ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ
5 ಕೋಟಿ+ ಭಾರತೀಯರ ವಿಶ್ವಾಸನೀಯ

ಗ್ರಾಚ್ಯುಟಿ ಕ್ಯಾಲ್ಕುಲೇಟರ್

ಸಂಬಳ (ಮೂಲ ವೇತನ + ಡಿ.ಎ) ಐಚ್ಛಿಕ

5 ಸಾವಿರ ಮತ್ತು 5 ಲಕ್ಷಗಳ ನಡುವಿನ ಮೌಲ್ಯವನ್ನು ನಮೂದಿಸಿ
5000 5 ಲಕ್ಷ

ಸೇವೆಯ ವರ್ಷಗಳ ಸಂಖ್ಯೆ (ಕನಿಷ್ಠ: 5 ವರ್ಷಗಳು)

5 ಮತ್ತು 50 ರ ನಡುವಿನ ಮೌಲ್ಯವನ್ನು ನಮೂದಿಸಿ
ಪಾವತಿಸಬೇಕಾದ ಒಟ್ಟು ಗ್ರಾಚ್ಯುಟಿ
₹ 9,57,568
professor

ಆನ್‌ಲೈನ್‌ನಲ್ಲಿ ಗ್ರಾಚ್ಯುಟಿ ಮೊತ್ತವನ್ನು ತಕ್ಷಣ ಲೆಕ್ಕಾಚಾರ ಮಾಡಿ

ನೀವು ಪರಿಹಾರವಾಗಿ ಎಷ್ಟು ಸ್ವೀಕರಿಸುತ್ತೀರಿ ಎಂದು ತಿಳಿಯಲು ನೀವು ಬಯಸಿದರೆ, ಗ್ರಾಚ್ಯುಟಿ ಕ್ಯಾಲ್ಕುಲೇಟರ್ ನಿಮಗೆ ಅತ್ಯಗತ್ಯವಾಗಿರುತ್ತದೆ. ಸಂಸ್ಥೆಯಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಅಥವಾ ನೀವು ಅಪಘಾತದಲ್ಲಿ ಗಾಯಗೊಂಡರೆ ನೀವು ಪಡೆಯುವ ಹಣವನ್ನು ಅಂದಾಜು ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ.

ಈ ಲೇಖನವು ಗ್ರಾಚ್ಯುಟಿ ಲೆಕ್ಕಾಚಾರದ ಸೂತ್ರ ಮತ್ತು ಅದರ ವಿಶ್ಲೇಷಣೆಯ ಪ್ರಕ್ರಿಯೆಯನ್ನುತಿಳಿಸುತ್ತದೆ.

ಆರಂಭಿಸೋಣ!

ಗ್ರಾಚ್ಯುಟಿ ಎಂದರೇನು?

ಗ್ರಾಚ್ಯುಟಿ ಎನ್ನುವುದು ನೀವು ಕೆಲಸ ಮಾಡುವ ಸಂಸ್ಥೆಯಿಂದ ನೀವು ಮೆಚ್ಚುಗೆಯ ಸಂಕೇತವಾಗಿ ಸ್ವೀಕರಿಸುವ ಹಣದ ಮೊತ್ತವಾಗಿದೆ. ಗ್ರಾಚ್ಯುಟಿ ಪಾವತಿಯನ್ನು ಗ್ರಾಚ್ಯುಟಿಯ ಪಾವತಿ ಕಾಯಿದೆ 1972 ರ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ.

ಗ್ರಾಚ್ಯುಟಿಯನ್ನು ಸಾಮಾನ್ಯವಾಗಿ 5 ಅಥವಾ ಹೆಚ್ಚಿನ ವರ್ಷಗಳ ಅವಧಿಯ ನಂತರ ಪಾವತಿಸಲಾಗುತ್ತದೆ.

ಇದಲ್ಲದೆ, ಗ್ರಾಚ್ಯುಟಿಯು ಈ ರೀತಿ ಕಾರ್ಯನಿರ್ವಹಿಸುತ್ತದೆ: ಇದನ್ನು ಉದ್ಯೋಗದಾತರ ಖಾತೆಯಿಂದ ನೇರವಾಗಿ ಪಾವತಿಸಬಹುದು ಅಥವಾ ಉದ್ಯೋಗದಾತರು ಯಾವುದೇ ಸೇವಾ ಪೂರೈಕೆದಾರರೊಂದಿಗೆ ಸಾಮಾನ್ಯ ಗ್ರಾಚ್ಯುಟಿ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ಕೆ ಮಾಡಬಹುದು.

ಗ್ರಾಚ್ಯುಟಿ ಕ್ಯಾಲ್ಕುಲೇಟರ್ ಎಂದರೇನು?

ಗ್ರಾಚ್ಯುಟಿ ಕ್ಯಾಲ್ಕುಲೇಟರ್ ಒಂದು ಅಮೂಲ್ಯವಾದ ಟೂಲ್ ಆಗಿದ್ದು, ನಿರ್ದಿಷ್ಟ ಸಂಖ್ಯೆಯ ವರ್ಷಗಳ ಸೇವೆಯ ನಂತರ ನೀವು ನಿರ್ದಿಷ್ಟ ಮಾಸಿಕ ಮೂಲ ವೇತನ ಮತ್ತು ತುಟ್ಟಿಭತ್ಯೆಯೊಂದಿಗೆ ಎಷ್ಟು ಪರಿಹಾರವನ್ನು ಸ್ವೀಕರಿಸುತ್ತೀರಿ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ. ಆನ್‌ಲೈನ್‌ನಲ್ಲಿ ಸಾಕಷ್ಟು ಗ್ರಾಚ್ಯುಟಿ ಕ್ಯಾಲ್ಕುಲೇಟರ್‌ಗಳಿವೆ ಮತ್ತು ನೀವು ನಮ್ಮದನ್ನು ಕೆಳಗೆ ಪರಿಶೀಲಿಸಬಹುದು.

 

ಗ್ರಾಚ್ಯುಟಿ ಲೆಕ್ಕಾಚಾರದ ಸೂತ್ರವೇನು?

 

ಗ್ರಾಚ್ಯುಟಿ ಕ್ಯಾಲ್ಕುಲೇಟರ್ ಮೂಲಭೂತ ಸೂತ್ರವನ್ನು ಬಳಸುತ್ತದೆ -

ಗ್ರಾಚ್ಯುಟಿ = N*B* 15/26

ಇಲ್ಲಿ,

 

N ಉದ್ಯೋಗಿ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡಿದ ವರ್ಷಗಳ ಸಂಖ್ಯೆ
B ಡಿಎ ಸೇರಿದಂತೆ ಹಿಂದಿನ ಮೂಲ ವೇತನ

 

ಲೆಕ್ಕಾಚಾರದ ಪ್ರಕ್ರಿಯೆಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುವ ಸರಳ ಉದಾಹರಣೆ ಇಲ್ಲಿದೆ.

ಗ್ರಾಚ್ಯುಟಿ ಮೊತ್ತದ ಲೆಕ್ಕಾಚಾರದ ಉದಾಹರಣೆ

ಘಟಕ ಮೌಲ್ಯ
N(ಒಬ್ಬ ಉದ್ಯೋಗಿ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡಿದ ವರ್ಷಗಳ ಸಂಖ್ಯೆ) 10 ವರ್ಷಗಳು
B(ಡಿಎ ಸೇರಿದಂತೆ ಹಿಂದಿನ ಮೂಲ ವೇತನ) ₹ 20,000
ಗ್ರಾಚ್ಯುಟಿ = 10* 20,000 *15/26 ₹ 1,15,385

ಗ್ರಾಚ್ಯುಟಿ ಕ್ಯಾಲ್ಕುಲೇಟರ್ ಅನ್ನು ಬಳಸುವ ಪ್ರಯೋಜನಗಳೇನು?

ಗ್ರಾಚ್ಯುಟಿ ಕ್ಯಾಲ್ಕುಲೇಟರ್‌ನ ಪ್ರಯೋಜನಗಳು ಇವು -

  • ಕಾಂಪೆನ್ಸೇಷನ್ ಕ್ಯಾಲ್ಕುಲೇಟರ್ ಭಾರತದಲ್ಲಿ ಗ್ರಾಚ್ಯುಟಿಯನ್ನು ಹೇಗೆ ಲೆಕ್ಕ ಹಾಕಬೇಕೆಂದು ತೋರಿಸುತ್ತದೆ.

  • ಇದು ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆ.

  • ನಿಮ್ಮ ಭವಿಷ್ಯಕ್ಕಾಗಿ ನೀವು ಆರ್ಥಿಕ ಯೋಜನೆಯನ್ನು ಮಾಡಬಹುದು.

ಗ್ರಾಚ್ಯುಟಿ ಕ್ಯಾಲ್ಕುಲೇಟರ್ ಬಳಸುವಾಗ ಪರಿಗಣಿಸಬೇಕಾದ ವಿಷಯಗಳು

ಗ್ರಾಚ್ಯುಟಿ ಕ್ಯಾಲ್ಕುಲೇಟರ್ ಅನ್ನು ಬಳಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ. 

  • ಗ್ರಾಚ್ಯುಟಿಯ ಮೇಲಿನ ಗರಿಷ್ಠ ಮಿತಿಯು ಸಂಪೂರ್ಣವಾಗಿ ಹತ್ತು ಲಕ್ಷಗಳು. ಇದರ ಮೇಲೆ ನೀವು ಸ್ವೀಕರಿಸುವ ಯಾವುದನ್ನಾದರೂ ಎಕ್ಸ್ ಗ್ರೇಷಿಯಾ ಅಥವಾ ಬೋನಸ್ ಎಂದು ಕರೆಯಲಾಗುತ್ತದೆ.

  • ಅಲ್ಲದೆ, ನೀವು 15 ವರ್ಷಗಳು ಮತ್ತು 7 ತಿಂಗಳುಗಳ ಕಾಲ ಕೆಲಸ ಮಾಡಿದ್ದರೆ, ಅದು ಮುಂದಿನ ಅತ್ಯಧಿಕ ವರ್ಷಕ್ಕೆ ಪೂರ್ಣಗೊಳ್ಳುತ್ತದೆ.

  • ಕೇಂದ್ರ ಸರ್ಕಾರದ ಗ್ರಾಚ್ಯುಟಿ ಕ್ಯಾಲ್ಕುಲೇಟರ್, ಪ್ರೈವೇಟ್ ಉದ್ಯೋಗಿಗಳಿಗೆ ಗ್ರಾಚ್ಯುಟಿ ಕ್ಯಾಲ್ಕುಲೇಟರ್, ಪಿಂಚಣಿ ಗ್ರಾಚ್ಯುಟಿ ಕ್ಯಾಲ್ಕುಲೇಟರ್ ಮತ್ತು ಸಂಬಳದ ಗ್ರಾಚ್ಯುಟಿ ಕ್ಯಾಲ್ಕುಲೇಟರ್ ಎಲ್ಲವೂ ಒಂದೇ ಆಗಿವೆ.

ಕೊನೆಯದಾಗಿ, ನಿಮ್ಮ ವರ್ಷಗಳ ಸೇವೆಯ ನಂತರ ನೀವು ಎಷ್ಟು ಸ್ವೀಕರಿಸುತ್ತೀರಿ ಎಂಬುದನ್ನು ಲೆಕ್ಕಾಚಾರ ಮಾಡಲು ನಮ್ಮ ಗ್ರಾಚ್ಯುಟಿ ಕ್ಯಾಲ್ಕುಲೇಟರ್ ಅನ್ನು ಬಳಸಿ!

ಪದೇ ಪದೇ ಕೇಳಲಾದ ಪ್ರಶ್ನೆಗಳು

ಗ್ರಾಚ್ಯುಟಿ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ನನ್ನ ಎಕ್ಸ್ ಗ್ರೇಷಿಯಾ ಪಾವತಿಯನ್ನು ನಾನು ಹೇಗೆ ತಿಳಿಯುವುದು?

ನೀವು ಹತ್ತು ಲಕ್ಷಕ್ಕಿಂತ ಹೆಚ್ಚಿನ ಮೊತ್ತವನ್ನು ಎಕ್ಸ್ ಗ್ರೇಷಿಯಾ ಪಾವತಿಯಾಗಿ ಪರಿಗಣಿಸಬಹುದು. ಇದಕ್ಕಾಗಿ ನಿಮಗೆ ಗ್ರಾಚ್ಯುಟಿ ಕ್ಯಾಲ್ಕುಲೇಟರ್ ಅಗತ್ಯವಿಲ್ಲ.

ಆನ್‌ಲೈನ್ ಕ್ಯಾಲ್ಕುಲೇಟರ್‌ನಿಂದ ಲೆಕ್ಕಹಾಕಿದ ಗ್ರಾಚ್ಯುಟಿಯ ವಿತರಣೆಗೆ ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ವಿಶಿಷ್ಟವಾಗಿ, ಗ್ರಾಚ್ಯುಟಿಯನ್ನು ರಾಜೀನಾಮೆ ಅಥವಾ ನಿವೃತ್ತಿಯಾದ 30 ದಿನಗಳಲ್ಲಿ ನೀಡಲಾಗುತ್ತದೆ.