Thank you for sharing your details with us!

ಪ್ರೊಫೆಷನಲ್ ಲಯಬಿಲಿಟಿ ಇನ್ಶೂರೆನ್ಸ್ ಎಂದರೇನು?

ನಿಮಗೆ ಪ್ರೊಫೆಷನಲ್ ಲಯಬಿಲಿಟಿ ಇನ್ಶೂರೆನ್ಸ್ ಏಕೆ ಬೇಕು?

ಪ್ರೊಫೆಷನಲ್ ಇಂಡೆಮ್ನಿಟಿ ಅಥವಾ ಪ್ರೊಫೆಷನಲ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯು ಅಸಮರ್ಪಕ ಕೆಲಸ, ದೋಷಗಳು ಅಥವಾ ನೆಗ್ಲಿಜೆನ್ಸಿ ಕ್ರಮಗಳಂತಹ ವಿಷಯಗಳ ಕ್ಲೈಂಟ್‌ಗಳು, ಅವರ ವಿರುದ್ಧ ಮಾಡಿದ ಕ್ಲೈಮ್‌ಗಳ ವಿರುದ್ಧ ಯಾವುದೇ ಕಂಪನಿಗಳನ್ನು ಮತ್ತು ಪ್ರೊಫೆಷನಲ್‌ಗಳನ್ನು ರಕ್ಷಿಸುತ್ತದೆ. ಆದರೆ ನಿಮಗೆ ನಿಜವಾಗಿಯೂ ಈ ಪಾಲಿಸಿಯು ಏಕೆ ಬೇಕು?

ಯಾರಾದರೂ ನಿಮ್ಮ ವಿರುದ್ಧ ಕ್ಲೈಮ್ ಮಾಡಿದರೆ, ದೊಡ್ಡ ಲೀಗಲ್ ಎಕ್ಸ್‌ಪೆನ್ಸ್‌ಗಳ ವಿರುದ್ಧ ನಿಮ್ಮನ್ನು ಮತ್ತು ನಿಮ್ಮ ಬಿಸಿನೆಸ್ ಅನ್ನು ರಕ್ಷಿಸಲಾಗುತ್ತದೆ.
ನೀವು ಮತ್ತು ನಿಮ್ಮ ಬಿಸಿನೆಸ್ ಎಷ್ಟೇ ಸಮರ್ಥ ಮತ್ತು ಪ್ರಾಮಾಣಿಕರಾಗಿದ್ದರೂ, ನೀವು ಯಾವಾಗ ದುರದೃಷ್ಟವಂತರಾಗುತ್ತೀರಿ ಎಂದು ಹೇಳಲು ಸಾಧ್ಯವಿಲ್ಲ.
ಇದು ನಿಮ್ಮ ಬಿಸಿನೆಸ್ ಅನ್ನು ಹೆಚ್ಚು ಸುಗಮವಾಗಿ ನಡೆಸಲು ಸಹಾಯ ಮಾಡುತ್ತದೆ, ಹಾಗಾಗಿ ನೀವು ಎಕ್ಸ್‌ಪೆನ್ಸಿವ್ ಮೊಕದ್ದಮೆಗಳ ಬಗ್ಗೆ ಹೆಚ್ಚಿನ ಚಿಂತಿಸಬೇಕಾಗಿಲ್ಲ.
ಪ್ರೊಫೆಷನಲ್‌ಗಳು ಮತ್ತು ಬಿಸಿನೆಸ್‌ಗಳು ತಮ್ಮ ಸರ್ವೀಸ್‌ಗಳ ವಿಷಯಕ್ಕೆ ಬಂದರೆ, ಅವು ಎದುರಿಸುವ ಅಪಾಯಗಳಿಗಾಗಿ ಈ ಪಾಲಿಸಿಯನ್ನು ವಿಶೇಷವಾಗಿ ಡಿಸೈನ್ ಮಾಡಲಾಗಿದೆ.
ಏನಾದರೂ ತಪ್ಪು ನಡೆದಲ್ಲಿ ನಿಮ್ಮ ಕಸ್ಟಮರ್‌ಗಳು ಮತ್ತು ಕ್ಲೈಂಟ್‌ಗಳು, ಕಾಂಪನ್ಸೇಶನ್ ಗ್ಯಾರಂಟಿಯನ್ನು ಪ್ರಶಂಸಿಸುತ್ತಾರೆ.

ಪ್ರೊಫೆಷನಲ್ ಇಂಡೆಮ್ನಿಟಿ ಇನ್ಶೂರೆನ್ಸ್‌ ಏನನ್ನು ಕವರ್ ಮಾಡುತ್ತದೆ?

ನೀವು ಪ್ರೊಫೆಷನಲ್ ಲಯಬಿಲಿಟಿ ಇನ್ಶೂರೆನ್ಸ್ ಅನ್ನು ಪಡೆದಾಗ, ನೀವು ಈ ಕೆಳಗಿನವುಗಳಿಗೆ ಕವರ್ ಆಗುತ್ತೀರಿ…

ಪ್ರೊಫೆಷನಲ್ ನಿರ್ಲಕ್ಷತೆ

ಪ್ರೊಫೆಷನಲ್ ನಿರ್ಲಕ್ಷತೆ

ಯಾವುದೇ ನಿರ್ಲಕ್ಷ್ಯದ ಕೃತ್ಯಗಳು ಅಥವಾ ಕೆಲವು ಉದ್ದೇಶಪೂರ್ವಕ ದೋಷಗಳಿಗಾಗಿ ಯಾರಾದರೂ ನಿಮ್ಮ ವಿರುದ್ಧ (ಅಥವಾ ನಿಮ್ಮ ಎಂಪ್ಲಾಯೀಗಳ ವಿರುದ್ಧದ) ಕ್ಲೈಮ್ ಮಾಡಿದರೆ.

ದೈಹಿಕ ಗಾಯ ಮತ್ತು ಪ್ರಾಪರ್ಟಿ ಡ್ಯಾಮೇಜ್

ದೈಹಿಕ ಗಾಯ ಮತ್ತು ಪ್ರಾಪರ್ಟಿ ಡ್ಯಾಮೇಜ್

ನಿಮ್ಮ ಸರ್ವೀಸ್‌ಗಳಲ್ಲಿ ಯಾವುದೇ ದೋಷ, ಲೋಪ ಅಥವಾ ನಿರ್ಲಕ್ಷ್ಯವು ಥರ್ಡ್ ಪಾರ್ಟಿಯ ದೈಹಿಕ ಗಾಯ ಅಥವಾ ಪ್ರಾಪರ್ಟಿ ಡ್ಯಾಮೇಜಿಗೆ ಕಾರಣವಾದರೆ.

ಡಾಕ್ಯುಮೆಂಟುಗಳ ನಷ್ಟ

ಡಾಕ್ಯುಮೆಂಟುಗಳ ನಷ್ಟ

ನಿಮ್ಮ ಕ್ಲೈಂಟ್‌ಗಳಲ್ಲಿ ಒಬ್ಬರಿಗೆ ಕೆಲವು ರೀತಿಯ ನಷ್ಟವನ್ನು ಉಂಟುಮಾಡುವ ಯಾವುದೇ ಡಾಕ್ಯುಮೆಂಟುಗಳು ಅಥವಾ ಡೇಟಾವನ್ನು ನೀವು ಕಳೆದುಕೊಂಡರೆ ಅಥವಾ ಡ್ಯಾಮೇಜ್ ಮಾಡಿದರೆ ನೀವು ರಕ್ಷಿಸಲ್ಪಡುತ್ತೀರಿ.

