Zero
Documentation
24x7
Support
Affordable
Premium
Terms and conditions apply*
ಭಾರತ್ ಲಘು ಉಧ್ಯಮ ಸುರಕ್ಷಾ ಪಾಲಿಸಿ ಎಂದರೇನು?
ಭಾರತ್ ಲಘು ಉಧ್ಯಮ ಸುರಕ್ಷಾ ಪಾಲಿಸಿ ಒಂದು ವಿಧದ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಶಾಪ್ ಗಳ ಪ್ರಾಪರ್ಟಿ ಮತ್ತು ಅದರ ಸಾಮಾಗ್ರಿಗಳನ್ನು ಕವರ್ ಮಾಡುವಂತೆ ವಿನ್ಯಾಸ ಮಾಡಲಾಗಿದೆ. ರೂ.5 ಕೋಟಿಗಳಿಗಿಂತ ಹೆಚ್ಚು ಮತ್ತು ರೂ.50 ಕೋಟಿಗಳಿಗಿಂತ ಒಳಗಿನ ಸಮ್ ಇನ್ಸೂರ್ಡ್ ಗೆ ಈ ಪಾಲಿಸಿ ಅಪ್ಲೈ ಆಗುತ್ತದೆ. ಇದನ್ನು ರೆಗ್ಯುಲೇಟರಿ ಆ್ಯಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (ಐಆರ್ಡಿಎಐ) 2021ರ ಏಪ್ರಿಲ್ನಲ್ಲಿ ಪರಿಚಯಿಸಿತು.
ಈ ಪಾಲಿಸಿ ಯಾಕೆ ಅವಶ್ಯ?
ಗೋ ಡಿಜಿಟ್, ಭಾರತ್ ಲಘು ಉದ್ಯಮ ಸುರಕ್ಷಾ ಪಾಲಿಸಿಯು ಅನಿರೀಕ್ಷಿತ ನಷ್ಟಗಳು/ ಡ್ಯಾಮೇಜ್ಗಳು ಮತ್ತು ಯೋಜಿತವಲ್ಲದ ವೆಚ್ಚಗಳಿಂದ ನಿಮ್ಮ ಇನ್ಶೂರ್ಡ್ ಪ್ರಾಪರ್ಟಿಯನ್ನು ಕವರ್ ಮಾಡುವ ಭರವಸೆ ಒದಗಿಸುತ್ತದೆ. ಪ್ರಾಪರ್ಟಿಗೆ ಉಂಟಾಗುವ ಯಾವುದೇ ರೀತಿಯ ನಷ್ಟಗಳನ್ನು ಪಾಲಿಸಿ ಕವರ್ ಮಾಡುತ್ತದೆ ಎಂದು ತಿಳಿದಿರುವುದರಿಂದ ನಿಮಗೆ ನೆಮ್ಮದಿಯನ್ನೂ ನೀಡುತ್ತದೆ.
ಭಾರತ್ ಲಘು ಉಧ್ಯಮ ಸುರಕ್ಷಾ ಪಾಲಿಸಿ ಪಾಲಿಸಿಯನ್ನು ಯಾರು ಖರೀದಿಸಬೇಕು?
- ಕುಟುಂಬದ ವ್ಯವಹಾರವನ್ನು ನಡೆಸುತ್ತಿರುವ ವ್ಯಕ್ತಿಗಳು - ಯಾರು ಕುಟುಂಬದ ವ್ಯವಹಾರವನ್ನು ನೋಡಿಕೊಳ್ಳುತ್ತಾರೋ ಆ ವ್ಯಕ್ತಿಗಳಿಗೆ ಭಾರತ್ ಲಘು ಉಧ್ಯಮ ಸುರಕ್ಷಾ ಪಾಲಿಸಿಯ ಅವಶ್ಯಕತೆ ಇದೆ. ಇದು ಶಾಪ್ ಅನ್ನು ರಕ್ಷಿಸುವ ಭರವಸೆ ನೀಡುತ್ತದೆ, ಮತ್ತು ಯಾವುದೇ ಅಹಿತಕರ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ನಷ್ಟಗಳನ್ನು ಕವರ್ ಮಾಡುತ್ತದೆ.
- ಶಾಪ್ ಕೀಪರ್ಸ್ - ಆಯ್ದ ಉತ್ಪನ್ನಗಳನ್ನು ಇಟ್ಟುಕೊಂಡು ಸ್ವತಂತ್ರ ಶಾಪ್ ಅನ್ನು ನಡೆಸುವ ವ್ಯಕ್ತಿಗಳಿಗೆ ಭಾರತ್ ಲಘು ಉಧ್ಯಮ ಸುರಕ್ಷಾ ಪಾಲಿಸಿಯ ಅವಶ್ಯಕತೆ ಇದೆ. ಇದು ಅವರನ್ನು ಅವರ ವ್ಯಾಪಾರದಲ್ಲಿ ಉಂಟಾಗುವ ಆರ್ಥಿಕ ನಷ್ಟಗಳಿಂದ ಕಷ್ಟಪಡಬಹುದಾದ ಅಪಾಯದಿಂದ ರಕ್ಷಿಸುತ್ತದೆ.
- ಮಲ್ಟಿ ಶಾಪ್ ಗಳನ್ನು ಹೊಂದಿರುವ ವ್ಯಕ್ತಿಗಳು - ಮಲ್ಟಿ ಶಾಪ್ ಗಳಮಾಲೀಕತ್ವ ಪಡೆದಿರುವ ವ್ಯಕ್ತಿಗಳೂ ಈ ಪಾಲಿಸಿಯನ್ನು ಖರೀದಿಸಬಹುದು. ಇದು ವ್ಯಾಪಾರದ ಸ್ಥಿರತೆ ಮೇಲೆ ಪರಿಣಾಮ ಬೀರುವ ಯಾವುದೇ ಅನಿರೀಕ್ಷಿತ ಆರ್ಥಿಕ ನಷ್ಟಗಳನ್ನು ಎದುರಿಸದಂತೆ ಮಾಡುವ ಮತ್ತು ಶಾಪ್ ಗಳಲ್ಲಿರುವ ಸಾಮಾಗ್ರಿಗಳನ್ನು ರಕ್ಷಿಸುವ ಭರವಸೆ ನೀಡುತ್ತದೆ.
- ದೊಡ್ಡ ರಿಸ್ಕ್ ಇರುವ ವ್ಯಾಪಾರಗಳನ್ನು ನಡೆಸುವ ವ್ಯಕ್ತಿಗಳು - ದೊಡ್ಡ ರಿಸ್ಕ್ ಇರುವ ಎಂಟರ್ಪ್ರೈಸಸ್ಗಳನ್ನು ನಡೆಸುವವರು ಭಾರತ್ ಲಘು ಉಧ್ಯಮ ಸುರಕ್ಷಾ ಪಾಲಿಸಿ ಹೊಂದಿರುವ ಅವಶ್ಯಕತೆ ಇದೆ, ಯಾಕೆಂದರೆ ಅವರು ಬೆಂಕಿ ಅಪಾಯ ಮತ್ತಿತರ ರಿಸ್ಕ್ಗಳಿಗೆ ಒಡ್ಡಿಕೊಂಡಿರುತ್ತಾರೆ.
ಭಾರತ್ ಲಘು ಉಧ್ಯಮ ಸುರಕ್ಷಾ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗುತ್ತದೆ?
ಈ ಕೆಳಗಿನ ಅಂಶಗಳಿಂದ ಇನ್ಶೂರ್ಡ್ ಪ್ರಾಪರ್ಟಿಗೆ ಉಂಟಾಗುವ ಭೌತಿಕ ನಷ್ಟ ಅಥವಾ ಡ್ಯಾಮೇಜ್ ಗಳಿಗೆ ಪಾಲಿಸಿ ಕವರೇಜ್ ಒದಗಿಸುತ್ತದೆ
ಏನೆಲ್ಲಾ ಕವರ್ ಆಗುವುದಿಲ್ಲ?
ಆದಾಗ್ಯೂ, ಪಾಲಿಸಿ ಇನ್ಶೂರ್ಡ್ ಪ್ರಾಪರ್ಟಿಗೆ ನಷ್ಟ ಅಥವಾ ಡ್ಯಾಮೇಜ್ ಸಂಭವಿಸಿದಾಗ ಕವರ್ ಮಾಡದಿರಬಹುದು. ಹೊರಗಿಡುವಿಕೆಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ: