Thank you for sharing your details with us!

ವರ್ಕ್‌ಮೆನ್ ಕಾಂಪನ್ಸೇಶನ್ ಇನ್ಶೂರೆನ್ಸ್ ಎಂದರೇನು?

ವರ್ಕ್‌ಮೆನ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್ ಎಷ್ಟು ಮುಖ್ಯ?

1
2014 ರಲ್ಲಿ ಪ್ರತಿ 1,000 ವರ್ಕರ್‌ಗಳಿಗೆ ಮಾರಣಾಂತಿಕ ಅಪಘಾತದ ಪ್ರಮಾಣವು 0.63% ಆಗಿತ್ತು (1
2
2014 ರಿಂದ 2017 ರವರೆಗೆ ಭಾರತದಲ್ಲಿ ಕೈಗಾರಿಕಾ ಅಪಘಾತಗಳು 6,368 ಸಾವುಗಳಿಗೆ ಕಾರಣವಾಗಿವೆ. (2)
3
ಭಾರತದಲ್ಲಿ, 2014 ರಿಂದ 2017 ರ ನಡುವೆ 8,000 ಕ್ಕೂ ಹೆಚ್ಚು ವರ್ಕ್‌ಪ್ಲೇಸ್-ಸಂಬಂಧಿತ ಅಪಘಾತಗಳು ಸಂಭವಿಸಿವೆ. (3)

ವರ್ಕ್‌ಮೆನ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

ನೀವು ವರ್ಕರ್ ಕಾಂಪನ್ಸೇಶನ್ ಇನ್ಶೂರೆನ್ಸ್ ಅನ್ನು ಪಡೆದಾಗ, ನೀವು ಮತ್ತು ನಿಮ್ಮ ಎಂಪ್ಲಾಯೀಗಳು ಈ ಸಂದರ್ಭದಲ್ಲಿ ರಕ್ಷಿಸಲ್ಪಡುತ್ತೀರಿ...

ಸೂಚನೆ: ಕವರೇಜ್, ಹೊರಗಿಡುವಿಕೆಗಳು ಮತ್ತು ಷರತ್ತುಗಳ ಬಗೆಗಿನ ವಿವರವಾದ ಮಾಹಿತಿಗಾಗಿ ದಯವಿಟ್ಟು ನಿಮ್ಮ ಪಾಲಿಸಿ ಪದಗಳನ್ನು ನೋಡಿ.

ಅಪಘಾತದ ಗಾಯ

ಅಪಘಾತದ ಗಾಯ

ನಿಮ್ಮ ಎಂಪ್ಲಾಯೀಗಳು ತಮ್ಮ ಎಂಪ್ಲಾಯ್‌ಮೆಂಟ್ ಅವಧಿಯಲ್ಲಿ ಸಂಭವಿಸಿದ ಅಪಘಾತದಿಂದಾಗಿ ಯಾವುದೇ ದೈಹಿಕ ಗಾಯವನ್ನು ಅನುಭವಿಸಿದರೆ.

ಔದ್ಯೋಗಿಕ ಕಾಯಿಲೆಗಳು ಮತ್ತು ರೋಗಗಳು

ಔದ್ಯೋಗಿಕ ಕಾಯಿಲೆಗಳು ಮತ್ತು ರೋಗಗಳು

ಕೆಲವೊಮ್ಮೆ, ಕೆಲಸದ ಸ್ಥಳಗಳು ಎಂಪ್ಲಾಯೀಗಳು ಹಾನಿಕಾರಕ ಮತ್ತು ಅನಾರೋಗ್ಯವನ್ನು ಉಂಟುಮಾಡುವ ಕೆಲವು ಕೆಮಿಕಲ್‌ಗಳು ಅಥವಾ ಅಲರ್ಜಿಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳಬಹುದು. ಈ ಪಾಲಿಸಿಯು ಅವರು ಅನಾರೋಗ್ಯಕ್ಕೆ ಒಳಗಾದರೆ ಯಾವುದೇ ಮೆಡಿಕಲ್ ಟ್ರೀಟ್‌ಮೆಂಟ್‌ಗೆ ಸಹಾಯ ಮಾಡುತ್ತದೆ.

ಅಂಗವೈಕಲ್ಯ ಕವರ್

ಅಂಗವೈಕಲ್ಯ ಕವರ್

ಕೆಲಸದ ಸ್ಥಳಗಳು ಕೆಲವೊಮ್ಮೆ ಗಾಯಗಳಿಗೆ ಇಲ್ಲವೇ ತಾತ್ಕಾಲಿಕ ಅಥವಾ ಶಾಶ್ವತ ಅಂಗವೈಕಲ್ಯಗಳಿಗೆ ಕಾರಣವಾಗಬಹುದು (ದೃಷ್ಟಿ ಅಥವಾ ಕೈಕಾಲುಗಳ ನಷ್ಟದಂತಹ) ಮತ್ತು ಈ ಇನ್ಶೂರೆನ್ಸ್ ಅವರ ಮೆಡಿಕಲ್ ಬಿಲ್‌ಗಳನ್ನು ಪಾವತಿಸಲು ಮತ್ತು ಅವರ ಕಳೆದುಕೊಂಡ ಕೆಲ ವೇತನವನ್ನು ರಿಪ್ಲೇಸ್ ಮಾಡಲು ಸಹಾಯ ಮಾಡುತ್ತದೆ.

ಮರಣ ಪ್ರಯೋಜನಗಳು

ಮರಣ ಪ್ರಯೋಜನಗಳು

ದುರದೃಷ್ಟಕರ ಸಂದರ್ಭದಲ್ಲಿ ಎಂಪ್ಲಾಯೀಯೊಬ್ಬರು ಕೆಲಸಕ್ಕೆ ಸಂಬಂಧಿಸಿದ ಅಪಘಾತದಲ್ಲಿ ತಮ್ಮ ಜೀವವನ್ನು ಕಳೆದುಕೊಂಡರೆ, ಈ ಇನ್ಶೂರೆನ್ಸ್ ಅವರ ಅಂತ್ಯಕ್ರಿಯೆಯ ವೆಚ್ಚ‌ಗಳನ್ನು ಭರಿಸುತ್ತದೆ ಮತ್ತು ಅವರ ಫಲಾನುಭವಿಗಳಿಗೆ ಮರಣ ಪ್ರಯೋಜನಗಳನ್ನು ನೀಡುತ್ತದೆ.

ಮೆಡಿಕಲ್ ಕವರೇಜ್

ಮೆಡಿಕಲ್ ಕವರೇಜ್

ಮೆಡಿಕಲ್ ವೆಚ್ಚ‌ಗಳು ಸಾಕಷ್ಟು ಎಕ್ಸ್‌ಪೆನ್ಸಿವ್ ಆಗಬಹುದು. ಆದ್ದರಿಂದ ಈ ಇನ್ಶೂರೆನ್ಸ್ ನಿಮ್ಮ ಎಂಪ್ಲಾಯೀಗಳಿಗೆ ಅವರ ಎಂಪ್ಲಾಯ್‌ಮೆಂಟ್ ಸಮಯದಲ್ಲಿ, ಅಪಘಾತಗಳಿಂದ ಉಂಟಾಗುವ ಗಾಯಗಳಿಗೆ ಟ್ರೀಟ್‌ಮೆಂಟ್‌ ನೀಡುವ ಯಾವುದೇ ಮೆಡಿಕಲ್ ಎಕ್ಸ್‌ಪೆನ್ಸ್‌ಗಳನ್ನು ಕವರ್ ಮಾಡುತ್ತದೆ.

ವರ್ಕ್‌ಮೆನ್ ಕಾಂಪನ್ಸೇಶನ್ ಇನ್ಶೂರೆನ್ಸ್ ಪಾಲಿಸಿಯ ಪ್ರಯೋಜನಗಳು

ನಿಮ್ಮ ಯಾವುದೇ ಎಂಪ್ಲಾಯೀಗಳು ತಮ್ಮ ಕೆಲಸದ ಅವಧಿಯಲ್ಲಿ ಗಾಯಗೊಂಡರೆ, ಅವರು ನಿಮ್ಮ ವಿರುದ್ಧ (ಅವರ ಎಂಪ್ಲಾಯರ್ ವಿರುದ್ಧ) ಸಿವಿಲ್ ಕೋರ್ಟ್‌ನಲ್ಲಿ ಈ ಗಾಯದ ಡ್ಯಾಮೇಜಿಗಾಗಿ ಮೊಕದ್ದಮೆಯನ್ನು ಸಲ್ಲಿಸಬಹುದು. ಅಂತಹ ಮೊಕದ್ದಮೆಗಳು ಮತ್ತು ಯಾವುದೇ ಮೆಡಿಕಲ್ ವೆಚ್ಚ‌ಗಳು ನಿಮ್ಮ ಬಿಸಿನೆಸ್‌ಗೆ ಬಹಳಷ್ಟು ಹೊರೆಯಾಗಬಹುದು. ಆದರೆ, ವರ್ಕ್‌ಮೆನ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್, ನಿಮ್ಮ ಎಂಪ್ಲಾಯೀಗಳು ಅಂತಹ ಯಾವುದೇ ಕೆಲಸ-ಸಂಬಂಧಿತ ಗಾಯ ಅಥವಾ ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಸಹಾಯವನ್ನು ಪಡೆಯಬಹುದು. ಅದಕ್ಕಾಗಿ ಇದು ನಿಮ್ಮ ಬಿಸಿನೆಸ್ ಅನ್ನು ಹಣಕಾಸಿನ ನಷ್ಟದಿಂದ ರಕ್ಷಿಸುತ್ತದೆ.

ಈ ಇನ್ಶೂರೆನ್ಸ್ ನಿಮ್ಮ ಎಂಪ್ಲಾಯೀಗಳಿಗೆ ಅವರ ಕೆಲಸದ ಪರಿಣಾಮವಾಗಿ ಯಾವುದೇ ಗಾಯ ಅಥವಾ ಅನಾರೋಗ್ಯದ ಸಂದರ್ಭದಲ್ಲಿ ರಕ್ಷಿಸುತ್ತದೆ ಹಾಗೂ ಅವರು ಮತ್ತೆ ಕೆಲಸಕ್ಕೆ ಮರಳಲು ಸಹಾಯ ಮಾಡುತ್ತದೆ.

ನಿಮ್ಮ ಎಂಪ್ಲಾಯೀಗಳಲ್ಲಿ ಯಾರಾದರೂ ಒಬ್ಬರು ಗಾಯಗೊಂಡರೆ, ಹಣಕಾಸಿನ ನಷ್ಟದ ವಿರುದ್ಧ ನಿಮ್ಮ ಹಣಕಾಸು ನಷ್ಟದ ರಿಸ್ಕ್ ಅನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಓನ್ ಬಿಸಿನೆಸ್ ಅನ್ನು ರಕ್ಷಿಸಿ.

ನಿಮ್ಮ ಎಂಪ್ಲಾಯೀಗಳ ಕೆಲಸ-ಸಂಬಂಧಿತ ಗಾಯಗಳನ್ನು ಕವರ್ ಮಾಡುವ ಕಾರಣ, ವರ್ಕ್‌ಮೆನ್ಸ್ ಕಾಂಪನ್ಸೇಶನ್ ಇನ್ಶೂರೆನ್ಸ್ ಹೊಂದುವುದರಿಂದ ನಿಮ್ಮ ಬಿಸಿನೆಸ್ ಅನ್ನು, ಮೊಕದ್ದಮೆಗಳಿಗೆ ಒಡ್ಡಿಕೊಳ್ಳುವುದನ್ನು ಮಿತಿಗೊಳಿಸುತ್ತದೆ.

ಇದು ವರ್ಕ್‌ಮೆನ್ಸ್ ಕಾಂಪನ್ಸೇಶನ್ ಆ್ಯಕ್ಟ್, 1923 ಕ್ಕೆ ಅನುಗುಣವಾಗಿ ನಿಮ್ಮ ಬಿಸಿನೆಸ್ ಅನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಮೊಕದ್ದಮೆ ಹೂಡುವುದರಿಂದ ನೀವು ಹೆಚ್ಚುವರಿ ರಕ್ಷಣೆಯನ್ನು ಸಹ ಪಡೆಯುತ್ತೀರಿ. ಒಮ್ಮೆ ಕ್ಲೈಮ್ ಸೆಟಲ್ ಆದರೆ, ಆ ಘಟನೆಗೆ ಎಂಪ್ಲಾಯೀಗಳು ಯಾವುದೇ ಹೆಚ್ಚುವರಿ ಕ್ಲೈಮ್‌ಗಳನ್ನು ಸಲ್ಲಿಸಲು ಸಾಧ್ಯವಿಲ್ಲ.

ವರ್ಕ್‌ಮೆನ್ಸ್ ಕಾಂಪನ್ಸೇಶನ್‌ನಲ್ಲಿ ಏನನ್ನು ಹೊರಗಿಡಲಾಗಿದೆ?

ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್ ನಿಮ್ಮ ಬಿಸಿನೆಸ್ ಮತ್ತು ಅದರ ಎಂಪ್ಲಾಯೀಗಳನ್ನು ಕವರ್ ಮಾಡದಂತಹ ಕೆಲವು ಸಂದರ್ಭಗಳಿವೆ, ಅವುಗಳೆಂದರೆ:

ಇದು ಕಾಂಟ್ರಾಕ್ಟರ್‌ಗಳ ಯಾವುದೇ ಎಂಪ್ಲಾಯೀಗಳನ್ನು ಕವರ್ ಮಾಡುವುದಿಲ್ಲ (ಅವರು ಪ್ರತ್ಯೇಕವಾಗಿ ಡಿಕ್ಲೇರ್ ಮಾಡದಿದ್ದರೆ ಮತ್ತು ಕವರ್ ಆಗದ ಹೊರತು)

ಕಾನೂನಿನ ಪ್ರಕಾರ "ವರ್ಕ್‌ಮ್ಯಾನ್" ಎಂದು ಪರಿಗಣಿಸದ ಎಂಪ್ಲಾಯೀಯನ್ನು ಇದು ಕವರ್ ಮಾಡುವುದಿಲ್ಲ

ಅಗ್ರಿಮೆಂಟ್‌ನ ಅಡಿಯಲ್ಲಿ ಊಹಿಸಲಾದ ಯಾವುದೇ ಲಯಬಿಲಿಟಿಗಳು

ಗಾಯವು 3 ದಿನಗಳಿಗಿಂತ ಹೆಚ್ಚಿನ ಸಮಯದಲ್ಲಿ ಡಿಸೇಬಲ್‌ಗೆ ಕಾರಣವಾಗದಿದ್ದರೆ, ಅಥವಾ ಕೆಟ್ಟ ಸಂದರ್ಭದಲ್ಲಿ, ಮಾರಣಾಂತಿಕವಾಗದಿದ್ದರೆ ಅದನ್ನು ಕವರ್ ಮಾಡುವುದಿಲ್ಲ

ಇದು 28 ದಿನಗಳಿಗಿಂತ ಕಡಿಮೆ ಇರುವ ಸಂದರ್ಭಗಳಲ್ಲಿ ಒಟ್ಟು ಡಿಸೇಬಲ್‌ಮೆಂಟಿನ ಮೊದಲ 3 ದಿನಗಳು

ಇದು ಮದ್ಯಪಾನ ಅಥವಾ ಮಾದಕ ದ್ರವ್ಯಗಳ ಪ್ರಭಾವದಿಂದ ಸಂಭವಿಸಿದ ಅಪಘಾತದಲ್ಲಿ ಉಂಟಾದ ಯಾವುದೇ ಮಾರಣಾಂತಿಕವಲ್ಲದ ಗಾಯಗಳನ್ನು ಕವರ್ ಮಾಡುವುದಿಲ್ಲ 

ಎಂಪ್ಲಾಯೀಯು ಉದ್ದೇಶಪೂರ್ವಕವಾಗಿ ಸುರಕ್ಷತಾ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದ ಅಥವಾ ನಿರ್ಲಕ್ಷಿಸಿದ ಅಪಘಾತದಿಂದ ಉಂಟಾದ ಯಾವುದೇ ಮಾರಣಾಂತಿಕವಲ್ಲದ ಗಾಯಗಳು 

ಕೆಲವು ಸುರಕ್ಷತೆ ಅಥವಾ ಗಾರ್ಡ್ ಡಿವೈಸ್‌ ಅನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕುವುದರಿಂದ ಅಥವಾ ನಿರ್ಲಕ್ಷಿಸುವುದರಿಂದ ಸಂಭವಿಸುವ ಅಪಘಾತವನ್ನು ಅಥವಾ ಅದರಿಂದ ಉಂಟಾಗುವ ಮಾರಣಾಂತಿಕವಲ್ಲದ ಗಾಯಗಳನ್ನು ಇದು ಕವರ್ ಮಾಡುವುದಿಲ್ಲ 

ಯುದ್ಧ, ಆಕ್ರಮಣ ಅಥವಾ ದಂಗೆಯ ಪರಿಣಾಮದಿಂದ ಉಂಟಾಗುವ ಅಪಘಾತದ ಗಾಯಗಳು 

ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್‌ಗೆ ಎಷ್ಟು ವೆಚ್ಚ ಆಗುತ್ತದೆ?

ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಅಗತ್ಯವಿರುವ ಬಿಸಿನೆಸ್‌ಗಳ ವಿಧಗಳು

ಎಂಪ್ಲಾಯೀಗಳನ್ನು* ಹೊಂದಿರುವ ಯಾವುದೇ ರೀತಿಯ ಬಿಸಿನೆಸ್ ಆಗಿರಬಹುದು ಅದು ವರ್ಕರ್ಸ್ (ಅಥವಾ ಎಂಪ್ಲಾಯೀ) ಕಾಂಪನ್ಸೇಶನ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದನ್ನು ಪ್ರಮುಖವೆಂದು ಪರಿಗಣಿಸಬಹುದು. ಇವುಗಳಲ್ಲಿ ಕೆಲವು ಹೀಗಿರಬಹುದು:

*ವಾಸ್ತವವಾಗಿ, 20 ಕ್ಕಿಂತ ಹೆಚ್ಚು ಎಂಪ್ಲಾಯೀಗಳನ್ನು ಹೊಂದಿರುವ ಎಂಪ್ಲಾಯರ್‌ಗಳು (ವಿಶೇಷವಾಗಿ ಉತ್ಪಾದನಾ ಘಟಕಗಳು) ಎಂಪ್ಲಾಯೀಸ್ ಸ್ಟೇಟ್ ಇನ್ಶೂರೆನ್ಸ್ ಆ್ಯಕ್ಟ್, 1948 ರ ಪ್ರಕಾರ ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್ ಅನ್ನು ಹೊಂದುವುದು ಮ್ಯಾಂಡೇಟರಿ ಆಗಿದೆ.

ನಿಮ್ಮ ಬಿಸಿನೆಸ್ ಕಾರ್ಯಾಚರಣೆಗಳು ಬಹಳಷ್ಟು ಲೇಬರ್‌ಗಳನ್ನು ಒಳಗೊಂಡಿದ್ದರೆ

ಹಾಗೆ, ಕನ್ಸ್ಟ್ರಕ್ಷನ್, ಟ್ರಾನ್ಸಪೋರ್ಟೇಶನ್ ಮತ್ತು ಲಾಜಿಸ್ಟಿಕ್ಸ್ ಬಿಸಿನೆಸ್‌ಗಳು.

ನಿಮ್ಮ ಬಿಸಿನೆಸ್ ಅನೇಕ ಎಂಪ್ಲಾಯೀಗಳನ್ನು ಹೊಂದಿದ್ದರೆ

ಉದಾಹರಣೆಗೆ, ಕನ್ಸಲ್ಟಿಂಗ್ ಸಂಸ್ಥೆಗಳು, ಅಥವಾ ಐ.ಟಿ ಕಂಪನಿಗಳು.

ನಿಮ್ಮ ಬಿಸಿನೆಸ್ ಅಥವಾ ಕಂಪನಿಯು ಕಾಂಟ್ರಾಕ್ಚುವಲ್ ಆಧಾರದ ಮೇಲೆ ಬಹಳಷ್ಟು ವರ್ಕರ್‌ಗಳನ್ನು ನೇಮಿಸಿಕೊಂಡರೆ.

ಸರಿಯಾದ ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್ ಪಾಲಿಸಿಯನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು?

  • ಸರಿಯಾದ ಕವರೇಜ್ ಪಡೆಯಿರಿ  - ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಎಲ್ಲಾ ಎಂಪ್ಲಾಯೀಗಳಿಗೆ ಮತ್ತು ನಿಮ್ಮ ಬಿಸಿನೆಸ್‌ಗೆ ಯಾವುದೇ ರಿಸ್ಕ್‌ಗಳ ವಿರುದ್ಧ ಉತ್ತಮ ಕವರೇಜನ್ನು ನೀಡುತ್ತದೆ.

  • ಸರಿಯಾದ ಆಪ್ಷನಲ್ ಕವರ್‌ಗಳನ್ನು ಆಯ್ಕೆಮಾಡಿ  - ಔದ್ಯೋಗಿಕ ಕಾಯಿಲೆಗಳಂತಹ ವಿಷಯಗಳು ಸ್ಟ್ಯಾಂಡರ್ಡ್ ಪಾಲಿಸಿಯ ಅಡಿಯಲ್ಲಿ ಕವರ್ ಆಗದಿರಬಹುದು, ಆದ್ದರಿಂದ ನಿಮ್ಮ ಬಿಸಿನೆಸ್‌ನ ಸ್ವರೂಪವನ್ನು ಪರಿಗಣಿಸಿ ಮತ್ತು ಅವು ನಿಮಗೆ ಪ್ರಯೋಜನಕಾರಿಯಾಗುತ್ತವೆಯೇ ಎಂಬುದನ್ನು ನೋಡಿ.

  • ಸರಿಯಾದ ಸಮ್ ಇನ್ಶೂರ್ಡ್ ಅನ್ನು ಆಯ್ಕೆ ಮಾಡಿ  - ನಿಮ್ಮ ಬಿಸಿನೆಸ್‌ನ ಸ್ವರೂಪ ಮತ್ತು ನಿಮ್ಮ ಎಂಪ್ಲಾಯೀಗಳ ರಿಸ್ಕ್‌ನ ಆಧಾರದ ಮೇಲೆ ನಿಮ್ಮ ಸಮ್ ಇನ್ಶೂರ್ಡ್ ಅನ್ನು ಕಸ್ಟಮೈಸ್ ಮಾಡಲು ನಿಮಗೆ ಅನುಮತಿಸುವ ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಪಾಲಿಸಿಯನ್ನು ಆಯ್ಕೆಮಾಡಿ.

  • ಡಿಫರೆಂಟ್ ಪಾಲಿಸಿಗಳನ್ನು ನೋಡಿ  - ನಿಮ್ಮ ಬಿಸಿನೆಸ್‌ಗಾಗಿ ಹಣವನ್ನು ಸೇವ್ ಮಾಡುವುದು ಉತ್ತಮ ಕೆಲಸ. ಆದರೆ ಕೆಲವೊಮ್ಮೆ ಕಡಿಮೆ ಪ್ರೀಮಿಯಂನೊಂದಿಗೆ ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಉತ್ತಮ ಆಯ್ಕೆಯಾಗಿರುವುದಿಲ್ಲ. ಆದ್ದರಿಂದ ಕೈಗೆಟುಕುವ ಬೆಲೆಯಲ್ಲಿ ಉತ್ತಮವಾದುದನ್ನು ಕಂಡುಹಿಡಿಯಲು ನಿಮ್ಮ ಬಿಸಿನೆಸ್‌ಗಾಗಿ ಉಪಯುಕ್ತವೆನಿಸುವ ವಿವಿಧ ಪಾಲಿಸಿಗಳ ಫೀಚರ್‌ಗಳು ಮತ್ತು ಪ್ರೀಮಿಯಂಗಳನ್ನು ಹೋಲಿಕೆ ಮಾಡಿ.

  • ಸುಲಭವಾದ ಕ್ಲೈಮ್ ಪ್ರಕ್ರಿಯೆ  - ಕ್ಲೈಮ್‌ಗಳು ಇನ್ಶೂರೆನ್ಸ್‌ನ ಪ್ರಮುಖ ಭಾಗಗಳಲ್ಲಿ ಒಂದಾಗಿವೆ. ಆದ್ದರಿಂದ ಕ್ಲೈಮ್‌ಗಳನ್ನು ಮಾಡಲು ಸುಲಭವಾದ ಮತ್ತು ಸರಳವಾದ ಸೆಟಲ್‌ಮೆಂಟ್ ಪ್ರಕ್ರಿಯೆಯನ್ನು ಹೊಂದಿರುವ ಕಂಪನಿಯನ್ನು ನೋಡಿ, ಇದು ನಿಮ್ಮನ್ನು ಮತ್ತು ನಿಮ್ಮ ಬಿಸಿನೆಸ್‌ ಅನ್ನು ಬಹಳಷ್ಟು ತೊಂದರೆಗಳಿಂದ ದೂರ ಉಳಿಸುತ್ತದೆ.

