Thank you for sharing your details with us!

ಬಿಸಿನೆಸ್‌ಗಾಗಿ ಇನ್ಶೂರೆನ್ಸ್ ಎಂದರೇನು?

ನಿಮ್ಮ ಬಿಸಿನೆಸ್‌ಗೆ ಇನ್ಶೂರೆನ್ಸ್ ಏಕೆ ಮುಖ್ಯ?

1
ಕಟ್ಟಡದ ಬೆಂಕಿಯಿಂದ ಪ್ರಭಾವಿತವಾಗಿರುವ ಬಿಸಿನೆಸ್‌ಗಳು ಫುಟ್‌ಫಾಲ್ ಮತ್ತು ವ್ಯಾಪಾರದಲ್ಲಿ 25-30% ಕುಸಿತವನ್ನು ಎದುರಿಸುತ್ತವೆ (1)
2
2014 ರಿಂದ 2017 ರ ನಡುವೆ, ಭಾರತದ ಕೆಲಸದ ಸ್ಥಳಗಳಲ್ಲಿ 8,000 ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ! (2)
3
ಸುಮಾರು 68% ಭಾರತೀಯ ಬಿಸಿನೆಸ್‌ಗಳು ಭಾರತದಲ್ಲಿ ಕಳ್ಳತನ ಅಥವಾ ವಂಚನೆಯ ಕೆಲ ಘಟನೆಗಳನ್ನು ಎದುರಿಸುತ್ತವೆ  (3)

ಬಿಸಿನೆಸ್‌ಗಳಿಗೆ ಡಿಜಿಟ್ ಯಾವ ಇನ್ಶೂರೆನ್ಸ್ ಯೋಜನೆಗಳನ್ನು ನೀಡುತ್ತದೆ?

ಜನರಲ್ ಲಯಬಿಲಿಟಿ ಇನ್ಶೂರೆನ್ಸ್

ಉದಾಹರಣೆಗೆ, ಒಬ್ಬ ಕ್ಲೈಂಟ್ ಅಥವಾ ಡೆಲಿವರಿ ವ್ಯಕ್ತಿಯು ನಿಮ್ಮ ಆಫೀಸಿಗೆ ಬಂದಾಗ, ಅವರು "ಎಚ್ಚರಿಕೆಯ ವೆಟ್ ಫ್ಲೋರ್ ಚಿಹ್ನೆ" ಅನ್ನು ನೋಡದಿದ್ದರೆ ಮತ್ತು ಅಚಾನಕ್ ಆಗಿ ಅವರು ಜಾರಿಬೀಳುವುದು, ಬೀಳುವುದು ಮತ್ತು ಅವರ ಕೈ ಮುರಿದರೆ, ಆಗ ಅವರ ಮೆಡಿಕಲ್ ಬಿಲ್‌ಗಳನ್ನು ಪಾವತಿಸಲು ಈ ರೀತಿಯ ಬಿಸಿನೆಸ್ ಇನ್ಶೂರೆನ್ಸ್ ನಿಮಗೆ ಸಹಾಯ ಮಾಡುತ್ತದೆ. ಈ ಕವರೇಜಿಲ್ಲದೆ, ಥರ್ಡ್ ಪಾರ್ಟಿಗಳನ್ನು ಒಳಗೊಂಡಿರುವ ಇಂತಹ ಅಪಘಾತಗಳು ದೊಡ್ಡ ಲೀಗಲ್ ಬಿಲ್‌ಗಳಿಗೆ ಕಾರಣವಾಗಬಹುದು. 

ಕಾಪಿರೈಟ್ ಇಶ್ಯೂಗಳು, ಮಾನಹಾನಿ ಮತ್ತು ನಿಂದನೆಯ ಯಾವುದೇ ಕ್ಲೈಮ್‌ಗಳ ವಿರುದ್ಧ ನಿಮ್ಮ ಬಿಸಿನೆಸ್ ಅನ್ನು ಕವರ್ ಮಾಡಲು ಸಹ ಇದು ಸಹಾಯ ಮಾಡುತ್ತದೆ.

ಮ್ಯಾನೇಜ್‌ಮೆಂಟ್ ಲಯಬಿಲಿಟಿ

ಈ ರೀತಿಯ ಇನ್ಶೂರೆನ್ಸ್, ಸಾಮಾನ್ಯವಾಗಿ ಕಂಪನಿಯ ಮ್ಯಾನೇಜರ್‌ಗಳು, ಡೈರೆಕ್ಟರ್‌ಗಳು ಮತ್ತು ಆಫೀಸರ್‌ಗಳಿಗೆ ನಿರ್ದೇಶಿಸಿದ ತಪ್ಪು ಆರೋಪಗಳಂತಹ ಜನರಲ್ ಲಯಬಿಲಿಟಿ ಪಾಲಿಸಿಯ ಅಡಿಯಲ್ಲಿ ಕವರ್ ಆಗದ ಸಂದರ್ಭಗಳ ವಿರುದ್ಧ, ನಿಮ್ಮ ಕಂಪನಿಯ ಡೈರೆಕ್ಟರ್‌ಗಳು ಮತ್ತು ಆಫೀಸರ್‌ಗಳನ್ನು ರಕ್ಷಿಸಲು ಇರುತ್ತದೆ. 

ಉದಾಹರಣೆಗೆ, ಬಿಸಿನೆಸ್ ಕೆಲಸಗಳನ್ನು ನಿರ್ವಹಿಸುವಾಗ ಅಥವಾ ನಡೆಸುತ್ತಿರುವಾಗ ಡೈರೆಕ್ಟರ್‌ಗಳು ಮತ್ತು ಆಫೀಸರ್‌ಗಳ ಕೆಪ್ಯಾಸಿಟಿಯ ವಿರುದ್ಧ ಮಾಡಲಾದ ತಾರತಮ್ಯ, ಕಿರುಕುಳ ಅಥವಾ ತಪ್ಪಾದ ಟರ್ಮಿನೇಶನ್ ನಂತಹ ಮುಂತಾದ ಯಾವುದೇ ಕ್ಲೈಮ್‌ಗಳಿಂದ ಉದ್ಭವಿಸಬಹುದಾದ ಹಣಕಾಸು ನಷ್ಟಗಳಿಂದ ಇದು ನಿಮ್ಮ ಬಿಸಿನೆಸ್ ಅನ್ನು ರಕ್ಷಿಸುತ್ತದೆ. 

ಬಿಸಿನೆಸ್ ಓನರ್‌ಗಳಿಂದ ಇದನ್ನು ಸಾಮಾನ್ಯವಾಗಿ ಕಡೆಗಣಿಸಲಾಗಿದ್ದರೂ, ಇದು ನಿಮ್ಮ ಬಿಸಿನೆಸ್ ಅನ್ನು ಮಾತ್ರವಲ್ಲದೆ ಡೈರೆಕ್ಟರ್‌ಗಳನ್ನು ಮತ್ತು ಮ್ಯಾನೇಜರ್‌ಗಳನ್ನು ಸಹ ಕವರ್ ಮಾಡುವ ಅತ್ಯಂತ ಪ್ರಮುಖವಾದ ಇನ್ಶೂರೆನ್ಸ್ ಕವರ್‌ಗಳಲ್ಲಿ ಒಂದಾಗಿದೆ. ಇದು ಎಲ್ಲಾ ರೀತಿಯ ಅನಿರೀಕ್ಷಿತ ಮತ್ತು ಸಂಭಾವ್ಯ ದೊಡ್ಡ ಲಯಬಿಲಿಟಿ ಕ್ಲೈಮ್‌ಗಳ ವಿರುದ್ಧ ನಿಮ್ಮನ್ನು ರಕ್ಷಿಸುತ್ತದೆ. ಏಕೆಂದರೆ ಇದು ಮೊಕದ್ದಮೆಯ ಪರಿಣಾಮವಾಗಿ ಕಳೆದ ವೆಚ್ಚಗಳು ಅಥವಾ ಹಾನಿಗಳನ್ನು ಕವರ್ ಮಾಡುತ್ತದೆ.

ಪ್ರೊಫೆಷನಲ್ ಲಯಬಿಲಿಟಿ ಇನ್ಶೂರೆನ್ಸ್

ನೀವು ಸರ್ವೀಸ್ ಅಥವಾ ಸಲಹೆಯನ್ನು (ಕನ್ಸಲ್ಟೆಂಟ್‌ಗಳು ಕಾಂಟ್ರ್ಯಾಕ್ಟರ್‌ಗಳು, ಅಕೌಂಟೆಂಟ್‌ಗಳು, ಡೆವಲಪರ್‌ಗಳು, ಆರ್ಕಿಟೆಕ್ಟ್‌ಗಳು, ಡಿಸೈನರ್‌ಗಳು, ಈವೆಂಟ್ ಪ್ಲಾನರ್‌ಗಳು, ಅಥವಾ ವಕೀಲರು ಅಥವಾ ಡಾಕ್ಟರ್‌ಗಳು) ನೀಡುತ್ತಿದ್ದರೆ, ಈ ರೀತಿಯ ಬಿಸಿನೆಸ್ ಇನ್ಶೂರೆನ್ಸ್ ನಿಮ್ಮ ಬಿಸಿನೆಸ್‌ಗೆ ಅತ್ಯಗತ್ಯವಾಗಿರುತ್ತದೆ. ನಿಮ್ಮ ಕ್ಲೈಂಟ್‌ಗಳು ಅಥವಾ ಕಸ್ಟಮರ್‌ಗಳಿಂದ ಯಾವುದೇ ನಿರ್ಲಕ್ಷ್ಯ, ಅಸಮರ್ಪಕ ಕೆಲಸ, ದೋಷಗಳು ಅಥವಾ ದುರುಪಯೋಗದ ಯಾವುದೇ ಕ್ಲೈಮ್‌ಗಳ ವಿರುದ್ಧ ಇದು ನಿಮ್ಮನ್ನು ರಕ್ಷಿಸುತ್ತದೆ. 

ಉದಾಹರಣೆಗೆ, ನೀವು ಆರ್ಕಿಟೆಕ್ಚರಲ್ ಸಂಸ್ಥೆಯನ್ನು ಹೊಂದಿದ್ದರೆ, ಒಂದುವೇಳೆ ನೀವು ಬಜೆಟ್ ಅನ್ನು ಮೀರಿದರೆ ಅಥವಾ ಡೆಡ್‌ಲೈನ್ ಕಳೆದು ಕ್ಲೈಂಟ್‌ಗೆ ಹಣಕಾಸಿನ ಹಾನಿಯನ್ನುಂಟಾಗುವ ಹಾಗಿದ್ದರೆ, ಈ ಇನ್ಶೂರೆನ್ಸ್ ನಿಮಗೆ ಹಣಕಾಸಿನ ನಷ್ಟಗಳ ವಿರುದ್ಧ ನಿಮ್ಮನ್ನು ಕವರ್ ಮಾಡುತ್ತದೆ ಮತ್ತು ಕಾನೂನು ವೆಚ್ಚಗಳಂತಹ ವಿಷಯಗಳಲ್ಲಿ ನಿಮಗೆ ಸಹಾಯ ಮಾಡುತ್ತದೆ. 

ಇದು ನಿಮ್ಮ ಬಿಸಿನೆಸ್ ಅನ್ನು ಹೆಚ್ಚು ಸುಗಮವಾಗಿ ನಡೆಸಲು ಸಹಾಯ ಮಾಡುತ್ತದೆ. ಏಕೆಂದರೆ ನೀವು ದುಬಾರಿಯಾದ ಮೊಕದ್ದಮೆಗಳ ಬಗ್ಗೆ ಚಿಂತಿಸಬೇಕಾಗಿಲ್ಲ ಮತ್ತು ಏನಾದರೂ ತಪ್ಪಾದಲ್ಲಿ ಹೆಚ್ಚುವರಿ ಬೋನಸ್ ಆಗಿ, ನಿಮ್ಮ ಕಸ್ಟಮರ್‌ಗಳು ಮತ್ತು ಕ್ಲೈಂಟ್‌ಗಳು ಪರಿಹಾರವನ್ನು ಪಡೆಯುವ ಭರವಸೆಯನ್ನು ಪ್ರಶಂಸಿಸುತ್ತಾರೆ!

ಕಾಂಟ್ರಾಕ್ಚುವಲ್ ಲಯಬಿಲಿಟಿ

ಕಾಂಟ್ರಾಕ್ಚುವಲ್ ಲಯಬಿಲಿಟಿಗಳು ನೀವು ಮತ್ತು ನಿಮ್ಮ ಬಿಸಿನೆಸ್, ರೆಂಟಲ್ ಅಗ್ರಿಮೆಂಟ್ ಅಥವಾ ಇತರ ಸಾಮಾನ್ಯ ಬಿಸಿನೆಸ್ ಕಾಂಟ್ರಾಕ್ಟ್‌ನಂತಹ ಯಾವುದೇ ಸ್ವಭಾವದ ಕಾಂಟ್ರಾಕ್ಟ್‌ಗೆ ಪ್ರವೇಶಿಸುವುದರಿಂದ ಊಹಿಸುವ ಲಯಬಿಲಿಟಿಗಳಾಗಿವೆ.

ನೀವು ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಮೂಲಕ ಕವರ್ ಆಗಿದ್ದರೂ ಸಹ, ಇದು ಅನೇಕ ದಿನನಿತ್ಯದ ಕಾರ್ಯಾಚರಣೆಯ ಅಪಾಯಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಆದರೆ ಇಂತಹ ಸಂದರ್ಭಗಳಲ್ಲಿ ಇದು ಕವರೇಜನ್ನು ನೀಡದಿರಬಹುದು.

ಆದರೆ ಕಾಂಟ್ರಾಕ್ಚುವಲ್ ಲಯಬಿಲಿಟಿಗಳು ಇನ್ಶೂರೆನ್ಸ್‌ನೊಂದಿಗೆ, ನಿಮ್ಮ ಬಿಸಿನೆಸ್, ಇಂಡೆಮ್ನಿಟಿ ಅಗ್ರಿಮೆಂಟ್ ಕಾಂಟ್ರಾಕ್ಟ್‌ನೊಂದಿಗೆ ಕಾಂಟ್ರಾಕ್ಟ್‌ಗೆ ಪ್ರವೇಶಿಸಿದಾಗಲೂ (ಇದನ್ನು ಹೋಲ್ಡ್ ಹಾರ್ಮ್ ಲೆಸ್ ಅಗ್ರಿಮೆಂಟ್ ಎಂದೂ ಕರೆಯುತ್ತಾರೆ) ಅಥವಾ ಥರ್ಡ್ ಪಾರ್ಟಿ ಪರವಾಗಿ ದೈಹಿಕ ಗಾಯಕ್ಕಾಗಿ ಅಥವಾ ಪ್ರಾಪರ್ಟಿ ಡ್ಯಾಮೇಜ್ ಕ್ಲೈಮ್‌ಗಾಗಿ ನೀವು ಯಾವುದೇ ಹೊಣೆಗಾರಿಕೆಯನ್ನು ಹೊಂದಿದ್ದರೂ ಸಹ ನಿಮ್ಮನ್ನು ರಕ್ಷಿಸಲಾಗುತ್ತದೆ. ಹಣಕಾಸಿನ ನಷ್ಟಗಳು ಮತ್ತು ಕಾನೂನು ವೆಚ್ಚಗಳಂತಹ ವಿಷಯಗಳಿಗೆ ಇದು ನಿಮ್ಮನ್ನು ಕವರ್ ಮಾಡುತ್ತದೆ.

ವರ್ಕರ್ಸ್ ಕಾಂಪನ್ಸೇಶನ್ (ಕಾರ್ಮಿಕರ ಪರಿಹಾರ) ಇನ್ಶೂರೆನ್ಸ್

ಉದ್ಯೋಗಿಗಳ ಕಾಂಪನ್ಸೇಶನ್ ಇನ್ಶೂರೆನ್ಸ್ ಎಂದೂ ಕರೆಯಲ್ಪಡುವ, ಈ ರೀತಿಯ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಬಿಸಿನೆಸ್‌ನ ಉದ್ಯೋಗಿಗಳು ಗಾಯಗೊಂಡರೆ ಅಥವಾ ಉದ್ಯೋಗದ ಪರಿಣಾಮವಾಗಿ ಅಂಗವೈಕಲ್ಯ ಉಂಟಾದರೆ ಅವರಿಗೆ ಕವರೇಜ್ ನೀಡುತ್ತದೆ.

ನೀವು ರೆಸ್ಟೋರೆಂಟ್ ಹೊಂದಿದ್ದೀರಿ ಎಂದುಕೊಳ್ಳಿ ಮತ್ತು ಅಡುಗೆ ಮಾಡುವಾಗ ನಿಮ್ಮ ಬಾಣಸಿಗರೊಬ್ಬರು ಆಕಸ್ಮಿಕವಾಗಿ ತಮ್ಮ ಬೆರಳನ್ನು ಕತ್ತರಿಸಿಕೊಂಡರೆ, ಈ ಇನ್ಶೂರೆನ್ಸ್‌ನೊಂದಿಗೆ ಅವರು ತಮ್ಮ ವೈದ್ಯಕೀಯ ವೆಚ್ಚಗಳಿಗೆ ಪರಿಹಾರವನ್ನು ಹಾಗೂ ತಮ್ಮ ವೇತನವನ್ನು ಪಡೆಯುತ್ತಾರೆ ಮತ್ತು ನಿಮ್ಮ ಬಿಸಿನೆಸ್ ಅನ್ನು ಆರ್ಥಿಕ ನಷ್ಟದಲ್ಲಿ ಬೀಳಲು ಬಿಡುವುದಿಲ್ಲ!

ನಿಮ್ಮ ಉದ್ಯೋಗಿಗಳನ್ನು ಮತ್ತು ವರ್ಕರ್‌ಗಳನ್ನು ರಕ್ಷಿಸಲು ಮಾತ್ರವಲ್ಲದೆ, ವರ್ಕ್ ಮೆನ್ಸ್ ಕಾಂಪನ್ಸೇಶನ್ ಆ್ಯಕ್ಟ್, 1923 ಕ್ಕೆ ಅನುಗುಣವಾಗಿ ನಿಮ್ಮನ್ನು ಮತ್ತು ನಿಮ್ಮ ಕಂಪನಿಯನ್ನು ಕಾನೂನು ತೊಡಕುಗಳಿಂದ ರಕ್ಷಿಸಿ, ನೀವೊಬ್ಬ ಬಿಸಿನೆಸ್ ಓನರ್ ಆಗಲು ಇದು ತುಂಬಾ ಮುಖ್ಯವಾಗಿದೆ.

ಎಂಪ್ಲಾಯೀ ಹೆಲ್ತ್ ಇನ್ಶೂರೆನ್ಸ್

ಎಂಪ್ಲಾಯೀ ಹೆಲ್ತ್ ಇನ್ಶೂರೆನ್ಸ್ (ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಎಂದೂ ಕರೆಯುತ್ತಾರೆ) ಒಂದು ರೀತಿಯ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಆಗಿದ್ದು, ಅದು ಒಂದೇ ಸಂಸ್ಥೆಯ ಅಡಿಯಲ್ಲಿ ಕೆಲಸ ಮಾಡುವ ಜನರ ಗುಂಪನ್ನು ಕವರ್ ಮಾಡುತ್ತದೆ. ಅಂದರೆ ಆ ಸಂಸ್ಥೆಯ ಎಂಪ್ಲಾಯೀಗಳು, ಒಂದು ಪಾಲಿಸಿಯ ಅಡಿಯಲ್ಲಿ ಕವರ್ ಆಗುತ್ತಾರೆ. ಇದನ್ನು ಸಾಮಾನ್ಯವಾಗಿ ಎಂಪ್ಲಾಯೀಗಳಿಗೆ ಹೆಲ್ತ್ ಕೇರ್ ಪ್ರಯೋಜನವಾಗಿ ನೀಡಲಾಗುತ್ತದೆ. ಮತ್ತು ರಿಸ್ಕ್ ಎನ್ನುವುದು ಇನ್ಶೂರ್ಡ್ ವ್ಯಕ್ತಿಗಳ ಪೂಲ್‌ನಲ್ಲಿ ಹರಡಿರುವುದರಿಂದ, ನಿಮ್ಮ ಬಿಸಿನೆಸ್ ಪ್ರೀಮಿಯಂಗಳನ್ನು ಕಡಿಮೆ ಇರಿಸಿಕೊಳ್ಳಲು ಸಾಧ್ಯವಾಗುತ್ತದೆ. 

ಮತ್ತು ಇದಕ್ಕೆ ಪ್ರತಿಯಾಗಿ, ನಿಮ್ಮ ಬಿಸಿನೆಸ್ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಈ ರೀತಿಯ ಇನ್ಶೂರೆನ್ಸ್ ನಿಮ್ಮ ಎಂಪ್ಲಾಯೀಗಳಿಗೆ ಹಣಕಾಸಿನ ಒತ್ತಡ ಕಡಿಮೆಯಿರುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಎಂಪ್ಲಾಯೀಗಳ ಅಟೆಂಡೆನ್ಸ್, ಉತ್ಪಾದಕತೆ ಮತ್ತು ನಿಮ್ಮ ಲಾಭವನ್ನು ಹೆಚ್ಚಿಸುತ್ತದೆ! 

ಭಾರತದಲ್ಲಿ, ಗೃಹ ವ್ಯವಹಾರಗಳ ಸಚಿವಾಲಯವು ಇತ್ತೀಚೆಗೆ ಎಲ್ಲಾ ಎಂಪ್ಲಾಯರ್‌ಗಳು ತಮ್ಮ ಎಂಪ್ಲಾಯೀಗಳಿಗೆ ಗ್ರೂಪ್ ಹೆಲ್ತ್ ಇನ್ಶೂರೆನ್ಸ್ ಕವರೇಜ್ ನೀಡುವುದನ್ನು ಕಡ್ಡಾಯಗೊಳಿಸಿದೆ (ಕೋವಿಡ್-19 ಸಾಂಕ್ರಾಮಿಕ ರೋಗ ಮುಗಿದ ನಂತರವೂ ಸಹ).

ಪ್ರಾಪರ್ಟಿ ಇನ್ಶೂರೆನ್ಸ್

ಪ್ರಾಪರ್ಟಿ ಇನ್ಶೂರೆನ್ಸ್ ನಿಮ್ಮ ಬಿಸಿನೆಸ್‌ನ ಶಾಪ್ ಅಥವಾ ಆಫೀಸ್ ಪ್ರಾಪರ್ಟಿಯನ್ನು ಬೆಂಕಿ, ಕಳ್ಳತನ, ನೈಸರ್ಗಿಕ ವಿಕೋಪಗಳು ಮತ್ತು ಇತರ ದುರದೃಷ್ಟಕರ ಘಟನೆಗಳಂತಹ ಯಾವುದೇ ಅಪಾಯಗಳಿಂದ ರಕ್ಷಿಸುವ ಇನ್ಶೂರೆನ್ಸ್ ಪಾಲಿಸಿಯಾಗಿದೆ. 

ಎಲ್ಲದಕ್ಕೂ ಮುಖ್ಯವಾಗಿ, ನಿಮ್ಮ ಬಿಸಿನೆಸ್‌ಗೆ ಯಾವುದೇ ದೊಡ್ಡ ನಷ್ಟವಾಗುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು ಬಹುಶಃ ನಿಮ್ಮ ಸಾಮರ್ಥ್ಯದಲ್ಲಿ ಎಲ್ಲವನ್ನೂ ಮಾಡಲು ಬಯಸುತ್ತೀರಿ. ಒಂದು ವೇಳೆ ಬೆಂಕಿಯು ನಿಮ್ಮ ಆಫೀಸ್ ಬಿಲ್ಡಿಂಗ್ ಅನ್ನು ಡ್ಯಾಮೇಜ್ ಮಾಡಿದರೆ, ಈ ಇನ್ಶೂರೆನ್ಸ್ ಕವರೇಜಿನೊಂದಿಗೆ, ಬಿಲ್ಡಿಂಗ್, ಹಾಗೆಯೇ ನಿಮ್ಮ ಬಿಸಿನೆಸ್‌ನ ಕಂಟೆಂಟ್‌ಗಳು ಮತ್ತು, ಸುರಕ್ಷಿತವಾಗಿರುವ ಅಥವಾ ಶಾಪ್ ಕೌಂಟರ್‌ನಲ್ಲಿನ ಕ್ಯಾಶ್ ಮುಂತಾದ ಬೆಲೆಬಾಳುವ ವಸ್ತುಗಳನ್ನು ಕವರ್ ಮಾಡಲಾಗುತ್ತದೆ ಮತ್ತು ನೀವು ನಿಮ್ಮ ವಸ್ತುಗಳನ್ನು ಒಳಗೆ ರಿಪ್ಲೇಸ್ ಮಾಡಿಕೊಳ್ಳಬಹುದು.

