ಇಂಟರ್‌ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಖರೀದಿಸಿ
Instant Policy, No Medical Check-ups

ಭಾರತದಿಂದ ಸೌದಿ ಅರೇಬಿಯಾಗೆ ವೀಸಾ ಪಡೆಯುವುದು ಹೇಗೆ?

ವಿಷನ್ 2030ರ ಪ್ರಕಾರ, ಸೌದಿ ಅರೇಬಿಯಾ ತನ್ನ ಆರ್ಥಿಕತೆಯನ್ನು ಬಲಪಡಿಸಲು 100 ಮಿಲಿಯನ್‌ ಹೆಚ್ಚು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಅದು ಈ ಹಿಂದೆ ನಿರ್ಬಂಧಿತವಾಗಿದ್ದ ತನ್ನ ಗಡಿಯನ್ನು ಜಗತ್ತಿಗೆ ತೆರೆದಿಟ್ಟಿದೆ.

ಆದ್ದರಿಂದ, ಈಗ ಭಾರತೀಯರಿಗೆ ಸೌದಿ ಅರೇಬಿಯಾ ವೀಸಾಗೆ ಅಪ್ಲೈ ಮಾಡುವುದು ಮತ್ತು ಅಪ್ರೂವಲ್ ಪಡೆಯುವುದು ಸುಲಭವಾಗಿದೆ. ವ್ಯಾಲಿಡ್ ಆದ ಪಾಸ್‌ಪೋರ್ಟ್ ಹೊಂದಿರುವ ಭಾರತೀಯರು ಸೌದಿ ಅರೇಬಿಯಾ ಕಿಂಗ್‌ಡಮ್‌ನ ಅಧಿಕೃತ ವೀಸಾ ಅಪ್ಲಿಕೇಶನ್ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಮತ್ತು ವಿವರಗಳು ಮತ್ತು ಡಾಕ್ಯುಮೆಂಟ್‌ಗಳನ್ನು ಒದಗಿಸುವುದರ ಮೂಲಕ ಫಾರ್ಮ್ ಅನ್ನು ಭರ್ತಿ ಮಾಡಬಹುದು.

ಸೌದಿ ವೀಸಾ ಅಪ್ಲಿಕೇಶನ್‌ಗಾಗಿ ನೀವು ತಿಳಿದುಕೊಳ್ಳುವುದು ಅವಶ್ಯವಿರುವ ಎಲ್ಲಾ ಮಾಹಿತಿಗಳನ್ನು ನಾವು ಇಲ್ಲಿ ಪ್ರಸ್ತುತಪಡಿಸಿದ್ದೇವೆ.

ಭಾರತೀಯರಿಗೆ ಸೌದಿ ಅರೇಬಿಯಾ ವೀಸಾ ಪಡೆಯಲು ಆನ್‌ಲೈನ್ ಹಂತಗಳು

ಆನ್‌ಲೈನ್ ಮೋಡ್‌ನಲ್ಲಿ ಭಾರತೀಯರಿಗೆ ಸೌದಿ ಅರೇಬಿಯಾ ವೀಸಾಗೆ ಅರ್ಜಿ ಸಲ್ಲಿಸುವುದು ನೇರ, ಸರಳವಾಗಿದೆ. ಆದಾಗ್ಯೂ, ನೀವು ಅಪ್ಲೈ ಮಾಡುತ್ತಿರುವ ವೀಸಾ ವಿಧದ ಆಧಾರದ ಮೇಲೆ ಪ್ರೊಸೆಸ್ ಮತ್ತು ಡಾಕ್ಯುಮೆಂಟೇಷನ್ ಸ್ವಲ್ಪಮಟ್ಟಿಗೆ ಬದಲಾಗುತ್ತದೆ.

ಅನುಸರಿಸಬೇಕಾದ ಹಂತಗಳು ಇಲ್ಲಿವೆ -

ಹಂತ 1

ಕಿಂಗ್‌ಡಮ್‌ ಆಫ್ ಸೌದಿ ಅರೇಬಿಯಾದ ಮೋಫಾ(MOFA) ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ವೀಸಾ ಅಪ್ಲಿಕೇಶನ್‌ಗಳಿಗಾಗಿ ಖಾತೆಯನ್ನು ರಚಿಸಿ.

ಹಂತ 2.

ನಿಮ್ಮ ಭೇಟಿಯ ಉದ್ದೇಶಕ್ಕೆ ಅನುಗುಣವಾಗಿ ಭಾರತೀಯರಿಗೆ ಅನ್ವಯವಾಗುವ ವಿವಿಧ ರೀತಿಯ ಸೌದಿ ವೀಸಾಗಳಿಂದ ಒಂದನ್ನು ಆಯ್ಕೆ ಮಾಡಿ -

  • ಟೂರಿಸ್ಟ್

  • ವೈಯಕ್ತಿಕ ಭೇಟಿ

  • ಬಿಸಿನೆಸ್

  • ಎಂಪ್ಲಾಯ್‌ಮೆಂಟ್‌

  • ಸ್ಟೂಡೆಂಟ್

  • ಹಜ್

  • ಕುಟುಂಬ ಭೇಟಿ

  • ಡಿಪ್ಲೊಮ್ಯಾಟಿಕ್ ಮತ್ತು ಅಫೀಷಿಯಲ್

ಭಾರತೀಯರಿಗೆ ಒಟ್ಟು 16 ಸೌದಿ ಅರೇಬಿಯಾ ವೀಸಾ ವಿಧಗಳಿವೆ. ಅಧಿಕೃತ ಮೋಫಾ(MOFA) ವೆಬ್‌ಸೈಟ್‌ನಲ್ಲಿ ಅಪ್ಲೈ ಮಾಡುವಾಗ, ನೀವು ಎಲ್ಲಾ ವಿಧಗಳು ಮತ್ತು ಅವುಗಳ ವಿವರಗಳನ್ನು ಕಾಣಬಹುದು.

ಹಂತ 3.

ನಿಮ್ಮ ವಿವರಗಳನ್ನು ನಮೂದಿಸಿದ ಡೇಟಾದೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಆನ್‌ಲೈನ್ ಶುಲ್ಕವನ್ನು ಪಾವತಿಸಿ. ಮುಂದೆ, ಭರ್ತಿ ಮಾಡಿದ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಹಂತ 4.

ಅರ್ಜಿ ಫಾರ್ಮ್‌ನ ಹಾರ್ಡ್ ಕಾಪಿಯೊಂದಿಗೆ ಎಲ್ಲಾ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಲಗತ್ತಿಸಿ ಮತ್ತು ಅದನ್ನು ಹತ್ತಿರದ ಸೌದಿ ಅರೇಬಿಯನ್ ಎಂಬೆಸಿ ಕಚೇರಿಗೆ ಸಲ್ಲಿಸಿ.

ಭಾರತೀಯರಿಗೆ ಸೌದಿ ಅರೇಬಿಯಾ ವೀಸಾ ಪಡೆಯಲು ಆಫ್‌ಲೈನ್ ಹಂತಗಳು

ಭಾರತದಿಂದ ಸೌದಿ ಅರೇಬಿಯಾಗೆ ಆಫ್‌ಲೈನ್‌ನಲ್ಲಿ ವೀಸಾ ಪಡೆಯುವುದು ಹೇಗೆ ಎಂಬ ನಿಮ್ಮ ಹುಡುಕಾಟವು ಭಾರತದಲ್ಲಿರುವ ಕೇವಲ ಎರಡು ಎಂಬೆಸಿ ಕಚೇರಿಗಳೊಂದಿಗೆ ಕೊನೆಗೊಳ್ಳುತ್ತದೆ.

ಅವುಗಳು -

  • ಮುಂಬೈ ನಗರದಲ್ಲಿರುವ ಸೌದಿ ಅರೇಬಿಯಾ ಕಿಂಗ್‌ಡಮ್‌ನ ಕಾನ್ಸುಲೇಟ್‌.

  • ದೆಹಲಿಯಲ್ಲಿರುವ ಸೌದಿ ಅರೇಬಿಯಾ ಕಿಂಗ್‌ಡಮ್‌ನ ಎಂಬೆಸಿ.

ಈ ಎರಡು ಸೆಂಟ್‌ಗಳಿಂದ ನೀವು ಅಪ್ಲಿಕೇಶನ್ ಫಾರ್ಮ್ ಅನ್ನು ಸಂಗ್ರಹಿಸಬಹುದು. ಈಗ, ಈ ಹಂತಗಳನ್ನು ಅನುಸರಿಸಿ -

  • ಫಾರ್ಮ್‌ನೊಂದಿಗೆ ನೀಡಲಾದ ವೀಸಾ ವಿಧ, ಅರ್ಹತೆ, ಶುಲ್ಕಗಳು ಮತ್ತು ಡಾಕ್ಯುಮೆಂಟ್‌ಗಳಿಗೆ ಸಂಬಂಧಿಸಿದ ಸೂಚನೆಗಳನ್ನು ಓದಿ.

  • ವೈಯಕ್ತಿಕ ವಿವರಗಳನ್ನು ನಮೂದಿಸುವ ಫಾರ್ಮ್ ಅನ್ನು ಭರ್ತಿ ಮಾಡಿ. ಚೆಕ್‌ಲಿಸ್ಟ್‌ ಪ್ರಕಾರ ಡಾಕ್ಯುಮೆಂಟ್‌ಗಳನ್ನು ಲಗತ್ತಿಸಿ.

  • ಶುಲ್ಕದ ಜೊತೆಗೆ, ಸೌದಿ ಅರೇಬಿಯಾದ ಎಂಬೆಸಿ ಕಚೇರಿಗೆ ಫಾರ್ಮ್ ಅನ್ನು ಸಲ್ಲಿಸಿ.

ಭಾರತೀಯರಿಗೆ ಸೌದಿ ಅರೇಬಿಯಾ ವೀಸಾ ಪಡೆಯಲು ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಭಾರತದಿಂದ ಸೌದಿ ಅರೇಬಿಯಾಗೆ ಯಶಸ್ವಿಯಾಗಿ ವೀಸಾ ಪಡೆಯುವುದು ಹೇಗೆ ಎಂಬುದಕ್ಕೆ ಸರಿಯಾದ ಡಾಕ್ಯುಮೆಂಟ್‌ಗಳು ಪ್ರಮುಖವಾಗಿವೆ. ಕೆಲವು ಸಾಮಾನ್ಯ ಡಾಕ್ಯುಮೆಂಟ್‌ಗಳು:

  • ಪಾಸ್‌ಪೋರ್ಟ್ - ನೀವು ಸೌದಿ ಅರೇಬಿಯಾ ಪ್ರವೇಶಿಸಲು ಪ್ಲಾನ್ ಮಾಡಿರುವ ದಿನಾಂಕದಿಂದ ಕನಿಷ್ಠ 6 ತಿಂಗಳ ವ್ಯಾಲಿಡಿಟಿಯೊಂದಿಗೆ ವ್ಯಾಲಿಡ್ ಆಗಿರುವ ಭಾರತೀಯ ಪಾಸ್‌ಪೋರ್ಟ್.
  • ಫೋಟೋಗ್ರಾಫ್ – ಕಳೆದ 3 ತಿಂಗಳುಗಳ ಒಳಗೆ ಇತ್ತೀಚೆಗೆ ತೆಗೆದ ಬಿಳಿ ಬ್ಯಾಕ್‌ಗ್ರೌಂಡ್‌ನಲ್ಲಿರುವ ಅಪ್ಲಿಕೆಂಟ್‌ಗಳ 2 ಫೋಟೋ ಪ್ರತಿಗಳು, ಕನ್ನಡಕವಿಲ್ಲದೆಯೇ ಮುಖದ 85% ಕವರೇಜ್ ಇರಬೇಕು ಮತ್ತು ಗಾತ್ರ 35ಎಂಎಂ X 45ಎಂಎಂ ಇರಬೇಕು.
  • ವೀಸಾ ಅಪ್ಲಿಕೇಶನ್ ಫಾರ್ಮ್ - ಸರಿಯಾಗಿ ತುಂಬಿದ ಮತ್ತು ಸಹಿ ಮಾಡಿದ ವೀಸಾ ಅಪ್ಲಿಕೇಶನ್ ಫಾರ್ಮ್.
  • ಹೆಲ್ತ್ ಇನ್ಶೂರೆನ್ಸ್  - ಸೌದಿ ಅರೇಬಿಯಾದಲ್ಲಿ ಅನ್ವಯವಾಗುವ ಹೆಲ್ತ್ ಇನ್ಶೂರೆನ್ಸ್ ಕಾಪಿ.
  • ಮೆಡಿಕಲ್ ಫಿಟ್‌ನೆಸ್‌ ಸರ್ಟಿಫಿಕೇಟ್ - ಎಂಬೆಸಿಯ ವೈದ್ಯರು ಮೆಡಿಕಲ್ ಫಿಟ್‌ನೆಸ್‌ ಸರ್ಟಿಫಿಕೇಟ್ ಅನ್ನು ನೀಡುತ್ತಾರೆ.
  • ವಸತಿ - ಹೋಟೆಲ್ ಬುಕಿಂಗ್ ಅಥವಾ ವಸತಿ ವಿವರಗಳ ಪುರಾವೆ.

ವೀಸಾ ವಿಧಗಳ ಆಧಾರದ ಮೇಲೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ:

ವೀಸಾ ವಿಧ ಅಥವಾ ಭೇಟಿಯ ಉದ್ದೇಶ ಅಗತ್ಯವಿರುವ ವಿಶೇಷ ಡಾಕ್ಯುಮೆಂಟ್‌ಗಳು ಯಾರೆಲ್ಲಾ ಭೇಟಿ ನೀಡಬಹುದು
ಕುಟುಂಬ ಭೇಟಿ ವಿವಾಹಿತ ಕಪಲ್‌ಗಳಿಗೆ ಮ್ಯಾರೇಜ್ ಸರ್ಟಿಫಿಕೇಟ್, ಮಕ್ಕಳಿಗೆ ಬರ್ತ್ ಸರ್ಟಿಫಿಕೇಟ್ ಮತ್ತು ಪ್ರತಿಯೊಬ್ಬ ವಿಸಿಟರ್‌ಗೂ ಪೋಲಿಯೊ ಸರ್ಟಿಫಿಕೇಟ್ ಸದಸ್ಯರ ಜೊತೆಗೆ ಯಾವುದೇ ಕುಟುಂಬ
ಬಿಸಿನೆಸ್ ಭೇಟಿ ಚೇಂಬರ್ ಆಫ್ ಕಾಮರ್ಸ್‌ನಿಂದ ರೆಕಮಂಡೇಷನ್ ಲೆಟರ್, ಬಿಸಿನೆಸ್ ಸಂಪರ್ಕಗಳನ್ನು ತಿಳಿಸುವ ಕವರಿಂಗ್ ಲೆಟರ್, ಅಪ್ಲಿಕೆಂಟ್‌ಗಳ ಹೆಸರು ಹುದ್ದೆ, ಬಿಸಿನೆಸ್‌ನಲ್ಲಿನ ಪಾತ್ರ, ಸೌದಿಯಾ ಅರೇಬಿಯಾ ಭೇಟಿಯ ಪ್ರಾಯೋಜಕರಿಂದ ಆಹ್ವಾನ ಪತ್ರ, ಆಹ್ವಾನವನ್ನು ನೀಡಿರುವ ಕಂಪನಿಯ ರಿಜಿಸ್ಟ್ರೇಷನ್ ವಿವರಗಳು. ಮ್ಯಾನೇಜರ್‌ಗಳು, ಡೈರೆಕ್ಟರ್‌ಗಳು, ಅಸಿಸ್ಟೆಂಟ್‌ಗಳು, ಪರ್ಚೇಸ್/ಸ್ಟೋರ್ ಮ್ಯಾನೇಜರ್, ಮ್ಯಾನೇಜಿಂಗ್ ಡೈರೆಕ್ಟರ್‌ಗಳು, ಪಾರ್ಟ್‌ನರ್‌ಗಳು ಇತ್ಯಾದಿ ಹುದ್ದೆಗಳಲ್ಲಿರುವ ಜನರು ಮಾತ್ರ ಈ ಕೆಟಗರಿಯಲ್ಲಿ ಅಪ್ಲೈ ಮಾಡಬಹುದು.
ಟೆಂಪರರಿ ವರ್ಕ್ ವೀಸಾ ಚೇಂಬರ್ ಆಫ್ ಕಾಮರ್ಸ್‌ನಿಂದ ರೆಕಮಂಡೇಷನ್ ಲೆಟರ್, ಬಿಸಿನೆಸ್ ಸಂಪರ್ಕಗಳನ್ನು ತಿಳಿಸುವ ಕವರಿಂಗ್ ಲೆಟರ್, ಅಪ್ಲಿಕೆಂಟ್‌ಗಳ ಹೆಸರು ಹುದ್ದೆ, ಬಿಸಿನೆಸ್‌ನಲ್ಲಿನ ಪಾತ್ರ, ಸೌದಿಯಾ ಅರೇಬಿಯಾ ಭೇಟಿಯ ಪ್ರಾಯೋಜಕರಿಂದ ಆಹ್ವಾನ ಪತ್ರ, ಆಹ್ವಾನವನ್ನು ನೀಡಿರುವ ಕಂಪನಿಯ ರಿಜಿಸ್ಟ್ರೇಷನ್ ವಿವರಗಳು, ವರ್ಕ್ ಎಕ್ಸ್‌ಪೀರಿಯನ್ಸ್‌ ಲೆಟರ್, ಶೈಕ್ಷಣಿಕ ಡಾಕ್ಯುಮೆಂಟ್‌ಗಳು. ಟೆಕ್ನಿಷಿಯನ್‌ಗಳು, ಎಂಜಿನಿಯರ್‌ಗಳು, ಲೆಕ್ಚರರ್‌ಗಳು, ಟೀಚರ್‌ಗಳು, ಪ್ರೊಫೆಸರ್‌ಗಳು, ವಕೀಲರು, ಸಾಫ್ಟ್‌ವೇರ್ ಡೆವಲಪರ್‌ಗಳು, ಮೆಕ್ಯಾನಿಕ್‌ಗಳು, ವೈದ್ಯರು, ಇತ್ಯಾದಿ.
ಟ್ರಾನ್ಸಿಟ್ ವೀಸಾ ಚೇಂಬರ್ ಆಫ್ ಕಾಮರ್ಸ್‌ನಿಂದ ರೆಕಮಂಡೇಷನ್ ಲೆಟರ್, ಬಿಸಿನೆಸ್ ಸಂಪರ್ಕಗಳನ್ನು ತಿಳಿಸುವ ಕವರಿಂಗ್ ಲೆಟರ್ ಬಿಸಿನೆಸ್‌ಮೆನ್

ಭಾರತೀಯರಿಗೆ ಸೌದಿ ಅರೇಬಿಯಾ ವೀಸಾ ಪಡೆಯಲು ಇರುವ ಅರ್ಹತೆ ಏನು?

ಭಾರತೀಯ ನಾಗರಿಕರಿಗೆ ಸೌದಿ ಅರೇಬಿಯಾ ವೀಸಾಗೆ ಅರ್ಹತೆಯ ಮಾನದಂಡಗಳು -

  • ನೀವು ಸೌದಿ ಅರೇಬಿಯಾವನ್ನು ಪ್ರವೇಶಿಸಲು ಪ್ಲಾನ್ ಮಾಡಿುವ ದಿನಾಂಕದಿಂದ ಕನಿಷ್ಠ 6 ತಿಂಗಳ ವ್ಯಾಲಿಡಿಟಿ ಜೊತೆಗೆ ವ್ಯಾಲಿಡ್ ಆದ ಭಾರತೀಯ ಪಾಸ್‌ಪೋರ್ಟ್ ಹೊಂದಿರಬೇಕು.

  • 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಅಥವಾ ಪೋಷಕರ ಜೊತೆಯಲ್ಲಿರಬೇಕು.

  • ಸೌದಿ ಅರೇಬಿಯಾದಲ್ಲಿ ವ್ಯಾಲಿಡ್ ಆದ ಹೆಲ್ತ್ ಇನ್ಶೂರೆನ್ಸ್ ಹೊಂದಿರಬೇಕು.

  • ಬಿಸಿನೆಸ್ ಅಥವಾ ಕಮರ್ಷಿಯಲ್‌ ಪ್ರವಾಸಕ್ಕಾಗಿ ಕವರಿಂಗ್ ಲೆಟರ್, ಆಮಂತ್ರಣ ಪತ್ರ ಇತ್ಯಾದಿಯಂತಹ ಸರಿಯಾದ ಡಾಕ್ಯುಮೆಂಟ್‌ಗಳು.

ಭಾರತೀಯರಿಗೆ ಸೌದಿ ಅರೇಬಿಯಾ ವೀಸಾಗೆ ಅಪ್ಲೈ ಮಾಡಲು ಇರುವ ಶುಲ್ಕಗಳು ಯಾವುವು?

ಶುಲ್ಕದ ವಿವರಗಳು ಹೀಗಿವೆ:

ನಾರ್ಮಲ್ ಎಂಟ್ರಿ ಟೂರಿಸ್ಟ್ ವೀಸಾ 201.76 ಯುಎಸ್ಡಿ
ಸಿಂಗಲ್ ಎಂಟ್ರಿ ವರ್ಕ್ ವೀಸಾ 220.09 ಯುಎಸ್ಡಿ
ಸಿಂಗಲ್ ಎಂಟ್ರಿ ಬಿಸಿನೆಸ್ ವೀಸಾ 195.63 ಯುಎಸ್ಡಿ
ಸಿಂಗಲ್ ಎಂಟ್ರಿ ಟೂರಿಸ್ಟ್ ವೀಸಾ 195.63 ಯುಎಸ್ಡಿ

ಡಿಸ್‌ಕ್ಲೈಮರ್‌: ಯುಎಸ್‌ ಡಾಲರ್‌ಗಳಲ್ಲಿ ನೀಡಲಾದ ಮೇಲಿನ ಮೊತ್ತಗಳು ಡೈನಾಮಿಕ್ ಆಗಿರುತ್ತವೆ ಮತ್ತು ಮಾರುಕಟ್ಟೆಯ ಏರಿಳಿತಗಳ ಪ್ರಕಾರ ಬದಲಾವಣೆಗೆ ಒಳಪಟ್ಟಿರುತ್ತವೆ.

ಭಾರತೀಯರಿಗೆ ಸೌದಿ ಅರೇಬಿಯಾ ವೀಸಾದ ವ್ಯಾಲಿಡಿಟಿ ಏನು?

 

ಮಲ್ಟಿಪಲ್ ಎಂಟ್ರಿಗಳೊಂದಿಗಿನ ಸೌದಿ ವೀಸಾ ಸಾಮಾನ್ಯವಾಗಿ 1 ವರ್ಷಕ್ಕೆ ವ್ಯಾಲಿಡ್ ಆಗಿರುತ್ತದೆ. ಆದಾಗ್ಯೂ, ನೀವು ಭೇಟಿಗಳಲ್ಲಿ ಗರಿಷ್ಠ 90 ದಿನಗಳವರೆಗೆ ಉಳಿಯಬಹುದು.

ವ್ಯಾಲಿಡಿಟಿ ವಿವರಗಳನ್ನು ಕೆಳಗೆ ನೀಡಲಾಗಿದೆ -

ವಿಸಾ ವಿಧ ವ್ಯಾಲಿಡಿಟಿ ವಾಸ್ತವ್ಯ ಅವಧಿ
ಕುಟುಂಬ ಭೇಟಿ 60 ದಿನಗಳು 30 ದಿನಗಳು
ಬಿಸಿನೆಸ್ ಭೇಟಿ 90 ದಿನಗಳು 30 ದಿನಗಳು
ಟೆಂಪರರಿ ವರ್ಕ್ ವಿಸಿಟ್ 90 ದಿನಗಳು 90 ದಿನಗಳು
ಬಿಸಿನೆಸ್ ಟ್ರಾನ್ಸಿಟ್ 60 ದಿನಗಳು 72 ಗಂಟೆಗಳು

ಅಪ್ಲಿಕೇಶನ್ ಮತ್ತು ಪಾವತಿ ಸಲ್ಲಿಕೆ ನಂತರ, ನೀವು ನಿಮ್ಮ ಸೌದಿ ವೀಸಾ ಸ್ಟೇಟಸ್ ಅನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು.

