ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ನೀವು ವಿದೇಶದಲ್ಲಿ ನಿಮ್ಮ ಪಾಸ್‌ಪೋರ್ಟ್‌ ಅನ್ನು ಕಳೆದುಕೊಂಡರೆ ಏನು ಮಾಡಬಹುದು?

ವ್ಯಾಪಾರಕ್ಕಾಗಿ ವಿದೇಶಕ್ಕೆ ಪ್ರಯಾಣಿಸುವಾಗ ಅಥವಾ ಕುಟುಂಬದೊಂದಿಗೆ ರಜಾದಿನವನ್ನು ಕಳೆಯುವಾಗ ಪಾಸ್‌ಪೋರ್ಟ್ ನಷ್ಟವು ನಿಸ್ಸಂದೇಹವಾಗಿ ತೊಂದರೆಯನ್ನು ಉಂಟುಮಾಡಬಹುದು.

ಆದ್ದರಿಂದ, ನೀವು ವಿದೇಶದಲ್ಲಿ ನಿಮ್ಮ ಪಾಸ್‌ಪೋರ್ಟ್ ಅನ್ನು ಕಳೆದುಕೊಂಡಿದ್ದರೆ, ನಿಮ್ಮ ದೇಶಕ್ಕೆ ಸುರಕ್ಷಿತವಾಗಿ ಮರಳಲು ಪರಿಹಾರಗಳನ್ನು ಕಂಡುಹಿಡಿಯಬೇಕೆಂದರೆ ಈ ಲೇಖನವನ್ನು ಓದಿ.

 

ಪಾಸ್‌ಪೋರ್ಟ್ ಕಳೆದುಹೋದ ನಂತರ ಏನು ಮಾಡಬೇಕು?

ವಿದೇಶಕ್ಕೆ ಪ್ರಯಾಣಿಸುವಾಗ ನಿಮ್ಮ ಪಾಸ್‌ಪೋರ್ಟ್ ಅನ್ನು ಕಳೆದುಕೊಂಡರೆ ಈ ಕೆಳಗಿನ ಐದು ವಿಷಯಗಳನ್ನು ಗಮನದಲ್ಲಿರಿಸಿ:

1. ನಿಮ್ಮ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ

ಕಳುವಾದ ಅಥವಾ ಕಳೆದುಹೋದ ಪಾಸ್‌ಪೋರ್ಟ್‌ನ ಸಂದರ್ಭದಲ್ಲಿ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದನ್ನು ಖಚಿತಪಡಿಸಿಕೊಳ್ಳಿ. ಪೊಲೀಸ್ ವರದಿಯ ಪ್ರತಿಯನ್ನು ಸಂಗ್ರಹಿಸಿ, ಇದು ಕಳೆದುಹೋದ ಪಾಸ್‌ಪೋರ್ಟ್‌ಗೆ ಡಾಕ್ಯುಮೆಂಟರಿ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಎಮರ್ಜೆನ್ಸಿ ಸರ್ಟಿಫಿಕೇಟ್ ಅಥವಾ ಹೊಸ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುವಾಗ ಇದು ಅತ್ಯಗತ್ಯ ಡಾಕ್ಯುಮೆಂಟ್ ಆಗಿದೆ.

2. ನಿಮ್ಮ ದೇಶದ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕದಲ್ಲಿರಿ

ನಿಮ್ಮ ಪಾಸ್‌ಪೋರ್ಟ್ ನಷ್ಟವನ್ನು ವರದಿ ಮಾಡಲು ನಿಮ್ಮ ದೇಶದ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ. ವಿದೇಶದಲ್ಲಿರುವ ರಾಯಭಾರಿ ಕಚೇರಿಗಳು ತಮ್ಮ ರಾಷ್ಟ್ರೀಯತೆಯನ್ನು ಸುರಕ್ಷಿತವಾಗಿ ಪರಿಶೀಲಿಸಿದ ನಂತರ ತಮ್ಮ ದೇಶಕ್ಕೆ ಮರಳಲು ಎಮರ್ಜೆನ್ಸಿ ಸರ್ಟಿಫಿಕೇಟ್ ಅನ್ನು ನೀಡುವ ಮೂಲಕ ನಾಗರಿಕರಿಗೆ ಸಹಾಯ ಮಾಡುತ್ತವೆ.

3. ವೀಸಾ ಮರು-ನೀಡಿಕೆಗೆ ಅರ್ಜಿ ಸಲ್ಲಿಸಿ

ನೀವು ನಿಮ್ಮ ಪಾಸ್‌ಪೋರ್ಟ್ ಅನ್ನು ಕಳೆದುಕೊಂಡಿದ್ದರೆ, ಕಳೆದುಹೋದ ವೀಸಾಗಳಿಗೆ ಸಹ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ನಿಮ್ಮ ದೇಶದ ರಾಯಭಾರಿ ಕಚೇರಿಗೆ ಭೇಟಿ ನೀಡಿ ಮತ್ತು ಹಳೆಯ ವೀಸಾದ ಫೋಟೋಕಾಪಿ ಮತ್ತು ಹೊಸದನ್ನು ಪಡೆಯಲು ಪೊಲೀಸ್ ವರದಿಯಂತಹ ಸಂಬಂಧಿತ ಡಾಕ್ಯುಮೆಂಟುಗಳನ್ನು ಸಲ್ಲಿಸಿ.

4. ಫ್ಲೈಟ್ ಅನ್ನು ರಿಶೆಡ್ಯೂಲ್ ಮಾಡಿ

ನೀವು ನಿಮ್ಮ ಪಾಸ್‌ಪೋರ್ಟ್ ಅನ್ನು ಕಳೆದುಕೊಂಡಿದ್ದರೆ, ನಿಮ್ಮ ದೇಶಕ್ಕೆ ಹಿಂತಿರುಗಲು ಸಾಧ್ಯವಿಲ್ಲ ಮತ್ತು ಹೊಸ ಪಾಸ್‌ಪೋರ್ಟ್ ಅಥವಾ ಎಮರ್ಜೆನ್ಸಿ ಸರ್ಟಿಫಿಕೇಟಿಗಾಗಿ ನಿಮ್ಮ ಅರ್ಜಿಯ ವಿನಂತಿಯನ್ನು ಪ್ರಕ್ರಿಯೆಗೊಳಿಸಲು ಸಮಯ ಹಿಡಿಯುತ್ತದೆ. ಆದ್ದರಿಂದ, ನಿಮ್ಮ ಪರಿಸ್ಥಿತಿಯ ಬಗ್ಗೆ ಏರ್‌ಲೈನ್‌ಗೆ ತಿಳಿಸಲು ಮತ್ತು ಅದಕ್ಕನುಗುಣವಾಗಿ ರಿಶೆಡ್ಯೂಲ್ ಮಾಡಲು ಸೂಕ್ತವಾಗಿದೆ. ನೀವು ಸಾಧ್ಯವಾದಷ್ಟು ಬೇಗನೆ ಏರ್‌ಲೈನ್‌ ಅನ್ನು ಸಂಪರ್ಕಿಸಿದರೆ, ಅದನ್ನು ರಿಶೆಡ್ಯೂಲ್ ಮಾಡಲು ಅಧಿಕ ಹಣವನ್ನು ಖರ್ಚು ಮಾಡುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

5. ಹೊಸ ಪಾಸ್‌ಪೋರ್ಟ್/ಎಮರ್ಜೆನ್ಸಿ ಸರ್ಟಿಫಿಕೇಟಿಗಾಗಿ ಅರ್ಜಿ ಸಲ್ಲಿಸಿ

ನಿಮ್ಮ ದೇಶದ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ ನಂತರ, ನಿಮ್ಮ ಅವಶ್ಯಕತೆಯ ಆಧಾರದ ಮೇಲೆ ಹೊಸ ಪಾಸ್‌ಪೋರ್ಟ್ ಅಥವಾ ಎಮರ್ಜೆನ್ಸಿ ಸರ್ಟಿಫಿಕೇಟಿಗಾಗಿ ಅರ್ಜಿ ಸಲ್ಲಿಸಿ. ಮೊದಲಿನ ಸಂದರ್ಭದಲ್ಲಿ, ಹೊಸ ಪಾಸ್‌ಪೋರ್ಟ್ ಪಡೆಯಲು ನೀವು ಒಂದು ವಾರ ಕಾಯಬೇಕಾಗುತ್ತದೆ. ಆದಾಗ್ಯೂ, ನೀವು ಒಂದು ವಾರದವರೆಗೆ ಕಾಯಲು ಸಾಧ್ಯವಾಗದಿದ್ದರೆ ಮತ್ತು ತೀವ್ರ ಅನಾರೋಗ್ಯ ಅಥವಾ ಕುಟುಂಬದ ಸದಸ್ಯರ ಸಾವಿನಂತಹ ತುರ್ತು ಪರಿಸ್ಥಿತಿಗಳಿಗಾಗಿ ತಕ್ಷಣವೇ ದೇಶಕ್ಕೆ ಹಿಂತಿರುಗಬೇಕಾದರೆ, ಎಮರ್ಜೆನ್ಸಿ ಸರ್ಟಿಫಿಕೇಟಿಗಾಗಿ ಅರ್ಜಿ ಸಲ್ಲಿಸಿ (ನಂತರ ಚರ್ಚಿಸಲಾಗಿದೆ).

ನಿಮ್ಮ ಪಾಸ್‌ಪೋರ್ಟ್ ಕಳೆದಾಗ ಏನು ಮಾಡಬೇಕೆಂದು ತಿಳಿದ ನಂತರ, ಹೊಸ ಪಾಸ್‌ಪೋರ್ಟ್ ಮತ್ತು ಎಮರ್ಜೆನ್ಸಿ ಸರ್ಟಿಫಿಕೇಟಿಗಾಗಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ತಿಳಿಯಲು ಮುಂದೆ ಓದಿ.

ಆನ್‌ಲೈನ್‌ನಲ್ಲಿ ಹೊಸ ಪಾಸ್‌ಪೋರ್ಟ್ ಮರು-ಹಂಚಿಕೆಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

ನೀವು ಪಾಸ್‌ಪೋರ್ಟ್ ಕಳೆದುಕೊಂಡರೆ ಡ್ಯೂಪ್ಲಿಕೇಟ್ ಪಾಸ್‌ಪೋರ್ಟ್‌ಗಳನ್ನು ನೀಡಲಾಗುವುದಿಲ್ಲ. ಆದ್ದರಿಂದ, ಕೆಳಗೆ ತಿಳಿಸಲಾದ ಸರಳ ಹಂತಗಳನ್ನು ಅನುಸರಿಸುವ ಮೂಲಕ ಹೊಸ ಪಾಸ್‌ಪೋರ್ಟ್‌ನ ಮರು-ಹಂಚಿಕೆಗಾಗಿ ಅರ್ಜಿ ಸಲ್ಲಿಸಿ:

  • ಹಂತ 1: ಪಾಸ್‌ಪೋರ್ಟ್ ಸೇವಾ ಕೇಂದ್ರದ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ. ಪಾಸ್‌ಪೋರ್ಟ್ ಕಛೇರಿ, ಹೆಸರು, ಹುಟ್ಟಿದ ದಿನಾಂಕ ಇತ್ಯಾದಿ ಸಂಬಂಧಿತ ವಿವರಗಳನ್ನು ನಮೂದಿಸುವ ಮೂಲಕ ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ಗೆ ನೀವೇ ರಿಜಿಸ್ಟರ್ ಮಾಡಿ. ನೀವು ಅಸ್ತಿತ್ವದಲ್ಲಿರುವ ಸದಸ್ಯರಾಗಿದ್ದರೆ, ನಿಮ್ಮ ಲಾಗಿನ್ ಐಡಿಯೊಂದಿಗೆ ಸೈನ್ ಇನ್ ಮಾಡಲು "ಎಕ್ಸಿಸ್ಟಿಂಗ್ ಯೂಸರ್ ಲಾಗಿನ್" ಅನ್ನು ಕ್ಲಿಕ್ ಮಾಡಿ.

  • ಹಂತ 2: "ಹೊಸ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿ/ಪಾಸ್‌ಪೋರ್ಟ್‌ನ ಮರು-ಹಂಚಿಕೆ" ಅನ್ನು ಆಯ್ಕೆಮಾಡಿ ಮತ್ತು ಹೆಸರು, ಸಂಪರ್ಕ ವಿವರಗಳು ಇತ್ಯಾದಿ ಸಂಬಂಧಿತ ವಿವರಗಳನ್ನು ಭರ್ತಿ ಮಾಡಿ ಹಾಗೂ ಸಲ್ಲಿಸಿ.

  • ಹಂತ 3:ನಿಮ್ಮ ಹತ್ತಿರದ ಪಾಸ್‌ಪೋರ್ಟ್ ಕಚೇರಿಯಲ್ಲಿ ಅಪಾಯಿಂಟ್‌ಮೆಂಟ್ ಸ್ಲಾಟ್ ಅನ್ನು ಬುಕ್ ಮಾಡಲು "ವಿವ್ಯೂ ಸೇವ್ ಮಾಡಿದ /ಸಬ್ಮಿಟ್ ಮಾಡಿದ  ಅಪ್ಲಿಕೇಶನ್‌" ಆಯ್ಕೆಯ ಅಡಿಯಲ್ಲಿ ಲಭ್ಯವಿರುವ "ಪೇ ಮಾಡಿ ಮತ್ತು ಅಪಾಯಿಂಟ್ಮೆಂಟ್ ನಿಗದಿಪಡಿಸಿ" ಲಿಂಕ್ ಅನ್ನು ಆಯ್ಕೆಮಾಡಿ.

  • ಹಂತ 4: ಈ ಕೆಳಗಿನ ಪಾವತಿ ವಿಧಾನಗಳನ್ನು ಬಳಸಿಕೊಂಡು ಆನ್‌ಲೈನ್ ಪಾವತಿಯೊಂದಿಗೆ ಮುಂದುವರಿಯಿರಿ - 

    • ಇಂಟರ್ನೆಟ್ ಬ್ಯಾಂಕಿಂಗ್ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಯಾವುದೇ ಇತರ ಬ್ಯಾಂಕ್‌ಗಳ ಸಹವರ್ತಿ ಬ್ಯಾಂಕ್‌ಗಳು)

    • ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳು (ಮಾಸ್ಟರ್‌ಕಾರ್ಡ್ ಅಥವಾ ವೀಸಾ)

    • SBI ಬ್ಯಾಂಕಿನ ಬ್ಯಾಂಕ್ ಚಲನ್

ಗಮನಿಸಿ: ನಿಮ್ಮ ಹತ್ತಿರದ ಪಾಸ್‌ಪೋರ್ಟ್ ಸೇವಾ ಕೇಂದ್ರ ಅಥವಾ ಪಾಸ್‌ಪೋರ್ಟ್ ಕಚೇರಿ ಅಥವಾ ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಅಪಾಯಿಂಟ್‌ಮೆಂಟ್ ನಿಗದಿಪಡಿಸಲು ಆನ್‌ಲೈನ್ ಪಾವತಿಗಳು ಕಡ್ಡಾಯವಾಗಿದೆ.