ಮೂಲಭೂತವಾಗಿ, ಪ್ರಾಪರ್ಟಿ ಇನ್ಶೂರೆನ್ಸ್ ನಿಮ್ಮ ಬಿಸಿನೆಸ್ ಅನ್ನು ರಕ್ಷಿಸಲು ಅತ್ಯಗತ್ಯವಾಗಿದೆ. ಅದು ರೆಸ್ಟೋರೆಂಟ್ ಅಥವಾ ಬಟ್ಟೆ ಅಂಗಡಿ ಅಥವಾ ಅಕೌಂಟೆನ್ಸಿ ಆಫೀಸ್ ಆಗಿರಲಿ, ನೈಸರ್ಗಿಕ ವಿಪತ್ತುಗಳು ಮತ್ತು ಕಳ್ಳತನ ಸೇರಿದಂತೆ ನಿಮ್ಮ ನಿಯಂತ್ರಣದಿಂದ ಹೊರಗುಳಿಯುವ ಯಾವುದೇ ಸಂಭಾವ್ಯ ನಷ್ಟಗಳು ಮತ್ತು ಅಪಾಯಗಳಿಂದ ನಿಮ್ಮ ಬಿಸಿನೆಸ್ ಅನ್ನು ರಕ್ಷಿಸುತ್ತದೆ

ಪರಿಣಾಮದ ಹಾನಿಯ ಇನ್ಶೂರೆನ್ಸ್

ಬೆಂಕಿಯ ಸಂದರ್ಭದಲ್ಲಿ ಅದರ ಪರಿಣಾಮವಾಗಿ ಉಂಟಾಗುವ ಡ್ಯಾಮೇಜುಗಳು ಮತ್ತು ಬಿಸಿನೆಸ್ ಅಡಚಣೆಯ ವೆಚ್ಚಗಳನ್ನು ನಿಮಗೆ ಸರಿದೂಗಿಸಲು ಪರಿಣಾಮದ ಹಾನಿಯ ಇನ್ಶೂರೆನ್ಸ್ ಪಾಲಿಸಿಯ ಇದೆ. 

ಉದಾಹರಣೆಗೆ, ನಿಮ್ಮ ಶಾಪ್, ಬೆಂಕಿಯಿಂದ ಡ್ಯಾಮೇಜ್ ಆದರೆ (ಇದು ಎಂದಿಗೂ ಸಂಭವಿಸದಿರಲೆಂದು ನಾವು ಆಶಿಸುತ್ತೇವೆ!), ರೆಗ್ಯುಲರ್ ಪ್ರಾಪರ್ಟಿ ಇನ್ಶೂರೆನ್ಸ್, ನಿಮ್ಮ ಶಾಪ್ ಮತ್ತು ಕಂಟೆಂಟ್‌ಗಳನ್ನು ಕವರ್ ಮಾಡುತ್ತದೆ. ಪರಿಣಾಮದ ಹಾನಿಯ ಪಾಲಿಸಿಯು, ನಿಮ್ಮ ಶಾಪ್‌ಗೆ ಡ್ಯಾಮೇಜ್ ಆದ ಕಾರಣ ನೀವು ಎದುರಿಸಬಹುದಾದ ಬಿಸಿನೆಸ್ ಮತ್ತು ರೆವಿನ್ಯೂಗಳ ಯಾವುದೇ ನಷ್ಟದಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ಎಲೆಕ್ಟ್ರಿಸಿಟಿಯಂತಹ ಆಪರೇಟಿಂಗ್ ಎಕ್ಸ್‌ಪೆನ್ಸ್‌ಗಳನ್ನು ಸಹ ಕವರ್ ಮಾಡುತ್ತದೆ, ಇದು ನಿಮ್ಮ ಬಿಸಿನೆಸ್ ಚಟುವಟಿಕೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರೂ ಸಹ, ಮುಂದುವರೆಸುತ್ತದೆ.

ಆದ್ದರಿಂದ, ಮೂಲಭೂತವಾಗಿ, ನೀವು ಕಷ್ಟಕರ ಪರೀಕ್ಷೆಯನ್ನು ಅನುಭವಿಸಿದ ನಂತರವೂ, ಈ ಪಾಲಿಸಿಯೊಂದಿಗೆ ನಿಮ್ಮ ನಷ್ಟವನ್ನು ಕಡಿಮೆ ಮಾಡಲು ಮತ್ತು ನಿಮ್ಮ ಬಿಸಿನೆಸ್ ಅನ್ನು ಸುಗಮವಾಗಿ ನಡೆಸಲು ನಿಮಗೆ ಹೆಚ್ಚು ಸುಲಭವಾಗುತ್ತದೆ!

ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್

ನಿಮ್ಮ ಬಿಸಿನೆಸ್ ಯಾವುದೇ ವೆಹಿಕಲ್‌ಗಳನ್ನು ಹೊಂದಿದ್ದರೆ ಅಥವಾ ಕೇವಲ ಒಂದು ವೆಹಿಕಲ್ ಅನ್ನು ಹೊಂದಿದ್ದರೆ, ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅನ್ನು ಪಡೆಯುವುದು ಅತ್ಯಗತ್ಯ. ನಿಮ್ಮ ವೆಹಿಕಲ್‌ಗೆ ಉಂಟಾದ ಯಾವುದೇ ನಷ್ಟಗಳು ಮತ್ತು ವೆಹಿಕಲ್‌ಗೆ ಹಾಗೂ ಅದನ್ನು ಓಡಿಸುವ ಜನರು ಮತ್ತು ಯಾವುದೇ ಥರ್ಡ್ ಪಾರ್ಟಿಯ ಆ್ಯಕ್ಸಿಡೆಂಟ್‌ಗಳಿಂದ ನಿಮ್ಮನ್ನು ಆರ್ಥಿಕವಾಗಿ ರಕ್ಷಿಸಲು ಮತ್ತು ಕವರ್ ಮಾಡಲು ಇದು ಸಹಾಯ ಮಾಡುತ್ತದೆ. 

ಉದಾಹರಣೆಗೆ, ನಿಮ್ಮ ವರ್ಕರ್, ನಿಮ್ಮ ಕಂಪನಿಯ ವ್ಯಾನ್ ಅನ್ನು ಡೆಲಿವರಿಗಾಗಿ ಬಳಸುತ್ತಿದ್ದರೆ ಮತ್ತು ನಿಮ್ಮ ಬಿಸಿನೆಸ್ ಅನ್ನು ಬಿಡುವಾಗ ಆಕಸ್ಮಿಕವಾಗಿ ಬೇರೊಬ್ಬರ ಕಾರಿಗೆ ಡಿಕ್ಕಿ ಹೊಡೆದರೆ, ಈ ಕವರೇಜ್ ಈ ಥರ್ಡ್ ಪಾರ್ಟಿಯ ಡ್ಯಾಮೇಜನ್ನು ಪಾವತಿಸಲು ನಿಮಗೆ ಸಹಾಯ ಮಾಡುತ್ತದೆ.

ಆದ್ದರಿಂದ, ಮೂಲಭೂತವಾಗಿ ನಿಮ್ಮ ಬಿಸಿನೆಸ್, ವೆಹಿಕಲ್‌ಗಳನ್ನು ಹೊಂದಿದ್ದು, ಅವುಗಳನ್ನು ಲೀಸ್ ಅಥವಾ ಬಾಡಿಗೆಗೆ ನೀಡಿದರೆ ಹಾಗೂ ಕ್ಯಾಬ್ ಸೇವೆಗಳು ಅಥವಾ ಕಮರ್ಷಿಯಲ್ ಬಸ್‌ಗಳನ್ನು ಓಡಿಸುವ ಉದ್ದೇಶಗಳಿಗಾಗಿ ಡ್ರೈವ್ ಮಾಡುವ ಎಂಪ್ಲಾಯೀಗಳನ್ನು ಹೊಂದಿದ್ದರೆ, ಆಗ ಕಮರ್ಷಿಯಲ್ ವೆಹಿಕಲ್ ಇನ್ಶೂರೆನ್ಸ್ ಅತ್ಯಗತ್ಯವಾಗುತ್ತದೆ. ನಿಮ್ಮ ಸ್ಟೇಕ್‌ಹೋಲ್ಡರ್ಸ್ ಮತ್ತು ಪ್ಯಾಸೆಂಜರ್‌ಗಳು ಯಾವಾಗಲೂ ರಕ್ಷಿಸಲ್ಪಡುತ್ತಾರೆ ಎಂದು ಭರವಸೆ ನೀಡಲು ಇದು ಸಹಾಯ ಮಾಡುತ್ತದೆ.

