ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಭಾರತದಲ್ಲಿ ಇ-ಪಾಸ್‌ಪೋರ್ಟ್ ಎಂದರೇನು: ಅರ್ಥ ಮತ್ತು ಅದರ ವೈಶಿಷ್ಟ್ಯಗಳ ವಿವರಣೆ.

ಮೂಲ: wp-contents

ಡಿಜಿಟಲೀಕರಣವು ಬಹುತೇಕ ಎಲ್ಲಾ KYC ಡಾಕ್ಯುಮೆಂಟುಗಳ ಎಲೆಕ್ಟ್ರಾನಿಕ್ ಆವೃತ್ತಿಗಳಿಗೆ ಕಾರಣವಾಗಿದೆ. ಈ ಓಟದಲ್ಲೂ ಪಾಸ್ ಪೋರ್ಟ್ ಹಿಂದೆ ಬೀಳುವುದಿಲ್ಲ.

ವಿದೇಶಾಂಗ ವ್ಯವಹಾರಗಳ ಸಚಿವ ಡಾ ಎಸ್ ಜೈಶಂಕರ್ ಪ್ರಕಾರ, ಭಾರತೀಯ ನಾಗರಿಕರು ಮುಂದಿನ ದಿನಗಳಲ್ಲಿ ವರ್ಧಿತ ಭದ್ರತಾ ವೈಶಿಷ್ಟ್ಯಗಳೊಂದಿಗೆ ಇ-ಪಾಸ್‌ಪೋರ್ಟ್‌ಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. 

ಇ-ಪಾಸ್‌ಪೋರ್ಟ್ ಎಂದರೇನು ಮತ್ತು ಅದರ ವೈಶಿಷ್ಟ್ಯಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಇ-ಪಾಸ್‌ಪೋರ್ಟ್ ಎಂದರೇನು?

ಇ-ಪಾಸ್‌ಪೋರ್ಟ್ ಎಂಬುದು ಚಿಪ್-ಸಕ್ರಿಯಗೊಳಿಸಿದ ಪಾಸ್‌ಪೋರ್ಟ್ ಆಗಿದ್ದು, ಪ್ರಯಾಣದ ಡಾಕ್ಯುಮೆಂಟುಗಳ ಪಾರದರ್ಶಕತೆ ಮತ್ತು ಭದ್ರತೆಯನ್ನು ಬಲಪಡಿಸುವ ಬಯೋಮೆಟ್ರಿಕ್ ಗುರುತಿನ ಕಾರ್ಡ್ ಅನ್ನು ಹೊಂದಿದೆ.

ಆದಾಗ್ಯೂ, ಅಪ್ಲಿಕೇಶನ್, ವೆರಿಫಿಕೇಶನ್ ಮತ್ತು ಮಾಹಿತಿಯ ವಿಷಯದಲ್ಲಿ ಇದು ಸಾಮಾನ್ಯ ಪಾಸ್‌ಪೋರ್ಟ್‌ಗಿಂತ ಭಿನ್ನವಾಗೇನು ಇಲ್ಲ.

 

ಇ-ಪಾಸ್‌ಪೋರ್ಟ್‌ನ ಪ್ರಯೋಜನಗಳು

ಭಾರತದಲ್ಲಿ ಇ-ಪಾಸ್‌ಪೋರ್ಟ್‌ನ ವಿಶಿಷ್ಟ ಪ್ರಯೋಜನಗಳು ಹೀಗಿವೆ:

  • ಇ-ಪಾಸ್‌ಪೋರ್ಟ್ ಹೊಂದಿರುವ ಪ್ರಯಾಣಿಕರು ಕೆಲವೇ ಸೆಕೆಂಡುಗಳಲ್ಲಿ ಸ್ಕ್ಯಾನ್ ಮಾಡಬಹುದಾದ್ದರಿಂದ ಹೆಚ್ಚು ಹೊತ್ತು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.

  • ಇದು ವ್ಯಕ್ತಿಗಳ ಬಯೋಮೆಟ್ರಿಕ್ ಡಾಕ್ಯುಮೆಂಟುಗಳನ್ನು ಹೊಂದಿದೆ. ಆದ್ದರಿಂದ, ವಂಚಕರು ಡೇಟಾ ಪೈರಸಿ ನಡೆಸುವುದನ್ನು ಮತ್ತು ನಕಲಿ ಪಾಸ್‌ಪೋರ್ಟ್‌  ಮಾಡುವುದನ್ನು ಇದು ತಡೆಯುತ್ತದೆ. 

