ನೀವು ಆನ್ಲೈನ್ನಲ್ಲಿ ಇನ್ಶೂರೆನ್ಸ್ ಅನ್ನು ಹೇಗೆ ಮಾರಾಟ ಮಾಡಬಹುದು?
ಈಗಿನ ಕಾಲದಲ್ಲಿ, ಬಹಳಷ್ಟು ಜನರು ಸ್ವಲ್ಪ ಹೆಚ್ಚುವರಿ ಆದಾಯಕ್ಕಾಗಿ ಪರ್ಯಾಯ ವೃತ್ತಿ ಆಯ್ಕೆಗಳನ್ನು ಮತ್ತು ಪಾರ್ಟ್-ಟೈಮ್ ಜಾಬ್ಗಳನ್ನು ಹುಡುಕುತ್ತಿರುತ್ತಾರೆ. ಅವರಿಗಿರುವ ಉತ್ತಮ ಮಾರ್ಗವೆಂದರೆ ಆನ್ಲೈನ್ನಲ್ಲಿ ಇನ್ಶೂರೆನ್ಸ್ ಮಾರಾಟ ಮಾಡುವುದು.
ಭಾರತದಲ್ಲಿ, ಇನ್ಶೂರೆನ್ಸ್ ಅನ್ನು ಮಾರಾಟ ಮಾಡಲು ಎರಡು ಮುಖ್ಯ ಮಾರ್ಗಗಳಿವೆ:
1. ಇನ್ಶೂರೆನ್ಸ್ ಅಡ್ವೈಸರ್
ಇನ್ಶೂರೆನ್ಸ್ ಅಡ್ವೈಸರ್ ಎಂದರೆ ನಿರ್ದಿಷ್ಟ ಇನ್ಶೂರೆನ್ಸ್ ಕಂಪನಿಯೊಂದಿಗೆ ರಿಜಿಸ್ಟರ್ ಆಗಿರುವ ಇವರು, ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಲು, ಕ್ಲೈಮ್ಗಳನ್ನು ಮಾಡಲು ಹಾಗೂ ಇನ್ನೂ ಹೆಚ್ಚಿನ ಸಹಾಯ ಮಾಡಲು ಗ್ರಾಹಕರೊಂದಿಗೆ ಸಂಪರ್ಕ ಹೊಂದಿರುತ್ತಾರೆ. ಐ.ಆರ್.ಡಿ.ಎ.ಐ ನಿಗದಿಪಡಿಸಿದ ಮಾರ್ಗಸೂಚಿಗಳ ಪ್ರಕಾರ, ನಿಮ್ಮ ಲೈಸೆನ್ಸ್ ಪಡೆಯಲು ಮತ್ತು ಅಡ್ವೈಸರ್ ಆಗಲು ನೀವು ತರಬೇತಿ ಕಾರ್ಯಕ್ರಮಕ್ಕೆ ಒಳಗಾಗಬೇಕು ಮತ್ತು ಪರೀಕ್ಷೆಗೆ ಹಾಜರಾಗಬೇಕು.
2. ಪಾಯಿಂಟ್ ಆಫ್ ಸೇಲ್ ಪರ್ಸನ್ (ಪಿ.ಓ.ಎಸ್.ಪಿ)
ಪಿ.ಓ.ಎಸ್.ಪಿ ಎನ್ನುವುದು ಐ.ಆರ್.ಡಿ.ಎ.ಐ ನಿಂದ 2015 ರಲ್ಲಿ ಇನ್ಶೂರೆನ್ಸ್ ಅಡ್ವೈಸರ್ಗಳಿಗಾಗಿ ರಚಿಸಲ್ಪಟ್ಟ ಹೊಸ ರೀತಿಯ ಲೈಸೆನ್ಸ್ ಆಗಿದೆ. ನೀವು ಇನ್ನೂ ನಿಗದಿಪಡಿಸಿದ ತರಬೇತಿ ಕಾರ್ಯಕ್ರಮಕ್ಕೆ ಹಾಜರಾಗಬೇಕು ಮತ್ತು ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು. ಆಗ ನೀವು ಲೈಫ್ ಇನ್ಶೂರೆನ್ಸ್ ಮತ್ತು ಜನರಲ್ ಇನ್ಶೂರೆನ್ಸ್ ವಿಭಾಗಗಳಲ್ಲಿ (ಮೋಟಾರ್ ಇನ್ಶೂರೆನ್ಸ್, ಹೆಲ್ತ್ ಇನ್ಶೂರೆನ್ಸ್, ಟ್ರಾವೆಲ್ ಇನ್ಶೂರೆನ್ಸ್ ಮತ್ತು ಇತ್ಯಾದಿಗಳನ್ನು ಒಳಗೊಂಡಂತೆ) ಅನೇಕ ಇನ್ಶೂರೆನ್ಸ್ ಕಂಪನಿಗಳ ಪಾಲಿಸಿಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತದೆ.
ಈ ರೀತಿಯಾಗಿ, ನೀವು ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಆಯ್ಕೆಗಳನ್ನು ಮತ್ತು ಅನೇಕ ಕಂಪನಿಗಳ ವಿಭಿನ್ನ ಇನ್ಶೂರೆನ್ಸ್ ಯೋಜನೆಗಳನ್ನು ನೀಡಬಹುದು. ಇದರಿಂದ ಗ್ರಾಹಕರು ತಮಗಾಗಿ ಉತ್ತಮ ಪಾಲಿಸಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು ಅನೇಕ ಕಂಪನಿಗಳಿಂದ ಪಾಲಿಸಿಗಳನ್ನು ಮಾರಾಟ ಮಾಡಲು ಇನ್ಶೂರೆನ್ಸ್ ಮಧ್ಯವರ್ತಿ ಅಥವಾ ಬ್ರೋಕರ್ನೊಂದಿಗೆ ಕೆಲಸ ಮಾಡಬಹುದು ಅಥವಾ ಒಂದೇ ಕಂಪನಿಯೊಂದಿಗೆ ಕೆಲಸ ಮಾಡಬಹುದು. ಹೀಗಾಗಿ, ಸಾಂಪ್ರದಾಯಿಕ ಇನ್ಶೂರೆನ್ಸ್ ಅಡ್ವೈಸರ್ಗಿಂತ ನಿಮಗಿಲ್ಲಿ ಹೆಚ್ಚಿನ ಆಯ್ಕೆಗಳಿವೆ.
ಇನ್ಶೂರೆನ್ಸ್ ಪಿ.ಓ.ಎಸ್.ಪಿ(POSP) ಆಗುವುದು ಹೇಗೆ
ನಾವು ನೋಡಿದಂತೆ, ಪಿ.ಓ.ಎಸ್.ಪಿ (ಅಥವಾ ಪಾಯಿಂಟ್ ಆಫ್ ಸೇಲ್ಸ್ ಪರ್ಸನ್) ಎಂದರೆ ಅನೇಕ ಕಂಪನಿಗಳ ಲೈಫ್ ಇನ್ಶೂರೆನ್ಸ್, ಮೋಟಾರ್ ಇನ್ಶೂರೆನ್ಸ್, ಹೆಲ್ತ್ ಇನ್ಶೂರೆನ್ಸ್ ಮತ್ತು ಮುಂತಾದ ಅನೇಕ ವರ್ಗಗಳ ಇನ್ಶೂರೆನ್ಸ್ ಉತ್ಪನ್ನಗಳನ್ನು ಮಾರಾಟ ಮಾಡಲು ಸರ್ಟಿಫೈಡ್ ಆಗಿರುವ ವ್ಯಕ್ತಿ.
ಪಿ.ಓ.ಎಸ್.ಪಿ ಆಗಲು, ನೀವು ಐ.ಆರ್.ಡಿ.ಎ.ಐ ನೀಡಿದ ಕನಿಷ್ಠ ಶೈಕ್ಷಣಿಕ ಅರ್ಹತೆಗಳನ್ನು ಪೂರೈಸಬೇಕು ಮತ್ತು ಕಡ್ಡಾಯ ತರಬೇತಿ ಕೋರ್ಸ್ಗೆ ಒಳಗಾಗಬೇಕಾಗುತ್ತದೆ.
ಪಿ.ಓ.ಎಸ್.ಪಿ(POSP) ಆಗಲು ಅಗತ್ಯವಿರುವ ಅರ್ಹತೆಗಳು: ಇನ್ಶೂರೆನ್ಸ್ ಏಜೆಂಟ್ ಆಗಲು ಕೆಲವು ಮೂಲಭೂತ ಅವಶ್ಯಕತೆಗಳಿವೆ. ನೀವು ಕನಿಷ್ಟ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. ನೀವು ಮಾನ್ಯವಾಗಿರುವ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಮತ್ತು ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಅನ್ನು ಹೊಂದಿರಬೇಕು.
ಪಿ.ಓ.ಎಸ್.ಪಿ(POSP) ಆಗುವ ವಿಧಾನ: ಪಿ.ಓ.ಎಸ್.ಪಿ ಆಗಿ ಕೆಲಸ ಪ್ರಾರಂಭಿಸಲು, ನೀವು ನಿರ್ದಿಷ್ಟ ಕಂಪನಿ ಅಥವಾ ಇನ್ಶೂರೆನ್ಸ್ ಮಧ್ಯವರ್ತಿಯೊಂದಿಗೆ ರಿಜಿಸ್ಟರ್ ಮಾಡಿಕೊಳ್ಳಬೇಕು. ನಂತರ ಐ.ಆರ್.ಡಿ.ಎ.ಐ ನೀಡುವ 15-ಗಂಟೆಗಳ ಕಡ್ಡಾಯ ತರಬೇತಿಯನ್ನು ಪೂರ್ಣಗೊಳಿಸಬೇಕು. ಒಮ್ಮೆ ನೀವು ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಮತ್ತು ನಿಗದಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ನೀವು ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಲು ಲೈಸೆನ್ಸ್ ಪಡೆಯುತ್ತೀರಿ (ಪಿ.ಓ.ಎಸ್.ಪಿ ಮಾರ್ಗಸೂಚಿಗಳ ಪ್ರಕಾರ).
ಆದ್ದರಿಂದ, ಈ ಮೂಲಭೂತ ಮಾನದಂಡಗಳನ್ನು ಪೂರೈಸುವ ಯಾರಾದರೂ ಪಿ.ಓ.ಎಸ್.ಪಿ ಆಗಲು ರಿಜಿಸ್ಟರ್ ಮಾಡಿಕೊಳ್ಳಬಹುದು. ಮತ್ತು ನೀವು ಆನ್ಲೈನ್ನಲ್ಲಿ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾರಾಟ ಮಾಡಲು ಮತ್ತು ವಿತರಿಸಲು ಸಾಧ್ಯವಾಗುವುತ್ತದೆ. ಈ ಕೆಲಸಕ್ಕಾಗಿ ನಿಮಗೆ ಬೇಕಾಗಿರುವುದು ಕೇವಲ ಸ್ಮಾರ್ಟ್ಫೋನ್ ಅಥವಾ ಲ್ಯಾಪ್ಟಾಪ್ ಮತ್ತು ಉತ್ತಮ ಇಂಟರ್ನೆಟ್ ಕನೆಕ್ಷನ್.
ಗೂಗಲ್ ಲಿಸ್ಟಿಂಗ್ಸ್, ವೆಬ್ಸೈಟ್ ಕ್ರಿಯೇಷನ್ನಂತಹ ಆನ್ಲೈನ್ ಚಾನಲ್ಗಳನ್ನು ಸೆಟ್ ಮಾಡುವುದು, ಗೂಗಲ್, ಫೇಸ್ಬುಕ್ ಪೇಜುಗಳು, ಜಾಹೀರಾತುಗಳು, ಇಮೇಲ್, ಎಸ್ಎಮ್ಎಸ್, ವಾಟ್ಸಾಪ್ ಇತ್ಯಾದಿಗಳಂತಹ ಇತರ ಆನ್ಲೈನ್ ಚಾನಲ್ಗಳನ್ನು ಸೆಟ್ ಮಾಡುವುದು ಮತ್ತು ಇನ್ನಷ್ಟು. ಎಲ್ಲದರ ಬಗ್ಗೆ ಚಿಕ್ಕ ವಿವರಗಳು ತುಂಬಾ ಸಹಾಯಕವಾಗುತ್ತವೆ.