ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಐಟಿಆರ್ ಫೈಲ್ ಮಾಡದಿರುವುದಕ್ಕೆ ಪೆನಲ್ಟಿ ಏನು?

ನಿಮ್ಮ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್ಸ್ ಫೈಲ್ ಮಾಡುವುದರೊಂದಿಗೆ ಬಹಳಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ. ಆದಾಗ್ಯೂ, ವಿಳಂಬ ಪೇಮೆಂಟ್‌ಗಳು ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ವಿವಿಧ ರೀತಿಯ ಪೆನಲ್ಟಿಗಳಿಗೆ ಕಾರಣವಾಗುತ್ತವೆ.

ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಪ್ಲಿಕೇಬಲ್‌ ಆಗುವ ಐಟಿಆರ್ ಅನ್ನು ಫೈಲ್ ಮಾಡದಿರುವುದಕ್ಕಾಗಿನ ತಡವಾದ ಪೆನಲ್ಟಿಗಳ ಪ್ರತಿಯೊಂದು ವಿಧವನ್ನೂ ನಾವು ಸಂಗ್ರಹಿಸಿದ್ದೇವೆ. ಯಾವುದು ನಿಮಗೆ ಅಪ್ಲೈ ಆಗುತ್ತದೆ ಮತ್ತು ಈ ಪೇಮೆಂಟ್ ಅನ್ನು ನೀವು ಹೇಗೆ ತೆರವುಗೊಳಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಓದುವುದನ್ನು ಮುಂದುವರಿಸಿ.

ಐಟಿಆರ್‌ ಅನ್ನು ಫೈಲ್ ಮಾಡದಿರುವುದಕ್ಕಾಗಿ ಸೆಕ್ಷನ್‌-ವೈಸ್ ಪೆನಲ್ಟಿಗಳು ಯಾವುವು?

ತಡವಾಗಿ ಐಟಿಆರ್ ಫೈಲಿಂಗ್‌ನ ಷರತ್ತುಗಳನ್ನು ಅವಲಂಬಿಸಿ ನೀವು ಎದುರಿಸಬಹುದಾದ ವಿವಿಧ ರೀತಿಯ ಶುಲ್ಕಗಳ ಬಗ್ಗೆ ತಿಳಿಯಲು ಕೆಳಗಿನ ಕೋಷ್ಟಕವನ್ನು ನೋಡಿ.

ಸೆಕ್ಷನ್‌ಗಳು ಅಪರಾಧದ ಸ್ವರೂಪ ವಿಧಿಸಲಾಗುವ ಪೆನಲ್ಟಿ
ಸೆಕ್ಷನ್ 234F ನೀಡಲಾದ ಅಂತಿಮ ದಿನಾಂಕದ ಹಿಂದೆ ಐಟಿಆರ್ ಫೈಲ್ ಮಾಡುವುದು ಐಟಿಆರ್ ಅನ್ನು ಮೌಲ್ಯಮಾಪನ ವರ್ಷದ ಡಿಸೆಂಬರ್ 31ರ ಮೊದಲು ವರದಿ ಮಾಡಿದರೆ ₹5000, ಐಟಿಆರ್ ಡಿಸೆಂಬರ್ 31ರ ನಂತರ ಆದರೆ ಮೌಲ್ಯಮಾಪನ ವರ್ಷದ ಮಾರ್ಚ್ 31ರ ಮೊದಲು ವರದಿ ಮಾಡಿದರೆ ₹10,000. ಇದು ₹5 ಲಕ್ಷಕ್ಕಿಂತ ಹೆಚ್ಚಿನ ಇನ್‌ಕಮ್‌ ಹೊಂದಿರುವವರಿಗೆ. ಇದಕ್ಕಿಂತ ಕಡಿಮೆ ಇನ್‌ಕಮ್‌ ಹೊಂದಿರುವವರಿಗೆ ₹1000 ಪೆನಲ್ಟಿ.
ಸೆಕ್ಷನ್ 234A ವ್ಯಕ್ತಿಯೊಬ್ಬರು ಅಂತಿಮ ದಿನಾಂಕದೊಳಗೆ ಐಟಿಆರ್ ಅನ್ನು ಫೈಲ್ ಮಾಡಲು ವಿಫಲರಾಗಿದ್ದಾರೆ ಮತ್ತು ಬಾಕಿ ಪಾವತಿಸದ ಟ್ಯಾಕ್ಸ್ ಅನ್ನು ಹೊಂದಿದ್ದಾರೆ ಅಂತಿಮ ದಿನಾಂಕದಿಂದ ಪಾರ್ಟ್ ಆಫ್‌ ದಿ ಮಂತ್ ಅಥವಾ ಪ್ರತೀ ತಿಂಗಳಿಗೆ ಬಾಕಿ ಇರುವ ಟ್ಯಾಕ್ಸ್ ಅಮೌಂಟ್ ಮೇಲಿನ ಇಂಟರೆಸ್ಟ್ 1%
ಸೆಕ್ಷನ್ 271H ನೀಡಲಾದ ಅಂತಿಮ ದಿನಾಂಕದೊಳಗೆ ಟಿಡಿಎಸ್ ಮತ್ತು ಟಿಸಿಎಸ್ ರಿಟರ್ನ್‌ಗಳನ್ನು ಫೈಲ್ ಮಾಡಲು ವಿಫಲ ರೂ.10,000-ರೂ.1,00,000, ಸೆಕ್ಷನ್ 234E ಅಡಿಯಲ್ಲಿ ತಡವಾಗಿ ಫೈಲ್ ಮಾಡುವ ಪೆನಲ್ಟಿಯನ್ನು ಹೊರತುಪಡಿಸಿ, TDS/TCS ಪಾವತಿಸುವವರೆಗೆ ರೂ.200/ದಿನ
ಸೆಕ್ಷನ್ 270A ಟ್ಯಾಕ್ಸೇಬಲ್ ಇನ್‌ಕಮ್‌ ಹೊಂದಿರುವ ವ್ಯಕ್ತಿಯು ತನ್ನ ಐಟಿಆರ್‌ ಫೈಲ್ ಮಾಡಲು ವಿಫಲನಾಗುತ್ತಾನೆ ಅಥವಾ ರಿಟರ್ನ್ಸ್‌ನಲ್ಲಿ ತನ್ನ ಇನ್‌ಕಮ್‌ ಅನ್ನು ಕಡಿಮೆ ವರದಿ ಮಾಡಿರುವುದು ಪತ್ತೆಯಾಗಿದೆ. ಯಾವುದೇ ರಿಟರ್ನ್ ಅನ್ನು ಒದಗಿಸದ ಇನ್‌ಕಮ್‌ ಮೇಲಿನ ಪಾವತಿಸಬೇಕಾದ ಒಟ್ಟು ಟ್ಯಾಕ್ಸ್‌ನ 50%

ಮೇಲಿನ ಕೋಷ್ಟಕದಲ್ಲಿ ತಿಳಿಸಲಾದ ಪ್ರತಿಯೊಂದು ಐಟಿಆರ್‌ ಪೆನಲ್ಟಿಯು ಹಲವಾರು ಷರತ್ತುಗಳಿಗೆ ಒಳಪಟ್ಟಿರುತ್ತದೆ. ಇವುಗಳಲ್ಲಿ ಒಂದು ಟ್ಯಾಕ್ಸ್‌ಪೇಯರ್‌ ವಿಧವಾಗಿದೆ, ಇದನ್ನು ಅವಲಂಬಿಸಿ ಹಲವಾರು ಮಾರ್ಪಾಡುಗಳನ್ನು ಪರಿಗಣಿಸಬಹುದು.

[ಮೂಲ 1]

[ಮೂಲ 2]

[ಮೂಲ 3]

[ಮೂಲ 4]

ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್‌ಗಳನ್ನು ತಡವಾಗಿ ಅಥವಾ ಫೈಲ್ ಮಾಡದಿರುವುದಕ್ಕೆ ಟ್ಯಾಕ್ಸ್‌ಪೇಯರ್‌-ವೈಸ್‌ ಪೆನಲ್ಟಿ ಎಂದರೇನು?

ಟ್ಯಾಕ್ಸ್‌ಪೇಯರ್‌ಗಳ ವರ್ಗಗಳ ಪಟ್ಟಿ ಮತ್ತು ಅಂತಿಮ ದಿನಾಂಕದೊಳಗೆ ಇನ್‌ಕಮ್‌ ಟ್ಯಾಕ್ಸ್‌ ರಿಟರ್ನ್‌ಗಳನ್ನು ಫೈಲ್ ಮಾಡದಿರುವುದಕ್ಕಾಗಿ ಅವರ ಪೆನಲ್ಟಿಗಳು ಹೀಗಿವೆ.

  • ಸ್ಯಾಲರೀಡ್ ವ್ಯಕ್ತಿಗಳು: ಇಲ್ಲಿ, 3 ವರ್ಗದ ವ್ಯಕ್ತಿಗಳನ್ನು ಪರಿಗಣಿಸಲಾಗುತ್ತದೆ.
    • ಒಟ್ಟು ವಾರ್ಷಿಕ ಇನ್‌ಕಮ್‌ ₹ 2.5 ಲಕ್ಷಕ್ಕಿಂತ ಕಡಿಮೆ: ಪೆನಲ್ಟಿ ಇಲ್ಲ (ನಿಲ್ ರಿಟರ್ನ್‌ಗೆ ಐಟಿಆರ್ ಪೆನಲ್ಟಿ ಇಲ್ಲ)
    • ಒಟ್ಟು ವಾರ್ಷಿಕ ಇನ್‌ಕಮ್‌ ₹ 5 ಲಕ್ಷಕ್ಕಿಂತ ಕಡಿಮೆ: ಗರಿಷ್ಠ ಪೆನಲ್ಟಿ ₹ 1,000 ಮೀರುವಂತಿಲ್ಲ
    • ₹ 5 ಲಕ್ಷಕ್ಕಿಂತ ಹೆಚ್ಚಿನ ವಾರ್ಷಿಕ ಇನ್‌ಕಮ್‌: ₹ 10,000ವರೆಗೆ
  • ಕಂಪನಿಗಳು: ₹ 10,000ವರೆಗೆ
  • ಸ್ವಯಂ ಉದ್ಯೋಗಿ ವ್ಯಕ್ತಿಗಳು: ₹ 10,000ವರೆಗೆ
  • ಸೀನಿಯರ್ ಸಿಟಿಜನ್‌ಗಳು: ಸೆಕ್ಷನ್ 234 ಎಫ್ ಅಡಿಯಲ್ಲಿ ಐಟಿಆರ್ ಅನ್ನು ಫೈಲ್ ಮಾಡದಿರುವುದಕ್ಕಾಗಿ ಹೇಳಲಾದ ಪೆನಲ್ಟಿಯು ಈ ಕೆಳಗಿನ ಮಾನದಂಡಗಳನ್ನು ಪೂರೈಸುವ ಸೀನಿಯರ್ ಸಿಟಿಜನ್‌ಗಳಿಗೆ ಮಾತ್ರ ಅಪ್ಲಿಕೇಬಲ್ ಆಗುತ್ತದೆ.
    •  ಒಟ್ಟು ವಾರ್ಷಿಕ ಇನ್‌ಕಮ್‌ ₹ 3 ಲಕ್ಷಕ್ಕಿಂತ ಹೆಚ್ಚಿರುವ 60-80 ವರ್ಷ ವಯಸ್ಸಿನವರು.
    •  ಒಟ್ಟು ವಾರ್ಷಿಕ ಇನ್‌ಕಮ್‌ ₹ 5 ಲಕ್ಷಕ್ಕಿಂತ ಹೆಚ್ಚಿರುವ 80 ವರ್ಷ ಮೇಲ್ಪಟ್ಟವರು.

ಈಗ, ಟ್ಯಾಕ್ಸೇಬಲ್ ಲಿಮಿಟ್ ಅನ್ನು ಮೀರದ ಗ್ರಾಸ್ ವಾರ್ಷಿಕ ಸ್ಯಾಲರಿಯನ್ನು ಹೊಂದಿರುವ ಬಹಳಷ್ಟು ವ್ಯಕ್ತಿಗಳು ಇದ್ದಾರೆ. ನೀವು ಅವರಲ್ಲಿ ಒಬ್ಬರಾಗಿದ್ದರೆ, ತಡವಾದ ಐಟಿಆರ್ ಫೈಲಿಂಗ್‌ನ ಪೆನಲ್ಟಿಯು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ನೀವು ಆಶ್ಚರ್ಯ ಪಡಬಹುದು. ಅದಕ್ಕೂ ನಮ್ಮ ಬಳಿ ಉತ್ತರವಿದೆ.

ಟ್ಯಾಕ್ಸೇಬಲ್‌ ಲಿಮಿಟ್‌ಗಿಂತ ಕಡಿಮೆ ಇನ್‌ಕಮ್‌ ಹೊಂದಿರುವ ಜನರು ತಡವಾದ ಐಟಿಆರ್ ಪೆನಲ್ಟಿಯನ್ನು ಪಾವತಿಸಬೇಕೇ?

ಸಾಮಾನ್ಯವಾಗಿ, ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಯು ವಿನಾಯಿತಿ ಲಿಮಿಟ್‌ಗಿಂತ ಕಡಿಮೆ ಇರುವ ಒಟ್ಟು ಗ್ರಾಸ್ ಇನ್‌ಕಮ್‌ ಹೊಂದಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಐಟಿಆರ್ ಫೈಲ್‌ ಮಾಡದಿರುವುದರ ಮೇಲೆ ಯಾವುದೇ ಪೆನಲ್ಟಿಯನ್ನು ವಿಧಿಸುವುದಿಲ್ಲ. ಆದಾಗ್ಯೂ, 2019ರ ಕೇಂದ್ರ ಬಜೆಟ್ ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನಲ್ಲಿ ಆರ್ಥಿಕ ವರ್ಷ 2020-21ರಿಂದ ಜಾರಿಗೆ ಬರುವಂತೆ ತಿದ್ದುಪಡಿಗಳನ್ನು ಪರಿಚಯಿಸಿದೆ, ಇದು ಟ್ಯಾಕ್ಸೇಬಲ್ ಇನ್‌ಕಮ್ ಅನ್ನು ಹೊಂದಿಲ್ಲದಿದ್ದರೂ ಈ ಕೆಳಗಿನ ಷರತ್ತುಗಳನ್ನು ಪೂರೈಸುವ ಟ್ಯಾಕ್ಸ್‌ಪೇಯರ್‌ಗಳಿಗೆ ಐಟಿಆರ್ ಫೈಲಿಂಗ್ ಅನ್ನು ಕಡ್ಡಾಯಗೊಳಿಸುತ್ತದೆ.

  • ರೂ.1 ಲಕ್ಷಕ್ಕಿಂತ ಹೆಚ್ಚಿನ ವಿದ್ಯುತ್ ಬಳಕೆಗಾಗಿ ಖರ್ಚು ಮಾಡಿದವರು
  • ವಿದೇಶ ಪ್ರಯಾಣಕ್ಕಾಗಿ ರೂ.2 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡಿದ ವ್ಯಕ್ತಿಗಳು
  • ಬ್ಯಾಂಕಿನಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಕರೆಂಟ್ ಖಾತೆಗಳಲ್ಲಿ ಒಟ್ಟು ರೂ.1 ಕೋಟಿಗಿಂತ ಹೆಚ್ಚಿನ ಡೆಪಾಸಿಟ್ ಹೊಂದಿರುವವರು
  • ಭಾರತೀಯ ನಿವಾಸಿಗಳಾಗಿದ್ದರೂ ವಿದೇಶಿ ಅಸೆಟ್‌ಗಳಿಂದ ಇನ್‌ಕಮ್‌ ಹೊಂದಿರುವವರು.

ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಇತ್ತೀಚಿನ ತಿದ್ದುಪಡಿಯಲ್ಲಿ ಸೇರಿಸಲಾದ ಈ ಯಾವುದೇ ಅಥವಾ ಇತರ ಷರತ್ತುಗಳನ್ನು ನೀವು ಪೂರೈಸಿದರೆ, ಐಟಿಆರ್ ಫೈಲ್ ಮಾಡದಿರುವುದಕ್ಕೆ ನೀವು ನಿಗದಿತ ಪೆನಲ್ಟಿಯನ್ನು ಪಾವತಿಸಬೇಕಾಗುತ್ತದೆ. ಈಗಾಗಲೇ ಹೇಳಿದಂತೆ, ಟ್ಯಾಕ್ಸೇಬಲ್ ಗ್ರಾಸ್ ಇನ್‌ಕಮ್‌ ಅನ್ನು ಹೊಂದಿರದವರಿಗೂ ಇದು ಅಪ್ಲೈ ಆಗುತ್ತದೆ.

ಐಟಿಆರ್ ಫೈಲ್ ಮಾಡಲು ಯಾವ ಷರತ್ತುಗಳು ನಿಮ್ಮನ್ನು ಲಯಬಲ್ ಮಾಡುತ್ತವೆ ಎಂದು ಈಗ ನಿಮಗೆ ತಿಳಿದಿದೆ, ನಿಗದಿತ ಅಂತಿಮ ದಿನಾಂಕದೊಳಗೆ ನಿಮ್ಮ ರಿಟರ್ನ್ಸ್ ಫೈಲ್ ಮಾಡಿರದಿದ್ದರೆ ಪೆನಲ್ಟಿಯನ್ನು ಪಾವತಿಸುವ ಪ್ರೊಸೆಸ್ ಅನ್ನು ಸಹ ನೀವು ತಿಳಿದಿರಬೇಕು.

[ಮೂಲ]

ಐಟಿಆರ್ ಪೆನಲ್ಟಿ ಪಾವತಿಸುವುದು ಹೇಗೆ?

ಆನ್‌ಲೈನ್ ಮತ್ತು ಆಫ್‌ಲೈನ್ ಪ್ರೊಸೆಸ್‌ಗಳ ಮೂಲಕ ನಿಮ್ಮ ತಡವಾದ ಐಟಿಆರ್ ಫೈಲಿಂಗ್ ಪೆನಲ್ಟಿಯನ್ನು ನೀವು ತೆರವುಗೊಳಿಸಬಹುದು. ಇನ್‌ಕಮ್‌ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡದ ಕಾರಣಕ್ಕಾಗಿನ ನಿಮ್ಮ ಪೆನಲ್ಟಿಯನ್ನು ತೆರವುಗೊಳಿಸುವ ಪ್ರೊಸೆಸ್ ಇಲ್ಲಿದೆ.

ಆನ್‌ಲೈನ್ ಪ್ರೊಸೆಸ್

ಹಂತ 1 : ಅಧಿಕೃತ ಇನ್‌ಕಮ್‌ ಟ್ಯಾಕ್ಸ್ ಇ-ಫೈಲಿಂಗ್‌ ಪೋರ್ಟಲ್‌ಗೆ ಭೇಟಿ ನೀಡಿ.

ಹಂತ 2: ಎಡ ಕಾಲಂನಲ್ಲಿ, "ಇ-ಪೇ ಟ್ಯಾಕ್ಸ್" ಮೇಲೆ ಕ್ಲಿಕ್ ಮಾಡಿ.

ಹಂತ 3: ಪೇಮೆಂಟ್ ಅನ್ನು ಮುಂದುವರಿಸಲು ನಿಮ್ಮನ್ನು ಎನ್ಎಸ್‌ಡಿಎಲ್ ವೆಬ್‌ಸೈಟ್‌ಗೆ ಮರುನಿರ್ದೇಶಿಸಬೇಕಾಗಿದೆ ಎಂಬ ಸಂದೇಶವನ್ನು ಪ್ರದರ್ಶಿಸುವ ಹೊಸ ವಿಂಡೋವನ್ನು ನೀವು ನೋಡುತ್ತೀರಿ. "ಕ್ಲಿಕ್ ಹಿಯರ್ ಟು ಗೋ ಟು ಪ್ರೊಟಿಯಾನ್ (ಹಿಂದೆ ಎನ್ಎಸ್‌ಡಿಎಲ್) ಟ್ಯಾಕ್ಸ್ ಪೇಮೆಂಟ್ ಪೇಜ್ ಫಾರ್ ಅದರ್ ಬ್ಯಾಂಕ್ಸ್" ಮೇಲೆ ಕ್ಲಿಕ್ ಮಾಡಿ.

ಹಂತ 4: ಈಗ, ನಿಮ್ಮನ್ನು ಎನ್ಎಸ್‌ಡಿಎಲ್ ವೆಬ್‌ಸೈಟ್‌ನಲ್ಲಿ ಹೊಸ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ, "ನಾನ್-ಟಿಡಿಎಸ್/ಟಿಸಿಎಸ್" ಅಡಿಯಲ್ಲಿ ಮಲ್ಟಿಪಲ್ ಚಲನ್ ಆಯ್ಕೆಗಳನ್ನು ಪ್ರದರ್ಶಿಸುತ್ತದೆ. "ಚಲನ್ ಸಂಖ್ಯೆ/ಐಟಿಎನ್ಎಸ್ 280" ಅಡಿಯಲ್ಲಿ "ಪ್ರೊಸೀಡ್" ಮೇಲೆ ಕ್ಲಿಕ್ ಮಾಡಿ.

ಹಂತ 5: ಮುಂದಿನ ಪೇಜ್ ಪೇಮೆಂಟ್‌ಗಾಗಿ ನೀವು ಭರ್ತಿ ಮಾಡಬೇಕಾದ ಫಾರ್ಮ್ ಅನ್ನು ಪ್ರದರ್ಶಿಸುತ್ತದೆ.

ಹಂತ 6: ವೈಯಕ್ತಿಕ ಟ್ಯಾಕ್ಸ್‌ಪೇಯರ್‌ ಆಗಿ ಐಟಿಆರ್ ಫೈಲ್ ಮಾಡದ ಕಾರಣ ನೀವು ಪೆನಲ್ಟಿಯನ್ನು ಪಾವತಿಸುತ್ತಿದ್ದರೆ, "ಟ್ಯಾಕ್ಸ್ ಅಪ್ಲಿಕೇಬಲ್‌"ಗಾಗಿ "(0021) ಇನ್‌ಕಮ್‌ ಟ್ಯಾಕ್ಸ್ (ಕಂಪನಿಗಳನ್ನು ಹೊರತುಪಡಿಸಿ)" ಆಯ್ಕೆ ಮಾಡಿ. ನಂತರ, "ಪೇಮೆಂಟ್‌ನ ವಿಧ"ದ ಅಡಿಯಲ್ಲಿ "(300) ಸ್ವಯಂ ಮೌಲ್ಯಮಾಪನ ಟ್ಯಾಕ್ಸ್" ಆಯ್ಕೆ ಮಾಡಿ ಮತ್ತು ಕೆಳಗೆ ಸ್ಕ್ರಾಲ್ ಮಾಡಿ.

ಹಂತ 7: ಈಗ, "ನೆಟ್ ಬ್ಯಾಂಕಿಂಗ್" ಮತ್ತು "ಡೆಬಿಟ್ ಕಾರ್ಡ್"ನಲ್ಲಿ ಪೇಮೆಂಟ್ ವಿಧಾನಗಳನ್ನು ಆಯ್ಕೆ ಮಾಡಿ. ಎರಡೂ ಸಂದರ್ಭಗಳಲ್ಲಿ, ಡ್ರಾಪ್-ಡೌನ್ ಮೆನುನಿಂದ ಬ್ಯಾಂಕ್ ಅನ್ನು ಆಯ್ಕೆ ಮಾಡಿ. ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ಮತ್ತು ಸರಿಯಾದ ಮೌಲ್ಯಮಾಪನ ವರ್ಷವನ್ನು ಆರಿಸಿ.

ಹಂತ 8 : ನಂತರ, ನಿಮ್ಮ ವಿಳಾಸ ವಿವರಗಳು, ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಗಾಗಿ ಫೀಲ್ಡ್‌ಗಳನ್ನು ಭರ್ತಿ ಮಾಡಿ. ಕೊಟ್ಟಿರುವ ಸೆಕ್ಯುರಿಟಿ ಕೋಡ್ ನಮೂದಿಸಿ ಮತ್ತು "ಪ್ರೊಸೀಡ್" ಮೇಲೆ ಕ್ಲಿಕ್ ಮಾಡಿ.

ಆಫ್‌ಲೈನ್ ಪ್ರೊಸೆಸ್

ಈ ಕೆಳಗಿನ ಹಂತಗಳಲ್ಲಿ ನಿಮ್ಮ ಐಟಿಆರ್ ವಿಳಂಬ ಶುಲ್ಕವನ್ನು ಆಫ್‌ಲೈನ್‌ನಲ್ಲಿಯೂ ಪಾವತಿಸಬಹುದು.

ಹಂತ 1: ಇನ್‌ಕಮ್‌ ಟ್ಯಾಕ್ಸ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.

ಹಂತ 2: ಹೋಮ್ ಪೇಜ್ ಮೇಲಿನ ಮೆನುನಿಂದ "ಫಾರ್ಮ್‌ಗಳು/ಡೌನ್‌ಲೋಡ್‌ಗಳು" ಆಯ್ಕೆ ಮಾಡಿ. ಡ್ರಾಪ್-ಡೌನ್ ಮೆನುನಿಂದ "ಚಲನ್ಸ್" ಮೇಲೆ ಕ್ಲಿಕ್ ಮಾಡಿ.

ಹಂತ 3: ಮುಂದಿನ ಪೇಜಿನಲ್ಲಿ, ಡೌನ್‌ಲೋಡ್‌ ಮಾಡಬಹುದಾದ ಚಲನ್‌ಗಳ ಪಟ್ಟಿಯನ್ನು ನೀವು ಕಾಣಬಹುದು. ನಿಮ್ಮ ಸೂಕ್ತತೆಯನ್ನು ಅವಲಂಬಿಸಿ "ಐಟಿಎನ್ಎಸ್ -280" ಜೊತೆಗೆ "ಪಿಡಿಎಫ್" ಮತ್ತು "ಫಿಲ್ಲೇಬಲ್ ಫಾರ್ಮ್"ನಿಂದ ಯಾವುದೇ ಆಯ್ಕೆಗಳ ಮೇಲೆ ಕ್ಲಿಕ್ ಮಾಡಿ.

ಹಂತ 4: ಡೌನ್‌ಲೋಡ್ ಮಾಡಿದ ಫಾರ್ಮ್ ಈ ಕೆಳಗೆ ನೀಡಲಾದ ಇಮೇಜ್‌ನಂತೆ ಕಾಣುತ್ತದೆ.

 

ನಿಮಗೆ ಡೌನ್‌ಲೋಡ್ ಮಾಡಲು ಸಾಧ್ಯವಾಗದಿದ್ದರೆ ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಯಿಂದ ನೀವು ಈ ಫಾರ್ಮ್ ಅನ್ನು ಪಡೆಯಬಹುದು. ನಿಖರವಾದ ವಿವರಗಳೊಂದಿಗೆ ಈ ಫಾರ್ಮ್ ಅನ್ನು ಭರ್ತಿ ಮಾಡಿ. ನಂತರ, ಅಗತ್ಯ ಪೆನಲ್ಟಿ ಅಮೌಂಟ್‌ನೊಂದಿಗೆ ಫಾರ್ಮ್ ಅನ್ನು ಸಂಬಂಧಿತ ಬ್ಯಾಂಕಿನ ಕೌಂಟರ್‌ನಲ್ಲಿ ಸಬ್‌ಮಿಟ್‌ ಮಾಡಿ. ನೀವು ಕ್ಯಾಶ್ ಅಥವಾ ಚೆಕ್ ಮೂಲಕ ಪೇಮೆಂಟ್ ಮಾಡಬಹುದು ಮತ್ತು ರಸೀದಿಯನ್ನು ಪಡೆಯಬಹುದು.

ಈ ಚಲನ್ ರಸೀದಿ ಪೇಮೆಂಟ್‌ನ ಸ್ವೀಕೃತಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಂತರ ಚಲನ್ ವೆರಿಫಿಕೇಷನ್‌ಗಾಗಿ ಬಳಸಬಹುದು. ಈ ಡಾಕ್ಯುಮೆಂಟ್ ಅನ್ನು ಹೊಂದಿಲ್ಲದಿದ್ದರೆ ನಿಮ್ಮ ದಂಡವನ್ನು ಪಾವತಿಸಲಾಗಿದೆ ಎಂದು ಸಾಬೀತುಪಡಿಸಲು ನಿಮಗೆ ಸಾಧ್ಯವಾಗುವುದಿಲ್ಲ ಮತ್ತು ನಂತರ ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು.

ಟ್ಯಾಕ್ಸ್ ರಿಟರ್ನ್ ಫೈಲ್ ಮಾಡದ ಕಾರಣ ನಿಮ್ಮನ್ನು ಜೈಲಿಗೆ ಹಾಕಬಹುದೇ?

ಇಲ್ಲಿಯವರೆಗೆ, ಇಲ್ಲಿ ವಿವರಿಸಲಾದ ಹಲವಾರು ಷರತ್ತುಗಳು ಅಂತಿಮ ದಿನಾಂಕದಂದು ಐಟಿಆರ್ ಫೈಲ್ ಮಾಡದ ಪರಿಣಾಮಗಳಿಗೆ ಸಂಬಂಧಿಸಿವೆ. ಟ್ಯಾಕ್ಸ್‌ಪೇಯರ್‌ ತನ್ನ ಇನ್‌ಕಮ್‌ ಟ್ಯಾಕ್ಸ್‌ ಅನ್ನು ಮೌಲ್ಯಮಾಪನ ವರ್ಷದಲ್ಲಿ ಸಂಪೂರ್ಣವಾಗಿ ಫೈಲ್ ಮಾಡಲು ವಿಫಲವಾದರೆ, ವ್ಯಕ್ತಿಯು ಸೆಕ್ಷನ್ 142(1), 148 ಅಥವಾ 153A ಅಡಿಯಲ್ಲಿ ಇನ್‌ಕಮ್‌ ಟ್ಯಾಕ್ಸ್ ಇಲಾಖೆಯಿಂದ ನೋಟಿಸ್ ಪಡೆಯುತ್ತಾನೆ. ಈ ಕ್ರಮಗಳ ನಂತರವೂ ಐಟಿಆರ್ ಫೈಲ್ ಮಾಡದಿದ್ದರೆ, ಸಂಬಂಧಿತ ವ್ಯಕ್ತಿಯು ಟ್ಯಾಕ್ಸ್ ವಂಚನೆಗಾಗಿ ಇನ್‌ಕಮ್‌ ಟ್ಯಾಕ್ಸ್ ಆ್ಯಕ್ಟ್‌ನ ಸೆಕ್ಷನ್ 276CC ಅಡಿಯಲ್ಲಿ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ.

ಸೆರೆವಾಸಕ್ಕೆ ಸಂಬಂಧಿಸಿದ ನಿರ್ದಿಷ್ಟತೆಗಳು ಈ ಕೆಳಗಿನಂತಿವೆ.

  • ರೂ.25 ಲಕ್ಷಕ್ಕಿಂತ ಹೆಚ್ಚಿನ ಟ್ಯಾಕ್ಸ್ ವಂಚನೆಗೆ: ಐಟಿಆರ್ ಫೈಲ್ ಮಾಡದಿದ್ದರೆ ಪೆನಲ್ಟಿ ಮತ್ತು ಕನಿಷ್ಠ 6 ತಿಂಗಳ ಜೈಲು ಶಿಕ್ಷೆ, ಇದು 7 ವರ್ಷಗಳವರೆಗೆ ವಿಸ್ತರಣೆ ಹೊಂದಬಹುದು.
  • ಇತರ ಪ್ರಕರಣಗಳಿಗೆ: ನಿಗದಿತ ಪೆನಲ್ಟಿ ಮತ್ತು ಕನಿಷ್ಠ 3 ತಿಂಗಳ ಜೈಲು ಶಿಕ್ಷೆ, 2 ವರ್ಷಗಳವರೆಗೆ ವಿಸ್ತರಿಸಬಹುದು.

ವಿಳಂಬವಾದ ಟ್ಯಾಕ್ಸ್ ರಿಟರ್ನ್ ಫೈಲಿಂಗ್‌ಗೆ ವಿವಿಧ ಪೆನಲ್ಟಿಗಳ ಬಗ್ಗೆ ಕಾಂಪ್ರೆಹೆನ್ಸಿವ್ ಗೈಡ್‌ನೊಂದಿಗೆ, ನೀವು ಇಲ್ಲಿಗೆ ತಲುಪಿದ್ದೀರಿ. ಈ ಬಾರಿ ನೀವು ಸಮಯಕ್ಕೆ ಸರಿಯಾಗಿ ಫೈಲ್ ಮಾಡಲು ವಿಫಲವಾದರೆ, ಪೆನಲ್ಟಿಯನ್ನು ತೆರವುಗೊಳಿಸುವುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೆ, ಈಗ ನಿಮಗೆ ಎಲ್ಲಾ ಪ್ರತಿಕೂಲ ಪರಿಸ್ಥಿತಿಗಳ ಬಗ್ಗೆ ತಿಳಿದಿದೆ, ಅಂತಹ ಅನಾನುಕೂಲತೆಗಳನ್ನು ತಪ್ಪಿಸಲು ಮುಂದಿನ ಮೌಲ್ಯಮಾಪನ ವರ್ಷಕ್ಕೆ ಸಮಯೋಚಿತವಾಗಿ ಐಟಿಆರ್ ಫೈಲ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ.

[ಮೂಲ]

ಪದೇ ಪದೇ ಕೇಳಲಾದ ಪ್ರಶ್ನೆಗಳು

ಸೆಕ್ಷನ್ 234A ಅಡಿಯಲ್ಲಿ ಇಂಟರೆಸ್ಟ್ ಜೊತೆಗೆ ಐಟಿಆರ್ ಫೈಲ್ ಮಾಡಲು ವಿಳಂಬ ಮಾಡಿದರೆ ಟ್ಯಾಕ್ಸ್‌ಪೇಯರ್‌ಗಳು ಪೆನಲ್ಟಿಯನ್ನು ಪಾವತಿಸಬೇಕೇ?

ಸೆಕ್ಷನ್ 234A ಅಡಿಯಲ್ಲಿ ಇಂಟರೆಸ್ಟ್ ಅನ್ನು ನೀವು ಪಾವತಿಸಬೇಕಾದ ಯಾವುದೇ ಬಾಕಿ ಟ್ಯಾಕ್ಸ್ ಅಮೌಂಟ್‌ ಅನ್ನು ಹೊಂದಿರುವಾಗ ಮಾತ್ರ ವಿಧಿಸಲಾಗುತ್ತದೆ. ಅಲ್ಲದೆ, ನೀವು ಎಲ್ಲಾ ಟ್ಯಾಕ್ಸ್‌ಗಳನ್ನು ಮೊದಲು ಪಾವತಿಸದಿದ್ದರೆ ನಿಮ್ಮ ಇನ್‌ಕಮ್‌ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡಲು ಸಾಧ್ಯವಿಲ್ಲ. ಆದ್ದರಿಂದ, ತಡವಾಗಿ ಐಟಿಆರ್ ಫೈಲ್ ಮಾಡುವ ಪೆನಲ್ಟಿಯು ಇಲ್ಲಿ ಅಪ್ಲೈ ಆಗುವುದಿಲ್ಲ. ಆದ್ದರಿಂದ, ಐಟಿಆರ್ ತಡವಾಗಿ ಫೈಲ್ ಮಾಡುವಾಗಿನ ಪರಿಣಾಮಗಳು ಇಲ್ಲಿ ತುಂಬಾ ಸೀಮಿತವಾಗಿವೆ.

ಸೀನಿಯರ್‌ ಸಿಟಿಜನ್‌ಗಳಿಗೆ ಐಟಿಆರ್ ಅನ್ನು ತಡವಾಗಿ ಫೈಲ್ ಮಾಡುವುದಕ್ಕೆ ಇರುವ ಪೆನಲ್ಟಿಯಲ್ಲಿ ಯಾವುದೇ ವಿನಾಯಿತಿಗಳಿವೆಯೇ?

