Thank you for sharing your details with us!

ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ಎಂದರೇನು?

ಆದರೆ, ನಿಮಗೆ ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ಏಕೆ ಬೇಕಾಗುತ್ತದೆ?

1
ಒಡೆದ ಗಾಜಿನ ಕಿಟಕಿಯ ರಿಪ್ಲೇಸ್‌ಮೆಂಟ್ ಗಾಗಿ ಪ್ರತಿ ಚದರ ಅಡಿಗೆ ₹1,200 ವರೆಗೆ ವೆಚ್ಚವಾಗಬಹುದು! (1)
2
ಸೆಕ್ಯೂರಿಟಿ ಮತ್ತು ಅಲಾರಾಂ ವ್ಯವಸ್ಥೆಗಳ ರಿಪೇರಿ ಅಥವಾ ರಿಪ್ಲೇಸ್‌ಮೆಂಟ್ ಗಾಗಿ ನಿಮಗೆ ಸುಮಾರು ₹75,000 ವೆಚ್ಚವಾಗಬಹುದು.  (2)

ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ?

ನೀವು ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ಅನ್ನು ಪಡೆದಾಗ, ಇಂತಹ ಸಂದರ್ಭಗಳಲ್ಲಿ ಕವರ್ ಅನ್ನು ಪಡೆಯುತ್ತೀರಿ...

ನಷ್ಟ ಅಥವಾ ಡ್ಯಾಮೇಜ್

ನಿಮ್ಮ ಬಿಸಿನೆಸ್ ಆವರಣದಲ್ಲಿ ಪ್ಲೇಟ್ ಗ್ಲಾಸ್‌ಗೆ ಯಾವುದೇ ಅಪಘಾತದ ನಷ್ಟ ಅಥವಾ ಡ್ಯಾಮೇಜ್.

ಕಿಟಕಿ ಫ್ರೇಮ್ ಗಳ ರಿಪ್ಲೇಸ್‌ಮೆಂಟ್

ಹಾನಿಗೊಳಗಾದ ಕಿಟಕಿಯ ಫ್ರೇಮ್ ಗಳು ಅಥವಾ ಚೌಕಟ್ಟನ್ನು(ಫ್ರೇಮ್‌ವರ್ಕ್‌) ಬದಲಿಸುವ ವೆಚ್ಚವನ್ನು ಸಹ ನಿಮಗಾಗಿ ಕವರ್ ಮಾಡಲಾಗುತ್ತದೆ(ಆದರೆ ಸವೆತದ ಸರಿಯಾದ ಪರಿಗಣನೆಯೊಂದಿಗೆ).

ಎರೆಕ್ಷನ್ ಬೋರ್ಡಿಂಗ್

ಪ್ಲೇಟ್ ಗ್ಲಾಸ್ ಹಾನಿಗೊಳಗಾದ ನಂತರ ಅಗತ್ಯವಾಗಬಹುದಾದ ಯಾವುದೇ ತಾತ್ಕಾಲಿಕ ಬೋರ್ಡಿಂಗ್ ಅನ್ನು ನಿರ್ಮಿಸುವ ವೆಚ್ಚವನ್ನು ಸಹ ಈ ಪಾಲಿಸಿ ಕವರ್ ಮಾಡುತ್ತದೆ.

ಅಲಾರಮ್ ಗಳು ಮತ್ತು ವೈರಿಂಗ್ ನ ರಿಪ್ಲೇಸ್‌ಮೆಂಟ್

ಗಾಜಿನ ಮುರಿಯುವ ಮೊದಲು ನೀವು ಯಾವುದೇ ಅಲಾರ್ಮ್ ಟೇಪ್‌ಗಳು ಅಥವಾ ವೈರಿಂಗ್ ಅನ್ನು ಅದಕ್ಕೆ ಜೋಡಿಸಿದ್ದರೆ, ಅವುಗಳ ರಿಪ್ಲೇಸ್‌ಮೆಂಟ್ ಗಾಗಿ ನಿಮಗೆ ಕವರ್ ನೀಡಲಾಗುತ್ತದೆ.

ಸೈನ್ ಗಳ ಅಥವಾ ಅಕ್ಷರಗಳ ರಿಪ್ಲೇಸ್‌ಮೆಂಟ್

ಮುರಿದ ಪ್ಲೇಟ್ ಗ್ಲಾಸ್‌ನಲ್ಲಿರುವ ಯಾವುದೇ ಅಕ್ಷರಗಳು, ಸೈನ್ ಗಳು ಅಥವಾ ಅಲಂಕರಣವನ್ನು ನೀವು ಬದಲಾಯಿಸಬೇಕಾದರೆ ನಿಮಗೆ ಕವರ್ ನೀಡಲಾಗುತ್ತದೆ.

ಏನೆಲ್ಲಾ ಕವರ್ ಆಗಿರುವುದಿಲ್ಲ?

ನಾವು ಪಾರದರ್ಶಕತೆಯನ್ನು ಬಲವಾಗಿ ನಂಬುವ ಕಾರಣ, ಕವರ್ ಮಾಡಲಾಗದ ಕೆಲವು ಸನ್ನಿವೇಶಗಳನ್ನು ಇಲ್ಲಿ ನೀಡಿದ್ದೇವೆ...

ಭೂಕಂಪಗಳು, ಪ್ರವಾಹಗಳು, ಬಿರುಗಾಳಿ ಅಥವಾ ಚಂಡಮಾರುತಗಳಂತಹ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿಗಳು ಮತ್ತು ನಷ್ಟಗಳನ್ನು ಕವರ್ ಮಾಡಲಾಗುವುದಿಲ್ಲ.

ಬೆಂಕಿ, ಸ್ಫೋಟಗಳು, ಅನಿಲ ಅಥವಾ ಶಾಖದಿಂದ ಉಂಟಾಗುವ ನಷ್ಟಗಳು ಅಥವಾ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ.

ಪ್ಲೇಟ್ ಗ್ಲಾಸ್‌ಗೆ ಯಾವುದೇ ಹಾನಿಯಾಗದ ರೀತಿಯಲ್ಲಿ ಫ್ರೇಮ್ ಅಥವಾ ಫ್ರೇಮ್‌ವರ್ಕ್‌ಗೆ ಹಾನಿಯುಂಟಾಗಿದ್ದರೆ, ಅದನ್ನು ಕವರ್ ಮಾಡಲಾಗುವುದಿಲ್ಲ.

ಯಾವುದೇ ಪರಿಣಾಮಕ ಅಥವಾ ಕಾನ್ಸಿಕ್ವೆನ್ಷಿಯಲ್ ನಷ್ಟಗಳಿಗೆ (ಲಾಭದ ನಷ್ಟ ಅಥವಾ ಬಿಸಿನೆಸ್ ಅಡಚಣೆಯಂತಹ) ಕವರ್ ನೀಡಲಾಗುವುದಿಲ್ಲ.

ಪ್ಲೇಟ್ ಗ್ಲಾಸ್ ಅನ್ನು ಬದಲಾಯಿಸುವಾಗ, ತೆಗೆದುಹಾಕುವಾಗ ಅಥವಾ ರಿಪೇರಿ ಮಾಡುವಾಗ ಸಂಭವಿಸುವ ಹಾನಿಗಳು ಮತ್ತು ನಷ್ಟಗಳನ್ನು ಕವರ್ ಮಾಡಲಾಗುವುದಿಲ್ಲ.

ಯುದ್ಧ, ಗಲಭೆ, ಮುಷ್ಕರ ಅಥವಾ ಪರಮಾಣು ದುರಂತದಿಂದ ಉಂಟಾಗುವ ನಷ್ಟಗಳನ್ನು ಕವರ್ ಮಾಡಲಾಗುವುದಿಲ್ಲ.

ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ನ ವೆಚ್ಚ ಎಷ್ಟಾಗುತ್ತದೆ?

