ಕಳೆದ ಕೆಲವು ವರ್ಷಗಳಲ್ಲಿ, ಆಗ್ನೇಯ ಏಷ್ಯಾದ ಮಾರ್ಗಗಳಲ್ಲಿ ಪ್ರಯಾಣಿಸುವ ಭಾರತೀಯರಿಗೆ ಮಕಾವು ಜನಪ್ರಿಯ ಪ್ರವಾಸಿ ಡೆಸ್ಟಿನೇಷನ್ ಆಗಿ ಅಭಿವೃದ್ಧಿಗೊಂಡಿದೆ. ‘‘ಲಾಸ್ ವೇಗಾಸ್ ಆಫ್ ಏಷ್ಯಾ” ಎಂದು ಕರೆಯಲ್ಪಡುವ ಮಕಾವು ನಗರ-ರಾಜ್ಯವಾಗಿದೆ ಮತ್ತು ಅಧಿಕೃತವಾಗಿ ಚೀನಾದ ಭಾಗವಾಗಿದ್ದರೂ ಸಹ ವಿಶೇಷ ಆಡಳಿತ ಪ್ರದೇಶದ ಸ್ಥಾನಮಾನವನ್ನು ನೀಡಲಾಗಿದೆ.
ಇದರರ್ಥ ನೀವು ಮಕಾವುಗೆ ಭೇಟಿ ನೀಡುತ್ತಿದ್ದರೆ, ನಗರ-ರಾಜ್ಯದ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ನಿಮಗೆ ತಿಳಿದಿರಬೇಕು, ವಿಶೇಷವಾಗಿ ಅಲ್ಲಿಗೆ ಪ್ರಯಾಣಿಸಲು ನಿಮಗೆ ವೀಸಾ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಗೊತ್ತಿರಬೇಕು.
ಆದ್ದರಿಂದ, ನಿಮ್ಮ ಪ್ರವಾಸವನ್ನು ಪ್ಲಾನ್ ಮಾಡಲು ಪ್ರಾರಂಭಿಸುವ ಮೊದಲು ಭಾರತೀಯರಿಗೆ ಮಕಾವು ವೀಸಾದ ಕುರಿತ ಪ್ರತಿಯೊಂದು ಪ್ರಸಕ್ತ ಮಾಹಿತಿಯನ್ನು ನೋಡೋಣ!
ಇಲ್ಲ, 30 ದಿನಗಳಿಗಿಂತ ಕಡಿಮೆ ಅವಧಿಗೆ ಮಕಾವುಗೆ ಪ್ರಯಾಣಿಸುವ ಭಾರತೀಯರಿಗೆ ದೇಶವನ್ನು ಪ್ರವೇಶಿಸಲು ವೀಸಾ ಅಗತ್ಯವಿಲ್ಲ. ಆದ್ದರಿಂದ, ಪ್ರವಾಸದ ಅವಧಿಯು 30 ದಿನಗಳಿಗಿಂತ ಕಡಿಮೆ ಇರುವ ಕಾರಣದಿಂದ, ಬಹುತೇಕ ಪ್ರವಾಸಿಗರು ವೀಸಾಗೆ ಅಪ್ಲೈ ಮಾಡುವ ಅಗತ್ಯ ಇರುವುದಿಲ್ಲ.
ಸೂಚನೆ: ದೇಶಕ್ಕೆ ವೀಸಾ-ಫ್ರೀ ಪ್ರವೇಶವನ್ನು ಆನಂದಿಸಲು ಮಕಾವುಗೆ ಭೇಟಿ ನೀಡಿದ ದಿನಾಂಕದಿಂದ ಕನಿಷ್ಠ 6 ತಿಂಗಳವರೆಗೆ ತಮ್ಮ ಪಾಸ್ಪೋರ್ಟ್ ವ್ಯಾಲಿಡ್ ಆಗಿದೆ ಎಂಬುದನ್ನು ವಿಸಿಟರ್ಗಳು ಖಚಿತಪಡಿಸಿಕೊಳ್ಳಬೇಕು.
ಆದಾಗ್ಯೂ, ಒಂದು ವೇಳೆ ಒಬ್ಬ ವ್ಯಕ್ತಿ ಅದಕ್ಕಿಂತ ಹೆಚ್ಚು ಕಾಲ ಉಳಿಯಲು ಪ್ಲಾನ್ ಮಾಡಿದರೆ, ಅವನು/ಅವಳು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಎಂಬೆಸಿ ಅಥವಾ ಕಾನ್ಸುಲೇಟ್ ಮೂಲಕ ವೀಸಾಗೆ ಅಪ್ಲೈ ಮಾಡಬೇಕಾಗುತ್ತದೆ.
ಹೌದು, ಮಕಾವುನಲ್ಲಿ 30 ದಿನಗಳಿಗಿಂತ ಹೆಚ್ಚು ಕಾಲ ಉಳಿಯಲು ಬಯಸುವ ಭಾರತೀಯ ನಾಗರಿಕರಿಗೆ ವೀಸಾ ಆನ್ ಅರೈವಲ್ ಸೌಲಭ್ಯವೂ ಲಭ್ಯವಿದೆ.
30 ದಿನಗಳಿಗಿಂತ ಕಡಿಮೆ ಅವಧಿಗೆ ಮಕಾವುಗೆ ಪ್ರಯಾಣಿಸಲು ಭಾರತೀಯರಿಗೆ ಯಾವುದೇ ವೀಸಾ ಅಗತ್ಯವಿಲ್ಲದ ಕಾರಣ, ಆ ದೇಶಕ್ಕೆ ಪ್ರಯಾಣಿಸಲು ಯಾವುದೇ ವೀಸಾ ಶುಲ್ಕವಿಲ್ಲ.
ತಮ್ಮ ಪ್ರವಾಸವನ್ನು 30 ದಿನಗಳಿಗಿಂತ ಹೆಚ್ಚು ಕಾಲ ವಿಸ್ತರಿಸಲು ಬಯಸುವ ಭಾರತೀಯ ನಾಗರಿಕರು ಮಕಾವು ವೀಸಾವನ್ನು ಪಡೆಯಲು ಕೆಳಗೆ ವಿವರಿಸಿರುವ ಶುಲ್ಕ ವಿನ್ಯಾಸವನ್ನು ಅನುಸರಿಸಬೇಕು:
ವೀಸಾದ ವಿಧ |
ವೀಸಾ ಶುಲ್ಕ |
ಇಂಡಿವಿಜುವಲ್ ವೀಸಾಗೆ |
MOP$100, ಎಂದರೆ ಯುಎಸ್ಡಿ 12.63 (ಅಂದಾಜು) |
ಫ್ಯಾಮಿಲಿ ವೀಸಾಗೆ |
MOP$200, ಎಂದರೆ ಯುಎಸ್ಡಿ 25.25 (ಅಂದಾಜು) |
ಗ್ರೂಪ್ ವೀಸಾಗೆ |
ಒಬ್ಬ ವ್ಯಕ್ತಿಗೆ MOP$50, ಎಂದರೆ ಯುಎಸ್ಡಿ 6.31 (ಅಂದಾಜು) |
ಭಾರತೀಯ ನಾಗರಿಕರು ಮಕಾವುನಲ್ಲಿ 30 ದಿನಗಳ ವೀಸಾ-ಫ್ರೀ ವಾಸ್ತವ್ಯವನ್ನು ಆನಂದಿಸಬಹುದಾದರೂ, ಅವರು ಅದಕ್ಕಿಂತ ಹೆಚ್ಚು ಕಾಲ ಉಳಿಯಲು ಪ್ಲಾನ್ ಮಾಡಿದರೆ ಅವರು ವೀಸಾವನ್ನು ಪಡೆಯಬೇಕಾಗುತ್ತದೆ.
ಭಾರತೀಯ ಪಾಸ್ಪೋರ್ಟ್ ಹೋಲ್ಡರ್ಗಳಿಗೆ ಮಕಾವು ವೀಸಾ ಪಡೆಯಲು, ವ್ಯಕ್ತಿಗಳು ಈ ಕೆಳಗಿನ ಡಾಕ್ಯುಮೆಂಟ್ಗಳನ್ನು ಒದಗಿಸಬೇಕಾಗುತ್ತದೆ:
ಸರಿಯಾಗಿ ಭರ್ತಿ ಮಾಡಲಾದ ಮಕಾವು ವೀಸಾ ಅಪ್ಲಿಕೇಶನ್ ಫಾರ್ಮ್.
ಪ್ರಯಾಣಿಕರ ಬಯೋಡೇಟಾ ಪುಟದ ಕಾಪಿ ಮತ್ತು ವ್ಯಕ್ತಿಯ ಪಾಸ್ಪೋರ್ಟ್ನ ಈಗಾಗಲೇ ಬಳಸಿದ ಪುಟಗಳು.
ಆರ್ಥಿಕ ಸ್ಥಿತಿಯ ಪುರಾವೆಯಂತೆ ಕಾರ್ಯನಿರ್ವಹಿಸುವ ಡಾಕ್ಯುಮೆಂಟ್ಗಳು. (ಬ್ಯಾಂಕ್ ಸ್ಟೇಟ್ಮೆಂಟ್, ಎಂಪ್ಲಾಯ್ಮೆಂಟ್ ಸರ್ಟಿಫಿಕೇಟ್, ಇತ್ಯಾದಿ)
ಮಕಾವುಗೆ ರೌಂಡ್ ಟ್ರಿಪ್ ವಿಮಾನ ಟಿಕೆಟ್ ಮತ್ತು ಪ್ರದೇಶದಲ್ಲಿ ಇರುವಾಗಿನ ವಸತಿಯ ವ್ಯವಸ್ಥೆ.
ಮಕಾವುನಿಂದ ಎಂಟ್ರಿ ಮತ್ತು ಎಕ್ಸಿಟ್ ಸ್ಟ್ಪಾಂಪ್ಗಳೊಂದಿಗೆ ಅಂಟಿಕೊಂಡಿರುವ ಪ್ರಯಾಣ ಡಾಕ್ಯುಮೆಂಟ್ಗಳು. (ಯಾವುದಾದರೂ ಇದ್ದಲ್ಲಿ)
ಇತರ ಪ್ರದೇಶಗಳು ಅಥವಾ ದೇಶಗಳಿಂದ ವ್ಯಾಲಿಡ್ ಎಂಟ್ರಿ ವೀಸಾ. (ಯಾವುದಾದರೂ ಇದ್ದಲ್ಲಿ)
ಇತ್ತೀಚಿನ ಫೋಟೋಗ್ರಾಫ್
ಮಕಾವುದಲ್ಲಿ 30 ದಿನಗಳಿಗಿಂತ ಹೆಚ್ಚು ಕಾಲ ತಮ್ಮ ವಾಸ್ತವ್ಯವನ್ನು ವಿಸ್ತರಿಸುವ ಅವ್ಯಕತೆ ಇರುವ ಭಾರತೀಯ ನಾಗರಿಕರು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಎಂಬೆಸಿ ಅಥವಾ ಕಾನ್ಸುಲೇಟ್ ಮೂಲಕ ವೀಸಾಗೆ ಅಪ್ಲೈ ಮಾಡಬೇಕಾಗುತ್ತದೆ.
ದುರದೃಷ್ಟವಶಾತ್, ಮಕಾವು ವೀಸಾಗೆ ಅಪ್ಲೈ ಮಾಡುವ ಯಾವುದೇ ಆನ್ಲೈನ್ ಮೀಡಿಯಂ ಇಲ್ಲ.
ವೀಸಾಗೆ ಅಪ್ಲೈ ಮಾಡಲು, ನವದೆಹಲಿಯಲ್ಲಿರುವ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಎಂಬೆಸಿಗೆ ಭೇಟಿ ನೀಡಿ:
ವಿಳಾಸ – 50D, ಶಾಂತಿಪಥ, ಚಾಣಕ್ಯಪುರಿ, ನವದೆಹಲಿ - 110021
ಫೋನ್ - +91-11-2611-2345 / +91-11-2687-1585 / +91-11-2611-6682
ಇಮೇಲ್ - chinaemb_in@mfa.gov.cn
ಸಾಮಾನ್ಯವಾಗಿ, ಈ ವೀಸಾ ಪ್ರೊಸೆಸಿಂಗ್ ಸಮಯ ಸುಮಾರು 3 ವಾರಗಳು, ನಂತರ ನೀವು ಅದಕ್ಕೆ ಅಪ್ರೂವಲ್ ಅನ್ನು ಪಡೆಯಬಹುದು. ನೀವು ದೇಶಕ್ಕೆ ಆಗಮಿಸಿದ ನಂತರ ವೀಸಾವನ್ನು ನಿಮ್ಮ ಪಾಸ್ಪೋರ್ಟ್ಗೆ ವರ್ಗಾಯಿಸಲಾಗುತ್ತದೆ.
ಆದ್ದರಿಂದ, ನೀವು ಬಯಸಿದ್ದು ಇದನ್ನೇ ಅಲ್ವೇ! ಮಕಾವುಗೆ ಪ್ರಯಾಣಿಸಲು ವೀಸಾ ಪಡೆಯುವ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ!
ಆದರೆ, ಹೋಲ್ಡ್ ಆನ್!
ನೀವು ಈ ಪ್ರವಾಸವನ್ನು ಪ್ರಾರಂಭಿಸುವ ಮೊದಲು, ಮಕಾವುಗೆ ಭೇಟಿ ನೀಡಲು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆದುಕೊಳ್ಳುವುದನ್ನು ನೀವು ಪರಿಗಣಿಸಿದ್ದೀರಾ?
ಸರಿ, ಮಕಾವುಗೆ ಪ್ರಯಾಣಿಸುವ ಮೊದಲು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಕಡ್ಡಾಯವಲ್ಲ. ಆದರೆ ನಿಮ್ಮ ಪ್ರವಾಸದ ಸಮಯದಲ್ಲಿ ಉದ್ಭವಿಸಬಹುದಾದ ಯಾವುದೇ ಅನಿರೀಕ್ಷಿತ ಲಯಬಿಲಿಟಿಗಳನ್ನು ತಡೆಯಲು ನೀವು ಆರ್ಥಿಕವಾಗಿ ಸಿದ್ಧರಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ನಿರ್ವಹಣೆಗೆ ಒಂದನ್ನು ಹೊಂದಿರುವುದು ಉತ್ತಮ. ಉದಾಹರಣೆಗೆ:
ತುರ್ತು ಹಣವನ್ನು ಪಡೆದುಕೊಳ್ಳಿ - ಮಕಾವು ಕ್ಯಾಸಿನೊಗಳಿಗೆ ಪ್ರಸಿದ್ಧವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇದರಿಂದಾಗಿ, ಸಣ್ಣಪುಟ್ಟ ಕಳ್ಳತನ, ವ್ಯಾಲೆಟ್ ದೋಚುವುದು ಕೂಡ ಇಲ್ಲಿ ಸಾಮಾನ್ಯವಾಗಿದೆ. ಅಂತಹ ಸಂದರ್ಭಗಳಲ್ಲಿ, ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ನಿಂದ ನೀವು ತುರ್ತು ಹಣವನ್ನು ಪಡೆಯಬಹುದಾಗಿದೆ. ಇದಲ್ಲದೆ, ನಿಮ್ಮ ವ್ಯಾಲೆಟ್ ಜೊತೆಗೆ ನಿಮ್ಮ ಪಾಸ್ಪೋರ್ಟ್ ಅನ್ನು ಕೂಡ ನೀವು ಕಳೆದುಕೊಂಡರೆ, ಟ್ರಾವೆಲ್ ಇನ್ಶೂರೆನ್ಸ್ ಅದನ್ನು ಮರು-ವಿತರಿಸುವ ವೆಚ್ಚವನ್ನು ಕವರ್ ಮಾಡುತ್ತದೆ.