ಭಾರತದಲ್ಲಿ ಮೋಟಾರ್ ವೆಹಿಕಲ್ ಆ್ಯಕ್ಟ್ ಪ್ರಕಾರ (ಯಾವುದೇ ಥರ್ಡ್ ಪಾರ್ಟಿಗಳನ್ನು ರಕ್ಷಿಸಲು) ಲಯಬಿಲಿಟಿ ಓನ್ಲಿ ಪಾಲಿಸಿಯನ್ನು ಹೊಂದುವುದು ಕಡ್ಡಾಯವಾಗಿದೆ ಎಂಬುದನ್ನು ನೆನಪಿಡಿ.

ಗ್ರೂಪ್ ಇಲ್ನೆಸ್ ಇನ್ಶೂರೆನ್ಸ್ (ಕೋವಿಡ್ ಕವರ್)

ಮತ್ತು, ಕೋವಿಡ್-19 ಕುರಿತು ಮಾತನಾಡುವುದಾದರೆ, ಈ ದಿನಗಳಲ್ಲಿ ಮತ್ತೊಂದು ರೀತಿಯ ಬಿಸಿನೆಸ್ ಇನ್ಶೂರೆನ್ಸಿನ ಅಗತ್ಯವಿದೆ, ಅದೇ ಕೋವಿಡ್-19 ಗ್ರೂಪ್ ಪ್ರೊಟೆಕ್ಷನ್. ಇದು ಕೊರೋನವೈರಸ್ ಸಾಂಕ್ರಾಮಿಕ ಸಮಯದಲ್ಲಿ ಎಂಪ್ಲಾಯೀಗಳನ್ನು ಕವರ್ ಮಾಡಲು, ಗುಂಪುಗಳಿಗೆ ವಿನ್ಯಾಸಗೊಳಿಸಲಾದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಾಗಿದೆ.

ಕೋವಿಡ್-19 ಚಿಕಿತ್ಸೆಯ ಸಮಯದಲ್ಲಿ ಅವರು ಹೊಂದಿರಬಹುದಾದ ಯಾವುದೇ ಮೆಡಿಕಲ್ ಎಕ್ಸ್‌ಪೆನ್ಸ್‌ಗಳಿಗೆ ಇದು ಕವರೇಜ್ ನೀಡುತ್ತದೆ ಮತ್ತು ಅಂತಹ ಸಂದರ್ಭದಲ್ಲಿ ನಿಮ್ಮ ಹಣಕಾಸಿನ ಹೊರೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಎಲೆಕ್ಟ್ರಾನಿಕ್ ಇಕ್ವಿಪ್‌ಮೆಂಟ್ ಇನ್ಶೂರೆನ್ಸ್ - ಇಇಇ (EEI)

ಹಠಾತ್ ಮತ್ತು ಅನಿರೀಕ್ಷಿತ ಘಟನೆಗಳಿಂದಾಗಿ ನಿಮ್ಮ ಎಲೆಕ್ಟ್ರಾನಿಕ್ ಇಕ್ವಿಪ್‌ಮೆಂಟ್‌ಗಳಿಗೆ (ಕಂಪ್ಯೂಟರ್‌ಗಳು, ಮೆಡಿಕಲ್ ಇಕ್ವಿಪ್‌ಮೆಂಟ್‌ಗಳು ಮತ್ತು ಸಿಸ್ಟಮ್ ಸಾಫ್ಟ್‌ವೇರ್‌ನಂತಹ) ಅನೇಕ ರೀತಿಯ ಡ್ಯಾಮೇಜುಗಳ ವಿರುದ್ಧ ಎಲೆಕ್ಟ್ರಾನಿಕ್ ಇಕ್ವಿಪ್‌ಮೆಂಟ್ ಇನ್ಶೂರೆನ್ಸ್ ನಿಮ್ಮನ್ನು ಮತ್ತು ನಿಮ್ಮ ಬಿಸಿನೆಸ್ ಅನ್ನು ಕವರ್ ಮಾಡುತ್ತದೆ. 

ಇಂದು ಪ್ರತಿಯೊಂದು ಬಿಸಿನೆಸ್‌ಗಳಿಗೂ ಕೆಲವು ಕಂಪ್ಯೂಟರ್‌ಗಳಿದ್ದರೂ ಸಹ ಕೆಲಸ ಮಾಡಲು ಕೆಲವು ಎಲೆಕ್ಟ್ರಾನಿಕ್ ಇಕ್ವಿಪ್‌ಮೆಂಟ್‌ಗಳ ಅಗತ್ಯವಿದೆ. ಮತ್ತು ಈ ಇಕ್ವಿಪ್‌ಮೆಂಟ್‌ಗಳಿಗೆ ಏನಾದರೂ ಆದರೆ, ಅದು ನಿಮ್ಮ ಬಿಸಿನೆಸ್ ಮೇಲೆ ಪರಿಣಾಮ ಬೀರಬಹುದು. ಯಾವುದೇ ಡ್ಯಾಮೇಜಿಗೊಳಗಾದ ಇಕ್ವಿಪ್‌ಮೆಂಟ್‌ಗಳನ್ನು ಸರಿಪಡಿಸುವುದು ಸಹ ಸಾಕಷ್ಟು ಹೆಚ್ಚುವರಿ ವೆಚ್ಚಗಳಿಗೆ ಕಾರಣವಾಗಬಹುದು. 

ಆದ್ದರಿಂದ, ಎಲೆಕ್ಟ್ರಾನಿಕ್ ಇಕ್ವಿಪ್‌ಮೆಂಟ್‌ ಇನ್ಶೂರೆನ್ಸ್‌ನೊಂದಿಗೆ (ಅಥವಾ ಇಇಇ), ನಿಮ್ಮ ಬಿಸಿನೆಸ್ ಅನ್ನು ಅಂತಹ ನಷ್ಟಗಳಿಂದ ರಕ್ಷಿಸಲಾಗುತ್ತದೆ.

ಫಿಡೆಲಿಟಿ ಇನ್ಶೂರೆನ್ಸ್

ನಿಮ್ಮ ಎಂಪ್ಲಾಯೀಗಳು ಅಪ್ರಾಮಾಣಿಕತೆ, ಕಳ್ಳತನ ಅಥವಾ ವಂಚನೆಯಂತಹ ವಿಷಯಗಳಿಂದಾಗಿ ಯಾವುದೇ ನಷ್ಟವನ್ನು ಉಂಟುಮಾಡುವ ಸಂದರ್ಭದಲ್ಲಿ ಫಿಡೆಲಿಟಿ ಇನ್ಶೂರೆನ್ಸ್ ನಿಮ್ಮನ್ನು ಮತ್ತು ನಿಮ್ಮ ಬಿಸಿನೆಸ್ ಅನ್ನು ರಕ್ಷಿಸುತ್ತದೆ, ಏಕೆಂದರೆ ಈ ಕೆಲಸಗಳು ನಿಮ್ಮ ಬಿಸಿನೆಸ್‌ಗಳ ದೊಡ್ಡ ನಷ್ಟಕ್ಕೆ ಕಾರಣವಾಗಬಹುದು. 

ಉದಾಹರಣೆಗೆ, ನೀವು ಪ್ಲಂಬಿಂಗ್ ಬಿಸಿನೆಸ್ ಹೊಂದಿದ್ದರೆ ಮತ್ತು ನಿಮ್ಮ ಎಂಪ್ಲಾಯೀಗಳಲ್ಲಿ ಯಾರೋ ಒಬ್ಬರನ್ನು ಕಸ್ಟಮರ್ ಮನೆಗೆ ಕಳುಹಿಸಲಾಗಿದೆ ಎಂದುಕೊಳ್ಳಿ. ಒಂದುವೇಳೆ ನಿಮ್ಮ ಎಂಪ್ಲಾಯೀ ಕಸ್ಟಮರ್ ಮನೆಯ ಕೆಲವು ಆಭರಣಗಳನ್ನು ಕಳ್ಳತನ ಮಾಡಿದರೆ, ಈ ಎಂಪ್ಲಾಯೀ ಮಾಡಿದ ಕೆಲಸಕ್ಕೆ ನಿಮ್ಮ ಕಂಪನಿಯು ಹೊಣೆಯಾಗಬಹುದು. 

ಫಿಡೆಲಿಟಿ ಇನ್ಶೂರೆನ್ಸ್‌ನೊಂದಿಗೆ, ಅಂತಹ ಯಾವುದೇ ಅಪರೂಪದ ಸಂದರ್ಭಗಳಲ್ಲಿಯೂ ಸಹ ನೀವು ನಿಮ್ಮನ್ನು ಮತ್ತು ನಿಮ್ಮ ಬಿಸಿನೆಸ್ ಅನ್ನು ಕವರ್ ಮಾಡಬಹುದು.

ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್

ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ಎನ್ನುವುದು ಶಾಪ್ ವಿಂಡೋಗಳಂತಹ ನಿಮ್ಮ ಕಮರ್ಷಿಯಲ್ ಬಿಲ್ಡಿಂಗ್‌ಗಳ ಮೇಲೆ ಯಾವುದೇ ಡ್ಯಾಮೇಜ್ ಅಥವಾ ಪ್ಲೇಟ್ ಗ್ಲಾಸ್ ಒಡೆಯುವಿಕೆಯ ವಿರುದ್ಧ ರಕ್ಷಣೆ ನೀಡುವ ಒಂದು ವಿಧದ ಇನ್ಶೂರೆನ್ಸ್ ಆಗಿದೆ. ಪ್ಲೇಟ್ ಗ್ಲಾಸ್ ಒಂದು ರೀತಿಯ ಗಾಜು ಆಗಿದ್ದು, ಇದನ್ನು ವಿಂಡೋ ಪೇನ್ಸ್, ಗ್ಲಾಸ್ ಡೋರ್‌ಗಳು, ಸ್ಕ್ರೀನ್‌ಗಳು ಮತ್ತು ಪಾರದರ್ಶಕ ಗೋಡೆಗಳನ್ನು ಮಾಡಲು ಬಳಸಲಾಗುತ್ತದೆ. 

ಶಾಪ್‌ಗಳು, ಆಫೀಸ್‌ಗಳು, ಶೋರೂಮ್‌ಗಳು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಥಿಯೇಟರ್‌ಗಳು ಮತ್ತು ಹೆಚ್ಚಿನವುಗಳಂತಹ ಅನೇಕ ಬಿಸಿನೆಸ್‌ಗಳು ಬಹಳಷ್ಟು ಗ್ಲಾಸ್‌ಗಳನ್ನು ಬಳಸುತ್ತವೆ. ಗ್ಲಾಸ್ ಕೂಡ ತುಂಬಾ ದುರ್ಬಲವಾಗಿರುತ್ತದೆ ಮತ್ತು ಆಕಸ್ಮಿಕವಾಗಿ ಡ್ಯಾಮೇಜಿಗೊಳಗಾಗಬಹುದು ಅಥವಾ ಹಠಾತ್ತನೆ ಮುರಿಯಬಹುದು ಮತ್ತು ಅದನ್ನು ರಿಪೇರಿ ಮಾಡುವುದು ದುಬಾರಿ ಕೆಲಸವಾಗಿದೆ. 

ಆದರೆ ನಿಮ್ಮ ಬಿಸಿನೆಸ್, ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್‌ನಿಂದ ಕವರ್ ಆಗಿದ್ದರೆ, ಅಂತಹ ಹಣಕಾಸು ನಷ್ಟಗಳ ವಿರುದ್ಧ ನೀವು ರಕ್ಷಣೆ ಪಡೆಯುತ್ತೀರಿ ಮತ್ತು ನಿಮ್ಮ ಗ್ಲಾಸ್ ಅನ್ನು ರಿಪ್ಲೇಸ್ ಮಾಡುವ ಸಹಾಯ ಹಾಗೂ ಗ್ಲಾಸ್‌ನೊಂದಿಗೆ ಜೋಡಿಸಲಾದ ಯಾವುದೇ ಅಲಾರಂಗಳಿಗೆ ಸಹಾಯವನ್ನು ಪಡೆಯುತ್ತೀರಿ.

ಸೈನ್ ಬೋರ್ಡ್ ಇನ್ಶೂರೆನ್ಸ್

ಯಾವುದೇ ಆಕಸ್ಮಿಕ ನಷ್ಟ ಅಥವಾ ಸೈನ್‌ಬೋರ್ಡ್‌ಗಳಿಗೆ ಉಂಟಾದ ಡ್ಯಾಮೇಜಿನ ವಿರುದ್ಧ ಸೈನ್ ಬೋರ್ಡ್ ಇನ್ಶೂರೆನ್ಸ್ ನಿಮ್ಮ ಬಿಸಿನೆಸ್ ಅನ್ನು ಕವರ್ ಮಾಡುತ್ತದೆ. ಸೈನ್‌ಬೋರ್ಡ್‌ಗಳು ಮತ್ತು ಹೋರ್ಡಿಂಗ್‌ಗಳನ್ನು ಹೊರಗೆ ಮತ್ತು ಸಾರ್ವಜನಿಕವಾಗಿ ಇರಿಸಲಾಗಿರುವುದರಿಂದ, ಅವು ನೈಸರ್ಗಿಕ ಅಪಾಯಗಳು, ಬೆಂಕಿ ಮತ್ತು ಕಳ್ಳತನ ಸೇರಿದಂತೆ ಅನೇಕ ಅಪಾಯಗಳಿಗೆ ಒಡ್ಡಿಕೊಳ್ಳುತ್ತವೆ. 

ಸೈನ್ ಬೋರ್ಡ್‌ನ ಡ್ಯಾಮೇಜ್, ಯಾವುದೇ ಥರ್ಡ್-ಪಾರ್ಟಿ ಡ್ಯಾಮೇಜುಗಳಿಗೆ ಕಾರಣವಾಗಿದ್ದರೆ, ದೈಹಿಕ ಗಾಯ ಅಥವಾ ವ್ಯಕ್ತಿಯ ಸಾವು ಅಥವಾ ಪ್ರಾಪರ್ಟಿ ಡ್ಯಾಮೇಜ್ ಸೇರಿದಂತೆ ಲೀಗಲ್ ಲಯಬಿಲಿಟಿಯ ವಿರುದ್ಧವೂ ಸಹ ಈ ಇನ್ಶೂರೆನ್ಸ್ ರಕ್ಷಣೆ ನೀಡುತ್ತದೆ.

ಮನಿ (ನಗದು) ಇನ್ಶೂರೆನ್ಸ್

ನಿಮ್ಮ ಬಿಸಿನೆಸ್‌ನ ಹಣ ಮತ್ತು ಮಾನಿಟರಿ ಟ್ರಾನ್ಸಾಕ್ಷನ್‌ಗಳನ್ನು ರಕ್ಷಿಸುವುದಕ್ಕಾಗಿ ನಿಮಗೆ ಸಹಾಯ ಮಾಡಲು ಮನಿ (ನಗದು) ಇನ್ಶೂರೆನ್ಸ್ ಪಾಲಿಸಿ ಇದೆ. ಕ್ಯಾಶ್, ಚೆಕ್‌ಗಳು, ಡ್ರಾಫ್ಟ್‌ಗಳು, ಪೋಸ್ಟಲ್ ಆರ್ಡರ್‌ಗಳಂತಹ ವಿಷಯಗಳೊಂದಿಗೆ ವ್ಯವಹರಿಸುವಾಗ ಯಾವಾಗಲೂ ಸ್ವಲ್ಪ ರಿಸ್ಕ್ ಇದ್ದೇ ಇರುತ್ತದೆ.

ಉದಾಹರಣೆಗೆ, ನೀವು ವೆಂಡರ್‌ಗಳಿಗೆ ಪಾವತಿಸಲು ಅಥವಾ ವೇತನವನ್ನು ವಿತರಿಸಲು ಬ್ಯಾಂಕಿನಿಂದ ನಿಮ್ಮ ಕಾರ್ಖಾನೆಗೆ ಹಣವನ್ನು ಕೊಂಡೊಯ್ಯುತ್ತಿದ್ದಾಗ ಅದು ಕಳ್ಳತನವಾದರೆ ಮತ್ತು ಲಾಕ್ ಮಾಡಿದ ಸೇಫ್ ಅಥವಾ ಕ್ಯಾಶ್ ಕೌಂಟರ್‌ನಿಂದ ಹಣವನ್ನು ತೆಗೆದುಕೊಂಡರೆ, ಈ ಸಂದರ್ಭದಲ್ಲಿ ಈ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಸಹಾಯ ಮಾಡುತ್ತವೆ. 