ಲೀಗಲ್ ವೆಚ್ಚಗಳು ಮತ್ತು ಎಕ್ಸ್‌ಪೆನ್ಸ್‌ಗಳು

ಲೀಗಲ್ ವೆಚ್ಚಗಳು ಮತ್ತು ಎಕ್ಸ್‌ಪೆನ್ಸ್‌ಗಳು

ಕ್ಲೈಂಟ್ ನಿಮ್ಮ ವಿರುದ್ಧ ಪ್ರಕರಣವನ್ನು ದಾಖಲಿಸಿದರೆ ಡಿಫೆನ್ಸ್ ವೆಚ್ಚಗಳು ಮತ್ತು ಲೀಗಲ್ ಫೀಸ್ ಮತ್ತು ಎಕ್ಸ್‌ಪೆನ್ಸ್‌ಗಳು ಪೇಮೆಂಟ್‌ನಂತಹ ವಿಷಯಗಳಿಗೆ ಲೀಗಲ್ ಲಯಬಿಲಿಟಿಯ ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸಲಾಗುತ್ತದೆ.

ಪಬ್ಲಿಕ್ ರಿಲೇಷನ್ಸ್ ಎಕ್ಸ್‌ಪೆನ್ಸ್‌ಗಳು

ಪಬ್ಲಿಕ್ ರಿಲೇಷನ್ಸ್ ಎಕ್ಸ್‌ಪೆನ್ಸ್‌ಗಳು

ಕ್ಲೈಮ್ ಮಾಡಿದ ನಂತರ ನಿಮ್ಮ ಖ್ಯಾತಿಯನ್ನು ರಕ್ಷಿಸಲು ಪಬ್ಲಿಕ್ ರಿಲೇಷನ್ಸ್ ಕನ್ಸಲ್ಟೆಂಟ್‌ಗಳ ಸಹಾಯದ ಅಗತ್ಯವಿದ್ದಲ್ಲಿ, ಅದರ ವೆಚ್ಚಗೂ ಸಹ ನಾವು ಸಹಾಯ ಮಾಡುತ್ತೇವೆ.

ಏನನ್ನು ಕವರ್ ಮಾಡುವುದಿಲ್ಲ?

ನಾವು ಡಿಜಿಟ್‌ನಲ್ಲಿ ಪಾರದರ್ಶಕತೆಯನ್ನು ನಂಬಿರುವುದರಿಂದ, ನೀವು ಕವರ್ ಆಗದ ಕೆಲವು ಸಂದರ್ಭಗಳು ಇಲ್ಲಿವೆ.

ಯಾವುದೇ ಕ್ರಿಮಿನಲ್ ಆಕ್ಟ್, ಫೈನ್‌ಗಳು ಮತ್ತು ಪೆನಲ್ಟಿಗಳು.

ಬೇಕಂತಲೇ ಮಾಡಿದ ಅಥವಾ ಉದ್ದೇಶಪೂರ್ವಕವಾಗಿ ಮಾಡಿದ ನಿರ್ಲಕ್ಷ್ಯ ಮತ್ತು ಲೋಪಗಳ ಕ್ರಿಯೆಗಳು.

ಅಮಲು ಅಥವಾ ಮಾದಕ ದ್ರವ್ಯಗಳ ಪ್ರಭಾವದಲ್ಲಿರುವಾಗ ಸರ್ವೀಸ್‌ಗಳನ್ನು ಸಲ್ಲಿಸಿದ್ದರೆ.

ಯುದ್ಧ, ಭಯೋತ್ಪಾದನೆ ಮತ್ತು ಪರಮಾಣು ಅಪಾಯಗಳಿಂದ ಸಂಭವಿಸಿದ ನಷ್ಟಗಳು.

ಪೇಟೆಂಟ್ ಅಥವಾ ಟ್ರೇಡ್ ಸೀಕ್ರೆಟ್‌ಗಳ ಯಾವುದೇ ಉಲ್ಲಂಘನೆ ಅಥವಾ ದುರುಪಯೋಗ.

ಪ್ರೊಫೆಷನಲ್ ಇಂಡೆಮ್ನಿಟಿ ಪಾಲಿಸಿಗೆ ಎಷ್ಟು ವೆಚ್ಚ ಆಗುತ್ತದೆ?

ಯಾರಿಗೆಲ್ಲ ಪ್ರೊಫೆಷನಲ್ ಇಂಡೆಮ್ನಿಟಿ ಇನ್ಶೂರೆನ್ಸ್ ಬೇಕು?

ನೀವು ಒದಗಿಸುವ ಪ್ರೊಫೆಷನಲ್ ಸರ್ವೀಸ್‌ನಿಂದ ಫೈನಾನ್ಸಿಯಲ್ ಡ್ಯಾಮೇಜಿಗಾಗಿ ಕ್ಲೈಂಟ್‌ಗಳು ಮಾಡಿದ ಕ್ಲೈಮ್‌ಗಳಿಂದ ನಿಮಗೆ ಅಥವಾ ನಿಮ್ಮ ಬಿಸಿನೆಸ್‌ಗೆ ರಕ್ಷಣೆಯ ಅಗತ್ಯವಿದ್ದರೆ, ನಿಮಗೆ ಪ್ರೊಫೆಷನಲ್ ಇಂಡೆಮ್ನಿಟಿ (ಅಥವಾ ಪ್ರೊಫೆಷನಲ್ ಲಯಬಿಲಿಟಿ) ಇನ್ಶೂರೆನ್ಸ್ ಬೇಕಾಗಬಹುದು. ಉದಾಹರಣೆಗೆ, ಒಂದು ವೇಳೆ…

ನೀವು ಅಥವಾ ನಿಮ್ಮ ಬಿಸಿನೆಸ್ ನಿಮ್ಮ ಕ್ಲೈಂಟ್‌ಗಳಿಗೆ ಅಡ್ವೈಸ್ ನೀಡಿದರೆ

ಉಧಾಹರಣೆಗೆ ಕನ್ಸಲ್ಟೆಂಟ್‌ಗಳು, ಕಾಂಟ್ರ್ಯಾಕ್ಟರ್‌ಗಳು ಅಥವಾ ಕೌನ್ಸಿಲರ್‌ಗಳು.

ನೀವು ಅಥವಾ ನಿಮ್ಮ ಬಿಸಿನೆಸ್ ಇತರ ಪ್ರೊಫೆಷನಲ್ ಸರ್ವೀಸ್‌ಗಳನ್ನು ನೀಡಿದರೆ

ಉದಾಹರಣೆಗೆ ಅಕೌಂಟೆಂಟ್‌ಗಳು, ಡೆವಲಪರ್‌ಗಳು, ವೆಡ್ಡಿಂಗ್ ಪ್ಲಾನರ್‌ಗಳು ಅಥವಾ ಲೀಗಲ್ ಪ್ರೊಫೆಷನಲ್‌ಗಳು ಮತ್ತು ಮೆಡಿಕಲ್ ಪ್ರೊಫೆಷನಲ್‌ಗಳು.

ನಿಮ್ಮ ಕ್ಲೈಂಟ್‌ಗಳಿಗೆ ನೀವು ಡಿಸೈನ್‌ಗಳನ್ನು ನೀಡುತ್ತಿದ್ದರೆ

 ಉದಾಹರಣೆಗೆ, ಆರ್ಕಿಟೆಕ್ಟ್‌ಗಳು, ಡಿಸೈನರ್‌ಗಳು ಅಥವಾ ಇಂಜಿನಿಯರ್‌ಗಳು.

ನೀವು ಅಥವಾ ನಿಮ್ಮ ಬಿಸಿನೆಸ್ ಕೆಲವು ರೀತಿಯ ಗೈಡೆನ್ಸ್‌ಗಳನ್ನು ನೀಡುತ್ತಿದ್ದರೆ

 ಇದು ಫಿಟ್‌ನೆಸ್ ಇನ್ಸ್ಟ್ರಕ್ಟರ್‌ಗಳು ಅಥವಾ ಟ್ಯೂಟರ್‌ಗಳು ಮತ್ತು ಶಿಕ್ಷಕರನ್ನು ಒಳಗೊಂಡಿರಬಹುದು.

ಸರಿಯಾದ ಪ್ರೊಫೆಷನಲ್ ಇಂಡೆಮ್ನಿಟಿ ಇನ್ಶೂರೆನ್ಸ್ ಅನ್ನು ಹೇಗೆ ಆಯ್ಕೆ ಮಾಡುವುದು?

