ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಐಟಿಆರ್ ಫೈಲ್ ಮಾಡದಿದ್ದರೆ ಏನಾಗುತ್ತದೆ?

ವಾರ್ಷಿಕ ಹಣಕಾಸು ವರ್ಷಕ್ಕೆ ಇನ್‌ಕಮ್‌ ಟ್ಯಾಕ್ಸ್ ಫೈಲ್ ಮಾಡದಿದ್ದರೆ, ಸರ್ಕಾರವು ನಿಮ್ಮನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ, ಈ ಆದೇಶಗಳನ್ನು ಪಾಲಿಸದಿರುವುದು ಕಾನೂನುಬಾಹಿರ ಅಭ್ಯಾಸವಾಗಿದೆ ಏಕೆಂದರೆ ನೀವು ವಲಸೆ ಹೋಗಬೇಕಾದರೆ ಅಥವಾ ಲೋನ್ ಅನ್ನು ಪಡೆಯಬೇಕಾದರೆ ಅದು ನಿಮಗೆ ಹಿನ್ನಡೆಯನ್ನುಂಟು ಮಾಡುತ್ತದೆ.

ಆದ್ದರಿಂದ ಐಟಿಆರ್ (ಇನ್‌ಕಮ್‌ ಟ್ಯಾಕ್ಸ್ ರಿಟರ್ನ್) ಫೈಲ್ ಮಾಡದಿದ್ದರೆ ಪೆನಲ್ಟಿ ಇರುತ್ತದೆ ಎಂದು ಎಲ್ಲಾ ಸಿಟಿಜನ್‌ಗಳು ತಿಳಿದಿರಬೇಕು.

ಈ ಲೇಖನವು ಇನ್‌ಕಮ್‌ ಟ್ಯಾಕ್ಸ್ ಪಾವತಿಸದಿರುವುದಕ್ಕಿರುವ ವಿವಿಧ ಪೆನಲ್ಟಿಗಳು, ದಿನಾಂಕಗಳು ಮತ್ತು ಪರಿಣಾಮಗಳತ್ತ ಗಮನ ಹರಿಸುತ್ತದೆ. "ನಾನು ಭಾರತದಲ್ಲಿ ಇನ್‌ಕಮ್‌ ಟ್ಯಾಕ್ಸ್ ಪಾವತಿಸದಿದ್ದರೆ ಏನಾಗುತ್ತದೆ?" ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯಲು ನೀವು ಓದು ಮುಂದುವರಿಸಬಹುದು.

ಹಣಕಾಸು ವರ್ಷ 2022-23ರ (ಮೌಲ್ಯಮಾಪನ ವರ್ಷ 2023-24) ಇನ್‌ಕಮ್‌ ಟ್ಯಾಕ್ಸ್ ಫೈಲ್ ಮಾಡುವ ದಿನಾಂಕಗಳು ಯಾವುವು?

ಹಣಕಾಸು ವರ್ಷ 2022-23ರ ಮತ್ತು ಮೌಲ್ಯಮಾಪನ ವರ್ಷ 2023-24ರ ಇನ್‌ಕಮ್‌ ಟ್ಯಾಕ್ಸ್ ಫೈಲ್ ಮಾಡುವ ಪ್ರಮುಖ ದಿನಾಂಕಗಳು ಈ ಕೆಳಗಿನಂತಿವೆ:

ಟ್ಯಾಕ್ಸ್ ಪೇಯರ್ ಕೆಟಗರಿ ಟ್ಯಾಕ್ಸ್ ಫೈಲಿಂಗ್‌ಗೆ ಅಂತಿಮ ದಿನಾಂಕ - ಹಣಕಾಸು ವರ್ಷ 2022-23
ವೈಯಕ್ತಿಕ/ಹಿಂದೂ ಅವಿಭಕ್ತ ಕುಟುಂಬ/ಎಒಪಿ/ಬಿಒಐ (ಯಾವುದೇ ಆಡಿಟಿಂಗ್ ಅಗತ್ಯವಿಲ್ಲ) 31ನೇ ಜುಲೈ 2023
ಆಡಿಟಿಂಗ್ ಅಗತ್ಯವಿರುವ ಬಿಸಿನೆಸ್‌ಗಳು ಅಕ್ಟೋಬರ್ 31 2023
ಟ್ರಾನ್ಸ್‌ಫರ್‌ ಪ್ರೈಸಿಂಗ್ ರಿಪೋರ್ಟ್ ಅಗತ್ಯವಿರುವ ಬಿಸಿನೆಸ್‌ಗಳು ನವೆಂಬರ್ 30 2023
ರಿವೈಸ್ಡ್ ಐಟಿಆರ್ 31ನೇ ಡಿಸೆಂಬರ್ 2023
ತಡವಾದ/ಲೇಟ್ ಐಟಿಆರ್ 31ನೇ ಡಿಸೆಂಬರ್ 2023

ಜುಲೈ 16, 2023ರವರೆಗೆ ಈ ದಿನಾಂಕಗಳಿಗೆ ಯಾವುದೇ ವಿಸ್ತರಣೆ ಇಲ್ಲ. ಹಣಕಾಸು ವರ್ಷ 2023-24ರ ದಿನಾಂಕಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ.

