ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿ
Instant Policy, No Medical Check-ups

ಭಾರತದಿಂದ ಯುಕೆಗೆ ಟೂರಿಸ್ಟ್ ವೀಸಾ

ಭಾರತದಿಂದ ಯುಕೆಗೆ ಟೂರಿಸ್ಟ್ ವೀಸಾ ಬಗ್ಗೆ ಎಲ್ಲ ಮಾಹಿತಿ

ಟ್ರಾವೆಲ್. ನಮ್ಮಲ್ಲಿ ಅನೇಕರಿಗೆ, ನಾವು ಬದುಕುವುದಕ್ಕೆ ಒಂದೇ ವಿಷಯ ಅಂದರೆ ಅದು ಟ್ರಾವೆಲ್. ನಾವು ತಿಂಗಳ ಮೊದಲೇ ಎಲ್ಲಾ ಬುಕಿಂಗ್‌ಗಳು ಮತ್ತು ಟ್ರಾವೆಲ್‌ ಪ್ಲ್ಯಾನಿಂಗ್‌ಗಳನ್ನು ಮ್ಯಾಪಿಂಗ್ ಮಾಡಲು ಪ್ರಾರಂಭಿಸುತ್ತೇವೆ. ಸಂಪೂರ್ಣ ಉತ್ಸಾಹ ಮತ್ತು ಪ್ಲ್ಯಾನಿಂಗ್‌ನೊಂದಿಗೆ, ಮೊದಲನೆಯದಾಗಿ ವಿದೇಶಕ್ಕೆ ಹೋಗಲು ಬೇಕಿರುವ ವೀಸಾವನ್ನೇ ನಾವು ಆಗಾಗ ಮರೆತುಬಿಡುತ್ತೇವೆ ಅಥವಾ ಕೊನೆಯ ಕ್ಷಣದವರೆಗೆ ಬಿಟ್ಟುಬಿಡುತ್ತೇವೆ.

ಯುಕೆ ದೇಶವು ಫ್ಲೈಟ್‌ನಲ್ಲಿ ಒಂದೆರಡು ಗಂಟೆಗಳ ದೂರದಲ್ಲಿದ್ದು, ಭಾರತೀಯರು ವಿದೇಶಕ್ಕೆ ಟ್ರಾವೆಲ್ ಮಾಡಬಯಸುವ ಅತ್ಯಂತ ಜನಪ್ರಿಯ ತಾಣವಾಗಿದೆ. ಇದು ಅನೇಕ ವಿದ್ಯಾರ್ಥಿಗಳನ್ನು ಅಥವಾ ವಲಸಿಗ ಕುಟುಂಬ ಮತ್ತು ಸ್ನೇಹಿತರನ್ನು ಭೇಟಿ ಮಾಡಲು ಆಗಿರಬಹುದು ಅಥವಾ ಲಂಡನ್‌ನ ಸುಂದರ ನಗರ ಹಾಗೂ ಸ್ಕಾಟ್‌ಲ್ಯಾಂಡ್ ಮತ್ತು ವೇಲ್ಸ್‌ನ ಗ್ರಾಮಾಂತರವನ್ನು ನೋಡಿ ವಿಸ್ಮಯಗೊಳ್ಳಲು ಇರಬಹುದು. ನಿಮ್ಮ ಹಾಲಿಡೇಗಳಿಗಾಗಿ ನೀವು ಪೂರ್ವಭಾವಿಯಾಗಿ ಪ್ಲ್ಯಾನ್ ಮಾಡುತ್ತಿದ್ದರೆ, ಈ ಆರ್ಟಿಕಲ್ ನಿಮಗೆ ಭಾರತದಿಂದ ಯುಕೆ ಟೂರಿಸ್ಟ್ ವೀಸಾವನ್ನು ಹೇಗೆ ಸುರಕ್ಷಿತಗೊಳಿಸುವುದು ಎಂಬುದರ ಕುರಿತು ವಿವರವಾದ ಚಿತ್ರಣ ನೀಡುತ್ತದೆ.

ಭಾರತೀಯರಿಗೆ ಯುಕೆಗಾಗಿ ವೀಸಾದ ಅಗತ್ಯವಿದೆಯೇ?

ನೀವು ಅಮೇರಿಕನ್, ಕೆನಡಿಯನ್ ಅಥವಾ ಆಸ್ಟ್ರೇಲಿಯನ್ ಪಾಸ್‌ಪೋರ್ಟ್ ಹೋಲ್ಡರ್ ಆಗಿರದಿದ್ದರೆ,, ಯುಕೆಗೆ ಟ್ರಾವೆಲ್ ಮಾಡಲು ನೀವು ಟೂರಿಸ್ಟ್ ವೀಸಾಗಾಗಿ ಕಡ್ಡಾಯವಾಗಿ ಅಪ್ಲೈ ಮಾಡಬೇಕು. ಆದರೆ ಚಿಂತಿಸಬೇಡಿ, ಭಾರತದಿಂದ ಸ್ಟ್ಯಾಂಡರ್ಡ್ ಯುಕೆ ವಿಸಿಟರ್ ವೀಸಾವನ್ನು ಪ್ರಕ್ರಿಯೆಗೊಳಿಸಲು ಸುಮಾರು ಎರಡು ವಾರಗಳ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ರ‍್ಯಾ0ಡಮ್ ವದಂತಿಗಳಿಗೆ ವಿರುದ್ಧವಾಗಿ, ಈ ವೀಸಾ ಪಡೆಯುವುದು ಕಷ್ಟವೇನಲ್ಲ. ಭಾರತದಿಂದ ನಿಮ್ಮ ಎಲ್ಲಾ ಯುಕೆ ವೀಸಾ ಅವಶ್ಯಕತೆಗಳನ್ನು ನೀವು ಪೂರೈಸಿದ್ದೀರಿ ಎಂದು ನೀವು ಖಚಿತಪಡಿಸಿಕೊಳ್ಳುವವರೆಗೆ ಮತ್ತು ಕೇಳಲಾದ ಎಲ್ಲ ಡಾಕ್ಯುಮೆಂಟುಗಳನ್ನು ಸಲ್ಲಿಸಿ.

ಯುಕೆಗೆ ಟ್ರಾವೆಲ್ ಮಾಡುವ ಭಾರತೀಯರಿಗೆ ವೀಸಾ ಆನ್ ಅರೈವಲ್ ಇದೆಯೇ?

ಇಲ್ಲ, ದುರದೃಷ್ಟವಶಾತ್ ಯುಕೆಗೆ ಟ್ರಾವೆಲ್ ಮಾಡುವ ಭಾರತೀಯ ಪಾಸ್‌ಪೋರ್ಟ್ ಹೋಲ್ಡರ್‌ಗಳಿಗೆ ವೀಸಾ ಆನ್ ಅರೈವಲ್ ಆಯ್ಕೆ ಮಾಡಲು ಯಾವುದೇ ಆಪ್ಷನ್‌ಗಳಿಲ್ಲ. ಆದ್ದರಿಂದ, ಸ್ಟ್ಯಾಂಡರ್ಡ್ ಯುಕೆ ಟೂರಿಸ್ಟ್ ವೀಸಾಗಾಗಿ ಅಪ್ಲೈ ಮಾಡುವುದೊಂದೇ ಅದಕ್ಕಿರುವ ಏಕೈಕ ಮಾರ್ಗವಾಗಿದೆ.

ಭಾರತದಿಂದ ಯುಕೆ ಟೂರಿಸ್ಟ್ ವೀಸಾದ ಫೀಸ್ ಎಷ್ಟು?

ಫೀಸ್ ಭಾರತದಿಂದ ಯುಕೆ ಟೂರಿಸ್ಟ್ ವೀಸಾದ ಪ್ರೊಸೆಸಿಂಗ್ ಫೀಸ್ ನಿಮಗೆ ಸುಮಾರು USD 97.89 (79.06 ಪೌಂಡ್‌ಗಳು) ವೆಚ್ಚವಾಗುತ್ತದೆ. ಆದಾಗ್ಯೂ, ನಿಮ್ಮ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಅಥವಾ ಸುಲಭಗೊಳಿಸಲು, ನೀವು ವೀಸಾ ಏಜೆಂಟ್ ಅನ್ನು ಬಳಸುತ್ತಿದ್ದರೆ, ಏಜೆಂಟ್ ಹೆಚ್ಚುವರಿ ಕಮಿಷನ್ ಫೀಸ್ ಅನ್ನು ಪಡೆಯುತ್ತಾನೆ.

ಯುಕೆ ವೀಸಾಗಾಗಿ ಅಗತ್ಯವಿರುವ ಡಾಕ್ಯುಮೆಂಟುಗಳು

  • ನಿಮ್ಮ ಪಾಸ್‌ಪೋರ್ಟ್ 6 ತಿಂಗಳಿಗಿಂತ ಹೆಚ್ಚು ಕಾಲ ವ್ಯಾಲಿಡ್ ಆಗಿದೆ ಎಂದು ಖಚಿತಪಡಿಸಿಕೊಳ್ಳಿ. ವೀಸಾಗಾಗಿ ನೀವು ಕನಿಷ್ಟ ಎರಡು ಬ್ಲ್ಯಾಂಕ್ ಪೇಜುಗಳನ್ನು ಹೊಂದಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

  • ನಿಮ್ಮ ಟ್ರಾವೆಲ್‌ಗಾಗಿ ನೀವು ಸಾಕಷ್ಟು ಹಣವನ್ನು ಹೊಂದಿದ್ದೀರಿ ಎಂಬುದನ್ನು ಸಾಬೀತುಪಡಿಸಲು ಕನಿಷ್ಠ ಮೂರು ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್.

  • ಎರಡು 45mm x 35mm (ಪಾಸ್‌ಪೋರ್ಟ್ ಗಾತ್ರದ) ಫೋಟೋಗಳು.

ಭಾರತದಿಂದ ಯುಕೆ ವಿಸಿಟರ್ ವೀಸಾಗಾಗಿ ಅಪ್ಲೈ ಮಾಡುವುದು ಹೇಗೆ?

  • ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡುವುದು - gov.uk ಗೆ ಭೇಟಿ ನೀಡಿ ಮತ್ತು ನಿಮ್ಮ ಯುಕೆ ವಿಸಿಟ್/ಟೂರಿಸ್ಟ್ ವೀಸಾ ಅಪ್ಲಿಕೇಶನ್ ಅನ್ನು ಭರ್ತಿ ಮಾಡಿ. ನಿಮ್ಮ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಯಾವುದೇ ಮಾಹಿತಿಯನ್ನು ತಪ್ಪಾಗಿ ನಮೂದಿಸಿದರೆ, ಆಗ ನಿಮ್ಮ ವೀಸಾವನ್ನು ತಿರಸ್ಕರಿಸಬಹುದು. ನಿಮ್ಮ ವೀಸಾ ಪ್ರಕ್ರಿಯೆಯಲ್ಲಿ ನಿಮಗೆ ಏನಾದರೂ ಸಹಾಯ ಬೇಕಿದ್ದಲ್ಲಿ ಅಥವಾ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಅಗತ್ಯವಿದ್ದರೆ, ನೀವು ಸಣ್ಣ ಫೀಸ್‌ಗೆ ಪ್ರತಿಯಾಗಿ ವೀಸಾ ಏಜೆಂಟ್ ಮೂಲಕ ಅಪ್ಲೈ ಮಾಡಬಹುದು.

  • ಯುಕೆ ವೀಸಾ ಪ್ರೊಸೆಸಿಂಗ್ ಫೀಸ್ ಅನ್ನು ಪಾವತಿಸಿ - ನಿಮ್ಮ ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ವ್ಯಾಲಿಡ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಯುಕೆ ವೀಸಾ ಫೀಸ್‌ ಅನ್ನು ಪಾವತಿಸಿ. 6 ತಿಂಗಳಿಗೆ ಸ್ಟ್ಯಾಂಡರ್ಡ್ ಯುಕೆ ವಿಸಿಟರ್ ವೀಸಾಗೆ USD 123 (100 ಪೌಂಡ್‌ಗಳು) ವೆಚ್ಚವಾಗುತ್ತದೆ. 

  • ನಿಮ್ಮ ಇಂಟರ್ವ್ಯೂನ ಅಪಾಯಿಂಟ್‌ಮೆಂಟ್ ಅನ್ನು ಬುಕ್ ಮಾಡಿ - ನಿಮ್ಮ ಪೇಮೆಂಟ್ ಅನ್ನು ಪೂರ್ಣಗೊಳಿಸಿದ ನಂತರ, ನಿಮ್ಮ ಇಂಟರ್ವ್ಯೂ ದಿನಾಂಕವನ್ನು ಬುಕ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ನಿಮ್ಮ ಅಪಾಯಿಂಟ್‌ಮೆಂಟ್ ನೀವು ಲಭ್ಯವಿರುವ ದಿನಾಂಕಕ್ಕೆ ಬುಕ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಅಪಾಯಿಂಟ್‌ಮೆಂಟ್ ಅನ್ನು ನೀವು ರಿಶೆಡ್ಯೂಲ್ ಮಾಡಲು ಬಯಸಿದರೆ, ನೀವು ಮತ್ತೆ ಯುಕೆ ವೀಸಾ ಅಪ್ಲಿಕೇಶನ್ ಅನ್ನು ಭರ್ತಿ ಮಾಡಬೇಕಾಗುತ್ತದೆ!

  • ನಿಮ್ಮ ಡಾಕ್ಯುಮೆಂಟ್‌ಗಳನ್ನು ಒಯ್ಯಿರಿ - ನಿಮ್ಮ ಅಪಾಯಿಂಟ್‌ಮೆಂಟ್‌ಗೆ ನೀವು ಹೋಗುವಾಗ, ನಿಮ್ಮ ಅಪ್ಲಿಕೇಶನ್ ಫಾರ್ಮ್, ನಿಮ್ಮ ಯುಕೆ ವೀಸಾ ಫೀ ರಿಸಿಪ್ಟ್ ಮತ್ತು ನಿಮ್ಮ ಪಾಸ್‌ಪೋರ್ಟ್‌ನ ಪ್ರಿಂಟೆಡ್ ಕಾಪಿಗಳನ್ನು ನೀವು ಹೊಂದಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. 

  • ಹೆಚ್ಚುವರಿ ಡಾಕ್ಯುಮೆಂಟ್‌ಗಳು - ಹೆಚ್ಚುವರಿಯಾಗಿ, ನಿಮ್ಮ ತಾತ್ಕಾಲಿಕ ಫ್ಲೈಟ್ ಬುಕಿಂಗ್‌ಗಳು, ಹೋಟೆಲ್‌ಗಳು, ನಿಮ್ಮ ಯುಕೆ ಟ್ರಾವೆಲ್ ಇನ್ಶೂರೆನ್ಸ್ ವರ್ಲ್ಡ್ ಕಪ್ ಟಿಕೆಟ್‌ಗಳು, ನಿಮ್ಮ ಪಾಸ್‌ಪೋರ್ಟ್‌ನ ಕಾಪಿಗಳು ಇತ್ಯಾದಿಗಳಂತಹ ಡಾಕ್ಯುಮೆಂಟ್‌ಗಳು ನಿಮ್ಮೊಂದಿಗೆ ಇದ್ದರೆ, ಅವರು ಕೇಳಿದರೆ ತೋರಿಸಲು ಸುಲಭವಾಗುತ್ತದೆ. ಸಪೋರ್ಟಿಂಗ್ ಡಾಕ್ಯುಮೆಂಟ್‌ಗಳು ಯಾವಾಗಲೂ ಭಾರತದಿಂದ ಯುಕೆ ವಿಸಿಟರ್ ವೀಸಾಗಾಗಿ, ನಿಮ್ಮ ಅಪ್ಲಿಕೇಶನ್ ಅನ್ನು ಇನ್ನಷ್ಟು ಬಲಗೊಳಿಸುತ್ತವೆ.

  • ಯುಕೆ ಟೂರಿಸ್ಟ್ ವೀಸಾ ಪ್ರೊಸೆಸಿಂಗ್ ಟೈಮ್ - ಭಾರತದಿಂದ ಸ್ಟ್ಯಾಂಡರ್ಡ್ ಯುಕೆ ಟೂರಿಸ್ಟ್ ವೀಸಾ ಪ್ರಕ್ರಿಯೆಗೊಳಿಸಲು ಸಾಮಾನ್ಯವಾಗಿ 2 ವಾರಗಳವರೆಗಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಆದರೆ, ನಿಮ್ಮ ಸುರಕ್ಷತೆಗಾಗಿ, ಕನಿಷ್ಠ 3 ವಾರಗಳ ಮೊದಲು ಅಪ್ಲೈ ಮಾಡುವುದು ಯಾವಾಗಲೂ ಉತ್ತಮ. 

  • ಯುಕೆಗಾಗಿ ಟ್ರಾವೆಲ್ ಇನ್ಶೂರೆನ್ಸ್ - ಜನರು ಆಗಾಗ ಕೇಳುತ್ತಾರೆ, "ನನಗೆ ನಿಜವಾಗಿಯೂ ಯುಕೆಗಾಗಿ ಟ್ರಾವೆಲ್ ಇನ್ಶೂರೆನ್ಸ್‌ನ ಅಗತ್ಯವಿದೆಯೇ?" ಮತ್ತು ಮೊದಲೇ ಹೇಳಿದಂತೆ, ನಿಮ್ಮ ಸುರಕ್ಷತೆಗಾಗಿ ಇದನ್ನು ಪಡೆಯುವುದು ಯಾವಾಗಲೂ ಉತ್ತಮ ಉಪಾಯವಾಗಿದೆ! ವೀಸಾ ಡಾಕ್ಯುಮೆಂಟುಗಳನ್ನು ಸಪೋರ್ಟ್ ಮಾಡಲು ನೀವದನ್ನು ತೆಗೆದುಕೊಳ್ಳದಿದ್ದರೂ ಸಹ, ಟ್ರಾವೆಲ್ ಇನ್ಶೂರೆನ್ಸ್ ಎನ್ನುವುದು ನೀವು ಟ್ರಾವೆಲ್ ಮಾಡುವಾಗ ಎಲ್ಲಾ ದುರದೃಷ್ಟಕರ ಸಂದರ್ಭಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ನೀವು ಟ್ರಾವೆಲ್ ಮಾಡುವ ಮೊದಲು ಯಾವುದೇ ಸಮಯದಲ್ಲೂ ನೀವದನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು.

ಯುಕೆಗಾಗಿ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಲು 6 ಕಾರಣಗಳು

  • ಯುಕೆಗೆ ಟ್ರಾವೆಲ್ ಮಾಡುವುದು ಅಷ್ಟು ಅಗ್ಗದ ವ್ಯವಹಾರವಲ್ಲ. ಇದಲ್ಲದೆ, ನೀವು ವಿಶ್ವಕಪ್‌ಗಾಗಿ ಅಲ್ಲಿಗೆ ಟ್ರಾವೆಲ್ ಮಾಡುತ್ತಿದ್ದರೆ, ಆ ಸ್ಟೇಡಿಯಂನ ಟಿಕೆಟ್‌ಗಳ ಬೆಲೆ ಎಷ್ಟು ಎಂಬುದು ನಮಗೆಲ್ಲರಿಗೂ ತಿಳಿದಿದೆ! ನೀವು ಬಯಸುವ ಕೊನೆಯ ವಿಷಯವೆಂದರೆ ಅನ್‌ಪ್ಲ್ಯಾನ್ಡ್ ಸಂದರ್ಭಗಳಲ್ಲಿ ಹೆಚ್ಚಿನ ಹಣವನ್ನು ಖರ್ಚು ಮಾಡುವುದು.

  • ಮೇಲಾಗಿ, ಇಂದು ಟ್ರಾವೆಲ್ ಇನ್ಶೂರೆನ್ಸ್ ದುಬಾರಿಯಲ್ಲ ಹಾಗೂ ಟ್ರಾವೆಲ್ ಮಾಡುವಾಗ ನಿಮ್ಮಡೆಗೆ ಬರಬಹುದಾದ ಯಾವುದೇ ಅನ್‌ಪ್ಲ್ಯಾನ್ಡ್ ಹಣಕಾಸು ನಷ್ಟಗಳ ವಿರುದ್ಧ ರಕ್ಷಿಸಲು, ಇದು ಯಾವಾಗಲೂ ಬುದ್ಧಿವಂತ ಆಯ್ಕೆಯಾಗಿದೆ. ಉದಾಹರಣೆಗೆ; ಒಂದು ವಾರದ ಟ್ರಿಪ್‌ಗಾಗಿ ಯುಕೆಗಾಗಿ ಡಿಜಿಟ್ ಟ್ರಾವೆಲ್ ಇನ್ಶೂರೆನ್ಸ್ ನಿಮಗೆ ₹225 (GBP 2.25) ರಷ್ಟು ಕಡಿಮೆ ವೆಚ್ಚವಾಗಬಹುದು (GST ಇಲ್ಲದೆ), ಬೇರೆಲ್ಲದರ ವೆಚ್ಚ ಬಿಡಿ, ಇದು ನಿಮ್ಮ ಟ್ರಿಪ್‌ನ ಸಮಯದಲ್ಲಿ ನಿಮಗೆ ಸರಾಸರಿ ಊಟಕ್ಕೆ ವೆಚ್ಚವಾಗುವುದಕ್ಕಿಂತಲೂ ಕಡಿಮೆಯಿರುತ್ತದೆ.

  • ಫ್ಲೈಟ್ ಡಿಲೇಯಂತಹ ಸಣ್ಣ ತೊಂದರೆಗಳಿಂದ, ಟ್ರಾವೆಲ್ ಇನ್ಶೂರೆನ್ಸ್ ನಿಮ್ಮ ಸಮಯ ಮತ್ತು ಹಣದಿಂದ ನಿಮಗೆ ಕಾಂಪನ್ಸೇಟ್ ಮಾಡುತ್ತದೆ, ಇಲ್ಲದಿದ್ದರೆ ನೀವು ವಿಮಾನ ನಿಲ್ದಾಣದಲ್ಲಿ ಕಾಯಬೇಕಾಗುತ್ತದೆ.

  • ನೀವು ವಿಶ್ವಕಪ್ ಸಮಯದಲ್ಲಿ ಹೋಗುತ್ತಿದ್ದರೆ, ಅದು ಟೂರಿಸ್ಟ್‌ಗಳಿಂದ ತುಂಬಿರುತ್ತದೆ ಮತ್ತು ಸಾಕಷ್ಟು ಟೂರಿಸ್ಟ್‌ಗಳಿದ್ದಾಗ ಸಣ್ಣ ಕ್ರೈಮ್‌ಗಳು ಸಾಮಾನ್ಯ! ಆದರೆ ಚಿಂತಿಸಬೇಡಿ, ನಿಮ್ಮೊಂದಿಗೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ಕಳ್ಳತನಗಳು, ಪಾಸ್‌ಪೋರ್ಟ್ ನಷ್ಟ ಅಥವಾ ಲೀಗಲ್ ಬಾಂಡ್‌ಗಳ ಸಂದರ್ಭದಲ್ಲಿ ನೀವು ರಕ್ಷಣೆ ಪಡೆಯುತ್ತೀರಿ.

  • ದುರದೃಷ್ಟಕರ ಸಂದರ್ಭಗಳಲ್ಲಿ ನಿಮ್ಮ ಹಾಲಿಡೇಗಳ ಸಮಯದಲ್ಲಿ ನೀವು ಅನಾರೋಗ್ಯಕ್ಕೆ ಒಳಗಾದಾಗ ಅಥವಾ ಮೆಡಿಕಲ್ ಎಮರ್ಜೆನ್ಸಿಗೆ ಒಳಗಾದಾಗ- ನಿಮ್ಮ ಟ್ರಾವೆಲ್ ಇನ್ಶೂರೆನ್ಸ್, ಅಗತ್ಯವಿರುವ ಎಲ್ಲಾ ವೆಚ್ಚಗಳನ್ನು ಕವರ್ ಮಾಡುತ್ತದೆ.

 

ಇದರ ಬಗ್ಗೆ ಇನ್ನಷ್ಟು ತಿಳಿಯಿರಿ:

 

ಅಂತೂ, ನೀವು ಯುಕೆ ವೀಸಾ ಪ್ರಕ್ರಿಯೆಯ ಮೂಲಕ ಪಾಸ್‌ಪೋರ್ಟ್‌ನಲ್ಲಿ ಮತ್ತೊಂದು ಸ್ಟ್ಯಾಂಪ್ ಮತ್ತು ಅಡ್ವೆಂಚರ್ ಅನ್ನು ಎದುರುನೋಡುವ ಮೂಲಕ ನೀವು ವೀಸಾ ಪಡೆಯುತ್ತೀರಿ ಎಂದು ನಾವು ಭಾವಿಸುತ್ತೇವೆ. ನಾವು ನಿಮಗೆ 'ಹ್ಯಾಪಿ ಹಾಲಿಡೇ'ಯನ್ನು ಬಯಸುತ್ತೇವೆ ಮತ್ತು ಸಹಜವಾಗಿ, ಅತ್ಯುತ್ತಮ ಟೀಮ್ ವಿಶ್ವಕಪ್ ಅನ್ನು ಗೆಲ್ಲುತ್ತದೆ ಎಂದು ನಾವು ಭಾವಿಸುತ್ತೇವೆ! 😉

ಭಾರತೀಯರಿಗಾಗಿ ಯುಕೆ ಟೂರಿಸ್ಟ್ ವೀಸಾ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ನಾನು ಯುಕೆಗೆ ಭೇಟಿ ನೀಡಲು ವೀಸಾಗಾಗಿ ಅಪ್ಲೈ ಮಾಡುವ ಮೊದಲು ನನ್ನ ಪಾಸ್‌ಪೋರ್ಟ್ ನಿರ್ದಿಷ್ಟ ಅವಧಿಯವೆರೆಗೆ ವ್ಯಾಲಿಡ್ ಆಗಿರಬೇಕೇ?

ಹೌದು, ನೀವು ಯುನೈಟೆಡ್ ಕಿಂಗ್‌ಡಮ್‌ಗೆ ವೀಸಾಗಾಗಿ ಅಪ್ಲೈ ಮಾಡಿದಾಗ ನಿಮ್ಮ ಪಾಸ್‌ಪೋರ್ಟ್ ಕನಿಷ್ಠ 6 ತಿಂಗಳವರೆಗೆ ವ್ಯಾಲಿಡ್ ಆಗಿರಬೇಕು. ಪಾಸ್‌ಪೋರ್ಟ್ ಅವಧಿಯು ಬೇಗ ಮುಗಿದರೆ ನೀವು ರಿಜೆಕ್ಷನ್ ಅನ್ನು ಎದುರಿಸಬಹುದು.