  • ಸಂಪೂರ್ಣ ಕವರೇಜ್  - ನೀವು ಮಾಡುವ ನಿರ್ದಿಷ್ಟ ಸರ್ವೀಸ್‌ಗಳ ಅಥವಾ ಕೆಲಸದ ಆಧಾರದ ಮೇಲೆ ನಿಮ್ಮ ಬಿಸಿನೆಸ್ ಮತ್ತು ಅದರ ಎಲ್ಲಾ ಆ್ಯಕ್ಟಿವಿಟಿಗಳ ಎಲ್ಲಾ ರಿಸ್ಕ್‌ಗಳಿಗೆ ಗರಿಷ್ಠ ಕವರೇಜನ್ನು ನೀಡುವ ಪ್ರೊಫೆಷನಲ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ಹುಡುಕುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಲಯಬಿಲಿಟಿಯ ಸರಿಯಾದ ಲಿಮಿಟ್ ಅನ್ನು ಆಯ್ಕೆ ಮಾಡಿ  - ನಿಮ್ಮ ಬಿಸಿನೆಸ್‌ನ ಸ್ವರೂಪ ಮತ್ತು ಗಾತ್ರದ ಆಧಾರದ ಮೇಲೆ ನಿಮ್ಮ ಲಯಬಿಲಿಟಿಯ ಸರಿಯಾದ ಲಿಮಿಟ್ ಅಥವಾ ಸಮ್ ಇನ್ಶೂರ್ಡ್ ಅನ್ನು ಕಸ್ಟಮೈಸ್ ಮಾಡಲು, ನಿಮಗೆ ಅನುಮತಿಸುವ ಪ್ರೊಫೆಷನಲ್ ಲಯಬಿಲಿಟಿ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಲು ಪ್ರಯತ್ನಿಸಿ
  • ಒಂದು ಸರಳವಾದ ಕ್ಲೈಮ್‌ಗಳ ಪ್ರಕ್ರಿಯೆ  - ಕ್ಲೈಮ್‌ಗಳು ನಿಜವಾಗಿಯೂ ಮುಖ್ಯವಾಗಿರುವುದರಿಂದ, ಸುಲಭವಾದ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಹೊಂದಿರುವ ಇನ್ಶೂರೆನ್ಸ್ ಕಂಪನಿಯನ್ನು ನೋಡಿ. ಅದು ನಿಮ್ಮನ್ನು ಮತ್ತು ನಿಮ್ಮ ಬಿಸಿನೆಸ್‌ ಅನ್ನು ಬಹಳಷ್ಟು ತೊಂದರೆಗಳಿಂದ ಉಳಿಸುತ್ತದೆ.
  • ಹೆಚ್ಚುವರಿ ಸರ್ವೀಸ್ ಪ್ರಯೋಜನಗಳು  - ಸಾಕಷ್ಟು ಇನ್ಶೂರರ್‌ಗಳು 24X7 ಕಸ್ಟಮರ್ ಅಸಿಸ್ಟೆನ್ಸ್, ಬಳಸಲು ಸುಲಭವಾದ ಮೊಬೈಲ್ ಆ್ಯಪ್‌ಗಳು ಹಾಗೂ ಇನ್ನೂ ಅನೇಕ ಪ್ರಯೋಜನಗಳನ್ನು ನೀಡುತ್ತಾರೆ.
  • ಡಿಫರೆಂಟ್ ಪಾಲಿಸಿಗಳನ್ನು ಹೋಲಿಕೆ ಮಾಡಿ  - ಹಣವನ್ನು ಉಳಿಸುವ ಮಾರ್ಗಗಳನ್ನು ಕಂಡುಹಿಡಿಯುವುದು ಉತ್ತಮ ಕೆಲಸವೇನೋ ಹೌದು, ಆದರೆ ಕೆಲವೊಮ್ಮೆ ಕಡಿಮೆ ಪ್ರೀಮಿಯಂ ಹೊಂದಿರುವ ಪಾಲಿಸಿಯು ಉತ್ತಮ ಆಯ್ಕೆಯಾಗುವುದಿಲ್ಲ. ಏಕೆಂದರೆ ಅದು ನಿಮಗೆ ಸರಿಯಾದ ಕವರೇಜನ್ನು ನೀಡದಿರಬಹುದು. ಆದ್ದರಿಂದ ವಿಭಿನ್ನ ಪಾಲಿಸಿಗಳ ಫೀಚರ್‌ಗಳನ್ನು ಮತ್ತು ಪ್ರೀಮಿಯಂಗಳನ್ನು ಹೋಲಿಕೆ ಮಾಡಿ.