  • ಹೆಚ್ಚುವರಿ ಸರ್ವೀಸ್ ಪ್ರಯೋಜನಗಳು  - ಸಾಕಷ್ಟು ಇನ್ಶೂರೆನ್ಸ್ ಕಂಪನಿಗಳು 24X7 ಕಸ್ಟಮರ್ ಅಸಿಸ್ಟೆನ್ಸ್ ಅನ್ನು ಬಳಸಲು ಸುಲಭವಾದ ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಮುಂತಾದ ಹೆಚ್ಚಿನ ಪ್ರಯೋಜನಗಳನ್ನು ಸಹ ನೀಡುತ್ತವೆ. 

ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಅನ್ನು ಪಡೆಯುವ ಮೊದಲು ನೆನಪಿಡಬೇಕಾದ ವಿಷಯಗಳು

ಸಾಮಾನ್ಯ ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಟರ್ಮ್‌ಗಳನ್ನು ನಿಮಗಾಗಿ ಸರಳಗೊಳಿಸಲಾಗಿದೆ

ಎಂಪ್ಲಾಯೀ ಕಾಂಪನ್ಸೇಶನ್‌ ಆ್ಯಕ್ಟ್ 1923

ಸಾಮಾನ್ಯ ವರ್ಕ್‌ಮೆನ್ಸ್ ಕಾಂಪನ್ಸೇಶನ್‌ 1923 (ಈಗ ಎಂಪ್ಲಾಯೀ ಕಾಂಪನ್ಸೇಶನ್‌ ಆ್ಯಕ್ಟ್ ಎಂದು ಕರೆಯಲಾಗುತ್ತದೆ) ಹೇಳುತ್ತದೆ "ಒಬ್ಬ ಎಂಪ್ಲಾಯೀ ತನ್ನ ಎಂಪ್ಲಾಯ್‌ಮೆಂಟ್ ಸಮಯದಲ್ಲಿ ಮತ್ತು ಅಪಘಾತದಿಂದ ಪರ್ಸನಲ್ ಗಾಯವನ್ನು ಅನುಭವಿಸಿದರೆ, ಅವರ ಎಂಪ್ಲಾಯರ್ ಕಾಂಪನ್ಸೇಶನ್‌ ಅನ್ನು ಪಾವತಿಸಲು ಜವಾಬ್ದಾರನಾಗಿರುತ್ತಾನೆ".

ಮಾರಣಾಂತಿಕ ಆ್ಯಕ್ಸಿಡೆಂಟ್ ಆ್ಯಕ್ಟ್ 1855

ಈ ಆ್ಯಕ್ಟ್ "ಕೆಲವು ತಪ್ಪು ಕೃತ್ಯ, ನಿರ್ಲಕ್ಷ್ಯ ಅಥವಾ ಇನ್ನೊಬ್ಬ ವ್ಯಕ್ತಿಯ ಡೀಫಾಲ್ಟ್‌ನಿಂದ ಉಂಟಾದ ತಪ್ಪಿನಿಂದಾಗಿ" ಮರಣ ಹೊಂದಿದ ವ್ಯಕ್ತಿಯ ಕುಟುಂಬಗಳು ಅಥವಾ ಅವಲಂಬಿತರಿಗೆ ಡ್ಯಾಮೇಜುಗಳಿಗೆ ಕಾಂಪನ್ಸೇಶನ್‌ ನೀಡುತ್ತದೆ.

ಔದ್ಯೋಗಿಕ ಕಾಯಿಲೆ

ಇದು ವ್ಯಕ್ತಿಯ ಎಂಪ್ಲಾಯ್‌ಮೆಂಟ್ ಪರಿಸ್ಥಿತಿಗಳಿಂದ ಉಂಟಾಗುವ (ಅಥವಾ ಉಲ್ಬಣಗೊಂಡ) ಯಾವುದೇ ಕಾಯಿಲೆ ಅಥವಾ ಅನಾರೋಗ್ಯವನ್ನು ಸೂಚಿಸುತ್ತದೆ. ಉದಾಹರಣೆಗೆ, ಯಾರಾದರೂ ಸಹ ಎಂಪ್ಲಾಯೀಗಳಿಂದ ಬಂದಿರುವ ಜ್ವರವಾದರೆ ಇದನ್ನು ಕವರ್ ಮಾಡಲಾಗುವುದಿಲ್ಲ. ಆದರೆ ಆ ವರ್ಕರ್ ತನ್ನ ಕೆಲಸದ ಅವಧಿಯಲ್ಲಿ ಕಲ್ನಾರಿನ ಪ್ರಭಾವದಿಂದ ಕಲ್ನಾರಿನ ಕಾಯಿಲೆಗೆ ತುತ್ತಾಗಿದ್ದರೆ.

ಶಾಶ್ವತ ಸಂಪೂರ್ಣ ಅಂಗವೈಕಲ್ಯ

ಯಾವುದೇ ಗಾಯವು ಶಾಶ್ವತವಾಗಿರುವುದಲ್ಲದೇ ಜೊತೆಗೆ ಆ ವ್ಯಕ್ತಿಯನ್ನು ಕೆಲಸ ಮಾಡಲು ಸಾಧ್ಯವಾಗದಂತೆ ದುರ್ಬಲಗೊಳಿಸುತ್ತದೆ. ಇದು ಕುರುಡುತನ, ಪಾರ್ಶ್ವವಾಯು ಅಥವಾ ಎರಡೂ ಕಾಲುಗಳ ನಷ್ಟವನ್ನು ಒಳಗೊಂಡಿರಬಹುದು.

ಶಾಶ್ವತ ಭಾಗಶಃ ಅಂಗವೈಕಲ್ಯ

ಗಾಯವು ಕಾಲಾನಂತರದಲ್ಲಿ ಸುಧಾರಿಸದಿದ್ದರೆ ಮತ್ತು ಪೀಡಿತ ವ್ಯಕ್ತಿಯನ್ನು ಭಾಗಶಃ ನಿಷ್ಕ್ರಿಯಗೊಳಿಸಿದರೆ. ಉದಾಹರಣೆಗೆ, ಒಂದು ಕಾಲಿನ ನಷ್ಟ, ಒಂದು ಕಣ್ಣಿನ ಕುರುಡುತನ ಅಥವಾ ಒಂದು ಕಿವಿಯು ಕೇಳುವುದನ್ನು ಕಳೆದುಕೊಳ್ಳುವುದು.

ತಾತ್ಕಾಲಿಕ ಅಂಗವೈಕಲ್ಯ

ಇಲ್ಲಿ ಗಾಯವು ಅಂಗವೈಕಲ್ಯವನ್ನು ಉಂಟುಮಾಡುತ್ತದೆ. ಅದು ವ್ಯಕ್ತಿಯು ಚೇತರಿಸಿಕೊಳ್ಳುವಾಗ ತಾತ್ಕಾಲಿಕವಾಗಿ ಕೆಲಸ ಮಾಡದಂತೆ ತಡೆಯುತ್ತದೆ. ಅಂತಹ ಗಾಯಗಳು ಕೈ ಮುರಿತ ಅಥವಾ ಅನಾರೋಗ್ಯವನ್ನು ಒಳಗೊಂಡಿರಬಹುದು, ಇಂತಹ ಸಂದರ್ಭದಲ್ಲಿ ನೀವು ತಕ್ಷಣ ಕೆಲಸಕ್ಕೆ ಮರಳಲು ಸಾಧ್ಯವಿಲ್ಲವೆಂದು ನಿಮ್ಮ ವೈದ್ಯರು ಹೇಳುತ್ತಾರೆ

ಸಮ್ ಇನ್ಶೂರ್ಡ್

ನೀವು ಕ್ಲೈಮ್ ಮಾಡುವ ಸಂದರ್ಭದಲ್ಲಿ ನಿಮ್ಮ ಇನ್ಶೂರೆನ್ಸ್ ಕಂಪನಿಯು ಪಾವತಿಸುವ ಗರಿಷ್ಠ ಮೊತ್ತವಾಗಿದೆ.

ಡಿಡಕ್ಟಿಬಲ್

ಇದು ಇನ್ಶೂರೆನ್ಸ್ ಕಂಪನಿಯು ನಿಮ್ಮ ಕ್ಲೈಮ್ ಅನ್ನು ಕವರ್ ಮಾಡುವ ಮೊದಲು, ನೀವು ನಿಮ್ಮ ಜೇಬಿನಿಂದ ಪಾವತಿಸಬೇಕಾದ ಸಣ್ಣ ಮೊತ್ತವಾಗಿದೆ.

ವರ್ಕ್‌ಮೆನ್ಸ್ ಕಾಂಪನ್ಸೇಶನ್‌ ಇನ್ಶೂರೆನ್ಸ್ ಪಾಲಿಸಿಯ ಬಗ್ಗೆ ಪದೇ ಪದೇ ಕೇಳಲಾದ ಪ್ರಶ್ನೆಗಳು