Thank you for sharing your details with us!

ಮನಿ ಇನ್ಶೂರೆನ್ಸ್ ಪಾಲಿಸಿ ಎಂದರೇನು?

ಮನಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವ ಪ್ರಯೋಜನಗಳು

ನಿಮ್ಮ ಹಣವು ಸುರಕ್ಷಿತವಾಗಿದ್ದಾಗ ಅಥವಾ ಸಾಗಣೆಯಲ್ಲಿದ್ದಾಗ ಕಳ್ಳತನ, ನಷ್ಟ ಅಥವಾ ಅಪಘಾತದ ಹಾನಿಯ ಸಂದರ್ಭದಲ್ಲಿ ನಿಮ್ಮನ್ನು ಮತ್ತು ನಿಮ್ಮ ಬಿಸಿನೆಸ್ ಅನ್ನು ರಕ್ಷಿಸಲು ಮನಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವುದು ಅತ್ಯಗತ್ಯ. ಆದರೆ ನಿಮಗೆ ನಿಜವಾಗಿಯೂ ಅದು ಏಕೆ ಬೇಕಾಗುತ್ತದೆ?

ನಿಮ್ಮ ಹಣವನ್ನು ನಿಮ್ಮ ಕಛೇರಿಯಿಂದ ಬ್ಯಾಂಕಿಗೆ (ಅಥವಾ ಯಾವುದೇ ಹಣಕಾಸು ಸಂಸ್ಥೆಗೆ) ಕೊಂಡೊಯ್ಯುತ್ತಿರುವಾಗ ಅದನ್ನು ರಕ್ಷಿಸಲು.
ನಿಮ್ಮ ಬಿಸಿನೆಸ್ ಮೇಲೆ ದರೋಡೆಯಾಗಿದ್ದರೆ ಮತ್ತು ಕಳ್ಳನು ಎಂದಿಗೂ ಪತ್ತೆಯಾಗದಿದ್ದರೆ, ಈ ಇನ್ಶೂರೆನ್ಸ್ ಮೂಲಕ ನಿಮ್ಮ ಹಣವನ್ನು ಇನ್ನೂ ನೀವು ಪಡೆಯಬಹುದು.
ಇದು ಕ್ಯಾಶ್ ಮತ್ತು ಕ್ಯಾಶ್ ಸಮಾನವಾದ ಬ್ಯಾಂಕ್ ಡ್ರಾಫ್ಟ್‌ಗಳು, ಕರೆನ್ಸಿ ನೋಟುಗಳು, ಖಜಾನೆ ನೋಟುಗಳು, ಚೆಕ್‌ಗಳು, ಪೋಸ್ಟಲ್ ಆರ್ಡರ್‌ಗಳು, ಮನಿ ಆರ್ಡರ್‌ಗಳು ಮತ್ತು ಹೆಚ್ಚಿನವುಗಳನ್ನು ಕವರ್ ಮಾಡುತ್ತದೆ.

ಏನೆಲ್ಲಾ ಕವರ್ ಆಗಬಹುದು?

ಮನಿ ಇನ್ಶೂರೆನ್ಸ್ ಪಾಲಿಸಿಯೊಂದಿಗೆ, ನೀವು ಇವುಗಳಿಗಾಗಿ ಕವರ್ ಅನ್ನು ಪಡೆಯುತ್ತೀರಿ...

Money in Transit

ಸಾಗಣೆಯಲ್ಲಿರುವ ಹಣ

ದರೋಡೆ, ಕಳ್ಳತನ* ಅಥವಾ ಅಪಘಾತದಂತಹ ಘಟನೆಗಳಿಂದ ನಿಮ್ಮನ್ನು ಮತ್ತು ನಿಮ್ಮ ಬಿಸಿನೆಸ್ ಅನ್ನು ಸಾಗಣೆಯಲ್ಲಿರುವ ಕ್ಯಾಶ್ ನಷ್ಟದ ವಿರುದ್ಧ ಕವರ್ ಮಾಡಲಾಗುತ್ತದೆ.

Money in a Safe or Strongroom

ತಿಜೋರಿ(ಸೇಫ್) ಅಥವಾ ಸ್ಟ್ರಾಂಗ್ ರೂಂನಲ್ಲಿರುವ ಹಣ

ನಿಮ್ಮ ಆವರಣದಲ್ಲಿ ಬೀಗ ಹಾಕಿದ ಸೇಫ್ ಅಥವಾ ಬೀಗ ಹಾಕಿದ ಸ್ಟ್ರಾಂಗ್ ರೂಂನಿಂದ ಕನ್ನ ಅಥವಾ ಇತರ ಘಟನೆಗಳಿಂದಾಗಿ ಹಣದ ಕಳ್ಳತನವಾದರೆ.

Money from the Cash Counter

ಕ್ಯಾಶ್ ಕೌಂಟರ್ ನಿಂದ ಹಣ

ದರೋಡೆ ಅಥವಾ ತಡೆಯುವಿಕೆಯಂತಹ ವಿಷಯಗಳಿಂದಾಗಿ ನಿಮ್ಮ ಗಲ್ಲಾಪೆಟ್ಟಿಗೆ ಅಥವಾ ಕ್ಯಾಶ್ ಕೌಂಟರ್‌ನಲ್ಲಿ ಇರಿಸಲಾಗಿರುವ ಹಣದ ನಷ್ಟವನ್ನು ಕವರ್ ಮಾಡುತ್ತದೆ.

Money on the Premises

ಆವರಣದಲ್ಲಿರುವ ಹಣ

ಅಪಘಾತ ಅಥವಾ ಕೆಲವು ದುರದೃಷ್ಟಕರ ಕಾರಣದಿಂದಾಗಿ ನಿಮ್ಮ ಆವರಣದಲ್ಲಿ ಇರಿಸಲಾಗಿರುವ ಯಾವುದೇ ಇತರ ಕ್ಯಾಶ್ ಅಥವಾ ಕರೆನ್ಸಿಯ ನಷ್ಟದಿಂದ ನೀವು ಕವರ್ ಅನ್ನು ಪಡೆಯುತ್ತೀರಿ.

ಏನೆಲ್ಲಾ ಕವರ್ ಆಗಿರುವುದಿಲ್ಲ?

ಡಿಜಿಟ್‌ನಲ್ಲಿ ನಾವು ಪಾರದರ್ಶಕತೆಯನ್ನು ನಂಬುತ್ತೇವೆ, ಆದ್ದರಿಂದ ನೀವು ಕವರ್ ಆಗಿರದ ಕೆಲವು ಸಂದರ್ಭಗಳನ್ನು ನೀವು ತಿಳಿದುಕೊಳ್ಳಬೇಕೆಂದು ನಾವು ಬಯಸುತ್ತೇವೆ - ನಂತರ ಯಾವುದೇ ಆಶ್ಚರ್ಯಗಳು ಇರದಂತೆ...

ದೋಷಗಳು ಮತ್ತು ಲೋಪಗಳು, ಅಥವಾ ವಿವರಿಸಲಾಗದ ಮತ್ತು ನಿಗೂಢ ನಷ್ಟಗಳಂತಹ ವಿಷಯಗಳಿಂದಾಗಿ ಹಣದ ನಷ್ಟ.

ನಿಮ್ಮ (ಇನ್ಶೂರ್ಡ್ ವ್ಯಕ್ತಿ) ಹೊರತಾಗಿ ಹಣವನ್ನು, ನಿಮ್ಮ ಯಾವುದೇ ಅಧಿಕೃತ ಉದ್ಯೋಗಿಗಳು ಅಥವಾ ಯಾವುದೇ ಮಾನ್ಯತೆ ಪಡೆದ ಸಾರಿಗೆ ಸಂಸ್ಥೆಗೆ ವಹಿಸಿಕೊಟ್ಟಾಗ ಆಗುವ ಯಾವುದೇ ನಷ್ಟಗಳು.

ಲಾಭದ ನಷ್ಟ, ಬಿಸಿನೆಸ್ ನಲ್ಲಿ ಅಡಚಣೆ, ಕಾನೂನು ಲಯಬಿಲಿಟಿ ಅಥವಾ ಮಾರ್ಕೆಟ್ ನಷ್ಟದಂತಹ ಪರಿಣಾಮಕ ಅಥವಾ ಕಾನ್ಸಿಕ್ವೆನ್ಷಿಯಲ್ ನಷ್ಟಗಳು.

ಹಣವನ್ನು ನಿಮ್ಮ ಬಿಸಿನೆಸ್ ಆವರಣವನ್ನು ಹೊರತುಪಡಿಸಿ ಬೇರೆಡೆ ಇರಿಸಿದ್ದು (ಮತ್ತು ಅದನ್ನು ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿಲ್ಲದಿದ್ದರೆ) ನಂತರ ನಷ್ಟವಾಗಿದ್ದರೆ.

ಹಣವನ್ನು ಸೇಫ್/ಸ್ಟ್ರಾಂಗ್ ರೂಂ ನಲ್ಲಿ ಲಾಕ್ ಮಾಡದಿದ್ದರೆ, ಕೆಲ ಗಂಟೆಗಳ ನಂತರ ನಿಮ್ಮ ಬಿಸಿನೆಸ್ ಆವರಣದಲ್ಲಿ ಸಂಭವಿಸುವ ನಷ್ಟ.

ನಿರ್ಲಕ್ಷಿಸಲಾದ ವಾಹನದಿಂದ ಹಣ ಕಳೆದುಹೋದರೆ.

ಕಾನೂನು ವಶಪಡಿಸಿಕೊಳ್ಳುವಿಕೆ, ಯುದ್ಧ, ನೈಸರ್ಗಿಕ ವಿಪತ್ತುಗಳು, ಪರಮಾಣು ಕೃತ್ಯಗಳು ಅಥವಾ ಭಯೋತ್ಪಾದನೆಯ ಪರಿಣಾಮವಾಗಿ ಸಂಭವಿಸಿದ ಯಾವುದೇ ನಷ್ಟಗಳು ಅಥವಾ ಹಾನಿಗಳು.

ನಿಮ್ಮ, ನಿಮ್ಮ ಉದ್ಯೋಗಿಗಳು ಅಥವಾ ಥರ್ಡ್ ಪಾರ್ಟಿಯ ಯಾವುದೇ ಪ್ರಾಪರ್ಟಿಗೆನಷ್ಟ ಅಥವಾ ಹಾನಿ.

ಯಾವುದೇ ವೈಯಕ್ತಿಕ ಗಾಯ ಅಥವಾ ನೋವು.

ನಿಮಗಾಗಿ ಸರಿಯಾದ ಮನಿ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವುದು ಹೇಗೆ?

  • ಸಂಪೂರ್ಣ ಕವರೇಜ್ ಪಡೆಯಿರಿ - ನಿಮ್ಮ ಬಿಸಿನೆಸ್ ನ ಹಣಕ್ಕೆ ಎಲ್ಲಾ ಅಪಾಯಗಳಿಂದ ಗರಿಷ್ಠ ಕವರೇಜ್ ಅನ್ನು ಒದಗಿಸುವ ಪಾಲಿಸಿಯನ್ನು ಹುಡುಕುವುದು ನೀವು ಮಾಡಬೇಕಾದ ಮೊದಲನೆಯ ಕೆಲಸವಾಗಿದೆ.
  • ಸರಿಯಾದ ಸಮ್ ಇನ್ಶೂರ್ಡ್ ಅನ್ನು ಆರಿಸಿ - ನಿಮ್ಮ ಇಇಐ ಗಾಗಿ, ನಿಮ್ಮ ಬಿಸಿನೆಸ್ ನ ಸ್ವರೂಪ ಮತ್ತು ಗಾತ್ರ ಮತ್ತು ನೀವು ಬಳಸುವ ಸಲಕರಣೆಗಳ ವಿಧವನ್ನು ಆಧರಿಸಿ ನೀವು ನಿಮ್ಮ ಸಮ್ ಇನ್ಶೂರ್ಡ್ ಅನ್ನು ಕಸ್ಟಮೈಸ್ ಮಾಡಬಹುದಾದ ಪಾಲಿಸಿಯನ್ನು ಆಯ್ಕೆ ಮಾಡಲು ಪ್ರಯತ್ನಿಸಿ.
  •  ಸುಲಭವಾದ ಕ್ಲೈಮ್‌ಗಳ ಪ್ರಕ್ರಿಯೆಗಾಗಿ ಹುಡುಕಾಡಿ - ಕ್ಲೈಮ್‌ಗಳು ಬಹಳ ಮುಖ್ಯವಾಗಿರುವುದರಿಂದ, ಸುಲಭವಾದ ಕ್ಲೈಮ್‌ಗಳ ಪ್ರಕ್ರಿಯೆಯನ್ನು ನೀಡಬಲ್ಲ ಪಾಲಿಸಿಯನ್ನು ಆಯ್ಕೆ ಮಾಡಿ, ಇದು ನಿಮ್ಮನ್ನು ಮತ್ತು ನಿಮ್ಮ ಬಿಸಿನೆಸ್ ಅನ್ನು ಬಹಳಷ್ಟು ತೊಂದರೆಗಳಿಂದ ದೂರವಿಡಬಹುದು.
  • ಹೆಚ್ಚುವರಿ ಸರ್ವೀಸ್ ಪ್ರಯೋಜನಗಳಿವೆಯೇ - 24X7 ಗ್ರಾಹಕ ನೆರವು, ಬಳಸಲು ಸುಲಭವಾದ ಮೊಬೈಲ್ ಅಪ್ಲಿಕೇಶನ್ ಮತ್ತು ಹೆಚ್ಚಿನವುಗಳಂತಹ ಸಾಕಷ್ಟು ಇತರ ಪ್ರಯೋಜನಗಳನ್ನು ಒದಗಿಸುವ ಇನ್ಶೂರೆನ್ಸ್ ಕಂಪನಿಯನ್ನು ನೋಡಲು ಪ್ರಯತ್ನಿಸಿ.
  • ವಿವಿಧ ಪಾಲಿಸಿಗಳನ್ನು ಹೋಲಿಕೆ ಮಾಡಿ - ಅಂತಿಮವಾಗಿ, ಈ ವೈಶಿಷ್ಟ್ಯಗಳು ಮತ್ತು ಕೈಗೆಟುಕುವ ಬೆಲೆಯಲ್ಲಿ ನಿಮ್ಮ ಬಿಸಿನೆಸ್ ಗೆ ಸೂಕ್ತವಾದ ಕವರೇಜ್ ಪಡೆಯುವ ಆಧಾರದ ಮೇಲೆ ವಿವಿಧ ಪಾಲಿಸಿಗಳನ್ನು ಹೋಲಿಕೆ ಮಾಡಿ. ನೆನಪಿಡಿ, ಕೆಲವೊಮ್ಮೆ ಕಡಿಮೆ ಪ್ರೀಮಿಯಂಗಳನ್ನು ಹೊಂದಿರುವ ಪಾಲಿಸಿಗಳು ನಿಮ್ಮ ಬಿಸಿನೆಸ್ ಗೆ ಉತ್ತಮ ಆಯ್ಕೆಯಾಗಿರುವುದಿಲ್ಲ, ಏಕೆಂದರೆ ಅವುಗಳು ಉತ್ತಮ ವೈಶಿಷ್ಟ್ಯಗಳನ್ನು ನೀಡದಿರಬಹುದು!

ಮನಿ ಇನ್ಶೂರೆನ್ಸ್ ಪಾಲಿಸಿ ಯಾರಿಗೆಲ್ಲಾ ಬೇಕಾಗುತ್ತದೆ?

ಹಣ ಅಥವಾ ವಹಿವಾಟುಗಳೊಂದಿಗೆ ವ್ಯವಹರಿಸುವ ಯಾವುದೇ ಬಿಸಿನೆಸ್ (ಅಂದರೆ ಎಲ್ಲಾ ಬಿಸಿನೆಸ್ ಗಳು!) ಎಷ್ಟು ಜಾಗರೂಕರಾಗಿದ್ದರೂ ಸಾಲದು. ಅದಕ್ಕಾಗಿಯೇ ಮನಿ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಒಳ್ಳೆಯದು, ವಿಶೇಷವಾಗಿ:

ನಿಮ್ಮ ವ್ಯಾಪಾರದ ನಿಯಮಿತ ಕಾರ್ಯಾಚರಣೆಗಳಿಗಾಗಿ ನೀವು ಆಗಾಗ್ಗೆ ದೊಡ್ಡ ಮೊತ್ತದ ಹಣವನ್ನು ಡ್ರಾ ಮಾಡುತ್ತಿದ್ದರೆ

ಅಂದರೆ, ಸಂಬಳ ಪೇಮೆಂಟ್ ಗಾಗಿ ಅಥವಾ ದಿನನಿತ್ಯದ ವಹಿವಾಟುಗಳಿಗಾಗಿ.

ನಿಮ್ಮ ಬಿಸಿನೆಸ್ ಗ್ರಾಹಕರಿಂದ ಸಿಗುವ ಬಹಳಷ್ಟು ಕ್ಯಾಶ್ ನೊಂದಿಗೆ ವ್ಯವಹರಿಸುತ್ತಿದ್ದ

ಇದು ರೆಸ್ಟೋರೆಂಟ್‌ಗಳು ಮತ್ತು ಕೆಫೆಗಳು ಮತ್ತು ಅನೇಕ ರಿಟೈಲ್ ಅಂಗಡಿಗಳು ಅಥವಾ ಥಿಯೇಟರ್‌ಗಳನ್ನು ಒಳಗೊಂಡಿರಬಹುದು.

ನಿಮ್ಮ ಬಿಸಿನೆಸ್, ತನ್ನ ಆವರಣದಲ್ಲಿ ಬೀಗ ಹಾಕಿದ ಸೇಫ್/ಸ್ಟ್ರಾಂಗ್ ರೂಂನಲ್ಲಿ ಹಣವನ್ನು ಸಂಗ್ರಹಿಸುತ್ತಿದ್ದರೆ

ಬ್ಯಾಂಕಿಂಗ್ ಸಂಸ್ಥೆಗಳು ಅಥವಾ ಕ್ಯಾಸಿನೊಗಳಂತೆ.