ಕಾಮನ್ ಪ್ರೊಫೆಷನಲ್ ಇಂಡೆಮ್ನಿಟಿ ಇನ್ಶೂರೆನ್ಸ್ ನಿಯಮಗಳನ್ನು ನಿಮಗಾಗಿ ಸರಳಗೊಳಿಸಲಾಗಿದೆ

ಸಂಭವ

ಯಾವುದೇ ಘಟನೆ, ದೋಷ, ಅಪಾಯ, ಅಥವಾ ನಿರ್ಲಕ್ಷ್ಯದ ಕ್ರಿಯೆಯು ವ್ಯಕ್ತಿ ಅಥವಾ ಪ್ರಾಪರ್ಟಿಗೆ ಕೆಲವು ಡ್ಯಾಮೇಜುಗಳನ್ನು ಉಂಟುಮಾಡುತ್ತದೆ.

ನಿರ್ಲಕ್ಷತೆ

ಯಾವುದೇ ಅಜಾಗರೂಕತೆ ಅಥವಾ ಸಮಂಜಸವಲ್ಲದ ಕ್ರಮ, ಅಥವಾ ಕಾಳಜಿ ವಹಿಸುವಲ್ಲಿ ವಿಫಲವಾದರೆ, ಅದು ಡ್ಯಾಮೇಜ್ ಅಥವಾ ನಷ್ಟಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ, ಪರ್ಸನಲ್ ಟ್ರೈನರ್ ಯಾವುದೇ ಹಿಂದಿನ ಗಾಯಗಳ ಬಗ್ಗೆ ಕ್ಲೈಂಟ್ ಅನ್ನು ಕೇಳುವುದಿಲ್ಲ ಮತ್ತು ಇದು ಸೆಷನ್ ಸಮಯದಲ್ಲಿ ಅವರು ತಮಗೆ ತಾವೇ ಗಾಯ ಮಾಡಿಕೊಳ್ಳುವಂತೆ ಮಾಡುತ್ತದೆ. 

ಮೆಡಿಕಲ್ ಮಾಲ್‌ಪ್ರಾಕ್ಟೀಸ್

ಇದು ಮೆಡಿಕಲ್ ಪ್ರೊವೈಡರ್‌ಗಳ ಯಾವುದೇ ಕ್ರಿಯೆ ಅಥವಾ ಲೋಪವನ್ನು ಸೂಚಿಸುತ್ತದೆ. ಅಲ್ಲಿ ಅವರ ಸರ್ವೀಸ್‌ಗಳು ನಿರ್ದಿಷ್ಟಪಡಿಸಿದ ಸ್ಟ್ಯಾಂಡರ್ಡ್‌ಗಿಂತಲೂ ಕಡಿಮೆಯಾಗುತ್ತವೆ. ಇದು ರೋಗಿಯ ಗಾಯ ಅಥವಾ ಸಾವಿಗೆ ಕಾರಣವಾಗುತ್ತದೆ. ಉದಾಹರಣೆಗೆ, ಡಾಕ್ಟರ್‌ಗಳು ಲ್ಯಾಬೋರೇಟರಿಯ ರಿಸಲ್ಟ್‌ಗಳನ್ನು ತಪ್ಪಾಗಿ ಓದಿದರೆ ಅಥವಾ ನಿರ್ಲಕ್ಷಿಸಿದರೆ, ಇದು ರಾಂಗ್ ಡಯಾಗ್ನೋಸಿಸ್‌ಗೆ ಕಾರಣವಾಗುತ್ತದೆ ಮತ್ತು ರೋಗಿಯು, ಗಾಯ ಅಥವಾ ಕೆಲವು ವಿಪರೀತ ನೋವು ಮತ್ತು ಕಷ್ಟಗಳನ್ನು ಅನುಭವಿಸುತ್ತಾನೆ.

ಥರ್ಡ್-ಪಾರ್ಟಿ

ಥರ್ಡ್ ಪಾರ್ಟಿ ಎಂದರೆ ಇನ್ಶೂರ್ಡ್ ಅಲ್ಲದ (ಅಂದರೆ, ನೀವು) ಮತ್ತು ಇನ್ಶೂರರ್ ಅಲ್ಲದ ಯಾವುದೇ ವ್ಯಕ್ತಿ (ಅಥವಾ ಯುನಿಟ್). ಇದು ನಿಮ್ಮ ಬಿಸಿನೆಸ್‌ನಲ್ಲಿ ಯಾವುದೇ ಫೈನಾನ್ಸಿಯಲ್ ಇಂಟರೆಸ್ಟ್ ಹೊಂದಿರುವ ಅಥವಾ ನೀವು ಕಾಂಟ್ರ್ಯಾಕ್ಟ್ ಮಾಡಿಕೊಳ್ಳುವ ಯಾವುದೇ ಇತರ ವ್ಯಕ್ತಿಯನ್ನು ಹೊರತುಪಡಿಸುತ್ತದೆ.

ಲಯಬಿಲಿಟಿಯ ಲಿಮಿಟ್

ಇದು ನೀವು ಕ್ಲೈಮ್ ಮಾಡಿದ ಸಂದರ್ಭದಲ್ಲಿ ನಿಮ್ಮ ಇನ್ಶೂರರ್ ನಿಮಗಾಗಿ ಕವರ್ ಮಾಡಲು ಸಾಧ್ಯವಾಗುವ ಗರಿಷ್ಠ ಮೊತ್ತವಾಗಿದೆ. ಇದು ಸಮ್ ಇನ್ಶೂರ್ಡ್ ಅನ್ನು ಹೋಲುತ್ತದೆ. 

ಡಿಡಕ್ಟಿಬಲ್

ಪ್ರೊಫೆಷನಲ್ ಲಯಬಿಲಿಟಿ ಇನ್ಶೂರೆನ್ಸಿನ ಸಂದರ್ಭದಲ್ಲಿ, ಇನ್ಶೂರರ್‌ಗಳು ನಿಮ್ಮ ಕ್ಲೈಮ್ ಅನ್ನು ಪಾವತಿಸುವ ಮೊದಲು, ನೀವು ನಿಮ್ಮ ಸ್ವಂತ ಜೇಬಿನಿಂದ ಸ್ವಲ್ಪ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಸಿವಿಲ್ ರೆಗ್ಯುಲೇಟರಿ ಪ್ರೊಸೀಡಿಂಗ್ಸ್

ಲಯಬಿಲಿಟಿ ಇನ್ಶೂರೆನ್ಸಿನ ವಿಷಯಕ್ಕೆ ಬಂದರೆ, ಇದು ಮೊಕದ್ದಮೆಯ ಸಂದರ್ಭದಲ್ಲಿ ಯಾವುದೇ ಸಂಭಾವ್ಯ ಡ್ಯಾಮೇಜುಗಳಿಗೆ ನೀವು ಪಾವತಿಸಲು ಲಯಬಲ್ ಆಗಿರುವ ಮೊತ್ತವನ್ನು ಸೂಚಿಸುತ್ತದೆ.

ಭಾರತದಲ್ಲಿ ಪ್ರೊಫೆಷನಲ್ ಇಂಡೆಮ್ನಿಟಿ ಇನ್ಶೂರೆನ್ಸ್ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು