಗಿರಬೇಕು. ಆದಾಗ್ಯೂ, ಕೆಲವು ದೇಶಗಳು ದ್ವಿ ಪೌರತ್ವ ವ್ಯಕ್ತಿಗಳಿಗೆ ಸಹಾಯ ಮಾಡಲು ನಾಗರಿಕರ ತೆರಿಗೆ ಹೊಣೆಗಾರಿಕೆಯನ್ನು ತೆಗೆದುಹಾಕುತ್ತವೆ.

ಯಾವ ದೇಶಗಳು ಮೂಲದ ಆಧಾರದ ಮೇಲೆ ದ್ವಿ ಪೌರತ್ವವನ್ನು ಅನುಮತಿಸುತ್ತವೆ?

ಬಲ್ಗೇರಿಯಾ, ಕ್ರೊಯೇಷಿಯಾ, ಕಾಂಬೋಡಿಯಾ, ಹಾಂಗ್ ಕಾಂಗ್, ನೆದರ್ಲ್ಯಾಂಡ್ಸ್ ಮತ್ತು ದಕ್ಷಿಣ ಕೊರಿಯಾ, ಮೂಲದ ಆಧಾರದ ಮೇಲೆ ದ್ವಿ ಪೌರತ್ವವನ್ನು ಅನುಮತಿಸುವ ಕೆಲವು ದೇಶಗಳು. ಆದ್ದರಿಂದ, ಈ ದೇಶಗಳಲ್ಲಿ ನಿಮ್ಮ ಪೂರ್ವಜರ ಪೌರತ್ವದ ಮಾನ್ಯ ಪುರಾವೆಯನ್ನು ನೀವು ಹೊಂದಿದ್ದರೆ, ನೀವು ದ್ವಿ ಪೌರತ್ವವನ್ನು ಪಡೆಯುತ್ತೀರಿ.