ಆನ್‌ಲೈನ್‌ನಲ್ಲಿ ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿ

Zero Paperwork. Online Process

ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಎಂದರೇನು?

ಕಾಂಪ್ರೆಹೆನ್ಸಿವ್ ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ನಿಮ್ಮ ಬಿಸಿನೆಸ್ ಕಾರ್ಯಾಚರಣೆಗಳು, ಅದರ ಉತ್ಪನ್ನಗಳು ಅಥವಾ ನಿಮ್ಮ ಆವರಣದಲ್ಲಿ ಸಂಭವಿಸುವ ಯಾವುದೇ ರೀತಿಯ ಪ್ರಾಪರ್ಟಿ ಡ್ಯಾಮೇಜ್ ಅಥವಾ ದೈಹಿಕ ಗಾಯದಿಂದ ಉಂಟಾಗುವ ಯಾವುದೇ ಕ್ಲೈಮ್‌ಗಳ ವಿರುದ್ಧ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುವ ಒಂದು ರೀತಿಯ ಬಿಸಿನೆಸ್ ಇನ್ಶೂರೆನ್ಸ್ ಆಗಿದೆ.

ಕ್ಲೈಂಟ್ ಅಥವಾ ಕಸ್ಟಮರ್, ಮೀಟಿಂಗ್‌ಗಾಗಿ ನಿಮ್ಮ ಆಫೀಸಿಗೆ ಬಂದಿದ್ದಾರೆ ಎಂದಿಟ್ಟುಕೊಳ್ಳಿ ಮತ್ತು ಅವರು "ಎಚ್ಚರಿಕೆಯ ವೆಟ್ ಫ್ಲೋರ್ ಚಿಹ್ನೆ" ಅನ್ನು ನೋಡದಿದ್ದರೆ ಮತ್ತು ಅಚಾನಕ್ ಆಗಿ ಅವರು ಜಾರಿಬೀಳುವುದು, ಬೀಳುವುದು ಮತ್ತು ಅವರ ಕೈ ಮುರಿದರೆ! ಅಥವಾ, ಮೀಟಿಂಗ್ ಸಮಯದಲ್ಲಿ ನಿಮ್ಮ ಆಫೀಸಿನಲ್ಲಿ ಯಾರಾದರೂ ಆಕಸ್ಮಿಕವಾಗಿ ಕ್ಲೈಂಟ್‌ನ ಫೋನ್‌ ಮೇಲೆ ನೀರನ್ನು ಚೆಲ್ಲಿ ಅದನ್ನು ಡ್ಯಾಮೇಜುಗೊಳಿಸಿದರೆ.

ಕೇಳಲು ವಿಚಿತ್ರವೆನಿಸುತ್ತದೆ, ಅಲ್ಲವೇ? ಅಂದಹಾಗೆ, ನೀವು ಜವಾಬ್ದಾರರಾಗಿ ಕಂಡುಬಂದರೂ ಕೆಟ್ಟದ್ದಾಗಿದೆ. ಇದರರ್ಥ ನೀವು ಉಂಟಾದ ತೊಂದರೆ ಮತ್ತು ಡ್ಯಾಮೇಜುಗಳನ್ನು ಭರಿಸಬೇಕು!

ಈ ರೀತಿಯ ಸಂದರ್ಭಗಳಲ್ಲಿ, ಲಯಬಿಲಿಟಿ ಇನ್ಶೂರೆನ್ಸ್ ಛತ್ರಿಯಂತೆ ನಿಮ್ಮನ್ನು ಕವರ್ ಮಾಡುತ್ತದೆ. ಗಾಯಗಳು ಹಾಗೂ ಜನರು/ಪ್ರಾಪರ್ಟಿಗೆ ಉಂಟಾಗುವ ಡ್ಯಾಮೇಜುಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಏಕೆ ಮುಖ್ಯ ಎಂದು ತಿಳಿಯಲು ಬಯಸುವಿರಾ?

1

ಕೇವಲ 2014 ರಿಂದ 2017 ರ ನಡುವೆ, ಭಾರತದ ಕೆಲಸದ ಸ್ಥಳಗಳಲ್ಲಿ 8,004 ಅಪಘಾತಗಳಾಗಿದ್ದು 6,300 ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿವೆ. (1)

2

ಅಪಾಯಕಾರಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಯಾವುದೇ ಬಿಸಿನೆಸ್ 1991 ರ ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಆ್ಯಕ್ಟ್ ಪ್ರಕಾರ ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಅನ್ನು ಹೊಂದಿರಬೇಕು. (2)

3

ಏಷ್ಯಾದಲ್ಲಿ ಬಿಸಿನೆಸ್‌ಗಳ ವಿರುದ್ಧ ಭಾರತವು 6 ನೇ ಅತಿ ದೊಡ್ಡ ಸಂಖ್ಯೆಯ ಲಯಬಿಲಿಟಿ ಕ್ಲೈಮ್‌ಗಳನ್ನು ಹೊಂದಿದೆ. (3).

ನಿಮಗೆ ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಏಕೆ ಬೇಕು?

ಕಮರ್ಷಿಯಲ್ ಜನರಲ್ ಲಯಬಿಲಿಟಿ (CGL) ಪಾಲಿಸಿ ಎಂದೂ ಕರೆಯಲ್ಪಡುವ ಜನರಲ್ ಲಯಬಿಲಿಟಿ ಇನ್ಶೂರೆನ್ಸ್, ನಿಮ್ಮ ಬಿಸಿನೆಸ್ ಅಸೋಸಿಯೇಟ್ಸ್‌, ಕಸ್ಟಮರ್ ಅಥವಾ ಕ್ಲೈಂಟ್‌ಗಳಂತಹ ಯಾವುದೇ ಥರ್ಡ್ ಪಾರ್ಟಿಯ ಪ್ರಾಪರ್ಟಿ ಡ್ಯಾಮೇಜ್ ಅಥವಾ ದೈಹಿಕ ಗಾಯಗಳಿಗೆ ಯಾವುದೇ ಲೀಗಲ್ ಲಯಬಿಲಿಟಿಗಳಿಂದ, ಬಿಸಿನೆಸ್‌ಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾದ ಒಂದು ರೀತಿಯ ಇನ್ಶೂರೆನ್ಸ್ ಕವರ್ ಆಗಿದೆ. ಆದರೆ ನಿಮಗೆ ನಿಜವಾಗಿಯೂ ಇದು ಏಕೆ ಬೇಕು?

ನೀವು ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಅನ್ನು ಹೊಂದಿರುವಾಗ, ಕೆಲವು ಥರ್ಡ್ ಪಾರ್ಟಿಗಳು (ನಿಮ್ಮ ಬಿಸಿನೆಸ್ ಅಸೋಸಿಯೇಟ್ಸ್‌, ಕಸ್ಟಮರ್ ಅಥವಾ ಕ್ಲೈಂಟ್‌ಗಳಂತಹ) ನಿಮ್ಮ ವಿರುದ್ಧ ಕ್ಲೈಮ್ ಮಾಡುವ ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮ ಬಿಸಿನೆಸ್ ಅನ್ನು ರಕ್ಷಿಸಲಾಗುತ್ತದೆ.

ನಿಮ್ಮ ಕಂಪನಿಯು ಉದ್ದೇಶಪೂರ್ವಕವಲ್ಲದ ಮಾನಹಾನಿ, ನಿಂದನೆ ಅಥವಾ ಕಾಪಿರೈಟ್ ಉಲ್ಲಂಘನೆಯನ್ನು ಒಳಗೊಂಡಿರುವ ಜಾಹೀರಾತನ್ನು (ಅಥವಾ ಯಾವುದೇ ಇತರ ಸಂವಹನ) ಹಾಕಿದರೆ, ನಿಮ್ಮ ಬಿಸಿನೆಸ್ ಒಂಟಿಯಾಗಿ ಆ ವೆಚ್ಚವನ್ನು ನಿಭಾಯಿಸಬೇಕಾಗಿಲ್ಲ.

ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಕವರ್‌ನೊಂದಿಗೆ ನೀವು ಕ್ಲೈಮ್ ಮಾಡಿದಾಗ, ನಿಮ್ಮ ಇನ್ಶೂರೆನ್ಸ್ ಕಂಪನಿಯು ಈ ವೆಚ್ಚಗಳನ್ನು ಪಾವತಿಸಲು ನಿಮಗೆ ಅಥವಾ ನಿಮ್ಮ ಬಿಸಿನೆಸ್‌ಗೆ ಸಹಾಯ ಮಾಡುತ್ತದೆ. ದುಬಾರಿ ಮೊಕದ್ದಮೆಗಳ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ.

ಆದುದರಿಂದ ಈ ಇನ್ಶೂರೆನ್ಸ್ ಕವರ್, ನಿಮ್ಮ ಬಿಸಿನೆಸ್ ಅನ್ನು ಹೆಚ್ಚು ಸುಗಮವಾಗಿ ನಡೆಸಲು ಸಹಾಯ ಮಾಡುತ್ತದೆ

ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

ಲಯಬಿಲಿಟಿ ಇನ್ಶೂರೆನ್ಸ್‌ನ ಅಗತ್ಯವಿರುವ ಬಿಸಿನೆಸ್‌ಗಳ ವಿಧಗಳು

ನೀವು ಬಿಸಿನೆಸ್ ಓನರ್ ಆಗಿದ್ದರೆ ಮತ್ತು ವಿಶೇಷವಾಗಿ ನಿಮ್ಮ ಕಾರ್ಯಾಚರಣೆಗಳು ಥರ್ಡ್ ಪಾರ್ಟಿಗಳೊಂದಿಗೆ ಸಾಕಷ್ಟು ಸಂಪರ್ಕವನ್ನು ಹೊಂದಿದ್ದರೆ, ಈ ಇನ್ಶೂರೆನ್ಸ್ ಅನ್ನು ಪಡೆಯುವುದರಿಂದ ನೀವು ಪ್ರಯೋಜನ ಪಡೆಯಬಹುದು:

ನಿಮ್ಮ ಬಿಸಿನೆಸ್ ತನ್ನ ವೆಂಡರ್‌ಗಳು, ಕಸ್ಟಮರ್‌ಗಳು ಮತ್ತು ಕ್ಲೈಂಟ್‌ಗಳೊಂದಿಗೆ ಸಾಕಷ್ಟು ಸಂವಹನಗಳನ್ನು ಹೊಂದಿದ್ದರೆ

ಉದಾಹರಣೆಗೆ ನೀವು ಬೋಟಿಕ್‌ನಂತಹ ರಿಟೇಲ್ ಶಾಪ್ ಅನ್ನು ನಡೆಸುತ್ತಿದ್ದರೆ ಅಥವಾ ನೀವು ಹೋಟೆಲ್, ಕ್ಲಬ್ ಅಥವಾ ರೆಸ್ಟೋರೆಂಟ್‌ಗಳನ್ನು ಹೊಂದಿದ್ದರೆ.

ಒಂದುವೇಳೆ, ಹೊರಗಿನ ಸೈಟ್‌ಗಳಿಗೆ ಸಾಕಷ್ಟು ಟ್ರಾವೆಲ್ ಮಾಡುವುದನ್ನು ನಿಮ್ಮ ಬಿಸಿನೆಸ್ ಒಳಗೊಂಡಿದ್ದರೆ

ನೀವು ಪ್ರೊಫೆಷನಲ್ ಫೋಟೋಗ್ರಫಿ ಬಿಸಿನೆಸ್, ಕೇಟರಿಂಗ್ ಬಿಸಿನೆಸ್ ಅನ್ನು ಹೊಂದಿರುತ್ತೀರಿ ಅಥವಾ ಇದು ಕನ್‌ಸ್ಟ್ರಕ್ಷನ್ ಅನ್ನು ಒಳಗೊಂಡಿರುತ್ತದೆ.

ಯಾವುದೇ ರೂಪದಲ್ಲಿ ಕ್ಲೈಂಟ್ ಅನ್ನು ಪ್ರತಿನಿಧಿಸುವ ಬಿಸಿನೆಸ್‌ಗಳು

ಉದಾಹರಣೆಗೆ ಲಾಯರ್‌ಗಳು, ಅಡ್ವರ್ಟೈಸಿಂಗ್ ಮತ್ತು ಪಿಆರ್ ಏಜೆನ್ಸಿಗಳು.

ನಿಮ್ಮ ಬಿಸಿನೆಸ್ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಕೊಂಡಿರುವಾಗ

ಇವು ಆಹಾರ (ಕೇಕ್‌ಗಳು ಅಥವಾ ಸ್ನ್ಯಾಕ್‌ಗಳು) ಅಥವಾ ಮೆಡಿಕಲ್ ಪ್ರಾಡಕ್ಟ್‌ಗಳನ್ನು ತಯಾರಿಸುವ ಯಾವುದೇ ಕಂಪನಿಗಳಾಗಿರಬಹುದು.

ಪ್ರೊಫೆಷನಲ್ ಸರ್ವೀಸ್‌ಗಳನ್ನು ಒದಗಿಸುವ ಯಾವುದೇ ಬಿಸಿನೆಸ್‌ಗಳು

ಉದಾಹರಣೆಗೆ, ಕನ್ಸಲ್ಟೆಂಟ್‌ಗಳು, ಗ್ರಾಫಿಕ್ ಡಿಸೈನರ್‌ಗಳು, ಫೈನಾನ್ಸಿಯಲ್ ಅಡ್ವೈಸರ್‌ಗಳು ಮಾರ್ಕೆಟಿಂಗ್ ಮತ್ತು ಲಾಜಿಸ್ಟಿಕ್ಸ್ ಕಂಪನಿಗಳು.

ಸರಿಯಾದ ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವುದು ಹೇಗೆ?

ನಿಮ್ಮ ಎಲ್ಲಾ ಬಿಸಿನೆಸ್ ಆ್ಯಕ್ಟಿವಿಟಿಗಳಿಗೆ ಸಂಪೂರ್ಣ ಕವರೇಜ್  - ಥರ್ಡ್ ಪಾರ್ಟಿ ಲಯಬಿಲಿಟಿಗಳು, ನಿಮಗೆ ಅಡ್ವರ್ಟೈಸಿಂಗ್ ಗಾಯಗಳು ಅಥವಾ ವೈಯಕ್ತಿಕ ಗಾಯಗಳು ಆಗಿರಲಿ, ನಿಮ್ಮ ಎಲ್ಲಾ ಬಿಸಿನೆಸ್ ಆ್ಯಕ್ಟಿವಿಟಿಗಳಿಗೆ ಇನ್ಶೂರೆನ್ಸ್ ಪಾಲಿಸಿಯು ಗರಿಷ್ಠ ಕವರೇಜನ್ನು ನೀಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ

ಸಮ್ ಇನ್ಶೂರ್ಡ್ - ನಿಮ್ಮ ಬಿಸಿನೆಸ್‌ನ ಸ್ವರೂಪ ಮತ್ತು ಗಾತ್ರದ ಆಧಾರದ ಮೇಲೆ ನಿಮ್ಮ ಸಮ್ ಇನ್ಶೂರ್ಡ್ ಅಥವಾ ಲಯಬಿಲಿಟಿ ಲಿಮಿಟ್ ಅನ್ನು ಕಸ್ಟಮೈಸ್ ಮಾಡಲು ನಿಮಗೆ ಅನುಮತಿಸುವ ಲಯಬಿಲಿಟಿ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡಿಕೊಳ್ಳಿ