ಸರಿಯಾದ ಡಾಕ್ಯುಮೆಂಟ್‌ಗಳು, ವೈಯಕ್ತಿಕ ವಿವರಗಳು ಮತ್ತು ಪ್ರೊಸೆಸಿಂಗ್ ಶುಲ್ಕವನ್ನು ಸಲ್ಲಿಸಿದರೆ ಭಾರತೀಯರಿಗೆ ಸೌದಿ ಅರೇಬಿಯಾ ವೀಸಾ ಪಡೆಯುವುದು ತುಂಬಾ ಸುಲಭ. ಇಲ್ಲಿ ಉಲ್ಲೇಖಿಸಲಾದ ವಿವರಗಳು ಅಪ್ಲಿಕೆಂಟ್‌ಗಳಿಗೆ ಹೆಚ್ಚಿನ ಪ್ರಮಾಣದ ಬೆಂಬಲ ನೀಡುತ್ತವೆ. ಅಪ್ಲಿಕೇಶನ್ ಸ್ಟೇಟಸ್ ಸ್ಥಿತಿ, ನಿರಾಕರಣೆಯ ಕಾರಣ ಮತ್ತು ಇತರ ವಿವರಗಳನ್ನು ಪರಿಶೀಲಿಸಲು ವ್ಯಕ್ತಿಗಳು ಸೌದಿ ಅರೇಬಿಯಾದ ಮೋಫಾ(MOFA) ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಪದೇಪದೇ ಕೇಳಲಾದ ಪ್ರಶ್ನೆಗಳು

ಸೌದಿ ಅರೇಬಿಯಾ ವೀಸಾ ಪಡೆಯಲು ಅಗತ್ಯವಾದ ಮೆಡಿಕಲ್ ಪರೀಕ್ಷೆಗಳು ಯಾವುವು?

ಪೋಲಿಯೊ, ಎಚ್‌ಐವಿ, ಹೆಪಟೈಟಿಸ್, ಸಿಫಿಲಿಸ್, ಆರ್‌ಬಿಸಿ ಕೌಂಟ್‌ಗಳು ಸೌದಿ ಅರೇಬಿಯಾ ವೀಸಾ ಪಡೆಯಲು ಅಗತ್ಯವಾದ ಮೆಡಿಕಲ್ ಪರೀಕ್ಷೆಗಳಾಗಿವೆ.

ಸೌದಿ ಅರೇಬಿಯಾ ವೀಸಾ ಪ್ರೊಸೆಸಿಂಗ್ ಸಮಯ ಎಷ್ಟು?

ಸೌದಿ ಅರೇಬಿಯಾಗೆ ವೀಸಾ ಪ್ರೊಸೆಸ್ ಆಗಲು ಕನಿಷ್ಠ 4-5 ದಿನಗಳಿಂದ ಗರಿಷ್ಠ 3 ವಾರಗಳವರೆಗೆ ಸಮಯ ಬೇಕಾಗಬಹುದು.

ಸೌದಿ ಅರೇಬಿಯಾ ವೀಸಾ ಅಪ್ಲಿಕೇಶನ್‌ಗೆ ಫೋಟೋದಲ್ಲಿ ಹೆಡ್‌ವೇರ್ ಅನ್ನು ಅನುಮತಿಸಲಾಗಿದೆಯೇ?

ಸೌದಿ ಅರೇಬಿಯಾ ವೀಸಾ ಅಪ್ಲಿಕೇಶನ್‌ಗೆ ತೆಗೆಯುವ ಫೋಟೋದಲ್ಲಿರುವ ಹೆಡ್‌ವೇರ್ ಧಾರ್ಮಿಕ ಪ್ರಕರಣಗಳಲ್ಲಿ ಮಾತ್ರ ಅಪ್ಲಿಕೇಬಲ್ ಆಗುತ್ತದೆ.