  • ಹಂತ 5: ಅರ್ಜಿಯ ರಸೀದಿಯನ್ನು ಮುದ್ರಿಸಲು "ಪ್ರಿಂಟ್ ಅಪ್ಲಿಕೇಶನ್ ರಿಸೀಪ್ಟ್" ಲಿಂಕ್ ಅನ್ನು ಆಯ್ಕೆ ಮಾಡಿ ಮತ್ತು ಪಾಸ್‌ಪೋರ್ಟ್ ನಷ್ಟದ ನಂತರ ಅಪ್ಲಿಕೇಶನ್ ವಿಧಾನವನ್ನು ಪೂರ್ಣಗೊಳಿಸಿ.

ಈ ರಸೀದಿಯು ಅರ್ಜಿಯ ರೆಫರೆನ್ಸ್ ಸಂಖ್ಯೆಯನ್ನು ಒಳಗೊಂಡಿದೆ. ಪಾಸ್‌ಪೋರ್ಟ್ ಕಚೇರಿಗೆ ಭೇಟಿ ನೀಡುವಾಗ ಈ ರಸೀದಿಯನ್ನು ಕೊಂಡೊಯ್ಯುವುದು ಕಡ್ಡಾಯವಲ್ಲ. SMS ಮೂಲಕ ಅಪಾಯಿಂಟ್‌ಮೆಂಟ್ ವಿವರಗಳನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ ಮತ್ತು ನಿಗದಿತ ದಿನಾಂಕದಂದು ಅಪಾಯಿಂಟ್‌ಮೆಂಟ್‌ನ ಪುರಾವೆಯಾಗಿ ಕಾರ್ಯನಿರ್ವಹಿಸಲು ಇದು ಸಾಕಾಗುತ್ತದೆ.

ಆಫ್‌ಲೈನ್‌ನಲ್ಲಿ ಹೊಸ ಪಾಸ್‌ಪೋರ್ಟ್‌ನ ಮರು-ಹಂಚಿಕೆಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

ಹೊಸ ಪಾಸ್‌ಪೋರ್ಟ್‌ಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು, ಆಫ್‌ಲೈನ್‌ನಲ್ಲಿ ಪಾಸ್‌ಪೋರ್ಟ್‌ನ ಮರು ಹಂಚಿಕೆಗೆ ಅರ್ಜಿ ಸಲ್ಲಿಸಲು ಇ-ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ. ಇದು ಅಧಿಕೃತ ವೆಬ್‌ಸೈಟ್‌ನಲ್ಲಿ "ಡೌನ್‌ಲೋಡ್ ಇ-ಫಾರ್ಮ್ ಟ್ಯಾಬ್" ಅಡಿಯಲ್ಲಿ ಲಭ್ಯವಿದೆ. "ಪಾಸ್‌ಪೋರ್ಟ್‌ನ ಹೊಸ ಅಥವಾ ಮರು-ಹಂಚಿಕೆ" ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಅಪ್ಲಿಕೇಶನ್ ಪ್ರಕಾರ, ಅರ್ಜಿದಾರರ ಹೆಸರು, ಜನ್ಮ ದಿನಾಂಕ ಮುಂತಾದ ಸಂಬಂಧಿತ ವಿವರಗಳನ್ನು ಆಫ್‌ಲೈನ್‌ನಲ್ಲಿ ಭರ್ತಿ ಮಾಡಿ. ಸರಿಯಾಗಿ ಭರ್ತಿ ಮಾಡಿದ ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ. ಪಾಸ್‌ಪೋರ್ಟ್ ಸೇವಾ ಕೇಂದ್ರ ಅಥವಾ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯು, ಫಾರ್ಮ್‌ನ ಪ್ರಿಂಟೆಡ್ ಪ್ರತಿಯನ್ನು ಸ್ವೀಕರಿಸುವುದಿಲ್ಲ.

ಹೊಸ ಪಾಸ್‌ಪೋರ್ಟ್‌ನ ಮರು-ಹಂಚಿಕೆಗೆ ಅಗತ್ಯವಿರುವ ಡಾಕ್ಯುಮೆಂಟುಗಳು ಯಾವುವು?

ನಿಮ್ಮ ಪಾಸ್‌ಪೋರ್ಟ್ ಅನ್ನು ನೀವು ಕಳೆದುಕೊಂಡಿದ್ದಲ್ಲಿ, ಅರ್ಜಿಯ ಪ್ರಕಾರ ಅರ್ಜಿದಾರರ ಕೆಟಗರಿ, ಉದ್ಯೋಗದ ಪ್ರಕಾರ ಮತ್ತು ಇತರ ಮಾನದಂಡಗಳ ಆಧಾರದ ಮೇಲೆ, ಪಾಸ್‌ಪೋರ್ಟ್ ಮರು-ಹಂಚಿಕೆಗಾಗಿ ಈ ಕೆಳಗಿನ ಡಾಕ್ಯುಮೆಂಟ್ ಅನ್ನು ಸಲ್ಲಿಸಿ:

  • ಜನ್ಮ ದಿನಾಂಕ ಪುರಾವೆಗಳಾದ ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್, ಇತ್ಯಾದಿ.

  • ಅನುಬಂಧ F ಪ್ರಕಾರ ಪಾಸ್‌ಪೋರ್ಟ್ ಹೇಗೆ ಕಳೆಯಿತು ಎಂಬುದನ್ನು ತಿಳಿಸುವ ಅಫಿಡವಿಟ್

  • ಒರಿಜಿನಲ್ ಪೊಲೀಸ್ ವರದಿ

  • ನೀರಿನ ಬಿಲ್, ಟೆಲಿಫೋನ್ ಬಿಲ್, ಆಧಾರ್ ಕಾರ್ಡ್, ಮುಂತಾದ ಯುಟಿಲಿಟಿ ಬಿಲ್‌ಗಳಂತಹ ಪ್ರಸ್ತುತ ವಸತಿ ವಿಳಾಸದ ಡಾಕ್ಯುಮೆಂಟ್ ಪುರಾವೆ.

  • ಹಳೆಯ ಪಾಸ್‌ಪೋರ್ಟ್‌ನ ನಾನ್-ಇಸಿಆರ್/ಇಸಿಆರ್ ಪುಟ ಸೇರಿದಂತೆ ಮೊದಲ ಮತ್ತು ಕೊನೆಯ ಎರಡು ಪುಟಗಳ ಸೆಲ್ಫ್ -ಅಟೆಸ್ಟೆಡ್  ಪ್ರತಿ

  • ಅನುಬಂಧ G ಪ್ರಕಾರ ಯಾವುದೇ ನಿರಾಕ್ಷೇಪಣಾ ಪ್ರಮಾಣಪತ್ರ ಅಥವಾ ಅನುಬಂಧ H ಪ್ರಕಾರ ಪೂರ್ವ ಸೂಚನಾ ಪತ್ರ

  • ಜನನ ಪ್ರಮಾಣಪತ್ರ, ಉನ್ನತ ಶೈಕ್ಷಣಿಕ ಉತ್ತೀರ್ಣ ಪ್ರಮಾಣಪತ್ರ ಇತ್ಯಾದಿಗಳಂತಹ ಅರ್ಜಿದಾರರ ನಾನ್-ಇಸಿಆರ್ ವರ್ಗದ ಡಾಕ್ಯುಮೆಂಟರಿ ಪುರಾವೆ.

  • ಪೆನ್ಷನ್ ಪೇಮೆಂಟ್ ಆರ್ಡರ್

  • ಅಪ್ರಾಪ್ತ ಅರ್ಜಿದಾರರಿದ್ದ ಸಂದರ್ಭದಲ್ಲಿ, ಪೋಷಕರು ತಮ್ಮ ಪಾಸ್‌ಪೋರ್ಟ್‌ಗಳ ಒರಿಜಿನಲ್  ಮತ್ತು ಸೆಲ್ಫ್ -ಅಟೆಸ್ಟೆಡ್ ಫೋಟೊಕಾಪಿಗಳನ್ನು ಪಿಎಸ್‌ಕೆ ಗೆ ತರಬಹುದು. ಅರ್ಜಿದಾರರು ಅಪ್ರಾಪ್ತರಾಗಿದ್ದರೆ ಪೋಷಕರೇ ಡಾಕ್ಯುಮೆಂಟುಗಳನ್ನು ದೃಢೀಕರಿಸಬಹುದು. ಇದಲ್ಲದೆ, ಅವರು ತಮ್ಮ ಹೆಸರಿನಲ್ಲಿ ವಿಳಾಸ ಪುರಾವೆಯನ್ನು ಸಹ ಸಲ್ಲಿಸಬಹುದು.

  • ಅರ್ಜಿದಾರರ ಇತ್ತೀಚಿನ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು

ಗಮನಿಸಿ: ಅರ್ಜಿದಾರರು ಮೇಲೆ ತಿಳಿಸಲಾದ ಡಾಕ್ಯುಮೆಂಟುಗಳ ಒರಿಜಿನಲ್ ಮತ್ತು ಸೆಲ್ಫ್ -ಅಟೆಸ್ಟೆಡ್ ಫೋಟೊಕಾಪಿಗಳನ್ನು ಪಿಎಸ್‌ಕೆ ನಲ್ಲಿ ಸಲ್ಲಿಸಬೇಕು. ಇದಲ್ಲದೆ, ಮೇಲೆ ತಿಳಿಸಲಾದ ಎಲ್ಲಾ ಡಾಕ್ಯುಮೆಂಟುಗಳು ಸೂಚಕಗಳಾಗಿವೆ. ಯಾವುದಾದರೂ ಹೆಚ್ಚುವರಿ ಡಾಕ್ಯುಮೆಂಟುಗಳನ್ನು ಸಲ್ಲಿಸುವ ಅಗತ್ಯವಿದೆಯೇ ಎಂದು ತಿಳಿಯಲು ಪಾಸ್‌ಪೋರ್ಟ್ ಕಚೇರಿ ಪೇಜಿನಲ್ಲಿ ಲಭ್ಯವಿರುವ ನ್ಯಾಯವ್ಯಾಪ್ತಿಯ ಪಾಸ್‌ಪೋರ್ಟ್ ಕಚೇರಿಯ ಹೋಮ್ ಪೇಜನ್ನು ಪರಿಶೀಲಿಸಿ.

ಮೊದಲೇ ಹೇಳಿದಂತೆ, ಹೊಸ ಸರ್ಟಿಫಿಕೇಟಿಗಾಗಿ ಅರ್ಜಿ ಸಲ್ಲಿಸುವುದು ಸ್ವಲ್ಪ ಸಮಯವನ್ನು ಹಿಡಿಯಬಹುದು ಮತ್ತು ವಿದೇಶದಲ್ಲಿ ದೀರ್ಘಕಾಲ ಉಳಿಯುವುದರಿಂದ ಅದು ತೊಂದರೆಗಳನ್ನು ಹೆಚ್ಚಿಸಬಹುದು. ಅಂತಹ ಸಂದರ್ಭಗಳಲ್ಲಿ, ನೀವು ಎಮೆರ್ಜೆನ್ಸಿ  ಸರ್ಟಿಫಿಕೇಟಿಗಾಗಿ ಅರ್ಜಿ ಸಲ್ಲಿಸಬಹುದು. ಮುಂದಿನ ವಿಭಾಗವು ಎಮರ್ಜೆನ್ಸಿ ಸರ್ಟಿಫಿಕೇಟಿನ ಮೂಲಭೂತ ಅಂಶಗಳನ್ನು ಮತ್ತು ಅದರ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಚರ್ಚಿಸುತ್ತದೆ. ಜೊತೆಗೆ ಇದನ್ನೂ ಓದಿ!

ಎಮರ್ಜೆನ್ಸಿ ಸರ್ಟಿಫಿಕೇಟ್ ಎಂದರೇನು?

ಎಮರ್ಜೆನ್ಸಿ ಸರ್ಟಿಫಿಕೇಟ್ ಒನ್-ವೇ ಟ್ರಾವೆಲ್ ಡಾಕ್ಯುಮೆಂಟ್ ಆಗಿದ್ದು, ಅದು ನಿಮ್ಮ ಪಾಸ್‌ಪೋರ್ಟ್ ಕಳೆದುಹೋದಲ್ಲಿ ನಿಮ್ಮ ದೇಶಕ್ಕೆ ಮರಳಲು ನಿಮಗೆ ಅನುಮತಿಸುತ್ತದೆ. ನಿಮ್ಮ ರಾಷ್ಟ್ರೀಯತೆ ಮತ್ತು ಇತರ ರುಜುವಾತುಗಳನ್ನು ಹೈಕಮಿಷನ್ ಪರಿಶೀಲಿಸಿದ ನಂತರ ಇದನ್ನು ನೀಡಲಾಗುತ್ತದೆ.

ಎಮರ್ಜೆನ್ಸಿ ಸರ್ಟಿಫಿಕೇಟ್ ಅನ್ನು ಈ ಕೆಳಗಿನ ಸಂದರ್ಭಗಳಲ್ಲಿ ನೀಡಲಾಗುತ್ತದೆ:

  • ಪಾಸ್‌ಪೋರ್ಟ್ ಕಳೆದುಹೋದಾಗ ಅಥವಾ ಮಿಸ್‌ಪ್ಲೇಸ್ ಆದಾಗ

  • ಪಾಸ್‌ಪೋರ್ಟ್ ಹಾಳಾದಾಗ ಅಥವಾ ಕಳುವಾದಾಗ

  • ಹೊಸ ಪಾಸ್‌ಪೋರ್ಟ್ ಸ್ವೀಕರಿಸಲು ನಿರಾಕರಿಸಿದ ವ್ಯಕ್ತಿಗಳಿಗೆ

  • ದೀರ್ಘಾವಧಿಯ ಪಾಸ್‌ಪೋರ್ಟ್‌ನ ವ್ಯಾಲಿಡಿಟಿಯು ಮುಕ್ತಾಯವಾದಾಗ

  • ಗಡಿಪಾರು ಆದೇಶದಲ್ಲಿರುವ ವ್ಯಕ್ತಿಗಳು

ವ್ಯಕ್ತಿಗಳು ಆಯಾ ರಾಯಭಾರಿ ಕಚೇರಿಗೆ ಖುದ್ದಾಗಿ ಭೇಟಿ ನೀಡುವ ಮೂಲಕ ಎಮರ್ಜೆನ್ಸಿ ಸರ್ಟಿಫಿಕೇಟಿಗಾಗಿ ಅರ್ಜಿ ಸಲ್ಲಿಸಬಹುದು ಮತ್ತು ಈ ಸರ್ಟಿಫಿಕೇಟ್ ಅನ್ನು ಪಡೆಯಲು ವೈಯಕ್ತಿಕ ಸಂದರ್ಶನ ಪ್ರಕ್ರಿಯೆಗಳಿಗೆ ಒಳಗಾಗಬೇಕಾಗಬಹುದು. ಪರ್ಯಾಯವಾಗಿ, ಅವರು ಭಾರತೀಯ ರಾಯಭಾರಿ ಕಚೇರಿಗಳು ಮತ್ತು ಕಾನ್ಸುಲೇಟ್‌ಗಳಲ್ಲಿ ಪಾಸ್‌ಪೋರ್ಟ್ ಸೇವಾ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಆನ್‌ಲೈನ್‌ನಲ್ಲಿ ಎಮರ್ಜೆನ್ಸಿ ಸರ್ಟಿಫಿಕೇಟಿಗಾಗಿ ಅರ್ಜಿ ಸಲ್ಲಿಸುವುದು ಹೇಗೆ?

ನಷ್ಟವಾದ ಅಥವಾ ಕಳೆದುಹೋದ ಪಾಸ್‌ಪೋರ್ಟ್‌ನ ಸಂದರ್ಭದಲ್ಲಿ, ಎಮರ್ಜೆನ್ಸಿ ಸರ್ಟಿಫಿಕೇಟಿಗಾಗಿ ಅರ್ಜಿ ಸಲ್ಲಿಸಲು ಕೆಳಗೆ ತಿಳಿಸಲಾದ ಕೆಲವು ಸರಳ ಹಂತಗಳು ಹೀಗಿವೆ:

  • ಹಂತ 1: ಭಾರತೀಯ ರಾಯಭಾರಿ ಕಚೇರಿಗಳು ಮತ್ತು ಕಾನ್ಸುಲೇಟ್‌ನಲ್ಲಿ ಪಾಸ್‌ಪೋರ್ಟ್ ಸೇವಾ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ. ನೀವು ಪಾಸ್‌ಪೋರ್ಟ್ ಸೇವೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ದೇಶವನ್ನು ಆಯ್ಕೆಮಾಡಿ. 

ಈಗ, "ರಿಜಿಸ್ಟರ್" ಲಿಂಕ್ ಅನ್ನು ಆಯ್ಕೆ ಮಾಡುವ ಮೂಲಕ ಪೋರ್ಟಲ್‌ಗೆ ನಿಮ್ಮನ್ನು ರಿಜಿಸ್ಟರ್ ಮಾಡಿಕೊಳ್ಳಿ. ರಾಯಭಾರಿ ಕಚೇರಿ ಅಥವಾ ಕಾನ್ಸುಲೇಟ್‌ನ ಸಂಬಂಧಿತ ವಿವರಗಳಾದ ನಿಮ್ಮ ಹೆಸರು, ಜನ್ಮ ದಿನಾಂಕ ಇತ್ಯಾದಿಯನ್ನು ನಮೂದಿಸಿ. ಮತ್ತೊಂದೆಡೆ, ನೀವು ಈಗಾಗಲೇ ರಿಜಿಸ್ಟರ್ ಮಾಡಿದ್ದರೆ, ರುಜುವಾತುಗಳೊಂದಿಗೆ ಲಾಗ್ ಇನ್ ಮಾಡಿ.

  • ಹಂತ 2: ಹೋಮ್ ಪೇಜಿನಲ್ಲಿ ನಿಮ್ಮ ಎಮರ್ಜೆನ್ಸಿ ಸರ್ಟಿಫಿಕೇಟಿಗಾಗಿ ಅಗತ್ಯವಾದ ಆಯ್ಕೆಯನ್ನು ಮಾಡಿ. ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಅದನ್ನು ಸಲ್ಲಿಸಿ.

  • ಹಂತ 3: ಲ್ಲಿಸಿದ ಅಪ್ಲಿಕೇಶನ್ ಫಾರ್ಮ್‌ನ ಪ್ರಿಂಟ್ಔಟ್ ತೆಗೆದುಕೊಳ್ಳಿ ಮತ್ತು ಸಂಬಂಧಿತ ಡಾಕ್ಯುಮೆಂಟುಗಳೊಂದಿಗೆ ರಾಯಭಾರಿ ಕಚೇರಿಗೆ ಭೇಟಿ ನೀಡಿ. ನೀವು ಭೇಟಿ ನೀಡಿದ ದೇಶದಲ್ಲಿ ಲಭ್ಯವಿರುವ ಅರ್ಜಿ ಸಲ್ಲಿಕೆ ಕೇಂದ್ರ ಅಥವಾ ರಾಯಭಾರಿ ಕಚೇರಿಗಳ ಪಟ್ಟಿಯನ್ನು ಆಕ್ಸೆಸ್ ಮಾಡಲು, "ಎಂಬೆಸಿ/ಕಾನ್ಸುಲೇಟ್‌ ಕನೆಕ್ಟ್" ಲಿಂಕ್ ಅನ್ನು ಆಯ್ಕೆಮಾಡಿ.

ನೆನಪಿಡಿ, ಎಮರ್ಜೆನ್ಸಿ ಸರ್ಟಿಫಿಕೇಟ್ ಅನ್ನು ಪಡೆಯಲು ನೀವು ಪ್ರಕ್ರಿಯೆ ಶುಲ್ಕವನ್ನು ಒದಗಿಸಬೇಕಾಗಬಹುದು. ಇದಲ್ಲದೆ, ಡಾಕ್ಯುಮೆಂಟೇಶನ್ ಅವಶ್ಯಕತೆಗಳು ಪ್ರತಿ ದೇಶಕ್ಕೆ, ಅರ್ಜಿ ಎಲ್ಲಿ ಸಲ್ಲಿಸಬೇಕು ಎಂಬುದರ ಮೇಲೆ ಭಿನ್ನವಾಗಿರುತ್ತವೆ. ಆದ್ದರಿಂದ ಈ ಸರ್ಟಿಫಿಕೇಟಿಗಾಗಿ ಅರ್ಜಿ ಸಲ್ಲಿಸಲು ಭಾರತೀಯ ಕಾನ್ಸುಲೇಟ್‌ ಅನ್ನು ಸಂಪರ್ಕಿಸುವ ಮೊದಲು ಅಧಿಕೃತ ಪೋರ್ಟಲ್ ಅನ್ನು ಪರಿಶೀಲಿಸಿ.

ಪಾಸ್‌ಪೋರ್ಟ್‌ನ ನಷ್ಟವು ಒಂದು ಅನಿರೀಕ್ಷಿತ ಸಂದರ್ಭವಾಗಿದೆ ಮತ್ತು ಪ್ರಯಾಣ ಮಾಡುವಾಗ ಅನಾನುಕೂಲತೆಯನ್ನು ಉಂಟುಮಾಡಬಹುದು. ಆದಾಗ್ಯೂ, ಅಂತಹ ಸಂದರ್ಭಗಳು ಎದುರಾದಾಗ, ಆ ತೊಂದರೆಗಳನ್ನು ಸುಲಭವಾಗಿ ತಪ್ಪಿಸಲು ನೀವು ಈ ಮೇಲೆ-ತಿಳಿಸಿದ ಪಾಯಿಂಟರ್‌ಗಳನ್ನು ನೆನಪಿನಲ್ಲಿಡಿ.

ಪದೇಪದೇ ಕೇಳಲಾದ ಪ್ರಶ್ನೆಗಳು

ಪಾಸ್‌ಪೋರ್ಟ್ ಕಳೆದುಕೊಂಡಲ್ಲಿ ಹಳೆಯ ಪಾಸ್‌ಪೋರ್ಟ್‌ನ ಫೋಟೋಕಾಪಿಯ ಅಗತ್ಯ ಇದೆಯೇ?

ಕಳೆದುಹೋದ ಅಥವಾ ಕಳುವಾದ ಅಥವಾ ಹಾನಿಗೊಳಗಾದ ಪಾಸ್‌ಪೋರ್ಟ್‌ನ ಸಂದರ್ಭದಲ್ಲಿ ಹಳೆಯ ಪಾಸ್‌ಪೋರ್ಟ್‌ನ ಫೋಟೋಕಾಪಿಯನ್ನು ಸಲ್ಲಿಸುವುದು ಕಡ್ಡಾಯವಲ್ಲ. ನಿಮ್ಮ ಬಳಿ ಇದ್ದಲ್ಲಿ, ಅದನ್ನು ಸಲ್ಲಿಸಲು ಖಚಿತಪಡಿಸಿಕೊಳ್ಳಿ. ಆದಾಗ್ಯೂ, ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವಾಗ ಪಾಸ್‌ಪೋರ್ಟ್ ಸಂಖ್ಯೆ, ದಿನಾಂಕ ಹಾಗೂ ವಿತರಣೆಯ ಸ್ಥಳ ಮತ್ತು ಮುಕ್ತಾಯ ದಿನಾಂಕದಂತಹ ವಿವರಗಳ ಅಗತ್ಯವಿದೆ. ಅದು ಲಭ್ಯವಿಲ್ಲದಿದ್ದರೆ, ನೀವು ಪ್ರಯಾಣಿಸಿದ ದೇಶದ ಆಯಾ ಭಾರತೀಯ ಮಿಷನ್ ಅನ್ನು ಸಂಪರ್ಕಿಸಿ.

ಎಮರ್ಜೆನ್ಸಿ ಸರ್ಟಿಫಿಕೇಟಿನ ವ್ಯಾಲಿಡಿಟಿ ಎಷ್ಟು?

ಎಮರ್ಜೆನ್ಸಿ ಸರ್ಟಿಫಿಕೇಟಿನ ವ್ಯಾಲಿಡಿಟಿಯು ಒಂದು ತಿಂಗಳಾಗಿದ್ದು, ಅದರೊಳಗೆ ನೀವು ನಿಮ್ಮ ದೇಶಕ್ಕೆ ಹಿಂತಿರುಗಬೇಕಾಗುತ್ತದೆ.

ಹೊಸ ಪಾಸ್‌ಪೋರ್ಟ್‌ನ ಮರು-ಹಂಚಿಕೆಗಾಗಿ ವಿನಂತಿಯನ್ನು ಪ್ರಕ್ರಿಯೆಗೊಳಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಹೊಸ ಪಾಸ್‌ಪೋರ್ಟ್‌ಗಾಗಿ ನಿಮ್ಮ ಅರ್ಜಿಯ ವಿನಂತಿಯನ್ನು ಪ್ರಕ್ರಿಯೆಗೊಳಿಸಲು ಇದು ಸರಿಸುಮಾರು 15 ದಿನಗಳನ್ನು ತೆಗೆದುಕೊಳ್ಳಬಹುದು. ನೀವು ತತ್ಕಾಲ್ ಮೋಡ್‌ನಲ್ಲಿ ಅರ್ಜಿ ಸಲ್ಲಿಸಿದರೆ, ಇದು ಸುಮಾರು 7 ರಿಂದ 10 ದಿನಗಳನ್ನು ತೆಗೆದುಕೊಳ್ಳಬಹುದು.