ನಿಮ್ಮ ರಿಸ್ಕ್‌ನ ಲೆವೆಲ್ ಅನ್ನು ಪರಿಗಣಿಸಿ  - ನಿಮ್ಮ ಬಿಸಿನೆಸ್ ಪ್ರಸ್ತುತಪಡಿಸುವ ಸಂಭಾವ್ಯ ರಿಸ್ಕ್‌ಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ. ಉದಾಹರಣೆಗೆ ನೀವು ಎಷ್ಟು ವಿಸಿಟರ್‌ಗಳನ್ನು ಪಡೆಯುತ್ತೀರಿ ಮತ್ತು ಪಾಲಿಸಿಯು ಸಾಕಷ್ಟು ಕವರೇಜನ್ನು ನೀಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ

ಕ್ಲೈಮ್‌ಗಳ ಪ್ರಕ್ರಿಯೆ  - ಕ್ಲೈಮ್‌ಗಳು ನಿಜವಾಗಿಯೂ ಮುಖ್ಯವಾಗಿರುವುದರಿಂದ, ಕೇವಲ ಕ್ಲೈಮ್‌ ಮಾಡುವುದಷ್ಟೇ ಸುಲಭವಾಗಿರದೆ, ಜೊತೆಗೆ ಕ್ಲೈಮ್‌ಗಳನ್ನು ಇತ್ಯರ್ಥ ಪಡಿಸುವ ಪ್ರಕ್ರಿಯೆಯು ಸುಲಭವಿರುವ ಇನ್ಶೂರೆನ್ಸ್ ಕಂಪನಿಯನ್ನು ನೋಡಿ. ಏಕೆಂದರೆ ಕ್ಲೈಮ್‌ಗಳ ಪ್ರಕ್ರಿಯೆಯ ಸಮಯದಲ್ಲಿ ನಿಮಗೆ ಮತ್ತು ನಿಮ್ಮ ಬಿಸಿನೆಸ್‌ಗೆ ಸಾಕಷ್ಟು ತೊಂದರೆ ಮಾಡುವುದರಿಂದ ಉಳಿಸುತ್ತದೆ.

ಸರ್ವೀಸ್ ಪ್ರಯೋಜನಗಳು  - ಅನೇಕ ಇನ್ಶೂರರ್‌ಗಳು ನಿಮಗೆ 24X7 ಕಸ್ಟಮರ್ ಅಸಿಸ್ಟೆನ್ಸ್ ಅಥವಾ ಬಳಸಲು ಸುಲಭವಾದ ಮೊಬೈಲ್ ಅಪ್ಲಿಕೇಶನ್‌ನಂತಹ ಹೆಚ್ಚಿನ ಪ್ರಯೋಜನಗಳನ್ನು ನೀಡಲು ಸಾಧ್ಯವಾಗುತ್ತದೆ.

ವಿಭಿನ್ನ ಪಾಲಿಸಿಗಳನ್ನು ಹೋಲಿಕೆ ಮಾಡಿ - ಬಿಸಿನೆಸ್ ಓನರ್ ಆಗಿ, ಹಣವನ್ನು ಉಳಿಸುವ ಮಾರ್ಗಗಳನ್ನು ಕಂಡುಹಿಡಿಯುವುದು ಯಾವಾಗಲೂ ಉತ್ತಮ ಕೆಲಸವಾಗಿದೆ. ಆದರೆ ಅದಕ್ಕಾಗಿ ಕೆಲವೊಮ್ಮೆ ಅಗ್ಗದ ಲಯಬಿಲಿಟಿ ಇನ್ಶೂರೆನ್ಸ್ ಅತ್ಯುತ್ತಮ ಆಯ್ಕೆಯಾಗಿರುವುದಿಲ್ಲ. ವಿವಿಧ ಪಾಲಿಸಿಗಳ ಪ್ರೀಮಿಯಂಗಳು ಮತ್ತು ಪಾಲಿಸಿ ಫೀಚರ್‌ಗಳನ್ನು ಹೋಲಿಕೆ ಮಾಡಿ. ಇದರಿಂದ ನೀವು ಉತ್ತಮವಾದ ಪಾಲಿಸಿಯನ್ನು ಕೈಗೆಟುಕುವ ಬೆಲೆಯಲ್ಲಿ ಕಾಣಬಹುದು. 

ಲಯಬಿಲಿಟಿ ಇನ್ಶೂರೆನ್ಸ್ ಅನ್ನು ಪಡೆಯುವ ಮೊದಲು ನೆನಪಿಡಬೇಕಾದ ವಿಷಯಗಳು

  • ನಿಮ್ಮ ಲಯಬಿಲಿಟಿ ಇನ್ಶೂರೆನ್ಸ್‌ ಏನನ್ನು ಕವರ್ ಮಾಡುತ್ತದೆ ಹಾಗೂ ಏನನ್ನು ಕವರ್ ಮಾಡುವುದಿಲ್ಲ ಎಂಬುದನ್ನು ಯಾವಾಗಲೂ ಪರಿಶೀಲಿಸಲು ಮರೆಯದಿರಿ. ನಿಯಮಗಳು ಮತ್ತು ಷರತ್ತುಗಳನ್ನು ಓದಿ. ಅದರಿಂದ ನೀವು ಮುಂದೆಂದೂ ಅಚ್ಚರಿ ಪಡಲಾರಿರಿ. 

  • ಲಯಬಿಲಿಟಿಯ ಸರಿಯಾದ ಲಿಮಿಟ್ ಅನ್ನು ಆಯ್ಕೆ ಮಾಡಿ; ನೀವು ಹೆಚ್ಚಿನ ಲಯಬಿಲಿಟಿ ಲಿಮಿಟ್ ಅನ್ನು ಹೊಂದಿರುವಾಗ ಅಥವಾ ಇನ್ಶೂರೆನ್ಸ್ ಮೊತ್ತವನ್ನು ಹೊಂದಿರುವಾಗ ನಿಮ್ಮ ಇನ್ಶೂರೆನ್ಸ್ ಪ್ರೀಮಿಯಂ ಕೂಡ ಅಧಿಕವಾಗಿರುತ್ತದೆ. ಆದರೆ ನಿಮ್ಮ ಸ್ವಂತ ಮನಃಶಾಂತಿಗಾಗಿ ಯಾವುದೇ ಡ್ಯಾಮೇಜುಗಳ ಸಂಭಾವ್ಯ ವೆಚ್ಚವನ್ನು ನಿಮ್ಮ ಪ್ರೀಮಿಯಂನಲ್ಲಿ ಉಳಿಸಲು, ಕಡಿಮೆ ಇನ್ಶೂರೆನ್ಸ್ ಮೊತ್ತವನ್ನು ಆಯ್ಕೆ ಮಾಡಬೇಡಿ.

  • ಎಲ್ಲಾ ಅಂಶಗಳನ್ನು ಒಟ್ಟಾಗಿ ಮೌಲ್ಯಮಾಪನ ಮಾಡುವ ಮೂಲಕ ಉತ್ತಮ ಮೌಲ್ಯವನ್ನು ನೋಡಿ - ಇನ್ಶೂರೆನ್ಸ್ ಮೊತ್ತ ಮತ್ತು ಪ್ರೀಮಿಯಂನಿಂದ ಹಿಡಿದು ಕವರೇಜಿನವರೆಗೆ ಹಾಗೂ ನಿಮಗೆ ಉತ್ತಮ ಮೌಲ್ಯವನ್ನು ನೀಡುವ ಲಯಬಿಲಿಟಿ ಇನ್ಶೂರೆನ್ಸ್‌ ಪಾಲಿಸಿಯನ್ನು ಆಯ್ಕೆಮಾಡಿ.