[ಮೂಲ]

ಹಣಕಾಸು ವರ್ಷ 2023-24ರಲ್ಲಿ ಅಡ್ವಾನ್ಸ್ ಟ್ಯಾಕ್ಸ್ ಕಂತುಗಳನ್ನು ಫೈಲ್ ಮಾಡುವ ದಿನಾಂಕಗಳು ಯಾವುವು?

ಹಣಕಾಸು ವರ್ಷದ ಕೊನೆಯಲ್ಲಿ ಲಮ್‌ಸಮ್‌ ಅಮೌಂಟ್ ಅನ್ನು ಇನ್‌ಕಮ್‌ ಟ್ಯಾಕ್ಸ್ ಆಗಿ ಪಾವತಿಸುವ ಬದಲು, ಟ್ಯಾಕ್ಸ್‌ಪೇಯರ್‌ಗಳು ನೀವು ಗಳಿಕೆ ಮಾಡುತ್ತಿದ್ದಂತೆಯೇ ಕಂತುಗಳ ರೂಪದಲ್ಲಿ ಮುಂಚಿತವಾಗಿ ಇನ್‌ಕಮ್‌ ಅನ್ನು ಪಾವತಿಸುವ ಆಯ್ಕೆ ಮಾಡಬಹುದು. ಇದನ್ನು ಅಡ್ವಾನ್ಸ್ ಟ್ಯಾಕ್ಸ್ ಎಂದು ಕರೆಯಲಾಗುತ್ತದೆ.

ಅಡ್ವಾನ್ಸ್ ಟ್ಯಾಕ್ಸ್ ಪಾವತಿಸುವ ಅಂತಿಮ ದಿನಾಂಕಗಳನ್ನು ಇನ್‌ಕಮ್‌ ಟ್ಯಾಕ್ಸ್ ಇಲಾಖೆ ಒದಗಿಸುತ್ತದೆ, ಅವು ಈ ಕೆಳಗಿನಂತಿವೆ:

ಅಂತಿಮ ದಿನಾಂಕ ಅಥವಾ ಅಡ್ವಾನ್ಸ್ ಟ್ಯಾಕ್ಸ್ ಫೈಲಿಂಗ್ ಹಣಕಾಸಿನ ವರ್ಷ 2023-24 ಕಂಪ್ಲಯನ್ಸ್ ಸ್ವರೂಪ ಪಾವತಿಸಲಾದ ಟ್ಯಾಕ್ಸ್
ಜೂನ್ 15 2023 ಮೊದಲ ಕಂತು ಟ್ಯಾಕ್ಸ್ ಲಯಬಿಲಿಟಿಯ 15%
ಸೆಪ್ಟೆಂಬರ್ 15 2023 ಎರಡನೇ ಕಂತು ಟ್ಯಾಕ್ಸ್ ಲಯಬಿಲಿಟಿಯ 45%
ಡಿಸೆಂಬರ್ 15 2023 ಮೂರನೇ ಕಂತು ಟ್ಯಾಕ್ಸ್ ಲಯಬಿಲಿಟಿಯ 75%
ಮಾರ್ಚ್ 15 2024 ನಾಲ್ಕನೇ ಕಂತು ಟ್ಯಾಕ್ಸ್ ಲಯಬಿಲಿಟಿಯ 100%
ಮಾರ್ಚ್ 15 2024 ಪ್ರಿಸಂಪ್ಟಿವ್ ಸ್ಕೀಮ್ ಟ್ಯಾಕ್ಸ್ ಲಯಬಿಲಿಟಿಯ 100%

ಐಟಿಆರ್ ಫೈಲ್ ಮಾಡುವ ಪ್ರಾಮುಖ್ಯತೆ ಏನು?

ಜವಾಬ್ದಾರಿಯುತ ಮತ್ತು ಕಂಪ್ಲಯಂಟ್ ಸಿಟಿಜನ್ ಆಗಿ, ಒಬ್ಬರು ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಬೇಕಾಗುತ್ತದೆ. ಐಟಿಆರ್ ಫೈಲ್ ಮಾಡುವ ಪ್ರಯೋಜನಗಳು ಮತ್ತು ಪ್ರಾಮುಖ್ಯತೆಯನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