ನಿಮ್ಮ ಹಣದ ಕಳ್ಳತನ, ನಷ್ಟ ಅಥವಾ ಆ್ಯಕ್ಸಿಡೆಂಟಲ್ ಡ್ಯಾಮೇಜಿನ ಸಂದರ್ಭದಲ್ಲಿ ನೀವು ಮತ್ತು ನಿಮ್ಮ ಬಿಸಿನೆಸ್ ಅನ್ನು ರಕ್ಷಿಸಲಾಗುತ್ತದೆ ಮತ್ತು ಆ ಮೊತ್ತವನ್ನು ಮರಳಿ ಪಡೆಯಲು ನೀವು ಸಹಾಯವನ್ನು ಪಡೆದುಕೊಳ್ಳುತ್ತೀರಿ.

ಕಾಂಟ್ರಾಕ್ಟರ್‌ಗಳ ಎಲ್ಲಾ ರಿಸ್ಕ್ ಇನ್ಶೂರೆನ್ಸ್

ಕಾಂಟ್ರಾಕ್ಟರ್‌ಗಳ ಎಲ್ಲಾ ರಿಸ್ಕ್ ಇನ್ಶೂರೆನ್ಸ್ ನಿಮ್ಮ ಪ್ರಾಪರ್ಟಿ ಅಥವಾ ಥರ್ಡ್ ಪಾರ್ಟಿ ಡ್ಯಾಮೇಜ್ ಮತ್ತು ಡ್ಯಾಮೇಜೀನ ಕಾರಣದಿಂದ ಉಂಟಾದ ಗಾಯಕ್ಕೆ ಕವರೇಜ್ ನೀಡುತ್ತದೆ. ಸ್ಟ್ರಕ್ಚರ್‌ಗಳ ಅಸಮರ್ಪಕ ಕನ್ಸ್ಟ್ರಕ್ಷನ್, ರಿನೋವೇಷನ್ ಸಮಯದಲ್ಲಿ ಅಥವಾ ಸೈಟ್‌ನಲ್ಲಿ ನಿರ್ಮಿಸಲಾದ ತಾತ್ಕಾಲಿಕ ಕೆಲಸದ ಕಾರಣದಿಂದಾಗಿ ಪ್ರಾಪರ್ಟಿಗೆ ಆಗುವ ಡ್ಯಾಮೇಜ್ ಅನ್ನು ಪಾಲಿಸಿಯು ಒಳಗೊಂಡಿರುತ್ತದೆ. ಪಾಲಿಸಿಯನ್ನು ಓನರ್‌ಗಳು ಮತ್ತು ಕಾಂಟ್ರಾಕ್ಟರ್‌ಗಳು ಜಂಟಿಯಾಗಿ ತೆಗೆದುಕೊಳ್ಳಬಹುದು.

ಉದಾಹರಣೆಗೆ, ನೀವು ಮನೆಯನ್ನು ಕಟ್ಟುತ್ತಿದ್ದರೆ ಮತ್ತು ಕನ್ಸ್ಟ್ರಕ್ಷನ್ ಅವಧಿಯಲ್ಲಿ ಯಾವುದೇ ಡ್ಯಾಮೇಜ್ ಉಂಟಾದರೆ, ನೀವು ಈ ಪಾಲಿಸಿಯ ಅಡಿಯಲ್ಲಿ ಕ್ಲೈಮ್ ಮಾಡಬಹುದು ಹಾಗೂ ಅದಕ್ಕಾಗಿ ಹಣವನ್ನು ನಿಮ್ಮ ಸ್ವಂತ ಜೇಬಿನಿಂದ ಪಾವತಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಎರೆಕ್ಷನ್ ಎಲ್ಲಾ ರಿಸ್ಕ್‌ಗಳು

ಎರೆಕ್ಷನ್ ಎಲ್ಲಾ ರಿಸ್ಕ್‌ಗಳ ಇನ್ಶೂರೆನ್ಸ್ ಪಾಲಿಸಿಯು ನಷ್ಟ ಅಥವಾ ಪ್ರೊಜೆಕ್ಟ್‌ಗಳ ಡ್ಯಾಮೇಜಿಗೆ ಹಣಕಾಸಿನ ರಕ್ಷಣೆ ನೀಡುತ್ತದೆ. ಎರೆಕ್ಷನ್ ಮತ್ತು ಇನ್ಸ್ಟಾಲೇಶನ್‌ಗಳನ್ನು ಒಳಗೊಂಡಿರುವ ಕಾಂಟ್ರ್ಯಾಕ್ಟ್ ಕೆಲಸಗಳ ನಷ್ಟದ ವಿರುದ್ಧ ಈ ಪಾಲಿಸಿಯು ಕಾಂಟ್ರಾಕ್ಟರ್‌ಗಳನ್ನು ರಕ್ಷಿಸುತ್ತದೆ. 

ಉದಾಹರಣೆಗೆ, ಕನ್ಸ್ಟ್ರಕ್ಷನ್ ಅವಧಿಯಲ್ಲಿ ಅಥವಾ ಇಕ್ವಿಪ್‌ಮೆಂಟ್‌ಗಳು ಸಾಗಣೆಯಲ್ಲಿದ್ದಾಗ ಪ್ಲಾಂಟ್ ಮಷೀನರಿ ಎರೆಕ್ಷನ್ ಮತ್ತು ಇನ್ಸ್ಟಾಲೇಶನ್‌ ಸಮಯದಲ್ಲಿ ಯಾವುದೇ ಡ್ಯಾಮೇಜ್ ಉಂಟಾದರೆ, ಕಾಂಟ್ರಾಕ್ಟರ್‌ಗಳು ಇನ್ಶೂರೆನ್ಸ್ ಪೂರೈಕೆದಾರರೊಂದಿಗೆ ಕ್ಲೈಮ್ ಮಾಡಬಹುದು.

ಡಿ ಮತ್ತು ಓ ಇನ್ಶೂರೆನ್ಸ್

ಡೈರೆಕ್ಟರ್ಸ್ ಮತ್ತು ಆಫೀಸರ್ಸ್ ಇನ್ಶೂರೆನ್ಸ್, ಸಾಮಾನ್ಯವಾಗಿ ಡಿ ಮತ್ತು ಓ ಇನ್ಶೂರೆನ್ಸ್ ಎಂದು ಕರೆಯಲ್ಪಡುವ ಒಂದು ಪಾಲಿಸಿಯಾಗಿದ್ದು, ಸಂಸ್ಥೆ/ಕಂಪೆನಿಯ ಮ್ಯಾನೇಜರ್ ಹುದ್ದೆಯಲ್ಲಿರುವವರು ಯಾವುದೇ ತಪ್ಪು ಮಾಡಿದ ಆರೋಪಗಳಿದ್ದಲ್ಲಿ ಅವರನ್ನು ರಕ್ಷಿಸುತ್ತದೆ. ಕಂಪನಿಯು, ರಿಸ್ಕ್‌ಗಳು ಮತ್ತು ಹಣಕಾಸಿನ ಎಕ್ಸಪೋಸರ್‌ಗಳ ವಿರುದ್ಧ ರಕ್ಷಿಸಲ್ಪಟ್ಟಿದೆ ಮತ್ತು ಕಾರ್ಪೊರೇಟ್ ಆಡಳಿತದ ಅವಶ್ಯಕತೆಗಳನ್ನು ಅನುಸರಿಸುತ್ತದೆ ಎಂಬುದನ್ನು ಈ ಪಾಲಿಸಿಯು ಖಚಿತಪಡಿಸುತ್ತದೆ.

ಉದಾಹರಣೆಗೆ, ಕಂಪನಿ/ಬಿಸಿನೆಸ್ ವಿರುದ್ಧ ಅದರ ಡೈರೆಕ್ಟರ್‌ಗಳು ಮತ್ತು ಆಫೀಸರ್‌ಗಳು ಕಿರುಕುಳ, ತಾರತಮ್ಯ ಅಥವಾ ತಪ್ಪಾದ ಟರ್ಮಿನೇಶನ್ ನಂತಹ ವಿಷಯಗಳಿಗಾಗಿ ಮೊಕದ್ದಮೆ ಹೂಡಿದರೆ, ಬಿಸಿನೆಸ್ ಅನ್ನು ಹಣಕಾಸಿನ ನಷ್ಟದಿಂದ ರಕ್ಷಿಸುತ್ತದೆ.