ಹೌದು, ಕೇಂದ್ರ ಬಜೆಟ್ 2021, ಸೀನಿಯರ್‌ ಸಿಟಿಜನ್‌ಗಳಿಗೆ ಈ ಕೆಳಗಿನ ಮಾನದಂಡಗಳನ್ನು ಪೂರೈಸಿದರೆ ಇನ್‌ಕಮ್‌ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುವುದರಿಂದ ವಿನಾಯಿತಿ ನೀಡುತ್ತದೆ.

  • ಅವರು 75 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
  • ಅವರ ಇನ್‌ಕಮ್‌ನ ಏಕೈಕ ಮೂಲವೆಂದರೆ ಪೆನ್ಷನ್ ಮತ್ತು ಫಿಕ್ಸ್‌ಡ್‌ ಡೆಪಾಸಿಟ್‌ಗಳಿಂದ ಬರುವ ಇಂಟರೆಸ್ಟ್.
  • ಅಲ್ಲದೆ, ಪೆನ್ಷನ್ ಅನ್ನು ಡೆಪಾಸಿಟ್ ಮಾಡಿದ ಅದೇ ಹಣಕಾಸು ಸಂಸ್ಥೆಯಿಂದ ಇಂಟರೆಸ್ಟ್ ಅನ್ನು ಗಳಿಸಬೇಕು.
  • ಸಂಬಂಧಪಟ್ಟ ವ್ಯಕ್ತಿಗಳು ಆಯಾ ಹಣಕಾಸು ಸಂಸ್ಥೆಗಳಿಗೆ ಅಗತ್ಯ ವಿವರಗಳನ್ನು ನಿರ್ದಿಷ್ಟಪಡಿಸುವ ಡಿಕ್ಲರೇಷನ್ ಅನ್ನು ಹಾಜರುಪಡಿಸಬೇಕಾಗುತ್ತದೆ.
  • ಉಲ್ಲೇಖಿಸಿದ ಹಣಕಾಸು ಇನ್‌ಸ್ಟಿಟ್ಯೂಷನ್ ಕೇಂದ್ರ ಸರ್ಕಾರದಿಂದ ಅಧಿಸೂಚಿತವಾದ ಕೆಲವೇ ಸಂಸ್ಥೆಗಳಲ್ಲಿ ಒಂದಾಗಿರಬೇಕು.

ಈ ಮಾನದಂಡಗಳನ್ನು ಪೂರೈಸುವ ವ್ಯಕ್ತಿಗಳು ಐಟಿಆರ್ ಫೈಲ್ ಮಾಡದ ಕಾರಣ ಪೆನಲ್ಟಿಯನ್ನು ಭರಿಸುವ ಅಗತ್ಯವಿಲ್ಲ. ಆದಾಗ್ಯೂ, ಅವರು ಇನ್ನೂ ಇನ್‌ಕಮ್‌ ಟ್ಯಾಕ್ಸ್ ಅನ್ನು ಪಾವತಿಸಬೇಕಾಗಿದೆ, ಅದನ್ನು ಅದಕ್ಕೆ ಅನುಗುಣವಾಗಿ ಅವರ ಬ್ಯಾಂಕ್ ಖಾತೆಗಳಿಂದ ಡಿಡಕ್ಟ್ ಮಾಡಲಾಗುತ್ತದೆ.

[ಮೂಲ]

ಐಟಿಆರ್ ಫೈಲ್ ಮಾಡದ ಕಾರಣ ಸೆಕ್ಷನ್ 276CC ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಯಾವುದೇ ರಿಲ್ಯಾಕ್ಸೇಷನ್‌ಗಳಿವೆಯೇ?

ಹೌದು, ಈ ಕೆಳಗಿನ ಷರತ್ತುಗಳನ್ನು ಪೂರೈಸುವ ಅಸೆಸ್ಸೀಗಳು ಇನ್‌ಕಮ್‌ ಟ್ಯಾಕ್ಸ್‌ ಆ್ಯಕ್ಟ್‌ನ ಸೆಕ್ಷನ್ 276CC ಅಡಿಯಲ್ಲಿ ವಿಚಾರಣೆಗೆ ಒಳಪಡುವುದಿಲ್ಲ.

  • ಟ್ಯಾಕ್ಸ್‌ಪೇಯರ್‌ ಮೌಲ್ಯಮಾಪನ ವರ್ಷದ ಅಂತ್ಯದ ಮೊದಲು ಐಟಿಆರ್ ಸಲ್ಲಿಸುತ್ತಾನೆ.
  • ಟಿಡಿಎಸ್ ಮತ್ತು ಅಡ್ವಾನ್ಸ್ ಟ್ಯಾಕ್ಸ್ ಅನ್ನು ಹೊರತುಪಡಿಸಿ ವೈಯಕ್ತಿಕ ಟ್ಯಾಕ್ಸ್‌ಪೇಯರ್‌ ಅವನ/ಅವಳ ಒಟ್ಟು ಇನ್‌ಕಮ್‌ ಮೇಲೆ ಪಾವತಿಸಬೇಕಾದ ಒಟ್ಟು ಟ್ಯಾಕ್ಸ್ ರೂ.10,000ಗಳನ್ನು ಮೀರುವುದಿಲ್ಲ.

[ಮೂಲ]