  • ಟ್ಯಾಂಪರಿಂಗ್‌ನಲ್ಲಿ, ಚಿಪ್ ಪಾಸ್‌ಪೋರ್ಟ್ ದೃಢೀಕರಣವು ವಿಫಲಗೊಳ್ಳುತ್ತದೆ.

  • ಹಾಗಾಗಿ ಯಾರೂ ಅದರಿಂದ ಡೇಟಾವನ್ನು ಅಳಿಸಲು ಸಾಧ್ಯವಿಲ್ಲ.

ಇ-ಪಾಸ್‌ಪೋರ್ಟ್‌ನ ವೈಶಿಷ್ಟ್ಯಗಳು

-ಪಾಸ್‌ಪೋರ್ಟ್‌ನಲ್ಲಿ 41 ಭದ್ರತಾ ವೈಶಿಷ್ಟ್ಯಗಳಿವೆ. ಇದು ಅರ್ಜಿದಾರರ ವಯಸ್ಸಿನ ಆಧಾರದ ಮೇಲೆ 5 ಅಥವಾ 10 ವರ್ಷಗಳವರೆಗೆ ಮಾನ್ಯವಾಗಿರುತ್ತದೆ. 

ಇವುಗಳಲ್ಲಿನ ಕೆಲವು ವೈಶಿಷ್ಟ್ಯಗಳು ಯಾವುವೆಂದರೆ -

  • ಲ್ಯಾಮಿನೇಟೆಡ್ ಫಿಲ್ಮ್‌ನಲ್ಲಿ ಎಂಬಾಸ್ಡ್ ಹೊಲೊಗ್ರಾಫಿಕ್ ಚಿತ್ರಗಳು ಬಣ್ಣವನ್ನು ಬದಲಾಯಿಸುವಂತೆ ಮತ್ತು ಬೆಳಕಿನ ಅಡಿಯಲ್ಲಿ ಚಲಿಸುವಂತೆ ಕಂಡುಬರುತ್ತವೆ.

  • ಧಾರಕರ ಜನಸಂಖ್ಯಾ ಮಾಹಿತಿ.

  • ಧಾರಕರ ಬಯೋಮೆಟ್ರಿಕ್ ಮಾಹಿತಿ.

  • ಧಾರಕರ ಕೈಯ ಎಲ್ಲಾ 10 ಬೆರಳುಗಳ ಬೆರಳಚ್ಚುಗಳು.

  • ಧಾರಕರ ಐರಿಸ್ ಸ್ಕ್ಯಾನ್.

  • ಧಾರಕರ ಬಣ್ಣದ ಛಾಯಾಚಿತ್ರ.

  • ಧಾರಕರ ಡಿಜಿಟಲ್ ಸಹಿ.

ಇ-ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ಭಾರತದಲ್ಲಿ ಇ-ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ರೆಗ್ಯುಲರ್ ಅಥವಾ MRP ಯಂತೆಯೇ ಇರುತ್ತದೆ. ಕಾರ್ಯವಿಧಾನ ಹೀಗಿವೆ -

  • ಪಾಸ್‌ಪೋರ್ಟ್ ಸೇವಾ ವೆಬ್‌ಸೈಟ್‌ಗೆ ಹೋಗಿ "ಈಗ ನೋಂದಾಯಿಸಿ" ಕ್ಲಿಕ್ ಮಾಡಿ ಅಥವಾ ನಿಮ್ಮ ಅಸ್ತಿತ್ವದಲ್ಲಿರುವ ಐಡಿಯೊಂದಿಗೆ ಲಾಗ್ ಇನ್ ಆಗಿ.

  • "ಹೊಸ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿ" ಅಥವಾ "ಪಾಸ್‌ಪೋರ್ಟ್‌ನ ಮರು-ಹಂಚಿಕೆ" ಮೇಲೆ ಕ್ಲಿಕ್ ಮಾಡಿ.

  • ಎಲ್ಲಾ ವಿವರಗಳನ್ನು ಒದಗಿಸಿ, "ಸಲ್ಲಿಸು" ಒತ್ತಿರಿ.

  • ಪಾವತಿ ಮಾಡಲು "ಪೇ ಮಾಡಿ ಮತ್ತು ಅಪಾಂಟ್ಮೆಂಟ್ ನಿಗದಿಪಡಿಸಿ" ಮೇಲೆ ಕ್ಲಿಕ್ ಮಾಡಿ.

ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ರಸೀದಿಯನ್ನು ಪ್ರಿಂಟ್ ಮಾಡಿ ಅಥವಾ PSK/POPSK/PO ನಲ್ಲಿ ಸ್ವೀಕೃತಿ SMS ಅನ್ನು ತೋರಿಸಿ.

ಇ-ಪಾಸ್‌ಪೋರ್ಟ್‌ಗೆ ಅಗತ್ಯವಿರುವ ಡಾಕ್ಯುಮೆಂಟುಗಳು ಯಾವುವು?

ಇ-ಪಾಸ್‌ಪೋರ್ಟ್‌ಗೆ ಅಗತ್ಯವಿರುವ ಡಾಕ್ಯುಮೆಂಟುಗಳು ಸಾಮಾನ್ಯ ಪಾಸ್‌ಪೋರ್ಟ್‌ನಂತೆಯೇ ಇರುತ್ತವೆ. ಮೊದಲ ಬಾರಿಗೆ ಅರ್ಜಿದಾರರಿಗೆ ಈ ಕೆಳಗಿನ ಡಾಕ್ಯುಮೆಂಟುಗಳು ಬೇಕಾಗುತ್ತವೆ -

 

  • ವಿಳಾಸದ ಪುರಾವೆ - ಕೆಳಗಿನ ಯಾವುದೇ ಡಾಕ್ಯುಮೆಂಟುಗಳು ವಿಳಾಸ ಪುರಾವೆಯಾಗಿ ಕಾರ್ಯನಿರ್ವಹಿಸುತ್ತವೆ -

  • ಆಧಾರ್ ಕಾರ್ಡ್

  • ದೂರವಾಣಿ ಬಿಲ್

  • ವಿದ್ಯುತ್ ಬಿಲ್

  • ನೀರಿನ ಬಿಲ್

  • ಗ್ಯಾಸ್ ಕನೆಕ್ಷನ್ ಪುರಾವೆ

  • ಬಾಡಿಗೆ ಒಪ್ಪಂದ

  • ಲಗತ್ತಿಸಲಾದ ಭಾವಚಿತ್ರದೊಂದಿಗೆ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಪಾಸ್‌ಬುಕ್ (ಯಾವುದೇ ನಿಗದಿತ ಖಾಸಗಿ ವಲಯ, ಸಾರ್ವಜನಿಕ ವಲಯ, ಅಥವಾ ಗ್ರಾಮೀಣ, ಪ್ರಾದೇಶಿಕ ಬ್ಯಾಂಕ್)

  • ಮೊದಲ ಮತ್ತು ಕೊನೆಯ ಪುಟದೊಂದಿಗೆ ಸಂಗಾತಿಯ ಪಾಸ್‌ಪೋರ್ಟ್ ನ ನಕಲು ಪ್ರತಿ.  ಅದರಲ್ಲಿ ಅರ್ಜಿದಾರರ ಹೆಸರು ಸಂಗಾತಿಯಾಗಿ ನಮೂದಿಸಿರಬೇಕು. ಅಲ್ಲದೆ, ಅರ್ಜಿದಾರರ ಪ್ರಸ್ತುತ ವಿಳಾಸವು ಪಾಸ್‌ಪೋರ್ಟ್‌ನಲ್ಲಿ ನಮೂದಿಸಲಾದ ಸಂಗಾತಿಯ ವಿಳಾಸದೊಂದಿಗೆ ಹೊಂದಿಕೆಯಾಗಬೇಕು.

ವ್ಯಕ್ತಿಗಳು ಕಳೆದ ವರ್ಷದಲ್ಲಿ ಅವರು ವಾಸಿಸುತ್ತಿದ್ದ ಎಲ್ಲಾ ಸ್ಥಳಗಳ ವಿವರಗಳನ್ನು ಒದಗಿಸಬೇಕು ಎಂಬುದನ್ನು ಗಮನಿಸಿ.

 

  • ಜನ್ಮ ದಿನಾಂಕದ ಪುರಾವೆ - ನೀವು ಈ ಕೆಳಗಿನ ಯಾವುದೇ ಡಾಕ್ಯುಮೆಂಟುಗಳಲ್ಲಿ ಒಂದನ್ನು ಜನ್ಮ ದಿನಾಂಕದ ಪುರಾವೆಯಾಗಿ ನೀಡಬಹುದು -

  • ಕಾನೂನುಬದ್ಧ ಪ್ರಾಧಿಕಾರದಿಂದ ಜನನ ಪ್ರಮಾಣಪತ್ರ.

  • ಮೆಟ್ರಿಕ್ಯುಲೇಷನ್, ವರ್ಗಾವಣೆ ಅಥವಾ ಶಾಲೆಗೆ ಹಾಜರಾಗಿದ್ದ ಕೊನೆಯ ದಿನಾಂಕವನ್ನು ತಿಳಿಸುವ ಶೈಕ್ಷಣಿಕ ಮಂಡಳಿಯಿಂದ ಪಡೆದ ಶಾಲಾ ಟ್ರಾನ್ಸ್ಫರ್ ಸರ್ಟಿಫಿಕೇಟ್.

  • ಪ್ಯಾನ್ ಕಾರ್ಡ್

  • ಆಧಾರ್ ಕಾರ್ಡ್

  • ಡ್ರೈವಿಂಗ್ ಲೈಸೆನ್ಸ್

  • ವೋಟರ್ ಐಡಿ ಕಾರ್ಡ್

  • ಅರ್ಜಿದಾರರ ಹೆಸರಿನಲ್ಲಿ ಲೈಫ್ ಇನ್ಶೂರೆನ್ಸ್ ಪಾಲಿಸಿ

 

ಮರು-ಹಂಚಿಕೆಗಾಗಿ ಅರ್ಜಿ ಸಲ್ಲಿಸುವ ಸಾಮಾನ್ಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವವರು ಈ ಕೆಳಗಿನ ಡಾಕ್ಯುಮೆಂಟುಗಳನ್ನು ಸಲ್ಲಿಸಬೇಕು -

  • ಒರಿಜಿನಲ್ ಪಾಸ್‌ಪೋರ್ಟ್‌

  • ಪಾಸ್‌ಪೋರ್ಟ್‌ನ ಮೊದಲ ಮತ್ತು ಕೊನೆಯ ಪುಟದ ಪ್ರತಿ.

  • ವೀಕ್ಷಣೆ ಪುಟ

  • ಇಸಿಆರ್ ಅಥವಾ ನಾನ್-ಇಸಿಆರ್ ಪುಟ.

ಚಿಪ್ ಆಧಾರಿತ ಇ-ಪಾಸ್‌ಪೋರ್ಟ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

64-ಕಿಲೋಬೈಟ್ ಸಂಗ್ರಹಣೆಯ ಎಂಬೆಡೆಡ್ ಆಯತಾಕಾರದ ಆಂಟೆನಾ ಮಾದರಿಯ ಎಲೆಕ್ಟ್ರಾನಿಕ್ ಚಿಪ್‌ನ ಸಾಮರ್ಥ್ಯದ ಮೇಲೆ ಇ-ಪಾಸ್‌ಪೋರ್ಟ್ ಕಾರ್ಯನಿರ್ವಹಿಸುತ್ತದೆ. 

ಇ-ಪಾಸ್‌ಪೋರ್ಟ್ ಎಂದರೇನು ಎಂದು ತಿಳಿದುಕೊಳ್ಳುವುದರ ಜೊತೆಗೆ, ಭಾರತೀಯರು ಈ ಆವಿಷ್ಕಾರದ ತಯಾರಕರನ್ನು ಸಹ ತಿಳಿದಿರಬೇಕು.

ಇದನ್ನು ಭಾರತದ ಮೂರು ಪ್ರಮುಖ ತಾಂತ್ರಿಕ ಸಂಸ್ಥೆಗಳ ಸಂಘವು ಅಭಿವೃದ್ಧಿಪಡಿಸಿದೆ - 

  • ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಕಾನ್ಪುರ್.

  • ರಾಷ್ಟ್ರೀಯ ಮಾಹಿತಿ ಕೇಂದ್ರ. 

  • ಇಂಡಿಯಾ ಸೆಕ್ಯುರಿಟಿ ಪ್ರೆಸ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು.

ಇದರ ಒಳಹರಿವು ಪ್ರಪಂಚದಾದ್ಯಂತ ಸಲೀಸಾಗಿ ಕಾರ್ಯ ನಿರ್ವಹಿಸಲು ಅಂತರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಮಾನದಂಡಗಳನ್ನು ಅನುಸರಿಸುತ್ತದೆ. ಯಾವುದೇ ರಿಮೋಟ್ ಮೂಲದಿಂದ ಡೇಟಾ ಪ್ರವೇಶವನ್ನು ತಡೆಯುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ.

ಇ-ಪಾಸ್‌ಪೋರ್ಟ್ ಸಾಮಾನ್ಯ ಪಾಸ್ಪೋರ್ಟ್ ಗಿಂತ ಹೇಗೆ ಭಿನ್ನವಾಗಿದೆ?

ಎಲೆಕ್ಟ್ರಾನಿಕ್ ಡೇಟಾ ಚಿಪ್‌ನೊಂದಿಗಿರುವ ಭಾರತದ ಇ-ಪಾಸ್‌ಪೋರ್ಟ್ ಸಾಮಾನ್ಯ ಪಾಸ್‌ಪೋರ್ಟ್ ಗಿಂತ ಹೆಚ್ಚುವರಿ  ಭದ್ರತೆಯನ್ನು ನೀಡುತ್ತದೆ. ಇದು ಪಾಸ್‌ಪೋರ್ಟ್ ಅನ್ನು ಅದರ ಮೂಲ ಮಾಲೀಕರಿಗೆ  ಲಿಂಕ್ ಮಾಡುವ ಕಾರಣ ನಕಲಿ ಗೊಳ್ಳುವುದನ್ನು ತಡೆಯುತ್ತದೆ.

ಸಾಮಾನ್ಯವಾಗಿ, ಸಾಮಾನ್ಯ ಪಾಸ್‌ಪೋರ್ಟ್ ಅಥವಾ ಮೆಷಿನ್-ರೀಡಬಲ್ ಪಾಸ್‌ಪೋರ್ಟ್ (MRP) ಆಪ್ಟಿಕಲ್ ರೀಡರ್ ಸ್ಕ್ಯಾನ್ ಮಾಡಬಹುದಾದ ಮಾಲೀಕರ ಬಗ್ಗೆ ಮುದ್ರಿತ ಮಾಹಿತಿಯೊಂದಿಗೆ ಡೇಟಾ ಪುಟಗಳನ್ನು ಹೊಂದಿರುತ್ತದೆ.

ನೀವು ಇ-ಪಾಸ್‌ಪೋರ್ಟ್ ಅನ್ನು ಎಲ್ಲಿ ಬಳಸಬಹುದು?

ಪ್ರಸ್ತುತ, ಇ-ಪಾಸ್‌ಪೋರ್ಟ್ ಪ್ರಪಂಚದಾದ್ಯಂತ ಸುಮಾರು 120 ದೇಶಗಳಲ್ಲಿ ಬಳಕೆಯಲ್ಲಿದೆ ವ್ಯಕ್ತಿಗಳು ಇದನ್ನು ಯಾವುದೇ ಅಂತರಾಷ್ಟ್ರೀಯ ಪ್ರಯಾಣದ ಉದ್ದೇಶಕ್ಕಾಗಿ ಅಥವಾ ಡಾಕ್ಯುಮೆಂಟ್ ಪುರಾವೆಯಾಗಿ ಬಳಸಬಹುದು.

ಇ-ಪಾಸ್‌ಪೋರ್ಟ್ ಎಂದರೇನು ಎಂದು ಈಗ ನಿಮಗೆ ತಿಳಿದಿದೆ, ಅದು ಸರ್ಕಾರ ಮತ್ತು ನಾಗರಿಕರಿಗೆ ಹೇಗೆ ಸಹಾಯಕವಾಗಿದೆ ಎಂಬುದನ್ನು ನೀವು ಅರ್ಥಮಾಡಿಕೊಂಡಿದ್ದೀರಿ. ಈ ಎಲೆಕ್ಟ್ರಾನಿಕ್ ಚಿಪ್-ಎಂಬೆಡೆಡ್ ಡಾಕ್ಯುಮೆಂಟ್‌ನ ವಿತರಣೆಯು ಹೆಚ್ಚಿನ ಸುರಕ್ಷತೆಯನ್ನು ಹೊಂದಿದೆ ಮತ್ತು ಪ್ರಯಾಣದ ಸಮಯದಲ್ಲಿ ಪಾಸ್‌ಪೋರ್ಟ್ ಪರಿಶೀಲನೆ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

ಇ-ವೀಸಾಗೆ ಸಂಬಂಧಿಸಿದ ಸಾಮಾನ್ಯ ಪ್ರಶ್ನೆಗಳು:

ಭಾರತದಲ್ಲಿ ಇ-ಪಾಸ್‌ಪೋರ್ಟ್‌ಗಳು ಲಭ್ಯವಿದೆಯೇ?

ಹೌದು, 2021 ರಿಂದ ಭಾರತದಲ್ಲಿ ಇ-ಪಾಸ್‌ಪೋರ್ಟ್‌ಗಳು ಲಭ್ಯವಿವೆ. ಹೊಸ ಪಾಸ್‌ಪೋರ್ಟ್‌ಗಾಗಿ ಅಥವಾ ಪಾಸ್‌ಪೋರ್ಟ್‌ನ ಮರು-ಹಂಚಿಕೆಗಾಗಿ ಅರ್ಜಿ ಸಲ್ಲಿಸುವ ಯಾರಾದರೂ ಇ-ಪಾಸ್‌ಪೋರ್ಟ್ ಅನ್ನು ಪಡೆಯಬಹುದು.

ಇ-ಪಾಸ್‌ಪೋರ್ಟ್‌ಗಾಗಿ ಪಾಸ್‌ಪೋರ್ಟ್ ತಯಾರಿಕೆ ಅಥವಾ ನವೀಕರಣ ಶುಲ್ಕದಲ್ಲಿ ಏನಾದರೂ ಬದಲಾವಣೆ ಇದೆಯೇ?

ಇಲ್ಲ, ಇ-ಪಾಸ್‌ಪೋರ್ಟ್ ಅನ್ನು ವಿತರಿಸುವ ಮತ್ತು ಮರು-ಹಂಚಿಕೆಯ ಶುಲ್ಕಗಳು ಸಾಮಾನ್ಯ ಪಾಸ್‌ಪೋರ್ಟ್‌ಗಳಂತೆಯೇ ಇರುತ್ತದೆ. ವೀಸಾಗಾಗಿ ಬುಕ್‌ಲೆಟ್‌ನ 36 ಪುಟಗಳಿಗೆ ₹ 1500 ಮತ್ತು ವೀಸಾಗಾಗಿ ಬುಕ್‌ಲೆಟ್‌ನ 60 ಪುಟಗಳಿಗೆ ₹ 2000 ಶುಲ್ಕ.

ಮೈಕ್ರೋಚಿಪ್ ಹೊಂದಿರುವ ಭಾರತೀಯ ಇ-ಪಾಸ್‌ಪೋರ್ಟ್ ಹೇಗೆ ಕಾರ್ಯನಿರ್ವಹಿಸುತ್ತದೆ?

E-Passport ಇದು ವಿದ್ಯುನ್ಮಾನವಾಗಿ ಡೇಟಾವನ್ನು ಸಂಗ್ರಹಿಸುವ ಮತ್ತು ಸಾಗಿಸುವ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಎಂಬೆಡೆಡ್ ಮೈಕ್ರೊಪ್ರೊಸೆಸರ್‌ಗೆ ಧನ್ಯವಾದಗಳು. ಪಾಸ್‌ಪೋರ್ಟ್‌ನ ಚಿಪ್ 60 ಕಿಲೋಬೈಟ್‌ಗಳಷ್ಟು ಡೇಟಾವನ್ನು ಸಂಗ್ರಹಿಸಬಲ್ಲದು.  ಇದು ಎಲ್ಲಾ ರೀತಿಯ ಹೋಲ್ಡರ್-ಸಂಬಂಧಿತ ಮಾಹಿತಿಯನ್ನು ಸೇರಿಸಲು ಅನುವು ಮಾಡಿಕೊಡುತ್ತದೆ

ಇ-ಪಾಸ್‌ಪೋರ್ಟ್ ಅನ್ನು ಎಲ್ಲಿ ಬಳಸಬಹುದು?

ಪ್ರಯಾಣ ಮಾಡುವಾಗ, ಗುರುತಿಗಾಗಿ ನೀವು ಸಾಮಾನ್ಯ ಅಥವಾ ಸಾಂಪ್ರದಾಯಿಕ ಪಾಸ್‌ಪೋರ್ಟ್‌ನಂತೆ ಇ-ಪಾಸ್‌ಪೋರ್ಟ್ ಅನ್ನು ಬಳಸಬಹುದು. ಅಲ್ಲದೆ, ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರಯಾಣದ ವೇಳೆಯಲ್ಲಿ ಭದ್ರತಾ ತಪಾಸಣೆಗಳನ್ನು ತ್ವರಿತವಾಗಿ ಮುಗಿಸಲು ಇದನ್ನು ಬಳಸಬಹುದು.