  • ನಿಮ್ಮ ಬಿಸಿನೆಸ್‌ನ ಸ್ವರೂಪವನ್ನು ಆಧರಿಸಿ ಸರಿಯಾದ ಪಾಲಿಸಿಯನ್ನು ಆಯ್ಕೆ ಮಾಡಿ. ಉದಾಹರಣೆಗೆ ರಿಟೇಲ್ ಶಾಪ್ (ಬೊಟಿಕ್ ಅಥವಾ ಕಿರಾಣಿ ಶಾಪ್ ಇತ್ಯಾದಿ) ಬಹಳಷ್ಟು ಕಸ್ಟಮರ್‌ಗಳನ್ನು ಪಡೆಯುತ್ತದೆ, ಆದರೆ ಅಲ್ಲಿ ಯಾವುದೇ ಪ್ರಾಡಕ್ಟ್‌ಗಳನ್ನು ತಯಾರಿಸುವುದಿಲ್ಲ. ಹಾಗಾಗಿ ಅವರಿಗೆ ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸಿನ ಅಗತ್ಯವಿರುತ್ತದೆಯೆ ಹೊರತು, ಪ್ರಾಡಕ್ಟ್ ಲಯಬಿಲಿಟಿ ಕವರ್‌ನದಲ್ಲ.

ಜನರಲ್ ಲಯಬಿಲಿಟಿ ಇನ್ಶೂರೆನ್ಸ್‌ಗೆ ಎಷ್ಟು ವೆಚ್ಚವಾಗುತ್ತದೆ?

ಇನ್ಶೂರೆನ್ಸ್ ಕಂಪನಿಯು ನಿಮ್ಮ ಜನರಲ್ ಅಥವಾ ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್‌ಗೆ ಪ್ರೀಮಿಯಂ ಅನ್ನು ಕ್ಯಾಲ್ಕುಲೇಟ್ ಮಡಿದಾಗ, ಅವರು ಅದನ್ನು ಹಲವಾರು ಅಂಶಗಳ ಆಧಾರದ ಮೇಲೆ ನಿರ್ಧರಿಸುತ್ತಾರೆ. ಉದಾಹರಣೆಗೆ:

  • ನಿಮ್ಮ ಬಿಸಿನೆಸ್‌ನ ಸ್ವರೂಪ  - ಪ್ರತಿಯೊಂದು ಬಿಸಿನೆಸ್ ಕೂಡ ವಿಭಿನ್ನವಾಗಿದೆ ಮತ್ತು ಅದರ ಕಾರ್ಯಾಚರಣೆಗಳು ವಿಭಿನ್ನ ಪ್ರಮಾಣದ ರಿಸ್ಕ್‌ಗಳನ್ನು ಹೊಂದಿರುತ್ತವೆ, ಆದ್ದರಿಂದ ನಿಮ್ಮ ಪ್ರೀಮಿಯಂ ಇದರಿಂದ ಪ್ರಭಾವಿತವಾಗುತ್ತದೆ. (ಉದಾಹರಣೆಗೆ, ಒಂದು ಪುಸ್ತಕದಂಗಡಿಗಿಂತ ಒಂದು ಕಾರ್ಖಾನೆಯು, ವಿಸಿಟರ್‌ಗಳಿಗೆ ಹೆಚ್ಚಿನ ಅಪಾಯವನ್ನು ಉಂಟುಮಾಡಬಹುದು)

  • ಪ್ರಾಡಕ್ಟ್‌ಗಳ ಪ್ರಕಾರ  - ನಿಮ್ಮ ಬಿಸಿನೆಸ್‌ನ ರಿಸ್ಕ್ ನಿಮ್ಮ ಬಿಸಿನೆಸ್ ನೀಡುವ ಪ್ರಾಡಕ್ಟ್‌ಗಳ ಅಥವಾ ಸರ್ವೀಸ್‌ಗಳ ಮೇಲೆ ಅವಲಂಬಿತವಾಗಿರುತ್ತದೆ

  • ನಿಮ್ಮ ಬಿಸಿನೆಸ್‌ನ ಗಾತ್ರ  - ಸಾಮಾನ್ಯವಾಗಿ, ನಿಮ್ಮ ಬಿಸಿನೆಸ್ ದೊಡ್ಡದಿದ್ದಷ್ಟು, ಅದರ ಮೌಲ್ಯವು ಹೆಚ್ಚಾಗುತ್ತದೆ. ಆದ್ದರಿಂದ, ನಿಮ್ಮ ಜನರಲ್ ಅಥವಾ ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್ ಪ್ರೀಮಿಯಂ ಕೂಡ ಹೆಚ್ಚಾಗುತ್ತದೆ

  • ಕ್ಲೈಮ್ ಇತಿಹಾಸ  - ನಿಮ್ಮ ಬಿಸಿನೆಸ್ ಈ ಹಿಂದೆ ಎಷ್ಟು ಕ್ಲೈಮ್‌ಗಳನ್ನು ಮಾಡಿದೆ ಎಂಬುದು ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವಾಗಿದೆ

  • ಲೊಕೇಶನ್  - ನಿಮ್ಮ ಬಿಸಿನೆಸ್ ಇರುವ ಲೊಕೇಶನ್ ಅನ್ನು ಆಧರಿಸಿ, ಲಯಬಿಲಿಟಿ ಇನ್ಶೂರೆನ್ಸ್ ಪ್ರೀಮಿಯಂನ ಮೇಲೆ ಪರಿಣಾಮ ಬೀರುತ್ತದೆ ಎಂಬ ಸರಳ ಕಾರಣಕ್ಕಾಗಿ, ವಿವಿಧ ಪಟ್ಟಣಗಳು ಮತ್ತು ನಗರಗಳು ವಿವಿಧ ಹಂತದ ರಿಸ್ಕ್‌ನೊಂದಿಗೆ ಬರುತ್ತವೆ

  • ಲೋಕೇಶನ್‌ಗಳ ಸಂಖ್ಯೆ  - ಒಂದು ವೇಳೆ ನಿಮ್ಮ ಬಿಸಿನೆಸ್ ಡಿಫರೆಂಟ್ ಲೋಕೇಶನ್‌ಗಳಲ್ಲಿ ಕಾರ್ಯನಿರ್ವಹಿಸುವಾಗ, ಅದು ಹೆಚ್ಚಿನ ಮಟ್ಟದ ರಿಸ್ಕ್ ಅನ್ನು ಹೊಂದಿರುತ್ತದೆ 

  • ಅಂದಾಜು ಟರ್ನ್ಓವರ್  - ನಿಮ್ಮ ಪ್ರೀಮಿಯಂ ನಿಮ್ಮ ಬಿಸಿನೆಸ್‌ನ ಅಂದಾಜು ಟರ್ನ್ಓವರ್ ಮೇಲೂ ಸಹ ಆಧಾರಿತವಾಗಿರುತ್ತದೆ

ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಇತರ ಅಂಶಗಳೆಂದರೆ ಪರಿಸರ, ಆಕ್ಯುಪೆನ್ಸಿ, ಪ್ರಾದೇಶಿಕ ಮತ್ತು ನ್ಯಾಯವ್ಯಾಪ್ತಿಯ ಮಾನ್ಯತೆ ಮತ್ತು ನಿಮ್ಮ ಬಿಸಿನೆಸ್ ರೆಕಾರ್ಡ್. ಮತ್ತು ಸಾಮಾನ್ಯವಾಗಿ, ಹೆಚ್ಚಿನ ರಿಸ್ಕ್‌ಗೆ ಕಾರಣವಾಗುವ ಯಾವುದೇ ವಿಷಯವು, ಪಾವತಿಸಬೇಕಾದ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸುತ್ತದೆ.

ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಮತ್ತು ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್ ನಡುವಿನ ವ್ಯತ್ಯಾಸವೇನು?

ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್ ಎನ್ನುವುದು ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಅನ್ನು ಹೋಲುವ ಪಾಲಿಸಿಯಾಗಿದೆ. ಆದರೆ ಅವುಗಳು ತಮ್ಮ ಉದ್ದೇಶ ಮತ್ತು ಕವರೇಜಿಗೆ ಸಂಬಂಧಿಸಿದಂತೆ ಪರಸ್ಪರ ಭಿನ್ನವಾಗಿರುತ್ತವೆ. ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್ ಮತ್ತು ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಅನ್ನು ನೋಡೋಣ:

ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್ ಜನರಲ್ ಲಯಬಿಲಿಟಿ ಇನ್ಶೂರೆನ್ಸ್
ಏನಿದು? ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್, ಪ್ರಿಮೈಸಸ್‌ನಲ್ಲಿರುವ ಯಾವುದೇ ಥರ್ಡ್ ಪಾರ್ಟಿ ಗಾಯ ಅಥವಾ ಡ್ಯಾಮೇಜಿನ ಕ್ಲೈಮ್‌ಗಳ ವಿರುದ್ಧ ನಿಮ್ಮನ್ನು ಮತ್ತು ನಿಮ್ಮ ಬಿಸಿನೆಸ್ ಅನ್ನು ಕವರ್ ಮಾಡುತ್ತದೆ. ಜನರಲ್ ಲಯಬಿಲಿಟಿ ಇನ್ಶೂರೆನ್ಸ್, ನಿಮ್ಮ ಬಿಸಿನೆಸ್‌ನಲ್ಲಿ ಥರ್ಡ್ ಪಾರ್ಟಿ ವ್ಯಕ್ತಿಗೆ ಅಥವಾ ಪ್ರಾಪರ್ಟಿಗೆ ಯಾವುದೇ ಗಾಯ ಸೇರಿದಂತೆ, ವ್ಯಾಪಕ ಶ್ರೇಣಿಯ ಘಟನೆಗಳನ್ನು ಕವರ್ ಮಾಡುತ್ತದೆ.
ಕವರೇಜ್ ಮೂಲಭೂತವಾಗಿ, ಇದು ನಿಮ್ಮ ವ್ಯಾಪಾರದ ಪ್ರಿಮೈಸಸ್‌ನಲ್ಲಿರುವ ಯಾವುದೇ ಪಬ್ಲಿಕ್ ಮೆಂಬರ್‌ಗಳಿಗೆ (ಅಥವಾ ಥರ್ಡ್ ಪಾರ್ಟಿಗಳಿಗೆ) ಗಾಯಗಳು, ಡ್ಯಾಮೇಜ್ ಅನ್ನು ಕವರ್ ಮಾಡುತ್ತವೆ. ಇದು ಕಸ್ಟಮರ್‌ಗಳು, ವಿಸಿಟರ್‌ಗಳು ಮತ್ತು ಡೆಲಿವರಿ ಸಿಬ್ಬಂದಿಯನ್ನು ಒಳಗೊಂಡಿರಬಹುದು. ಇದು ನಿಮ್ಮ ಬಿಸಿನೆಸ್‌ಗಾಗಿ ಹೆಚ್ಚು ಕಾಂಪ್ರೆಹೆನ್ಸಿವ್ ಕವರ್ ಆಗಿದ್ದು, ಇದು ನಿಮ್ಮ ಥರ್ಡ್ ಪಾರ್ಟಿ ಲಯಬಿಲಿಟಿಗಳನ್ನು ಮಾತ್ರ ನೋಡಿಕೊಳ್ಳದೇ ಅದರೊಂದಿಗೆ ಅಡ್ವರ್ಟೈಸಿಂಗ್ ಗಾಯಗಳು ಮತ್ತು ಪರ್ಸನಲ್ ಗಾಯಗಳು ಮತ್ತು ನಿಮ್ಮ ಬಿಸಿನೆಸ್‌ ಕಾರ್ಯಾಚರಣೆಯ ಕಾರಣದಿಂದಾಗಿ ಸಂಭವಿಸುವ ಯಾವುದೇ ಗಾಯಗಳು ಅಥವಾ ಡ್ಯಾಮೇಜುಗಳಂತಹ ಇತರ ಸಂದರ್ಭಗಳಲ್ಲಿಯೂ ಸಹ ನಿಮಗೆ ರಕ್ಷಣೆ ನೀಡುತ್ತದೆ.
ಪ್ರಯೋಜನಗಳು ಜನರಲ್ ಲಯಬಿಲಿಟಿ ಇನ್ಶೂರೆನ್ಸ್‌ಗಿಂತ ಪ್ರೈವೇಟ್ ಲಯಬಿಲಿಟಿ ಇನ್ಶೂರೆನ್ಸ್‌ನ ಪ್ರೀಮಿಯಂ ಸ್ವಲ್ಪ ಕಡಿಮೆ ಇರುತ್ತದೆ. ಜನರಲ್ ಲಯಬಿಲಿಟಿ ಇನ್ಶೂರೆನ್ಸ್‌, ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್‌ ಕವರ್ ಮಾಡುವ ಎಲ್ಲವನ್ನೂ ಕವರ್ ಮಾಡುತ್ತದೆ. ಜೊತೆಗೆ ಪರ್ಸನಲ್ ಮತ್ತು ಅಡ್ವರ್ಟೈಸಿಂಗ್ ಗಾಯವನ್ನು ಸಹ ಕವರ್ ಮಾಡುತ್ತದೆ.
ಲಿಮಿಟೇಶನ್‌ಗಳು ಈ ಕವರೇಜ್ ನಿಮ್ಮ ಬಿಸಿನೆಸ್ ಪ್ರಾಪರ್ಟಿಗೆ ಮಾತ್ರ ಅನ್ವಯಿಸುತ್ತದೆ. ಆದ್ದರಿಂದ ನೀವು ಅಥವಾ ನಿಮ್ಮ ಎಂಪ್ಲಾಯೀಗಳು ಬೇರೆ ಕಡೆಗಳಲ್ಲಿ ಯಾವುದೇ ಡ್ಯಾಮೇಜ್ ಅನ್ನು ಅನುಭವಿಸಿದರೆ, ಅದನ್ನು ಕವರ್ ಮಾಡಲಾಗುವುದಿಲ್ಲ ಉದಾಹರಣೆಗೆ ಕ್ಲೈಂಟ್‌ಗಳ ಮನೆ. ಪ್ರೀಮಿಯಂ ಪ್ರೈವೇಟ್ ಲಯಬಿಲಿಟಿ ಇನ್ಶೂರೆನ್ಸ್‌ಗಿಂತ ಸ್ವಲ್ಪ ಹೆಚ್ಚು ದುಬಾರಿಯಾಗಿರುತ್ತದೆ.

ಜನರಲ್ ಲಯಬಿಲಿಟಿ ಇನ್ಶೂರೆನ್ಸ್‌ನ ಸಾಮಾನ್ಯ ನಿಯಮಗಳನ್ನು ನಿಮಗಾಗಿ ಸರಳೀಕರಿಸಲಾಗಿದೆ

ಅಡ್ವರ್ಟೈಸಿಂಗ್ ಗಾಯ

ನಿಮ್ಮ ಯಾವುದೇ ಆ್ಯಡ್ಸ್ (ಅಥವಾ ಇತರ ಸಂಪರ್ಕಗಳು) ಉದ್ದೇಶಪೂರ್ವಕವಾಗಿ ಯಾವುದೇ ಕಾಪಿರೈಟ್ ಉಲ್ಲಂಘನೆ ಅಥವಾ ಯಾರೊಬ್ಬರ ಮಾನನಷ್ಟವನ್ನು ಒಳಗೊಂಡಿದ್ದರೆ. ಉದಾಹರಣೆಗೆ, ನಿಮ್ಮ ಕಂಪನಿಯು ಆಕಸ್ಮಿಕವಾಗಿ ಮತ್ತೊಂದು ಕಂಪನಿಯನ್ನು ಅವಮಾನಿಸುವ ಆ್ಯಡ್ ಅಥವಾ ಸೋಷಿಯಲ್ ಮೀಡಿಯಾ ಪೋಸ್ಟ್ ಅನ್ನು ಹಾಕಿದರೆ, ಅದು ಅವರ ರೆಪ್ಯುಟೇಶನ್ ಅನ್ನು ಡ್ಯಾಮೇಜುಗೊಳಿಸಬಹುದು.

ದೈಹಿಕ ಗಾಯಗಳು

ಇದು ಮೂಲಭೂತವಾಗಿ ನಿಮ್ಮ ಬಿಸಿನೆಸ್ ಪ್ರಿಮೈಸಸ್‌ನಲ್ಲಿ ಅಥವಾ ನಿಮ್ಮ ಬಿಸಿನೆಸ್ ಕಾರ್ಯಾಚರಣೆಗಳು ಅಥವಾ ಪ್ರಾಡಕ್ಟ್‌ಗಳ ಕಾರಣದಿಂದಾಗಿ ಯಾರಿಗಾದರೂ ಸಂಭವಿಸುವ ಯಾವುದೇ ದೈಹಿಕ ಗಾಯ, ಅನಾರೋಗ್ಯ ಅಥವಾ ರೋಗವನ್ನು ಸೂಚಿಸುತ್ತದೆ.

ಪರ್ಸನಲ್ ಗಾಯ

ದೈಹಿಕ ಗಾಯಗಳ ಹೊರತಾಗಿ ಯಾವುದೇ ಗಾಯ, ತಪ್ಪಾದ ಎಂಟ್ರಿ ಅಥವಾ ಬೇರೊಬ್ಬರ ಗೌಪ್ಯತೆಯ ಹಕ್ಕಿನ ಯಾವುದೇ ಉಲ್ಲಂಘನೆ.

ಕವರೇಜ್ ಪ್ರದೇಶ

ಇದು ನಿಮ್ಮ ಇನ್ಶೂರೆನ್ಸ್ ಕವರ್ ಮಾಡುವ ಭೌಗೋಳಿಕ ಪ್ರದೇಶವಾಗಿದೆ. ಉದಾಹರಣೆಗೆ ನಿಮ್ಮ ಬಿಸಿನೆಸ್ ಇರುವ ಅಥವಾ ಕಾರ್ಯನಿರ್ವಹಿಸುವ ದೇಶ ಅಥವಾ ಪ್ರದೇಶ.

ವಿದ್ಯಮಾನ

ಇದು ದೋಷ ಅಥವಾ ಅಪಾಯದಂತಹ ಹಾನಿಕಾರಕ ಸ್ಥಿತಿಗೆ ಒಡ್ಡಿಕೊಳ್ಳುವುದರಿಂದ ಸಂಭವಿಸುವ ಯಾವುದೇ ಘಟನೆ ಅಥವಾ ಘಟನೆಗಳ ಸರಣಿಯಾಗಿದೆ (ಇದು ಕೆಲವು ಗಾಯಗಳು ಮತ್ತು ಕಾಯಿಲೆಗಳನ್ನು ಒಳಗೊಂಡಿರಬಹುದು, ಅಥವಾ ಪ್ರಾಡಕ್ಟ್ ರಿಕಾಲ್ ಆಗಿರಬಹುದು).

ಪ್ರಾಡಕ್ಟ್ ರಿಕಾಲ್ ಎಕ್ಸ್‌ಪೆನ್ಸ್‌ಗಳು

ಕೆಲವು ಘಟನೆಗಳು ಸಂಭವಿಸಿದಲ್ಲಿ ಮತ್ತು ನಿಮ್ಮ ಬಿಸಿನೆಸ್‌ನಿಂದ ತಯಾರಿಸಿದ ಯಾವುದೇ ಪ್ರಾಡಕ್ಟ್‌ಗಳನ್ನು ರಿಕಾಲ್ ಮಾಡಲು, ರಿಮೂವ್ ಮಾಡಲು ಅಥವಾ ಡಿಸ್ಪೋಸ್ ಮಾಡಬೇಕಾದರೆ ಅದಕ್ಕೆ ತಗಲಬಹುದಾದ ಯಾವುದೇ ವೆಚ್ಚಗಳನ್ನು ಸೂಚಿಸುತ್ತದೆ. ಉದಾಹರಣೆಗೆ, ನಿಮ್ಮ ಕಂಪನಿಯು ಆಟಿಕೆಗಳನ್ನು ತಯಾರಿಸಿದರೆ, ಆದರೆ ಕೆಲ ವಿಷಕಾರಿ ಬಣ್ಣವನ್ನು ಒಳಗೊಂಡಿರುವ ಕಾರಣಕ್ಕೆ ಅವುಗಳನ್ನು ಮರುಪಡೆಯಬೇಕು (ರಿಕಾಲ್ ಮಾಡಬೇಕು)

ಥರ್ಡ್-ಪಾರ್ಟಿ

ಥರ್ಡ್ ಪಾರ್ಟಿ ಎಂದರೆ ಇನ್ಶೂರ್ಡ್ ಪಾರ್ಟಿ ಅಲ್ಲದ (ಅಂದರೆ, ನೀವು) ಮತ್ತು ಇನ್ಶೂರರ್ ಅಲ್ಲದ ಯಾವುದೇ ವ್ಯಕ್ತಿ (ಅಥವಾ ಎಂಟಿಟಿ). ಇದು ನಿಮ್ಮ ಬಿಸಿನೆಸ್‌ನಲ್ಲಿ ಯಾವುದೇ ಫೈನಾನ್ಸಿಯಲ್ ಇಂಟರೆಸ್ಟ್ ಹೊಂದಿರುವ ಅಥವಾ ನೀವು ಕಾಂಟ್ರ್ಯಾಕ್ಟ್ ಮಾಡಿಕೊಳ್ಳುವ ಯಾವುದೇ ಇತರ ವ್ಯಕ್ತಿಯನ್ನು ಹೊರತುಪಡಿಸುತ್ತದೆ.

ಲಯಬಿಲಿಟಿಯ ಲಿಮಿಟ್

ಇದು ನೀವು ಕ್ಲೈಮ್ ಮಾಡಿದರೆ ನಿಮ್ಮ ಇನ್ಶೂರರ್ ನಿಮಗಾಗಿ ಕವರ್ ಮಾಡಲು ಸಾಧ್ಯವಾಗುವ ಗರಿಷ್ಠ ಮೊತ್ತವಾಗಿದೆ ಮತ್ತು ಇದು ಸಮ್ ಇನ್ಶೂರ್ಡ್ ಅನ್ನು ಹೋಲುತ್ತದೆ.