ಕಾಂಟ್ರಾಕ್ಟರ್‌ಗಳ ಪ್ಲಾಂಟ್ ಮತ್ತು ಮಷೀನರಿ

ಕಾಂಟ್ರಾಕ್ಟರ್‌ಗಳ ಪ್ಲಾಂಟ್ ಮತ್ತು ಮಷೀನರಿ ಇನ್ಶೂರೆನ್ಸ್ ಪಾಲಿಸಿಯು ವಿವಿಧ ಉದ್ದೇಶಗಳಿಗಾಗಿ ಕನ್ಸ್ಟ್ರಕ್ಷನ್ ಸ್ಥಳಗಳಲ್ಲಿ ಬಳಸುವ ಮಷೀನರಿಗಳನ್ನು ಕವರ್ ಮಾಡುತ್ತದೆ. ಪ್ರೊಜೆಕ್ಟ್‌ನ ಅವಧಿಯಲ್ಲಿ ಪ್ಲಾಂಟ್ ಮತ್ತು ಮಷೀನರಿಗಳು ಯಾವುದೇ ಡ್ಯಾಮೇಜ್ ಅನ್ನು ಅನುಭವಿಸಿದರೆ, ಪಾಲಿಸಿದಾರರನ್ನು ಈ ಪಾಲಿಸಿಯು ರಕ್ಷಿಸುತ್ತದೆ ಎಂಬುದನ್ನು ಇದು ಖಚಿತಪಡಿಸುತ್ತದೆ. ಇದು ನಿಯತಕಾಲಿಕವಾಗಿ ರಿನೀವಲ್ ಮಾಡಬಹುದಾದ ವಾರ್ಷಿಕ ಪಾಲಿಸಿಯಾಗಿದೆ ಹಾಗೂ ಸ್ಟೇಷನರಿ ಮತ್ತು ಚಲಿಸಬಲ್ಲ ಇಕ್ವಿಪ್‌ಮೆಂಟ್‌ಗಳು ಎರಡನ್ನೂ ಕವರ್ ಮಾಡುತ್ತದೆ.

ಮರೈನ್ ಕಾರ್ಗೋ ಇನ್ಶೂರೆನ್ಸ್

ಮರೈನ್ ಕಾರ್ಗೋ ಇನ್ಶೂರೆನ್ಸ್ ರಸ್ತೆ, ರೈಲು ಮತ್ತು ಜಲಮಾರ್ಗಗಳಂತಹ ವಿವಿಧ ವಿಧಾನಗಳ ಮೂಲಕ ಸಾಗಣೆಯಲ್ಲಿರುವಾಗ ಕಾರ್ಗೋ ಹಡಗುಗಳಿಗೆ ಉಂಟಾಗುವ ಯಾವುದೇ ಡ್ಯಾಮೇಜಿನ ವಿರುದ್ಧ ಕವರೇಜ್ ನೀಡುತ್ತದೆ. ಯುದ್ಧ, ಮುಷ್ಕರಗಳು, ಸರಕುಗಳನ್ನು ನೆಲಸಮಗೊಳಿಸುವ ಹವಾಮಾನ ಪರಿಸ್ಥಿತಿಗಳಂತಹ ಅಂಶಗಳಿಂದಾಗಿ ಸರಕುಗಳಿಗೆ ಉಂಟಾದ ಡ್ಯಾಮೇಜ್ ಅನ್ನು ಇದು ಕವರ್ ಮಾಡುತ್ತದೆ.

ಈ ಬಿಸಿನೆಸ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೊಂದುವ ಪ್ರಯೋಜನಗಳೇನು?

ಬಿಸಿನೆಸ್ ಇನ್ಶೂರೆನ್ಸ್ ಅನ್ನು ಯಾರು ಖರೀದಿಸಬೇಕು?

ಡಿಜಿಟ್‌ನ ಬಿಸಿನೆಸ್ ಇನ್ಶೂರೆನ್ಸ್ ಅನ್ನು ಸ್ಟಾರ್ಟ್-ಅಪ್‌ಗಳು ಸೇರಿದಂತೆ ಹಲವು ರೀತಿಯ ಬಿಸಿನೆಸ್‌ಗಳಿಗೆ ಕವರೇಜ್ ನೀಡುತ್ತದೆ. ಬಿಸಿನೆಸ್ ಇನ್ಶೂರೆನ್ಸ್‌ನ ಕೆಲವು ಸಾಮಾನ್ಯ ಖರೀದಿದಾರರು:

ಸ್ಟಾರ್ಟ್-ಅಪ್‌ಗಳು

ಐಟಿ ಕಂಪನಿಗಳಿಂದ ಕನ್ಸಲ್ಟಿಂಗ್ ಸಂಸ್ಥೆಗಳವರೆಗಿನ ಎಲ್ಲಾ ರೀತಿಯ ಸ್ಟಾರ್ಟ್-ಅಪ್‌ಗಳು.

ಹೋಲ್‌ಸೇಲರ್‌ಗಳು

ಪ್ರಾವಿಷನ್‌ಗಳು, ಫರ್ನೀಚರ್ ಅಥವಾ ಆಟೋ ಭಾಗಗಳ ಹೋಲ್‌ಸೇಲರ್‌ಗಳು.

ರಿಟೇಲ್ ಸ್ಟೋರ್‌ಗಳು

ಉದಾಹರಣೆಗೆ ಕಿರಾಣಿ ಅಂಗಡಿ, ಪುಸ್ತಕದಂಗಡಿ, ಬೋಟಿಕ್, ಅಥವಾ ಸಲೂನ್‌ಗಳು.

ಪ್ರೊಫೆಷನಲ್ ಸರ್ವೀಸ್‌ಗಳನ್ನು ನೀಡುವ ಬಿಸಿನೆಸ್‌ಗಳುq

ಉದಾಹರಣೆಗೆ, ಕನ್ಸಲ್ಟೆಂಟ್‌ಗಳು, ಮೆಡಿಕಲ್ ಪ್ರೊಫೆಷನಲ್‌ಗಳು, ಗ್ರಾಫಿಕ್ ಡಿಸೈನರ್‌ಗಳು, ಫೈನಾನ್ಸಿಯಲ್ ಅಡ್ವೈಸರ್‌ಗಳು ಅಥವಾ ಮಾರ್ಕೆಟಿಂಗ್ ಫರ್ಮ್‌ಗಳು.

ಕಸ್ಟಮರ್‌ಗಳಿಗೆ ಸರ್ವೀಸ್ ನೀಡುವ ಬಿಸಿನೆಸ್‌ಗಳು

ಉದಾಹರಣೆಗೆ ಹೋಟೆಲ್, ಕ್ಲಬ್ ಅಥವಾ ರೆಸ್ಟೋರೆಂಟ್, ಅಥವಾ ಪ್ರೊಫೆಷನಲ್ ಫೋಟೋಗ್ರಫಿ ಬಿಸಿನೆಸ್, ಅಥವಾ ಕೇಟರಿಂಗ್ ಬಿಸಿನೆಸ್.

ಕ್ಲೈಂಟ್‌ಗಳನ್ನು ಪ್ರತಿನಿಧಿಸುವ ಬಿಸಿನೆಸ್‌ಗಳು

ಉದಾಹರಣೆಗೆ ಲಾಯರ್‌ಗಳು, ಅಡ್ವರ್ಟೈಸಿಂಗ್ ಮತ್ತು ಪಿಆರ್ ಏಜೆನ್ಸಿಗಳು.

ಕಾಂಟ್ರಾಕ್ಟರ್‌ಗಳು

ಒಂದುವೇಳೆ ನಿಮ್ಮ ಬಿಸಿನೆಸ್ ಕನ್ಸ್ಟ್ರಕ್ಷನ್, ಟ್ರಾನ್ಸಪೋರ್ಟೇಶನ್ ಅಥವಾ ಲಾಜಿಸ್ಟಿಕ್ಸ್‌ನೊಂದಿಗೆ ಡೀಲ್ ಮಾಡಿದರೆ.

ಪ್ರೊಡಕ್ಷನ್ ಯುನಿಟ್‌ಗಳು

ಆಟಿಕೆಗಳು, ಆಹಾರ (ಕೇಕ್‌ಗಳು ಅಥವಾ ತಿಂಡಿಗಳು) ಅಥವಾ ಮೆಡಿಕಲ್ ಪ್ರಾಡಕ್ಟ್‌ಗಳಂತಹ ವಸ್ತುಗಳನ್ನು ತಯಾರಿಸುವ ಯಾವುದೇ ಕಂಪನಿಗಳು.

ಬಿಸಿನೆಸ್ ಇನ್ಶೂರೆನ್ಸ್ ಪಾಲಿಸಿಗಳ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು