Thank you for sharing your details with us!

ಸೈನ್ ಬೋರ್ಡ್ ಇನ್ಶೂರೆನ್ಸ್ ಎಂದರೇನು?

ಸೈನ್ ಬೋರ್ಡ್ ಇನ್ಶೂರೆನ್ಸ್ ಹೊಂದುವ ಪ್ರಯೋಜನಗಳು

ನಿಮ್ಮ ಸೈನ್ ಬೋರ್ಡ್‌ಗಳಿಗೆ ಬೆಂಕಿ, ಕಳ್ಳತನ ಅಥವಾ ಇತರ ದುರದೃಷ್ಟಕರ ಘಟನೆಗಳಿಂದ ನಷ್ಟ ಅಥವಾ ಡ್ಯಾಮೇಜ್ ಉಂಟಾದ ಸಂದರ್ಭದಲ್ಲಿ ನಿಮ್ಮ ಬಿಸಿನೆಸ್‌ ಅನ್ನು ರಕ್ಷಿಸಲು ಸೈನ್ ಬೋರ್ಡ್ ಇನ್ಶೂರೆನ್ಸ್ ಅತ್ಯಗತ್ಯ. ಆದರೆ ನಿಮಗೆ ನಿಜವಾಗಿಯೂ ಅದು ಏಕೆ ಅವಶ್ಯ?

ನಿಮ್ಮ ಸೈನ್‌ಬೋರ್ಡ್‌ಗಳು ಅಥವಾ ಹೋರ್ಡಿಂಗ್‌ಗಳು ಬೆಂಕಿ, ಕಳ್ಳತನ ಅಥವಾ ಇತರ ರೀತಿಯಲ್ಲಿ ಡ್ಯಾಮೇಜ್‌ಗೊಳಗಾದರೆ, ಅವುಗಳನ್ನು ರಿಪೇರಿ ಮಾಡಲು ಅಥವಾ ರಿಪ್ಲೇಸ್ ಮಾಡಲು ನಿಮಗೆ ಸಹಾಯ ಮಾಡುತ್ತದೆ.
ಡ್ಯಾಮೇಜ್ ಅನ್ನು ಸರಿಪಡಿಸಲು ಅಥವಾ ನಿಮ್ಮ ಸೈನ್‌ಬೋರ್ಡ್‌ಗಳನ್ನು ರಿಪ್ಲೇಸ್ ಮಾಡಲು ದುಬಾರಿ ವೆಚ್ಚಗಳ ವಿರುದ್ಧ ಆರ್ಥಿಕ ರಕ್ಷಣೆ ಪಡೆಯಿರಿ.
ನಿಮ್ಮ ಬಿಸಿನೆಸ್‌ ಮತ್ತು ಜಾಹೀರಾತುಗಳ ಮೇಲೆ ಪರಿಣಾಮ ಬೀರದಂತೆ ನಿಮ್ಮ ಸೈನ್‌ಬೋರ್ಡ್‌ಗಳನ್ನು ನೀವು ಸರಿಯಾದ ಸಮಯಕ್ಕೆ ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಲು ನಿಮಗೆ ನೆರವು ಸಿಗುತ್ತದೆ.

ಸೈನ್ ಬೋರ್ಡ್ ಇನ್ಶೂರೆನ್ಸ್ ಏನು ಕವರ್ ಮಾಡುತ್ತದೆ?

ನೀವು ಸೈನ್ ಬೋರ್ಡ್ ಇನ್ಶೂರೆನ್ಸ್ ಅನ್ನು ಪಡೆದರೆ, ನೀವು ಈ ಎಲ್ಲಾ ಸಂದರ್ಭಗಳಲ್ಲಿ ಕವರ್ ಆಗುತ್ತೀರಿ...

ಆಕಸ್ಮಿಕ ಎಕ್ಸ್‌ಟರ್ನಲ್‌ ನಷ್ಟ ಅಥವಾ ಡ್ಯಾಮೇಜ್‌

ಬೆಂಕಿ, ಸಿಡಿಲು, ಭೂಕಂಪಗಳು, ಪ್ರವಾಹಗಳು ಮತ್ತು ಇತರ ನೈಸರ್ಗಿಕ ವಿಕೋಪಗಳಿಂದಾಗಿ ಸೈನ್ ಬೋರ್ಡ್‌ಗೆ ಯಾವುದೇ ಆಕಸ್ಮಿಕ ನಷ್ಟ ಅಥವಾ ಡ್ಯಾಮೇಜ್‌.

ಸೈನ್ ಬೋರ್ಡ್ ಕಳ್ಳತನ

ಒಂದು ವೇಳೆ ಇಡೀ ಸೈನ್ ಬೋರ್ಡ್ ಕಳವಾದರೆ, ಅದರ ರಿಪ್ಲೇಸ್‌ಮೆಂಟ್‌ಗೆ ನಿಮ್ಮನ್ನು ಕವರ್ ಮಾಡಲಾಗುತ್ತದೆ.

ಗಲಭೆಗಳ ಸಮಯದಲ್ಲಿನ ಡ್ಯಾಮೇಜ್‌ಗಳು

ಗಲಭೆ ಅಥವಾ ಮುಷ್ಕರದ ಸಮಯದಲ್ಲಿ ನಿಮ್ಮ ಸೈನ್ ಬೋರ್ಡ್(ಗಳು) ದುರುದ್ದೇಶಪೂರಿತವಾಗಿ ಡ್ಯಾಮೇಜ್‌ಗೊಳಗಾದರೆ ನೀವು ಸಹ ಕವರ್ ಆಗುತ್ತೀರಿ.

ಟೆಂಪರರಿ ಬೋರ್ಡಿಂಗ್

ಸೈನ್ ಬೋರ್ಡ್ ಡ್ಯಾಮೇಜ್‌ಗೊಳಗಾದ ನಂತರ ಅಗತ್ಯವಿರುವ ಯಾವುದೇ ಟೆಂಪರರಿ ಬೋರ್ಡಿಂಗ್ ಅಥವಾ ಗ್ಲೇಜಿಂಗ್ ಅನ್ನು ನಿರ್ಮಿಸುವ ವೆಚ್ಚವನ್ನು ಸಹ ಪಾಲಿಸಿ ಕವರ್ ಮಾಡುತ್ತದೆ.

ಅಲಾರಮ್‌ಗಳು ಮತ್ತು ಅಕ್ಷರಗಳನ್ನು ರಿಪ್ಲೇಸ್‌ ಮಾಡುವುದು

ಡ್ಯಾಮೇಜ್‌ಗೊಳಗಾದ ಸೈನ್‌ಬೋರ್ಡ್‌ನಲ್ಲಿರುವ ಯಾವುದೇ ಅಲಾರಮ್‌ ವೈರಿಂಗ್, ಅಕ್ಷರಗಳು, ಚಿತ್ರಕಲೆ ಅಥವಾ ಅಲಂಕರಣಗಳನ್ನು ನೀವು ರಿಪ್ಲೇಸ್‌ ಮಾಡಬೇಕಾದರೆ ನಿಮಗೆ ಕವರ್‌ ಮಾಡಲಾಗುತ್ತದೆ.

ವಿಂಡೋ ಫ್ರೇಮ್‌ಗಳನ್ನು ರಿಪ್ಲೇಸ್‌ ಮಾಡುವುದು

ಯಾವುದೇ ಡ್ಯಾಮೇಜ್‌ಗೊಳಗಾದ ಭಾಗಗಳನ್ನು ಇನ್‌ಸ್ಟಾಲ್‌ ಮಾಡುವ ಅಥವಾ ಸಂಪೂರ್ಣ ಸೈನ್‌ಬೋರ್ಡ್ ಅನ್ನು ರಿಪ್ಲೇಸ್‌ ಮಾಡುವ ವೆಚ್ಚವು ನಿರ್ದಿಷ್ಟಪಡಿಸಿದ ಲಿಮಿಟ್ ಅನ್ನು ಮೀರದಿದ್ದಲ್ಲಿ ಕವರ್‌ ಮಾಡಲಾಗುವುದು.

ಭಗ್ನಾವಶೇಷ ತೆಗೆಯುವಿಕೆ

ಡ್ಯಾಮೇಜ್‌ಗೊಳಗಾದ ಸೈನ್ ಬೋರ್ಡ್‌ನಿಂದ ಉಂಟಾದ ಯಾವುದೇ ಭಗ್ನಾವಶೇಷಗಳನ್ನು ತೆಗೆದುಹಾಕುವ ವೆಚ್ಚಗಳಿಗೂ ನಿಮ್ಮನ್ನು (ನಿರ್ದಿಷ್ಟಪಡಿಸಿದ ಲಿಮಿಟ್‌ಗಳಲ್ಲಿ) ಕವರ್‌ ಮಾಡಲಾಗುತ್ತದೆ.

ಥರ್ಡ್ ಪಾರ್ಟಿ ದೈಹಿಕ ಗಾಯ ಅಥವಾ ಸಾವು

ಸೈನ್ ಬೋರ್ಡ್‌ ಡ್ಯಾಮೇಜ್‌ನಿಂದ ಥರ್ಡ್‌ ಪಾರ್ಟಿ ವ್ಯಕ್ತಿಯ ದೈಹಿಕ ಗಾಯ ಅಥವಾ ಸಾವಿಗೆ ಕಾರಣವಾಗಿದ್ದರೆ ಲೀಗಲ್‌ ಲಯಬಿಲಿಟಿಯ ವಿರುದ್ಧವೂ ಇದು ಕವರ್ ಮಾಡುತ್ತದೆ.

ಥರ್ಡ್ ಪಾರ್ಟಿ ಪ್ರಾಪರ್ಟಿ ಡ್ಯಾಮೇಜ್

ಸೈನ್ ಬೋರ್ಡ್‌ನ ನಷ್ಟ ಅಥವಾ ಡ್ಯಾಮೇಜ್‌ ಯಾವುದೇ ಥರ್ಡ್‌ ಪಾರ್ಟಿ ವ್ಯಕ್ತಿಯ ಪ್ರಾಪರ್ಟಿ ಡ್ಯಾಮೇಜ್‌ಗೆ ಕಾರಣವಾದರೆ, ನೀವು ಅದಕ್ಕೆ ಕವರ್‌ ಪಡೆಯುತ್ತೀರಿ.

ಏನೆಲ್ಲಾ ಕವರ್ ಆಗುವುದಿಲ್ಲ?

ನಾವು ನಿಜವಾಗಿಯೂ ಪಾರದರ್ಶಕತೆಯಲ್ಲಿ ನಂಬಿಕೆ ಇಟ್ಟಿರುವ ಕಾರಣ, ಇಲ್ಲಿರುವ ಕೆಲವು ಸನ್ನಿವೇಶಗಳು ಕವರ್ ಆಗುವುದಿಲ್ಲ...

ಯಾವುದೇ ಬಲ್ಬ್‌ ಬರ್ನ್ ಆಗುವುದು, ಶಾರ್ಟ್-ಸರ್ಕ್ಯೂಟಿಂಗ್ ಅಥವಾ ಅಧಿಕ ಬಿಸಿಯಾಗುವಿಕೆ ಸೇರಿದಂತೆ ಯಾವುದೇ ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ಬ್ರೇಕ್‌ಡೌನ್‌ ವೈಫಲ್ಯಗಳು.

ಸೈನ್ ಬೋರ್ಡ್‌ಗೆ ನಷ್ಟ ಅಥವಾ ಡ್ಯಾಮೇಜ್‌ ಅನ್ನು ಉಂಟುಮಾಡದ ಹೊರತಾಗಿ ಡಿಸ್‌ಫಿಗರೇಷನ್‌, ಸ್ಕ್ರಾಚಿಂಗ್, ಬಿರುಕು ಅಥವಾ ಚಿಪ್ಪಿಂಗ್, ಮತ್ತು ಅಕ್ಷರಗಳ ಒಡೆಯುವಿಕೆ.

ಸೈನ್ ಬೋರ್ಡ್‌ಗೆ ಯಾವುದೇ ಡ್ಯಾಮೇಜ್ ಆಗದಂತೆ ಫ್ರೇಮ್ ಅಥವಾ ಫ್ರೇಮ್‌ವರ್ಕ್‌ಗೆ ಡ್ಯಾಮೇಜ್ ಉಂಟಾದರೆ, ಅದನ್ನು ಕವರ್ ಮಾಡಲಾಗುವುದಿಲ್ಲ.

ಯಾವುದೇ ಮೊದಲೇ ಅಸ್ತಿತ್ವದಲ್ಲಿರುವ ಡ್ಯಾಮೇಜ್, ಅಥವಾ ಕ್ರಮೇಣ ಕ್ಷೀಣಿಸುವಿಕೆ ಮತ್ತು ನಿರಂತರ ಬಳಕೆಯಿಂದ ಉಂಟಾಗುವ ಡ್ಯಾಮೇಜ್ ಹಾಗೂ ಅದರ ದುರಸ್ತಿ ಮತ್ತು ಮೇಂಟೆನೆನ್ಸ್ ವೆಚ್ಚವನ್ನು ಕವರ್ ಮಾಡುವುದಿಲ್ಲ.

ಸೈನ್ ಬೋರ್ಡ್ ಅನ್ನು ಆಲ್ಟರ್ ಮಾಡುವಾಗ, ತೆಗೆದುಹಾಕುವಾಗ ಅಥವಾ ರಿಪೇರಿ ಮಾಡುವಾಗ ಸಂಭವಿಸುವ ಡ್ಯಾಮೇಜ್‌ಗಳು ಮತ್ತು ನಷ್ಟಗಳನ್ನು ಕವರ್‌ ಮಾಡುವುದಿಲ್ಲ.

ದೋಷಪೂರಿತ ವಿನ್ಯಾಸ ಅಥವಾ ಕೆಲಸಗಾರಿಕೆಯ ಕಾರಣದಿಂದ, ಅಥವಾ ಸೈನ್ ಬೋರ್ಡ್ ಅನ್ನು ಸುರಕ್ಷಿತವಾಗಿ ಫಿಕ್ಸ್‌ ಮಾಡಿರದೇ ಇದ್ದರೆ ಉಂಟಾಗುವ ನಷ್ಟ ಅಥವಾ ಡ್ಯಾಮೇಜ್.

ಯಾವುದೇ ಕಾನ್‌ಸಿಕ್ವೆನ್ಷಿಯಲ್‌ ನಷ್ಟಗಳು (ಲಾಭದ ನಷ್ಟ ಅಥವಾ ಬಿಸಿನೆಸ್‌ ಅಡಚಣೆಯಂತಹದ್ದು) ಕವರ್ ಆಗುವುದಿಲ್ಲ.

ಯುದ್ಧ, ಭಯೋತ್ಪಾದನೆ ಅಥವಾ ಪರಮಾಣು ದುರಂತದಿಂದ ಉಂಟಾಗುವ ನಷ್ಟಗಳನ್ನು ಕವರ್ ಮಾಡುವುದಿಲ್ಲ.

ಯಾವುದೇ ಕಾಂಟ್ರಾಕ್ಟರ್‌ಗಳು, ಸಬ್‌-ಕಾಂಟ್ರಾಕ್ಟರ್‌ಗಳು ಒಳಗೊಂಡಂತೆ ನಿಮ್ಮ ಬಿಸಿನೆಸ್‌ನಿಂದ ಉದ್ಯೋಗದಲ್ಲಿರುವ ಅಥವಾ ಕಾಂಟ್ರಾಕ್ಟ್‌ ಪಡೆದವರ ಸಾವು ಅಥವಾ ದೈಹಿಕ ಗಾಯ.

ನಿಮಗೆ ಸೇರಿದ ಯಾವುದೇ ಪ್ರಾಪರ್ಟಿಗೆ ಡ್ಯಾಮೇಜ್ (ಇನ್ಶೂರ್ಡ್‌ ವ್ಯಕ್ತಿ ಅಥವಾ ಬಿಸಿನೆಸ್).

ನೀವು, ಉದ್ಯೋಗಿ, ಕುಟುಂಬದ ಸದಸ್ಯರು ಅಥವಾ ನಿಮ್ಮ ಪರವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಯಿಂದ ಉದ್ದೇಶಪೂರ್ವಕವಾಗಿ ಉಂಟಾಗುವ ಯಾವುದೇ ನಷ್ಟ ಅಥವಾ ಡ್ಯಾಮೇಜ್.

ಯಾವುದೇ ಸರ್ಕಾರ ಅಥವಾ ಪಬ್ಲಿಕ್ ಅಥಾರಿಟಿಯಿಂದ ಜಫ್ತಿ ಅಥವಾ ಬಂಧನದ ಸಂದರ್ಭದಲ್ಲಿ ನಿಮ್ಮನ್ನು ಕವರ್ ಮಾಡಲಾಗುವುದಿಲ್ಲ.

ಸೈನ್ ಬೋರ್ಡ್ ಇನ್ಶೂರೆನ್ಸ್‌ ವೆಚ್ಚ ಎಷ್ಟಾಗುತ್ತದೆ?

ಕವರೇಜ್ ವಿಧಗಳು

ಯಾರಿಗೆಲ್ಲಾ ಸೈನ್ ಬೋರ್ಡ್ ಇನ್ಶೂರೆನ್ಸ್ ಅವಶ್ಯಕ?

ನೀವು ಅಥವಾ ನಿಮ್ಮ ಬಿಸಿನೆಸ್‌ ಸಂಸ್ಥೆಗಳು ಒಂದು ಸೈನ್ ಬೋರ್ಡ್ ಅಥವಾ ಹೋರ್ಡಿಂಗ್ ಅನ್ನು ಸ್ಥಾಪಿಸಿದ್ದರೆ, ಸೈನ್ ಬೋರ್ಡ್ ಇನ್ಶೂರೆನ್ಸ್ ಮುಖ್ಯ ಎಂಬುದನ್ನು ನೀವು ಕಂಡುಕೊಳ್ಳಬಹುದು. ಉದಾಹರಣೆಗೆ, ಒಂದು ವೇಳೆ...

ನಿಮ್ಮ ಬಿಸಿನೆಸ್ ಅದನ್ನು ಗುರುತಿಸಿಕೊಳ್ಳಲು ಸೈನ್ ಬೋರ್ಡ್‌ಗಳನ್ನು ಹೊಂದಿದೆ (ಉದಾಹರಣೆಗೆ ಶೋರೂಮ್‌ಗಳು, ಅಂಗಡಿಗಳು, ಬೂಟಿಕ್‌ಗಳು, ಡೀಲರ್‌ಶಿಪ್‌ಗಳು ಮತ್ತು ಇನ್ನಷ್ಟು)

ನಿಮ್ಮ ಬಿಸಿನೆಸ್ ಅಲಂಕಾರಕ್ಕಾಗಿ ಸೈನ್ ಬೋರ್ಡ್‌ಗಳನ್ನು ಹೊಂದಿದೆ. (ಉದಾಹರಣೆಗೆ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಥಿಯೇಟರ್‌ಗಳು, ಇತ್ಯಾದಿ)

ನಿಮ್ಮ ಬಿಸಿನೆಸ್ ಜಾಹೀರಾತುಗಳಿಗಾಗಿ ಸೈನ್‌ಬೋರ್ಡ್‌ಗಳನ್ನು ಬಳಸುತ್ತದೆ (ಉದಾಹರಣೆಗೆ, ಜಾಹೀರಾತು ಏಜೆನ್ಸಿಗಳು, ಪಿಆರ್ ಏಜೆನ್ಸಿಗಳು ಅಥವಾ ಅವರ ಉತ್ಪನ್ನಗಳನ್ನು ಜಾಹೀರಾತು ಮಾಡುವ ಇತರ ವ್ಯಾಪಾರ)

ಸೂಕ್ತವಾದ ಸೈನ್ ಬೋರ್ಡ್ ಇನ್ಶೂರೆನ್ಸ್ ಅನ್ನು ಆರಿಸುವುದು ಹೇಗೆ?

  • ವಿಭಿನ್ನ ಪಾಲಿಸಿಗಳನ್ನು ಹೋಲಿಕೆ ಮಾಡಿ - ಆದ್ದರಿಂದ, ಕೈಗೆಟುಕುವ ಬೆಲೆಯಲ್ಲಿ ನಿಮಗೆ ಸೂಕ್ತವಾದುದನ್ನು ಕಂಡುಹಿಡಿಯಲು ವಿಭಿನ್ನ ಪಾಲಿಸಿಗಳ ವೈಶಿಷ್ಟ್ಯಗಳು ಮತ್ತು ಪ್ರೀಮಿಯಂಗಳನ್ನು ಹೋಲಿಕೆ ಮಾಡಿ. ನಿಮಗೆ ಸೂಕ್ತವಾದ ಕವರೇಜ್ ನೀಡದಿರುವ ಕಡಿಮೆ ಪ್ರೀಮಿಯಂ ಹೊಂದಿರುವ ಪಾಲಿಸಿಯನ್ನು ಆರಿಸಿಕೊಳ್ಳಬೇಡಿ.
  • ಸಂಪೂರ್ಣ ಕವರೇಜ್ - ನಿಮ್ಮ ಬಿಸಿನೆಸ್‌ನ ಸೈನ್‌ಬೋರ್ಡ್‌ಗಳ ಎಲ್ಲಾ ಅಪಾಯಗಳಿಗೆ ಗರಿಷ್ಠ ಕವರೇಜ್ ಅನ್ನು ಒದಗಿಸುವ ಪಾಲಿಸಿಯನ್ನು ನೋಡಿ.
  • ಸಮ್ ಇನ್ಶೂರ್ಡ್ - ನಿಮ್ಮ ಬಿಸಿನೆಸ್‌ಗೆ ಯಾವುದು ಉತ್ತಮ ಎಂಬುದರ ಆಧಾರದ ಮೇಲೆ, ಮಾರುಕಟ್ಟೆ ವ್ಯಾಲ್ಯೂ ಅಥವಾ ಸೈನ್‌ಬೋರ್ಡ್‌ಗಳ ರಿಪ್ಲೇಸ್‌ಮೆಂಟ್‌ ವ್ಯಾಲ್ಯೂ ಆಧಾರದ ಮೇಲೆ ಸಮ್ ಇನ್ಶೂರ್ಡ್ ಅನ್ನು ಆರಿಸಿ.
  • ಸುಲಭವಾದ ಕ್ಲೈಮ್‌ಗಳ ಪ್ರೊಸೆಸ್ - ಕ್ಲೈಮ್‌ಗಳು ನಿಜವಾಗಿಯೂ ಮುಖ್ಯವಾಗಿವೆ, ಆದ್ದರಿಂದ, ಸುಲಭವಾದ ಕ್ಲೈಮ್‌ಗಳ ಪ್ರೊಸೆಸ್ ಅನ್ನು ಹೊಂದಿರುವ ಇನ್ಶೂರೆನ್ಸ್ ಕಂಪನಿಯನ್ನು ನೋಡಿ; ಇದು ನಿಮ್ಮನ್ನು ಮತ್ತು ನಿಮ್ಮ ಬಿಸಿನೆಸ್ ಅನ್ನು ಬಹಳಷ್ಟು ತೊಂದರೆಗಳಿಂದ ರಕ್ಷಿಸಬಹುದು.
  • ಎಕ್ಷ್ಟ್ರಾ ಸರ್ವೀಸ್ ಪ್ರಯೋಜನಗಳು - 24X7 ಗ್ರಾಹಕ ನೆರವು, ಬಳಸಲು ಸುಲಭವಾದ ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಇನ್ಶೂರೆನ್ಸ್ ಕಂಪನಿಗಳು ಎಲ್ಲಾ ರೀತಿಯ ಇತರ ಪ್ರಯೋಜನಗಳನ್ನು ನೀಡುತ್ತವೆ.

ಭಾರತದಲ್ಲಿ ಸೈನ್ ಬೋರ್ಡ್ ಇನ್ಶೂರೆನ್ಸ್ ಬಗ್ಗೆ ಪದೇಪದೇ ಕೇಳಲಾದ ಪ್ರಶ್ನೆಗಳು