ವೀಸಾ ರಿಜೆಕ್ಟ್ ಆದರೆ ನನ್ನ ಅಪ್ಲಿಕೇಶನ್ ಫೀಸ್‌ಗೆ ಏನಾಗುತ್ತದೆ?

ನಿಮ್ಮ ಅಪ್ಲಿಕೇಶನ್ ಫೀಸ್ ಅನ್ನು ರಿ ಫಂಡ್ ಮಾಡುವ ಯಾವುದೇ ಆಯ್ಕೆ ಇಲ್ಲ. ಅಂತಹ ಸಂದರ್ಭವನ್ನು ತಪ್ಪಿಸಲು ಅಪ್ಲೈ ಮಾಡುವ ಮೊದಲು ಪ್ರತಿಯೊಂದು ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಫಾಲೋ ಮಾಡುವುದು ಉತ್ತಮ.

ಯುನೈಟೆಡ್ ಕಿಂಗ್‌ಡಮ್ ಭಾರತೀಯ ಪಾಸ್‌ಪೋರ್ಟ್ ಹೋಲ್ಡರ್‌ಗಳಿಗೆ ವೀಸಾ-ಆನ್-ಅರೈವಲ್ ಪ್ರಾವಿಷನ್‌ಗಳನ್ನು ನೀಡುತ್ತದೆಯೇ?

ಇಲ್ಲ, ಯುನೈಟೆಡ್ ಕಿಂಗ್‌ಡಮ್ ಅಂತಹ ಯಾವುದೇ ಸೌಲಭ್ಯವನ್ನು ನೀಡುವುದಿಲ್ಲ. ನೀವು ಸಾಕಷ್ಟು ಮುಂಚಿತವಾಗಿಯೇ ಸರಿಯಾದ ಡಾಕ್ಯುಮೆಂಟೇಶನ್‌ಗಳೊಂದಿಗೆ ಅಪ್ಲೈ ಮಾಡಬೇಕು.

ಇನ್ ಚಾರ್ಜ್ ಅಥಾರಿಟಿಗಳಿಗೆ ನನ್ನ ಆರ್ಥಿಕ ಸಾಮರ್ಥ್ಯವನ್ನು ನಾನು ಹೇಗೆ ಸಾಬೀತುಪಡಿಸಲಿ?

ಡಾಕ್ಯುಮೆಂಟೇಶನ್‌ನ ಭಾಗವಾಗಿ, ಹಿಂದಿನ 3 ತಿಂಗಳಿನಿಂದ ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ಕಾಪಿಗಳನ್ನು ನೀವು ನೀಡಬೇಕಾಗುತ್ತದೆ. ಅವರು ನಿಮ್ಮ ಫೈನಾನ್ಸಿಯಲ್ ಕಂಡೀಶನ್ ಅನ್ನು ನೋಡುತ್ತಾರೆ.

ಯುನೈಟೆಡ್ ಕಿಂಗ್‌ಡಮ್‌ಗೆ ಭೇಟಿ ನೀಡುವಾಗ ಮೈನರ್‌ಗಳಿಗೆ ಯಾರು ಸಹಿ ಮಾಡಬೇಕು?

ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮೈನರ್‌ಗಳ ಪರವಾಗಿ ಪೋಷಕರು ಅಥವಾ ಲೀಗಲ್ ಗಾರ್ಡಿಯನ್‌ಗಳು ಸಹಿ ಮಾಡಬೇಕು. ಅಪ್ಲೈ ಮಾಡುವಾಗ ಮೈನರ್‌ಗಳ ಪಾಸ್‌ಪೋರ್ಟ್‌ನ ಕಾಪಿ ಮತ್ತು ಪೋಷಕರು/ಗಾರ್ಡಿಯನ್‌ಗಳ ಕನ್ಸೆಂಟ್ ಲೆಟರ್ ಅನ್ನು ಸಹ ನೀಡಬೇಕು.