ಡಿಜಿಟ್ ಇನ್ಶೂರೆನ್ಸ್ ಗೆ ಬದಲಾಯಿಸಿ

ಇನ್ಕಮ್ ಟ್ಯಾಕ್ಸ್ ಆಕ್ಟ್ ನ ಸೆಕ್ಷನ್ 194I

ಇನ್ಕಮ್ ಟ್ಯಾಕ್ಸ್ ಆಕ್ಟ್ ನ ಸೆಕ್ಷನ್ 194I ಮೂಲದಲ್ಲಿ ಬಾಡಿಗೆಯಿಂದ ಡಿಡಕ್ಷನ್ ಆದ ಟ್ಯಾಕ್ಸ್ ಗೆ (ಟಿಡಿಎಸ್) ಸಂಬಂಧಿಸಿದೆ. ಈ ನಿರ್ದಿಷ್ಟ ಸೆಕ್ಷನ್ ನ ಪ್ರಾವಿಶನ್ ಗಳು ಬಾಡಿಗೆ ಮೇಲಿನ ಟಿಡಿಎಸ್ ಅನ್ನು ಹೇಗೆ ಪರಿಗಣಿಸಬೇಕು ಎಂಬುದನ್ನು ವಿವರಿಸುತ್ತವೆ. ಪ್ರಾಪರ್ಟಿ ಮೇಲೆ ಪಾವತಿಸುವ ಬಾಡಿಗೆಯು ಟಿಡಿಎಸ್‌ಗೆ ಒಳಪಟ್ಟಿರುತ್ತದೆ ಏಕೆಂದರೆ ಇದು ಬಿಸಿನೆಸ್ ಮಾಡುವವರು, ಸ್ಯಾಲರೀಡ್ ಜನರು ಮುಂತಾದ ಕೌಂಟರ್ ಪಾರ್ಟಿಯಿಂದ ಗಳಿಸಿದ ಹೆಚ್ಚುವರಿ ಆದಾಯವಾಗಿರುತ್ತದೆ.

ಇನ್ಕಮ್ ಟ್ಯಾಕ್ಸ್ ಆಕ್ಟ್ ನ ಸೆಕ್ಷನ್ 194I ನ ವಿವರವಾದ ಒಳನೋಟವನ್ನು ಪಡೆಯಲು ಈಗ ನಾವು ಸಿದ್ಧವಾಗೋಣ.

ಇನ್ಕಮ್ ಟ್ಯಾಕ್ಸ್ ಆಕ್ಟ್ ನ ಸೆಕ್ಷನ್ 194I ಎಂದರೇನು?

ಫೈನ್ಯಾನ್ಸ್ ಆಕ್ಟ್, 1994 ರ ಅಡಿಯಲ್ಲಿ, ಸೆಕ್ಷನ್ 194I ಜಾರಿಗೆ ಬಂದಿತು. ಈ ಸೆಕ್ಷನ್ ಅಡಿಯಲ್ಲಿ, ಒಬ್ಬ ನಿವಾಸಿಗೆ ಬಾಡಿಗೆ ಪಾವತಿಸುವ ಯಾವುದೇ ವ್ಯಕ್ತಿ (ಒಬ್ಬ ವ್ಯಕ್ತಿ ಮತ್ತು ಹೆಚ್.ಯು.ಎಫ್ ಹೊರತುಪಡಿಸಿ) ಟಿಡಿಎಸ್ ಗೆ ಬಾಧ್ಯರಾಗಿರುತ್ತಾರೆ. ನಿರ್ದಿಷ್ಟ ಹಣಕಾಸು ವರ್ಷದಲ್ಲಿ ಪಾವತಿಸಬೇಕಾದ ಒಟ್ಟು ಬಾಡಿಗೆ ಮೊತ್ತವು ನಿರ್ದಿಷ್ಟ ಲಿಮಿಟ್ ನ ಮಿತಿಗಿಂತ ಹೆಚ್ಚಿರುವಾಗ ಟ್ಯಾಕ್ಸ್ ಅನ್ನು ಮೂಲದಲ್ಲಿ ಡಿಡಕ್ಷನ್ ಮಾಡಬಹುದಾಗಿದೆ.

ಹಣಕಾಸು ವರ್ಷ 2018-19 ರವರೆಗೆ ಥ್ರೆಶೋಲ್ಡ್ ಲಿಮಿಟ್ ₹180000 ಆಗಿತ್ತು. ಹಣಕಾಸು ವರ್ಷ 2019-20 ರಿಂದ ಇದು ಈ ಮೌಲ್ಯದಿಂದ ₹240000 ಕ್ಕೆ ಏರಿತು. ಇದಲ್ಲದೆ, ಈ ಮೊತ್ತವು ₹ 1 ಕೋಟಿಗಿಂತ ಹೆಚ್ಚಿಲ್ಲದಿದ್ದರೆ ಯಾವುದೇ ಸರ್‌ಚಾರ್ಜ್‌ ಇರುವುದಿಲ್ಲ. ಇದರ ಜೊತೆಗೆ, ಷರತ್ತು (23FCA), ಸೆಕ್ಷನ್ 10 ನಲ್ಲಿ ರೆಫರೆನ್ಸ್ ಮಾಡಲಾದ, ಒಂದು ಬಿಸಿನೆಸ್ ಟ್ರಸ್ಟ್ ನ ನೇರ ಮಾಲಿಕತ್ವದಲ್ಲಿರುವಂತಹ, ಯಾವುದೇ ರಿಯಲ್ ಎಸ್ಟೇಟ್ ಆಸ್ತಿಗೆ ಸಂಬಂಧಿಸಿದಂತೆ, ಒಂದು ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್ ಆಗಿರುವ ಅಂತಹ ಬಿಸಿನೆಸ್ ಟ್ರಸ್ಟ್‌ಗೆ ಪಾವತಿಸಬೇಕಾದ ಬಾಡಿಗೆಗೆ, ಸೆಕ್ಷನ್ 194I ಅಡಿಯಲ್ಲಿ ಟಿಡಿಎಸ್ ಅನ್ವಯವಾಗುವುದಿಲ್ಲ ಎಂಬುದನ್ನು ಗಮನಿಸಿ.

ಉತ್ತಮ ತಿಳುವಳಿಕೆಯನ್ನು ಬೆಳೆಸಲು, ಈ ಸೆಕ್ಷನ್ ಪ್ರಕಾರ ಬಾಡಿಗೆ ಅಡಿಯಲ್ಲಿ ಏನೆಲ್ಲಾ ಬರುತ್ತದೆ ಎಂಬುದನ್ನು ಒಬ್ಬರು ತಿಳಿದಿರಬೇಕು. ಬಾಡಿಗೆಯು ಈ ಕೆಳಗಿನ ಯಾವುದೇ ಬಳಕೆಗಳಿಗೆ (ಒಟ್ಟಿಗೆ ಅಥವಾ ಪ್ರತ್ಯೇಕವಾಗಿ) ಸಬ್-ಲೀಸ್, ಲೀಸ್, ಬಾಡಿಗೆ, ಅಥವಾ ಯಾವುದೇ ಇತರೆ ವ್ಯವಸ್ಥೆ ಅಥವಾ ಒಪ್ಪಂದದ ಅಡಿಯಲ್ಲಿ ಪಾವತಿಗಳನ್ನು ಒಳಗೊಂಡಿರುತ್ತದೆ -

  • ಮಷೀನರಿ
  • ಪ್ಲಾಂಟ್
  • ಉಪಕರಣ
  • ಫರ್ನಿಚರ್
  • ಭೂಮಿ
  • ಬಿಲ್ಡಿಂಗ್ (ಕಾರ್ಖಾನೆ ಬಿಲ್ಡಿಂಗ್ ಸೇರಿ)
  • ಬಿಲ್ಡಿಂಗ್ ಗೆ ಸಂಬಂಧಿಸಿದ ಭೂಮಿ (ಕಾರ್ಖಾನೆ ಬಿಲ್ಡಿಂಗ್ ಸೇರಿ)
  • ಫಿಟ್ಟಿಂಗ್ ಗಳು

ಅದಾಗ್ಯೂ, ಪೇಯೀಯ ಮೇಲೆ ತಿಳಿಸಲಾದ ಎಲ್ಲಾ ಅಥವಾ ಯಾವುದೇ ಘಟಕಗಳ ಏಕೈಕ ಮಾಲೀಕರಾಗಿದ್ದರೆ, ಮೇಲಿನ ಹೇಳಿಕೆಯು ಅನ್ವಯವಾಗುತ್ತದೆ ಎಂಬುದನ್ನು ಗಮನಿಸಿ. ಅಲ್ಲದೆ, ಸಬ್-ಲೆಟ್ಟಿಂಗ್(ಒಳಬಾಡಿಗೆ) ಅನ್ನೂ ಇಲ್ಲಿ ಕವರ್ ಮಾಡಲಾಗುತ್ತದೆ.

[ಮೂಲ]

ಸೆಕ್ಷನ್ 194I ಅಡಿಯಲ್ಲಿ ಕವರ್ ಆಗಿರುವ ಪಾವತಿಗಳು

ಸೆಕ್ಷನ್ 194I ಅಡಿಯಲ್ಲಿ ವಿಭಿನ್ನ ಪಾವತಿಗಳು ಒಳಗೊಂಡಿವೆ -

ಫ್ಯಾಕ್ಟರಿ ಬಿಲ್ಡಿಂಗ್ ಅನ್ನು ಬಾಡಿಗೆಗೆ ನೀಡಿರುವುದರಿಂದ ಬರುವ ಆದಾಯ

ಕಾರ್ಖಾನೆಯ ಬಿಲ್ಡಿಂಗ್ ಅನ್ನು ಬಾಡಿಗೆಗೆ ನಿಡಿದಾಗ ಪಡೆದ ಬಾಡಿಗೆಯು, ಕಾರ್ಖಾನೆಯ ಮಾಲೀಕರು ಅಥವಾ ಗುತ್ತಿಗೆ ನೀಡಿದವರ ಕೈಯಲ್ಲಿ ಬಿಸಿನೆಸ್ ನಿಂದ ಬರುವ ಆದಾಯವಾಗಿದೆ. ಕೆಲವು ಸಂದರ್ಭಗಳಲ್ಲಿ, ಇದು ಗುತ್ತಿಗೆ ನೀಡಿದವರ ಕೈಯಲ್ಲಿ ಹೌಸ್ ಪ್ರಾಪರ್ಟಿಯಿಂದ ಬಂದ ಆದಾಯವಾಗಿದೆ. ಆದರೆ ಗುತ್ತಿಗೆ ನೀಡಿದವರ ಕೈಯಲ್ಲಿರುವ ಬಿಸಿನೆಸ್ ಆದಾಯ, ಮತ್ತು ಅವರು ಅಗತ್ಯವಾಗಿ ಮುಂಗಡ ಟ್ಯಾಕ್ಸ್ ಅನ್ನು ಪಾವತಿಸಬೇಕಾದ ಪಾವತಿ ಮತ್ತು ಅಂತಿಮವಾಗಿ ಬಾಡಿಗೆ ಆದಾಯವನ್ನು ಹಿಂದಿರುಗಿಸುವುದು ಸಹ ಟಿಡಿಎಸ್ ಗೆ ಒಳಪಟ್ಟಿರುತ್ತದೆ.

ಇದು ಟ್ಯಾಕ್ಸ್ ನಿರ್ವಾಹಕರಿಗೆ ಮತ್ತು ಟ್ಯಾಕ್ಸ್ ಪೇಯರ್ ಗೆ ಅನಗತ್ಯ ಹೊರೆಯಾಗಿ ಪರಿಣಮಿಸುತ್ತದೆ ಏಕೆಂದರೆ ವಿಳಂಬವಿಲ್ಲದೆ ಗುತ್ತಿಗೆದಾರರಿಂದ ಟಿಡಿಎಸ್ ಆಗಿ ಟ್ಯಾಕ್ಸ್ ಸಂಗ್ರಹವು ನಡೆಯುತ್ತದೆ.

ಮಾಸಿಕ ಆಧಾರದ ಮೇಲೆ ಬಾಡಿಗೆ ಪಾವತಿ ಇರದಿದ್ದಾಗ ಟಿಡಿಎಸ್ ಅಗತ್ಯತೆಗಳು

ಸೆಕ್ಷನ್ 194I ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್ ಮಾಸಿಕ ಆಧಾರದ ಮೇಲೆ ಕಡ್ಡಾಯವಾಗಿ ಅನ್ವಯವಾಗುವುದಿಲ್ಲ.

ಉದಾಹರಣೆಗೆ, ಬಾಡಿಗೆಯನ್ನು ತ್ರೈಮಾಸಿಕವಾಗಿ ಕ್ರೆಡಿಟ್ ಮಾಡಲಾದರೆ, ಟಿಡಿಎಸ್ ಡಿಡಕ್ಷನ್ ತ್ರೈಮಾಸಿಕ ಆಧಾರದ ಮೇಲೆ ನಡೆಯುತ್ತದೆ. ವ್ಯತಿರಿಕ್ತವಾಗಿ, ವ್ಯಕ್ತಿಗಳು ವಾರ್ಷಿಕವಾಗಿ ಬಾಡಿಗೆಯನ್ನು ಪಡೆದಾಗ, ಡಿಡಕ್ಷನ್ ಸಹ ವರ್ಷಕ್ಕೊಮ್ಮೆ ನಿಜವಾದ ಕ್ರೆಡಿಟ್ ಪಾವತಿಯ ಮೇಲೆ ನಡೆಯುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಅಂತಹ ಆದಾಯವನ್ನು ಪೇಯೀಯ ಖಾತೆಗೆ ಜಮಾ ಮಾಡುವ ಅಥವಾ ಅದರ ನಿಜವಾದ ಪಾವತಿಯ, ಯಾವುದು ಮೊದಲು ಬರುತ್ತದೆಯೋ ಆ ಸಮಯದಲ್ಲಿ, ಡಿಡಕ್ಷನ್ ಅನ್ನು ಮಾಡಲಾಗುತ್ತದೆ.

ಸರ್ವೀಸ್ ಚಾರ್ಜ್ ಅನ್ನು ಬಾಡಿಗೆ ಕವರ್ ಮಾಡುತ್ತದೆ

ಬಿಸಿನೆಸ್ ಕೇಂದ್ರಗಳಿಗೆ ಪಾವತಿಸಬೇಕಾದ ಸರ್ವೀಸ್ ಚಾರ್ಜ್ ಗಳು ಸಹ 'ಬಾಡಿಗೆ' ಅಡಿಯಲ್ಲಿ ಬರುತ್ತವೆ. ಏಕೆಂದರೆ ಈ ಕವರ್ ಪಾವತಿಗಳನ್ನು ಬೇಕಾದ ಹೆಸರಿನಿಂದ ಕರೆಯಲಾಗುತ್ತದೆ.

