Thank you for sharing your details with us!

ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ಎಂದರೇನು?

ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ನಲ್ಲಿ ಏನೆಲ್ಲಾ ಕವರ್ ಆಗಿರುತ್ತದೆ?

ನೀವು ಡಿಜಿಟ್‌ನ ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ಅನ್ನು ಖರೀದಿಸಿದಾಗ, ಅದು ಈ ಕೆಳಗಿನ ಕವರೇಜ್‌ಗಳನ್ನು ನೀಡುತ್ತದೆ

ಮೆಟೀರಿಯಲ್ ಡ್ಯಾಮೇಜ್

ನಿರ್ದಿಷ್ಟವಾಗಿ ಹೊರತುಪಡಿಸಿದ ಕಾರಣಗಳನ್ನು ಹೊರತುಪಡಿಸಿ ಯಾವುದೇ ಕಾರಣದಿಂದ ಪಾಲಿಸಿಯ ಅವಧಿಯಲ್ಲಿ ಪ್ರಾಪರ್ಟಿಗೆ ಯಾವುದೇ ಡ್ಯಾಮೇಜ್ ಉಂಟಾದರೆ ಪಾಲಿಸಿಯ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಮೊತ್ತದವರೆಗೆ ರಕ್ಷಣೆ ನೀಡಲಾಗುತ್ತದೆ. ಭಾಗ್ನಾವಷೇಶಗಳ ತೆರವು ಮತ್ತು ತೆಗೆಯುವಿಕೆಗೆ ತಗಲುವ ವೆಚ್ಚವನ್ನು ಇನ್ಶೂರ್ ಆಗಿರುವವರಿಗೆ ರಿಇಂಬರ್ಸ್‌ ಮಾಡಲಾಗುತ್ತದೆ.

ಥರ್ಡ್-ಪಾರ್ಟಿ ಲಯಬಿಲಿಟಿ

ನಿಮ್ಮ ಸ್ವಂತ ಉದ್ಯೋಗಿಗಳನ್ನು ಹೊರತುಪಡಿಸಿ, ಇತರ ವ್ಯಕ್ತಿಗಳ ಪ್ರಾಪರ್ಟಿಯ ನಷ್ಟಕ್ಕೆ ಅಥವಾ ಯಾವುದೇ ವ್ಯಕ್ತಿಗೆ ಮಾರಣಾಂತಿಕ ಅಥವಾ ಮಾರಣಾಂತಿಕವಲ್ಲದ ಗಾಯಕ್ಕೆ, ಯಾವುದೇ ಕಾನೂನು ಲಯಬಿಲಿಟಿಯ ವಿರುದ್ಧ ಡಿಜಿಟ್‌ನ ಪಾಲಿಸಿಯು ನಿಮಗೆ ಪರಿಹಾರ ನೀಡುತ್ತದೆ.

ಕಾಂಪನ್ಸೇಶನ್

ಯಾವುದೇ ಕ್ಲೈಮ್ ದಾರರಿಂದ ರಿಕವರ್ ಆಗಿರುವ ಅಥವಾ, ನಮ್ಮಿಂದ ಲಿಖಿತ ಒಪ್ಪಿಗೆ ಪಡೆದ ನಂತರ ನಿಮ್ಮಿಂದ ಉಂಟಾದ ಮೊಕದ್ದಮೆಯ ಎಲ್ಲಾ ವೆಚ್ಚಗಳು ಮತ್ತು ಖರ್ಚುಗಳಿಗಾಗಿ ಸಹ ಈ ಪಾಲಿಸಿಯು ನಿಮಗೆ ಕಾಂಪನ್ಸೇಶನ್ ಒದಗಿಸುತ್ತದೆ.

ಕಾಂಪ್ರೆಹೆನ್ಸಿವ್ ಕವರ್

ಪಾಲಿಸಿಯಲ್ಲಿನ ಮುದ್ರಿತ ಹೊರಗಿಡುವಿಕೆಗೆ ಒಳಪಟ್ಟು ಇದು ಪ್ರಾಜೆಕ್ಟ್ ಗಳಿಗೆ ಕಾಂಪ್ರೆಹೆನ್ಸಿವ್ ಕವರ್ ಅನ್ನು ನೀಡುತ್ತದೆ. ಈ ಪಾಲಿಸಿಯನ್ನು ಸಾಮಾನ್ಯವಾಗಿ ಸಿವಿಲ್ ಕನ್ಸ್ಟ್ರಕ್ಷನ್ ಕಾರ್ಯಗಳ ಮೌಲ್ಯವು ಒಟ್ಟು ಪ್ರಾಜೆಕ್ಟ್ ಮೌಲ್ಯದ 50% ಕ್ಕಿಂತ ಹೆಚ್ಚಿರುವ ಪ್ರಾಜೆಕ್ಟ್ ಗಳಿಗೆ ನೀಡಲಾಗುತ್ತದೆ.

ಆ್ಯಡ್-ಆನ್ ಕವರ್‌ಗಳು

ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡುವ ಮೂಲಕ ಪಾಲಿಸಿಯಲ್ಲಿ ಒದಗಿಸಲಾಗದ ವೆಚ್ಚಗಳಿಗೆ ನೀವು ಹೆಚ್ಚುವರಿ ಕವರೇಜ್ ಅನ್ನು ಪಡೆಯಬಹುದು.

ಏನೆಲ್ಲಾ ಕವರ್ ಆಗಿರುವುದಿಲ್ಲ?

ಡಿಜಿಟ್‌ನ ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯು ಮುಖ್ಯ ಹೊರಗಿಡುವಿಕೆಗಳ ಅಡಿಯಲ್ಲಿ ಪಾಲಿಸಿಯಲ್ಲಿ ಹೈಲೈಟ್ ಮಾಡಲಾದ ವೆಚ್ಚದಿಂದ ಉಂಟಾಗುವ ಕನ್ಸ್ಟ್ರಕ್ಷನ್ ಪ್ರಾಪರ್ಟಿಗೆ ನಷ್ಟ ಅಥವಾ ಹಾನಿಗಳನ್ನು ಕವರ್ ಮಾಡುವುದಿಲ್ಲ. ಇಂತಹ ಕೆಲವು ಅಂಶಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ- 

ರಸ್ತೆಗಳು, ನೀರು ಮತ್ತು ಗಾಳಿಯಲ್ಲಿ ಚಲಿಸುವ ವಾಹನಗಳಿಂದ ಉಂಟಾಗುವ ಅಪಘಾತಗಳು ಈ ಪಾಲಿಸಿಯಲ್ಲಿ ಕವರ್ ಆಗಿರುವುದಿಲ್ಲ.

ದೋಷಯುಕ್ತ ವಸ್ತು, ಕಾಸ್ಟಿಂಗ್ ಮತ್ತು ಕೆಟ್ಟ ಕಲಾಕೌಶಲದ ಬಳಕೆಯಿಂದ ಉಂಟಾಗುವ ನಷ್ಟ ಮತ್ತು ಹಾನಿಗಳು ಕವರ್ ಆಗಿರುವುದಿಲ್ಲ.

ಸಾಮಾನ್ಯ ಸವೆತ ಅಥವಾ ನಿರ್ಲಕ್ಷ್ಯದ ಕಾರಣದಿಂದ ಉಂಟಾದ ಹಾನಿಗಾಗಿ ಈ ಪಾಲಿಸಿಯು ಕ್ಲೈಮ್‌ಗಳನ್ನು ಸ್ವೀಕರಿಸುವುದಿಲ್ಲ.

ಕಟ್ಟಡದ ನಿಯಮಿತ ಮೆಂಟೇನೆನ್ಸ್ ನ ಭಾಗವಾಗಿ ಮಾಡಿದ ಯಾವುದೇ ಬದಲಾವಣೆಗಳು, ಸೇರ್ಪಡೆಗಳು ಅಥವಾ ಸುಧಾರಣೆಗಳ ವೆಚ್ಚವನ್ನು ಈ ಪಾಲಿಸಿಯು ಕವರ್ ಮಾಡುವುದಿಲ್ಲ.

ದೋಷಪೂರಿತ ವಿನ್ಯಾಸ, ಭಯೋತ್ಪಾದನೆ, ಯುದ್ಧ ಮತ್ತು ಪರಮಾಣು ಅಪಾಯಗಳಿಂದಾಗಿ ಕಟ್ಟಡಕ್ಕೆ ಉಂಟಾದ ಹಾನಿಗಳು ಈ ಪಾಲಿಸಿಯ ಅಸ್ತಿತ್ವದಲ್ಲಿಲ್ಲ.

ಫೈಲ್‌ಗಳು, ಡ್ರಾಯಿಂಗ್‌ಗಳು, ಅಕೌಂಟ್ ಗಳು ಮತ್ತು ಬಿಲ್‌ಗಳ ನಷ್ಟ ಅಥವಾ ಹಾನಿ, ಹಾಗೆಯೇ ಒಪ್ಪಂದದ ಲಯಬಿಲಿಟಿಗಳು ಮತ್ತು ಥರ್ಡ್ ಪಾರ್ಟಿಯ ಲಯಬಿಲಿಟಿಯನ್ನು ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕವರ್ ಮಾಡಲಾಗುವುದಿಲ್ಲ.

ದೋಷಪೂರಿತ ವಿನ್ಯಾಸದ ನಷ್ಟ ಮತ್ತು ದಾಸ್ತಾನು ತೆಗೆದುಕೊಳ್ಳುವ ಸಮಯದಲ್ಲಿ ಮಾತ್ರ ಪತ್ತೆಯಾದ ದೋಷಗಳ ನಷ್ಟಗಳನ್ನು ಕವರ್ ಮಾಡಲಾಗುವುದಿಲ್ಲ.

ಪಾಲಿಸಿಯಲ್ಲಿ ಹೈಲೈಟ್ ಮಾಡಿರುವಂತೆ ಪಾಲಿಸಿ ಹೆಚ್ಚುವರಿಯ ಅಡಿಯಲ್ಲಿ ಬೀಳುವ ನಷ್ಟದ ಮೊತ್ತ.

ಕ್ಲೈಮ್ ಫೈಲ್ ಮಾಡುವುದು ಹೇಗೆ?

ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯ ಅಗತ್ಯ ಯಾರಿಗೆ ಇರುತ್ತದೆ?

ಯಾವುದೇ ರೀತಿಯಲ್ಲಿ ಕನ್ಸ್ಟ್ರಕ್ಷನ್ ಬಿಸಿನೆಸ್ ನಲ್ಲಿ ತೊಡಗಿರುವವರು ಈ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಬಹುದು.

ಕನ್ಸ್ಟ್ರಕ್ಷನ್ ಕಂಪನಿಗಳು

ಕನ್ಸ್ಟ್ರಕ್ಷನ್ ಬಿಸಿನೆಸ್ ನಲ್ಲಿ ತೊಡಗಿರುವ ಕಂಪನಿಗಳು ಅಹಿತಕರ ಸಂದರ್ಭಗಳಲ್ಲಿ ಆರ್ಥಿಕವಾಗಿ ತಮ್ಮನ್ನು ರಕ್ಷಿಸಿಕೊಳ್ಳಲು ಈ ಪಾಲಿಸಿಯನ್ನು ಖರೀದಿಸಬಹುದು.

ಫೈನಾನ್ಸ್ ಕಂಪನಿಗಳು

ಸಂಪೂರ್ಣ ಪ್ರಾಜೆಕ್ಟ್ ಗಾಗಿ ಹಣಕಾಸಿನ ನೆರವು ನೀಡುವ ಕಂಪನಿಗಳು ಸಹ ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಪಾಲಿಸಿಯನ್ನು ಖರೀದಿಸಬಹುದು. ಕನ್ಸ್ಟ್ರಕ್ಷನ್ ಹಂತದಲ್ಲಿ ಅಥವಾ ನಂತರ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಇದು ಸಹಾಯ ಮಾಡುತ್ತದೆ.

ಪ್ರಾಪರ್ಟಿ ಮಾಲೀಕರು

ಬಿಲ್ಡಿಂಗ್ ಅನ್ನು ಪೂರ್ಣಗೊಳಿಸುವ ಕಾರ್ಯವನ್ನು ಕಾಂಟ್ರ್ಯಾಕ್ಟರ್‌ಗಳಿಗೆ ಅವರೇ ನೀಡಿರುವ ಕಾರಣ ಪ್ರಾಪರ್ಟಿ ಮಾಲೀಕರು ಕನ್ಸ್ಟ್ರಕ್ಷನ್ ನಡೆಯುತ್ತಿರುವಲ್ಲಿ ಈ ಪಾಲಿಸಿಯನ್ನು ಖರೀದಿಸಬಹುದು.

ಕಾಂಟ್ರ್ಯಾಕ್ಟರ್‌ಗಳು ಮತ್ತು ಸಬ್ ಕಾಂಟ್ರ್ಯಾಕ್ಟರ್‌ಗ

ಕಾಂಟ್ರ್ಯಾಕ್ಟರ್‌ಗಳು ಮತ್ತು ಸಬ್ ಕಾಂಟ್ರ್ಯಾಕ್ಟರ್‌ಗಳು ಸಮಯಕ್ಕೆ ಸರಿಯಾಗಿ ಕನ್ಸ್ಟ್ರಕ್ಷನ್ ಪೂರ್ಣಗೊಳಿಸುವ ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸಲು ಕಾರ್ಮಿಕರನ್ನು ನೇಮಿಸುವ ಕಾರಣ ಅವರು ಸಹ ಈ ಪಾಲಿಸಿಯನ್ನು ಖರೀದಿಸಬಹುದು.

ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯನ್ನು ನೀವು ಏಕೆ ಖರೀದಿಸಬೇಕು?

ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ಗಾಗಿ ಪ್ರೀಮಿಯಂ ಅನ್ನು ಹೇಗೆ ಕ್ಯಾಲ್ಕ್ಯುಲೇಟ್ ಮಾಡಲಾಗುತ್ತದೆ?

ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಗೆ ಪಾವತಿಸಬೇಕಾದ ಪ್ರೀಮಿಯಂ ಅನ್ನು ವಿವಿಧ ಅಂಶಗಳನ್ನು ಬಳಸಿಕೊಂಡು ಕ್ಯಾಲ್ಕ್ಯುಲೇಟ್ ಮಾಡಲಾಗುತ್ತದೆ:

ಸಮ್ ಇನ್ಶೂರ್ಡ್

ನೀವು ಹೆಚ್ಚಿನ ಸಮ್ ಇನ್ಶೂರ್ಡ್ ಅನ್ನು ಆಯ್ಕೆ ಮಾಡಿದರೆ, ಪಾವತಿಸಬೇಕಾದ ಪ್ರೀಮಿಯಂ ಅಧಿಕವಾಗಿರುತ್ತದೆ ಮತ್ತು ಪ್ರತಿಯಾಗಿ. ಪ್ರಾಜೆಕ್ಟ್ ನ ಪೂರ್ಣತೆಯ ಅಂದಾಜು ಮೌಲ್ಯದ ಆಧಾರದ ಮೇಲೆ ಸಮ್ ಇನ್ಶೂರ್ಡ್ ಅನ್ನು ನಿಗದಿಪಡಿಸಬೇಕು. ಪೂರ್ವ- ಆಪರೇಟಿವ್ ಶುಲ್ಕಗಳು ಸಮ್ ಇನ್ಶೂರ್ಡ್ ನ ಭಾಗವಾಗಿರುವುದಿಲ್ಲ ಎಂದು ನೀವು ತಿಳಿದಿರಬೇಕು. ಪಾಲಿಸಿ ಸಮ್ ಇನ್ಶೂರ್ಡ್ ಅನ್ನು ತಲುಪಲು ಆಯ್ಕೆಮಾಡಿದ ಹೆಚ್ಚಿಕೆ ಮೊತ್ತದ 50% ಅನ್ನು ಸಹ ಸೇರಿಸಬೇಕು.

ನಿರ್ವಹಿಸಲಾದ ಕೆಲಸ

ನಿರ್ವಹಿಸಲಾದ ಕೆಲಸವನ್ನು ಅವಲಂಬಿಸಿ ಪ್ರೀಮಿಯಂ ಬದಲಾಗುತ್ತದೆ. ಪ್ರಾಜೆಕ್ಟ್ ಸೈಟ್‌ನಲ್ಲಿ ನಿರ್ವಹಿಸಲಾದ ಕೆಲಸಕ್ಕೆ ಸಂಬಂಧಿಸಿದ ಅಪಾಯ ಎಷ್ಟು ಹೆಚ್ಚಿರುತ್ತದೆಯೋ, ಪಾವತಿಸಬೇಕಾದ ಪ್ರೀಮಿಯಂ ಸಹ ಅಷ್ಟೇ ಹೆಚ್ಚಿರುತ್ತದೆ.

ಸುರಕ್ಷತಾ ಮಾನದಂಡಗಳು

ಸುರಕ್ಷತಾ ಮಾನದಂಡಗಳು ಸಹ ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಪಾಲಿಸಿ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತವೆ. ಕೆಲಸದ ಲೊಕೇಶನ್ ನಲ್ಲಿ ಮಾಡಿದ ಕೆಲಸಕ್ಕಾಗಿ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಪಾವತಿಸಬೇಕಾದ ಪ್ರೀಮಿಯಂ ಅನ್ನು ಕಡಿಮೆ ಮಾಡುತ್ತದೆ.

ಲೊಕೇಶನ್

ಪ್ರಾಜೆಕ್ಟ್‌ನ ಲೊಕೇಶನ್ ಪಾಲಿಸಿಯ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ ಏಕೆಂದರೆ ಕೆಲವು ಪ್ರದೇಶಗಳು ನೈಸರ್ಗಿಕ ವಿಕೋಪಗಳಿಗೆ ಹೆಚ್ಚು ಒಳಗಾಗುತ್ತವೆ.

ಸರಿಯಾದ ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವುದು ಹೇಗೆ?

ಸರಿಯಾದ ಸಮ್ ಇನ್ಶೂರ್ಡ್ ಅನ್ನು ಪಡೆಯಿರಿ

ನಿಮಗಾಗಿ ನೀವು ಒಂದು ಕನ್‌ಸ್ಟ್ರಕ್ಟರ್ ಗಳ ಆಲ್ ರಿಸ್ಕ್ ಪಾಲಿಸಿಯನ್ನು ಪಡೆಯಲು ನಿರ್ಧರಿಸುವಾಗ, ಸಮರ್ಪಕವಾದ ಸಮ್ ಇನ್ಶೂರ್ಡ್ ಅನ್ನು ಆಯ್ಕೆ ಮಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ, ಇದನ್ನು ಮಾಡದಿದ್ದಲ್ಲಿ ಕ್ಲೈಮ್ ಸಮಯದಲ್ಲಿ ಇನ್ಶೂರೆನ್ಸ್ ಅಡಿಯಲ್ಲಿ ನಿಮಗೆ ದಂಡ ವಿಧಿಸಲಾಗುವುದು.

ನೀವು ಸರಿಯಾದ ಕವರೇಜ್ ಅನ್ನು ಪಡೆಯುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ

ಯಾವ ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಬೇಕೆಂದು ನಿರ್ಧರಿಸುವಾಗ, ನಿಯಮಗಳು ಮತ್ತು ಷರತ್ತುಗಳನ್ನು ಸರಿಯಾಗಿ ಅನುಸರಿಸುವ ಮೂಲಕ ನೀವು ಸಾಕಷ್ಟು ಕವರೇಜ್ ಅನ್ನು ಪಡೆಯುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ಕೆಲವು ಅನಿರೀಕ್ಷಿತ ಸಂದರ್ಭಗಳು ಉದ್ಭವಿಸಿದರೆ ಕ್ಲೈಮ್ ಮಾಡಲು ನಿಮಗೆ ಸಹಾಯ ಮಾಡುವುದಕ್ಕಾಗಿ ಇದು ಬಹಳ ಮುಖ್ಯವಾಗುತ್ತದೆ.

ಗೊಂದಲ-ಮುಕ್ತ ಕ್ಲೈಮ್ ಪ್ರಕ್ರಿಯೆಯನ್ನು ಹೊಂದಿರುವ ಇನ್ಶೂರರ್ ಅನ್ನು ಆಯ್ಕೆಮಾಡಿ

ಇನ್ಶೂರೆನ್ಸ್ ಪಾಲಿಸಿ ಯಾವುದೇ ಇರಲಿ, ಕ್ಲೈಮ್ ಪ್ರಕ್ರಿಯೆಯು ಗೊಂದಲ-ಮುಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಕ್ಲೈಮ್‌ಗಳು ಒಂದು ಇನ್ಶೂರೆನ್ಸ್ ನ ಅತ್ಯಂತ ನಿರ್ಣಾಯಕ ಭಾಗವಾಗಿರುವುದರಿಂದ, ಸುಲಭವಾದ ಕ್ಲೈಮ್ ಸೆಟಲ್‌ಮೆಂಟ್ ಪಾಲಿಸಿಯನ್ನು ಹೊಂದಿರುವ ಕನ್‌ಸ್ಟ್ರಕ್ಟರ್ ಗಳ ಆಲ್ ರಿಸ್ಕ್ ಪಾಲಿಸಿಯನ್ನು ಇನ್ಶೂರರ್ ನಿಂದ ಆಯ್ಕೆಮಾಡಿಕೊಳ್ಳಿ.

ಹೆಚ್ಚುವರಿ ಪ್ರಯೋಜನಗಳನ್ನು ನೀಡುವ ಪಾಲಿಸಿಯನ್ನು ಆರಿಸಿ

ಮೇಲೆ ತಿಳಿಸಿದ ಪಾಯಿಂಟರ್‌ಗಳ ಜೊತೆಗೆ, ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ಹೆಚ್ಚುವರಿ ಸಹಾಯಕ್ಕಾಗಿ ಹುಡುಕುವುದನ್ನು ಖಚಿತಪಡಿಸಿಕೊಳ್ಳಿ. ಇದು ಬಳಸಲು ಸುಲಭವಾದ ಮೊಬೈಲ್ ಆ್ಯಪ್ ಗಳು, ರೌಂಡ್-ದಿ-ಕ್ಲಾಕ್ ಅಸಿಸ್ಟಂಸ್ ಇತ್ಯಾದಿಗಳನ್ನು ಒಳಗೊಂಡಿರಬಹುದು.

ಇತರೆ ಇನ್ಶೂರರ್ ಗಳು ನೀಡುವ ಪಾಲಿಸಿಗಳನ್ನು ಹೋಲಿಕೆ ಮಾಡಿ

ಮಾರ್ಕೆಟ್ ನಲ್ಲಿರುವ ಇತರ ಇನ್ಶೂರರ್ ಗಳು ನೀಡುವ ಪಾಲಿಸಿಗಳನ್ನು ನೀವು ಹೋಲಿಕೆ ಮಾಡಬೇಕಾಗುತ್ತದೆ, ಇದು ಸಾಕಷ್ಟು ಕವರೇಜ್ ನೀಡುವ ಪಾಲಿಸಿಯನ್ನು ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ.

ಭಾರತದಲ್ಲಿ ಕಾಂಟ್ರ್ಯಾಕ್ಟರ್‌ಗಳ ಆಲ್ ರಿಸ್ಕ್ ಇನ್ಶೂರೆನ್ಸ್ ಪಾಲಿಸಿಯ ಬಗ್ಗೆ ಪದೇ ಪದೇ ಕೇಳಲಾಗುವ ಪ್ರಶ್ನೆಗಳು