  • ಪೆನಲ್ಟಿ ಅನ್ನು ತಪ್ಪಿಸಲು: ಸೆಕ್ಷನ್ 234F ಅಡಿಯಲ್ಲಿ ಟ್ಯಾಕ್ಸ್ ಇಲಾಖೆ ತಮ್ಮ ಟ್ಯಾಕ್ಸ್‌ಗಳನ್ನು ಫೈಲ್ ಮಾಡದ ಮತ್ತು ಪಾವತಿಸದ ವ್ಯಕ್ತಿಗಳಿಗೆ ಭಾರಿ ಪೆನಲ್ಟಿ ಅನ್ನು ವಿಧಿಸುತ್ತದೆ. ಐಟಿಆರ್ ಗಡುವನ್ನು ತಪ್ಪಿಸಿಕೊಂಡಿದ್ದಕ್ಕಾಗಿ ಪೆನಲ್ಟಿ ಅನ್ನು ಪಾವತಿಸುವುದು ಸರಾಸರಿ ವ್ಯಕ್ತಿಗೆ ಭಾರಿ ಮೊತ್ತ ಪಾವತಿಸುವ ಭಾವ ಮೂಡಿಸುತ್ತದೆ.
  • ಬ್ಯಾಂಕಿನಿಂದ ಲೋನ್ ಪಡೆಯಲು: ಮನೆ/ಕಾರು ಅಥವಾ ಮೆಡಿಕಲ್ ಚಿಕಿತ್ಸೆಯನ್ನು ಖರೀದಿಸಲು ಲೋನ್‌ಗೆ ಅಪ್ಲೈ ಮಾಡುವಾಗ, ಹಿಂದಿನ ಮೂರು ವರ್ಷಗಳ ಐಟಿಆರ್ ಅತ್ಯಗತ್ಯ.
  • ಐಟಿಆರ್ ವಿವರಗಳು ಅತ್ಯಗತ್ಯ: ನಿಮ್ಮ ಸ್ಯಾಲರಿ ಅನ್ನು ಸಾಬೀತುಪಡಿಸಲು ಐಟಿಆರ್ ಡಾಕ್ಯುಮೆಂಟ್‌ಗಳು ಅತ್ಯಗತ್ಯ ಏಕೆಂದರೆ ಅವು ಫಾರ್ಮ್ 16ಗಿಂತ ಹೆಚ್ಚು ವಿವರಯುತವಾಗಿವೆ. ಅವು ಸ್ಯಾಲರಿ ಮತ್ತು ಇತರ ಮೂಲಗಳಿಂದ ನಿಮ್ಮ ಇನ್‌ಕಮ್‌ ವಿವರಗಳನ್ನು ಒಳಗೊಂಡಿರುತ್ತವೆ. ಹೆಚ್ಚುವರಿಯಾಗಿ, ಐಟಿಆರ್ ಒಬ್ಬ ವ್ಯಕ್ತಿಯು ವರ್ಷಗಳಾದ್ಯಂತ ಮತ್ತು ವಿವಿಧ ಮೂಲಗಳ ಮೂಲಕ ಗಳಿಸುವ ಸಂಗ್ರಹಿತ ಇನ್‌ಕಮ್‌ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.
  • ವೀಸಾ ಪಡೆಯಲು: ಯುಕೆ, ಯುಎಸ್, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ಕೆಲವು ವಿದೇಶಗಳ ಎಂಬೆಸ್ಸಿಗಳು ವೀಸಾಗಳನ್ನು ಪ್ರೊಸೆಸ್ ಮಾಡಲು ಹಿಂದಿನ ವರ್ಷದ ಐಟಿಆರ್ ರಸೀದಿಗಳನ್ನು ಕೇಳುತ್ತವೆ. ನೀವು ಆ ದೇಶಗಳಲ್ಲಿ ವಾಸಿಸುವಾಗ ನಿಮ್ಮನ್ನು ನೋಡಿಕೊಳ್ಳಲು ನೀವು ಸಮರ್ಥರಾಗಿದ್ದೀರಿ ಎಂದು ಅವರಿಗೆ ಭರವಸೆ ನೀಡಲು ಇದು ಸಹಾಯ ಮಾಡುತ್ತದೆ.
  • ಮುಂದಿನ ಹಣಕಾಸು ವರ್ಷದಲ್ಲಿ ಎದುರಿಸಿದ ನಷ್ಟವನ್ನು ಸರಿದೂಗಿಸಲು: ನೀವು ಐಟಿಆರ್ ಫೈಲ್ ಮಾಡದ ಹೊರತು ಮುಂದಿನ ಹಣಕಾಸು ವರ್ಷಕ್ಕೆ ಯಾವುದೇ ನಷ್ಟವನ್ನು ಮುಂದುವರಿಸಲು ಸಾಧ್ಯವಿಲ್ಲ. ಹೀಗಾಗಿ, ರಿಟರ್ನ್ಸ್ ಫೈಲ್ ಮಾಡುವುದು ಮುಖ್ಯ ಇದರಿಂದ ನೀವು ಮುಂದಿನ ವರ್ಷಗಳಲ್ಲಿ ನಷ್ಟವನ್ನು ಕ್ಲೈಮ್ ಮಾಡಬಹುದು.
  • ಕ್ಲೈಮ್ ಟ್ಯಾಕ್ಸ್ ರಿಫಂಡ್: ಇನ್‌ಕಮ್‌ ಟ್ಯಾಕ್ಸ್ ರಿಫಂಡ್ ಸಾಮಾನ್ಯ ಪ್ರಕ್ರಿಯೆಯಾಗಿದೆ ಮತ್ತು ಬಹುತೇಕರು ಇದನ್ನು ಪ್ರತಿವರ್ಷ ಮಾಡುತ್ತಾರೆ. ತಮ್ಮ ಟ್ಯಾಕ್ಸ್ ಲಯಬಿಲಿಟಿಗಿಂತ ಹೆಚ್ಚಿನದನ್ನು ಪಾವತಿಸಿದ ಟ್ಯಾಕ್ಸ್‌ಪೇಯರ್‌ಗಳು ರಿಫಂಡ್ ಕ್ಲೈಮ್ ಮಾಡಲು ಅರ್ಹರಾಗುತ್ತಾರೆ.
  • ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್‌ಗಳನ್ನು ಪಡೆಯುವುದು: ವಿದೇಶಿ ಅಥವಾ ಹೆಚ್ಚಿನ ಮೌಲ್ಯದ ಟ್ರಾನ್ಸಾಕ್ಷನ್‌ಗಳಿಗೆ, ಮುಖ್ಯವಾಗಿ ಕೆಲವು ಸ್ವತ್ತುಗಳ ಮಾರಾಟ ಮತ್ತು ಟ್ರಾನ್ಸ್‌ಫರ್‌ಗಾಗಿ, ವ್ಯಕ್ತಿಯು ಆ್ಯಕ್ಟ್‌ನ ಸೆಕ್ಷನ್ 281ರ ಅಡಿಯಲ್ಲಿ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಅನ್ನು ಒದಗಿಸಬೇಕಾಗುತ್ತದೆ. ನಿಯಮಿತ ಐಟಿಆರ್ ಫೈಲ್ ಮಾಡುವವರು ಮಾತ್ರ ಟ್ಯಾಕ್ಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಅನ್ನು ಪಡೆಯಬಹುದು.
  • ಸರ್ಕಾರಿ ಟೆಂಡರ್‌ಗಳಿಗೆ ಅರ್ಹರು: ಟೆಂಡರ್ ಫೈಲಿಂಗ್ ಮೂಲಕ ಯಾವುದೇ ಸರ್ಕಾರಿ ಯೋಜನೆಗಳನ್ನು ಕೈಗೊಳ್ಳಲು ಬಯಸಿದರೆ ಕಳೆದ ಕೆಲವು ವರ್ಷಗಳ ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ ಅನ್ನು ನಿರ್ಣಾಯಕವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ನಿಯಮಿತ ಐಟಿಆರ್ ಅಂತಹ ಪ್ರಮುಖ ಟೆಂಡರ್‌ಗಳಿಗೆ ಅರ್ಹರನ್ನಾಗಿ ಮಾಡುತ್ತದೆ.