ಕವರೇಜ್ ನ ವಿಧಗಳು

ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ಅನ್ನು ಹೊಂದಿರುವ ಪ್ರಯೋಜನಗಳು

ಈ ಪಾಲಿಸಿಯನ್ನು ತಮ್ಮ ಬಿಲ್ಡಿಂಗ್ ಅಥವಾ ಆವರಣದಲ್ಲಿ ಯಾವುದೇ ಒಂದು ರೀತಿಯಲ್ಲಿ ಗಾಜನ್ನು ಬಳಸುವ ಬಿಸಿನೆಸ್ ಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಪ್ಲೇಟ್ ಗ್ಲಾಸ್ ನ ಆಕಸ್ಮಿಕ ಒಡೆತದ ಸಂದರ್ಭದಲ್ಲಿ ನಿಮ್ಮ ಬಿಸಿನೆಸ್ ಸಾಕಷ್ಟು ಹಣಕಾಸಿನ ನಷ್ಟವನ್ನು ಎದುರಿಸಬೇಕಾಗಿಲ್ಲ.
ಒಂದು ಕೆಟ್ಟ ಪರಿಸ್ಥಿತಿಯನ್ನು ಎದುರಿಸಿದ ನಂತರವೂ ನಿಮ್ಮ ಬಿಸಿನೆಸ್ ಇನ್ನಷ್ಟು ಸುಗಮವಾಗಿ ನಡೆಯುವಂತೆ ಇದು ಸಹಾಯ ಮಾಡುತ್ತದೆ!

ಯಾರಿಗೆಲ್ಲಾ ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ಬೇಕಾಗಿರುತ್ತದೆ?

ನೀವು ಅಥವಾ ನಿಮ್ಮ ಬಿಸಿನೆಸ್ ಸಂಸ್ಥೆಗಳು ಸ್ವಲ್ಪಮಟ್ಟಿನಲ್ಲಾದರೂ ಪ್ಲೇಟ್ ಗ್ಲಾಸ್ ಅನ್ನು ಅಳವಡಿಸಿದ್ದರೆ, ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ಅತ್ಯಂತ ಮುಖ್ಯವಾದದು ಎಂದು ನೀವು ಕಾಣಬಹುದು. ಉದಾಹರಣೆಗೆ, ಒಂದು ವೇಳೆ...

ನಿಮ್ಮ ಬಿಸಿನೆಸ್ ಗಾಜಿಗೆ ಸಂಬಂಧಪಟ್ಟಿದ್ದರೆ

ಉದಾಹರಣೆಗೆ ಫರ್ನಿಚರ್ ಮಳಿಗೆಗಳು, ಗ್ಲಾಸ್ ಡೀಲರ್‌ಶಿಪ್‌ಗಳು ಮತ್ತು ಹೆಚ್ಚಿನವು.

ನಿಮ್ಮ ಬಿಸಿನೆಸ್ ಅಲಂಕಾರಕ್ಕಾಗಿ ಪ್ಲೇಟ್ ಗ್ಲಾಸ್ ಅನ್ನು ಬಳಸುತ್ತಿದ್ದ

ಶೋರೂಮ್‌ಗಳು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಥಿಯೇಟರ್‌ಗಳು ಇತ್ಯಾದಿಗಳಂತೆ.

ನಿಮ್ಮ ಬಿಸಿನೆಸ್ ಆವರಣದಲ್ಲಿ ಹಲವಾರು ಪ್ಲೇಟ್ ಗ್ಲಾಸ್ ಕಿಟಕಿಗಳಿದ್ದರೆ

ಉದಾಹರಣೆಗೆ, ಕಚೇರಿಗಳು, ಅಂಗಡಿಗಳು, ಬುಟೀಕ್ ಗಳು, ಇತ್ಯಾದಿ.

ಸರಿಯಾದ ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ಅನ್ನು ಆರಿಸುವುದು ಹೇಗೆ?

  • ವಿವಿಧ ಪಾಲಿಸಿಗಳನ್ನು ಹೋಲಿಕೆ ಮಾಡಿ - ಹಣವನ್ನು ಉಳಿಸುವ ಮಾರ್ಗಗಳನ್ನು ಕಂಡುಹಿಡಿಯುವುದು ಯಾವಾಗಲೂ ಉತ್ತಮವಾಗಿರುತ್ತದೆ, ಕೆಲವೊಮ್ಮೆ ಕಡಿಮೆ ಪ್ರೀಮಿಯಂಗಳನ್ನು ಹೊಂದಿರುವ ಪಾಲಿಸಿಗಳು ನಿಮ್ಮ ಬಿಸಿನೆಸ್ ಗೆ ಉತ್ತಮ ಆಯ್ಕೆಯಾಗಿರುವುದಿಲ್ಲ, ಏಕೆಂದರೆ ಅವುಗಳು ನಿಮಗೆ ಸರಿಯಾದ ಕವರೇಜ್ ಅನ್ನು ನೀಡದಿರಬಹುದು. ಆದ್ದರಿಂದ, ಕೈಗೆಟುಕುವ ಬೆಲೆಯಲ್ಲಿ ನಿಮಗೆ ಸೂಕ್ತವಾದುದನ್ನು ಕಂಡುಹಿಡಿಯಲು ವಿವಿಧ ಪಾಲಿಸಿಗಳ ವೈಶಿಷ್ಟ್ಯಗಳು ಮತ್ತು ಪ್ರೀಮಿಯಂಗಳನ್ನು ಹೋಲಿಕೆ ಮಾಡಿ.
  • ನೀವು ಸಂಪೂರ್ಣ ಕವರೇಜ್ ಅನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ - ನಿಮ್ಮ ಬಿಸಿನೆಸ್ ಮತ್ತು ಅದರ ಆವರಣದಲ್ಲಿರುವ ಪ್ಲೇಟ್ ಗ್ಲಾಸ್‌ಗೆ ಎಲ್ಲಾ ಅಪಾಯಗಳಿಂದ ಗರಿಷ್ಠ ಕವರೇಜ್ ಅನ್ನು ಒದಗಿಸುವ ಪಾಲಿಸಿಯನ್ನು ನೋಡಿ.
  • ಸರಿಯಾದ ಸಮ್ ಇನ್ಶೂರ್ಡ್ ಅನ್ನು ಆರಿಸಿ - ನಿಮ್ಮ ವ್ಯಾಪಾರಕ್ಕೆ ಯಾವುದು ಉತ್ತಮ ಎಂಬುದರ ಆಧಾರದ ಮೇಲೆ, ಪ್ಲೇಟ್ ಗ್ಲಾಸ್‌ನ ವಾಸ್ತವಿಕ ಮೌಲ್ಯ ಅಥವಾ ರಿಪ್ಲೇಸ್‌ಮೆಂಟ್ ಮೌಲ್ಯವನ್ನು ಅವಲಂಬಿಸಿ ಸಮ್ ಇನ್ಶೂರ್ಡ್ ನ ಆಯ್ಕೆ ಮಾಡಲು ಪ್ರಯತ್ನಿಸಿ.
  • ಸುಲಭವಾದ ಕ್ಲೈಮ್‌ಗಳ ಪ್ರಕ್ರಿಯೆಗಾಗಿ ಹುಡುಕಾಡಿ - ಕ್ಲೈಮ್‌ಗಳು ಬಹಳ ಮುಖ್ಯವಾಗಿರುವುದರಿಂದ, ಸುಲಭವಾದ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿರುವ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆ ಮಾಡಿ, ಇದು ನಿಮ್ಮನ್ನು ಮತ್ತು ನಿಮ್ಮ ಬಿಸಿನೆಸ್ ಅನ್ನು ಬಹಳಷ್ಟು ತೊಂದರೆಗಳಿಂದ ದೂರವಿಡಬಹುದು.
  • ನೀವು ಹೆಚ್ಚುವರಿ ಸರ್ವೀಸ್ ಪ್ರಯೋಜನಗಳನ್ನು ಪಡೆಯಬಹುದೇ ಎಂದು ನೋಡಿ - ಸಾಕಷ್ಟು ಇನ್ಶೂರೆನ್ಸ್ ಕಂಪನಿಗಳು ಎಲ್ಲಾ ರೀತಿಯ ಇತರ ಪ್ರಯೋಜನಗಳನ್ನು ನೀಡುತ್ತವೆ, ಉದಾಹರಣೆಗೆ 24X7 ಗ್ರಾಹಕ ನೆರವು, ಬಳಸಲು ಸುಲಭವಾದ ಮೊಬೈಲ್ ಅಪ್ಲಿಕೇಶನ್‌ಗಳು ಇತ್ಯಾದಿ.

ಭಾರತದಲ್ಲಿ ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು