ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಪಾಸ್‌ಪೋರ್ಟ್ ಸೇವಾ ಕೇಂದ್ರ (ಪಿಎಸ್ ಕೆ) ಎಂದರೇನು?

ಪಾಸ್‌ಪೋರ್ಟ್ ಸೇವಾ ಕೇಂದ್ರವು ಭಾರತದಲ್ಲಿನ ಪಾಸ್‌ಪೋರ್ಟ್ ಕಚೇರಿಗಳ ವಿಸ್ತೃತ ಶಾಖೆಯಾಗಿದೆ. ಈ ಕಚೇರಿಗಳು ಶ್ರೇಣಿ 1 ಮತ್ತು 2 ನಗರಗಳಲ್ಲಿ ಪಾಸ್‌ಪೋರ್ಟ್‌ಗಳು ಮತ್ತು ಇತರ ಸಂಬಂಧಿತ ಸೇವೆಗಳನ್ನು ತಲುಪಿಸುವ ಜವಾಬ್ದಾರಿಯನ್ನು ಹೊಂದಿರುತ್ತವೆ. ಹೆಚ್ಚುವರಿಯಾಗಿ, ಇವರು ಆನ್‌ಲೈನ್ ಸೇವೆಗಳನ್ನು ವಿಸ್ತರಿಸುವ ಕಾರಣ ಏಜೆಂಟ್‌ಗಳ ಮೂಲಕ ಅರ್ಜಿ ಸಲ್ಲಿಸುವ ಅಗತ್ಯವಿರುವುದಿಲ್ಲ. ಇದು ಪಾಸ್‌ಪೋರ್ಟ್ ಅಪ್ಲಿಕೇಶನ್‌ಗಳನ್ನು ಸುರಕ್ಷಿತ, ಪಾರದರ್ಶಕ ಮತ್ತು ತ್ವರಿತವಾಗಿಸುತ್ತದೆ.

ಪಾಸ್‌ಪೋರ್ಟ್ ಸೇವಾ ಕೇಂದ್ರದ ಬಗ್ಗೆ ಈಗ ನಿಮಗೆ ತಿಳಿದಿದ್ದು, ಇತರ ಪ್ರಮುಖ ವಿವರಗಳನ್ನು ನೋಡೋಣ.

ಪಾಸ್‌ಪೋರ್ಟ್ ಗಾಗಿ ಪಿಎಸ್ ಕೆ ನ ಕರ್ತವ್ಯಗಳು ಮತ್ತು ಜವಾಬ್ದಾರಿಗಳು

ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಕರ್ತವ್ಯಗಳು ಮತ್ತು ಜವಾಬ್ದಾರಿಗಳು ಈ ಕೆಳಗಿನಂತಿವೆ:

  • ಪಾಸ್‌ಪೋರ್ಟ್ ಅಪ್ಲಿಕೇಶನ್  ಸ್ವೀಕಾರ ಮತ್ತು ವೆರಿಫಿಕೇಶನ್ 

  • ಅರ್ಹ ಅಭ್ಯರ್ಥಿಗಳಿಗೆ ಪಾಸ್‌ಪೋರ್ಟ್ ನೀಡುವಿಕೆ ಅಥವಾ ಮರು-ಹಂಚಿಕೆ

  • ಪೊಲೀಸ್ ವೆರಿಫಿಕೇಶನ್

  • ಪಾಸ್‌ಪೋರ್ಟ್‌ಗಳ ಪ್ರಿಂಟಿಂಗ್ ಮತ್ತು ಅಂತಿಮ ವಿತರಣೆ

ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಅಪ್ಲಿಕೇಶನ್ ಸಲ್ಲಿಸುವ ಪ್ರಕ್ರಿಯೆ ಏನು?

ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಪಾಸ್‌ಪೋರ್ಟ್‌ಗಾಗಿ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಸರಳ ಹಂತಗಳು:

 

ಪಾಸ್‌ಪೋರ್ಟ್ ಸೇವಾ ಕೇಂದ್ರದ ಮೂಲಕ ಆನ್‌ಲೈನ್ ಅರ್ಜಿ:

  • ಹಂತ 1: ಪಾಸ್‌ಪೋರ್ಟ್ ಸೇವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ನೀವು ನೋಂದಾಯಿತ ಸದಸ್ಯರಲ್ಲದಿದ್ದರೆ, ಮೊದಲು ನಿಮ್ಮನ್ನು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಿ.

  • ಹಂತ 2: ನಿಮ್ಮ ಯೂಸರ್ ನೇಮ್ ಮತ್ತು ಐಡಿ ಅನ್ನು ರಚಿಸಿದ ನಂತರ, ಆ ಕ್ರೆಡೆನ್ಷಿಯಲ್  ಗಳೊಂದಿಗೆ ಲಾಗ್ ಇನ್ ಆಗಿ.

  • ಹಂತ 3: "ಹೊಸ ಪಾಸ್‌ಪೋರ್ಟ್ ಅಥವಾ ಪಾಸ್‌ಪೋರ್ಟ್ ಮರುಹಂಚಿಕೆಗಾಗಿ ಅರ್ಜಿ ಸಲ್ಲಿಸಿ" ಆಯ್ಕೆಮಾಡಿ. ನಿಮ್ಮ ಹೆಸರು, ಸಂಪರ್ಕ ವಿವರಗಳು ಇತ್ಯಾದಿ ಸಂಬಂಧಿತ ಮಾಹಿತಿಯೊಂದಿಗೆ ಫಾರ್ಮ್ ಅನ್ನು ಭರ್ತಿ ಮಾಡಿ.

  • ಹಂತ 4: " ವಿವ್ಯೂ ಸೇವ್ ಮಾಡಿದ ಅಥವಾ ಸಬ್ಮಿಟ್ ಮಾಡಿದ ಅಪ್ಲಿಕೇಶನ್ " ಅಡಿಯಲ್ಲಿ ಲಭ್ಯವಿರುವ "ಪೇ ಮಾಡಿ ಮತ್ತು ಅಪಾಯಿಂಟ್‌ಮೆಂಟ್ ನಿಗದಿಪಡಿಸಿ" ಆಯ್ಕೆಮಾಡಿ.

  • ಹಂತ 5: ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಅಪಾಯಿಂಟ್‌ಮೆಂಟ್ ಬುಕ್ ಮಾಡಲು   ಆನ್‌ಲೈನ್ ಪಾವತಿ ಕಡ್ಡಾಯವಾಗಿದೆ. ಕೆಳಗಿನ ಪಾವತಿ ಆಯ್ಕೆಗಳಿಂದ ಆರಿಸಿಕೊಳ್ಳಿ:

    • ಇಂಟರ್ನೆಟ್ ಬ್ಯಾಂಕಿಂಗ್ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇತರ ಸಂಬಂಧಿತ ಬ್ಯಾಂಕುಗಳು).

    • ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ (ವೀಸಾ ಅಥವಾ ಮಾಸ್ಟರ್ ಕಾರ್ಡ್).

    • ಎಸ್‌.ಬಿ.ಐ.ನ ಬ್ಯಾಂಕ್ ಚಲನ್.

  • ಹಂತ 6: ಪ್ರಿಂಟ್‌ಔಟ್ ತೆಗೆದುಕೊಳ್ಳಲು " ಪ್ರಿಂಟ್ ಅಪ್ಲಿಕೇಶನ್ ರಿಸೀಪ್ಟ್ " ಆಯ್ಕೆಮಾಡಿ. ಈ ಅರ್ಜಿಯ ರಸೀದಿ ಒಯ್ಯುವುದೇನು ಕಡ್ಡಾಯವಿಲ್ಲ. ಅಪಾಯಿಂಟ್‌ಮೆಂಟ್ ದಿನದಲ್ಲಿ ನಿಮ್ಮ ಅಪಾಯಿಂಟ್‌ಮೆಂಟ್ ರೆಫರೆನ್ಸ್ ಸಂಖ್ಯೆ ಸೇರಿದಂತೆ ನಿಮ್ಮ ಅಪಾಯಿಂಟ್‌ಮೆಂಟ್ ವಿವರಗಳನ್ನು ಸಂಕ್ಷಿಪ್ತಗೊಳಿಸುವ SMS ಅನ್ನು ಸಹ ಸ್ವೀಕರಿಸಲಾಗುತ್ತದೆ.

ಪಾಸ್‌ಪೋರ್ಟ್ ಸೇವಾ ಕೇಂದ್ರ ಆಫ್ಲೈನ್ ಅಪ್ಲಿಕೇಶನ್:

  1. ಪೋರ್ಟಲ್‌ನಿಂದ ಇ-ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿ. 
  2. ಅರ್ಜಿಯ ಪ್ರಕಾರ, ನಿಮ್ಮ ಹೆಸರು, ಹುಟ್ಟಿದ ಸ್ಥಳ ಇತ್ಯಾದಿ ಸಂಬಂಧಿತ ಮಾಹಿತಿಯೊಂದಿಗೆ ಅದನ್ನು ಭರ್ತಿ ಮಾಡಿ.
  3. ಆನ್‌ಲೈನ್ ಅಪ್ಲಿಕೇಶನ್ ಸಮಯದಲ್ಲಿ ಅದನ್ನು ಅಪ್‌ಲೋಡ್ ಮಾಡಿ.

ನಿಮ್ಮ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಯಶಸ್ವಿಯಾಗಿ ಸಲ್ಲಿಸಿದ ನಂತರ, ಎಲ್ಲಾ ಮೂಲ ಡಾಕ್ಯುಮೆಂಟುಗಳೊಂದಿಗೆ ನಿಗದಿತ ದಿನಾಂಕದಂದು ನಿಮ್ಮ ಹತ್ತಿರದ ಪಿಎಸ್ ಕೆ ಗೆ ಭೇಟಿ ನೀಡಿ.

ಪಿಎಸ್ ಕೆ ಗಾಗಿ ಆನ್‌ಲೈನ್ ಅಪಾಯಿಂಟ್‌ಮೆಂಟ್ ಲಭ್ಯತೆಯನ್ನು ಪರಿಶೀಲಿಸುವ ಹಂತಗಳು.

ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುವಾಗ ಅರ್ಜಿದಾರರ ಬಯೋಮೆಟ್ರಿಕ್ ವೆರಿಫಿಕೇಶನ್ ಕಡ್ಡಾಯವಾಗಿದೆ. ಅದಕ್ಕಾಗಿ, ನಿಮ್ಮ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿದ ನಂತರ ನೀವು ನಿಮ್ಮ ಹತ್ತಿರದ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕು.  ಅಂತೆಯೇ, ಅಪಾಯಿಂಟ್‌ಮೆಂಟ್‌ಗಾಗಿ ನೀವು ಅನುಕೂಲಕರ ಸ್ಲಾಟ್ ಅನ್ನು ನಿಗದಿಪಡಿಸಬೇಕಾಗುತ್ತದೆ.

ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಅಪಾಯಿಂಟ್‌ಮೆಂಟ್ ಸ್ಲಾಟ್‌ಗಳ ಲಭ್ಯತೆಯನ್ನು ಪರಿಶೀಲಿಸುವ ಸರಳ ಹಂತಗಳು.

  • ಹಂತ 1: ಪಾಸ್‌ಪೋರ್ಟ್ ಸೇವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. "ಅಪಾಯಿಂಟ್ಮೆಂಟ್ ಲಭ್ಯತೆಯನ್ನು ಪರಿಶೀಲಿಸಿ" ಆಯ್ಕೆಮಾಡಿ.

  • ಹಂತ 2: "ಪಾಸ್‌ಪೋರ್ಟ್ ಕಚೇರಿ" ಆಯ್ಕೆಮಾಡಿ. ವೆರಿಫಿಕೇಶನ್ ಕೋಡ್ ಅನ್ನು ನಮೂದಿಸಿ ಮತ್ತು "ಅಪಾಯಿಂಟ್ಮೆಂಟ್ ಲಭ್ಯತೆಯನ್ನು ಪರಿಶೀಲಿಸಿ" ಕ್ಲಿಕ್ ಮಾಡಿ.

  • ಹಂತ 3: ನೀವು ಈಗ ನಿಮ್ಮ ಹತ್ತಿರದ ಪಾಸ್‌ಪೋರ್ಟ್ ಸೇವಾ ಕೇಂದ್ರದ ಸ್ಥಳ, ವಿಳಾಸ ಮತ್ತು ಅಪಾಯಿಂಟ್‌ಮೆಂಟ್ ದಿನಾಂಕವನ್ನು ನೋಡಬಹುದು. 

ಆನ್‌ಲೈನ್ ಪೋರ್ಟಲ್‌ನಲ್ಲಿ ನಿಮ್ಮ ಅಪಾಯಿಂಟ್‌ಮೆಂಟ್ ಅನ್ನು ನೀವು ಮರುನಿಗದಿಪಡಿಸಬಹುದು  ಅಥವಾ ರದ್ದುಗೊಳಿಸಬಹುದು.

ಪಿಎಸ್ ಕೆ ಕಚೇರಿಯಲ್ಲಿ ಅಪಾಯಿಂಟ್‌ಮೆಂಟ್ ದಿನದಂದು ಅನುಸರಿಸಬೇಕಾದ ಪ್ರಕ್ರಿಯೆಗಳು

 

ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ನಿಮ್ಮ ಅಪಾಯಿಂಟ್‌ಮೆಂಟ್ ದಿನದಂದು ಕೆಳಗೆ ತಿಳಿಸಲಾದ ಪ್ರಕ್ರಿಯೆಗಳನ್ನು ಅನುಸರಿಸಿ:

1. ನೀವು ಮುಖ್ಯ ಕಚೇರಿಯನ್ನು ಪ್ರವೇಶಿಸಿದ ನಂತರ, ಪಾಸ್‌ಪೋರ್ಟ್ ಅಧಿಕಾರಿಗೆ ಅಪಾಯಿಂಟ್‌ಮೆಂಟ್ ರಶೀದಿ ಮತ್ತು ಮೂಲ ಡಾಕ್ಯುಮೆಂಟುಗಳನ್ನು ಒದಗಿಸಿ. ಅವನು/ಅವಳು ಟೋಕನ್ ನೀಡುತ್ತಾರೆ.

2. ಈಗ ನೀವು ಮೂರು ಕೌಂಟರ್‌ಗಳಲ್ಲಿ ತೆರಳಬೇಕು - ಕೌಂಟರ್ ಎ, ಬಿ ಮತ್ತು ಸಿ.

 

ಕೌಂಟರ್‌ಗಳ ಪ್ರಕಾರ ಕೌಂಟರ್‌ನ ಪಾತ್ರ ಕೌಂಟರ್‌ನಲ್ಲಿ ತೆಗೆದುಕೊಳ್ಳಲಾಗುವ ಸರಾಸರಿ ಸಮಯ
A ನೀವು ಈ ಕೌಂಟರ್‌ನಲ್ಲಿ ಬಯೋಮೆಟ್ರಿಕ್ ಡೇಟಾ ಪರೀಕ್ಷೆಯ ಮೂಲಕ ತೆರಳಬೇಕು. ಜೊತೆಗೆ, ಇದು ನಿಮ್ಮ ಡಾಕ್ಯುಮೆಂಟ್‌ಗಳ ವೆರಿಫಿಕೇಶನ್ ಮತ್ತು ಅಪ್‌ಲೋಡ್ ಅನ್ನು ಒಳಗೊಂಡಿರುತ್ತದೆ. 10 ರಿಂದ 15 ನಿಮಿಷಗಳು.
B ಈ ಕೌಂಟರ್‌ನಲ್ಲಿ, ಪಾಸ್‌ಪೋರ್ಟ್ ಅಧಿಕಾರಿ ನಿಮ್ಮ ಮೂಲ ಡಾಕ್ಯುಮೆಂಟುಗಳನ್ನು ಪರಿಶೀಲಿಸುತ್ತಾರೆ ಹಾಗೂ ಡಾಕ್ಯುಮೆಂಟುಗಳು ಮತ್ತು ನಿಮ್ಮ ಪಾಸ್‌ಪೋರ್ಟ್‌ ಮೇಲೆ ಸ್ಟಾಂಪ್ ಹಾಕುತ್ತಾರೆ. 20 ರಿಂದ 30 ನಿಮಿಷಗಳು.
C ಹಿರಿಯ ಅಧಿಕಾರಿ ನಿಮ್ಮ ಡಾಕ್ಯುಮೆಂಟ್ ಅನ್ನು ಪರಿಶೀಲಿಸುತ್ತಾರೆ. ಅವನು/ಅವಳು ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ನಿಮ್ಮ ಪಾಸ್‌ಪೋರ್ಟ್ ಅಪ್ಲಿಕೇಶನ್ ಯಶಸ್ವಿಯಾಗಿದೆಯೇ ಎಂಬುದನ್ನು ನಿಮಗೆ ತಿಳಿಸುತ್ತಾರೆ. ಜೊತೆಗೆ ಪ್ರಸ್ತುತ ಅಥವಾ ನಂತರ ಯಾವುದೇ ಪೋಲೀಸ್ ವೆರಿಫಿಕೇಶನ್ ಅಗತ್ಯವಿದೆಯೇ ಎಂಬುದನ್ನು ಅವನು/ಅವಳು ಖಚಿತಪಡಿಸುತ್ತಾರೆ. 15 ನಿಮಿಷಗಳು
ನಿರ್ಗಮನ ಕೌಂಟರ್ ನಿಮ್ಮ ಟೋಕನ್ ಅನ್ನು ನಿರ್ಗಮನ ಕೌಂಟರ್‌ನಲ್ಲಿ ಸಲ್ಲಿಸಿ. ಪಿಎಸ್ ಕೆ ಸಿಬ್ಬಂದಿ ಪಾಸ್‌ಪೋರ್ಟ್ ಅಪ್ಲಿಕೇಶನ್ ರಶೀದಿಯನ್ನು ನೀಡುತ್ತಾರೆ. ಇದು ನಿಮ್ಮ ಪಾಸ್‌ಪೋರ್ಟ್ ಫೈಲ್ ಸಂಖ್ಯೆಯನ್ನು ಒಳಗೊಂಡಿದ್ದು, ಇದನ್ನು ನೀವು ಆನ್‌ಲೈನ್‌ನಲ್ಲಿ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಲು ಬಳಸಬಹುದು. ಎನ್ .ಎ

ಪಾಸ್‌ಪೋರ್ಟ್ ಸೇವಾ ಕೇಂದ್ರದ ಅಪ್ಲಿಕೇಶನ್ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡುವ ಕ್ರಮಗಳು

ನಿಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ, ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಅನ್ನು ಪರಿಶೀಲಿಸಿ. ಈ ಹಂತಗಳು ಹೀಗಿವೆ:

ಪಿಎಸ್ ಕೆ ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಿ

  • ಹಂತ 1: ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ಗೆ ಭೇಟಿ ನೀಡಿ. "ಅಪ್ಲಿಕೇಶನ್ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಿ" ಆಯ್ಕೆಮಾಡಿ

  • ಹಂತ 2: ಅಪ್ಲಿಕೇಶನ್ ಪ್ರಕಾರವನ್ನು ಆಯ್ಕೆಮಾಡಿ, ನಿಮ್ಮ 15-ಅಂಕಿಯ ಫೈಲ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ. ಸ್ಕ್ರೀನ್ ಮೇಲೆ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಅನ್ನು ವೀಕ್ಷಿಸಲು "ಟ್ರ್ಯಾಕ್ ಸ್ಟೇಟಸ್" ಮೇಲೆ ಕ್ಲಿಕ್ ಮಾಡಿ.

ಪಿಎಸ್ ಕೆ ಆಫ್‌ಲೈನ್‌ನಲ್ಲಿ ಅಪ್ಲಿಕೇಶನ್ ಸ್ಟೇಟಸ್ ಅನ್ನು ಟ್ರ್ಯಾಕ್ ಮಾಡಿ

ನೀವು ಈ ಕೆಳಗಿನ ವಿಧಾನಗಳ ಮೂಲಕ ನಿಮ್ಮ ಪಾಸ್‌ಪೋರ್ಟ್ ಅಪ್ಲಿಕೇಶನ್ ಸ್ಟೇಟಸ್ ಅನ್ನು ಆಫ್‌ಲೈನ್‌ನಲ್ಲಿ ಪರಿಶೀಲಿಸಬಹುದು:

  • SMS ಸೇವೆಗಳು (<STATUS FILE NUMBER> ಅನ್ನು 9704100100 ಗೆ ಕಳುಹಿಸಿ).

  • ನ್ಯಾಷನಲ್ ಕಾಲ್ ಸೆಂಟರ್ (ಸಂಪರ್ಕ ಸಂಖ್ಯೆ – 18002581800).

  • ನಿಮ್ಮ ಸ್ಥಳೀಯ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ನೇರವಾಗಿ ಭೇಟಿ ನೀಡಿ.

ಭಾರತದಲ್ಲಿ ಎಷ್ಟು ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ?

 

ಭಾರತದಲ್ಲಿ ಸರಿಸುಮಾರು 81 ಪಾಸ್‌ಪೋರ್ಟ್ ಸೇವಾ ಕೇಂದ್ರಗಳಿವೆ. ಭಾರತದಲ್ಲಿ ಇತರ ಪಾಸ್‌ಪೋರ್ಟ್ ಕಚೇರಿಗಳ ಲಭ್ಯತೆಯನ್ನು ನೋಡೋಣ:

ಭಾರತದಲ್ಲಿ ಪಾಸ್‌ಪೋರ್ಟ್ ಕಚೇರಿಗಳು ಲಭ್ಯತೆ
ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರ 424
ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗಳು 36
ಪಾಸ್‌ಪೋರ್ಟ್ ಸೇವಾ ಲಘು ಕೇಂದ್ರ 15

ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಮೂಲಕ ನೀವು ನಿಮ್ಮ ಹತ್ತಿರದ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಆನ್‌ಲೈನ್‌ನಲ್ಲಿ ಲೋಕೇಟ್  ಮಾಡಬಹುದು.

ಪ್ರತಿ ಭಾರತೀಯ ನಗರದಲ್ಲಿ ಲಭ್ಯವಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರವು ನಿರ್ದಿಷ್ಟ ಪ್ರದೇಶದಲ್ಲಿ ಪಾಸ್‌ಪೋರ್ಟ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ. ಪಾಸ್‌ಪೋರ್ಟ್ ಸೇವಾ ಕೇಂದ್ರ ಯಾವುದು ಎಂದು ತಿಳಿದುಕೊಂಡು ಅದರ ಮೂಲಕ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಸುಗಮ ಅಪ್ಲಿಕೇಶನ್ ಪ್ರಕ್ರಿಯೆಗೆ ಇದು ಅಗತ್ಯವಾಗಿದೆ. ಇದಲ್ಲದೆ, ಈ ಪ್ರಸ್ತುತ ಜಾಗತಿಕ ಆರೋಗ್ಯ ಬಿಕ್ಕಟ್ಟಿನಲ್ಲಿ ಸಂಪರ್ಕವಿಲ್ಲದ ಪಾಸ್‌ಪೋರ್ಟ್-ಸಂಬಂಧಿತ ಸೇವೆಗಳನ್ನು ಪಡೆಯಲು ಆನ್‌ಲೈನ್ ಪ್ಲಾಟ್‌ಫಾರ್ಮ್ ಅನುಕೂಲಕರವಾಗಿದೆ.

ಪಾಸ್‌ಪೋರ್ಟ್ ಸೇವಾ ಕೇಂದ್ರದ ಬಗೆಗಿನ ಪದೇ ಪದೇ ಕೇಳಲಾದ ಪ್ರಶ್ನೆಗಳು

ಅಪಾಯಿಂಟ್‌ಮೆಂಟ್ ಇಲ್ಲದೆ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಬಹುದೇ?

ತುರ್ತು, ವೈದ್ಯಕೀಯ ಕಾರಣಗಳು ಮತ್ತು ಇತರ ಪೂರ್ವ-ಅನುಮೋದಿತ ಪ್ರಕರಣಗಳ ಸಮಯದಲ್ಲಿ ಮಾತ್ರ ಅಪಾಯಿಂಟ್‌ಮೆಂಟ್ ಇಲ್ಲದೆ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ನೀವು ಭೇಟಿ ನೀಡಬಹುದು. ನಿಮಗೆ ಸೇವೆಗಳನ್ನು ಸಲ್ಲಿಸುವುದು ಪಾಸ್‌ಪೋರ್ಟ್ ಅಧಿಕಾರಿಯ ವಿವೇಚನೆಗೆ ಸೇರಿದೆ ಎಂಬುದನ್ನು ನೆನಪಿಡಿ.

ಪಾಸ್‌ಪೋರ್ಟ್ ಅಪ್ಲಿಕೇಶನ್ ವ್ಯಾಲಿಡಿಟಿ ಎಷ್ಟು?

ಅರ್ಜಿದಾರರು ಅಪ್ಲಿಕೇಶನ್ ಫಾರ್ಮ್ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿದ 90 ದಿನಗಳ ಒಳಗೆ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಲು ವಿಫಲವಾದರೆ, ಅವನು/ಅವಳು ಹೊಸ ಅಪ್ಲಿಕೇಶನ್ ಗೆ  ಅರ್ಜಿ ಸಲ್ಲಿಸಬೇಕಾಗುತ್ತದೆ.

ಇನ್ನೊಬ್ಬ ವ್ಯಕ್ತಿಯ ಪಾಸ್‌ಪೋರ್ಟ್ ಅಪ್ಲಿಕೇಶನ್ ಅನ್ನು ಮತ್ತೊಬ್ಬರು ಪಿಎಸ್ ಕೆ ನಲ್ಲಿ ಸಲ್ಲಿಸಬಹುದೇ?

ಇಲ್ಲ, ಪಿಎಸ್ ಕೆನಲ್ಲಿ ಇನ್ನೊಬ್ಬ ವ್ಯಕ್ತಿಯ ಪಾಸ್‌ಪೋರ್ಟ್ ಅಪ್ಲಿಕೇಶನ್ ಅನ್ನು ಸಲ್ಲಿಸಲು ಸಾಧ್ಯವಿಲ್ಲ.  ಅಪ್ಲಿಕೇಶನ್  ಸಲ್ಲಿಸುವಾಗ ಅರ್ಜಿದಾರರು ಭೌತಿಕವಾಗಿ ಹಾಜರಿರಬೇಕು.