ಭಾರತ್ ಲಘು ಉಧ್ಯಮ ಸುರಕ್ಷಾಪಾಲಿಸಿ

ಝೀರೋ ಪೇಪರ್‌ವರ್ಕ್‌. ಆನ್‌ಲೈನ್‌ ಪ್ರಕ್ರಿಯೆ

ಭಾರತ್ ಲಘು ಉಧ್ಯಮ ಸುರಕ್ಷಾ ಪಾಲಿಸಿ ಎಂದರೇನು?

ಭಾರತ್ ಲಘು ಉಧ್ಯಮ ಸುರಕ್ಷಾ ಪಾಲಿಸಿ ಒಂದು ವಿಧದ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಶಾಪ್ ಗಳ ಪ್ರಾಪರ್ಟಿ ಮತ್ತು ಅದರ ಸಾಮಾಗ್ರಿಗಳನ್ನು ಕವರ್ ಮಾಡುವಂತೆ ವಿನ್ಯಾಸ ಮಾಡಲಾಗಿದೆ. ರೂ.5 ಕೋಟಿಗಳಿಗಿಂತ ಹೆಚ್ಚು ಮತ್ತು ರೂ.50 ಕೋಟಿಗಳಿಗಿಂತ ಒಳಗಿನ ಸಮ್ ಇನ್ಸೂರ್ಡ್ ಗೆ ಈ ಪಾಲಿಸಿ ಅಪ್ಲೈ ಆಗುತ್ತದೆ. ಇದನ್ನು ರೆಗ್ಯುಲೇಟರಿ ಆ್ಯಂಡ್ ಡೆವಲಪ್‌ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್‌ಡಿಎಐ) 2021ರ ಏಪ್ರಿಲ್‌ನಲ್ಲಿ ಪರಿಚಯಿಸಿತು.

ಈ ಪಾಲಿಸಿ ಯಾಕೆ ಅವಶ್ಯ?

ಗೋ ಡಿಜಿಟ್, ಭಾರತ್ ಲಘು ಉದ್ಯಮ ಸುರಕ್ಷಾ ಪಾಲಿಸಿಯು ಅನಿರೀಕ್ಷಿತ ನಷ್ಟಗಳು/ ಡ್ಯಾಮೇಜ್‌ಗಳು ಮತ್ತು ಯೋಜಿತವಲ್ಲದ ವೆಚ್ಚಗಳಿಂದ ನಿಮ್ಮ ಇನ್ಶೂರ್ಡ್ ಪ್ರಾಪರ್ಟಿಯನ್ನು ಕವರ್ ಮಾಡುವ ಭರವಸೆ ಒದಗಿಸುತ್ತದೆ. ಪ್ರಾಪರ್ಟಿಗೆ ಉಂಟಾಗುವ ಯಾವುದೇ ರೀತಿಯ ನಷ್ಟಗಳನ್ನು ಪಾಲಿಸಿ ಕವರ್ ಮಾಡುತ್ತದೆ ಎಂದು ತಿಳಿದಿರುವುದರಿಂದ ನಿಮಗೆ ನೆಮ್ಮದಿಯನ್ನೂ ನೀಡುತ್ತದೆ.

ಭಾರತ್ ಲಘು ಉಧ್ಯಮ ಸುರಕ್ಷಾ ಪಾಲಿಸಿ ಪಾಲಿಸಿಯನ್ನು ಯಾರು ಖರೀದಿಸಬೇಕು?

  • ಕುಟುಂಬದ ವ್ಯವಹಾರವನ್ನು ನಡೆಸುತ್ತಿರುವ ವ್ಯಕ್ತಿಗಳು - ಯಾರು ಕುಟುಂಬದ ವ್ಯವಹಾರವನ್ನು ನೋಡಿಕೊಳ್ಳುತ್ತಾರೋ ಆ ವ್ಯಕ್ತಿಗಳಿಗೆ ಭಾರತ್ ಲಘು ಉಧ್ಯಮ ಸುರಕ್ಷಾ ಪಾಲಿಸಿಯ ಅವಶ್ಯಕತೆ ಇದೆ. ಇದು ಶಾಪ್ ಅನ್ನು ರಕ್ಷಿಸುವ ಭರವಸೆ ನೀಡುತ್ತದೆ, ಮತ್ತು ಯಾವುದೇ ಅಹಿತಕರ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ನಷ್ಟಗಳನ್ನು ಕವರ್ ಮಾಡುತ್ತದೆ. 
  •  ಶಾಪ್ ಕೀಪರ್ಸ್ - ಆಯ್ದ ಉತ್ಪನ್ನಗಳನ್ನು ಇಟ್ಟುಕೊಂಡು ಸ್ವತಂತ್ರ ಶಾಪ್ ಅನ್ನು ನಡೆಸುವ ವ್ಯಕ್ತಿಗಳಿಗೆ ಭಾರತ್ ಲಘು ಉಧ್ಯಮ ಸುರಕ್ಷಾ ಪಾಲಿಸಿಯ ಅವಶ್ಯಕತೆ ಇದೆ. ಇದು ಅವರನ್ನು ಅವರ ವ್ಯಾಪಾರದಲ್ಲಿ ಉಂಟಾಗುವ ಆರ್ಥಿಕ ನಷ್ಟಗಳಿಂದ ಕಷ್ಟಪಡಬಹುದಾದ ಅಪಾಯದಿಂದ ರಕ್ಷಿಸುತ್ತದೆ. 
  • ಮಲ್ಟಿ ಶಾಪ್ ಗಳನ್ನು ಹೊಂದಿರುವ ವ್ಯಕ್ತಿಗಳು - ಮಲ್ಟಿ ಶಾಪ್ ಗಳಮಾಲೀಕತ್ವ ಪಡೆದಿರುವ ವ್ಯಕ್ತಿಗಳೂ ಈ ಪಾಲಿಸಿಯನ್ನು ಖರೀದಿಸಬಹುದು. ಇದು ವ್ಯಾಪಾರದ ಸ್ಥಿರತೆ ಮೇಲೆ ಪರಿಣಾಮ ಬೀರುವ ಯಾವುದೇ ಅನಿರೀಕ್ಷಿತ ಆರ್ಥಿಕ ನಷ್ಟಗಳನ್ನು ಎದುರಿಸದಂತೆ ಮಾಡುವ ಮತ್ತು ಶಾಪ್ ಗಳಲ್ಲಿರುವ ಸಾಮಾಗ್ರಿಗಳನ್ನು ರಕ್ಷಿಸುವ ಭರವಸೆ ನೀಡುತ್ತದೆ. 
  • ದೊಡ್ಡ ರಿಸ್ಕ್ ಇರುವ ವ್ಯಾಪಾರಗಳನ್ನು ನಡೆಸುವ ವ್ಯಕ್ತಿಗಳು - ದೊಡ್ಡ ರಿಸ್ಕ್ ಇರುವ ಎಂಟರ್‌ಪ್ರೈಸಸ್‌ಗಳನ್ನು ನಡೆಸುವವರು ಭಾರತ್ ಲಘು ಉಧ್ಯಮ ಸುರಕ್ಷಾ ಪಾಲಿಸಿ ಹೊಂದಿರುವ ಅವಶ್ಯಕತೆ ಇದೆ, ಯಾಕೆಂದರೆ ಅವರು ಬೆಂಕಿ ಅಪಾಯ ಮತ್ತಿತರ ರಿಸ್ಕ್‌ಗಳಿಗೆ ಒಡ್ಡಿಕೊಂಡಿರುತ್ತಾರೆ.

ಭಾರತ್ ಲಘು ಉಧ್ಯಮ ಸುರಕ್ಷಾ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗುತ್ತದೆ?

ಏನೆಲ್ಲಾ ಕವರ್ ಆಗುವುದಿಲ್ಲ?

ಆದಾಗ್ಯೂ, ಪಾಲಿಸಿ ಇನ್ಶೂರ್ಡ್ ಪ್ರಾಪರ್ಟಿಗೆ ನಷ್ಟ ಅಥವಾ ಡ್ಯಾಮೇಜ್ ಸಂಭವಿಸಿದಾಗ ಕವರ್ ಮಾಡದಿರಬಹುದು. ಹೊರಗಿಡುವಿಕೆಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ:

ಯಾವುದೇ ಪಬ್ಲಿಕ್ ಆಥಾರಿಟಿಯ ಆದೇಶದ ಮೇಲೆಗೆ ಇನ್ಶೂರ್ಡ್ ಪ್ರಾಪರ್ಟಿಯನ್ನು ಬೆಂಕಿ ಸುಟ್ಟರೆ ಕವರ್ ಆಗುವುದಿಲ್ಲ.

ಕೇಂದ್ರಪಗಾಮಿ ಬಲದಿಂದ ಅಂತಃಸ್ಫೋಟ/ ಸ್ಫೋಟ ಸಂಭವಿಸಿದರೆ ಅಥವಾ ಬಾಯ್ಲರ್‌ಗಳು, ತಾಪರಕ್ಷಕಗಳು ಅಥವಾ ಸ್ಟೀಮ್ ಉತ್ಪತ್ತಿಯಾಗುವ ಮಷೀನರಿ ಸ್ಫೋಟವಾದರೆ.

ಸಾಮಾನ್ಯ ಬಿರುಕು ಬಿಡುವಿಕೆ, ಹೊಸ ರಚನೆಗಳ ಸ್ಥಾಪನೆ, ನಿರ್ಮಿಸಿದ ನೆಲದಲ್ಲಿನ ಚಲನೆಗಳು, ಸವೆತ, ದೋಷಯುಕ್ತ ವಸ್ತುಗಳು, ರಿಪೇರಿ ಅಥವಾ ಯಾವುದೇ ಆಸ್ತಿಯ ರಚನಾತ್ಮಕ ಬದಲಾವಣೆಗಳಿಂದ ಉಂಟಾದ ಡ್ಯಾಮೇಜ್.

ಸಾನಿಕ್ / ಸೂಪರ್‌ಸಾನಿಕ್‌ ವೇಗದ ವಿಮಾನ ಅಥವಾ ವೈಮಾನಿಕ/ ಬಾಹ್ಯಾಕಾಶ ಸಾಧನಗಳಿಂದ ಉಂಟಾದ ಒತ್ತಡದ ಅಲೆಗಳಿಂದ ಸಂಭವಿಸಿದ ಡ್ಯಾಮೇಜ್.

ಕೆಲಸದ ಪೂರ್ತಿ ಅಥವಾ ಭಾಗಶಃ ನಿಲ್ಲುವಿಕೆಯಿಂದ ಅಥವಾ ಯಾವುದೇ ಪ್ರಕ್ರಿಯೆಯ ವಿಳಂಬ/ ಅಡೆತಡೆ/ ನಿಲ್ಲುವಿಕೆಯಿಂದ ಅಥವಾ ಲೋಪಗಳಿಂದ ಉಂಟಾಗುವ ನಷ್ಟ ಅಥವಾ ಡ್ಯಾಮೇಜ್.

ಸ್ಪ್ರಿಂಕ್ಲರ್‌ ಇನ್‌ಸ್ಟಾಲೇಷನ್ ತೆಗೆದುಹಾಕಿದಾಗ ಅಥವಾ ವಿಸ್ತರಣೆ ಮಾಡಿದಾಗ ಉಂಟಾದ ಡ್ಯಾಮೇಜ್.

ಲಭ್ಯವಿರುವ ಕವರ್‌ಗಳ ವಿಧಗಳು

ವಸ್ತುಗಳು ಮಾತ್ರ

ಈ ವಿಧದ ಕವರ್, ಶಾಪ್ ನಲ್ಲಿದ್ದ ವಸ್ತುಗಳನ್ನು ಮಾತ್ರ ಕವರ್ ಮಾಡುತ್ತದೆ.

ಬಿಲ್ಡಿಂಗ್ ಮತ್ತು ವಸ್ತುಗಳು ಎರಡೂ

ಈ ಕವರ್ ಅಡಿಯಲ್ಲಿ, ಶಾಪ್ ಇರುವ ಬಿಲ್ಡಿಂಗ್ ಮತ್ತು ಶಾಪ್ ಒಳಗಿರುವ ವಸ್ತುಗಳು ಎರಡೂ ಕವರ್ ಆಗುತ್ತದೆ.

ಬಿಲ್ಡಿಂಗ್ ಮಾತ್ರ

ಕವರ್ ಶಾಪ್ ಗಳ ಬಿಲ್ಡಿಂಗ್ ಅನ್ನು ಮಾತ್ರ ರಕ್ಷಿಸುತ್ತದೆ.

ಕವರ್ ಆಗುವ ಆಸ್ತಿಗಳ ವಿಧಗಳು.

ಎಲೆಕ್ಟ್ರಾನಿಕ್‌ ವಸ್ತು ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಶಾಪ್

ಮೊಬೈಲ್‌ ಫೋನ್‌ಗಳನ್ನು, ಮೊಬೈಲ್ ಅಕ್ಸೇಸರೀಸ್ ಅಥವಾ ಇತರ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪರವನ್ನು ಈ ಪಾಲಿಸಿ ರಕ್ಷಿಸುತ್ತದೆ. ಶಾಪ್ ಮತ್ತು ಅದರಲ್ಲಿರುವ ಮೂಲ ವಸ್ತುಗಳಿಗೆ ಉಂಟಾಗಬಹುದಾದ ಸಂಭಾವ್ಯ ನಷ್ಟ ಅಥವಾ ಡ್ಯಾಮೇಜ್‌ಗಳನ್ನು ಕವರ್ ಮಾಡುತ್ತದೆ.

ಕಿರಾಣಿ ಅಂಗಡಿಗಳು

ಕಿರಾಣಿ ಅಂಗಡಿ ಮಾಲೀಕರು ಅಥವಾ ಬಜೆಟ್-ಫ್ರೆಂಡ್ಲಿ ಸೂಪರ್ ಮಾರ್ಕೆಟ್‌ಗಳು ಭಾರತ್ ಲಘು ಉದ್ಯಮ ಸುರಕ್ಷಾ ಪಾಲಿಸಿ ಖರೀದಿಸಬಹುದು, ಈ ಪಾಲಿಸಿ ಅವರಿಗೆ ಕವರೇಜ್ ಒದಗಿಸುತ್ತದೆ.

ತಯಾರಿಕಾ ಘಟಕಗಳು

ವ್ಯಾಪಾರದ ಅಂತಿಮ ಉತ್ಪನ್ನಗಳ ತಯಾರಿಕೆಗೆ ಬಳಸಲ್ಪಡುವ ಫ್ಯಾಕ್ಟರಿಗಳು ಮತ್ತು ಮಿಲ್‌ಗಳು ಕೂಡ ಈ ಪಾಲಿಸಿಯಲ್ಲಿ ಕವರ್ ಆಗುತ್ತದೆ.

ಲೈಫ್‌ಸ್ಟೈಲ್ ಮತ್ತು ಫಿಟ್‌ನೆಸ್‌

ಲೈಫ್‌ಸ್ಟೈಲ್ ಮತ್ತು ಫಿಟ್‌ನೆಸ್‌ ಸಂಬಂಧಿಸಿದ ವ್ಯಾಪಾರಗಳನ್ನೂ ಪಾಲಿಸಿ ಕವರ್ ಮಾಡುತ್ತದೆ.

ಹೆಲ್ತ್‌ಕೇರ್‌

ಹೆಲ್ತ್‌ಕೇರ್‌ ಕ್ಷೇತ್ರದ ವ್ಯಾಪಾರಗಳನ್ನೂ ಪಾಲಿಸಿ ಕವರ್ ಮಾಡುತ್ತದೆ. ಆಸ್ಪತ್ರೆಗಳು, ಕ್ಲಿನಿಕ್‌ಗಳು, ಡಯಾಗ್ನಾಸ್ಟಿಕ್‌ ಸೆಂಟರ್‌ಗಳು ಮತ್ತು ಫಾರ್ಮಸಿಗಳು ಇವುಗಳಲ್ಲಿ ಸೇರಿವೆ.

ಮನೆ ರಿಪೇರಿ ಸರ್ವೀಸ್‌ಗಳು

ರಿಪೇರಿ ಸರ್ವೀಸ್ ಒದಗಿಸುವ ವ್ಯಾಪಾರಗಳಾದ ಕಾರ್ಪೆಂಟರಿ, ಪ್ಲಂಬಿಂಗ್ ರಿಪೇರಿ, ಮೋಟಾರ್ ಗ್ಯಾರೇಜ್ ಮತ್ತು ಇಂಜಿನಿಯರಿಂಗ್ ವರ್ಕ್‌ಗಳ ವ್ಯಾಪಾರಗಳನ್ನೂ ಪಾಲಿಸಿ ಕವರ್ ಮಾಡುತ್ತದೆ.

ರೆಸ್ಟೋರೆಂಟ್‌ಗಳು ಮತ್ತು ಫುಡ್‌ ಕೋರ್ಟ್‌ಗಳು

ಆಹಾರಕ್ಕೆ ಸಂಬಂಧಿಸಿದ ಎಲ್ಲಾ ಮಾದರಿಯ ವ್ಯಾಪಾರಗಳನ್ನೂ ಪಾಲಿಸಿ ಕವರ್ ಮಾಡುತ್ತದೆ. ಕೆಫೆಗಳು, ರೆಸ್ಟೋರೆಂಟ್ ಚೈನ್‌ಗಳು ಮತ್ತು ಬೇಕರಿಗಳು ಇವುಗಳಲ್ಲಿ ಸೇರಿವೆ.

ಆಫೀಸ್‌ಗಳು ಮತ್ತು ಶೈಕ್ಷಣಿಕ ಸ್ಥಳಗಳು

ಆಫೀಸ್ ವಾತಾವರಣಗಳಿಗೆ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೂ ಈ ಪಾಲಿಸಿ ಸರಿಹೊಂದುತ್ತದೆ. ಇದು ನಷ್ಟಗಳು ಉಂಟಾದಾಗ ಆ ಆಸ್ತಿಗಳನ್ನು ರಕ್ಷಿಸುವ ಭರವಸೆ ಒದಗಿಸುತ್ತದೆ.

ಭಾರತ್ ಲಘು ಉದ್ಯಮ ಸುರಕ್ಷಾ ಪಾಲಿಸಿಯ ಕುರಿತು ಪದೇ ಪದೇ ಕೇಳಲಾದ ಪ್ರಶ್ನೆಗಳು

ನಾನು ಆನ್‌ಲೈನ್‌ ಮೂಲಕ ಭಾರತ್ ಲಘು ಉದ್ಯಮ ಸುರಕ್ಷಾ ಪಾಲಿಸಿ ಅಡಿಯಲ್ಲಿ ಕ್ಲೈಮ್ ಫೈಲ್ ಮಾಡಬಹುದೇ?

ಹೌದು, ಡಿಜಿಟ್‌ನ ಭಾರತ್ ಲಘು ಉದ್ಯಮ ಸುರಕ್ಷಾ ಪಾಲಿಸಿಯಲ್ಲಿ ನೀವು ಆನ್‌ಲೈನ್‌ ಮೂಲಕ ಕ್ಲೈಮ್ ಮಾಡಬಹುದು. ನಮ್ಮ ಸ್ಮಾರ್ಟ್‌ಫೋನ್‌-ಸಕ್ರಿಯಗೊಳಿಸಿದ ಸೆಲ್ಫ್-ಇನ್‌ಸ್ಪೆಕ್ಷನ್‌ ಕಾರಣದಿಂದ ವೇಗವಾಗಿ ಸೆಟಲ್ ಆಗುತ್ತದೆ. ತಂತ್ರಜ್ಞಾನಕ್ಕೆ ಧನ್ಯವಾದ.

ಡಿಜಿಟ್‌ನಲ್ಲಿ ಕ್ಲೈಮ್ ರಿಜಿಸ್ಟರ್ ಮಾಡಬೇಕಾದರೆ ಯಾವ ನಂಬರ್‌ಗೆ ನಾನು ಕಾಲ್‌ ಮಾಡಬೇಕು?

ನೀವು ಡಿಜಿಟ್‌ನಲ್ಲಿ ಕ್ಲೈಮ್ ರಿಜಿಸ್ಟರ್ ಮಾಡಲು 1800 1030 4448 ನಂಬರಿಗೆ ಕಾಲ್ ಮಾಡಬಹುದು.

ಭಾರತ್ ಲಘು ಉದ್ಯಮ ಸುರಕ್ಷಾ ಪಾಲಿಸಿಯಲ್ಲಿ ಪಾವತಿಸಬೇಕಾದ ಪ್ರೀಮಿಯಂ ನಿರ್ಧರಿಸುವಾಗ ಯಾವೆಲ್ಲಾ ಅಂಶಗಳು ನೆರವಾಗುತ್ತವೆ?

ಪಾವತಿಸಬೇಕಾದ ಪ್ರೀಮಿಯಂ ನಿರ್ಧರಿಸುವ ಸಂದರ್ಭದಲ್ಲಿ ವ್ಯಾಪಾರದ ಸ್ವಭಾವ, ಗಾತ್ರ, ಇನ್ಶೂರ್ಡ್ ಆಸ್ತಿಯಲ್ಲಿರುವ ವಸ್ತುಗಳು, ಮತ್ತು ಆಸ್ತಿ ಇರುವ ನಗರ ಈ ಎಲ್ಲಾ ಅಂಶಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ.