ಮೋಡಿಮಾಡುವ ಕೋಟೆಗಳು, ಕಥೆಗಳು ಮತ್ತು ಹಬ್ಬಗಳ ಸಡಗರ, ಪ್ರಸಿದ್ಧ GOT ಲೊಕೇಶನ್ಗಳು ಮತ್ತು ಆಕರ್ಷಕ ಕರಾವಳಿಗಳು. ವರ್ಷಗಳು ಕಳೆದಂತೆ, ಐರ್ಲೆಂಡ್ ಅತ್ಯಂತ ಜನರು ಬಯಸುವ ಟೂರಿಸ್ಟ್ ಡೆಸ್ಟಿನೇಷನ್ಗಳಲ್ಲಿ ಒಂದಾಗಿದೆ. ನೀವು ಕೂಡ ಹಾಲಿಡೇಗಾಗಿ ಶೀಘ್ರದಲ್ಲೇ ಈ ದೇಶಕ್ಕೆ ಭೇಟಿ ನೀಡಲು ಪ್ಲ್ಯಾನ್ ಮಾಡುತ್ತಿದ್ದರೆ, ಟ್ರಿಪ್ ಪ್ರಾರಂಭಿಸಲು ನಿಮಗೆ ಟೂರಿಸ್ಟ್ ವೀಸಾದ ಅಗತ್ಯವಿದೆ. ನೀವು ವೀಸಾವನ್ನು ಹೇಗೆ ಪಡೆಯುತ್ತೀರಿ? ನಿಮಗೆ ಮಾರ್ಗದರ್ಶನ ನೀಡುವುದಕ್ಕಾಗಿಯೇ ತಾನೇ ನಾವು ಇಲ್ಲಿರೋದು.
ಹೌದು, ರಿಪಬ್ಲಿಕ್ ಆಫ್ ಐರ್ಲೆಂಡ್ಗೆ ಭೇಟಿ ನೀಡಲು ಇಂಡಿಯನ್ ಪಾಸ್ಪೋರ್ಟ್ ಹೋಲ್ಡರ್ಗಳಿಗೆ ಐರಿಶ್ ವೀಸಾದ ಅಗತ್ಯವಿದೆ. ಆದರೆ ನೀವು ಉತ್ತರ ಐರ್ಲೆಂಡ್ಗೆ ಭೇಟಿ ನೀಡಲು ಪ್ಲ್ಯಾನ್ ಮಾಡಿದರೆ, ಯುಕೆ ವೀಸಾ ಸಾಕಾಗುತ್ತದೆ.
ಸ್ವಲ್ಪ ಸಮಯ ಉಳಿಯಲು, ಐರ್ಲೆಂಡ್ಗೆ ಟ್ರಾವೆಲ್ ಮಾಡಲು ಎಲ್ಲಾ ಭಾರತೀಯರಿಗೆ ಟೂರಿಸ್ಟ್ ವೀಸಾದ ಅಗತ್ಯವಿರುತ್ತದೆ. ಅವರ ಗರಿಷ್ಠ ವಾಸ್ತವ್ಯವು 90 ದಿನಗಳವರೆಗೆ ಇರಬಹುದು ಮತ್ತು ಈ ವೀಸಾಗಳನ್ನು 'ಸಿ' ಕೆಟಗರಿ ವೀಸಾ ಎಂದು ಕರೆಯಲಾಗುತ್ತದೆ. ಟೂರಿಸ್ಟ್ ವೀಸಾವು ವಿಸಿಟರ್ಗಳನ್ನು ಈ ಕೆಳಗಿನವುಗಳಿಗೆ ಅನುಮತಿಸುವುದಿಲ್ಲ ಎಂಬುದನ್ನು ನೀವು ತಿಳಿದಿರಬೇಕು:
ಪೇಯ್ಡ್ ಅಥವಾ ಅನ್ಪೇಯ್ಡ್ ರೀತಿಯ ಯಾವುದೇ ಕೆಲಸವನ್ನು ಮಾಡುವುದು.
ಆಸ್ಪತ್ರೆಯಂತಹ ಯಾವುದೇ ಸಾರ್ವಜನಿಕ ಸೌಲಭ್ಯವನ್ನು ಬಳಸಿಕೊಳ್ಳುವುದು.
ಐರಿಶ್ ಟೂರಿಸ್ಟ್ ವೀಸಾ ಗರಿಷ್ಠ 90 ದಿನಗಳವರೆಗೆ ವ್ಯಾಲಿಡ್ ಆಗಿರುತ್ತದೆ.
ಇಲ್ಲ, ಐರ್ಲೆಂಡ್ಗೆ ಟ್ರಾವೆಲ್ ಮಾಡುವ ಭಾರತೀಯರಿಗೆ ವೀಸಾ ಆನ್ ಅರೈವಲ್ ಇಲ್ಲ. ಆದಾಗ್ಯೂ, ವ್ಯಾಲಿಡ್ ಆಗಿರುವ ಯುಕೆ ವೀಸಾ ಹೊಂದಿರುವವರು, ಈಗಲೂ ಉತ್ತರ ಐರ್ಲೆಂಡ್ಗೆ ಟ್ರಾವೆಲ್ ಮಾಡಬಹುದು.
ವೀಸಾದ ವಿಧ |
ಫೀಸ್ಗಳು (ಸರ್ವೀಸ್ ಫೀಸ್ ಅನ್ನು ಹೊರತುಪಡಿಸಿ) |
ಸಿಂಗಲ್ ಎಂಟ್ರಿ |
ಯುಎಸ್ಡಿ 90.68 (ಇಯುಆರ್ 84) |
ಮಲ್ಟಿಪಲ್ ಎಂಟ್ರಿ |
ಯುಎಸ್ಡಿ 180.28 (ಇಯುಆರ್167) |
ಕೆಳಗಿನವುಗಳು ನಿಮಗೆ ಅಗತ್ಯವಿರುವ ಡಾಕ್ಯುಮೆಂಟುಗಳ ಪಟ್ಟಿಯಾಗಿದೆ:
ಪ್ರಿಂಟೆಡ್ ಮತ್ತು ಸಹಿ ಮಾಡಿದ ಅಪ್ಲಿಕೇಶನ್ ಫಾರ್ಮ್: ದಿನಾಂಕಗಳು, ಸ್ಥಳಗಳು ಮತ್ತು ಅವಧಿಯಂತಹ ಟ್ರಾವೆಲ್ಗೆ ಸಂಬಂಧಿಸಿದ ವಿವರಗಳನ್ನು ನಮೂದಿಸಿ.
ಪಾಸ್ಪೋರ್ಟ್ ಸೈಜಿನ ಕಲರ್ ಫೋಟೋಗಳು. ಫೋಟೋ, ವೈಟ್ ಬ್ಯಾಕ್ಗ್ರೌಂಡ್ ಮತ್ತು ಮ್ಯಾಟ್ ಫಿನಿಶ್ನೊಂದಿಗೆ 35X45 ಮಿಮೀ ಸೈಜಿನಲ್ಲಿರಬೇಕು. ನಿಮ್ಮ ಮುಖ ಸುಮಾರು 70-80% ಕಾಣುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಕನಿಷ್ಠ ಒಂದು ಬ್ಲ್ಯಾಂಕ್ ಪೇಜಿನೊಂದಿಗೆ ಒರಿಜಿನಲ್ ಪಾಸ್ಪೋರ್ಟ್. ವೀಸಾ ಸ್ಟಿಕ್ಕರ್ ಅಳವಡಿಕೆಗೆ ಇದು ಅವಶ್ಯಕವಾಗಿದೆ. ನಿಮ್ಮ ಪಾಸ್ಪೋರ್ಟ್ 6 ತಿಂಗಳವರೆಗೆ ವ್ಯಾಲಿಡ್ ಆಗಿರಬೇಕು.
ಐರ್ಲೆಂಡ್ನಲ್ಲಿ ಹೋಟೆಲ್ ರಿಸರ್ವೇಶನ್ನಂತಹ ವಸತಿ ಪ್ರೂಫ್.
ಏರ್ ಟಿಕೆಟ್ಗಳು ಇನ್ವರ್ಡ್ಸ್ ಮತ್ತು ಔಟ್ವರ್ಡ್ಸ್ಗಳೆರಡೂ.
ಐರ್ಲೆಂಡ್ನಲ್ಲಿ ಅವನು / ಅವಳು ತಂಗಿದ್ದಾಗ, ಅಪ್ಲಿಕೆಂಟ್ನ ಐಟಿನರರಿ.
ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯ ಕಾಪಿ.
ಕಳೆದ 3 ವರ್ಷಗಳ ಇನ್ಕಮ್ ಟ್ಯಾಕ್ಸ್ ರಿಟರ್ನ್ ಕಾಪಿ
ಅಭ್ಯರ್ಥಿಯ ಸುಮಾರು 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ಗಳು
ಪ್ರಸ್ತುತ ಕಂಪನಿಯ ಕೊನೆಯ 3 ತಿಂಗಳ ಸ್ಯಾಲರಿ ಸ್ಲಿಪ್ (ಇದು ಕೆಲಸ ಮಾಡುತ್ತಿದ್ದರೆ ಅನ್ವಯಿಸುತ್ತದೆ).
ನೀವು ಬಿಸಿನೆಸ್ ಮಾಡುತ್ತಿದ್ದರೆ, ಬಿಸಿನೆಸ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ನ ಅಗತ್ಯವಿದೆ.
ವಿದ್ಯಾರ್ಥಿಗಳು ಟ್ರಾವೆಲ್ ಮಾಡುತ್ತಿದ್ದರೆ, ಅವರು ಬೊನಫೈಡ್ ಸರ್ಟಿಫಿಕೇಟ್ ಅಥವಾ ಐಡಿ ಪ್ರೂಫ್ ಅನ್ನು ಸಬ್ಮಿಟ್ ಮಾಡಬೇಕಾಗುತ್ತದೆ.
ಮಹಿಳೆ ಒಂಟಿಯಾಗಿ ಐರ್ಲೆಂಡ್ಗೆ ಟ್ರಾವೆಲ್ ಮಾಡುತ್ತಿದ್ದರೆ ತನ್ನ ಪತಿಯಿಂದ ಎನ್.ಓ.ಸಿ. ನೀಡಬೇಕು.
ಐರ್ಲೆಂಡ್ ಟೂರಿಸ್ಟ್ ವೀಸಾಗಾಗಿ ಅಪ್ಲೈ ಮಾಡುವ ಪ್ರಕ್ರಿಯೆಯು ತುಂಬಾ ಸರಳವಾಗಿದೆ ಮತ್ತದನ್ನು ಆನ್ಲೈನ್ನಲ್ಲಿಯೂ ಮಾಡಬಹುದು. ಅಭ್ಯರ್ಥಿಯು ಈ ಹಂತಗಳನ್ನು ಫಾಲೋ ಮಾಡಬೇಕು:
ವೆಬ್ಸೈಟ್ http://www.inis.gov.ie ವೆಬ್ಸೈಟ್ ಗೆ ಭೇಟಿ ನೀಡಿ ಮತ್ತು ಆನ್ಲೈನ್ನಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.
ನಮೂದಿಸಿದ ಎಲ್ಲಾ ವಿವರಗಳು ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಮಾಹಿತಿಯನ್ನು ಎರಡು ಬಾರಿ ಓದಿದ ನಂತರ ಫಾರ್ಮ್ ಅನ್ನು ಎಚ್ಚರಿಕೆಯಿಂದ ಸಬ್ಮಿಟ್ ಮಾಡಿ.
ಟೂರಿಸ್ಟ್ ವೀಸಾಗಾಗಿ ಪಾವತಿಸಬೇಕಾದ ಫೀಸ್ ಅನ್ನು ಪಾವತಿಸಿ.
ಹತ್ತಿರದ ಐರ್ಲೆಂಡ್ ವೀಸಾ ಅಪ್ಲಿಕೇಶನ್ ಸೆಂಟರ್ನಲ್ಲಿ ಅಪಾಯಿಂಟ್ಮೆಂಟ್ ಅನ್ನು ನಿಗದಿಪಡಿಸಿ.
ಅಪ್ಲಿಕೇಶನ್ ಪ್ರೊಸೆಸ್ ಪೂರ್ಣಗೊಂಡ ನಂತರ ಮತ್ತು ಇಂಟರ್ವ್ಯೂ ಮುಗಿದ ನಂತರ, ಪ್ರೊಸೆಸಿಂಗ್ ಕೆಲಸ ಎಂಬೆಸಿಯ ಕೈಯಲ್ಲಿರುತ್ತದೆ.
ಐರ್ಲೆಂಡ್ ಟೂರಿಸ್ಟ್ ವೀಸಾವನ್ನು ಪ್ರಕ್ರಿಯೆಗೊಳಿಸಲು ಇದು ಸಾಮಾನ್ಯವಾಗಿ 10-15 ಕೆಲಸದ ದಿನಗಳನ್ನು ತೆಗೆದುಕೊಳ್ಳುತ್ತದೆ.
ನಿಮ್ಮ ವೀಸಾ ಮತ್ತು ಬುಕಿಂಗ್ಗಳು ಕನ್ಫರ್ಮ್ ಆದಮೇಲೆ, ಐರ್ಲೆಂಡ್ನಲ್ಲಿ ಮೋಜಿನ ವೆಕೇಶನ್ಗಾಗಿ ನಿಮ್ಮ ಬ್ಯಾಗ್ಗಳನ್ನು ಪ್ಯಾಕ್ ಮಾಡಿ.
ವಿರಾಮ ತೆಗೆದುಕೊಳ್ಳುವುದು, ಒತ್ತಡ ನಿವಾರಿಸಿಕೊಳ್ಳುವುದು ಮತ್ತು ಹೊಸ ಚೈತನ್ಯ ಪಡೆಯುವುದೇ ವೆಕೇಶನ್ನ ಸಂಪೂರ್ಣ ಅಂಶವಾಗಿದೆ. ಟ್ರಾವೆಲ್ ಇನ್ಶೂರೆನ್ಸಿನೊಂದಿಗೆ ನಿಮ್ಮ ಟ್ರಿಪ್ ಅನ್ನು ಸುರಕ್ಷಿತಗೊಳಿಸುವುದರಿಂದ, ಅದು ಅನಿರೀಕ್ಷಿತ ಸಂದರ್ಭಗಳಲ್ಲಿಯೂ, ನಿಮ್ಮನ್ನು ಒತ್ತಡ ಅಥವಾ ಚಿಂತೆಗೊಳಗಾಗಲು ಬಿಡುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ. ಐರ್ಲೆಂಡ್ಗೆ ನಿಮ್ಮ ಟ್ರಿಪ್ಗಾಗಿ ಟ್ರಾವೆಲ್ ಇನ್ಶೂರೆನ್ಸಿನ ಕೆಲವು ಪ್ರಯೋಜನಗಳು ಇಲ್ಲಿವೆ:
ಎಲ್ಲಾ ಸಂದರ್ಭಗಳಲ್ಲಿಯೂ ವೈದ್ಯಕೀಯ ವೆಚ್ಚವನ್ನು ಭರಿಸಲು. ನೀವು ಜಿಯಾಂಟ್ಸ್ ಕಾಸ್ವೇ, Co. ಅನ್ನು ತಲುಪಿದಾಗ ನೀವು ಎಷ್ಟೊಂದು ಉತ್ಸುಕರಾಗಿದ್ದಿರಿ ಎಂದು ಯೋಚಿಸಿ. ಅಂಟ್ರಿಮ್ ನಿಮ್ಮ ಪಾದಗಳು ಬಂಡೆಯೊಂದರಲ್ಲಿ ಸಿಲುಕಿ, ನಿಮ್ಮ ಪಾದವನ್ನು ಒಡೆಯುತ್ತದೆ ಮತ್ತು ಸಣ್ಣ ರಕ್ತಸ್ರಾವದಿಂದ ನೀವು ಗಾಯಗೊಳ್ಳುತ್ತೀರಿ. ಚಿಕಿತ್ಸೆಗಾಗಿ ನಿಮಗೆ ಮೆಡಿಕಲ್ ಅಸಿಸ್ಟೆನ್ಸ್ ಬೇಕಾಗುತ್ತದೆ. ನಿಮ್ಮ ಟ್ರಾವೆಲ್ ಪಾಲಿಸಿಯೊಂದಿಗೆ, ಮೆಡಿಕಲ್ ವೆಚ್ಚಗಳನ್ನು ಭರಿಸಬಹುದಾಗಿದೆ.
ನೀವು ಐರ್ಲೆಂಡ್ನ ಉತ್ತರ ಭಾಗದ ಮಾಲಿನ್ ಹೆಡ್ನಲ್ಲಿದ್ದೀರಿ ಎಂದು ಭಾವಿಸೋಣ. ನೀವು ಹೇಗೋ ಸ್ಕಿಡ್ ಆಗಿ ಗಂಭೀರ ಗಾಯಗಳನ್ನು ಮಾಡಿಕೊಳ್ಳುತ್ತೀರಿ, ಅದು ನಿಮ್ಮ ಕಾಲು ಮುರಿತಕ್ಕೆ ಕಾರಣವಾಗುತ್ತದೆ. ಈಗ ನೀವು ನಡೆಯಲು ಸಾಧ್ಯವಾಗುತ್ತಿಲ್ಲ ಆದರೆ ನೀವು ಆಸ್ಪತ್ರೆಯನ್ನು ತಲುಪಬೇಕಿದೆ. ಸುರಕ್ಷಿತ ಸ್ಥಳಕ್ಕೆ ಇಂತಹ ವೈದ್ಯಕೀಯ ಸ್ಥಳಾಂತರಿಸುವಿಕೆಯು ಟ್ರಾವೆಲ್ ಪಾಲಿಸಿಯ ಅಡಿಯಲ್ಲಿ ಕವರ್ ಆಗುತ್ತವೆ.
ಅಚಾನಕ್ ಆಗಿ ನಿಮ್ಮ ಎಂಪ್ಲಾಯರ್ ಮೃತಪಡುತ್ತಾರೆ ಮತ್ತು ನಿಮ್ಮ ಎಲ್ಲಾ ರಜೆಗಳು ಕ್ಯಾನ್ಸಲ್ ಆಗುವ ಅನಿರೀಕ್ಷಿತ ಘಟನೆಯಿಂದಾಗಿ, ಹೋಟೆಲ್ಗಳು ಮತ್ತು ಟಿಕೆಟ್ಗಳ ಬುಕಿಂಗ್ ಮೊತ್ತದಂತಹ ತಕ್ಷಣದ ಕ್ಯಾನ್ಸಲೇಶನ್ ವೆಚ್ಚಗಳನ್ನು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಕವರ್ ಮಾಡುತ್ತದೆ.
ನಿಮ್ಮ ಪಾಸ್ಪೋರ್ಟ್ ಮತ್ತು ಇತರ ಬೆಲೆಬಾಳುವ ವಸ್ತುಗಳಿರುವ ನಿಮ್ಮ ಬ್ಯಾಗ್ ಅನ್ನು ನೀವು ಕಳೆದುಕೊಂಡ ಸಮಯದಲ್ಲಿ ಈ ಪಾಲಿಸಿ ಉಪಯುಕ್ತವಾಗಿದೆ. ನಿಮ್ಮ ಪಾಸ್ಪೋರ್ಟ್ನಂತಹ ಯಾವುದೇ ಅಗತ್ಯ ಡಾಕ್ಯುಮೆಂಟುಗಳಿಲ್ಲದೆ, ವಿದೇಶದಲ್ಲಿ ಉಳಿಯುವುದು ನಿಮಗೆ ಒತ್ತಡವನ್ನು ಉಂಟುಮಾಡುತ್ತದೆ. ಆದರೆ ನೀವು ಟ್ರಾವೆಲ್ ಪಾಲಿಸಿಯನ್ನು ಹೊಂದಿದ್ದರೆ ಅದು ನಿಮಗೆ ಪರಿಹಾರ ನೀಡುತ್ತದೆ.
ಪ್ರತಿ ಬಾರಿಯೂ ನಾವು ನಮ್ಮ ಕೆಲಸಗಳ ಬಗ್ಗೆ ಜಾಗರೂಕರಾಗಿರಲು ಸಾಧ್ಯವಿಲ್ಲ. ನೀವು ಬೇರೊಬ್ಬರ ಪ್ರಾಪರ್ಟಿಯನ್ನು ಡ್ಯಾಮೇಜ್ ಮಾಡಿದ್ದೀರಿ ಎಂದುಕೊಳ್ಳಿ, ಅಂತಹ ಎಲ್ಲಾ ಲಯಬಿಲಿಟಿಗಳಿಂದ ನಿಮ್ಮನ್ನು ರಕ್ಷಿಸಲಾಗುತ್ತದೆ.
ನಿಮ್ಮ ಎಲ್ಲಾ ಲಗೇಜ್ಗಳೊಂದಿಗೆ ನೀವು ಕ್ಯಾಬ್ಗಾಗಿ ಕಾಯುತ್ತಿರುವ ಕ್ಷಣದ ಬಗ್ಗೆ ಯೋಚಿಸಿ. ಮತ್ತು ಯಾರಾದರೂ ಕಣ್ಣು ಮಿಟುಕಿಸುವುದರೊಳಗೆ ನಿಮ್ಮ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಬಿಡುತ್ತಾರೆ. ಅಂತಹ ಎಲ್ಲಾ ನಷ್ಟಗಳನ್ನು ಟ್ರಾವೆಲ್ ಇನ್ಶೂರೆನ್ಸ್ ನಿಮಗಾಗಿ ಕವರ್ ಮಾಡುತ್ತದೆ.