ಫರ್ನಿಚರ್, ಬಿಲ್ಡಿಂಗ್ ಗಳು ಇತ್ಯಾದಿಗಳನ್ನು ಪ್ರತ್ಯೇಕ ವ್ಯಕ್ತಿಗಳು ಬಾಡಿಗೆಗೆ ನೀಡುವ ಸಂದರ್ಭದಲ್ಲಿ ಟಿಡಿಎಸ್ ಅಗತ್ಯತೆಗಳು

ಫರ್ನಿಚರ್ ಮತ್ತು ಜೋಡಣೆಗಳನ್ನು ಒಬ್ಬ ವ್ಯಕ್ತಿಯಿಂದ ಮತ್ತು ಬಿಲ್ಡಿಂಗ್ ಅನ್ನು ಇನ್ನೊಬ್ಬ ವ್ಯಕ್ತಿಯಿಂದ ಬಾಡಿಗೆಗೆ ನೀಡಲಾಗಿದ್ದರೆ, ಪೇಯೀ ಆ ಬಿಲ್ಡಿಂಗ್ ನ ಬಾಡಿಗೆಗಾಗಿ ಕ್ರೆಡಿಟ್ ಆದ ಅಥವಾ ಪಾವತಿಸಲಾದ ಬಾಡಿಗೆ ಮೊತ್ತದಿಂದ ಮಾತ್ರ ಈ ಸೆಕ್ಷನ್ ನಲ್ಲಿ ಟ್ಯಾಕ್ಸ್ ಡಿಡಕ್ಷನ್ ಮಾಡಬೇಕು.

ಕೋಲ್ಡ್ ಸ್ಟೋರೇಜ್ ಸೌಲಭ್ಯಕ್ಕೆ ಸಂಬಂಧಿಸಿದ ಶುಲ್ಕಗಳು

ಸಿ.ಬಿ.ಡಿ.ಟಿ ಸರ್ಕ್ಯುಲರ್ ನಂ.1/2008 ದಿನಾಂಕ 10.1.2008, ಕೋಲ್ಡ್ ಸ್ಟೋರೇಜ್ ಮಾಲೀಕರಿಗೆ ಕೂಲಿಂಗ್ ಶುಲ್ಕಕ್ಕೆ ಸಂಬಂಧಿಸಿದಂತೆ ಗ್ರಾಹಕರು ಮಾಡಿದ ಪಾವತಿಗಳಿಗೆ ಸೆಕ್ಷನ್ 194-I ನ ಪ್ರಾವಿಶನ್ ಗಳ ಅನ್ವಯದ ಬಗ್ಗೆ ಸ್ಪಷ್ಟೀಕರಣವನ್ನು ಒದಗಿಸುತ್ತದೆ.

ಕೋಲ್ಡ್ ಸ್ಟೋರೇಜ್‌ನ ಮುಖ್ಯ ಕಾರ್ಯವೆಂದರೆ ಹಾಳಾಗುವ ವಸ್ತುಗಳನ್ನು ಯಾಂತ್ರಿಕ ಪ್ರಕ್ರಿಯೆಯ ಮೂಲಕ ಸಂರಕ್ಷಿಸುವುದು ಮತ್ತು ಅಂತಹ ಸರಕುಗಳ ಸಂಗ್ರಹಣೆಯು ಕೇವಲ ಪ್ರಾಸಂಗಿಕವಾಗಿರುತ್ತದೆ. ಗ್ರಾಹಕನಿಗೆ ಯಾವುದೇ ಗುರುತಿಸಲಾದ ಜಾಗ/ಸ್ಥಳ ಅಥವಾ ಕೋಲ್ಡ್ ಸ್ಟೋರ್‌ನ ಯಂತ್ರೋಪಕರಣಗಳನ್ನು ಬಳಸಲು ಯಾವುದೇ ಹಕ್ಕನ್ನು ಸಹ ನೀಡಲಾಗುವುದಿಲ್ಲ ಮತ್ತು ಹೀಗಾಗಿ ಅವರು ಒಬ್ಬ ಬಾಡಿಗೆದಾರರಾಗುವುದಿಲ್ಲ.

ಆದ್ದರಿಂದ, ಕೋಲ್ಡ್ ಸ್ಟೋರೇಜ್‌ನ ಗ್ರಾಹಕರು ಪಾವತಿಸುವ ಕೂಲಿಂಗ್ ಶುಲ್ಕಗಳಿಗೆ 194-I ನ ಪ್ರಾವಿಶನ್ ಗಳು ಅನ್ವಯವಾಗುವುದಿಲ್ಲ. ಆದಾಗ್ಯೂ, ಗ್ರಾಹಕರು ಮತ್ತು ಕೋಲ್ಡ್ ಸ್ಟೋರೇಜ್ ಮಾಲೀಕರ ನಡುವಿನ ವ್ಯವಸ್ಥೆಯು ಮೂಲತಃ ಒಪ್ಪಂದದ ಸ್ವರೂಪದ್ದಾಗಿರುವುದರಿಂದ, ಕೋಲ್ಡ್ ಸ್ಟೋರೇಜ್‌ನ ಗ್ರಾಹಕರು ಕೂಲಿಂಗ್ ಶುಲ್ಕವಾಗಿ ಪಾವತಿಸುವ ಮೊತ್ತಗಳಿಗೆ ಸೆಕ್ಷನ್ 194C ಪ್ರಾವಿಶನ್ ಯು ಅನ್ವಯವಾಗುತ್ತದೆ.

ಅದರ ಬಳಕೆಗಾಗಿ ಎಸೋಸಿಯೇಶನ್ ನಿಂದ ಪಾವತಿಸಲಾದ ಹಾಲ್ ಬಾಡಿಗೆ

ಒಂದು ಎಸೋಸಿಯೇಶನ್ ಅನ್ನು ವ್ಯಕ್ತಿಗಳ ಸಂಘವಾಗಿ ನಿರ್ಣಯಿಸಲಾಗುತ್ತದೆ, ಹೆಚ್.ಯು.ಎಫ್ ಅಥವಾ ವ್ಯಕ್ತಿಯಾಗಿ ಅಲ್ಲ. ಆದ್ದರಿಂದ, ಹಣಕಾಸು ವರ್ಷ 2019-20 ರಿಂದ ಹಾಲ್ ಬಳಕೆಗೆ ₹240000 ಕ್ಕಿಂತ ಹೆಚ್ಚು ಪಾವತಿ ಇರುವುದನ್ನು ಪರಿಗಣಿಸಿ, ಟ್ಯಾಕ್ಸ್ ಡಿಡಕ್ಷನ್ ನ ಬಾಧ್ಯತೆ ಅಲ್ಲಿ ಉಳಿದಿರುತ್ತದೆ.

ಸೆಮಿನಾರ್‌ಗಳನ್ನು ನಡೆಸಲು ಹೋಟೆಲ್‌ಗಳಿಗೆ ಮಾಡಿದ ಪಾವತಿಗಳು (ಊಟ ಸೇರಿದಂತೆ)

ಹೋಟೆಲ್‌ಗಳು ಆವರಣದ ಬಳಕೆಗೆ ಶುಲ್ಕ ವಿಧಿಸದೆ ಕೇವಲ ಊಟ/ಕೇಟರಿಂಗ್ ಗೆ ಮಾತ್ರ ವಿಧಿಸಿದರೆ, ಅಂತಹ ಸಂದರ್ಭಗಳಲ್ಲಿ ಈ ಸೆಕ್ಷನ್ ನ ಪ್ರಾವಿಶನ್ ಗಳು ಅನ್ವಯವಾಗುವುದಿಲ್ಲ. ಆದಾಗ್ಯೂ, ಇದು ಕೇಟರಿಂಗ್ ಭಾಗಕ್ಕೆ ಅನ್ವಯವಾಗಬಹುದು.

ಸೆಕ್ಷನ್ 194I ಬಾಡಿಗೆ ಅಡಿಯಲ್ಲಿ ಅನ್ವಯವಾಗುವ ಟಿಡಿಎಸ್ ದರಗಳು

ಪೇಯೀ 'ಬಾಡಿಗೆ ಮೂಲಕ ಆದಾಯ'ವನ್ನು ಜಮೀನುದಾರನ ಖಾತೆಗೆ ಕ್ರೆಡಿಟ್ ಮಾಡಿದಾಗ ಟಿಡಿಎಸ್ ಅನ್ವಯವಾಗುತ್ತದೆ. ನೀವು ಚೆಕ್, ಡ್ರಾಫ್ಟ್ ಅಥವಾ ಕ್ಯಾಶ್ ಮೂಲಕ ಬಾಡಿಗೆಯನ್ನು ಸ್ವೀಕರಿಸಿದರೆ, ಪಾವತಿಯ ಸಮಯದಲ್ಲಿ ಈ ಟ್ಯಾಕ್ಸ್ ಅನ್ನು ಡಿಡಕ್ಷನ್ ಮಾಡಲಾಗುತ್ತದೆ ಎಂಬುದನ್ನು ಗಮನಿಸಿ.

ಕೆಳಗೆ ನೀಡಲಾದ ಟೇಬಲ್, ಪ್ರಾಪರ್ಟಿ ವಿಧದ ಆಧಾರದ ಮೇಲೆ 194I ಬಾಡಿಗೆ ಟಿಡಿಎಸ್ ದರಗಳ ಒಳನೋಟವನ್ನು ಒದಗಿಸುತ್ತದೆ.

ಇದು194I (a) ಮತ್ತು 194I (b) ಬಾಡಿಗೆ ಮೇಲೆ ಟಿಡಿಎಸ್ ಅಡಿಯಲ್ಲಿ ಅನ್ವಯವಾಗುವ ದರಗಳನ್ನು ಒಳಗೊಂಡಿರುತ್ತದೆ.

ಪೇಮೆಂಟ್ ವಿಧ ವ್ಯಕ್ತಿಗಳು/ಕಂಪೆನಿಗಳಿಗೆ ಟಿಡಿಎಸ್ ದರ ಇನ್ವ್ಯಾಲಿಡ್ ಅಥವಾ ನೋ ಪ್ಯಾನ್‌ಗೆ ಟಿಡಿಎಸ್ ದರ
ಬಿಲ್ಡಿಂಗ್, ಪೀಠೋಪಕರಣ, ಭೂಮಿ ಅಥವಾ ಫಿಟ್ಟಿಂಗ್‌ಗಳ ಮೇಲೆ ಬಾಡಿಗೆ 10% 20%
ಮಷೀನರಿ ಮತ್ತು ಪ್ಲಾಂಟ್ ಗಳಿಗಾಗಿ ಪಾವತಿಸಲಾದ ಬಾಡಿಗೆ 2% 20%

ಸೆಕ್ಷನ್ 194I ಅಡಿಯಲ್ಲಿ ಟಿಡಿಎಸ್ ಡಿಡಕ್ಷನ್ ಆಗದ ಸಂದರ್ಭಗಳು

ಸೆಕ್ಷನ್ 194I ಅಡಿಯಲ್ಲಿ ಬಾಡಿಗೆಗೆ ಟಿಡಿಎಸ್ ಡಿಡಕ್ಷನ್ ಆಗದ ಕೆಲವು ಪ್ರಕರಣಗಳು ಇಲ್ಲಿವೆ -

  • ಹಣಕಾಸು ವರ್ಷದಲ್ಲಿ ಪಾವತಿಸಿದ/ಪಾವತಿಸಬೇಕಾದ ಮೊತ್ತವು ₹240000 ಮೀರದಿದ್ದರೆ - ಹಣಕಾಸು ವರ್ಷ 2019-20 ರಿಂದ ಬಾಡಿಗೆ ₹240000 ಕ್ಕಿಂತ ಹೆಚ್ಚಿಲ್ಲದಿದ್ದರೆ ಯಾವುದೇ ಟ್ಯಾಕ್ಸ್ ಅನ್ವಯವಾಗುವುದಿಲ್ಲ(ಹಿಂದೆ, 194I ಬಾಡಿಗೆ ಲಿಮಿಟ್ ₹1, 80,000 ಆಗಿತ್ತು).
  • ಬಾಡಿಗೆದಾರರು ಒಬ್ಬ ಹೆಚ್.ಯು.ಎಫ್ ಅಥವಾ ಒಬ್ಬ ವ್ಯಕ್ತಿಯಾಗಿದ್ದಾರೆ - ಈ ಸೆಕ್ಷನ್ ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಅಥವಾ ಒಂದು ಹಿಂದೂ ಅವಿಭಜಿತ ಕುಟುಂಬಕ್ಕೆ ಅನ್ವಯವಾಗುವುದಿಲ್ಲ; ಬಾಡಿಗೆಯ ಮೂಲಕ ಅಂತಹ ಆದಾಯವನ್ನು ಕ್ರೆಡಿಟ್ ಮಾಡಿದ ಅಥವಾ ಪಾವತಿಸಿದ ಆರ್ಥಿಕ ವರ್ಷದ ಹಿಂದಿನ ಆರ್ಥಿಕ ವರ್ಷದಲ್ಲಿ ಅವರ ಒಟ್ಟು ಮಾರಾಟ, ಒಟ್ಟು ರಶೀದಿಗಳು ಅಥವಾ ಅವರು ನಡೆಸುತ್ತಿರುವ ಬಿಸಿನೆಸ್ ಅಥವಾ ವೃತ್ತಿಯಿಂದ ಆಗುವ ಟರ್ನ್‌ಓವರ್, ಬಿಸಿನೆಸ್ ನಲ್ಲಿ ಒಂದು ಕೋಟಿ ರೂಪಾಯಿ ಮೀರಿದ ಅಥವಾ ವೃತ್ತಿಯಲ್ಲಿ ಐವತ್ತು ಲಕ್ಷ ರೂಪಾಯಿಗಳನ್ನು ಮೀರಿದ ಸಂದರ್ಭವನ್ನು ಹೊರತುಪಡಿಸಿ.
  • ಚಲನಚಿತ್ರ ಪ್ರದರ್ಶಕ ಮತ್ತು ಸಿನಿಮಾ ಥಿಯೇಟರ್ ಅನ್ನು ಹೊಂದಿರುವ ಚಲನಚಿತ್ರ ವಿತರಕರ ನಡುವಿನ ಚಲನಚಿತ್ರ ಪ್ರದರ್ಶನದ ಹಂಚಿಕೆ - ಚಲನಚಿತ್ರ ವಿತರಕ ಮತ್ತು ಚಲನಚಿತ್ರ ಪ್ರದರ್ಶಕರ ಒಂದು ಒಪ್ಪಂದದಲ್ಲಿ, ಪ್ರದರ್ಶಕರ ಪಾಲು ಸಂಯೋಜಿತ ಸೇವೆಗಳಿಗೆ ಸಂಬಂಧಿಸುತ್ತದೆ. ವಿತರಕರು ಸಿನಿಮಾ ಬಿಲ್ಡಿಂಗ್ ಅನ್ನು ಸಬ್-ಲೀಸ್, ಲೀಸ್, ಬಾಡಿಗೆ ಅಥವಾ ಇಂತಹ ಯಾವುದೇ ರೀತಿಯ ಒಪ್ಪಂದದ ಅಡಿಯಲ್ಲಿ ತೆಗೆದುಕೊಳ್ಳುವುದಿಲ್ಲ. ಮಾಡಿದ ಪಾವತಿಯು ಬಾಡಿಗೆ ಸ್ವರೂಪದ್ದಾಗಿರುವುದಿಲ್ಲ.

[ಮೂಲ]

ಸೆಕ್ಷನ್ 10 ರ ಷರತ್ತು (23FCA) ನಲ್ಲಿ ರೆಫರೆನ್ಸ್ ಮಾಡಲಾದ, ಒಂದು ಬಿಸಿನೆಸ್ ಟ್ರಸ್ಟ್ ನ ನೇರ ಮಾಲೀಕತ್ವದಲ್ಲಿರುವ, ಯಾವುದೇ ರಿಯಲ್ ಎಸ್ಟೇಟ್ ಆಸ್ತಿಗೆ ಸಂಬಂಧಿಸಿದಂತೆ, ರಿಯಲ್ ಎಸ್ಟೇಟ್ ಇನ್ವೆಸ್ಟ್ಮೆಂಟ್ ಟ್ರಸ್ಟ್ ಆಗಿರುವ ಬಿಸಿನೆಸ್ ಟ್ರಸ್ಟ್‌ಗೆ, ಬಾಡಿಗೆ ಮೂಲಕ ಆದಾಯವನ್ನು ಕ್ರೆಡಿಟ್ ಮಾಡಿದ ಅಥವಾ ಪಾವತಿಸಿದ ಸಂದರ್ಭದಲ್ಲಿ, ಈ ಸೆಕ್ಷನ್ ಅಡಿಯಲ್ಲಿ ಯಾವುದೇ ಡಿಡಕ್ಷನ್ ಅನ್ನು ಮಾಡಲಾಗುವುದಿಲ್ಲ.

ಟ್ಯಾಕ್ಸ್ ಅನ್ನು ಡೆಪಾಸಿಟ್ ಮಾಡಬೇಕಾದ ಸಮಯದ ಲಿಮಿಟ್

ವ್ಯಕ್ತಿಗಳು ಟ್ಯಾಕ್ಸ್ ಡೆಪಾಸಿಟ್ ಮಾಡಬೇಕಾದ 194I ಟಿಡಿಎಸ್ ಲಿಮಿಟ್ ಅನ್ನು ಕೆಳಗೆ ನೀಡಲಾಗಿದೆ -

  • ಸರ್ಕಾರವನ್ನು ಹೊರತುಪಡಿಸಿ ಇತರೆ ಘಟಕಗಳ ಮೂಲಕ ಪಾವತಿಗಾಗಿ:ಇನ್ಕಮ್ ಟ್ಯಾಕ್ಸ್ ಚಲಾನ್ ಜೊತೆಗೆ ಟ್ಯಾಕ್ಸ್ ಅನ್ನು ಪಾವತಿಸಲಾಗುವ, ಡಿಡಕ್ಷನ್ ತಿಂಗಳ ಅಂತ್ಯದಿಂದ 7 ದಿನಗಳಲ್ಲಿ ಅಥವಾ ಅದಕ್ಕಿಂತ ಮೊದಲು.
  • ಸರ್ಕಾರದಿಂದ ಅಥವಾ ಅದರ ಪರವಾಗಿ ಮಾಡಲಾದ ಪಾವತಿಗಾಗಿ: ಅದೇ ದಿನದಂದು (ಯಾವುದೇ ಚಲಾನ್ ಫಾರ್ಮ್‌ನ ಬಳಕೆಯಿಲ್ಲದೆ)
  • ಮಾರ್ಚ್‌ನಲ್ಲಿ ಮೊತ್ತವನ್ನು ಪಾವತಿಸಿದ್ದರೆ ಅಥವಾ ಕ್ರೆಡಿಟ್ ಮಾಡಿದ್ದರೆ: ಏಪ್ರಿಲ್ 30 ರಂದು ಅಥವಾ ಮೊದಲು
  • ಯಾವುದೇ ಇತರೆ ಕೇಸ್ ಗಾಗಿ: ಡಿಡಕ್ಷನ್ ತಿಂಗಳ ಅಂತ್ಯದಿಂದ 7 ದಿನಗಳಲ್ಲಿ ಅಥವಾ ಅದಕ್ಕಿಂತ ಮೊದಲು.

ಇನ್ಕಮ್ ಟ್ಯಾಕ್ಸ್ ಆಕ್ಟ್ ನ ಸೆಕ್ಷನ್ 194I ನಲ್ಲಿ ತಿಳಿಸಲಾದ ಎಲ್ಲಾ ಅಂಶಗಳನ್ನು ಘಟಕಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ಅವರಿಗೆ ಬಾಡಿಗೆ ಮೇಲಿನ ಟಿಡಿಎಸ್ ಅನ್ನು ಸರಿಯಾಗಿ ಕ್ಯಾಲ್ಕ್ಯುಲೇಟ್ ಮಾಡಲು ಇದು ಸಹಾಯಕವಾಗಿರುತ್ತದೆ. ಇದಲ್ಲದೆ, ಇದು ಪಾವತಿ ವಿಧಾನವನ್ನು ಸುವ್ಯವಸ್ಥಿತಗೊಳಿಸಲು ಮತ್ತು ಅನುಕೂಲಕರವಾಗಿ ರಿಫಂಡ್ ಕ್ಲೈಮ್ ಮಾಡಲು ಅನುಮತಿಸುತ್ತದೆ.

ಪದೇ ಪದೇ ಕೇಳಲಾದ ಪ್ರಶ್ನೆಗಳು

ಬಾಡಿಗೆಗಳು ನಿವೇಶನದ ಬಾಡಿಗೆ, ಮುನಿಸಿಪಲ್ ಟ್ಯಾಕ್ಸ್ ಇತ್ಯಾದಿಗಳನ್ನು ಒಳಗೊಂಡಿದ್ದರೆ ಸೆಕ್ಷನ್ 194I ಅಡಿಯಲ್ಲಿ ಯಾವ ಮೊತ್ತದ ಮೇಲೆ ಟಿಡಿಎಸ್ ಡಿಡಕ್ಷನ್ ಅನ್ನು ಮಾಡಬೇಕು?

ಸೆಕ್ಷನ್ 194I ಅಡಿಯಲ್ಲಿ, ಬಾಡಿಗೆಯ ಮೂಲಕ ಆದಾಯದ ಮೇಲೆ ಟಿಡಿಎಸ್ ಅನ್ವಯವಾಗುತ್ತದೆ. ಬಾಡಿಗೆಯು ಯಾವುದೇ ಕಟ್ಟಡ ಅಥವಾ ಭೂ ಬಳಕೆಗಾಗಿ ಯಾವುದೇ ಒಕ್ಕಲುತನ, ಒಪ್ಪಂದ, ಗುತ್ತಿಗೆ ಇತ್ಯಾದಿಗಳ ಅಡಿಯಲ್ಲಿ ಮಾಡಲಾದ ಯಾವುದೇ ಪಾವತಿಯನ್ನು ಸೂಚಿಸುತ್ತದೆ. ಆದ್ದರಿಂದ, ಒಬ್ಬ ಬಾಡಿಗೆದಾರರು ನಿವೇಶನದ ಬಾಡಿಗೆ, ಮುನಿಸಿಪಲ್ ಟ್ಯಾಕ್ಸ್ ಗಳು ಇತ್ಯಾದಿಗಳನ್ನು ಭರಿಸಿದರೆ, ಅಂತಹ ಮೊತ್ತಕ್ಕೆ ಯಾವುದೇ ಟ್ಯಾಕ್ಸ್ ಅನ್ವಯವಾಗುವುದಿಲ್ಲ.

ಬಾಡಿಗೆಯ ಸೆಕ್ಯೂರಿಟಿ ಡೆಪಾಸಿಟ್ ಮೇಲೆ ಟಿಡಿಎಸ್ ಅನ್ವಯವಾಗುತ್ತದೆಯೇ?

ಇಲ್ಲ, ಭೂಮಾಲೀಕರು ಈ ಡೆಪಾಸಿಟ್ ಅನ್ನು ರಿಫಂಡ್ ಮಾಡಿದರೆ, ಬಾಡಿಗೆಯ ಸೆಕ್ಯೂರಿಟಿ ಡೆಪಾಸಿಟ್ ಮೇಲೆ ಟಿಡಿಎಸ್ ಅನ್ವಯವಾಗುವುದಿಲ್ಲ. ಆದಾಗ್ಯೂ, ಬಾಡಿಗೆಗೆ ವಿರುದ್ಧವಾಗಿ ಭೂಮಾಲೀಕರು ಸೆಕ್ಯೂರಿಟಿ ಡೆಪಾಸಿಟ್ ಅನ್ನು ಸರಿಹೊಂದಿಸಿದಾಗ ಟಿಡಿಎಸ್ ಡಿಡಕ್ಷನ್ ಗೆ ಒಳಾಗುತ್ತದೆ.