ಮೆಡಿಕಲ್ ತುರ್ತುಸ್ಥಿತಿಗಳನ್ನು ಕವರ್ ಮಾಡುತ್ತದೆ - ದುರದೃಷ್ಟವಶಾತ್ ಮಕಾವುದಲ್ಲಿ ಒಂದೇ ಒಂದು ಸಾರ್ವಜನಿಕ ಆಸ್ಪತ್ರೆಯಿದೆ, ಅಂದರೆ ನಿಮಗೆ ಹಾಸ್ಪಿಟಲೈಸೇಷನ್ (ಆಕಸ್ಮಿಕ ಅಥವಾ ಅನಾರೋಗ್ಯಕ್ಕೆ ಸಂಬಂಧಿಸಿದಂತೆ) ಅಗತ್ಯ ಬಿದ್ದರೆ ನೀವು ಗಣನೀಯ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಆದಾಗ್ಯೂ, ನೀವು ಮಕಾವುಗೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ನಿಮ್ಮ ಚಿಕಿತ್ಸಾ ವೆಚ್ಚಗಳು ಅದರ ಅಡಿಯಲ್ಲಿ ಕವರ್ ಆಗುತ್ತದೆ.
ಇತರ ಕವರೇಜ್ ಏರಿಯಾಗಳು - ಆಕಸ್ಮಿಕ ಸಾವು ಅಥವಾ ಅಂಗವೈಕಲ್ಯ ಪ್ರಯೋಜನಗಳನ್ನು ಒದಗಿಸುವುದೊಂದಿಗೆ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಸಾರಿಗೆ ಸಂದರ್ಭದಲ್ಲಿ ಸಾಮಾನು ಸರಂಜಾಮುಗಳ ನಷ್ಟ ಅಥವಾ ವಿಳಂಬಕ್ಕೆ ಕವರೇಜ್, ವೈಯಕ್ತಿಕ ಲಯಬಿಲಿಟಿ ಕವರ್, ಎಮರ್ಜೆನ್ಸಿ ಟ್ರಿಪ್ ಎಕ್ಸ್ಟೆನ್ಷನ್ ಕವರ್ ಪ್ರಯೋಜನಗಳನ್ನು ನೀಡುತ್ತದೆ.
ಜೊತೆಗೆ, ಡಿಜಿಟ್ನೊಂದಿಗೆ ನೀವು ಈ ಕೆಳಗಿನ ಪ್ರಯೋಜನಗಳನ್ನು ಸಹ ಪಡೆಯಬಹುದು:
ಆದ್ದರಿಂದ, ಮಕಾವು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಒಳ್ಳೆ ಐಡಿಯಾ ಎಂದು ತೋರುತ್ತಿಲ್ಲವೇ?
ನಿಮ್ಮ ಮಕಾವು ಪ್ರಯಾಣದ ಸಮಯದಲ್ಲಿ ನೀವು ಆರ್ಥಿಕವಾಗಿ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಪ್ರವಾಸವನ್ನು ಪ್ರಾರಂಭಿಸುವ ಮೊದಲೇ ನೀವು ಅದನ್ನು ಖರೀದಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.