[ಮೂಲ 1]

[ಮೂಲ 2]

ಐಟಿಆರ್ ಫೈಲ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂದು ಚೆಕ್ ಮಾಡುವುದು ಹೇಗೆ?

ನೀವು ಹಿಂದಿನ ವರ್ಷಗಳ ಐಟಿಆರ್ ಅನ್ನು ಫೈಲ್ ಮಾಡಿದ್ದೀರಾ ಎಂದು ಪರಿಶೀಲಿಸಲು, ಐಟಿಆರ್ ಫೈಲ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಹೇಗೆ ಚೆಕ್ ಮಾಡುವುದು ಎಂಬುದರ ಕುರಿತು ನೀವು ಕೆಳಗಿನ ಹಂತಗಳನ್ನು ಅನುಸರಿಸಬೇಕು.

ಹಂತ 1: ಅಧಿಕೃತ ಐಟಿಆರ್ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: ಪ್ಯಾನ್ ಸಂಖ್ಯೆ ಮತ್ತು ಪಾಸ್‌ವರ್ಡ್‌ನೊಂದಿಗೆ ಲಾಗಿನ್ ಆಗಿ’

ಹಂತ 3: ಈ ಕೆಳಗಿನ ಮಾರ್ಗವನ್ನು ಆಯ್ಕೆ ಮಾಡಿ: ಇ-ಫೈಲ್>ಇನ್‌ಕಮ್‌ ಟ್ಯಾಕ್ಸ್ ರಿಟರ್ನ್>ವ್ಯೂ ಫೈಲ್‌ಡ್‌ ರಿಟರ್ನ್.

ಹಂತ 4: ಮೇಲಿನ ಆಯ್ಕೆಯು ಇನ್‌ಕಮ್‌ ಟ್ಯಾಕ್ಸ್ ಪೋರ್ಟಲ್‌ನಲ್ಲಿ ಫೈಲ್ ಮಾಡಿದ ಎಲ್ಲಾ ಇನ್‌ಕಮ್‌ ಟ್ಯಾಕ್ಸ್ ರಿಟರ್ನ್ ಅನ್ನು ತೋರಿಸುತ್ತದೆ

ಇನ್‌ಕಮ್‌ ಟ್ಯಾಕ್ಸ್‌ ಫೈಲ್ ಮಾಡದಿರುವುದರ ಪರಿಣಾಮಗಳು

ಐಟಿಆರ್ ಫೈಲ್ ಮಾಡದಿರುವುದರ ಪರಿಣಾಮಗಳು ಇಲ್ಲಿವೆ.    

ಸ್ಯಾಲರೀಡ್ ವ್ಯಕ್ತಿಗೆ

ಮೌಲ್ಯಮಾಪನ ವರ್ಷದ ಜುಲೈ 31ರ ನಂತರ ಐಟಿಆರ್ ಫೈಲ್ ಮಾಡಿದರೆ, ವಿಳಂಬ ಶುಲ್ಕ ರೂ.5,000. ಹೆಚ್ಚುವರಿಯಾಗಿ, ಒಟ್ಟು ವಾರ್ಷಿಕ ಇನ್‌ಕಮ್ ರೂ.5 ಲಕ್ಷಕ್ಕಿಂತ ಕಡಿಮೆ ಇರುವ ಜನರಿಗೆ, ಗರಿಷ್ಠ ಪೆನಲ್ಟಿ ರೂ.1,000ವರೆಗೆ ಇರುತ್ತದೆ.

ಸ್ವ-ಉದ್ಯೋಗಿಗಳಿಗೆ

ಸ್ವ ಉದ್ಯೋಗಿಗಳಿಗೆ ನಿಯಮವು ಮೇಲಿನಂತೆಯೇ ಇದೆ. ಸಾಮಾನ್ಯ ವಿಳಂಬ ಪೇಮೆಂಟ್ ಸಂದರ್ಭದಲ್ಲಿ ₹ 5,000 ಪೆನಲ್ಟಿ ಅನ್ನು ಪಾವತಿಸಬೇಕು. ಮತ್ತು, ನಿಮ್ಮ ಇನ್‌ಕಮ್‌ ₹5 ಲಕ್ಷವನ್ನು ಮೀರದಿದ್ದರೆ, ನೀವು ಕೇವಲ ₹1000 ಪಾವತಿಸಬೇಕಾಗುತ್ತದೆ.

ಕಂಪನಿಗಳಿಗೆ

ಐಟಿಆರ್ ವಿಳಂಬ ಪೇಮೆಂಟ್ ನಿಯಮವು ಕಂಪನಿಗಳಿಗೂ ಒಂದೇ ಆಗಿರುತ್ತದೆ. ರೂ.5,000ಗಳ ಪೆನಲ್ಟಿ ವಿಧಿಸಲಾಗುತ್ತದೆ ಆದರೆ ಇನ್‌ಕಮ್‌ ರೂ.5 ಲಕ್ಷಕ್ಕಿಂತ ಕಡಿಮೆಯಿದ್ದರೆ, ನೀವು ರೂ.1000 ದಂಡವನ್ನು ಪಾವತಿಸಬೇಕಾಗುತ್ತದೆ.

ಸೀನಿಯರ್ ಸಿಟಿಜನ್‌ಗಳಿಗೆ

ಸೀನಿಯರ್ ಸಿಟಿಜನ್‌ಗಳು ಅಂತಿಮ ದಿನಾಂಕದೊಳಗೆ ತಮ್ಮ ಐಟಿಆರ್ ಡಿಕ್ಲೇರ್ ಮಾಡಲು ವಿಫಲವಾದರೆ ರೂ.5,000ಗಳ ವಿಳಂಬ ಪೆನಲ್ಟಿ ಅನ್ನು ಪಾವತಿಸಬೇಕಾಗುತ್ತದೆ ಮತ್ತು ಅವರ ಇನ್‌ಕಮ್‌ ರೂ.5 ಲಕ್ಷಕ್ಕಿಂತ ಕಡಿಮೆಯಿದ್ದರೆ, ರೂ.1000 ದಂಡವನ್ನು ವಿಧಿಸಲಾಗುತ್ತದೆ.

ನಿಗದಿತ ಅಮೌಂಟ್ ಅನ್ನು ಅದರ ಗಡುವಿನೊಳಗೆ ಪೂರೈಸಲು ನೀವು ವಿಫಲವಾದಾಗ ಐಟಿಆರ್ ಫೈಲ್ ಮಾಡದಿದ್ದರೆ ಏನಾಗುತ್ತದೆ ಎಂಬುದನ್ನು ಯಾವಾಗಲೂ ಚೆಕ್ ಮಾಡಿ.

[ಮೂಲ]

ನಾನು ದಿನಾಂಕವನ್ನು ತಪ್ಪಿಸಿಕೊಂಡರೆ ಯಾವುದೇ ಶುಲ್ಕಗಳು ಮತ್ತು ಪೆನಲ್ಟಿಗಳಿವೆಯೇ?

ಅಂತಿಮ ದಿನಾಂಕದೊಳಗೆ ಐಟಿಆರ್ ಫೈಲ್ ಮಾಡದಿದ್ದರೆ, ಟ್ಯಾಕ್ಸ್‌ಪೇಯರ್‌ಗಳು ಅಗತ್ಯ ದಂಡವನ್ನು ತೆರವುಗೊಳಿಸಿದ ನಂತರವೂ ರಿಟರ್ನ್ಸ್ ಫೈಲ್ ಮಾಡಬಹುದಾಗಿದೆ. ಈ ಫೈಲಿಂಗ್ ಅನ್ನು ವಿಳಂಬಿತ ರಿಟರ್ನ್ಸ್ ಎಂದು ಕರೆಯಲಾಗುತ್ತದೆ; ಆದಾಗ್ಯೂ, ನೀವು ಈ ಕೆಳಗಿನ ಪರಿಣಾಮಗಳನ್ನು ಎದುರಿಸಬೇಕಾಗಿರುವುದರಿಂದ 31 ಜುಲೈ 2023ರ ಐಟಿಆರ್ ಗಡುವನ್ನು ತಪ್ಪಿಸಿಕೊಳ್ಳುವುದನ್ನು ಧೃಡವಾಗಿ ಶಿಫಾರಸು ಮಾಡಲಾಗುವುದಿಲ್ಲ:

  • ಳಂಬ ಶುಲ್ಕ: 2023ರ ಜುಲೈ 31ರ ಐಟಿಆರ್ ಗಡುವನ್ನು ನೀವು ತಪ್ಪಿಸಿಕೊಂಡರೆ ಸೆಕ್ಷನ್ 234F ಅಡಿಯಲ್ಲಿ ನೀವು ರೂ.5,000ಗಳ ವಿಳಂಬ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ, ನಿಮ್ಮ ಒಟ್ಟು ಇನ್‌ಕಮ್‌ ರೂ.5 ಲಕ್ಷಕ್ಕಿಂತ ಕಡಿಮೆಯಿದ್ದರೆ, ದಂಡವನ್ನು ರೂ.1,000ಕ್ಕೆ ಇಳಿಸಲಾಗುತ್ತದೆ. [ಮೂಲ]
  • ಜೈಲು ಶಿಕ್ಷೆ: ನಿಗದಿತ ಹಣಕಾಸು ವರ್ಷದಲ್ಲಿ ನೀವು ಉದ್ದೇಶಪೂರ್ವಕವಾಗಿ ಐಟಿಆರ್ ಫೈಲ್ ಮಾಡಲು ವಿಫಲವಾದರೆ, ಇನ್‌ಕಮ್‌ ಟ್ಯಾಕ್ಸ್ ಅಧಿಕಾರಿ ನಿಮ್ಮ ವಿರುದ್ಧ ಆರೋಪಗಳನ್ನು ದಾಖಲಿಸಬಹುದು, ಇದು ದಂಡದೊಂದಿಗೆ 3 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆಗೆ ಕಾರಣವಾಗಬಹುದು. ನೀವು ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಗೆ ದೊಡ್ಡ ಪ್ರಮಾಣದ ಟ್ಯಾಕ್ಸ್‌ ಪಾವತಿಸಲು ಬಾಕಿ ಇದ್ದರೆ, ಜೈಲು ಶಿಕ್ಷೆ 7 ವರ್ಷಗಳವರೆಗೆ ವಿಸ್ತರಿಸಬಹುದು. [ಮೂಲ]
  • ಹೆಚ್ಚುವರಿ ಇಂಟರೆಸ್ಟ್: ಅಂತಿಮ ದಿನಾಂಕದ ಮೊದಲು ನಿಮ್ಮ ರಿಟರ್ನ್ ಅನ್ನು ಫೈಲ್ ಮಾಡಲು ವಿಫಲವಾದರೆ, ಪಾವತಿಸದ ಟ್ಯಾಕ್ಸ್ ಅಮೌಂಟ್ ಮೇಲೆ ಸೆಕ್ಷನ್ 234A @ 1% ಪ್ರತಿ ತಿಂಗಳು ಅಥವಾ ಭಾಗಶಃ ತಿಂಗಳ ಇಂಟರೆಸ್ಟ್ ಅನ್ನು ವಿಧಿಸಲಾಗುತ್ತದೆ. [ಮೂಲ]
  • ನಷ್ಟ ಹೊಂದಾಣಿಕೆ: ನೀವು ಶೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್‌ಗಳು ಅಥವಾ ನಿಮ್ಮ ಯಾವುದೇ ಬಿಸಿನೆಸ್‌ಗಳಿಂದ ನಷ್ಟವನ್ನು ಅನುಭವಿಸಿದರೆ, ನಂತರ ನೀವು ಅವುಗಳನ್ನು ಕ್ಯಾರಿ ಫಾರ್ವರ್ಡ್ ಮಾಡಬಹುದು ಮತ್ತು ನಿಮ್ಮ ಟ್ಯಾಕ್ಸ್ ಲಯಬಿಲಿಟಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಲು ನಿಮ್ಮ ಮುಂದಿನ ಹಣಕಾಸು ವರ್ಷದ ಇನ್‌ಕಮ್‌ನೊಂದಿಗೆ ಅವುಗಳನ್ನು ಡಿಕ್ಲೇರ್ ಮಾಡಬಹುದು.
     ಆದಾಗ್ಯೂ, ನೀವು ಐಟಿಆರ್ ಗಡುವನ್ನು ಕಳೆದುಕೊಂಡರೆ, ಈ ಸೌಲಭ್ಯವು ನಿಮಗೆ ಲಭ್ಯವಿರುವುದಿಲ್ಲ. 
  • ಬಿಲೇಟೆಡ್ ರಿಟರ್ನ್: ಅಂತಿಮ ದಿನಾಂಕದ ನಂತರ ಫೈಲ್ ಮಾಡಿದ ಐಟಿಆರ್ ಅನ್ನು ಬಿಲೇಟೆಡ್ ರಿಟರ್ನ್ ಎಂದು ಕರೆಯಲಾಗುತ್ತದೆ. ಇದರ ಅಡಿಯಲ್ಲಿ, ಮೇಲೆ ತಿಳಿಸಿದ ದರಗಳ ಪ್ರಕಾರ ನೀವು ಇನ್ನೂ ತಡವಾದ ಶುಲ್ಕ ಮತ್ತು ಇಂಟರೆಸ್ಟ್ ಅನ್ನು ಪಾವತಿಸಬೇಕಾಗುತ್ತದೆ ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ನಷ್ಟವನ್ನು ಕ್ಯಾರಿ ಫಾರ್ವರ್ಡ್ ಮಾಡಲು ಸಾಧ್ಯವಿಲ್ಲ.
     ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಯ ಪ್ರಕಾರ, ಬಿಲೇಟೆಡ್ ರಿಟರ್ನ್ ಅನ್ನು ಫೈಲ್ ಮಾಡುವ ಅಂತಿಮ ದಿನಾಂಕವು ಮೌಲ್ಯಮಾಪನ ವರ್ಷದ ಡಿಸೆಂಬರ್ 31 ಆಗಿದೆ (ಸರ್ಕಾರವು ವಿಸ್ತರಿಸದ ಹೊರತು). ಹಣಕಾಸು ವರ್ಷ 2022-23ಕ್ಕೆ, ಬಿಲೇಟೆಡ್ ರಿಟರ್ನ್ ಗಡುವು 31 ಡಿಸೆಂಬರ್ 2023 ಆಗಿದೆ. [ಮೂಲ]

ಹಿಂದಿನ ವರ್ಷಗಳಲ್ಲಿ ಇನ್‌ಕಮ್‌ ಟ್ಯಾಕ್‌ಸ್ ಅನ್ನು ಫೈಲ್ ಮಾಡದಿದ್ದರೆ ಏನು?

ಹಿಂದಿನ ವರ್ಷಗಳಲ್ಲಿ ಐಟಿಆರ್ ಅನ್ನು ಫೈಲ್ ಮಾಡದಿದ್ದರೆ, ನಂತರ ನೀವು ಐಟಿ ಇಲಾಖೆಯ ಆನ್‌ಲೈನ್ ಪೋರ್ಟಲ್‌ನಲ್ಲಿ ವಿಳಂಬವನ್ನು ಮನ್ನಿಸಲು ಅಪ್ಲೈ ಮಾಡುವ ಮೂಲಕ ಅದನ್ನು ಆನ್‌ಲೈನ್‌ನಲ್ಲಿ ಫೈಲ್ ಮಾಡಬಹುದು. ಆದಾಗ್ಯೂ, ನೀವು ಪ್ರಸಕ್ತ ಹಣಕಾಸು ವರ್ಷದ ಹಿಂದಿನ ಎರಡು ವರ್ಷಗಳವರೆಗೆ ಮಾತ್ರ ಐಟಿಆರ್ ಅನ್ನು ಫೈಲ್ ಮಾಡಬಹುದು. ಉದಾಹರಣೆಗೆ, ನೀವು ಹಣಕಾಸು ವರ್ಷ 2021-22 ಮತ್ತು ಹಣಕಾಸು ವರ್ಷ 2022-23ಗಾಗಿ ನಿಮ್ಮ ಐಟಿಆರ್ ಅನ್ನು ಫೈಲ್ ಮಾಡಲು ಬಯಸಿದರೆ, ನಂತರ ನೀವು ಹಣಕಾಸು ವರ್ಷ 2023-24ರ ಅಂತ್ಯದ ವೇಳೆಗೆ, ಅಂದರೆ 31ನೇ ಮಾರ್ಚ್ 2024ರೊಳಗೆ ಫೈಲ್ ಮಾಡಬೇಕು.

ಆದಾಗ್ಯೂ, ಪ್ರಸಕ್ತ ಹಣಕಾಸು ವರ್ಷದ ಜುಲೈ 31ರ ಗಡುವನ್ನು ತಪ್ಪಿಸಿಕೊಂಡಿದ್ದಕ್ಕಾಗಿ ನೀವು ₹5000 ದಂಡವನ್ನು ಪಾವತಿಸಬೇಕಾಗುತ್ತದೆ. ನೀವು ಫೈಲ್ ಮಾಡದಿರಲು ನಿಜವಾದ ಕಾರಣವಿದ್ದರೆ ಮತ್ತು ಇನ್‌ಕಮ್ ಟ್ಯಾಕ್ಸ್ ಅಧಿಕಾರಿ ನಿಮ್ಮ ವಿವರಣೆಯಿಂದ ತೃಪ್ತರಾಗಿದ್ದರೆ, ನೀವು ಯಾವುದೇ ದಂಡವನ್ನು ಪಾವತಿಸಬೇಕಾಗಿಲ್ಲ.

ಯಾವುದೇ ಶುಲ್ಕಗಳು ಮತ್ತು ಪೆನಲ್ಟಿಗಳಿವೆಯೇ?

2023-24ರ ಮೌಲ್ಯಮಾಪನ ವರ್ಷಕ್ಕೆ, ಟ್ಯಾಕ್ಸ್‌ಪೇಯರ್ ಆತ/ಆಕೆ ಗಡುವಿನ ನಂತರ ಆದರೆ ಡಿಸೆಂಬರ್ 31 ಅಥವಾ ಅದಕ್ಕಿಂತ ಮೊದಲು ಐಟಿಆರ್ ಡಿಕ್ಲೇರ್ ಮಾಡಿದರೆ ₹5000 ಪಾವತಿಸಲು ಲಯಬಲ್ ಆಗಿರುತ್ತಾರೆ.

ಕೊನೆಯಲ್ಲಿ ಹೇಳುವುದಾದರೆ, ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ ಫೈಲ್ ಮಾಡದಿದ್ದರೆ, ಸಿಟಿಜನ್‌ಗಳು ಮತ್ತು ಬಿಸಿನೆಸ್‌ಗಳು ಪೆನಲ್ಟಿ ಅನ್ನು ಪಾವತಿಸುವ ಸಾಧ್ಯತೆ ಇರುತ್ತದೆ. ಇದನ್ನು ತಪ್ಪಿಸಲು, ಎಲ್ಲಾ ವ್ಯಕ್ತಿಗಳು ತಮ್ಮ ಇನ್‌ಕಮ್‌ ಟ್ಯಾಕ್ಸ್‌ ಬಾಕಿಗಳನ್ನು ತ್ವರಿತವಾಗಿ ತೆರವುಗೊಳಿಸಬೇಕು. ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಫೈಲ್ ಮಾಡದಿರುವುದು ಗಂಭೀರ ಅಪರಾಧವಾಗಿದ್ದು, ಅಪರಾಧದ ಉಪೇಕ್ಷೆಯ ಕುರಿತು ಜನರು ಜಾಗೃತರಾಗಿರಬೇಕು.

[ಮೂಲ]

ಐಟಿಆರ್ ಅನ್ನು ಫೈಲ್ ಮಾಡದಿರುವ ಪರಿಣಾಮಗಳ ಬಗ್ಗೆ ಪದೇಪದೇ ಕೇಳಲಾದ ಪ್ರಶ್ನೆಗಳು

ನಾನು ಭಾರತದಲ್ಲಿ ಇನ್‌ಕಮ್‌ ಟ್ಯಾಕ್ಸ್‌ ಅನ್ನು ಪಾವತಿಸದಿದ್ದರೆ ಏನಾಗುತ್ತದೆ?

ಒಬ್ಬ ವ್ಯಕ್ತಿಯು ಐಟಿಆರ್ ಅನ್ನು ಫೈಲ್ ಮಾಡದಿದ್ದರೆ ಮತ್ತು ಐಟಿಆರ್ ದಿನಾಂಕವನ್ನು ತಪ್ಪಿಸಿಕೊಂಡರೆ, ಅವನ ರಿಟರ್ನ್ಸ್ ಅನ್ನು ತಡವಾಗಿ ಫೈಲ್ ಮಾಡಲಾಗುತ್ತದೆ ಮತ್ತು ರಿಫಂಡ್‌ಗಳು ಯಾವುದಾದರೂ ಇದ್ದರೆ, ತಡವಾಗಿ ಪ್ರೊಸೆಸ್ ಆಗುತ್ತದೆ. ಅಲ್ಲದೆ, ಸೆಕ್ಷನ್ 234F ಅಡಿಯಲ್ಲಿ ತಡವಾದ ಫೈಲಿಂಗ್ ಶುಲ್ಕ ಅಪ್ಲಿಕೇಬಲ್ ಆಗುತ್ತದೆ.

[ಮೂಲ]

ಐಟಿಆರ್ ಫೈಲ್ ಮಾಡದಿರುವುದು ಜೈಲು ಶಿಕ್ಷೆಗೆ ಕಾರಣವಾಗಬಹುದೇ?

ಐಟಿಆರ್ ಅನ್ನು ಫೈಲ್ ಮಾಡದಿರುವುದು ಜೈಲು ಶಿಕ್ಷೆಗೆ ಕಾರಣವಾಗಬಹುದು, ಅಲ್ಲಿ ಅವಧಿಯು 3 ತಿಂಗಳಿಂದ 2 ವರ್ಷಗಳವರೆಗೆ ಅಥವಾ ಹೆಚ್ಚಿನ ಟ್ಯಾಕ್ಸ್ ಲಯಬಿಲಿಟಿಯ ಸಂದರ್ಭದಲ್ಲಿ 7 ವರ್ಷಗಳವರೆಗೆ ಬದಲಾಗಬಹುದು.

[ಮೂಲ]