ಡಿಡಕ್ಟಿಬಲ್

ಹೆಚ್ಚಿನ ಲಯಬಿಲಿಟಿ ಇನ್ಶೂರೆನ್ಸ್‌ನೊಂದಿಗೆ, ಇನ್ಶೂರರ್ ನಿಮ್ಮ ಕ್ಲೈಮ್ ಅನ್ನು ಪಾವತಿಸುವ ಮೊದಲು ನೀವು ನಿಮ್ಮ ಜೇಬಿನಿಂದ ಸ್ವಲ್ಪ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಉದಾಹರಣೆಗೆ, ಡ್ಯಾಮೇಜಿಗೊಳಗಾದ ಫೋನ್‌ಗೆ ನೀವು ₹15,000 ಪಾವತಿಸಬೇಕಾಗಿದೆ, ಆದರೆ ನೀವು ₹5,000 ಡಿಡಕ್ಟಿಬಲ್ ಅನ್ನು ಹೊಂದಿದ್ದರೆ, ಇನ್ಶೂರೆನ್ಸ್ ಕಂಪನಿಯು ಉಳಿದ ₹10,000 ಪಾವತಿಸುವ ಮೊದಲು ನೀವು ಈ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಇತರೆ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಗಳು

ಬಿಸಿನೆಸ್ ಓನರ್ ಆಗಿ, ನೀವು ವ್ಯಾಪಕ ಶ್ರೇಣಿಯ ಲಯಬಿಲಿಟಿಗಳಿಗೆ ಒಡ್ಡಿಕೊಳ್ಳುವುದರಿಂದ, ಎಲ್ಲಾ ರೀತಿಯ ಲಯಬಿಲಿಟಿ ಇನ್ಶೂರೆನ್ಸ್ ಕವರ್ (ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್ ಮತ್ತು ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಅನ್ನು ಹೊರತುಪಡಿಸಿ) ಲಭ್ಯವಿವೆ ಎಂಬುದನ್ನು ಗಮನಿಸುವುದು ಮುಖ್ಯವಾಗಿರುತ್ತದೆ:

ಎಂಪ್ಲಾಯರ್ ಲಯಬಿಲಿಟಿ ಇನ್ಶೂರೆನ್ಸ್ ಮತ್ತು ವರ್ಕ್‌ಮೆನ್ಸ್ ಕಾಂಪನ್ಸೇಶನ್

ಈ ರೀತಿಯ ಇನ್ಶೂರೆನ್ಸ್ ಅನ್ನು ಎಂಪ್ಲಾಯರ್‌ಗಳು, ಉದ್ಯೋಗದ ಸಮಯದಲ್ಲಿ ಗಾಯಗೊಂಡ ತಮ್ಮ ಎಂಪ್ಲಾಯೀಗಳಿಗಾಗಿ ಕವರೇಜ್ ಪಡೆಯಲು ಬಯಸುತ್ತಾರೆ.

ಪ್ರೊಫೆಷನಲ್ ಇಂಡೆಮ್ನಿಟಿ ಇನ್ಶೂರೆನ್ಸ್

ಪ್ರೊಫೆಷನಲ್ ನೆಗ್ಲಿಜೆನ್ಸ್, ಎರರ್‌ಗಳು ಅಥವಾ ಒಮಿಷನ್ಸ್ ಕ್ಲೈಮ್‌ಗಳ ವಿರುದ್ಧ ನಿಮ್ಮನ್ನು ಅಥವಾ ನಿಮ್ಮ ಬಿಸಿನೆಸ್ ಅನ್ನು ನೀವು ರಕ್ಷಿಸಿಕೊಳ್ಳಲು ಇನ್ಶೂರೆನ್ಸ್ ಪ್ಲ್ಯಾನ್ ಇದೆ. ಆರ್ಕಿಟೆಕ್ಟರ್‌ಗಳು, ಎಂಜಿನಿಯರ್‌ಗಳು, ಕನ್ಸಲ್ಟೆಂಟ್‌ಗಳು, ಲಾಯರ್‌ಗಳು, ಬಿಲ್ಡಿಂಗ್ ಡಿಸೈನರ್‌ಗಳು, ಮೆಡಿಕಲ್ ಪ್ರೊಫೆಷನಲ್‌ಗಳು ಮತ್ತು ಅಕೌಂಟೆಂಟ್‌ಗಳಂತಹ ಪ್ರೊಫೆಷನಲ್‌ಗಳಿಗೆ ಇದು ಹೆಚ್ಚು ಉಪಯುಕ್ತವಾಗಿದೆ.

ಪ್ರಾಡಕ್ಟ್ ಲಯಬಿಲಿಟಿ

ದೋಷಪೂರಿತ ಪ್ರಾಡಕ್ಟ್‌ಗಳಿಂದ ಉಂಟಾಗುವ ಯಾವುದೇ ಕ್ಲೈಮ್‌ಗಳ ವಿರುದ್ಧ ನಿಮ್ಮನ್ನು ಕವರ್ ಮಾಡಲು ಈ ರೀತಿಯ ಪಾಲಿಸಿ ಇದೆ. ಒಂದುವೇಳೆ ನಿಮ್ಮ ಬಿಸಿನೆಸ್, ಕೆಮಿಕಲ್‌ಗಳು, ತಂಬಾಕು, ಮೆಡಿಕಲ್ ಪ್ರಾಡಕ್ಟ್‌ಗಳು, ಫುಡ್ ಅಥವಾ ರಿಕ್ರಿಯೇಷನಲ್ ಪ್ರಾಡಕ್ಟ್‌ಗಳ ಉತ್ಪಾದನೆಯನ್ನು ಒಳಗೊಂಡಿದ್ದರೆ, ಅದು ಪ್ರಯೋಜನಕಾರಿಯಾಗಬಹುದು.

ಥರ್ಡ್ ಪಾರ್ಟಿ ಲಯಬಿಲಿಟಿ

ಈ ಪಾಲಿಸಿಯು ನೀವು ಥರ್ಡ್ ಪಾರ್ಟಿಗೆ (ಅಂದರೆ, ನಿಮ್ಮನ್ನು ಹೊರತುಪಡಿಸಿ ಬೇರೆ ಯಾರಿಗಾದರೂ - ಇನ್ಶೂರ್ಡ್ ವ್ಯಕ್ತಿ ಅಥವಾ ಬಿಸಿನೆಸ್ - ಮತ್ತು ಇನ್ಶೂರೆನ್ಸ್ ಕಂಪನಿ) ಉಂಟುಮಾಡಬಹುದಾದ ಯಾವುದೇ ಡ್ಯಾಮೇಜ್ ಅಥವಾ ನಷ್ಟಗಳಿಂದ ನಿಮ್ಮನ್ನು ಕವರ್ ಮಾಡುತ್ತದೆ

ಮ್ಯಾನೇಜ್‌ಮೆಂಟ್ ಲಯಬಿಲಿಟಿ

ನಿಮ್ಮ ಕಂಪನಿಯ ಡೈರೆಕ್ಟರ್‌ಗಳು ಮತ್ತು ಆಫೀಸರ್‌ಗಳನ್ನು ಸಾಮಾನ್ಯವಾಗಿ ಪಬ್ಲಿಕ್ ಅಥವಾ ಜನರಲ್ ಲಯಬಿಲಿಟಿ ಪಾಲಿಸಿಯ ಅಡಿಯಲ್ಲಿ ಕವರ್ ಆಗದ ಸಂದರ್ಭಗಳ ವಿರುದ್ಧ ರಕ್ಷಿಸಲು ಈ ಇನ್ಶೂರೆನ್ಸ್ ಇದೆ. ಅಂದರೆ ಕಂಪನಿಯ ಮ್ಯಾನೇಜರ್, ಡೈರೆಕ್ಟರ್ ಮತ್ತು ಆಫೀಸರ್‌ಗಳನ್ನು ನಿರ್ದೇಶಿಸಿದ ತಪ್ಪು ಆರೋಪಗಳು.

ಭಾರತದಲ್ಲಿ ಲಯಬಿಲಿಟಿ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು

ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಎಂದರೇನು?

ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಎಎನ್ನುವುದು ಬಿಸಿನೆಸ್‌ಗಳು ಮತ್ತು ಕಂಪನಿಗಳು ತಮ್ಮ ಪ್ರಿಮೈಸಸ್‌ನಲ್ಲಿ ಅಥವಾ ಅವರ ಪ್ರಾಡಕ್ಟ್‌ಗಳು ಮತ್ತು ಸರ್ವೀಸ್‌ನಿಂದಾಗಿ ಯಾವುದೋ ರೀತಿಯಲ್ಲಿ ಗಾಯಗೊಂಡಿರುವ ಜನರು (ಬಿಸಿನೆಸ್ ಅಸೋಸಿಯೇಟ್ಸ್, ಕಸ್ಟಮರ್‌ಗಳು, ಕ್ಲೈಂಟ್‌ಗಳು ಮತ್ತು ಇತರೆ ಥರ್ಡ್ ಪಾರ್ಟಿಗಳು) ಮಾಡಿದ ಮೊಕದ್ದಮೆಗಳು ಮತ್ತು ಕ್ಲೈಮ್‌ಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುವ ಪಾಲಿಸಿಯಾಗಿದೆ.

ಪಬ್ಲಿಕ್ ಲಯಬಿಲಿಟಿ ಇನ್ಶೂರೆನ್ಸ್ ಹೇಗೆ ಕೆಲಸ ಮಾಡುತ್ತದೆ?

ಬಹಳಷ್ಟು ಬಿಸಿನೆಸ್‌ಗಳು ಜನರಲ್ ಪಬ್ಲಿಕ್‌ನೊಂದಿಗೆ ಸಂಪರ್ಕಕ್ಕೆ ಬರುತ್ತವೆ (ವೆಂಡರ್‌ಗಳು, ಕಸ್ಟಮರ್‌ಗಳು, ಕ್ಲೈಂಟ್‌ಗಳು ಮತ್ತು ಎಲ್ಲಾ ರೀತಿಯ ಇತರೆ ಥರ್ಡ್ ಪಾರ್ಟಿಗಳು). ಇದು ಕೆಲವು ರಿಸ್ಕ್‌ಗಳೊಂದಿಗೆ ಬರುತ್ತದೆ, ಏಕೆಂದರೆ ಅವರು ವದ್ದೆ ನೆಲದ ಮೇಲೆ ಜಾರಿ ಬಿದ್ದು ಗಾಯಗೊಳ್ಳಬಹುದು ಅಥವಾ ಅವರ ಪ್ರಾಪರ್ಟಿ ಡ್ಯಾಮೇಜಿಗೊಳಗಾಗಬಹುದು.

ಆದ್ದರಿಂದ, ಈ ಘಟನೆಯು ಕೆಲವು ಕ್ಲೈಮ್‌ಗಳು ಅಥವಾ ಮೊಕದ್ದಮೆಗಳಿಗೆ ಕಾರಣವಾದಾಗ, ಈ ಇನ್ಶೂರೆನ್ಸ್ ನಿಮ್ಮನ್ನು ರಕ್ಷಿಸುತ್ತದೆ. ನಿಮ್ಮ ಇನ್ಶೂರೆನ್ಸ್ ಕಂಪನಿಯು ನಿಮ್ಮ ಲೀಗಲ್ ಎಕ್ಸ್‌ಪೆನ್ಸ್‌ಗಳನ್ನು ಕವರ್ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಪಾಲಿಸಿಯ ಲಿಮಿಟ್‌ಗಳವರೆಗೆ ಡ್ಯಾಮೇಜುಗಳನ್ನು ಪಾವತಿಸುತ್ತದೆ.

ಜನರಲ್ ಲಯಬಿಲಿಟಿ ಬಿಸಿನೆಸ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ನಿಮ್ಮ ಬಿಸಿನೆಸ್‌ಗೆ ಕಾಂಪ್ರೆಹೆನ್ಸಿವ್ ಕವರ್ ನೀಡುತ್ತದೆ. ಇದು ನಿಮ್ಮ ಬಿಸಿನೆಸ್ ಪ್ರಿಮೈಸಸ್‌ನಲ್ಲಿ ಥರ್ಡ್ ಪಾರ್ಟಿ ಗಾಯಗಳು ಅಥವಾ ಡ್ಯಾಮೇಜ್ ಅನ್ನು ಕವರ್ ಮಾಡುತ್ತದೆ ಮತ್ತು ನಿಮ್ಮ ಬಿಸಿನೆಸ್ ಕಾರ್ಯಾಚರಣೆಗಳ ಕಾರಣದಿಂದಾಗಿ ಅಡ್ವರ್ಟೈಸಿಂಗ್ ಗಾಯಗಳು ಮತ್ತು ಪರ್ಸನಲ್ ಗಾಯಗಳಂತಹ ಇತರೆ ಸಂದರ್ಭಗಳಲ್ಲಿಯೂ ನಿಮ್ಮನ್ನು ಕವರ್ ಮಾಡುತ್ತದೆ.

ಈ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಕವರ್ ಮಾಡುವುದಿಲ್ಲ?

ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಕೆಲವು ಸಂದರ್ಭಗಳಲ್ಲಿ ನಿಮ್ಮನ್ನು ಕವರ್ ಮಾಡುವುದಿಲ್ಲ. ಉದಾಹರಣೆಗೆ

  • ನಿರೀಕ್ಷಿತ ಅಥವಾ ಉದ್ದೇಶಿತ ಗಾಯ ಮತ್ತು ಡ್ಯಾಮೇಜ್

  • ಕಾಂಟ್ರಾಕ್ಚುವಲ್ ಲಯಬಿಲಿಟಿಗಳು

  • ವರ್ಕರ್ಸ್ ಕಾಂಪನ್ಸೇಶನ್ ಮತ್ತು ಅಂತಹುದೇ ಕಾನೂನುಗಳು

  • ನಿಮ್ಮ ಓನ್ ಪ್ರಾಪರ್ಟಿ ಅಥವಾ ಪ್ರಾಡಕ್ಟ್‌ಗಳಿಗೆ ಡ್ಯಾಮೇಜ್

  • ಪೊಲ್ಯುಶನ್ ಲಯಬಿಲಿಟಿ

ಜನರಲ್ ಲಯಬಿಲಿಟಿ ಇನ್ಶೂರೆನ್ಸ್ ಅನ್ನು ಹೇಗೆ ಕ್ಯಾಲ್ಕುಲೇಟ್ ಮಾಡುವುದು?

ನಿಮ್ಮ ಬಿಸಿನೆಸ್ ಸ್ವರೂಪ, ಅದರ ಲೊಕೇಶನ್ ಮತ್ತು ಗಾತ್ರ, ನಿಮ್ಮ ಕ್ಲೈಮ್‌ಗಳ ಇತಿಹಾಸ ಮತ್ತು ಎಂಪ್ಲಾಯೀಗಳ ಸಂಖ್ಯೆಗಳು ನಿಮ್ಮ ಬಿಸಿನೆಸ್ ರಿಸ್ಕ್‌ಗಳಿಗೆ ಹೇಗೆ ಒಡ್ಡಿಕೊಳ್ಳುತ್ತದೆ ಎಂಬುದನ್ನು ನಿರ್ಧರಿಸುವ ವಿವಿಧ ಅಂಶಗಳ ಆಧಾರದ ಮೇಲೆ, ನಿಮ್ಮ ಲಯಬಿಲಿಟಿ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕ್ಯಾಲ್ಕುಲೇಟ್ ಮಾಡಲಾಗುತ್ತದೆ.

ಲಭ್ಯವಿರುವ ವಿವಿಧ ರೀತಿಯ ಲಯಬಿಲಿಟಿ ಇನ್ಶೂರೆನ್ಸ್‌ಗಳು ಯಾವುವು?

ನೀವು ಆಯ್ಕೆಮಾಡಬಹುದಾದ ಹಲವಾರು ರೀತಿಯ ಲಯಬಿಲಿಟೀಸ್ ಇನ್ಶೂರೆನ್ಸ್‌ ಪಾಲಿಸಿಗಳಿವೆ. ಇವುಗಳಲ್ಲಿ ಮ್ಯಾನೇಜ್‌ಮೆಂಟ್ ಲಯಬಿಲಿಟಿ, ಪಬ್ಲಿಕ್ ಲಯಬಿಲಿಟಿ, ಪ್ರಾಡಕ್ಟ್ ಲಯಬಿಲಿಟಿ, ಪ್ರೊಫೆಷನಲ್ ಲಯಬಿಲಿಟಿಗಳು ಮತ್ತು ಹೆಚ್ಚಿನವು ಸೇರಿವೆ.